Oppanna.com

Tension-type headache : ತಲೆಬೆಶಿ ಆದರೂ ಬತ್ತು ತಲೆಬೇನೆ !

ಬರದೋರು :   ಸುವರ್ಣಿನೀ ಕೊಣಲೆ    on   20/02/2011    14 ಒಪ್ಪಂಗೊ

ಸುವರ್ಣಿನೀ ಕೊಣಲೆ

ಪ್ರತಿದಿನ ಹೊಸತ್ತೊಂದರ ಹುಡುಕುತ್ತಾ ಹೆರಡುವ ಮನಸ್ಸಿಂಗೆ ಸಿಕ್ಕುದು ಅದೇ ನೀರಸ ಜೀವನ ! ಬೇಡದ್ದ ಜೆನಂಗೊ, ಮಾತುಗೊ, ಸಂದರ್ಭಂಗೊ. ಮುಗಿಯದ್ದ ಕೆಲಸ, ಸಾಲದ್ದ ಸಂಬಳ ! ಮನೆ ಒಳ ಸಂಸಾರದ ತಲೆಬೆಶಿ ಮುಗಿಯದ್ದಷ್ಟಿದ್ದು, ಸಮಾಜಲ್ಲಿ ಸಾಗರದಷ್ಟು ಸಮಸ್ಯೆಗೊ. ಭ್ರಷ್ಟಾಚಾರ ಅನಾಚಾರಂಗೊ ಅನೀತಿ ಅಧರ್ಮಂಗೊ :(. ಸರಿ ಮಾಡ್ಲೆ ಯಾವುದನ್ನೂ ಎಡಿಯ, ಹಾಂಗೇಳಿಯೊಂಡು ನೋಡಿಗೊಂಡು ಸುಮ್ಮನೆ ಕೂಬಗ ಮನಸ್ಸಿಲ್ಲಿ ಏನೋ ತಪ್ಪಿತಸ್ಥ ಭಾವನೆ. ಹೀಂಗೆ ಎಲ್ಲಾ ಆಲೋಚನೆಗಳೂ ಮನುಷ್ಯನ ಮನಸ್ಸಿನ ಒಳದಿಕ್ಕೆ ಒಂದಕ್ಕೊಂದು ಗುದ್ದಾಟ ಮಾಡ್ತಾ ಇದ್ದರೆ ಘರ್ಷಣೆ ಉಂಟಾಗದ್ದೆ ಇರ, ಘರ್ಷಣೆ ಆದಪ್ಪಗ ಅಲ್ಲಿ ತಾಪಮಾನ ಹೆಚ್ಚಾಗಲೇಬೇಕು ಅಲ್ಲದಾ? ಕಲ್ಲಿಂಗೆ ಕಲ್ಲು ತಾಗಿರೆ ಕಿಚ್ಚು ಹೇಂಗೆ ಉಂಟಾವ್ತೋ, ಹಾಂಗೇ ಮನಸ್ಸಿನ ಒಳದಿಕ್ಕೆ ಘರ್ಷಣೆ ಉಂಟಾದಪ್ಪಗ ತಲೆಬೆಶಿ ಆವ್ತು. ಹೀಂಗೆ ಶುರು ಅಪ್ಪ ತಲೆಬೆಶಿ, ಕೆಲವು ಸರ್ತಿ ತಂತಾನೇ ತಣ್ಣಂಗಾವ್ತು, ಮತ್ತೆ ಕೆಲವು ಸರ್ತಿ ಮಾನಸಿಕ ಖಿನ್ನತೆಯೋ ಅಥವಾ ಉದ್ವೇಗವೋ ಹೆಚ್ಚು ಮಾಡಿ ವ್ಯಕ್ತಿಯ ಮಾನಸಿಕ ರೋಗಿ ಮಾಡ್ತು. ಮತ್ತೆ ಕೆಲವು ಸರ್ತಿ ನಿರೀಕ್ಷೆಯೇ ಮಾಡದ್ದ ಹಾಂಗಿಪ್ಪ ಕೆಲವು ಬದಲಾವಣೆಗೊ ಸಮಸ್ಯೆಗಳ ಹುಟ್ಟಿಂಗೆ ಕಾರಣ ಆವ್ತು. ವ್ಯಕ್ತಿ ಮಾನಸಿಕವಾಗಿ ಗಟ್ಟಿ ಇದ್ದರೆ ಮಾಂತ್ರ ಇಂತಹ ಪರಿಸ್ಥಿತಿಂದ ಆರೋಗ್ಯಕರವಾಗಿ ಹೆರಬಪ್ಪಲೆ ಸಾಧ್ಯ.

ತಲೆಬೇನೆಯ ಬಗ್ಗೆ ಮಾತಾಡ್ತಾ ಇಪ್ಪಗ ತಲೆಬೆಶಿಯ ಶುದ್ದಿ ಎಂತಕ್ಕೆ ಬಂತು ಹೇಳಿ ನಿಂಗೊ ತಲೆಬೆಶಿ ಮಾಡೆಡಿ :), ನಾವು ಇಂದು ತಲೆಬೆಶಿಂದಾಗಿ ಬಪ್ಪ ತಲೆಬೇನೆಯಬಗ್ಗೆ ತಿಳ್ಕೊಂಬಲಿದ್ದು.  Tension-type headache ಹೇಳ್ತದು ತೀರಾ ಸಾಮಾನ್ಯವಾದ ಒಂದು ತಲೆಬೇನೆಯ ಸಮಸ್ಯೆ. ಹೆಚ್ಚಿನ ಜೆನಂಗೊ ಜೀವನದ ಒಂದಲ್ಲ ಒಂದು ಘಟ್ಟಲ್ಲಿ ಇದರ ಅನುಭವಿಸುತ್ತವು.

ಲಕ್ಷಣಂಗೊ:

  • ಸತತವಾದ ತಲೆಬೇನೆ, ಸಾಮಾನ್ಯವಾಗಿ ಇಡೀ ತಲೆ ಬೇನೆ ಇರ್ತು.
  • ಕೆಲವು ಸರ್ತಿ ತಲೆಯ ಹಿಂದಾಣ ಭಾಗಂದ ಶುರು ಅಪ್ಪ ಬೇನೆ ಮುಂದಾಣ ಹೊಡೇಂಗೆ ಹರಡುತ್ತು.
  • ಇದು ಸಾಮಾನ್ಯವಾಗಿ ಹೆಚ್ಚು ತೀಕ್ಷ್ಣತೆ ಇಲ್ಲದ್ದ, ಬಿಗಿಯಾದ/ಒತ್ತಡದ ತಲೆಬೇನೆ.
  • ತಲೆಯ ಸುತ್ತ ಗಟ್ಟಿ ಹಿಡುದ ಹಾಂಗಿದ್ದ ಅನುಭವ ಇರ್ತು.
  • ತಲೆಬೇನೆ ಶುರು ಆದರೆ ದಿನಗಟ್ಲೆ ಅಥವಾ ವಾರಗಟ್ಲೆ ಇರ್ತು. ಕೆಲವು ಸರ್ತಿ ತಿಂಗಳುಗಟ್ಲೆಯೂ ಇರ್ತು !
  • ತಲೆಬೇನೆ ಇದ್ದರೂ ಕೂಡ ವ್ಯಕ್ತಿ ತನ್ನ ನಿತ್ಯದ ಕೆಲಸಂಗಳ ಮಾಡುಲೆ ಹೆಚ್ಚು ತೊಂದರೆ ಆವ್ತಿಲ್ಲೆ.
  • ವ್ಯಕ್ತಿ ಕೆಲಸಂಗಳಲ್ಲಿ ತನ್ನ ತೊಡಗಿಸಿಗೊಂಡಿದ್ದರೆ ತಲೆಬೇನೆ ಹೆಚ್ಚು ತೊಂದರೆ ಕೊಡ್ತಿಲ್ಲೆ ಅಥವಾ ವ್ಯಕ್ತಿಗೆ ತಲೆಬೇನೆಯ ಬಗ್ಗೆ ಗಮನ ಇರ್ತಿಲ್ಲೆ.
  • ಸಾಮಾನ್ಯವಾಗಿ ಈ ರೀತಿಯ ತಲೆಬೇನೆ ಉದಿಯಪ್ಪಗ ಕಮ್ಮಿ ಇದ್ದು ಹೊತ್ತು ಏರಿದ ಹಾಂಗೇ ಹೆಚ್ಚಾವ್ತಾ ಹೋವ್ತು.
  • ಕೆಲವು ಸರ್ತಿ ತಲೆ ಮುಟ್ಟಿಯಪ್ಪಗ ಬೇನೆ ಆವ್ತು.
  • ಹೆಚ್ಚಿನ ಸಂದರ್ಭಲ್ಲಿ ಯಾವುದೇ ಬೇನೆ ಕಮ್ಮಿ ಮಾಡುವ ಮಾತ್ರೆಗೊಕ್ಕೆ ಇದು ಬಗ್ಗುತ್ತಿಲ್ಲೆ.
ಸಾಮಾನ್ಯವಾಗಿ ಬೇನೆ ಅಪ್ಪ ಭಾಗಂಗೊ.

ಕಾರಣ:

  • ಇದಕ್ಕೆ ಸರಿಯಾದ ಕಾರಣ(pathogenesis)  ಎಂತರ ಹೇಳಿ ತಿಳುದು ಬೈಂದಿಲ್ಲೆ.
  • ತಲೆ, ಕೊರಳು ಮತ್ತೆ ಭುಜದ ಭಾಗದ ಸ್ನಾಯುಗಳಲ್ಲಿ ಸೆಳೆತ ಉಂಟಪ್ಪದರಿಂದ ಈ ತಲೆಬೇನೆ ಬತ್ತು ಹೇಳ್ತವು.
  • ಮಾನಸಿಕ ಒತ್ತಡ, ಉದ್ವೇಗ ಮತ್ತೆ ಖಿನ್ನತೆಯೂ ಕೂಡ ಈ ಸಮಸ್ಯೆಗೆ ದಾರಿಮಾಡಿಕೊಡ್ತು.

ಪರಿಹಾರ:    

  • ತಲೆಬೆಶಿ ಮಾಡುದರ ಕಮ್ಮಿ ಮಾಡೆಕಾದ್ದು ಎಲ್ಲಕ್ಕಿಂತ ಮುಖ್ಯ.
  • ಇದಕ್ಕೆ ಸುಲಭ ಪರಿಹಾರ ಹೇಳಿರೆ ಯಾವುದೇ ಸೃಜನಾತ್ಮಕ ಕೆಲಸಂಗಳಲ್ಲಿ ತೊಡಗ್ಸಿಗೊಂಬದು.
  • ಸಾಧ್ಯ ಆದಷ್ಟು ವಿಶ್ರಾಂತಿ ತೆಕ್ಕೊಳ್ಳೆಕ್ಕು. ಶರೀರಕ್ಕೊ ಮತ್ತೆ ಮನಸ್ಸಿಂಗೂ ಕೂಡ ವಿಶ್ರಾಂತಿ ಕೊಡೆಕ್ಕು.
  • ತಲೆಬೇನೆಗೆ ಮಸಾಜ್, ಆಕ್ಯುಪಂಕ್ಚರ್ ಮತ್ತೆ ಆಕ್ಯುಪ್ರೆಶ್ಶರ್ ಚಿಕಿತ್ಸೆಗಳ ತೆಕ್ಕೊಂಡರೆ ಬೇನೆ ಕಮ್ಮಿ ಆವ್ತು. ತಾತ್ಕಾಲಿಕ ಉಪಶಮನಕ್ಕೆ ಒಳ್ಳೆದು.  ಆದರೆ ಮಾನಸಿಕ ಒತ್ತಡ ಹೆಚ್ಚಾದಪ್ಪಗ ಮತ್ತೆ ಬಪ್ಪ ಸಾಧ್ಯತೆಗೊ ಇದ್ದು.
  • ತಲೆಬೇನೆ ಜೋರಿದ್ದರೆ ತಣ್ಣೀರು ಪಟ್ಟಿ ಅಥವಾ ರಜ್ಜ ಹೊತ್ತು ಐಸ್ ಮಸಾಜ್ [ಮಂಜುಗಡ್ಡೆಯ ಹಣೆ/ತಲೆಯಭಾಗಕ್ಕೆ ನಿಧಾನಕ್ಕೆ ಉದ್ದುದು] ಮಾಡಿರೆ ಬೇನೆಯ ತೀವ್ರತೆ ಕಮ್ಮಿ ಆವ್ತು.
  • ಎಲ್ಲಕ್ಕಿಂತ ಮುಖ್ಯವಾದ್ದು ಯೋಗ ಚಿಕಿತ್ಸೆ.
  • ಯೋಗದ ಎಲ್ಲ ಅಂಗಂಗಳ ಅಭ್ಯಾಸವೂ ಮುಖ್ಯವೇ. ಆಸನಂಗೊ, ಪ್ರಾಣಾಯಾಮಂಗೊ, ಧ್ಯಾನ, ವಿಶ್ರಾಂತಿ…ಹೀಂಗೇ ಎಲ್ಲವನ್ನೂ ನಿತ್ಯವೂ ಅಭ್ಯಾಸ ಮಾಡ್ತವ್ವು ಈ ರೀತಿಯ ತಲೆಬೇನೆಂದ ದೂರ ಇಪ್ಪಲಕ್ಕು.
  • ಇದೇ ಅಂಕಣಲ್ಲಿ ಈ ಹಿಂದೆ ಹೇಳಿದ ಉಸಿರಾಟದ ಕ್ರಮವನ್ನೂ ಕೂಡ ದಿನಕ್ಕೆ ಒಂದು ರಜ್ಜ ಹೊತ್ತು ಅಭ್ಯಾಸ ಮಾಡ್ಲಕ್ಕು.
  • ಮಾನಸಿಕ ಶಾಂತಿ ಮತ್ತೆ ನೆಮ್ಮದಿ ಹೆಚ್ಚಾದಷ್ಟೂ ಈ ತೊಂದರೆ ದೂರ ಆವ್ತಾ ಹೋವ್ತು.

ಇಂದು ಒಂದು ಬಗೆ ತಲೆಬೇನೆಯ ಬಗ್ಗೆ ತಿಳ್ಕೊಂಡತ್ತು. ಬೈಲಿನ ಎಲ್ಲೋರುದೇ ಯಾವುದೇ ತಲೆಬೆಶಿ ಇಲ್ಲದ್ದೆ , ತಲೆಬೇನೆಯೂ ಇಲ್ಲದ್ದೆ ಸಂತೋಷಲ್ಲಿ ಇರಿ ಹೇಳಿ ಹಾರೈಸುತ್ತೆ.

-ನಿಂಗಳ

ಸುವರ್ಣಿನೀ ಕೊಣಲೆ

14 thoughts on “Tension-type headache : ತಲೆಬೆಶಿ ಆದರೂ ಬತ್ತು ತಲೆಬೇನೆ !

  1. ಡಾಗುಟ್ರಕ್ಕೋ, ತಲೆಬೆಶಿ ಆಗಿ ನವಗೆ ಬತ್ತ ತಲೆಬೇನೆಯ ಬಗ್ಗೆ ಲಾಯ್ಕಲ್ಲಿ ವಿವರ್ಸಿದ್ದಿ.
    ನಿಂಗೊ ಪ್ರತ್ಯೇಕ ಪ್ರತ್ಯೇಕವಾಗಿ ಎಲ್ಲ ತಲೆಬೇನೆಯ ಬಗ್ಗೆ ಬರೆತ್ತಾ ಇಪ್ಪ ಕಾರಣ ಎಲ್ಲೋರಿಂಗೂ ಪ್ರಯೋಜನ ಅಕ್ಕು ಹೇಳಿ ಗ್ರೇಶುತ್ತೆ.

    ತರವಾರಿ ತಲೆಬೇನೆಯ ಬಗ್ಗೆ ಒಂದೊಂದು ಅಂಶವನ್ನೂ ಗಮನಿಸಿ ಜಾಗ್ರತೆ ಮಾಡಿಗೊಳ್ತ ಹಾಂಗೆ ಚೆಂದಲ್ಲಿ ಹೇಳ್ತಿ ನಿಂಗೋ!! ಧನ್ಯವಾದಂಗ ಅಕ್ಕೋ!!

    1. ಅಪ್ಪು ಶ್ರೀ ಅಕ್ಕ, ಒಂದೊಂದನ್ನೇ ಪ್ರತ್ಯೇಕವಾಗಿ ವಿವರ್ಸಿ ಬರದರೆ ಎಲ್ಲೋರಿಂಗೂ ಪ್ರಯೋಜನ ಅಕ್ಕು ಹೇಳಿ ಎನಗೂ ಅನ್ಸಿತ್ತು 🙂
      ಒಪ್ಪವಾದ ಒಪ್ಪಕ್ಕೆ ಧನ್ಯವಾದ 🙂

  2. ಗುರುಗಳ ದುರ್ಗಾ ಸಪ್ತಶತಿ ಯ ಪ್ರವಚನಲ್ಲಿ ಯೋಗನಿದ್ರಾದೇವಿಯ ಪೂಜೆಯ ಮಹತ್ವವ ಚೆ೦ದಕೆ ವಿವರಿಸಿದ್ದವು.
    ಬೈಲಿಲಿ ಡಾಗುಟ್ರಕ್ಕನ ಲೇಖನಲ್ಲಿ ತಲೆಬೇನೆಯ ಲಕ್ಷಣ,ಕಾರಣ ಮತ್ತೆ ಪರಿಹಾರ ಮೂರೂ ಸವಿವರವಾಗಿ ಸಿಕ್ಕಿತ್ತು.ವಿಶ್ರಾ೦ತಿಗೆ ಮಹತ್ವ ಕೊಡದ್ದೆ ಇದ್ದರೆ ಎಷ್ಟೋ ರೋಗ೦ಗಳ ಹತ್ತರೆ ದೆನಿಗೇಳಿದ ಹಾ೦ಗೆ,ಅಲ್ಲದೋ?

    1. “ಗುರುಗಳ ದುರ್ಗಾ ಸಪ್ತಶತಿ ಯ ಪ್ರವಚನಲ್ಲಿ ಯೋಗನಿದ್ರಾದೇವಿಯ ಪೂಜೆಯ ಮಹತ್ವವ ಚೆ೦ದಕೆ ವಿವರಿಸಿದ್ದವು.” – ಇದು ಎನಗೆ ಎಲ್ಲಿ ಸಿಕ್ಕುಗು?
      ಅಪ್ಪು, ಎಲ್ಲಕ್ಕಿಂತ ಮುಖ್ಯವಾದ್ದು ದೈಹಿಕ ಮತ್ತೆ ಮಾನಸಿಕ ವಿಶ್ರಾಂತಿ.

      1. ಗಿರಿನಗರಲ್ಲಿ ಸಿಕ್ಕುಗು,ಕಳುದ ನವರಾತ್ರಿಯ ಸಮಯ ಗುರುಗೊ ಮಾಡಿದ ಪ್ರವಚನದ ಪ್ರತಿ.

  3. ಅಕ್ಕೊ.. ಬಾರಿ ಒಳ್ಳೆ ಮಾಹಿತಿ…. 🙂
    ನಮ್ಮ argentumaani ಗೆ ಬೇಕಾದ ವಿಚಾರ.. ಅವ೦ಗೆ Tensionಉ, ರಜ್ಜ ಹೆಚ್ಚಡ… 😉

    1. ಬೊಸ ಭಾವಂಗೆ ಈ ತಲೆಬೇನೆ ಅಕ್ಕು ಹೇಳ್ತ ತಲೆಬೆಶಿ ಇಲ್ಲೆ ! ಎಂತಗೆ ಹೇಳಿರೆ ನಿನಗೆ ತಲೆಬೆಶಿ ಅಪ್ಪದು ಕಮ್ಮಿ ಅಲ್ಲದೋ!!

  4. ಹೇ… ಎನಗೆ ಟೆನ್ಶನ್ ಅಪ್ಪಲೇ ಸುರುವಾತಿಲ್ಲಿ. ದಾಕುಟ್ರು ಅಕ್ಕ ಹೇಳಿದಾಂಗೇ ರಜಾ ರೆಸ್ಟ್ ತೆಕ್ಕೊಳೆಕ್ಕೀಗ.

  5. ಮನುಶ್ಯಂಗೆ ತಲೆ ಇದ್ದರೆ ತಲೆ ಬೇನೆಯೂ ,ತಲೆ ಬೆಶಿಯೂ ಇರೆಕನ್ನೆ…..

    1. ರಜ್ಜ ಮಟ್ಟಿನ ತಲೆಬೇನೆ ಇರೆಕಾದ್ದೆ. ಒತ್ತಡಲ್ಲಿ (stress) ಎರಡು ವಿಧ. ಒಂದು ಒಳ್ಳೆದು ಇನ್ನೊಂದು ಅಪಾಯಕಾರಿ ! eustress ಹೇಳ್ತದು ಇರೆಕಾದ್ದೆ, ಪರೀಕ್ಷೆ ಸಮಯಲ್ಲಿ, ಸಂದರ್ಶನದ ಸಮಯಲ್ಲಿ ಅಪ್ಪಂತಹ ಸಣ್ನ ಮಟ್ಟಿನ stress ಒಳ್ಳೆದು. ಆದರೆ ಅದು ಮಿತಿ ಮೀರಿರೆ, ಅನಗತ್ಯ ಸಂದರ್ಭಲ್ಲಿ- ಉದಾಹರಣೆಗೆ ಊಟ ಮಾಡುದರ ಬಗ್ಗೆ, ಮಾರ್ಗಲ್ಲಿ ನಡಕ್ಕೊಂಡು ಹೋಪದರ ಬಗ್ಗೆ ..ಎಲ್ಲಾ ತಲೆಬೆಶಿ (distress)ಅಪ್ಪಲೆ ಶುರು ಆದರೆ ಅದು ನಿಜವಾಗಿಯೂ ಸಮಸ್ಯೆಯೇ.

  6. ತಲೆ ಬೆಶಿಯ ಕಮ್ಮಿ ಮಾಡುದೇ ಈ ತರದ ತಲೆಬೇನೆಗೆ ಮದ್ದು=ಸರಿಯಾದ ಮಾತು.
    ಮನುಷ್ಯ ಆದ ಮೇಲೆ ಒಂದಾರಿ ಆದರೂ ಈ ತಲೆಬೇನೆ ಬಾರದ್ದಿರ.
    ದೈವಭಕ್ತಿ,ಧ್ಯಾನ,ಸೇವಾ ಕೆಲಸ ,ಆಟ,ಸಂಗೀತ,ಸಾಹಿತ್ಯ-ಯಾವುದು ನಮಗೆ ಇಷ್ಟವೊ,ಯಾವುದು ನಮಗೆ ಹೊಂದುತ್ತೊ ಅದರಲ್ಲಿ ತೊಡಗಿಸಿಕೊಂಬದು ಒಂದು ಉತ್ತಮ ದಾರಿ.ಒಬ್ಬೊಬ್ಬಂಗೆ ಒಂದೊಂದು ಹಿಡಿಗು.
    ಧನ್ಯವಾದ.

    1. ಕಲೆ ಸಾಹಿತ್ಯ ಇತ್ಯಾದಿ ಸೃಜನಾತ್ಮಕ ಹವ್ಯಾಸಂಗಳಲ್ಲಿ ತೊಡಗಿಸಿಗೊಂಬದರಿಂದ ಸುಮಾರು ಸಮಸ್ಯೆಗಳ ಪರಿಹಾರ ಮಾಡೆ ಸಾಧ್ಯ ಇದ್ದು. ನಮ್ಮ ವೃತ್ತಿಯನ್ನೇ ನಾವು ಹವ್ಯಾಸದ ಹಾಂಗೆ ಪ್ರೀತಿಂದ ಆಸಕ್ತಿಂದ ಮಾಡಿರೆ ಕೆಲವು ಸಮಸ್ಯೆಗಳ ತಪ್ಪುಸುಲೆ ಸಾಧ್ಯ ಇದ್ದು ಹೇಳಿ ಎನ್ನ ಅಭಿಪ್ರಾಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×