ಗಿಳಿ ಬಾಗಿಲಿಂದ -ಪೊಡುಂಬು

November 27, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಒಂದಿನ ಇಲ್ಲೇ ಹತ್ತರೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತು .ಅವು ಮಾತಾಡುತ್ತಾ “ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ಮೂರು ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು …ಗೂ ಪೈಸೆ ಕೊಡಕ್ಕು ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೊಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು” ಹೇಳಿ ಹೇಳಿದವು .

ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ ! ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ “ಪೊಡುಂಬು” ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು “ಪೊಡುಂಬು ಹೇಳ್ರೆ ಎಂತ ಅಜ್ಜ “ಹೇಳಿ ಕೇಳಿದೆ. ಅಷ್ಟಪ್ಪಗ ಅವು “ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ”ಹೇಳುವ ಅರ್ಥಂಗಳ ಹೇಳಿದವು !

“ಅವ° ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ” ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಕೋಳ್ಯೂರು ಕಡೆಯ ಹವ್ಯಕ ಭಾಷೆಲಿ ಈ ನುಡಿಗಟ್ಟಿನ ಬಳಕೆ ಇದ್ದು. ಅವಂದು ಬರೀ ಪೊಡು೦ಬುತನ/ಪೊಡುಂಬು ಬುದ್ಧಿ ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ “ಅಂಬಗ ಪೊಡುಂಬು ಹೇಳಿರೆ ಎಂತ” ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದ್ದೆ.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ ಆ ಕಡೆ ಈ ಕಡೆ ಗೆಬ್ಬಾಯಿಸಿಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ ಎದುರಿನ ಅಂಗಡಿಯ ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ “ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕು೦ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು “ಹೇಳಿ ಎನ್ನ ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೊಳು೦ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .

ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ-ಇಡಾ,ಕುಮ್ಬುಳ-ಕುಮ್ಬುಡ,ಬಳುಸು- ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ-ಬಡಿವಾರ )ಹಾಂಗಾಗಿ ಬೊಳುಂಬು- ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು . ಪೊಟ್ಟು ಹಮ್ಮು /ಒಣ ಹಮ್ಮು ಹೇಳುದರಿಂದಲೂ ಪೊಡುಂಬು ಪದ ಬಂದಿಪ್ಪ ಸಾಧ್ಯತೆ ಇದ್ದು , ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ‘ಪೊಡುಂಬು’ಪದಕ್ಕೆ ಮೂರ್ಖತನ,ಹೆಡ್ದತನ,ಸುೞು,ಲೊಟ್ಟೆ ಇತ್ಯಾದಿ ಅರ್ಥಂಗಳ ತುಳು ನಿಘಂಟಿಲ್ಲಿ ಕೊಟ್ಟಿದವು.ಅದೇ ಅರ್ಥಲ್ಲಿ ಎಂಗಳ ಹೊಡೆಲಿ ನಮ್ಮ ಭಾಷೆಲಿಯೂ ಬಳಕೆ ಆವುತ್ತಾ ಇದ್ದು.ಇನ್ನು ಬೊಳುಂಬು ಹೇಳುವದಕ್ಕೆ ಎಂಗಳಲ್ಲಿ ಬೆೞೆ ಹೇಳುತ್ತವು.ಮಲಯಾಳ ಭಾಷೆಲಿಯೂ ಈ ಪದ ಪ್ರಯೋಗ ಇದ್ದು.ಬಹುಶಃ ಬೆಳಿ ಬಣ್ಣ ಇಪ್ಪ ಕಾರಣಂದ ಬೆೞೆ ಹೇಳಿ ಬಂದಿಪ್ಪಲೂ ಸಾಕು.

  [Reply]

  VA:F [1.9.22_1171]
  Rating: +2 (from 4 votes)
 2. ಶ್ಯಾಮಣ್ಣ
  ಶ್ಯಾಮಣ್ಣ

  (ಅದು ಬೊಳುಂಬು ಇಪ್ಪ ಜಾಗೆ )
  ಏ ಬೊಳುಂಬು ಗೋಪಾಲ ಭಾವಾ… ಎಲ್ಲಿದ್ದಿ?

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ್ Reply:

  ಶ್ಯಾಮಣ್ಣ, ಎನ್ನ ಪ್ರವೇಶ ಈಗ ಆಗದ್ದೆ ಕಳಿಯ ಎಂತ ಹೇಳ್ತಿ ?
  ಬೊಳುಂಬು ಹೇಳಿರೆ ಸಾರ ಇಲ್ಲದ್ದದು, ಗಟ್ಟಿ ಇಲ್ಲದ್ದದು ಹೇಳಿ ಎನ್ನ ಅಪ್ಪ, ಈ ಹಿಂದೆಯೇ ವ್ಯಾಖ್ಯಾನ ಮಾಡಿದ್ದವು. ಅವು ಬೊಳುಂಬು ಹೇಳ್ತ ಶಬ್ದ ಹೇಂಗೆ ಬಂತು ಹೇಳಿ ವಿಮರ್ಶೆ ಮಾಡಿ ಒಂದು ಲೇಖನವನ್ನೇ ಬರದ್ದವು. ಪುರುಸೊತ್ತಿಪ್ಪಗ ಬೈಲಿಂಗೆ ಒದಗುಸಿ ಕೊಡ್ತೆ. ಏತಡ್ಕ ಭಾವಯ್ಯ ಹೇಳಿದ ಹಾಂಗೆ, ಬೊಳುಂಬಿಂಗೆ ಬೆಳ್ಳೆ ಹೇಳಿ ಹೇಳ್ತವು. ಬೊಂಡು ಹೇಳಿಯುದೆ ಹೇಳ್ತವು. ಲಕ್ಷ್ಮಿ ಅಕ್ಕನ ವ್ಯಾಖ್ಯಾನ ಮೆಚ್ಚೆಕ್ಕಾದ್ದೆ.
  ಪೊಡುಂಬು ಭಾವಯ್ಯ ಹೇಳಿ ಹೇಳಿಕ್ಕೆಡಿ ಮತ್ತೆ ! !

  [Reply]

  VA:F [1.9.22_1171]
  Rating: +2 (from 2 votes)
 3. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಪೊಳ್ + ಪು > ಪೊಡುಂಬು [ಪು ಭಾವಾರ್ಥ ಪ್ರತ್ಯಯ] ಇಲ್ಲಿ ಳ್ ಅನುನಾಸಿಕ. ಹಾಂಗಾಗಿ ಅದು ‘ಪೊಳುಂಬು’ ಆವುತ್ತು. ಅಜ್ಜ ಹೇಳಿದ್ದದು “ಅದು ಪೊಳುಂಬು ಇಪ್ಪ ಜಾಗೆ” ಹೇಳಿ ಆಯಿಕ್ಕು. ಅಲ್ಲದ್ದೆ “ಬೊಳುಂಬು” ಆಗಿರ. ಬೊಳುಂಬಿನ ಬೊಳ್(ಬೆಳ್) ಬೊಳ್ಪುವಿನ ಬೊಳ್ ಇಪ್ಪ ಹಾಂಗೆ.
  ಪೊಳುಂಬು ವರ್ಣವ್ಯತ್ಯಯಂದಲಾಗಿ ಪೊಡುಂಬು. ಆ ಪೊಡುಂಬು ಇಪ್ಪವ° ಅಥವಾ ಪೊಡುಂಬು ತಾನಾದವ° ಪೊಡುಂಬ°.

  ಪ್ರಯೋಗ : ಇನ್ + ಪು > ಇಂಪು, ಕರ್ + ಪು > ಕಪ್ಪು (ಕರ್ಪು), ಇತ್ಯಾದಿ.

  ಪೊಳ್ಳ(ಮ), ಪೊಳ್ಳು(ಕ), ಪೊರು, ಪೊಳ್ಳೆ, ಪೊಲ್ಗು… ಹೀಂಗೆ ಬೇರೆ ಬೇರೆ ರೂಪಲ್ಲಿ ‘ಪೊಳ್’ ಹೇಳ್ತ ಶಬ್ದ ಪ್ರಯೋಗಲ್ಲಿ ಇದ್ದು.

  [Reply]

  VN:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಅಪ್ಪು, ಇಲ್ಲಿ ಪೊಟ್ಟು ಹಮ್ಮು ಹೇಳ್ರೆ ಪೊಳ್ >ಪೊಳ್ಳು ?ಪೊಟ್ಟು -ವ್ಯರ್ಥ ಅಹಂ >ಹಮ್ಮು ಹೇಳುದು >ಪೊಳುಂಬು> ಪೊಡುಂಬು ಆಡಿಪ್ಪ ಸಾಧ್ಯತೆ ಹೆಚ್ಚು ಇದ್ದು ಳಕಾರ ಮತ್ತ ಡ ಕಾರ ಅದಲು ಬದಲು ಅಪ್ಪದು ಭಾಷೇಲಿ ಸಾಮಾನ್ಯ ವಿಚಾರ ಉದಾ _ಇಳಾ ಇಡಾ ,ಕುಂಬಳ ಕುಂಬಡ ..
  ಇನ್ನು ಆ ಪ್ರಾಯದೊರು ಹೇಳಿದ್ದು ಪೊಡುಂಬು ಹೇಳಿ, ಅಲ್ಲದ್ದೆ ಎಂಗಳ ಕೋಳ್ಯೂರು ಕಡೆಯ ಹವ್ಯಕ ಭಾಷೆಲಿ ಪೊಡುಂಬು ಹೇಳಿಯೇ ಬಳಕೆ ಇಪ್ಪದು

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಪೊಳ್ + ಪು > ಪೊಳುಂಬು
  ಪೊಳುಂಬು> ಪೊಡುಂಬು
  ಪ್ರಯೋಗ : ಇನ್ + ಪು > ಇಂಪು, ಕರ್ + ಪು > ಕಪ್ಪು (ಕರ್ಪು), ಇತ್ಯಾದಿ.

  ‘ಪೊಳ್ಳು’ =ಗೋಳೆ

  [Reply]

  VN:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ°

  ಹೋ! ಪೊಳ್ಳಿಂದಲೂ ಇಷ್ತು ಹೆರ್ಕಲೆ ಸಿಕ್ಕುತ್ತಲ್ಲದ. ಆನು ಏನಾರು ಮಾತಾಡಿರೂ ಪೊಡುಂಬು, ಏನಾರು ಮಾತಾಡ್ರದ್ರೆ ಪೊಂಡಂಬ° ಛೇ!

  [Reply]

  VA:F [1.9.22_1171]
  Rating: +2 (from 2 votes)
 7. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಪೊಡುಂಬು ಹೇಳಿರೆ ಮೂರ್ಖತನ.ಲಕ್ಷ್ಮಿ ಅಕ್ಕನ ವ್ಯಾಖ್ಯಾನ ಹೊಸ ಒಳನೋಟಂಗಳ ಕೊಡುತ್ತು. ತುಳುವಿಲೂ ಪೊಡುಂಬೆ ಹೇಳಿ ಇದ್ದು. ‘ಖರದೂಷಣೆರ್ ದಾನೆ ಪೊಡುಂಬೆರೋ ತೂಲೇ।ಕೆರಿಯೆರಾಕುಳೆನ್ ಪಂಡ್ದೀರೇ ಪಿಂದೋಣ್ಲೇ॥’-ಪೆರುವಡಿ ಸಂಕಯ್ಯ ಭಾಗವತ ವಿರಚಿತ ತುಳು ಪಂಚವಟಿ ಯಕ್ಷಗಾನಲ್ಲಿ ಮಂಡೋದರಿ ರಾವಣಂಗೆ ಹೇಳುವ ಮಾತು.ಇಲ್ಲಿ ಖರದೂಷಣರು ವೀರರೇ ಅಪ್ಪನ್ನೆ,ಹೇಡಿಗಳೂ ಮೂರ್ಖರೂ ಅಲ್ಲಾನ್ನೆ,ಅಂತವರನ್ನೇ ರಾಮ ಕೊಂದಿದ-ಹೇಳುವ ಅರ್ಥ. ನೋಡಿ-ಪೊಡುಂಬ ಹೇಳುದು ಇಲ್ಲಿ ಹೇಂಗೆ ಬಳಕೆ ಆಯಿದು! ಮಾಡು ಎಷ್ಟು ಬೇಕೋ ಅಷ್ಟು ಚಾರೆ ಇಲ್ಲದ್ದರೆ,ಅದು ಪಡಂಬೆ/ಪೊಡಂಬೆ ಆತು ಹೇಳಿ ಹೇಳುತ್ತವು.ಇದರ ವ್ಯುತ್ಪತ್ತಿ ಹೇಂಗೆ?

  [Reply]

  VA:F [1.9.22_1171]
  Rating: +2 (from 2 votes)
 8. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪೊಡುಂಬು – ಇನ್ನೊಂದು ಹೊಸ ಶಬ್ದದ ಪರಿಚಯ ಆತು.
  ತುಳು ನಿಘಂಟಿಲಿ ಇದ್ದ ಹಾಂಗೆ( ಅದು ತುಳು ಪ್ರಯೋಗ ಆತು, ಅರ್ಥವೂ ಬೇರೆಯೇ ಇದ್ದನ್ನೆ) “ಹವ್ಯಕ” ನಿಘಂಟಿಲಿ ಇದರ ಬಗ್ಗೆ ಪ್ರಸ್ತಾಪ ಇದ್ದೋ ಏನೋ..?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿಡೈಮಂಡು ಭಾವಪುಟ್ಟಬಾವ°ಅಕ್ಷರದಣ್ಣಪೆಂಗಣ್ಣ°ಕಜೆವಸಂತ°ಪುತ್ತೂರಿನ ಪುಟ್ಟಕ್ಕvreddhiಪಟಿಕಲ್ಲಪ್ಪಚ್ಚಿಅಕ್ಷರ°ಮಂಗ್ಳೂರ ಮಾಣಿಪುಣಚ ಡಾಕ್ಟ್ರುದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಮುಳಿಯ ಭಾವಚೆನ್ನೈ ಬಾವ°ತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಮಾಷ್ಟ್ರುಮಾವ°ಶೀಲಾಲಕ್ಷ್ಮೀ ಕಾಸರಗೋಡುಗೋಪಾಲಣ್ಣದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ