Author: ಶ್ರೀಅಕ್ಕ°

ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. 20

ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ..

ಬೈಲ ಬಂಧುಗೊಕ್ಕೆ ಈ ಫ್ರುಟ್ಟುಸಲಾಡ್ ಬಳ್ಸುವಾ ಹೇಳಿ ಆತು. ಒಂದರಿ ತಂಪಿಂಗೆ ಓದಿಕ್ಕಿ ಆತೊ. ಇನ್ನು ಆರಾದರೂ ಪಬ್ಬನಲ್ಲಿಗೆ ಹೋದರೆ ಶ್ಲೋಕ ಬರದಿಕ್ಕಿ ಹೇದು ಸುಭಗಣ್ಣ ಕೇಳಿಗೊಂಡಿದವು. 🙂

ಮೀನಾಕ್ಷೀ ಪಂಚರತ್ನಮ್ 7

ಮೀನಾಕ್ಷೀ ಪಂಚರತ್ನಮ್

ಉದಯಿಸುತ್ತಾ ಇಪ್ಪ ಸಹಸ್ರ ಕೋಟಿಸೂರ್ಯರ ಹಾಂಗೆ ಇಪ್ಪ ತೇಜೋಮಯಿಯ, ಕೇಯೂರ ಹಾರಂಗಳಿಂದ ಸುಶೋಭಿತಳಾಗಿಪ್ಪ, ಸುಂದರ ದಂತಪಂಕ್ತಿಂದ ಮುಗುಳುನೆಗೆ ಮಾಡಿಗೊಂಡಿಪ್ಪ, ಪೀತಾಂಬರಾಲಂಕೃತಳ, ಬ್ರಹ್ಮ, ವಿಷ್ಣು, ಇಂದ್ರರಿಂದ ಸೇವಿಸಲ್ಪಡುವ ಚರಣಂಗಳ ಹೊಂದಿಪ್ಪ, ತತ್ತ್ವಸ್ವರೂಪಳ, ಶಿವೆಯ, ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ.

ತ್ರಿಪುರಸುಂದರೀ ಅಷ್ಟಕಮ್ 3

ತ್ರಿಪುರಸುಂದರೀ ಅಷ್ಟಕಮ್

ತ್ರಿಪುರಸುಂದರೀ ಅಷ್ಟಕಮ್ ಶ್ರೀ ಶಂಕರಾಚಾರ್ಯರ ಕೃತಿ. ಇದರಲ್ಲಿ ಆಚಾರ್ಯರು ಅಮ್ಮನ ಶಿವನ ಪತ್ನಿಯಾದ ತ್ರಿಪುರಸುಂದರಿಯ ರೂಪಲ್ಲಿ ಸುಂದರವಾಗಿ ವರ್ಣಿಸಿದ್ದವು.

ನವರತ್ನಮಾಲಿಕಾ 5

ನವರತ್ನಮಾಲಿಕಾ

ನವರತ್ನದಮಾಲೆಯ ಹಾಂಗೆ ರಚಿತ ಆದ ಈ ನವರತ್ನಮಾಲಿಕಾ ಸ್ತೋತ್ರ ಶಂಕರಾಚಾರ್ಯರ ಕೃತಿ.
ಅಬ್ಬೆಯ ನವ ವಿಧಲ್ಲಿ ವರ್ಣನೆ ಮಾಡುವ ಈ ಕೃತಿಲಿ ಅಮ್ಮನ ಸುಂದರ ರೂಪವ ಮನಸ್ಸಿಲಿ ಭಾವಿಸಿ ನಮಿಸುತ್ತೆ – ಹೇಳುವ ಹಾಂಗೆ ಇದ್ದು.

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್ 5

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್

ಬ್ರಹ್ಮ, ವಿಷ್ಣು, ಮಹೇಶ್ವರ ಮೂರು ಜನರ ನೇತ್ರಂದ ಹೆರಟ ಅಗ್ನಿಯಜ್ವಾಲೆಗೋ ಒಂದು ಕಡೆ ಕೇಂದ್ರೀಕೃತ ಆಗಿ, ಸಹಸ್ರ ಸೂರ್ಯರ ತೇಜದ ಒಂದು ರೂಪ ಮೂರ್ತಗೊಂಡತ್ತಡ್ಡ. ಮಹಿಷಾಸುರನ ನಿಗ್ರಹ ಮಾಡೆಕ್ಕು ಹೇಳ್ತ ಸಕಲ ದೇವರುಗಳ ಸಂಕಲ್ಪಕ್ಕೆ ಅವತಾರ ಆದ ರೂಪ ದೇವೀದುರ್ಗೆ.

ಲಲಿತಾ ಪಂಚಕಮ್ 4

ಲಲಿತಾ ಪಂಚಕಮ್

ಲಲಿತಾಂಬಿಕೆಯ ಸೌಭಾಗ್ಯ ಕೊಡುವ ಈ ಶ್ಲೋಕ ಆರು ಪ್ರಾತಃ ಕಾಲಲ್ಲಿ ಪಠನೆ ಮಾಡ್ತವಾ, ಅವಕ್ಕೆ ಲಲಿತಾದೇವಿ ಕೂಡ್ಲೇ ಪ್ರಸನ್ನಳಾಗಿ ವಿದ್ಯೆ, ಸಂಪತ್ತು, ನಿರ್ಮಲ ಸುಖ, ಅಪಾರ ಕೀರ್ತಿ ಕೊಡ್ತು ಹೇಳಿ ಶ್ಲೋಕದ ಫಲಶ್ರುತಿಲಿ ಹೇಳ್ತವು.

ಭವಾನೀ ಭುಜಂಗ ಸ್ತೋತ್ರಮ್ 2

ಭವಾನೀ ಭುಜಂಗ ಸ್ತೋತ್ರಮ್

ಭವಾನೀ ಭುಜಂಗ ಸ್ತೋತ್ರವ ಆರು ಭಕ್ತಿಂದ ಪಠನೆ ಮಾಡ್ತವೋ ಅವಕ್ಕೆ ವೇದಸಾರವಾದ ತನ್ನ ಶಾಶ್ವತ ಪದವಿಯನ್ನೂ, ಅಷ್ಟಸಿದ್ಧಿಯನ್ನೂ ಶ್ರೀ ಭವಾನಿ ಕೊಟ್ಟು ಅನುಗ್ರಹಿಸುತ್ತು. ಭವಾನೀ ಭವಾನೀ ಭವಾನೀ ಹೇಳಿ ಮೂರು ಸರ್ತಿ ಉದಾರ ಬುದ್ಧಿಲಿ, ಪ್ರೀತಿಂದ ಆರು ಜಪ ಮಾಡ್ತವೋ ಅವಕ್ಕೆ ಯಾವಾಗಲೂ, ಹೇಂಗೂ ಆರಿಂದಲೂ ದುಃಖ ಇಲ್ಲೆ, ಮೋಹ ಇಲ್ಲೆ, ಪಾಪ ಇಲ್ಲೆ, ಭಯ ಇಲ್ಲೆ

ಶ್ರೀಮೂಕಾಂಬಿಕಾಷ್ಟಕಮ್ 7

ಶ್ರೀಮೂಕಾಂಬಿಕಾಷ್ಟಕಮ್

ಶ್ರೀ ಮೂಕಾಂಬಿಕಾ ದೇವಿ ವಿರಾಜಮಾನ ಆಗಿಪ್ಪದು ಸಪ್ತ ಮುಕ್ತಿ ಸ್ಥಳಂಗಳಲ್ಲಿ ಒಂದಾದ ಕೊಲ್ಲೂರಿಲಿ. ಕೊಡಚಾದ್ರಿಯ ಚೆಂದದ ಬೆಟ್ಟದ ಸಾಲಿಲಿ ಸೌಪರ್ಣಿಕಾ ನದಿಯ ದಡಲ್ಲಿ ಶಿವಶಕ್ತಿಯರಿಬ್ಬರೂ ಜ್ಯೋತಿರ್ಲಿಂಗ ರೂಪಲ್ಲಿ ಇಪ್ಪ ಕೊಲ್ಲೂರಿಲಿ ಶ್ರೀ ಚಕ್ರದ ಮೇಲೆ ಅಬ್ಬೆಯ ಪಂಚಲೋಹದ ವಿಗ್ರಹವ ಸುಮಾರು ಸಾವಿರದ...

ಭವಾನ್ಯಷ್ಟಕಮ್ 5

ಭವಾನ್ಯಷ್ಟಕಮ್

ಭವಾನ್ಯಷ್ಟಕಂ ಶ್ರೀ ಶಂಕರಾಚಾರ್ಯರ ಒಂದು ಅಪೂರ್ವ ಕೃತಿ. ಮನುಷ್ಯಾವಸ್ಥೆಯ ವಿಪರೀತಂಗಳ ಕಲ್ಪಿಸಿ, ತೀರಾ ಭೂಮಿಗಿಳುದು ಶರಣಾಗಿ ಅಬ್ಬೆಯ ಹತ್ತರೆ “ಎನಗೆ ನೀನೇ ಗೆತಿ” ಹೇಳಿ ದೈನ್ಯಲ್ಲಿ ಕೇಳಿಗೊಂಬ ಒಂದು ದೇವೀ ಸ್ತೋತ್ರ.

ಪುಳ್ಳಿಯ ನೋಡಿಕ್ಕಿ ಕುಂಬ್ಳೆಜ್ಜ° ಹೋದವು.. :-( 18

ಪುಳ್ಳಿಯ ನೋಡಿಕ್ಕಿ ಕುಂಬ್ಳೆಜ್ಜ° ಹೋದವು.. :-(

ನಾವು ಈ ಭೂಮಿಲಿ ಹುಟ್ಟಿ ಬಪ್ಪಗಳೇ ಹೋಪ ದಿನವೂ ನಿಗಂಟು ಆಗಿರ್ತು ಹೇಳ್ತವು. ಇಡೀ ಜೀವಮಾನ ನಾವು ಎಂತ ಮಾಡ್ತೋ ಅದರ ಪುಣ್ಯವ ನಾವು ಹೋಪಗ ತೆಕ್ಕೊಂಡು ಹೋವುತ್ತು, ನಮ್ಮ ಬದುಕಿಲಿ ಮಾಡಿದ ಕೆಲಸಂಗ ಮಾಂತ್ರ ಇಲ್ಲಿ ಒಳಿತ್ತು. ಬೈಲಿನ ಹುಟ್ಟಿದ...

ಮಿಂಚಿನ ಹಾಂಗೆ ಮಿಂಚಿ ಮರೆ ಆದ “ಕೊಡಗಿನ ಗೌರಮ್ಮ” 9

ಮಿಂಚಿನ ಹಾಂಗೆ ಮಿಂಚಿ ಮರೆ ಆದ “ಕೊಡಗಿನ ಗೌರಮ್ಮ”

ಗಾಂಧೀಜಿ ಗೌರಮ್ಮನವರ ಮನಸ್ಸು ಬದಲ್ಸುಲೆ ಹಲವು ಪ್ರಯತ್ನ ಮಾಡಿದವು. ಆದರೆ ಯಾವುದಕ್ಕೂ ಗೌರಮ್ಮ ಬಗ್ಗಿದ್ದವಿಲ್ಲೆ. ಇವರ ಹಟಕ್ಕೆ ಸೋತು ಗಾಂಧೀಜಿ ಗೌರಮ್ಮನವರ ಮನಗೆ ಬರಲೇಬೇಕಾತು. ಮನೆಗೆ ಬಂದ ರಾಷ್ಟ್ರಪಿತನ ಗೌರವಲ್ಲಿ ಬರಮಾಡಿ, ಅವಕ್ಕೆ ತನ್ನ ಹತ್ರೆ ಇದ್ದ ಎಲ್ಲಾ ಚಿನ್ನವ ಹರಿಜನರ ಉದ್ಧಾರಕ್ಕೆ ಹೇಳಿ ಕೊಟ್ಟವು. ಮಾಂತ್ರ ಅಲ್ಲದ್ದೆ ಇನ್ನು ಮುಂದೆ ಸೌಭಾಗ್ಯದ ಸಂಕೇತ ಆದ ಕೊರಳಿನ ಕರಿಮಣಿ, ಕೆಮಿಯ ಬೆಂಡೋಲೆ, ಮೂಗಿನ ಮೂಗುಬೊಟ್ಟು ಅಲ್ಲದ್ದೆ ಬೇರೆ ಯಾವ ಒಡವೆಯೂ ಹಾಕಿಗೊಳ್ತಿಲ್ಲೆ ಹೇಳಿ ಪ್ರತಿಜ್ಞೆ ಮಾಡಿದವು. ಅಂಬಗ ಗೌರಮ್ಮನವರ ಪ್ರಾಯ 21 ವರ್ಷ!! ಈ ಘಟನೆಯ 1934 ಮಾರ್ಚ್ 2 ರ ‘ಹರಿಜನ’ ಪತ್ರಿಕೆಲಿ ಗಾಂಧೀಜಿ ಬರದ್ದವು.

ಎಂ.ಟೆಕ್: ಹಳೆಮನೆ ರಶ್ಮಿ ಅಕ್ಕಂಗೆ ಚಿನ್ನದ ಪದಕ 28

ಎಂ.ಟೆಕ್: ಹಳೆಮನೆ ರಶ್ಮಿ ಅಕ್ಕಂಗೆ ಚಿನ್ನದ ಪದಕ

ಮದುವೆ ಆದ ನಂತ್ರ M.Tech ಮಾಡುವದಕ್ಕೆ ಸಂಪೂರ್ಣ ಸಹಕಾರ ಮತ್ತೆ ಪ್ರೋತ್ಸಾಹ ಕೊಟ್ಟ ತನ್ನ ಗಂಡ ಕೊಯಂಗಾನ ಶಶಾಂಕನ ಮತ್ತೆ ಅತ್ತೆ ಮಾವನ ಹಾಂಗೂ ಅಪ್ಪ ಅಮ್ಮನ ಸಹಕಾರವ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ಬೈಲಿನ ಹೆರಿಯವರ ಎಲ್ಲರ ಆಶೀರ್ವಾದ ಬೇಡ್ತಾ ಇದ್ದು.
“ಮದುವೆ ಆದ ಮತ್ತೆ ಕಲಿಯುವಿಕೆಯೇ ನಿಂದತ್ತು” ಹೇಳಿ ಗ್ರೇಶುವವಕ್ಕೆ ರಶ್ಮಿ ಅಕ್ಕ° ಮಾದರಿ.

ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್” 4

ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್”

ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ |
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೧||

ನಾರಾಯಣ ಸ್ತೋತ್ರಮ್ 3

ನಾರಾಯಣ ಸ್ತೋತ್ರಮ್

ನಾರಾಯಣ ನಾರಾಯಣ ಜಯ ಗೋವಿಂದ ಹರೇ |
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||