ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 2

ಹರೇ ರಾಮ,

ಕಳುದಸರ್ತಿ ನಾವು ಸಸ್ಯಾಹಾರವೇ ಎಂತಕೆ ಹೇಳ್ತ ವಿಷಯ ಮಾತಾಡಿಯೊಂಡಿತ್ತು 🙂

ಅಲ್ಲದೋ? ಈ ಸರ್ತಿ ಅದರ ಮುಂದುವರೆಸುವೊ°…

***

ಆ ದಿನ ಬಚಾವಾತು, ಆದರೆ ಮತ್ತೊಂದರಿ ಸಿಕ್ಕಿ ಬೀಳದ್ದೆ ಇಕ್ಕೋ?

ಮರದಿನ ಮತ್ತೆ ಕೇಳಿತ್ತು ಒಂದು ಹೆಮ್ಮಕ್ಕ,

“ನೀವು ತರಕಾರಿಯೇ ತಿನ್ನುದಾ? ಅದಕ್ಕೇ ನೀವು ಸಪೂರ ಇರುದು.. ನಿಮಿಗೆ ಹಾಗಾದ್ರೆ ಶಕ್ತಿ ಎಲ್ಲಿಂದ ಬರ್ತದೆ?” ಆ ಮಾತಿಂಗೆ ಎಂತ ಹೇಳೆಕೂ ಹೇಳಿಯೇ ಗೊಂತಾಯಿದಿಲ್ಲೆ ಎನಗೆ.  ಎಂತ ಹೇಳಿರೆ, ಆಪೀಸಿಲ್ಲಿ ಇಪ್ಪ ಎರಡೂ ಸಸ್ಯಾಹಾರಿಗಳೂ ಕಡ್ಡಿ ಪೈಲ್ವಾನುಗಳೇ…

🙁

***

ಚೋದ್ಯ: ನೀನೆಂತಕೆ ಸಸ್ಯಾಹಾರಿ? ಮಾಂಸ ತಿಂದರೆ ಎಂತ ಆವುತ್ತು?

ಉತ್ತರ: ಪ್ರಾಣಿಹತ್ಯೆ ಎನಗೆ ಇಷ್ಟ ಇಲ್ಲೆ, ನಾವು ಜೀವಂತ ಇರೆಕೂ ಹೇಳುವ ಸಬೂಬು ಹೇಳಿ, ಬೇರೆ ಅವಕಾಶ ಇಪ್ಪಗಳೂ ವಿನಾಕಾರಣ ಇನ್ನೊಂದು ಜೀವಿಯ ಸಾವಿಂಗೆಕಾರಣ ಅಪ್ಪದು ಎನಗೆ ಸರಿ ಕಾಣ್ತಿಲ್ಲೆ.

ಚೋದ್ಯ : ಮಾಂಸಾಹಾರ ಸೇವನೆ ಹೇಳಿರೆ ಪ್ರಾಣಿ ಹತ್ಯೆ ಅಪ್ಪು, ಅಂಬಗ ಸಸ್ಯಾಹಾರ ಸೇವನೆ ಎಂತರ? ಅದು ಜೀವ ಹತ್ಯೆ ಅಲ್ಲದೋ?

ಉತ್ತರ  : ಅಪ್ಪು, ಸಸ್ಯವ ಕಡುದರೂ ಅದು ಜೀವ ಹತ್ಯೆಯೇ.. ಆದರೆ ದೋಷದ ಪ್ರಮಾಣ ತುಂಬ ಕಡಮ್ಮೆ. ಬದುಕ್ಕೆಕ್ಕು ಹೇಳಿ ಆದರೆ ಎಂತಾರು ತಿನ್ನಲೇ ಬೇಕಾದ ಕಾರಣ, ಪ್ರಜ್ನೆಯ ವಿಕಾಸ ಆದಷ್ಟು ಕಡಮ್ಮೆ ಇಪ್ಪದರನ್ನೇ ತೆಕ್ಕೊಂಡರೆ ಉತ್ತಮ. ಸಸ್ಯಂಗಳಲ್ಲಿ ೯೦% ನೀರೇ ಇಪ್ಪ ಕಾರಣ ಅದ್ರ ಪ್ರಜ್ನೆಯ ಮಟ್ಟ ಮತ್ತೆ ಅದಕ್ಕೆ ಬೇನೆಯ ಅನುಭವ ಪ್ರಾಣಿಗಳಿಂದ ಕಡಮ್ಮೆ.

ಅಷ್ಟೇ ಅಲ್ಲದ್ದೆ,

ಸಸ್ಯವ ಆಹಾರವಾಗಿ ಉಪಯೋಗುಸುವಗ, ನಾವು ಅದರ ಬೇರಿನ ಎಂತೂ ಮಾಡ್ತಿಲ್ಲೆ. ಮತ್ತೆ, ಅದರ ಕವಲುಗಳ ತುಂಡು ಮಾಡಿ ತೆಗವದರಿಂದ ಸಸ್ಯ ಮತ್ತೂ ಬೆಳವಲೆ ಅವಕಾಶ ಆವುತ್ತು. ಹಾಂಗಾಗಿ ಅದು ಸಸ್ಯಂಗೊಕ್ಕೆ ಉಪದ್ರ ಮಾಡಿದ ಹಾಂಗೆ ಆಯಿದಿಲ್ಲೆ.

ಮರದ ಫಲ ಚೆಂದಕೆ ಹಣ್ಣಾಗಿಯಪ್ಪಗ, ಅದು ಅದರ ಮರಿಮ್ಮಳ ಮತ್ತೆ ಬಣ್ಣಂದ ಎಲ್ಲರ ಆಕರ್ಷಣೆ ಪಡಕ್ಕೊಳ್ತು. ಒಂದು ವೇಳೆ ಅದರ ತಿನ್ನದ್ದೇ ಬಿಟ್ಟರೆ ಅದು ಅಲ್ಲೇ ಕೊಳದು, ಬಿದ್ದು, ಯಾವುದಕ್ಕೂ ಉಪಕಾರ ಇಲ್ಲದ್ದ ಹಾಂಗೆ ಆವುತ್ತು. ಸಸ್ಯ ಮತ್ತು ಹಣ್ಣುಗಳ ಸೇವನೆ ಅದಕ್ಕೆ ಯಾವುದೇ ತೊಂದರೆ ಆಗ.

ಉಂಬಗಳೂ,

ನಾವು ತಿಂಬ ಊಟ ದೇವರ ಪ್ರಸಾದ, ಇದು ಅಮೃತ – ಹೇಳುವ ದೃಷ್ಟಿಲಿ ಉಂಡರೇ, ಸಸ್ಯಾಹಾರಕ್ಕೆ ಒಂದು ಅರ್ಥ ಬಪ್ಪದಲ್ಲದ್ದೇ, ಬರೇ ಉಂಡು ತೇಗಿರೆ ಆತಿಲ್ಲೆ. ಸಸ್ಯಾಹಾರದ ಮೂಲ ಉದ್ದೇಶ ದೌಹಿಕ ಮತ್ತು ಮಾನಸಿಕ ಸಮತೋಲನ ಸಾಧಿಸಿಯೊಂಡು, ಸಾತ್ವಿಕ ಜೀವನ ನಡೆಶುದು.

ಸಾತ್ವಿಕ ಜೀವನಕ್ಕೆ ಸಸ್ಯಾಹಾರ ಪಾಯ ಇದ್ದ ಹಾಂಗೆ.

ಚೋದ್ಯ: ಸಸ್ಯಾಹಾರಿಗೊ ಹೆಚ್ಚಾಗಿ ಸಣ್ಣ ಸಣ್ಣಕೆ, ಸಪುರ ಸಪೂರ ಇರ್ತವು ಹೇಳುವ ಭಾವನೆ ಇದ್ದನ್ನೆ ಜನರಲ್ಲಿ? ಸಸ್ಯಾಹಾರಂದಾಗಿ ಅಲ್ಲದೋ ನೀನು ಸಪೂರ ಇಪ್ಪದು?

ಉತ್ತರ: ಇಲ್ಲೆ ಸಸ್ಯಾಹಾರಿಗೊ ಸಪುರ ಇರ್ತವು ಹೇಳುವ ಭಾವನೆ ತಪ್ಪು. ಆಹಾರ ಕ್ರಮ ಮತ್ತು ಆರೋಗ್ಯ ಸರೀ ಇದ್ದರೆ ಅವ್ವುದೇ ಉದ್ದ, ತೋರ ಬೆಳೆತ್ತವು. ಹಿಂದಿ ಸಿನೆಮದ ವಿವೇಕ್ ಓಬೀರಾಯ್ ಸಸ್ಯಾಹಾರಿ, ಅವ° ಯಾವ ಹೃತಿಕ್, ಸಲ್ಮಾನುಗೊಕ್ಕೆ ಕಮ್ಮಿ ಇದ್ದ°? ಈಗ ಪ್ರಾಣಿಗಳಲ್ಲಿ ಹೇಳ್ತರೆ, ಆನೆ, ಗೋವು, ಜಿರಾಫೆಗೊ, ಕುದುರೆಗೊ ಸಸ್ಯಾಹಾರಿ ಪ್ರಾಣಿಗೊ, ಇವಕ್ಕೆ ಶಕ್ತಿಯೂ ಹೆಚ್ಚು ಮನುಷ್ಯನ ಉಪಯೋಗಕ್ಕೆ ಬಪ್ಪದೂ ಇವ್ವೆ..

ಅದೇ ಮಾಂಸಾಹಾರಿ ಪ್ರಾಣಿಗೊ, ಆಕ್ರಮಣಕಾರಿ ಪ್ರವೃತ್ತಿಯವ್ವುದೇ ಅಪ್ಪು – ಉಪಗೋಗಕ್ಕೂ ಬತ್ತವಿಲ್ಲೆ. ಯಾವ ಆಹಾರ ತಿಂದು ಅವ್ವು ಹಾಂಗೆ ಆಯಿದವೋ ಅದೇ ಆಹಾರವ ಮನುಷ್ಯನೂ ತೆಕ್ಕೊಂಡರೆ ತಿಂದವನೂ ಹಾಂಗೇ ಅಪ್ಪ ಸಾಧ್ಯತೆಯೇ ಹೆಚ್ಚು.

ಹಾಂಗೇ, ಮಾಂಸಾಹಾರಿಗೊ ತೋರ ಇರೆಕು ಹೇಳಿಯೇ ಏನಿಲ್ಲೆ. ಆದರೆ, ಸರಾಸರಿ ಜೀವನಾಯುಷ್ಯ ನೋಡಿರೆ ಸಸ್ಯಾಹಾರಿಗಳದ್ದೇ ಹೆಚ್ಚು.

ಚೋದ್ಯ: ನೀವು ಮೊಟ್ಟೆಯೂ ತಿನ್ನುದಿಲ್ವಾ? ಯಾಕೆ?

ಉತ್ತರ: ಮೊಟ್ಟೆ ತಿಂಬದಕ್ಕೂ ಮಾಂಸ ತಿಂಬದಕ್ಕೂ ಹೆಚ್ಚಿನ ವೆತ್ಯಾಸ ಎಂತ ಇದ್ದು? ಎರಡರಲ್ಲೂ ಇನ್ನೊಂದು ಜೀವ ಸಾಯ್ತನ್ನೇ? ಮೊಟ್ಟೆಯ ತಿನ್ನದ್ದೇ ಇದ್ದರೆ ಅದರಿಂದ ಮತ್ತೆ ಒಂದು ಜೀವ ವಿಕಾಸ ಅಪ್ಪಲೆ ಅವಕಾಶ ಇರ್ತು. ತಿಂದ ಕೂಡ್ಳೇ ಅದು ತಪ್ಪುಸಿದ ಹಾಂಗೆ ಆತನ್ನೇ? ಅದಕ್ಕಾಗಿ, ‘ಸಸ್ಯಾಹಾರ’ದ ಪರಿಧಿಯೊಳ ಮೊಟ್ಟೆಗೆ ಅವಕಾಶ ಇಲ್ಲೆ. ಮೊಟ್ಟೆಯ ಅರಶಿನ ಭಾಗಲ್ಲಿ ಕೊಲೆಸ್ತ್ರೋಲು ತುಂಬಾ ಇಪ್ಪ ಕಾರಣ cardiovascular disorders ಬಪ್ಪ ಸಾಧ್ಯತೆಯೂ ಇದ್ದು. ಇದು ಈಗೀಗ ಭಾರತಲ್ಲಿ ಹೆಚ್ಚಾವುತ್ತಾ ಇಪ್ಪದು ಕಂಡು ಬೈಂದು.

ಚೋದ್ಯ: ಮನುಷ್ಯನೇ ಕೋಳಿ, ಮೀನು, ಹಂದಿ ಮತ್ತೆ ದನ ಮುಂತಾದ್ದರ ಸಾಂಕುದಲ್ಲದಾ? ಅಂಬಗ ತಿಂದರೆ ಎಂತ ತಪ್ಪು?

ಉತ್ತರ: ಅಪ್ಪಮ್ಮ ಮಕ್ಕಳ ಸಾಂಕುತ್ತವು, ಭಯಂಕರ ಹಶುವಾವುತ್ತು ಹೇಳಿ ತಿಂಬದೋ ಮಕ್ಕಳ?  ಆ ಹಕ್ಕು ಇದ್ದೋ ಆರಿಂಗಾರು? ಈ ಜಗತ್ತಿಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕ್ಕುವ ಹಕ್ಕಿದ್ದು.  ಮನುಷ್ಯನೂ ಸೇರಿದ ಹಾಂಗೆ ಯಾವುದೇ ಜೀವಿಗಳೂ ಬದುಕನ್ನೇ ಬಯಸುತ್ತವು, ಸಾವಿನ ಇಷ್ಟಪಡ್ತವಿಲ್ಲೆ. ಕೊಲೆ – ಆತ್ಮಹತ್ಯೆ ಎರಡೂ ಪಾಪವೇ ಅಲ್ಲದೋ? ನವಗೆ ನಮ್ಮ ಆರೂ ಕೊಲ್ಲುಲಾಗ ಹೇಳಿ ಕಾಣ್ತರೆ, ಆ ಪ್ರಾಣಿಗೊಕ್ಕೂ ಹಾಂಗೇ ಅಲ್ಲದಾ? ಹೆದರಿ ಹೆದರಿ ಸತ್ತ ಪ್ರಾಣಿಗಳ ಮೈಲಿ ಏವ ರಾಸಾಯನಿಕ ಬಿಡುಗಡೆ ಆವುತ್ತೋ? ಅದರಿಂದ ನಮ್ಮ ದೇಹಕ್ಕೆ ಎಷ್ಟು ಉಪದ್ರವೋ ಆರಿಂಗೊಂತು?  ನಮ್ಮ ಆರೂ ಕೊಲ್ಲುಲಾಗ ಹೇಳಿ ನಾವು ಹೇಳ್ತರೆ ನಾವುದೇ ಯಾವುದೇ ಜೀವಿಯ ಹತ್ಯೆ ಮಾಡುಲಾಗ.

ಚೋದ್ಯ: ತಿನ್ನದ್ದೇ ಬಿಟ್ಟರೆ ಪ್ರಾಣಿಗಳ ಸಂಖ್ಯೆಯೇ ಹೆಚ್ಚಕ್ಕು. ಎಲ್ಲರೂ ನೀನು ಹೇಳಿದಾಂಗೆ ಎಲ್ಲೋರೂ ಸಸ್ಯಾಹಾರಿಗಳೇ ಆದರೆ, ಎಲ್ಲರಿಂಗೂ ತಿಂಬಲೆ ಸಿಕ್ಕ…!

ಉತ್ತರ: ಮನುಷ್ಯ ಈ ಭೂಮಿಗೆ ಬಪ್ಪ ಎಷ್ಟೋ ಮದಲಿಂದಲೇ ಒಳುದ ಪ್ರಾಣಿಗೊ ಇತ್ತಿದ್ದವು ಹೇಳಿ ಹೇಳ್ತು ವಿಜ್ನಾನ. ಅಂಬಗ ಈ ಭೂಮಿ ಎಂತ ತುಂಬಿತ್ತಿಲ್ಲೆನ್ನೆ? ಪ್ರಕೃತಿ ಅದಾಗಿಯೇ ನಿಭಾಯಿಸಿಯೊಂಡಿತ್ತು ಎಲ್ಲದರ. ಈಗಳೂ ಜನಸಂಖ್ಯಾ ನಿಯಂತ್ರಣವ ಸರಿಯಾಗಿ ಮಾಡುದು ಪ್ರಕೃತಿಯೇ. ಎಲ್ಲಿ ಎಷ್ಟು ಜೀವ ಹೆಚ್ಚುಮಾಡೆಕು ಎಲ್ಲಿ ಯಾವುದರ ಕಮ್ಮಿ ಮಾಡೆಕು ಹೇಳಿ ಅದಕ್ಕೆ ಗೊಂತಿದ್ದು.

ಮತ್ತೆ,

ಒಂದು ನಿರ್ದಿಷ್ಟ ಜಾಗೆಲಿ ತೆಗದ ಬೆಳೆ, ಆ ಜಾಗೆಲಿ ಆಹಾರಕ್ಕಾಗಿ ಮಾಡಿದ ಪ್ರಾಣಿ ಸಾಕಣೆಂದ ಹದಿನಾಲ್ಕು ಪಟ್ಟು ಹೆಚ್ಚಿಗೆ ಆಹಾರ ಕೊಡುತ್ತು. ಅಷ್ಟೇ ಅಲ್ಲದ್ದೆ, ಒಂದು ಎಕರೆ ಜಾಗೆಲಿ ಬೆಳೆದ ಸಸ್ಯಂದ ೮೦೦೦೦೦ ಕ್ಯಾಲೋರಿ ಶಕ್ತಿ ಸಿಕ್ಕುತ್ತರೆ, ಆ ಆಹಾರವ ಪ್ರಾಣಿಗೊಕ್ಕೆ ತಿನ್ನುಸಿ ಆ ಪ್ರಾಣಿಗಳ ಮನುಷ್ಯರು ತಿಂದರೆ ಮನುಷ್ಯರಿಂಗೆ ಸಿಕ್ಕುದು ೨೦೦೦೦೦ ಕ್ಯಾಲೋರಿ ಶಕ್ತಿ ಮಾತ್ರ.. ಅಂಬಗ ಇಲ್ಲೇ ಗೊಂತಾತಿಲ್ಲೆಯೋ?

“ಸಸ್ಯಾಹಾರಿಯಾಗಿ ಇಪ್ಪದರಿಂದ ಒಳ್ಳೆ ಮನಸ್ಸು ಹೃದಯ ಮಡಿಕ್ಕೊಂಬದು ಮುಖ್ಯ ಹೇಳಿ ಎನಗೆ ಅನ್ನುಸುತ್ತು. ಬೇಕಾರೆ ಸಸ್ಯಾಹಾರವ ಹೆಚ್ಚಾಗಿ ಅನುಸರಿಸಿ ಅಲ್ಲಲ್ಲಿ ರಜ ರಜ ಮಾತ್ರ ಮಾಂಸ ತಿಂದರಾತು.” ಹೇಳಿತ್ತೊಂದು ಹೆಮ್ಮಕ್ಕೊ.

“ಅಯ್ಯೋ ದೇವರೇ…!!” ಗ್ರೇಷಿದೆ ಆನು.

ಅಪ್ಪೋ, ಅಂಬಗ ಇನ್ನೊಂದು ಪ್ರಾಣಿಯ ಕೊಂದು ತಿಂಬದು ಹೇಳಿರೆ ಒಳ್ಳೆ ಮನಸ್ಸಿಪ್ಪದು ಹೇಳಿ ಆದಿಕ್ಕು – ನವಗೆಂತಕೆ ಅವರ ಖರ್ಮ ಅವಕ್ಕವಕ್ಕೆ ಹೇಳಿ ಸುಮ್ಮನೆ ಕೂದತ್ತು ನಾವು. ಒಂದು ಗ್ಲಾಸು ಹಾಲಿಂಗೆ ಒಂದು ಬಿಂದು ಹೆಪ್ಪು ಹಾಕಿರೂ ಸಾಲದೋ ಹಾಲು ಹಾಳಪ್ಪಲೆ? ಅಂಬಗ ‘ಸಸ್ಯಾಹಾರಿ ಪದಾರ್ಥ’ಕ್ಕೆ ಒಂದು ತುಂಡು ಫೋರ್ಕು ಸೇರ್ಸಿರೂ ಹಾಂಗೇ ಅಲ್ಲದೋ ಕಂಡತ್ತು. ಉಮ್ಮ…. 🙁

 “ಹೇ… ನಾಳೆಯಿಂದ ನಮ್ಮ ಮನೆಯಲ್ಲಿ ತರಕಾರಿ” ಹೇಳಿತ್ತು ಆ ಹೆಮ್ಮಕ್ಕೊ.

ಖಿಶಿ ಆತು ಮಾಣಿಗೆ, “ಹೇ° ಅಂಬಗ ಇವ್ವು ಮಾಂಸ ತಿಂಬದು ಬಿಟ್ಟವೋ” ಹೇಳಿ.

ನೋಡಿರೆ ಮತ್ತೆಂತರ?

“ನಮ್ಮ ಮೈನ್(ರೋಮ್)ನಿಂದ ಬಂದಿದೆ, ಇನ್ನು ನಲುವತ್ತು ದಿನ ತರಕಾರಿಯೇ ತಿನ್ಬೇಕಂತೆ. ಇನ್ನು ಮಾಂಸ ಎಲ್ಲ ಮಾಡ್ಲಿಕ್ಕೆ ಈಸ್ಟರಿನ ನಂತ್ರವೇ. ಕಪ್ಪು ತಿಂಗಳಲ್ಲಿ ನಮಿಗೆ ಮಾಂಸ ಮಾಡ್ಲಿಕ್ಕೆ ಇಲ್ಲ :(” ಹೇಳಿತ್ತು.

ಓ ಅಂಬಗ ಇವರ ಧರ್ಮದ ಮೂಲಲ್ಲಿಯೂ ಸಸ್ಯಾಹಾರ ಮತ್ತು ಸಾತ್ವಿಕ ಜೀವನದ ಕಲ್ಪನೆ ಇದ್ದು ಹೇಳಿ ಆತು. “ಮತ್ತೆ ಯಾವಾಗೆಲ್ಲ ತರಕಾರಿ ಮಾಡ್ಲಿಕ್ಕೆ?” ಕೇಳಿದೆ.

“ಮರಿಯ ಜಯಂತಿ ದಿನಸಾ ನಮಿಗೆ ತರಕಾರಿಯೇ ತಿನ್ಲಿಕ್ಕೆ ನಿಜವಾಗಿ, ನಾವು ಮಾಡುದಿಲ್ಲ; ನಾವು ಗಮ್ಮತ್ತು ಮಾಡುದು ಆ ದಿನ” ಹೇಳಿತ್ತು.

ಕೋಳಿ, ಕುರಿ, ಮೀನು ದಿನಾಗುಳೂ ಇಪ್ಪದು, ಅಂಬಗ ಗಮ್ಮತ್ತು ಎಂತಾದಿಕ್ಕು?

ಉಮ್ಮ ನಮ್ಮಂದ ಗ್ರೇಶಿಕ್ಕಲೂ ಎಡಿಯ.

ಎಲ್ಲ ಧರ್ಮವೂ ಮೂಲಲ್ಲಿ ಒಂದೇ.

ಎಲ್ಲವುದೇ ಹೇಳುದು ಸತ್ಯ – ಪ್ರೀತಿ – ತ್ಯಾಗ ಮತ್ತೆ ದಯೆಯನ್ನೇ..

ಅಂಬಗ ಸಸ್ಯಾಹಾರಿ ಆಗಿಪ್ಪ ಎನ್ನ ನಿರ್ಣಯ ಸರಿ ಹೇಳಿ ಕಂಡತ್ತು.

ಬ್ರಾಹ್ಮಣ ಜಾತಿಲಿ ಹುಟ್ಟದ್ದೇ ಇತ್ತಿದ್ದರೂ ಬಹುಶಃ ಆನು ಸಸ್ಯಾಹಾರಿಯೇ ಆಗಿರ್ತಿದ್ದೆ. 🙂

ನಿಂಗಳ,
ಮಂಗ್ಳೂರ ಮಾಣಿ

ಮಂಗ್ಳೂರ ಮಾಣಿ

   

You may also like...

25 Responses

 1. ವಿನಯ says:

  ಓಯ್, ಆನು ಸುಮ್ಮನೆ ನಿನ್ನ ಕಾಲು ಎಳವಲೆ ಹೆರಟದು… ಲೇಖನ ನಿಜವಾಗಿಯೂ ಒಳ್ಳೆದಾಯಿದು. ನಿನ್ನ typical style ಲಿ ಗಹನವಾದ ವಿಷಯವ ತಿಲಿ ಹಾಸ್ಯದ ಲೇಪ ಕೊಟ್ಟು ಹೇಳಿದ್ದು ಒಳ್ಳೆದಾತು. ಹೀಂಗಿಪ್ಪ ಪ್ರಶ್ನೆಗಳ ಆನುದೆ ಎದುರಿಸಿದ್ದೆ. ಮತ್ತೆ ಈ ಹಾಲಿನ ಬಗ್ಗೆ ಕೇಳ್ತವಕ್ಕೆ, ಹಾಲು ಮತ್ತೆ ಹಾಲಿ ಉತ್ಪನ್ನಗಳ ತಿಂತದಕ್ಕೆ lacto vegetarians ಹೇಳಿ ಹೇಳ್ತದಡ. ಆದ ಕಾರಣ ನಾವೆಲ್ಲ lacto vegetarians ಅವ್ತು. ಹಾಲು non-veg ಹೇಳಿ ಗಾಂಧಿ ಹಾಲು ಕುಡುಕ್ಕೊಂಡಿತ್ತವಿಲ್ಲೆ ಹೇಳಿ ಕೇಳಿದ್ದೆ, ಹೇಳಿದ ಹಾಂಗೆ ನೀನು ಇದರಲ್ಲಿ ಕೊಟ್ತ ಘಟನೆ ಅಂದ್ರಾಣ ಹಾಂಗೆ ಬರೀ ಲೊಟ್ಟೆ ಹೇಳಿ ಎನಗೆ ಒಂದು ಸಣ್ಣ ಸಂಶಯ ಇದ್ದು 😛 😀

  • Thank you Thank you 🙂
   lacto vegetarian ಹೇಳುದು ಎನಗೆ ಹೊಸ ಶಬ್ದ. ಹಾಂಗೂ ಒಂದು ಇದ್ದಪ್ಪೋ?
   ಮತ್ತೆ, ಸಸ್ಯಾಹಾರ ಹೇಳುದು ಬರೇ ತಿಂಬದು ಮಾತ್ರ ಅಲ್ಲ – ಅದು ಒಂದು ಸಾತ್ವಿಕ ಜೀವನ ಕ್ರಮದ ಅವಿಭಾಜ್ಯ ಅಂಗ. ಇದರ ಆಶಯ ಇಪ್ಪದು “ಇನ್ನೊಬ್ಬಂಗೆ ಅಥವಾ ಇನ್ನೊಂದು ಜೀವಕ್ಕೆ ತೊಂದರೆ ಕೊಡದ್ದೆ ಯಾ ಕೊಡಲೇ ಬೇಕಾದಲ್ಲಿ ಅತೀ ಕಡಮ್ಮೆ ತೊಂದರೆ ಕೊಟ್ಟು ಬದುಕ್ಕುತ್ತೆ” ಹೇಳುವ ಕಲ್ಪನೆಲಿ. ಹಾಂಗಾಗಿ ನಾವು ತಿಂಬ ಆಹಾರವ ನಾವೇ ನಿರ್ಧಾರ ಮಾಡೆಕಾದ್ದು.

   ಓಯ್!!!,
   ನಿನ್ನ ಸಂಶಯವೇ ಕೂಸೇ??? ಸೋತೆ ಆನು 😉 😀

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *