ಗಿಳಿಬಾಗಿಲಿಂದ -ಅವ°/ಅದು ಪಾತಾಳ ಗರಡಿ

ಅವ° ಮಹಾ ಪಾತಾಳ ಗರಡಿ, ಅವನ ಬಾಯಿಗೆ ಬೀಳದ್ದಾಂಗೆ, ಕಣ್ಣಿಂಗೆ ಕಾಣದ್ದಾ೦ಗೆ, ಕೆಮಿಗೆ ಬೀಳದ್ದಾಂಗೆ,ಯಾವುದನ್ನೂ ಮಡುಗುಲೇ ಎಡಿಯಪ್ಪ ! ಎಲ್ಲಿಂದ ಹೇಗಾದರೂ ಆ ಸಂಗತಿಯ ಕಂಡು ಹಿಡಿಯದ್ದೆ ಬಿಡ°” ಅಥವಾ  “ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ”ಹೇಳಿ ಹೇಳುವ ಮಾತುಗ ನಮ್ಮ ಭಾಷೆಲಿ ಸಂದರ್ಭಕ್ಕನುಗುಣವಾಗಿ ಬಳಕೆ ಆವುತ್ತು . ಆನು ಈ ರೀತಿಯ ಮಾತಿನ ಸುಮಾರು ಸರ್ತಿ ಅಲ್ಲಿ ಇಲ್ಲಿ ಕೇಳಿದ್ದೆ .ನಿ೦ಗಳೂ ಕೇಳಿಪ್ಪಿ.

ಪಾತಾಳ ಗರಡಿ ಹೇಳ್ರೆ ಎಂತದು ? ಆನು ಸಣ್ಣಾದಿಪ್ಪಗ ಪಾತಾಳ ಗರಡಿಯ ನೋಡಿದ್ದೆ.ಪಾತಾಳ ಗರಡಿ ಹೇಳ್ರೆ ಒಂದು ಲೋಹದ ಸಾಧನ .ಬಾವಿಗೆ ಏನಾರೂ ಕೊಡ ಪಾನ, ಚೆಂಬು ,ಪಾತ್ರಂಗ ಬಿದ್ದರೆ ಪಾತಾಳ ಗರಡಿಯ ಬಾವಿಯ ಬಳ್ಳಿಗೆ ಇಳುಸಿ ಬಿದ್ದ ವಸ್ತುಗಳ ತೆಗೆತ್ತಾ ಇತ್ತಿದವು .ಅದರಲ್ಲಿ ಅನೇಕ ಬೇಕಾದ ಕಡೆಗೆ ಚಲಿಸುವ ,ಬೇರೆ ಬೇರೆ ಗಾತ್ರದ ಕೊಕ್ಕೆಗ ಇದ್ದು .ಆ ಕೊಕ್ಕೆಗೆ ಕೊಡಪಾನ/ ಪಾತ್ರಂಗಳ ಸಿಕ್ಕುಸಿ ಮೇಲೆ ಎಳದು ತೆಗೆತ್ತಾ ಇತ್ತಿದವು ಮೊದಲು; ಪಾತಾಳ ಗರಡಿಗೆ ಸಿಕ್ಕಿದ್ದಿಲ್ಲೇ ಹೇಳಿ ಆದ್ರೆ ಇನ್ನು ಆ ಕೊಡಪ್ಪಾನದ ಆಸೆ ಬಿಡಕ್ಕು ಇನ್ನದು ಸಿಕ್ಕ ಹೇಳುವ ಮಾತು ಪ್ರಚಲಿತ ಇತ್ತು .

ಆದರೆ “ಅವ°/ಅದು ಪಾತಾಳ ಗರಡಿ” ಹೇಳುವ ರೂಪಕ ನಮ್ಮ ಭಾಷೆಲಿ ವಿಶಿಷ್ಟವಾಗಿ ಬಳಕೆ ಆವುತ್ತು . ಪಾತಾಳ ಗರಡಿ ಹೆಂಗಾದರೂ ಮಾಡಿ ಬಾವಿಗೆ ಕೆರೆಗೆ ಬಿದ್ದ ಕೊಡಪಾನ ,ಪಾತ್ರಂಗಳ ತನ್ನ ಕೊಕ್ಕೆಗೆ ಸಿಕ್ಕುಸಿ ಹೆರ ತೆಗದು ಮೇಲೆ ತತ್ತು .ಹಾಂಗಾಗಿ ಪಾತಾಳ ಗರಡಿಯ ರೀತಿಲಿ ಹೆಂಗಾರೂ ಮಾಡಿ ಇನ್ನೊಬ್ಬರ ವಿಚಾರವ ಪತ್ತೆ ಹಚ್ಚಿ ತೆಗವ ಸ್ವಭಾವದೊರಿನ್ಗೆ ಕೋಳ್ಯೂರು ಕಡೇಲಿ ನಮ್ಮ ಭಾಷೆಲಿ ಕಡೆ ಪಾತಾಳ ಗರಡಿ ಹೇಳಿ ಹೇಳ್ತವು .”ಅವ°/ಅದು ಪಾತಾಳ ಗರಡಿ ಅವನ/ಅದರ ಹಿಡಿಪ್ಪಿಂದ ತಪ್ಪಿಸಿಕೊಂಬಲೆ ಎಡಿಯಪ್ಪ” ಹೇಳುವ ಮಾತುದೆ ಬಳಕೆಲಿ ಇದ್ದು .”ಆವ° /ಅದು ಪಾತಾಳ ಗರಡಿ” ಹೇಳುದು ಒಂದು ರೀತಿ ದೂಷಣೆ /ಬೈಗಳು .ಆದರೆ ಪಾತಾಳ ಗರಡಿ ನಿಜವಾಗಿಯೂ ಒಂದು ಬಹು ಉಪಯುಕ್ತ ಸಾಧನ ,ಆದರೆ ನುಡಿಗಟ್ಟಾಗಿ ಬಳಸುವಗ ಪಾತಾಳ ಗರಡಿ ಹೇಳುದು ಬೈಗಳಾಗಿ /ದೂಷಣೆಯ ಮಾತಾಗಿ ಬದಲಾವುತ್ತು.

ಅವ° ಪಾತಾಳ ಗರಡಿ ,ಎಲ್ಲಿಂದಾದರೂ ಹೇಂಗಾದರೂ ಅವ° ವಿಷಯ ಪತ್ತೆ ಮಾಡದ್ದೆ ಬಿಡ° ಹೇಳುವಗ “ಅವ° ಮಹಾ ಪಾತಾಳ ಗರಡಿ” ಹೇಳುವಲ್ಲಿ ತುಸು ದೂಷಣೆ ಒಟ್ಟಿ೦ಗೆ “ಅವ° ತುಂಬಾ ಚಾಣಾಕ್ಷ ,ಕುಶಾಗ್ರಮತಿ” ಹೇಳುವ ಭಾವದೆ ಇದ್ದು, ಅದೇ ರೀತಿ “ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ”ಹೇಳಿ ಹೇಳುವ ಮಾತಿಲಿ ಅದು ಬೇರೆಯೋರ ವಿಷಯಲ್ಲಿ ಅನಗತ್ಯ ಆಸಕ್ತಿ ವಹಿಸುತ್ತು, ಅನಗತ್ಯವಾಗಿ ಬೇರೆಯೋರ ವಿಷಯವ ಒಕ್ಕಿ ಹೆರ ತೆಗೆತ್ತು ,ಅದು ರಜ ಅಜಕ್ಕೆಯ ಹೆಮ್ಮಕ್ಕ ಹೇಳುವ ಭಾವದೆ ಕಾಣುತ್ತು .ಇಂತಹ ಅನೇಕ ನುಡಿಗಟ್ಟುಗ ನಮ್ಮಲ್ಲಿ ಬಳಕೆಲಿ ಇದ್ದು .ಎನಗೆ ನೆನಪಾದ ಪಾತಾಳ ಗರಡಿ ಬಗ್ಗೆ ಇಲ್ಲಿ ಬರದ್ದೆ .ನಿಂಗಳ ಅಭಿಪ್ರಾಯ ತಿಳುಸಿ.

ಪಾತಾಳ ಗರಡಿ ( ವೆ೦ಕಟೇಶ ಭಾವನ ಸ೦ಗ್ರಹ)

ಪಾತಾಳ ಗರಡಿ ( ವೆ೦ಕಟೇಶ ಭಾವನ ಸ೦ಗ್ರಹ)

ಲಕ್ಷ್ಮಿ ಜಿ.ಪ್ರಸಾದ

   

You may also like...

17 Responses

 1. ವನಜಕ್ಕನ ಮನೆಲಿಪ್ಪ (ವನದುರ್ಗ ದೇವಾಲಯದ ಹತ್ತರೆ ,ಸುಬ್ರಹ್ಮಣ್ಯ )ಪಾತಾಳ ಗರಡಿಯ ಚೆಂದದ ಫೋಟೋಗಳ ತೆಗದು ಕಳುಸಿ ಕೊಟ್ಟ ವೆಂಕಟೇಶಣ್ಣ ಗೆ ಮನಃ ಪೂರ್ವಕ ಕೃತಜ್ಞತೆಗೆ

 2. ಭಾಗ್ಯಲಕ್ಶ್ಮಿ says:

  ವಾಹ್! ಪಾತಾಳ ಗರಡಿದೆ, ನುಡಿಗಟ್ಟಿನ ಬಗ್ಗೆ ಲೇಖನದೆ ಕಾ೦ಬಗ ಡಿ. ವಿ.ಜಿ ಯವರ ”ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು”…. ಹೇಳುವಾ೦ಗೆ ಆತು.
  ವೆ೦ಕಟೇಶಣ್ಣ೦ಗೂ, ಲಕ್ಶ್ಮಿಯಕ್ಕ೦ಗೂ ಧನ್ಯವಾದ. ಇಷ್ಟು ಕೊಳಿಕ್ಕೆ ಇಕ್ಕು ಹೇಳಿ ಎನ್ನ ಕಲ್ಪನೆಗೆ ಬ೦ದಿತ್ತಿಲ್ಲೆ.

 3. ಭಾಗ್ಯಲಕ್ಶ್ಮಿ says:

  ವೆ೦ಕಟೇಶಣ್ಣ, ವನಜಕ್ಕ೦ಗೂ ಧನ್ಯವಾದ ತಿಳಿಶಿಕ್ಕಿ.

 4. ganesh bhat says:

  Oppanna

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *