Author: ಶರ್ಮಪ್ಪಚ್ಚಿ

ಕಣ್ಯಾರಲ್ಲಿ ಒಂದು ಸುತ್ತು.. 31

ಕಣ್ಯಾರಲ್ಲಿ ಒಂದು ಸುತ್ತು..

ಮೊನ್ನೆ ಶೇಡಿಗುಮ್ಮೆ ಭಾವ ಮನಗೆ ಬಂದಿತ್ತಿದ್ದ (ನಮ್ಮ ಬೈಲಿಂಗೆ ಗೊಂತಿಪ್ಪವ ಅಲ್ಲ).
ಎಂಗೊ ಇಬ್ರೂ, ಆನು ಹುಟ್ಟಿದಲ್ಲಿಂದ ಡಿಗ್ರಿ ಮುಗುಸುವವರೆಗೆ ಒಂದೇ ಮನೆಲಿ ಬೆಳದವು, ಒಟ್ಟಿಂಗೆ ಆಡಿದವು, ಓದಿದವು. ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಕಾಲೇಜ್, ಒಂದೇ ಹೋಸ್ಟೆಲ್, ಒಂದೇ ರೂಂ. ಸಣ್ಣ ಇಪ್ಪಗ ಸಣ್ಣ ಸಣ್ಣ ಜಗಳಂಗೊ ಮಾಡಿದ್ದಿಲ್ಲೆ ಹೇಳ್ಲೆ ಎಡಿಯ. ಎಲ್ಲಿಗೆ ಹೋವುತ್ತರೂ ಒಟ್ಟೊಟ್ಟಿಂಗೆ. ನಿಂಗೊ ಅಣ್ಣ ತಮ್ಮಂದಿರೋ? ಆರು ಅಣ್ಣ, ಆರು ತಮ್ಮ ಹೇಳಿ ಕೇಳಿದವು ಎಷ್ಟೋ ಜನಂಗೊ. ಅಷ್ಟೊಂದು ಅನ್ಯೋನ್ಯತೆ. ಪ್ರಾಯಲ್ಲಿ 5 ತಿಂಗಳಿಂಗೆ ಅವ ದೊಡ್ಡವ. ಎನ್ನ ಮಾವನ ಮಗನೇ ಅಲ್ಲದ. ರಜ ಸಾಮ್ಯತೆ ಇಲ್ಲದ್ದೆ ಇರ ಕಾಂಬವಕ್ಕೆ.

ಇನ್ನೊಂದು ಚೋದ್ಯ.. 17

ಇನ್ನೊಂದು ಚೋದ್ಯ..

ಒಬ್ಬ ಯಜಮಾನನ ಹತ್ರ ಒಂದು ಆನೆ ಇತ್ತಿದ್ದಡ. ಅವಂಗೆ ಪೈಸಗೆ ಅರ್ಜೆಂಟ್ ಆಗಿ ಅದರ ಮಾರುವ ಹೇಳಿ ನಿಜ ಮಾಡಿದ.
ಕ್ರಯ ಮಾಡ್ಲೆ ಬಂದ ಬ್ಯಾರಿ ಹತ್ರ ಇದಕ್ಕೆ 20 ಲಕ್ಷ ಕ್ಕಿಂತ ಕಮ್ಮಿಗೆ ಕೊಡ್ತಿಲ್ಲೆ ಹೇಳಿದ. ಹೇಂಗೂ ಕಚ್ಚೋಡ ಮಾಡುವ ಬ್ಯಾರಿ ಅಲ್ಲದ, ರಜ ಚರ್ಚೆ ಮಾಡಿರೆ ಕಮ್ಮಿಗೆ ಬಕ್ಕು ಹೇಳಿ ಆಲೋಚನೆ ಬಂತು.
‘ಇದು ತುಂಬಾ ಜಾಸ್ತಿ ಆತು, ರಜ ಕಮ್ಮಿ ಮಾಡಿ’ ಹೇಳಿ ಒರಂಜಿತ್ತಡ.
(ಎಂಗಳ ಊರಿನ ಬ್ಯಾರಿಗೊ ಆದರೆ “ಕೊರ್ಚ ಕೊರಕ್ಕಿ ಸಾಮಿ” ಹೇಳುಗು, ಕೊರಪ್ಪಲೆ ಎಂತ ನಾವು ನಾಯಿಗಳ?).
ಯಜಮಾನಂಗೆ ಇದರ ರಜ ಆಟ ಆಡುಸುವ ಹೇಳಿ ಆತು.

ಒಂದು ‘ಚೋದ್ಯ’ 10

ಒಂದು ‘ಚೋದ್ಯ’

ಗೀತಕ್ಕನ ಲೆಕ್ಕ ನೋಡಿ ಅಪ್ಪಗ ಒಂದು “ಚೋದ್ಯ” ಕೇಳುವೊ ಹೇಳಿ ಕಂಡತ್ತು: ಒಬ್ಬ ಯಜಮಾನನ ಹತ್ರ 15 ಕುದುರೆ ಇತ್ತು. ಅವಂಗೆ 4 ಜನ ಮಕ್ಕೊ. ಅವ ತೀರಿ ಹೋಪಗ ಮಕ್ಕೊಗೆ ಪಾಲು ಆಯೆಕ್ಕು ಹೇಳಿ ಆತು. ಯಜಮಾನ ಮೊದಲೇ ಯಾವ...

ವಿಮಾನ ಪ್ರಯಾಣದ ಅನುಭವಂಗೊ 16

ವಿಮಾನ ಪ್ರಯಾಣದ ಅನುಭವಂಗೊ

ನಮ್ಮ ತಲೆ ಮೇಲ್ಕಟೆ ಗುಂಯ್ ಹೇಳಿ ಶಬ್ದ ಮಾಡಿಗೊಂಡು ವಿಮಾನ ಹಾರುತ್ತರ ನೋಡುವಾಗ ಒಂದು ಸರ್ತಿ ಆದರೂ ಅದರಲ್ಲಿ ಕೂರೆಕ್ಕು, ಹಾರೆಕ್ಕು ಹೇಳಿ ಆರಿಂಗಾದರೂ ಕೊದಿ ಆಗದ್ದೆ ಇಕ್ಕಾ?. ಮೊದಲೇ ಹೋದವು, ಇಲ್ಲದ್ದರೆ ಹೋದವರ ಅನುಭವ ಕೇಳಿ ತಮ್ಮ ಸ್ವಂತ ಅನುಭವದ...

ಒಪ್ಪಣ್ಣನ ಬೈಲಿಂಗೆ ಒಪ್ಪಒಪ್ಪ ಪಟಂಗೊ… 6

ಒಪ್ಪಣ್ಣನ ಬೈಲಿಂಗೆ ಒಪ್ಪಒಪ್ಪ ಪಟಂಗೊ…

ಬೈಲಿಂಗೆ ಹೇಳಿ ತೆಗದು ಕಳುಹಿಸಿದ ಕೆಲವು ಫೋಟೋಂಗ ಇಲ್ಲಿದ್ದು. ಈ ಪಟಂಗೊ ಪಿಕ್ಕಾಸಿಲಿಯೂ ನೇಲುಸೆಂಡು ಇದ್ದು: ನೋಡಿ, ಹೇಂಗಿದ್ದು ಹೇಳಿ.. ~ ಶರ್ಮಪ್ಪಚ್ಚಿ sksharmah07@gmail.com

ಮಂಗಳೂರು ರಿಫೈನರಿಲಿ ಭಟ್ಟಿ ಇಳುಶುದರ ಬಗ್ಗೆ 11

ಮಂಗಳೂರು ರಿಫೈನರಿಲಿ ಭಟ್ಟಿ ಇಳುಶುದರ ಬಗ್ಗೆ

ನಾವು ದಿನ ನಿತ್ಯ ಒಂದಲ್ಲದ್ದರೆ ಒಂದು ವಾಹನಲ್ಲಿ ಓಡಾಡಿಗೊಂಡು ಇರುತ್ತು. ಅದು ಸ್ಕೂಟರ್, ಬೈಕ್ ಹಾಂಗಿಪ್ಪ ಎರಡು ಚಕ್ರದ ವಾಹನ ಅಗಿಕ್ಕು ಇಲ್ಲದ್ದರೆ, ಕಾರು, ಬಸ್,ವ್ಯಾನ್, ಜೀಪ್ ಹಾಂಗಿಪ್ಪ ನಾಲ್ಕು ಚಕ್ರದ ವಾಹನ ಅಗಿಕ್ಕು ಇಲ್ಲದ್ದರೆ ರೈಲ್ ಬಂಡಿ ಆಗಿಕ್ಕು, ಅಲ್ಲ ವಿಮಾನ ಆದಿಕ್ಕು. ಇದೆಲ್ಲ ನಮ್ಮನ್ನೂ, ನಮ್ಮ ಲೋಡ್ ಗಳನ್ನೂ ಎಳಕ್ಕೊಂಡು ಹೋಯೆಕ್ಕಾದರೆ ಅದಕ್ಕೆ ಶಕ್ತಿ ಬೇಕಲ್ಲದ. ಆ ಶಕ್ತಿ ಸಿಕ್ಕೆಕ್ಕಾದರೆ ಅದಕ್ಕೆ ಇಂಧನ ತುಂಬುಸೆಕ್ಕು. ನಾವು ಹಷು ಅಪ್ಪಗ ಊಟ ಮಾಡುತ್ತ ಹಾಂಗೆ. ನಮ್ಮಊಟ ಸರಿಯಾಗಿ ಇದ್ದರೆ ಮಾತ್ರ ನಮ್ಮ ಆರೋಗ್ಯ ಸರಿಯಾಗಿ ಇಕ್ಕು. ಇದೇ ರೀತಿ ವಾಹನಂಗೊಕ್ಕೆ ಕೂಡ ಸರಿಯಾದ ಇಂಧನ ಹಾಕದ್ದರೆ ಅದರ ಆರೋಗ್ಯ ಹಾಳು ಅಕ್ಕು. ನವಗೆ ಅಸೌಖ್ಯ ಅಪ್ಪಗ ಡಾಕ್ಟ್ರಲ್ಲಿಗೆ ಹೋಯೆಕ್ಕಾಗಿ ಬಪ್ಪ ಹಾಂಗೆ ವಾಹನಂಗೊಕ್ಕೆ ಗೇರೇಜಿಂಗೆ ಹೋಗಿಗೊಂಡು ಇರೆಕಕ್ಕು. ನಮ್ಮ ಅರೋಗ್ಯ ನವಗೆ ಹೇಂಗೆ ಮುಖ್ಯವೋ ಹಾಂಗೆ ವಾಹನಂಗಳ ಸುಸ್ಥಿತಿಲಿ ಮಡುಗುವದು ಕೂಡ ಅಷ್ಟೇ ಮುಖ್ಯ. ಇದರಲ್ಲಿ ಇಂಧನ ತುಂಬಾ ಮುಖ್ಯ ಪಾತ್ರ ವಹಿಸುತ್ತು.

ಈ ಇಂಧನ ಹೇಂಗೆ ತಯಾರಾಗಿ ನಮಗೆಲ್ಲ ಸಿಕ್ಕುತ್ತು, ಅದರ ಕ್ವಾಲಿಟಿ (Quality) ಹೇಂಗೆ ಇರೆಕು, ಇತ್ಯಾದಿ ಬಗ್ಗೆ ಸ್ಥೂಲ ಪರಿಚಯ ಮಾಡುವ, ಆಗದೊ?

ಬೆಂಗಳೂರಿಂದ ಕೊಡೆಯಾಲಕ್ಕೆ ಚುಕ್ ಬುಕ್ ರೈಲ್ ಪ್ರಯಾಣ.. 18

ಬೆಂಗಳೂರಿಂದ ಕೊಡೆಯಾಲಕ್ಕೆ ಚುಕ್ ಬುಕ್ ರೈಲ್ ಪ್ರಯಾಣ..

ಶರ್ಮಪ್ಪಚ್ಚಿಯ ಬಗ್ಗೆ ಎರಡು ಮಾತು ಹೇಳಲೇಬೇಕು! ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು...