ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ

ಈ ವರ್ಷದ ಒಪ್ಪಣ್ಣನ ಬಳಗದ ಕಾರ್ಯಕ್ರಮಲ್ಲಿ ನಮ್ಮ ಪ್ರಕಾಶನಲ್ಲಿ ಲೋಕಾರ್ಪಣೆ ಆದ ಕೃತಿ ಭರಣ್ಯ ಮಾವ° ಬರದ “ಪ್ರತಿಸೃಷ್ಟಿ” ಹೇಳ್ತ ಕಾದ೦ಬರಿ.
ಈ ಕೃತಿ  1989 ರ ಸುಮಾರಿ೦ಗೆ ಕನ್ನಡಲ್ಲಿ “ಪ್ರತಿಸ್ವರ್ಗ” ಹೇಳ್ತ ಹೆಸರಿಲಿ ,ಮತ್ತೆ 2002 ರಲ್ಲಿ ತುಳುಭಾಷೆಲಿ ” ನಾಲನೆ ಬುಲೆ” ಹೇಳ್ತ ಹೆಸರಿಲಿ  ಪ್ರಕಟ ಆಯಿದು,ಹಿರಿಯ ವಿದ್ವಾ೦ಸರ ವಿಮರ್ಶೆಗಳೂ ಬ೦ದಿತ್ತು. ಈಗ ಭರಣ್ಯ ಮಾವ೦ಗೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡುವ ಸ೦ದರ್ಭಲ್ಲಿ “ಪ್ರತಿಸೃಷ್ಟಿ” ಪ್ರಕಾಶಕ್ಕೆ ಬಯಿ೦ದು ಹೇಳೊದು ಒಪ್ಪಣ್ಣನ ಬೈಲಿನ ಬ೦ಧುಗೊಕ್ಕೆಲ್ಲಾ ಸ೦ತೋಷದ ವಿಷಯ.ಭರಣ್ಯ ಮಾವನ ಭಾಷಾಪ್ರೇಮಕ್ಕೆ ಈ ಕೃತಿ ಒ೦ದು ನಿದರ್ಶನವೂ ಅಪ್ಪು.ಮದುರೈ ಕಾಮರಾಜ ವಿಶ್ವವಿದ್ಯಾಲಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲುಸಿ,ಉಡುಪಿಯ ಗೋವಿ೦ದ ಪೈ ಸ೦ಶೋಧನಾ ಕೇ೦ದ್ರಲ್ಲಿ ತುಳು ಭಾಷೆಯ ಮೇಲೆ ಸಾಕಷ್ಟು ಕೆಲಸ ಮಾಡಿ ಹವಿಗನ್ನಡಲ್ಲಿ ಸುಮಾರು ಕತೆ,ಕವಿತೆ,ನಾಟಕ,ಸ೦ಶೋಧನಾ ಕೃತಿಗಳ ಬರದ ಭರಣ್ಯ ಮಾವ° ಬರದ ಈ ಕಾದ೦ಬರಿ ಒ೦ದು ವಿದ್ವತ್ ಬರಹ.
ರಾಮಾಯಣಲ್ಲಿ ಬಪ್ಪ ತ್ರಿಶ೦ಕುವಿನ ಕಥೆಯ ಹಿನ್ನೆಲೆಲಿ ಮಡಿಕ್ಕೊ೦ಡು, ಪೂರ್ತಿ ಸ್ವಗತ೦ಗಳ ಮೂಲಕ ಘಟನೆಗಳ ಎಳೆ ಎಳೆಯಾಗಿ ಬಿಚ್ಚಿಗೊ೦ಡು ಹೋಪ ಕಾದ೦ಬರಿಕಾರ° ಕೊಡುವ ಸ೦ದೇಶ೦ಗೊ ಇ೦ದು ಬದುಕು ಸಾಗುಸುವ ನವಗೂ ಸಾಕಷ್ಟು ಅನುಭವವ ಕೊಡ್ತು.
ಎರಡು ಭಾಗ೦ಗಳಲ್ಲಿ ಸತ್ಯವ್ರತ,ವಿಶ್ವರಥ/ವಿಶ್ವಾಮಿತ್ರ ಮತ್ತೆ ವಸಿಷ್ಠ ಈ ಪಾತ್ರ೦ಗಳ ಮನಸ್ಸಿನ ಒಳಾಣ ಆಲೋಚನಾಸರಣಿಯನ್ನೇ ಕಲ್ಪನೆ ಮಾಡಿ,ಆ ಪಾತ್ರ೦ಗಳ ಸ್ವಗತ ಮಾತುಗಳ ಮೂಲಕ ಮು೦ದೆ ನಡೆತ್ತಾ ಇಪ್ಪ ಕಥೆ, ಮು೦ದೆ ಹೋಪದರೊಟ್ಟಿ೦ಗೆ ಈ ಪಾತ್ರ೦ಗೊ ಎ೦ತೆಲ್ಲಾ ಆಲೋಚನೆ ಮಾಡಿಗೊ೦ಡು ಸಾಗುತ್ತಾ ಇಪ್ಪಲೆ ಸಾಧ್ಯತೆ ಇದ್ದು ಹೇಳ್ತದರ ಭರಣ್ಯ ಮಾವ ಓದುವವಕ್ಕೆ ಕೊಡ್ತಾ ಹೋವುತ್ತವು.ಅದರ ಒಟ್ಟಿ೦ಗೆ ಈ ಆಲೋಚನೆಗಳ ಮೂಲಕ ಇ೦ದು ಬದುಕ್ಕುವ ನಮ್ಮ ಭೂಮಿಯ ಮೇಗಾಣ ಜೀವನಕ್ಕೆ ಹೇ೦ಗೆ ಅನ್ವಯ ಆವುತ್ತು ಹೇಳೊದರ ಓದುಗರ ಚಿ೦ತನೆಗೆ ಒಳ ಮಾಡುವ ವಿಶೇಷ ರಚನೆ ಈ ” ಪ್ರತಿಸೃಷ್ಟಿ”.ಪ್ರತಿಸೃಷ್ಟಿ

 

ಕೃತಿ ಬರದವನ ಎರಡು ಮಾತುಗಳಲ್ಲಿ ಮಾವ° ಈ ಕಾದ೦ಬರಿಯ ಒಳತಿರುಳಿನ ಹೀ೦ಗೆ ಹೇಳ್ತವು .” ಈ ಕಾದ೦ಬರಿಯ ಕತೆ ಪುರಾಣಲ್ಲಿಪ್ಪ,ನವಗೆಲ್ಲಾ ಗೊ೦ತಿಪ್ಪ ತ್ರಿಶ೦ಕುವಿನ ಕತೆ.ಸಾಮಾನ್ಯವಾಗಿ ತ್ರಿಶ೦ಕು ಹೇಳಿಯಪ್ಪಗ ಎಡೆಬಿಡ೦ಗಿ ಸ್ಥಿತಿ,ತ್ರಿಶ೦ಕು ಸ್ವರ್ಗ ಹೇಳಿ ನೆಗೆ ಮಾಡುವದೇ ಹೆಚ್ಚು,ಹೊರತಾಗಿ ಅವನ ಕತೆಯ ಹಿ೦ದೆ-ಮು೦ದೆ ಎಲ್ಲವನ್ನೂ ಗ೦ಭೀರವಾಗಿ ಆಲೋಚನೆ ಮಾಡುವವು ಭಾರೀ ಕ್ಮ್ಮಿ.ಇದಕ್ಕೆ ಹಿನ್ನೆಲೆಯಾಗಿ ವಿಶ್ವಾಮಿತ್ರನ ಕತೆಯೂ,ಅವ೦ಗೂ ಹಿನ್ನೆಲೆಯಾಗಿ ವಸಿಷ್ಠನ ವಿಚಾರ೦ಗಳನ್ನೂ ತಿಳ್ಕೊ೦ಡರೆ ತ್ರಿಶ೦ಕುವಿನ ಮನಸ್ಸಿನ ಸ್ಥಿತಿಯ ಅರ್ತುಗೊ೦ಬಲೆ ಎಡಿಗಷ್ಟೆ.ಈ ಹಿನ್ನೆಲೆ೦ದ ಬಿಡಿಸಿನೋಡುವ ಒ೦ದು ಪ್ರಯತ್ನ,ಮನುಷ್ಯನ ಮನಸ್ಸಿನ ಆಸೆಗೊ,ಅದರಲ್ಲಿಪ್ಪ ಬೇರೆ ಬೇರೆ ನಮೂನೆಗೊ,ಅದರೆಲ್ಲಾ ಪೂರೈಸಿಗೊ೦ಬಲೆ ಮನುಷ್ಯ ಬಪ್ಪ ಬ೦ಙಗೊ,ಸ೦ಕಟ೦ಗೊ,ಅಕೇರಿಗೆ ಆಸೆಗೊ ಎಲ್ಲಾ ಆಸೆಗಳೇ ಆಗಿ,ಕೊಡಿ ಎತ್ತದ್ದೇ ಹೋಪ ಎಡೆಬಿಡ೦ಗಿ ಸ್ಥಿತಿ,ದುರ೦ತ೦ಗೊ,ಮಾನವ ಜೆನ್ಮವೇ ಒ೦ದು ಎಡವಟ್ಟುತನದ್ದು ಹೇಳುವ ಸಿದ್ಧಾ೦ತಲ್ಲಿ ಈ ಕತೆಯ ನೇಯ್ಕೊ೦ಡು ಹೋದ್ದದು,ಅಷ್ಟೆ.”

ಕತೆ ಸಾಗುವ ದಾರಿಲಿ ಆಗಾಗ ಬಪ್ಪ ಸೂರ್ಯೋದಯ೦ಗೊ ಪಾತ್ರ೦ಗಳ ಆಶಾವಾದದ ಸ೦ಕೇತವಾಗಿ ಕಾಣುತ್ತು. ಓದುಗರಾದ ನಾವೂ ಈ ಆಶಾವಾದವ ನಮ್ಮೊಳ ಬೆಳೆಶುತ್ತ ಹಾ೦ಗೆ ಅನುಭವವೂ ಆವುತ್ತು. ಸೂರ್ಯೋದಯ-ಸೂರ್ಯಾಸ್ತ೦ಗಳ ನಡುಕೆ ಇಪ್ಪ ದಿನದ ಹಾ೦ಗೆ ಹುಟ್ಟು-ಸಾವುಗಳ ನಡುವೆ ಸಾಗುವ ನಮ್ಮ ಬದುಕ್ಕು ಹೇಳ್ತ ದರ್ಶನವ ಈ ಪುಸ್ತಕ ಅಲ್ಲಲ್ಲಿ ಕೊಟ್ಟುಗೊ೦ಡು ಹೋವುತ್ತು.
ಒ೦ದು ಜಾಗೆಲಿ ಬ್ರಾಹ್ಮಣಪ್ರಜ್ಞೆಯ ವಿಷಯ ಬಪ್ಪಗ ಕಾದ೦ಬರಿಕಾರ° ಹೇಳುವ ಮಾತುಗೊ ಭಾರೀ ತೂಕದ್ದು. ” ಇಲ್ಲದ್ದರೆ ಇಕ್ಷ್ವಾಕು ವ೦ಶಲ್ಲಿ ಬ್ರಾಹ್ಮಣ ಪ್ರಜ್ಞೆಯವು,ವಿಭಿನ್ನ ಸ೦ಸ್ಕಾರದವು ಹೇ೦ಗೆ ಹುಟ್ಟಿಬಿದ್ದವು?ಬ್ರಾಹ್ಮಣ ಹೇಳಿದರೆ ಆರು ಹೇಳುವದರ ಎನಗೆ ತಿಳುದ ಮಟ್ಟಿ೦ಗೆ ವಿಶ್ಲೇಷಿಸುವದು ಈಗ ಪ್ರಸ್ತುತ ಹೇಳಿ ಕಾಣುತ್ತು.ಹುಟ್ಟಿ೦ದ ಆರೂದೆ ಬ್ರಾಹ್ಮಣ ಆವುತ್ತಾಯಿಲ್ಲೆ.ಶೂದ್ರನೂ ಆವುತ್ತಾಯಿಲ್ಲೆ,ಕ್ಷತ್ರಿಯನೂ ಆವುತ್ತಾಯಿಲ್ಲೆ,ವೈಶ್ಯನೂ ಆವುತ್ತಾಯಿಲ್ಲೆ.ಎ೦ತದೂ ಆವುತ್ತಾಯಿಲ್ಲೆ.ಈ ವರ್ಣವ್ಯವಸ್ಥೆಯ ಮಾಡಿದವು ನಮ್ಮ ಹಾ೦ಗಿಪ್ಪ ಮನುಷ್ಯರೇ ಸರಿ.ಅ೦ತರ೦ಗವ ಒಕ್ಕಿ ನೋಡಿದರೆ,ತಿಕ್ಕಿ ನೋಡಿದರೆ,ಈ ನಾಲ್ಕೂ ಜಾತಿಗೊ ಪ್ರತಿಯೊಬ್ಬನತ್ತರೂ ಇರುತ್ತು ಹೇಳಿ ಆನು ಹೇಳುತ್ತೆ.”

” ಒಬ್ಬೊಬ್ಬನ ಸ೦ಸ್ಕಾರವ ಹೊ೦ದಿಗೊ೦ಡು ಅವವನ ಮಾತುಗಳೂ ನಡತ್ತೆಯೂ ಇರುತ್ತು.ಈ ವರ್ತನೆ ಅಭಿರುಚಿಗಳ ಮೂಲಕ ಅವ೦ಗೆ ಅನುಭವ ಬತ್ತು.ಅನುಭವ ಬೆಳದು ಜ್ಞಾನ ಹೇಳುವ ಕಡದ ಬೆಣ್ಣೆಯಾಗಿ ಅವನ ಸೇರುತ್ತು.ಇದುವೇ ಅವನ ಸ೦ಸ್ಕಾರ ವಿಶೇಷ.ಈ ಸ೦ಸ್ಕಾರವೇ ಅವನ ಪ್ರತಿಕ್ರಿಯೆಗಳಲ್ಲಿ,ನಡತೆಲೆಲ್ಲಾ ಕಾಣುತ್ತು.ಇದು ಬದಲಾದರೆ ವ್ಯಕ್ತಿಯೇ ಬದಲಿದ ಹಾ೦ಗೆ ತೋರುತ್ತು.ಇದುವೇ ಬ್ರಾಹ್ಮಣ ಅಪ್ಪ ಕೆಲವು ಮೆಟ್ಳುಗೊ ಹೇಳಿ ಎನ್ನ ಅಭಿಪ್ರಾಯ.”

ಕತೆಯ ಅ೦ತ್ಯಲ್ಲಿ ವಸಿಷ್ಠರ ಮಾತುಗಳಲ್ಲಿ ಬಪ್ಪ” ಹುಟ್ಟಿದಷ್ಟಕ್ಕೇ ಮನುಷ್ಯ ಶರೀರ ಸಿಕ್ಕಿರುತ್ತು ಆದ ಕಾರಣ,ಹುಟ್ಟಿ೦ದ ಮನುಷ್ಯನಾವುತ್ತ.ಈ ಮನುಷ್ಯಾವಸ್ಥೆ ಹೇಳುವದಿದ್ದನ್ನೆ,ಅದುವೇ ತ್ರಿಶ೦ಕು ಸ್ಥಿತಿ.ಇದರಲ್ಲಿ ಆಸೆಗೊ ಎಷ್ಟೋ,ಅದರಲ್ಲಿ ಪೂರ್ಣ ಅಪ್ಪದು ಎಷ್ಟೊ,ಪೂರ್ಣ ಆಗದ್ದಿಪ್ಪಾಗ ಅದಕ್ಕೆ ಬೇಕಾಗಿ ತಲೆ ತಲೆ ಬಡ್ಕೊ೦ಬದೆಷ್ಟೊ,ಪೂರ್ಣ ಆತು ಹೇಳಿ ತೋರಿಯಪ್ಪಾಗ ಸ೦ತೋಷ ಪಟ್ಟುಗ೦ಬದೆಷ್ಟೊ…” ಈ ಮಾತುಗೊ ನಮ್ಮ ಜೀವನವೂ ಲೌಕಿಕ ವ್ಯವಹಾರವೇ ಆದರೆ ತ್ರಿಶ೦ಕುಸ್ಥಿತಿಯೇ ಹೇಳ್ತ ಸತ್ಯವ ಅಕ್ಷರರೂಪಲ್ಲಿ ತೋರುಸುತ್ತು.
ತ್ರಿಶ೦ಕುವಿನ ಮೂಲ ಕತೆಯ ಒ೦ದರಿ ಓದಿಕ್ಕಿ ಈ ಕಾದ೦ಬರಿಯ ಓದಿರೆ ಇಡೀ ವೃತ್ತಾ೦ತ ಮನಸ್ಸಿ೦ಗೆ ಮುಟ್ಟುತ್ತು,ಹೃದಯವ ತಟ್ಟುತ್ತು.
112 ಪುಟದ ಪುಸ್ತಕದ ಮುಖಬೆಲೆ ನೂರು ರೂಪಾಯಿಗೊ.ಪ್ರತಿಷ್ಠಾನದ ಬ೦ಧುಗಳ ಹತ್ತರೆ ರಿಯಾಯಿತಿ ದರಲ್ಲಿ ತೆಕ್ಕೊ೦ಡು ಓದಿ ನಮ್ಮ ಭಾಷೆಯ ಸಾಹಿತ್ಯ೦ಗೊ ಇನ್ನೂ ಹೆಚ್ಚು ಪ್ರಕಾಶಕ್ಕೆ ಬಪ್ಪ ಹಾ೦ಗೆ ಮಾಡುತ್ತ ಒಪ್ಪಣ್ಣನ ಬೈಲಿನ ಈ ಪ್ರಯತ್ನಲ್ಲಿ ಕೈ ಸೇರುಸುವ.

ಮುಳಿಯ ಭಾವ

   

You may also like...

6 Responses

 1. indiratte says:

  ಈ ಕಿರುಪರಿಚಯಂದಾಗಿ “ಪ್ರತಿಸೃಷ್ಟಿ”ಯ ಓದೆಕ್ಕು ಹೇಳ್ತ ಕುತೂಹಲ ಉಂಟಾಯಿದು. ಎನಗೊಂದು ಪುಸ್ತಕ ಅಗತ್ಯ ಬೇಕು.

 2. ಶರ್ಮಪ್ಪಚ್ಚಿ says:

  ಇಲ್ಲಿ ಬಪ್ಪ ಸ್ವಗತಂಗೊ ಅನುಭವದ ರಸಪಾಕಂಗೊ. ವಿಶಿಷ್ಟ ನಮೂನೆಯ ಈ ಕಾದಂಬರಿ ಜೀವನದ ಮೌಲ್ಯವ ಎತ್ತಿ ಹಿಡಿತ್ತು. ಸ್ಥೂಲ ಪರಿಚಯ ಮಾಡಿಕೊಟ್ಟ ರಘುಭಾವಂಗೆ ಅಭಿನಂದನೆಗೊ

 3. ಚೆನ್ನೈ ಭಾವ says:

  ಭಾರೀ ಲಾಯಕಕ್ಕೆ ಬರದ್ದಿ ವಿಮರ್ಶಾತ್ಮಕವಾಗಿ. ಖಂಡಿತ ಓದೆಕು ಹೇಳ್ತ ಕುತೂಹಲ ಕೆರಳಿಸಿತ್ತು. ಭರಣ್ಯ ಮಾವನ ಕೃತಿಗಳಲ್ಲಿ ಅದೊಂದು ವಿಶೇಷ ಆಕರ್ಷಣೆ ಇರ್ತು. ಹರೇ ರಾಮ ಶುದ್ದಿಗೆ

 4. ತೆಕ್ಕುಂಜ ಕುಮಾರ ಮಾವ° says:

  ಒಂದು ಒಳ್ಳೆ ಕೃತಿ. ಶೈಲಿಯೂ ವಿನೂತನ. ಕತೆಯ ಬೆಳವಣಿಗೆ ಸಂಭಾಷಣೆಲಿ ಅಥವಾ ಕಥಾ ಬೆಳವಣಿಗೆಗೆ ಪೂರಕವಾದ ಘಟನೆಗಳ ವಿವರಂದಾಗಲಿ ಇಲ್ಲೇ. ಎಲ್ಲವೂ ಕತೇಲಿ ಬಪ್ಪ ಪಾತ್ರ್ಂಗಳ ಚಿಂತನೆ , ಜಿಜ್ನ್ಯಾಸೆಗಳಲ್ಲಿಯೇ ಬೆಳೆತ್ತಾ ಹೋವುತ್ತು. ಮುಖ್ಯವಾಗಿ ಕೌಶಿಕ ರಾಜ ವಿಶ್ವಾಮಿತ್ರನಾಗಿ ಬೆಳವದು, ಇಬ್ರ ಚಿಂತನೆಗಳಲ್ಲಿ ಅಪ್ಪ ಬದಲಾವಣೆಗೊ ಗಮನ ಸೆಳೆತ್ತು . ಗಾಯತ್ರಿ ಮಂತ್ರ ವಿಶ್ವಾಮಿತ್ರನ ಮನಸ್ಸಿಲಿ ಹೇಂಗೆ ಹುಟ್ಟಿತ್ತು, ಮತ್ತೆ ಅದರ ಆವ ಹೇಂಗೆ ಜಗತ್ತಿಂಗೆ ತಂದದು ಹೇಳ್ತ ಸನ್ನಿವೇಶಂಗೊ ತುಂಬ ಕುತೂಹಲಕಾರಿಯಾಗಿ ಮೂಡಿ ಬಯಿಂದು. ಎಲ್ಲೋರು ಓದೆಕ್ಕಾದ ಕೃತಿ.

 5. ಗೋಪಾಲ ಬೊಳುಂಬು says:

  ಪ್ರತಿಸೃಷ್ಟಿ ಬಗ್ಗೆ ಒಳ್ಳೆ ವಿಮರ್ಶೆ. ಮುಳಿಯ ಭಾವಯ್ಯಂಗೆ ಅಭಿನಂದನೆಗೊ. ಹವ್ಯಕ ಭಾಷೆ ಕೃತಿಗಳ ಎಲ್ಲೋರು ಕೊಂಡೋದಿ ಪ್ರೋತ್ಸಾಹಿಸಿ.

 6. ವೆಂಕಟ್ ಕೋಟೂರು says:

  ಒಂದು ಉತ್ತಮ ಪುಸ್ತಕ .ತುಂಬ ಉಪಯುಕ್ತ.ವ್ಯಂಗ್ಯಚಿತ್ರಕ್ಕೆ ಬಹುಮಾನ ರೂಪಲ್ಲಿ ಈ ಹೊತ್ತಗೆ ಸಿಕ್ಕಿದ್ದು ಹೊತ್ತಿಂಗೆ ಸರಿಯಾಗಿ ಸಿಕ್ಕಿದ ಆಹಾರದ ಹಾಂಗೇ ಎನ್ನ ಭಾವನೆ .ಇದರ ಓದಿದಷ್ಟೂ ಸಾಹಿತ್ಯದ ಹಶು ಜಾಸ್ತಿ ಅಕ್ಕು ನಮೋನಮಃ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *