ಹವ್ಯಕ ಸಂಸ್ಕೃತಿ ಸಂಗೋಪನೇಲಿ ಯುವಕರ ಪಾತ್ರ ಎಂಥದು?

March 16, 2015 ರ 9:30 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಸಂಸ್ಕೃತಿ ಸಂಗೋಪನೇಲಿ ಯುವಕರ ಪಾತ್ರ ಎಂಥದು?
ಲಕ್ಷ್ಮೀಶ ಜೆ.ಹೆಗಡೆ

 ಜಂಬೂದ್ವೀಪ ಹೇಳಿ ಒಂದಾನೊಂದು ಕಾಲ್ದಲ್ಲಿ ಹೆಸ್ರಾಗಿದ್ದ್ ನಮ್ ಭಾರತ ದೇಶ ಬೇರೆ ಬೇರೆ ಸಂಸ್ಕೃತಿಯ ತವರೂರು.ಬೇರೆ ಬೇರೆ ಧರ್ಮದ,ಬೇರೆ ಬೇರೆ ನಮ್ನಿ ಭಾಷೆ ಮಾತಾಡ ಜನ್ರು,ಬೇರೆ ಬೇರೆ ಸಂಸ್ಕೃತಿ,ಆಚಾರ-ವಿಚಾರ ಇಪ್ಪ ಜನ ಎಲ್ರೂ ಇಲ್ಲಿ ಇದ್ದ.ಎಲ್ಲರೂ ಓಬೀರಾಯನ್ ಕಾಲ್ದಿಂದ್ಲೂ ಸರ್ವಧರ್ಮ ಸಮನ್ವಯತೆಯಿಂದ,ಸಹಬಾಳ್ವೆಯಿಂದ ಬಾಳಿ ಬದುಕ್ತಾ ಇದ್ದ.ಬೇರೆ ಬೇರೆ ನದಿಯ ನೀರು ಸೇರಿ ಹ್ಯಾಂಗೆ ಸಮುದ್ರ ಆಗ್ತಾ ಹಾಂಗೆ ನಮ್ ದೇಶದಲ್ಲಿಪ್ಪ ಬೇರೆ ಬೇರೆ ಸಂಸ್ಕೃತಿಗಳೆಲ್ಲಾ ಸೇರ್ಕ್ಯಂಡು ‘ಭಾರತೀಯ ಸಂಸ್ಕೃತಿ’ ಹೇಳಿ ಆಯ್ದು.ಆ ಭಾರತೀಯ ಸಂಸ್ಕೃತಿ ಹೇಳ ದೊಡ್ಡ್ ಸಮುದ್ರಕ್ಕೆ ಹವ್ಯಕ ಸಂಸ್ಕೃತಿನೂ ನೀರು ಸೇರ ಹಾಂಗೆ ಸೇರ್ಕ್ಯಂಡು ಇದ್ದು.ವಿಶ್ವಕ್ಕೇ ಜಗದ್ಗುರು ಆಪ್ಪ ಹಾಂಗಿದ್ದು ನಮ್ ಭಾರತೀಯ ಸಂಸ್ಕೃತಿ.ಆದ್ರೆ ಆ ಭಾರತೀಯ ಸಂಸ್ಕೃತಿನ ಎತ್ತಿ ಹಿಡ್ಯ ಅಲ್ಲಿ ನಮ್ ಹವ್ಯಕ ಸಂಸ್ಕೃತಿಯ ಕೊಡುಗೆನೂ ಬಾಳಾ ಇದ್ದು.

  ಹಾಂಗಾದ್ರೆ ಆ ಹವ್ಯಕ ಸಂಸ್ಕೃತಿ ಅಂದ್ರೆ ಎಂಥದು,ಅದ್ರಲ್ಲಿಪ್ಪ ಆಚಾರ-ವಿಚಾರಗಳು ಎಂಥವು ಹೇಳಿ ಆನೇನೂ ಬಿಡ್ಸಿ ಹೇಳ ಅಗತ್ಯ ಇಲ್ಲೆ.ಆದ್ರೆ ಇವತ್ತಿನ ಈ ಇಪ್ಪತ್ತೊಂದ್ನೇ ಶತಮಾನ್ದಲ್ಲಿ,ಅದರಲ್ಲೂ ‘ಜಾಗತೀಕರಣ’ ಹೇಳ ಮಾಯಾಪ್ರಪಂಚದ್ ಕಡೆ ನಮ್ ಬದುಕು ನಾಗಾಲೋಟ ಹಾಕ್ತಾ ಇಪ್ಪಕ್ಕರೆ ಸಂಸ್ಕೃತಿಗಳು ಹಾಳಾಗಿ ಹೋಗ್ತಾ ಇದ್ದ ಹೇಳಿ ಸುಮಾರ್ ಜನ ಕೂಗ್ತಾ ಇದ್ದ.ಇದಕ್ಕೆ ನಮ್ ಹವ್ಯಕ ಸಂಸ್ಕೃತಿನೂ ಹೊರತಾಗಿಲ್ಲೆ.ಹಂಗಾರೆ ನಮ್ ಸಂಸ್ಕೃತಿ ತೀರಾ ಹಾಳಾಗ್ ಹೋಗ್ತಾ ಇದ್ದಾ ಕೇಳಿರೆ,ಇಲ್ಲೆ.ಇನ್ನೂ ಅದು ಉಳ್ಕಂಡು,ಬೆಳ್ಕಂಡು ಬತ್ತಾನೇ ಇದ್ದು.ಆದ್ರೆ ಅದನ್ನ ನಾವು ಇನ್ನೂ ಬೆಳ್ಸಿ,ಉಳ್ಸದೇ ಹೋದ್ರೆ ಅದು ಮುಂದೊಂದು ದಿವ್ಸ ನಾಶ ಆಪ್ಪ ಸ್ಥಿತಿಗೆ ಹೋಗ್ತೇ ಇಲ್ಲೆ ಹೇಳ ಹಾಂಗೂ ಇಲ್ಲೆ.ಹಂಗಾರೆ ನಮ್ ಸಂಸ್ಕೃತಿನ ಉಳ್ಸದು ಯಾರು?ಭಾರತೀಯ ಸಂಸ್ಕೃತಿನ ಭಾರತೀಯರಲ್ದೇ ಮತ್ಯಾರು ಉಳ್ಸವು?ಹಾಂಗೇ ನಮ್ ಹವ್ಯಕ ಸಂಸ್ಕೃತಿನೂ ಉಳ್ಸಿ,ಇನ್ನೂ ಬೆಳ್ಯ ಹಾಂಗೆ ಮಾಡದು ಹವ್ಯಕರಲ್ದೇ ಮತ್ತಿನ್ಯಾರು?

 ನಿಂಗಕ್ಕೆಲ್ಲಾ ಗೊತ್ತಿದ್ದ ಹಾಂಗೆ ನಮ್ ದೇಶದ ಒಟ್ಟೂ ಜನಸಂಖ್ಯೇಲಿ ಶೇಕಡಾ ೬೫ರಷ್ಟು ಜನ ಮೂವತ್ತು ವರ್ಷಕ್ಕಿಂತಾ ಕೆಳಗಿನವು.ಅಂದ್ರೆ ಯುವಕರು.ಅಂದ್ರೆ ಈ ದೇಶದ ಸಂಸ್ಕೃತಿಯ ಬೆಳವಣಿಗೇಲಿ ಯುವಕರ ಪಾತ್ರ ಬಾಳಾ ದೊಡ್ದಿದ್ದು.ಹಾಂಗೇನೇ ನಮ್ ಹವ್ಯಕ ಸಂಸ್ಕೃತಿನೂ ಉಳ್ಸಿ ಅದು ಇನ್ನೂ ಬೆಳೆಯ ಹಾಂಗೆ ಮಾಡಿ ‘ಸಂಸ್ಕೃತಿ ಸಂಗೋಪನೆ’ ಮಾಡ ದೊಡ್ಡ ಜವಾಬ್ದಾರಿ ಯುವಕರ ಮೇಲಿದ್ದು.ಜಾಗತೀಕರಣದ ನಾಗಾಲೋಟದಲ್ಲಿ ಓಡ್ತಾ ಈಗಿನ ಯುವಕ್ರು ಎಲ್ಲೋ ತಮ್ಮತನನಾ ತಾವೇ ಕಳ್ಕತ್ತಾ ಇದ್ವೇನೋ ಹೇಳಿ ಇದ್ದು.ಉನ್ನತ ವಿದ್ಯಾಭ್ಯಾಸ ಪಡ್ದು,ದೊಡ್ಡ್ ದೊಡ್ಡ್ ಕಂಪೆನೀಲಿ ಲಕ್ಷಗಟ್ಟಲೇ ಸಂಬ್ಳ ಎಣ್ಸ ಕನಸು ಕಾಣ್ತಾ,ನಗರವಾಸಿಗಳಾಗಿ ತಮ್ ಸಂಸ್ಕೃತಿನಾ ತಾವೇ ನಿರ್ಲಕ್ಷ್ಯ ಮಾಡ್ತಾ ಇದ್ವೇನೋ ಹೇಳಿ ಅನ್ನಿಸ್ತಾ ಇದ್ದು.

 ಆದರಾತಿಥ್ಯಕ್ಕೆ,ಅತಿಥಿ ಸತ್ಕಾರಕ್ಕೆ ಇಡೀ ಭಾರತೀಯ ಸಂಸ್ಕೃತಿಯಲ್ಲೇ ಹೆಚ್ಚು ಹೆಸರಾಗಿರದು ನಮ್ ಹವ್ಯಕ ಸಂಸ್ಕೃತಿ.ಮನಿಗ್ ಬಂದ ಅತಿಥಿಗೆ “ಆಸ್ರಿಗೆ ಎಂಥ ಅಡ್ಡಿಲ್ಲೆ” ಹೇಳಿ ಕೇಳದ್ರಿಂದ ಹಿಡ್ದು “ಇನ್ನೂ ಎರಡು ದಿನ ಉಳ್ಕಂಡು ಹೋಗಿ” ಹೇಳ ಅಲ್ಲಿವರೆಗೆ ಅತಿಥಿಯ ಯೋಗಕ್ಷೇಮ ನೋಡ್ಯ್ಕಂಬ ಏಕೈಕ ಸಂಸ್ಕೃತಿ ನಮ್ ಹವ್ಯಕ ಸಂಸ್ಕೃತಿ.ಇಂಥ ಹವ್ಯಕರ ಆದರಾತಿಥ್ಯನ ಶಿವರಾಮ ಕಾರಂತರು ಅವ್ರ ‘ಬೆಟ್ಟದ ಜೀವ’ ಕಾದಂಬರಿಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದ.ಅದರಲ್ಲಿ ಬಪ್ಪ ಗೋಪಾಲಯ್ಯನ ಪಾತ್ರ ನಮ್ ಹವ್ಯಕರದ್ದೇ.ಎಲ್ಲೋ ಹಾದಿ ತಪ್ಪಿ ಬಂದ ಶಿವರಾಮ ಹೇಳ ಅತಿಥಿನ ತಮ್ಮ ಮನೆ ಮಗನೇನೋ ಹೇಳ ರೀತಿಲಿ ಸತ್ಕರಿಸಿ,ಉಪಚಾರ ಮಾಡಿ,ಅವ ಜ್ವರ ಬಿದ್ದಾಗ ಅವಂಗೆ ಹಣೆಗೆ ತಣ್ಣೀರು ಪಟ್ಟಿ ಹಾಕಿ ಉಪಚಾರ ಮಾಡ್ತ.‘ಅತಿಥಿ ದೇವೋ ಭವ’ ಹೇಳ ಉಕ್ತಿನ ನಿಜವಾಗ್ಯೂ ಸಾಕಾರ ಮಾಡ್ದವು ನಮ್ ಹವ್ಯಕರು.ಆದ್ರೆ ಇವತ್ತಿನ ನಗರೀಕರಣ ಆಗ್ತಾ ಇಪ್ಪ ಸಮಾಜದಲ್ಲಿ ನಮ್ ಪಕ್ಕದ್ ಮನೆವವರು ಯಾರು ಹೇಳದೇ ನಮ್ಗ್ ಗೊತ್ತಿರ್ತಿಲ್ಲೆ.ಇನ್ನು ಆದರಾತಿಥ್ಯನ ನಾವು ಎಷ್ಟು ಚೆನ್ನಾಗಿ ಮಾಡ್ಗು? ಅದರಲ್ಲೂ ಹೆಚ್ಚಿನ್ ಮನೆಗಳಲ್ಲಿ ಯಾರದ್ರೂ ಅತಿಥಿಗಳ್ ಬಂದಾಗ ಮನೆ ಮಕ್ಳು,ಯುವಕ್ರು ಹೋಗಿ ಹಿರೀರಿಗೆ ನಮಸ್ಕಾರ ಮಾಡಿ “ಅರಾಮಿದ್ರಾ” ಹೇಳಿ ಕೇಳ ಪದ್ಧತಿ ನಿಧಾನಕ್ಕೆ ಮರೆ ಆಗ್ತಾ ಇದ್ದು.ಹಂಗಾಗಿ ಇವತ್ತಿನ ಯುವಕ್ರು ಮನಿಗ್ ಬಂದ ಅತಿಥಿಗಳ ಆತಿಥ್ಯದಲ್ಲಿ ಉದಾರತೆ ತೋರಿಸ್ದೇ ಹೋದ್ರೆ ನಮ್ ಸಂಸ್ಕೃತಿಯ ಬಹುಮುಖ್ಯ ಭಾಗವಾದ ಆದರಾತಿಥ್ಯ ಅದ್ರ ಮೆರುಗನ್ನ ಕಳ್ಕಳ ಸಾಧ್ಯತೆ ಹೆಚ್ಚಾಗಿದ್ದು.

 ಆದರಾತಿಥ್ಯ ಹೇಳಕ್ಕಾರೆ ಅಲ್ಲಿ ಅಡ್ಗೆ ಮಾಡದು,ಬಡ್ಸದು ಎಲ್ಲದೂ ಬತ್ತು.ಎಂಥದಾರೂ ಕಾರ್ಯ,ಕಟ್ಲೆ ಆದಾಗ ಜಮಖಾನ ಹಾಸಿ,ಬಾಳೆ ಎಲೆ ಊಟ ಹಾಕಿ,ಅನ್ನ ಬಡ್ಸವ್ರು ಪಟ್ಟೆ ಮಡಿ ಉಟ್ಟು ‘ಮಡಿಬಟ್ಟೆ’ಲೇ ಬಡಿಸ್ತಿದ್ದ.ಮತ್ತೆ ಊಟಕ್ಕೆ ಕುಂತ್ಕಂಬ ಎಲ್ಲಾ ಗಂಡಸ್ರೂ ಕಡ್ಡಾಯವಾಗಿ ಅಂಗಿ ಬಿಚ್ಕ್ಯಂಡೇ ಕೂತ್ಕಳಕ್ಕಾಗಿತ್ತು.ಆಹಾರ ಪದ್ಧತಿ,ಬಡ್ಸ ಕ್ರಮ,ಊಟ ಮಾಡ ಕ್ರಮ ಎಲ್ಲವೂ ನಮ್ ಸಂಸ್ಕೃತಿನ ಎತ್ತರಕ್ಕೆ ಏರಸ್ತಾ ಇದ್ವು.ಆದ್ರೆ ಇವತ್ತಿನ ದಿನದಲ್ಲಿ ಅಂಗಿ ಬಿಚ್ಚಿ ಊಟಕ್ಕೆ ಕುಂತ್ಕಂಬ ಪದ್ಧತಿ ನಿಧಾನಕ್ಕೆ ಮಾಯ ಆಗ್ತಾ ಇದ್ದು.ಹಿರೀ ತಲೆಗಳು ಸುಮಾರ್ ಜನ ಅಂಗಿ ಬಿಚ್ಚಿ,ಪಂಚೆ ಉಟ್ಕಂಡ್ ಊಟಕ್ಕೆ ಕೂತ್ರೂ ವಿದ್ಯಾವಂತರೆನಿಸ್ಕ್ಯಂಡ ಸುಮಾರ್ ಜನಾನೇ ಅಂಗಿ ಹಾಕ್ಯಂಡೇ ಕೂತ್ಕತ್ತ.IT,BTಲಿ ಕೆಲ್ಸ ಮಾಡ ಹುಡುಗ್ರನ್ನಂತೂ ಕೇಳದೇ ಬ್ಯಾಡ.ಕೆಲವ್ರು ಕಿವಿಗೆ ಇಯರ್ ಫೋನ್ ಸಿಕ್ಕಿಸ್ಕ್ಯಂಡೇ ಊಟ ಮಾಡದನ್ನೂ ಆನು ನೋಡಿದ್ದಿ.ಹಿರಿಯರು ಯಾರಾದ್ರೂ ಅವಕ್ಕೆ ಅಂಗಿ ಬಿಚ್ಚಿ ಹೇಳ ಧೈರ್ಯ ತೋರ್ಸಿದ್ರೂ ಅವು ಅದನ್ನೂ ಗಣನೆಗೆ ತಗಳ್ದೇ ನಿರ್ಲಕ್ಷ ಮಾಡ್ತಾ ಇದ್ದ.‘ಬ್ರಾಹ್ಮಣೋ ಭೋಜನ ಪ್ರಿಯಃ’ ಹೇಳ ಮಾತು ಇದ್ದು.ಅವು ಊಟ ಮಾಡಿರೂ ಸುಮ್ನೇ ಮಾಡ್ತ್ವಿಲ್ಲೆ.ಅದಕ್ಕೊಂದು ಕ್ರಮ,ನೀತಿ ಎಲ್ಲದೂ ಇರ್ತು.ಅದನ್ನು ಇವತ್ತಿನ ಯುವಜನತೆ ಅರ್ಥ ಮಾಡ್ಕ್ಯಂಡ್ರೆ ನಮ್ ಹವ್ಯಕ ಸಂಸ್ಕೃತಿ ಸಂಗೋಪನೆಗೆ ಬಾಳಾ ದೊಡ್ಡ್ ಕೊಡುಗೆ ಕೊಟ್ಟಾಂಗಾಕ್ತು.

 ಆಹಾರ ಪದ್ಧತಿ ಬಗ್ಗೆ ಹೇಳಿ ಆದ್ಮೇಲೆ ವಸ್ತ್ರ ಸಂಹಿತೆ ಬಗ್ಗೆ ಹೇಳ್ಲೇ ಬೇಕು.ಇವತ್ತಿನ ಆಧುನಿಕ ಜನ್ರಲ್ಲಿ ಗಂಡಸ್ರಿಗೆ ಪ್ಯಾಂಟ್, ಹೆಣ್ ಮಕ್ಕಳಿಗೆ ಚೂಡೀದಾರ್ ಸಾಮಾನ್ಯ ಸಂಗತಿ ಆಗಿ ಹೋಯ್ದು.ತಪ್ಪು ಹೇಳಿ ಆನು ಹೇಳ್ತಾ ಇಲ್ಲೆ.ಆದ್ರೆ ಕೊನೇಪಕ್ಷ ಮನೇಲಿ ಇಪ್ಪ ಸಮಯದಲ್ಲಾದ್ರೂ ಆಧುನಿಕ ಯುವ ಜನ್ರು ನಮ್ ಸಾಂಪ್ರದಾಯಿಕ ಉಡುಪು ಪಂಚೆ,ಸೀರೆ,ಲಂಗ ದಾವಣಿ ಹಾಕ್ಯಂಡಿದ್ರೆ ಯಾರಿಗೂ ಎನೂ ತೊಂದ್ರೆ ಇಲ್ಲೆ ಹೇಳಿ ತಿಳ್ಕತ್ತಿ.ಮತ್ತೆ ದೇವಸ್ಥಾನಕ್ಕೆ ಹೋಪಕ್ಕರ,ಶುಭ ಸಮಾರಂಭಕ್ಕೆ ಹೋಪಕ್ಕರ ಗಂಡಸ್ರು ಪಂಚೆ ಉಟ್ಕಂಡು,ಹೆಗಲ ಮೇಲೊಂದು ಶಲ್ಯ ಹಾಕ್ಯಂಡು ಹೋದ್ರೆ, ಹೆಣ್ ಮಕ್ಳು ಸೀರೆ ಉಟ್ಕಂಡು ಹೋದ್ರೆ ಅದ್ರ ಛಂದನೇ ಬೇರೆ.ಬರೇ ನಮ್ ಹವ್ಯಕ ಸಂಸ್ಕೃತಿ ಅಷ್ಟೇ ಅಲ್ಲ ನಮ್ ಭಾರತೀಯ ಸಂಸ್ಕೃತಿನೂ ಸಂಗೋಪನೆ ಮಾಡ್ದಂಗಾಕ್ತು.ಗಂಡು ಹುಡುಗ್ರಿಗಂತೂ ಈಗ ಮುಕ್ಕಾಲ್ ಪ್ಯಾಂಟ್(3/4) ಹಾಕದೇ ಕಲ್ಚರ್ ಆಗಿ ಹೋಯ್ದು.ಇದು ಯಾವ ಕಾರಣಕ್ಕೂ ಸರಿ ಅಲ್ಲ.ನಾವ್ ಯಾವುದೇ ರಾಜ್ಯದಲ್ಲಿರ್ಲಿ,ಯಾವ್ದೇ ದೇಶದಲ್ಲಿರ್ಲಿ ಮನೆಯೊಳಗೆ ಇಪ್ಪಕ್ಕರೆ ನಮ್ ಸಾಂಪ್ರದಾಯಿಕ ಉಡುಪನ್ನೇ ಉಟ್ಕಂಡ್ರೆ ನಮ್ ಸಂಸ್ಕೃತಿಗೆ ಬಾಳಾ ದೊಡ್ಡ್ ಕೊಡುಗೆ ಕೊಟ್ಟಾಂಗಾಕ್ತು.

 ಒಬ್ರ ಸಹಾಯಕ್ಕೆ ಇನ್ನೊಬ್ರು ಆಪ್ಪದ್ರಲ್ಲಿಯೂ ನಮ್ ಹವ್ಯಕ ಸಂಸ್ಕೃತಿ ಬಾಳಾ ಮುಂದಿದ್ದು.ಊರಲ್ಲಿ ಯಾರ ಮನೇಲಿ ಯಂಥ ಕಾರ್ಯ ಕಟ್ಲೆ ಆದಾಗ್ಲೂ ಗಂಡಸ್ರು “ದೊನ್ನೆ ಬಾಳಿಗೆ” ಬಪ್ದು ಮತ್ತು ಹೆಂಗಸ್ರು ಆಸಿಗೆ ತರಕಾರಿ ಹೆಚ್ಚಲೆ ಬಪ್ದು ಸಾಮಾನ್ಯ ಸಂಗತಿ ಆಗಿತ್ತು.ಇದ್ರಿಂದ ಹವ್ಯಕ್ರ ಮಧ್ಯೆ ಒಂದು ಅವಿನಾಭಾವ ಸಂಬಂಧವೂ ಬೆಳಿತಿತ್ತು.ಆದ್ರೆ ಇವತ್ತಿನ ದಿನದಲ್ಲಿ ಈ “ದೊನ್ನೆ ಬಾಳೆ” ಸಂಸ್ಕೃತಿ ನಿಧಾನಕ್ಕೆ ಮಾಯ ಆಗ್ತಾ ಇದ್ದು.ಹಳ್ಳಿಗಳಲ್ಲಿ ಸಮೇತ ಎಲ್ಲೋ ಒಂದೆರಡು ಊರಲ್ಲಿ ಇಪ್ದು ಬಿಟ್ರೆ ಬೇರೆಲ್ಲಾ ಕಡೆ ರೆಡಿಮೇಡ್ ದೊನ್ನೆ,ಲೋಟ ಬಂದಾಯ್ದು.ಹಳ್ಳಿಯಲ್ಲೇ ಇಪ್ಪ ಹುಡುಗ್ರೂ ಸಹ ಇದ್ರ ಬಗ್ಗೆ ಜಾಸ್ತಿ ಆಸಕ್ತಿ ತೋರಿಸ್ತಾ ಇಲ್ಲೆ.ಹಂಗಾಗಿ ಇವತ್ತಿನ ಹವ್ಯಕ ಯುವಜನಾಂಗ ಮನಸ್ಸು ಮಾಡಿ ಈ “ದೊನ್ನೆ ಬಾಳೆ” ಮತ್ತು ಆಸಿಗೆ ಹೆಚ್ಚ ಸಂಸ್ಕೃತಿನ ಬೆಳೆಸಿ ಕೊಡು ಕೊಳ್ಳುವ ಸಂಸ್ಕೃತಿನ ಜೀವಂತವಾಗಿಡಕ್ಕು.

 “ಮಕ್ಕಳಿರಲವ್ವ ಮನೆ ತುಂಬ” ಹೇಳ ಮಾತು ಇದ್ದು.ಆದ್ರೆ ಇವತ್ತು ಹವ್ಯಕರಲ್ಲಿ ಜನಸಂಖ್ಯೆನೇ ಬಾಳಾ ದೊಡ್ಡ ಸಮಸ್ಯೆಯಾಗಿ ಕಾಡ್ತಾ ಇದ್ದು.ಹವ್ಯಕ ಸಂತತಿ ತುಂಬಾ ಜೋರಾಗಿ ಇಳಿಮುಖ ಆಗ್ತಾ ಇದ್ದು.ಮದ್ವಿಗೆ ಹುಡುಗಿ ಸಿಗ್ತಾ ಇಲ್ಲೆ.ಹವ್ಯಕ ಸಂಸ್ಕೃತಿ ಅಷ್ಟೇ ಅಲ್ಲ ನಮ್ ಹಿಂದೂ ಧರ್ಮದ ಬೆಳವಣಿಗೆಗೂ ನಮ್ ಸಂತತಿ ವೃದ್ಧಿ ಆಗ್ಬೇಕಾದ್ದು ತುಂಬಾ ಅನಿವಾರ್ಯ.ಆದ್ರೆ ಇದ್ಕೆ ಅಪವಾದ ಹೇಳ ಹಾಂಗೆ ಇವತ್ತಿನ ಜನ್ರು ಅದ್ರಲ್ಲೂ ನಗರದಲ್ಲಿ ವಾಸ ಮಾಡ ಜನ ಒಂದೇ ಮಗು ಸಾಕು ಹೇಳ ತೀರ್ಮಾನಕ್ಕೆ ಬಂದ್ ಬಿಡ್ದ.ಕೇಳಿದ್ರೆ ಜನಸಂಖ್ಯಾ ಸ್ಫೋಟ ಆಗ್ತು ಹೇಳ್ತ.ಆದ್ರೆ ಯಾರಿಗೆ ಸಾಕ ಸಾಮರ್ಥ್ಯ ಇದ್ದೋ ಅವು ಒಂದಕ್ಕಿಂತಾ ಜಾಸ್ತಿ ಮಕ್ಕಳನ್ನ ಹುಟ್ಸದ್ರಿಂದ ಜನಸಂಖ್ಯಾ ಸ್ಫೋಟವೇನೂ ಆಗ್ತಿಲ್ಲೆ.ಇದನ್ನ ಇವತ್ತಿನ ಯುವಜನಾಂಗ, ನವವಿವಾಹಿತರು ಗಂಭೀರವಾಗಿ ತಗಂಡು ಹವ್ಯಕ್ರ ಜನಸಂಖ್ಯೆ ಹೆಚ್ಚಿಸ ಪ್ರಯತ್ನ ಮಾಡ್ಲೇ ಬೇಕು.ಎಲ್ಲರೂ ಕನಿಷ್ಟ ಎರಡು ಮಕ್ಕಳನ್ನಾದ್ರೂ ಹಡಿಲೇಬೇಕು.ಇದಕ್ಕೆ ಇವತ್ತಿನ ಮಹಿಳಾವಾದಿಗಳು,ಬುದ್ಧಿಜೀವಿಗಳು ವಿರೋಧ ವ್ಯಕ್ತಪಡಿಸ್ತ.ಆದ್ರೆ ನಮ್ ಅಜ್ಜ,ಮುತ್ತಾಜ್ಜನ ಕಾಲದಲ್ಲಿ ಯಾವ ಆಧುನಿಕ ವೈದ್ಯಕೀಯ ಸೌಲಭ್ಯವೂ ಇಲ್ದಿದ್ದ ಕಾಲ್ದಲ್ಲೂ ಜನರು ನಾಲ್ಕು ಐದು ಮಕ್ಕಳನ್ನ ಹೆರ್ತಿದ್ದ.ಮತ್ತು ಎಲ್ರನ್ನೂ ಸರಿಯಾಗೇ ಲಾಲನೆ,ಪಾಲನೆ ಮಾಡಿ ಪೋಷಿಸ್ತಿದ್ದ.ಉನ್ನತ ಶಿಕ್ಷಣ ಅಲ್ದೇ ಹೋದ್ರೂ ಶಾಲಾ ಮಟ್ಟದ ಶಿಕ್ಷಣವಂತೂ ಬ್ರಾಹ್ಮಣರ ಮನೆಗಳಲ್ಲಿ ಎಲ್ರಿಗೂ ಸಿಗ್ತಿತ್ತು.ಹಿಂಗಿಪ್ಪಕ್ಕರೆ ಇವತ್ತಿನ ಆಧುನಿಕ ಯುಗದಲ್ಲಿ ನಮ್ ಸಂಸ್ಕೃತಿ ಉಳ್ಸಲೆ ನಾವು ಒಂದಕ್ಕಿಂತಾ ಹೆಚ್ಚು ಮಕ್ಕಳನ್ನ ಹುಟ್ಸಿರೆ ತಪ್ಪೇನು?ನಾವೆಲ್ಲ ಒಂದು ವಿಷ್ಯ ನೆನಪಿಟ್ಕಳಕ್ಕು.ಹಿಂದೂ ಧರ್ಮ ಉಳಿಯವು ಹೇಳಾರೆ ಬ್ರಾಹ್ಮಣ್ಯ ಉಳಿಯವು.ಬ್ರಾಹ್ಮಣ್ಯದ ಉಳಿವಿಗೆ ನಮ್ ಹವ್ಯಕ ಸಂಸ್ಕೃತಿ ಉಳಿಯವು.ಹಂಗಾಗಿ ನಮ್ ಸಂತತಿ ವೃದ್ಧಿ ಆಗ್ಲೇ ಬೇಕು.

 ಮತ್ತೊಂದು ಬಾಳಾ ಮುಖ್ಯ ಸಮಸ್ಯೆ ಅಂದ್ರೆ ನಮ್ ಭಾಷೇದು.ಶಿವಳ್ಳಿಯವು,ಕೋಟಾದವು,ಎಲ್ರೂ ಅವರವರ ಪಂಗಡದವು ಪರಸ್ಪರ ಭೇಟಿ ಆದಾಗ ಅವರವರ ಭಾಷೇಲೇ ಮಾತಾಡ್ತ.ಆದ್ರೆ ನಮ್ ಹವ್ಯಕರಲ್ಲಿ ಮಾತ್ರ ನಮ್ ಎದ್ರಿಗೆ ಇಪ್ಪವು ಹವ್ಯಕ್ರು ಹೇಳಿ ಗೊತ್ತಾದ್ರೂ ಸಮೇತ ಸುಮಾರ್ ಜನ ಹವ್ಯಕ ಭಾಷೇಲಿ ಮಾತಾಡ್ತ್ವಿಲ್ಲೆ.ವಿಶೇಷವಾಗಿ ಇವತ್ತಿನ್ ಯುವಜನತೆ ಅದ್ರಲ್ಲೂ ನಗರವಾಸಿಗಳಾಗಿಪ್ಪವು ನಮ್ ಭಾಷೆ ಬಗ್ಗೆ ಜಾಸ್ತಿ ಒಲವು ತೋರಿಸ್ತಾ ಇಲ್ಲೆ.ದೊಡ್ಡ ದೊಡ್ಡ ಕಂಪೆನೀಲಿ ಕೆಲ್ಸ ಮಾಡ ಆಧುನಿಕ ಮನೋಭಾವದ ಯುವ ಜನ್ರು ಮದ್ವೆ ಆದ್ಮೇಲೆ ಗಂಡ ಹೆಂಡ್ತಿ ಮಾತಾಡಕ್ಕರ ಹವ್ಯಕ ಭಾಷೆ ಬಿಟ್ಟು ಸಾದಾ ಕನ್ನಡದಲ್ಲೋ,ಅಥ್ವಾ ಇಂಗ್ಲೀಷ್ ನಲ್ಲೋ ಮಾತಾಡದನ್ನ ಆನೇ ನೋಡಿದ್ದಿ.ಮತ್ತೆ ಅವು ಅವ್ರ ಮಕ್ಕಳಿಗೂ ಹವ್ಯಕ ಭಾಷೆ ಕಲಿಸ್ತ್ವಿಲ್ಲೆ.ಹಿಂಗಾದ್ರೆ ನಮ್ ಭಾಷೆ ಉಳಿತಿಲ್ಲೆ.ಹಂಗಾಗಿ ನಮ್ ಯುವ ಜನಾಂಗ ಇದನ್ನೊಂದು ಗಂಭೀರ ವಿಷ್ಯವಾಗಿ ತಗಂಡು ಭಾಷೆ ಉಳ್ಸ ಬಗ್ಗೆ ಗಮನ ಕೊಡಕ್ಕು.ಇದ್ರಲ್ಲಿ ಒಂದು ಒಳ್ಳೆ ವಿಷ್ಯ ಯಂಥದು ಅಂದ್ರೆ ನಮ್ ‘ಒಪ್ಪಣ್ಣ’ ನೆರೆಕೆರೆ ಪ್ರತಿಷ್ಠಾನ ಹವ್ಯಕ ಭಾಷೆನ ಉಳ್ಸ ಬಗ್ಗಾಗಿಯೇ ಒಂದು ವೆಬ್ ಸೈಟ್ ಪ್ರಾರಂಭಿಸಿದ್ದು.ಅದ್ರಲ್ಲಿ ದೊಡ್ಡ ದೊಡ್ಡ ಹುದ್ದೇಲಿ ಇಪ್ಪ ಯುವ ಹವ್ಯಕ್ರೇ ಆಗಾಗ ಹವ್ಯಕ ಭಾಷೇಲೇ ಯಂಥಾದ್ರೂ ಬರಿತಾ ಇಪ್ಪದು ತುಂಬಾ ಖುಷಿ ಕೊಡ ಸಂಗತಿ.ಇದು ಇನ್ನೂ ಜಾಸ್ತಿ ಜನ್ರನ್ನ ಮುಟ್ಟಿರೆ ಭಾಷೆನೂ ಉಳಿತು,ಅದ್ರ ಬೆಳವಣಿಗೆನೂ ಆಗ್ತು.

 ಹವ್ಯಕ್ರಲ್ಲಿ ಜನಸಂಖ್ಯೆ ಕಡಿಮೆ ಆಗ್ತಾ ಇದ್ದು,ಮದ್ವಿಗೆ ಹೆಣ್ಣು ಸಿಗ್ತಾ ಇಲ್ಲೆ ಹೇಳದನ್ನ ಆಗ್ಲೇ ಹೇಳಿದ್ದಿ.ಆದ್ರೆ ನಮ್ ಹೆಣ್ ಮಕ್ಳು ಯಾವ್ಯಾವ ಜಾತಿಯರ್ನೋ ಕಟ್ಯಂಡು ಓಡಿ ಹೋಗ್ತಾ ಇಪ್ಪದು ಇತ್ತೀಚೆಗೆ ಜಾಸ್ತಿ ಆಗ್ತಾ ಇದ್ದು.ಇದೂ ಸಮೇತ ಒಂದು ಗಂಭೀರವಾದ ಸಮಸ್ಯೆ.ಎಲ್ಲಾ ಜಾತಿ ಧರ್ಮನೂ ಒಂದೇ ರೀತಿ ನೋಡಕ್ಕು ಹೇಳದನ್ನ ಆನೂ ಒಪ್ತಿ.ಆದ್ರೆ ಯಾರ್ಯಾರನ್ನೋ ಕಟ್ಯಂಡು ಹೋಗದ್ರಿಂದ ಅದು ನಮ್ ಹವ್ಯಕ ಜಾತಿ ಮೇಲೆ,ಸಮಾಜದ್ ಮೇಲೆ ದುಷ್ಪರಿಣಾಮ ಬೀರ್ತಾ ಇದ್ದು ಹೇಳದನ್ನ ಹೆಣ್ ಮಕ್ಕಳು ಸ್ವಲ್ಪ ಆಲೋಚನೆ ಮಾಡವು.ಇದ್ರ ಬಗ್ಗೆ ಜಾಸ್ತಿ ವಿಶ್ಲೇಷಣೆ ಮಾಡ ಅಷ್ಟು ದೊಡ್ಡವ ಆನಲ್ಲ.ಹಿರಿಯರು,ತಿಳಿದವ್ರು ನಮ್ ಮಕ್ಕಳಿಗೆ ಬುದ್ಧಿ ಹೇಳಿ ಜಾತಿ ಉಳ್ಸ ಪ್ರಯತ್ನ ಮಾಡವು.

 ತೀರಾ ಇತ್ತೀಚಿನ ದಿನಮಾನದಲ್ಲಿ ಕೆಲವು ಜನ ಹವ್ಯಕ ಯುವಕ್ರು ‘ಎಡಪಂಥ’ದ ಕಡಿಗೆ ನಿಧಾನಕ್ಕೆ ವಾಲ್ತಾ ಇದ್ದ.ಅಂದ್ರೆ ದಲಿತಪರ,ಕಾರ್ಮಿಕಪರ,ಶೋಷಿತರ ಪರವಾದ ಆಲೋಚನೆಗಳು,ಚಿಂತನೆಗಳು,ಬರಹಗಳು,ಮಾತುಗಳು ಅವ್ರಲ್ಲಿ ಜಾಸ್ತಿ ಆಗ್ತಾ ಇದ್ದು.ತಪ್ಪೇನಲ್ಲ.ಆದ್ರೆ ಯಾರೋ ಕೆಲವು ಢೋಂಗಿ ಬುದ್ಧಿಜೀವಿಗಳು,ಜಾತ್ಯಾತೀತರ ಪ್ರಭಾವಕ್ಕೆ ಬಿದ್ದು ಎಡಪಂಥೀಯ ಆಲೋಚನೆ ಮಾಡ ಭರಾಟೆಲಿ ನಮ್ ಜಾತಿ ಒಳಗಿದ್ಕಂಡೇ ನಮ್ ಹುಡುಗ್ರು ನಮ್ ಜಾತಿನ,ಹಿಂದೂ ಧರ್ಮನ ಅವಹೇಳನ ಮಾಡದು,ಕೀಳಾಗಿ ಕಾಣದು ಮಾಡ್ತಾ ಇದ್ದ.ಇದಕ್ಕಾಗಿ ಅವು ಫೇಸ್ಬುಕ್,ಟ್ವಿಟ್ಟರ್ ನಂಥ ಸಾಮಾಜಿಕ ಮಾಧ್ಯಮಗಳನ್ನ ಭಾಳಾ ಪ್ರಭಾವಿಯಾಗಿ ಬಳಸ್ತಾ ಇದ್ದ.ಎಡಪಂಥೀಯ ಆಲೋಚನೆ ಅಂದ್ರೆ ಬರೀ ಬ್ರಾಹ್ಮಣರನ್ನ,ಹಿಂದೂ ಧರ್ಮನ ಬಯ್ಯದು ಬಿಟ್ರೆ ಬೇರೆ ಯಂಥದೂ ಇಲ್ಯೇನೋ ಹೇಳ ರೀತಿಯಲ್ಲಿದ್ದು ಅವ್ರ ಆಲೋಚನೆ.ಎಡಪಂಥೀಯ ಆಲೋಚನೆಯಿಂದ ನಮ್ ಸಂಸ್ಕೃತಿಯ,ದೇಶದ ಅಭಿವೃದ್ಧಿ ಆಪ್ಪದಾರೆ ಆಗ್ಲಿ.ಅದು ಒಳ್ಳೇದೆ.ಅದು ಬಿಟ್ಟು ಅದ್ರಿಂದ ನಮ್ ಸಂಸ್ಕೃತಿ ಸಂಗೋಪನೆಗೆ ತೊಂದ್ರೆ ಆಗ್ತು ಹೇಳಾರೆ ಅಂಥ ಎಡಪಂಥ ನಮ್ಗೆ ಬ್ಯಾಡ.ಇದನ್ನ ಇವತ್ತಿನ ಕೆಲವು ಎಡಪಂಥೀಯ ಹವ್ಯಕ ಹುಡುಗ್ರು ಆಲೋಚನೆ ಮಾಡಕ್ಕು.

 ಈ ಜಗತ್ತಲ್ಲಿ ಯಂಥದೇ ಆವಿಷ್ಕಾರಗಳು,ಸಾಧನೆಗಳು ನಡೆದ್ರೂ ಅವು ಹೆಚ್ಚಿನ ಸಂದರ್ಭದಲ್ಲಿ ಯುವ ಜನರಿಂದ್ಲೇ ಆಗಿರ್ತು.ಒಂದು ದೇಶನ ಕಟ್ಟಲೂ ಯುವಕರಿಂದ ಸಾಧ್ಯ ಇದ್ದು,ಒಂದು ದೇಶ ಒಡೆಯದೂ ಅವ್ರಿಂದ್ಲೇ ಸಾಧ್ಯ ಇದ್ದು.ಹಂಗಾಗಿ ಯಾವುದೇ ದೇಶನ ಕಟ್ಟಿ ಬೆಳ್ಸದ್ರಲ್ಲಿ ಯುವಕರ ಪಾತ್ರ ಬಾಳಾ ದೊಡ್ಡದು.ಹಂಗಾಗಿ ನಮ್ ಹವ್ಯಕ ಸಂಸ್ಕೃತಿ ಸಂಗೋಪನೇಲಿ,ಭಾರತೀಯ ಸಂಸ್ಕೃತಿ ಬೆಳವಣಿಗೇಲಿ ಯುವ ಜನ್ರದ್ದೇ ಸಿಂಹಪಾಲು.ನಮ್ ದೇಶ ಈಗ ಒಂದು ಪರ್ವ ಕಾಲದಲ್ಲಿದ್ದು.ಯಂಥದಾದ್ರೂ ಬದಲಾವಣೆ,ಅಭಿವೃದ್ಧಿ ಮಾಡವು ಹೇಳಾದ್ರೆ ಇದು ಸಕಾಲ.ಅದಕ್ಕೆ.ತನ್ನ ತನು,ಮನ,ಧನಗಳನ್ನ ಕೊಟ್ಟು ಸಹಕಾರ ಕೊಡ ಅಂಥ ಪ್ರಧಾನಿಯೂ ನಮ್ಗೆ ಸಿಕ್ಕಿದ್ದ.ಹಂಗಾಗಿ ಜಾಗತೀಕರಣದ ಭರಾಟೆಲಿ,ಸಂಸ್ಕೃತಿಗಳು ನಿಧಾನಕ್ಕೆ ನಶಿಸಿ ಹೋಗ್ತಾ ಇಪ್ಪಂಥ ಈ ಕಾಲ್ದಲ್ಲಿ ಭಾರತೀಯರಾದ ನಾವು ಜಗತ್ತಿಗೆ ಮಾರ್ಗದರ್ಶನ ಮಾಡಣ.ಭಾರತೀಯ ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ತಗಂಬನ.ಆದ್ರೆ ಅದಕ್ಕೂ ಮೊದ್ಲು ನಮ್ ಹವ್ಯಕ ಸಂಸ್ಕೃತಿನ ಸರಿಯಾಗೆ ಸಂಗೋಪನೆ ಮಾಡಣ.ಅದ್ರ ಮುಖಾಂತರ ಭಾರತೀಯ ಸಂಸ್ಕೃತಿ ಸಂಗೋಪನೆಗೆ ಕೊಡುಗೆ ಕೊಡಣ.‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಹೇಳದ್ರಲ್ಲಿ ನಂಬಿಕೆ ಇಟ್ಟು ಮೊದಲು ನಾವು ವಿಕಾಸರಾಗಿ ಆಮೇಲೆ ಎಲ್ಲರನ್ನೂ ವಿಕಾಸರನ್ನಾಗಿ ಮಾಡಿ ಭಾರತವನ್ನ ಜಗದ್ಗುರುವನ್ನಾಗಿ ಮಾಡಣ.
ಹರೇ ರಾಮ್.ಜೈಹಿಂದ್.

 ~~~~***~~~

-ಲಕ್ಷ್ಮೀಶ ಜೆ.ಹೆಗಡೆ

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ವಿಜಯತ್ತೆ

  ಹರೇರಾಮ, ಭಾಳ ಚೆಂದಾಗಿ ಬರದ್ದೆ ಲಕ್ಷ್ಮೀಶ ಹೆಗಡೆ!.ನಿನ್ನಂಥ ಜವ್ವನಿಗರು ಈ ರೀತಿ ಆಲೋಚನೆ ಮಾಡೀರೆ ನಮ್ಮ ಸಂಸ್ಕೃತಿ, ಸಂಸ್ಕಾರ ಒಳಿಶಿ-ಬೆಳೆಶಲೆ ಕಷ್ಟ ಆಗ.ನಿನ್ನ ಆಲೋಚನೆ, ಸಂಘಟನೆ, ಸಾಕಾರ ಆಗಲಿ. ನಿನ್ನಂತವರಿಂದ ನವಗೆ, ನಮ್ಮ ಸಮಾಜಕ್ಕೆ ಉತ್ತರೋತ್ತರ ಅಭಿವೃದ್ಧಿ ಆಗಲಿ. ನಿನಗೆ ಮನಃಪೂರ್ವಕ ಶುಭ ಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)
 2. ದೊಡ್ಮನೆ ಭಾವ

  ಲಕ್ಷ್ಮೀಶ, ಇವತ್ತಿನ ನಮ್ಮ ಪರಿಸ್ಥಿತಿಯ ಬಗ್ಗೆ ರಾಶಿ ಚೆನ್ನಾಗಿ ಬರದ್ದೆ. ಬವುಶ ನಿನ್ನ ವಯಸ್ಸಿಗೆ ಮೀರಿದ ಬರಹ. “ಎಡಪಂಥೀಯ ಆಲೋಚನೆ ಅಂದ್ರೆ ಬರೀ ಬ್ರಾಹ್ಮಣರನ್ನ,ಹಿಂದೂ ಧರ್ಮನ ಬಯ್ಯದು ಬಿಟ್ರೆ ಬೇರೆ ಯಂಥದೂ ಇಲ್ಯೇನೋ ಹೇಳ ರೀತಿಯಲ್ಲಿದ್ದು ಅವ್ರ ಆಲೋಚನೆ.” – ಅಕ್ಷರಶಃ ನಿಜ. ಹೀಗೇ ಬರೀತಾ ಇರು. ಅತ್ಯುತ್ತಮ ಲೇಖಕ ಆಗಕ್ಕೆ ಎಲ್ಲಾ ಲಕ್ಷಣನೂ ಇದ್ದು. ನಮ್ಮ ಬೈಲಲ್ಲಿ ಬರೆದದ್ದಕ್ಕೆ ಮತ್ತೊ೦ದ್ಸಾರಿ ಅಭಿನ೦ದನೆ.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ದೊಡ್ಮನೆ ಭಾವಾ .. ಬೈಲಿಲಿ ಕಾಣದ್ದೆ ದಿನ ಸುಮಾರಾತು . ನಿಂಗಳ ಶುದ್ದಿಗಳೂ ಬರಲಿ .

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಹವ್ಯಕರ ಭಾಷೆ -ಸಂಸ್ಕೃತಿ ಸಂಗೋಪನೆಲಿ ಯುವ ಪೀಳಿಗೆಯ ಪಾತ್ರದ ಬಗ್ಗೆ ಲಕ್ಷ್ಮೀಶನ ಶುದ್ದಿ ತುಂಬಾ ತುಂಬಾ ಚಲೋ ಆಯ್ಜು . ಅಂತರಂಗ – ಬಹಿರಂಗಲ್ಲಿ ನಾವು ಯಾವ ರೀತಿಲಿ ನಮ್ಮ ಸಂಸ್ಕೃತಿಯ ಒಳುಶಿ ಬೆಳೆಶುಲೆ ಸಾಧ್ಯ ಹೇಳಿ ಮನಸ್ಸಿನ್ಗೆ ಮುಟ್ಟುವ ಹಾಂಗೆ ಬರದ್ದೆ , ಅಭಿನಂದನೆ .. ಇದೇ ರೀತಿ ಬೈಲಿಲಿ ಬರೆತ್ತಾ ಇರೆಕು ಹೇಳಿ ವಿನಂತಿ .
  ” ದೊನ್ನೆ-ಬಾಳೆ” ಯ ಸಮಸ್ಯೆ ಬೇಜಾರು ಕೊಟ್ಟತ್ತು.. ಕುಂಬಳೆ ,ಪುತ್ತೂರು ಹೊಡೆಲಿ ಇನ್ನೂ ಈ ಸಹಕಾರ ಸಹಬಾಳ್ವೆ ಇದ್ದು , ಒಳುಶಿ ಬೆಳೆಶೋದು ನಮ್ಮೆಲ್ಲರ ಜವಾಬ್ದಾರಿಯೂ ಅಪ್ಪು .

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಸರಿಯಾಗಿ ಬರೆದ್ದಿ

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ°

  ಚಿಂತನೆ ಕಾಳಜಿ ಲಾಯಕ ಆಯಿದು. ಯುವಕರ ಕೈಲಿ ಇದ್ದು ಅಪ್ಪು. ಆದರೆ ಯುವಕರು ಕೈಲಿ ಹಿಡ್ಕೊಳ಼಼್ಳೆಕ್ಕಾರೆ ಬಾಲಕರಾಗಿಪ್ಪಗಳೆ ಅದು ಬೇರೂರಿಕೆ. ಯುವಕ ಆದ ಮತ್ತೆ ಕಾಳಜಿ ಹೇದು ಸುರುಮಾಡಿರೆ ಅದು ಗಟ್ಟಿ ನಿಲ್ಲ. ಕಣ್ ಕಟ್ಟು ಆಚರಣೆಯ ಬದಲಿಂಗೆ ಸ್ವಾಭಿಮಾನ ಶ್ರದ್ಧೆಯ ನಂಬಿಕೆ ಆಚರಣೆ ರಕ್ತಗತವಾಗಿರೆಕು. ಇಲ್ಲದ್ದರೆ ಹೆಗಲ್ಲಿಪ್ಪ ಜೆನಿವಾರ ಹರಟೆ ಆವ್ತು ನೀ ಬೇಕಾರೆ ಸುರ್ಕೊಳೋ° ಹೇದು ರೂಮ್ ಮೇಟಿಂಗೆ ತೆಗದು ಕೊಡ್ತ ಪರಿಸ್ಥಿತಿ ಬಕ್ಕು (ಬಯಿಂದೋ ಗೊಂತಿಲ್ಲೆ).

  ಉತ್ತಮ ಆಶಯದ ಶುದ್ದಿ ಲಕ್ಷ್ಮೀಶಣ್ಣೋ. ಪ್ರತಿಯೊಬ್ಬನ ಮನ ಹೊಕ್ಕಲಿ. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ಶ್ರೀಅಕ್ಕ°ವಾಣಿ ಚಿಕ್ಕಮ್ಮಸರ್ಪಮಲೆ ಮಾವ°ಮಾಲಕ್ಕ°ಚುಬ್ಬಣ್ಣಸುವರ್ಣಿನೀ ಕೊಣಲೆಚೆನ್ನೈ ಬಾವ°ಅಕ್ಷರ°ಪುಟ್ಟಬಾವ°ಕಜೆವಸಂತ°ಕಾವಿನಮೂಲೆ ಮಾಣಿವೆಂಕಟ್ ಕೋಟೂರುಪವನಜಮಾವವೇಣಿಯಕ್ಕ°ಪುತ್ತೂರಿನ ಪುಟ್ಟಕ್ಕಶುದ್ದಿಕ್ಕಾರ°ದೇವಸ್ಯ ಮಾಣಿಪೆಂಗಣ್ಣ°ಮುಳಿಯ ಭಾವಕೇಜಿಮಾವ°ಕೆದೂರು ಡಾಕ್ಟ್ರುಬಾವ°ಅನು ಉಡುಪುಮೂಲೆಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ