Oppanna.com

ಗಿಳಿ ಬಾಗಿಲಿಂದ -ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   04/06/2014    17 ಒಪ್ಪಂಗೊ

ಕೊದಿಲಿಂಗೆ ರಜ್ಜ ಉಪ್ಪು ಕಮ್ಮಿ ಆಗಿತ್ತು .ಮಗ ಉಂಬಗ   ”ಉಪ್ಪಿದ್ದ ?”ಹೇಳಿ ಕೇಳಿದ .ಅಷ್ಟಪ್ಪಗ ಅವನ ಬಾಯಿಗೆ ಕೋಲು ಹಾಕುಲೆ ಆನು ಸುಮ್ಮನೆ ಉಪ್ಪು ತಂದು ಬಳುಸದ್ದೆ ಮನೆ ಹೇಳಿ ಆದ ಮೇಲೆ ಮನೇಲಿ ಉಪ್ಪು ಇರದ್ದೆ ಒಳಿತ್ತ ಮಾರಾಯ ?ಹೇಳಿ ಕೇಳಿದೆ .ಅವಂದೆ ಬಿಡದ್ದೆ “ಅಪ್ಪು ಉಪ್ಪೇ ಇರಕ್ಕು ಹೇಳಿ ಎಂತ ಇದ್ದು ?ಉಪ್ಪಿನ ಕಲ್ಲುದೆ ಇರ್ತಿಲ್ಲೆಯ” ಹೇಳಿ ಕೇಳಿದ .ಅಷ್ಟಪ್ಪಗ ಉಪ್ಪುದೆ ಉಪ್ಪಿನ ಕಲ್ಲುದೆ ಬೇರೆಯ ಹೇಳಿ ಚರ್ಚೆ ಬಂತು .ಅಷ್ಟಪ್ಪಗ ಎನಗೆ “ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ ” ಹೇಳುವ ಒಂದು ಆಡು ಮಾತು ನೆಂಪು ಆತು .
ಅನು ಸಣ್ಣಾದಿಪ್ಪಗ ಈ ನುಡಿಗಟ್ಟಿನ ಕೇಳಿದ್ದೆ.ಆದರೆ ಅದರ ಅರ್ಥ ಎಂತ ಹೇಳಿ ಎನಗೆ ಗೊಂತಿತ್ತಿಲ್ಲೆ.
ಮನುಷ್ಯ ಸಮಾಜ ಜೀವಿ .ತನ್ನ ಸುತ್ತ ಮುತ್ತಲಿನ ಜನರತ್ತರೆ ನೆಂಟ್ರು ಗಳ ಅ0ಬಗಂಬಗ ಕಾಣಕ್ಕಾವುತ್ತು.ಅವರ ಮನೆಗೆ ಹೊಯಕ್ಕಾವುತ್ತು .ಎಲ್ಲೋರು ಒಂದೇ ರೀತಿ ಇರ್ತವಿಲ್ಲೆ .ನಮಗೆ ಕೆಲವು ಜನಂಗಳ ಹತ್ರೆ ಹೆಚ್ಚು ಆತ್ಮೀಯತೆ ಇರುತ್ತು .ಕೆಲವು ಜನಂಗಳ ಹತ್ತರೆ ಅಷ್ಟಕ್ಕಷ್ಟೇ ಇರುತ್ತು .
ನಮಗೆ ಹೆಚ್ಚು ಆತ್ಮೀಯರಾಗಿಪ್ಪೋರ ಮನೆಗೆ ಹೋದರೆ ಅಥವಾ ಅವರ ಎಲ್ಲಿಯಾದರೂ ಕಂಡರೆ ನಾವು ಅವರತ್ರೆ ಅವರ ಕೆಲಸ ಕಾರ್ಯ ದ ಬಗ್ಗೆ ಮಕ್ಕಳು ಮರಿಗಳ ಬಗ್ಗೆ ವಿಚಾರ್ಸುತ್ತು.
ಆರಾದರೂ ನಮಗೆ ಅಷ್ಟು ಹಿತ ಇಲ್ಲದ್ದೋರ ಮನೆಗೆ ಹೋದರೆ ಅವರ ಖಾಸಾ ವಿಷಯಲ್ಲಿ ಎಂತದುದೆ ಮಾತಾಡುತ್ತವಿಲ್ಲೆ .ಹೋದ ಕೆಲಸ ಎಂತದು ಅದರ ಮಾತ್ರ ಮುಗಿಸಿಕ್ಕಿ ಅವು ಕೊಟ್ಟ ಕಾಪಿಯ ಚಾಯವಾ ಕುಡುದಿಕ್ಕಿ ಬತ್ತು !
ಇಂಥ ಸಂದರ್ಭಲ್ಲಿ ಆನು ಅವರತ್ತರೆ ” ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?”ಹೇಳಿ ಕೇಳಿದ್ದಿಲ್ಲೆ .ಎನ್ನಷ್ಟಕ್ಕೆ ಕೆಲಸ ಮುಗಿಸಿಕ್ಕಿ ಬೈಂದೆ” ಹೇಳಿ ಹೇಳುತ್ತವು .
ಅವರ ಒಳಗಿನ ವ್ಯವಹಾರ ನಮಗೆ ಇಷ್ಟ ಇಲ್ಲೇ ಅವರತ್ತರೆ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ” ಹೇಳುವ ನುಡಿಗಟ್ಟು ತಿಳುಸುತ್ತು .
ಇದು ಕೋಳ್ಯೂರು ಸೀಮೆ ಕನ್ನಡಲ್ಲಿ ಕೂಡಾ “ಉಪ್ಪುಂಟ ಉಪ್ಪಿನ ಕಲ್ಲುಂಟ ?”ಹೇಳಿ ಬಳಕೆಲಿ ಇದ್ದು .ಈ ಪರಿಸರಲ್ಲಿ ಇದು ತುಳುವಿಲಿ ರಜ್ಜ ಬೇರೆ ರೀತಿಲಿ ಬಳಕೆ ಇದ್ದು .ತುಳುವಿಲಿ “ನೀರುಂಡ ಅರ್ಕಂಜಿ ಉಂಡಾದ್ ಕೇನುದುಜ್ಜಿ” ಹೇಳುವ ಮಾತುಪ್ರಚಲಿತ ಇದ್ದು .
ಬಹುಶ ಬೇರೆ ಕಡೆಲಿದೆ ನಮ್ಮ ಹವ್ಯಕ ಭಾಷೆಲಿ ಈ ರೀತಿಯ ನುಡಿಗಟ್ಟಿನ ಬಳಕೆ ಇಕ್ಕು ಹೇಳಿ ಎನ್ನ ಅಂದಾಜು .ಅಥವಾ ಇದಕ್ಕೆ ಸಮಾನಾಂತರವಾದ ಬೇರೆ ಮಾತುಗಳ ಬಳಕೆ ಇಪ್ಪಲೂ ಸಾಕು .ಈ ಬಗ್ಗೆ ಗೊಂತಿಪ್ಪೋರು ತಿಳುಸಿ ಆತಾ .

17 thoughts on “ಗಿಳಿ ಬಾಗಿಲಿಂದ -ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ

  1. ಅಭಿನಂದನೆ ; ಹೀಂಗೆ ಬರೆತ್ತಾ ಇರಿ

    1. ಧನ್ಯವಾದಂಗ ಗೋಪಾಲಣ್ಣ ನಿಂಗಳ ಎಲ್ಲರ ಪ್ರೋತ್ಸಾಹ ಸದಾ ಇರಲಿ

  2. ಆನು ಈ ನುಡಿಗಟ್ಟಿನ ಇದುವರೆಗೆ ಕೇಳಿದ್ದಿಲೆ. ಲಕ್ಷ್ಮಿ ಅಕ್ಕಂಗೆ ಧನ್ಯವಾದ. ಆದಷ್ಟು ಬೇಗ ಸೆಂಚುರಿ ನಾಟೌಟ್ ಬಾರ್ಸಿ.

    1. ನೂರು ತಲುಪುಲೇ ಎಡಿಗ ಇಲ್ಲೆಯ ಗೊಂತಿಲ್ಲೇ ,ಆದರೆ ನಿಂಗ ಹೇಳಿದ ಹಾಂಗೆ ಆನು ನೂರು ತಲುಪುಲೇ ಪ್ರಯತ್ನ ಮಾಡುತ್ತೆ ,ತೆಕ್ಕುಂಜ ಕುಮಾರ ಮಾವ°ನಿಂಗಳ ಅಭಿಮಾನಕ್ಕೆ ನಿರಂತರ ಬೆಂಬಲಕ್ಕೆ ಆನು ಋಣಿ ,ಧನ್ಯವಾದಂಗ

  3. ಎ೦ಗಳ ಮನೆ ಅಜ್ಜಿ ಮದಲು ಈ ಮಾತಿನ ಹೇಳಿಗೊಂಡಿದ್ದ ನೆಂಪು . ನಮ್ಮ ಹಿರಿಯರ ಜೀವನಾನುಭವವ ಸ್ವಾರಸ್ಯವಿಪ್ಪ ನುಡಿಗಳಲ್ಲಿ ಆಡುಮಾತಿಲಿ ಬಳಕೆ ಮಾಡಿದವು . ಈ ನುಡಿಗಳ ನೆಂಪು ಮಾಡಿ , ಹುಡುಕ್ಕಿ ಬೈಲಿಲಿ ಹ೦ಚುವ ಅಮೂಲ್ಯ ಕೆಲಸ ಮಾಡುತ್ತಾ ಇಪ್ಪ ಲಕ್ಷ್ಮಿ ಅಕ್ಕಂಗೆ ವಂದನೆ , ಅಭಿನಂದನೆ .

  4. Iಈ ಅಯಿಪಿಲ್0ದಾಗಿ ನಿ0ಗ ಒ0ಟಿ ಓಟಲ್ಲೆ 25 ಬಾರಿಸಿದ್ದು ಅ0ದಾಜ್ ಆಯಿದಿಲ್ಲೆ.
    ಅ0ತು ಸತ್ಯಣ್ಣನ ” ಚಾ ಬ್ರೇಕಿನೊಳ” 25 ಅಭಿನ0ದನೀಯ.

  5. ಇಪ್ಪತ್ತೈದರ ಅಭಿನಂದನೆ.ಚಿಂತನೆಗೆ ಅವಕಾಶ ಕೊಟ್ಟದ್ದಕ್ಕೆ ಧನ್ಯವಾದ.

  6. ಇ೦ದ್ರಾಣ ದಿನ೦ಗಳಲ್ಲಿ ವಿದ್ಯಾವ೦ತರಾದ ನಾವು ಚ೦ದಕೆ ಮಾತಾಡ್ತು.ಆದರೆ ಆಡುನುಡಿಯ ಸೌ೦ದರ್ಯ ಹೆಚ್ಚಪ್ಪದು ಭಾಷೆಲಿ ಉಪಯೋಗಿಸುವ, ಹೊಸ ಅರ್ಥವನ್ನೇ ಕೊಡುವ ನುಡಿಗಟ್ಟು ಪದಗಳಿ೦ದ.ಅ೦ಥಾ ನುಡುಗಟ್ಟುಗಳ ಒಳಹೊಕ್ಕು, ಅದರ ಅರ್ಥ,ಬಳಕೆಯ ಸ೦ದರ್ಭಗಳ ಮನವರಿಕೆ ಮಾಡಿಕೊಟ್ಟ ಲಕ್ಷ್ಮಿ ಅಕ್ಕ೦ಗೆ ಧನ್ಯವಾದ೦ಗೊ.ಇನ್ನೂ ಹೆಚ್ಚಿನ ಸೃಜನಾತ್ಮಕ ಬರಹ೦ಗೊ ಅವರಿ೦ದ ಹರಿದು ಬರಲಿ ಹೇಳಿ ಆಶಿಸುತ್ತೆ. 🙂

  7. ಲಕ್ಷ್ಮೀ ಅಕ್ಕ, ಇಪ್ಪತ್ತೈದು ಚೆಂದದ ನುಡಿಕಟ್ಟುಗಳ ಎಂಗೊಗೆ ಪರಿಚಯ ಮಾಡಿದ್ದಕ್ಕೆ ಧನ್ಯವಾದಂಗೊ.
    ವಿವರವಾಗಿ ಬರದು ತಿಳಿಶಿ ಕೊಟ್ಟದೂ ಲಾಯ್ಕಾಯಿದು.

  8. ಲಕ್ಷ್ಮೀ ಅಕ್ಕಾ ನಿಂಗಳ ಸಾಧನೆ ಅಭಿನಂದನೀಯ.. ನಿಂಗಳ ವಿಚಾರ ಶೀಲ ಬರವಣಿಗೆ ನಿರಂತರವಾಗಿ ಎಂಗೊಗೆ ಹೀಂಗೆ ಬತ್ತಾ ಇರಳಿ..

    1. ಧನ್ಯವಾದಂಗ ಶೈಲಜಾ ಕೇಕಣಾಜೆ

  9. ಅಂತೂ ಇಂತೂ ನಿಂಗಳ ಎಲ್ಲರ ಪ್ರೋತ್ಸಾಹಂದಾಗಿ ಗಿಳಿ ಬಾಗಿಲಿಂದ ಇಪ್ಪತ್ತೈದು ಹವ್ಯಕ ನುಡಿಗಟ್ಟುಗಳ ಇಣುಕಿ ನೋಡಿದೆ .ಎನ್ನ ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ತೆರವಗ ಕಮ್ಮಿ ಹೇಳ್ರೆ ತಿ೦ಗಳಿಂಗೆ ಒಂದು ಪಡೆನುಡಿ ಬಗ್ಗೆ ಆದರೂ ಬರೆಯಕ್ಕು ಹೇಳಿ ಗ್ರೇಶಿತ್ತಿದೆ .ಆನು ಗಿಳಿ ಬಾಗಿಲು ಹವ್ಯಕ ಬ್ಲಾಗ್ ಲಿ ಬರವಲೆ ಸುರು ಮಾಡಿದ ರಜ್ಜ ಸಮಯಲ್ಲಿ ಎನ್ನ ಬ್ಲಾಗ್ ನ ಹವ್ಯಕ ಬರಹಂಗಳ ನೋಡಿದ ಪದ್ಯಾಣ ರಾಮಚಂದ್ರಣ್ಣ ಎನ್ನತ್ರೆ ಒಪ್ಪಣ್ಣನ ಒಪ್ಪಂಗೋಳಿ ಹವ್ಯಕ ಭಾಷೆಯ ಬೆಳವಣಿಗೆ ,ಬರವಣಿಗೆಗೆ ತುಂಬಾ ಪ್ರೋತ್ಸಾಹ ಇದ್ದು .ಅಲ್ಲಿ ಹವ್ಯಕ ಓದುಗರ ಬರಹಗಾರರ ಬಳಗವೇ ಇದ್ದು ,ಹಾಂಗೆ ನೀನುದೆ ಅಲ್ಲಿ ಸೇರಿಗ ಅಲ್ಲಿ ಬರೆ ಹೇಳಿ ಸೂಚಿಸಿದವು .ಅದರಂದ ಮೊದಲೇ ಆನು ಒಪ್ಪಣ್ಣ ಒಪ್ಪಂಗೋ ಲಿ ಬಪ್ಪ ಬರಹಗಳ ಓದಿಕೊಂಡು ಇತ್ತಿದೆ.ಅಡಿಗೆ ಸತ್ಯಣ್ಣನ ಫ್ಯಾನ್ ಆಗಿತ್ತಿದೆ ! ಸರಿ ,ಇಲ್ಲಿ ನಾವುದೆ ಸೇರಿಗೊಂಬ ಹೇಳಿ ಭಾವಿಸಿ ಎನ್ನ ಸ್ನೇಹಿತೆ ಅನುಪಮ ಪ್ರಸಾದ (ಯುವ ಸಾಹಿತಿ )ಮೂಲಕ ಫೋನ್ ನಂಬರ್ ತೆಕ್ಕೊಂಡು ದೊಡ್ಡ ಮಾಣಿ (ರವಿ ಶಂಕರ ) ಅವರ ಸಂಪರ್ಕಿಸಿದೆ ,ನಂತರ ಇಲ್ಲಿದೆ ವಾರ ವಾರ ಬರವಲೆ ಸುರು ಮಾಡಿದೆ .ಇದರಂದಾಗಿ ಎನ್ನ ಬರವಣಿಗೆಗೆ ಒಂದು ವೇಗ ಮತ್ತು ಶಿಸ್ತು ಸಿಕ್ಕಿತ್ತು .ಇಲ್ಲಿ ವಿಜಯತ್ತೆ,ತೆಕ್ಕುಂಜ ಕುಮಾರ ಮಾವ°ಶರ್ಮಪ್ಪಚ್ಚಿ .ಎಂ ಕೆ ,ನರಸಿಂಹ ಭಟ್ ,ಚೆನ್ನೈ ಭಾವ ,ಇಂದಿರತ್ತೆ ರಘುಮುಳಿಯ,ಗೋಪಾಲ ಬೊಳುಂಬು. ಕೆ. ವೆಂಕಟರಮಣ ಭಟ್ಟ.ಎಸ್.ಕೆ.ಗೋಪಾಲಕೃಷ್ಣ ಭಟ್ಟ,ಬೊಳುಂಬು ಕೃಷ್ಣಭಾವ°,ಪ್ರದೀಪ್ ಮುಣ್ಚಿಕಾನ,ಉಡುಪುಮೂಲೆ ಅಪ್ಪಚ್ಚಿ,ಶೈಲಜಾ ಕೇಕಣಾಜೆ,ಆಶಾ ,ಸುರೇಖಾ ಚಿಕ್ಕಮ್ಮ ಭಾಗ್ಯಲಕ್ಷ್ಮಿ:,ಶ್ಯಾಮಣ್ಣ,ಜಯಶ್ರೀ ನೀರಮೂಲೆ,ಭಾರತಿ ಮಹಾಲಿಂಗೇಶ್ವರ ,ಗಣೇಶ್ ಭಟ್,ವೆಂಕಟೇಶ ,ಒಪ್ಪಣ್ಣ:..ಹೀಂಗೆ ಇನ್ನೂ ತುಂಬಾ ಜೆನಂಗ ಹಿತೈಷಿಗ ಎನ್ನ ಬರವಣಿಗೆಗೆ ಸಲಹೆ ಸೂಚನೆಗಳ ಕೊಡುತ್ತಾ ಬೆಂಬಲಿಸಿದವು ,ಓದಿದ ಪ್ರೋತ್ಸಾಹಿಸಿದ ಎಲ್ಲೋರಿಂಗೂ ಆನು ಆಭಾರಿಯಾಗಿದ್ದೆ,ಮುಂದೆಯೂ ನಿಂಗಳ ಎಲ್ಲರ ಪ್ರೋತ್ಸಾಹ ಸದಾ ಹೀಂಗೆ ಇರಲಿ ಹೇಳಿ ಆಶಿಸುತ್ತೆ,ಧನ್ಯವಾದಂಗ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×