ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ”

February 9, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರತಿ ಮೂವತ್ತೊರಿಶಕ್ಕೆ ಒಂದು ತಲೆಮಾರು – ಇದು ಹಳಬ್ಬರ ಲೆಕ್ಕ.
ಪ್ರತಿ ಹತ್ತೊರಿಶಕ್ಕೆ ಒಂದರಿ – ದಶಮಾನದ ಆರಂಭದ ಒರಿಶ – ಜನಗಣತಿ – ಇದು ನಮ್ಮ ಸರಕಾರದ ಲೆಕ್ಕ.
ಈ ದಶಮಾನದ್ದು ಈ ಒರಿಶ ಬತ್ತು, ದೇಶಮಟ್ಟಲ್ಲಿ ಇಂದು, ಪೆಬ್ರವರಿ ಒಂಬತ್ತರಿಂದ ಸುರು ಆವುತ್ತು.

ದೇಶದ ವೈವಿಧ್ಯತೆಲಿ ಜೆನಗಣತಿ ಬಹು ಮುಖ್ಯವಾದ ಅಂಗ.
ವೆಗ್ತಿ ಮಟ್ಟಂದ ತೊಡಗಿ, ಮನೆ – ಊರು – ಬೈಲು – ತಾಲೂಕು – ಜಿಲ್ಲೆ- ರಾಜ್ಯಮಟ್ಟಕ್ಕೆ ಒರೆಗೆ ಮುಂದುವರುದು, ಒಟ್ಟಾರೆಯಾಗಿ ಇಡೀ ದೇಶಲ್ಲಿ ಎಷ್ಟು ಜೆನ ಇದ್ದವು, ಆರಾರು ಯೇವಯೇವ ಜಾತಿ, ಪಂಗಡ, ಜನಾಂಗ, ಭಾಶೆ – ಇತ್ಯಾದಿಗೊಕ್ಕೆ ಒಳಪ್ಪಟ್ಟಿದವು, ಆರು ತೀರಿಗೊಂಡಿದವು, ಆರು ಜನನ ಆಯಿದವು – ಹೇಳ್ತ ದಾಖಲೆಯ ನವೀಕೃತಗೊಳುಸುತ್ತವು.
ಒಬ್ಬ ವೆಗ್ತಿಯ ದಾಖಲೆಯ ನಿಖರತೆ ವೆಗ್ತಿದೇ!
ನಾವು ಹೇಳಿದ್ದರನ್ನೇ ಅವು ಬರಕ್ಕೊಂಬದು – ನಾವು ಹೇಳಿದ್ದನ್ನೇ ಅವು ಬರಕ್ಕೊಳೇಕು.

ನಮ್ಮ ಭಾಷೆ "ಹವ್ಯಕ"

ಈ ಸಂದರ್ಭಲ್ಲಿ ಬೈಲಿನ ಪರವಾಗಿ ನಿಂಗಳ ಹತ್ತರೆ ಒಂದು ಕೋರಿಕೆ ಇದ್ದು.
ಜನಗಣತಿಗೆ ಬಪ್ಪಗ ನಮ್ಮ ಮಾತೃಭಾಶೆಯ ಬೇರೆ ಯೇವದೇವದೋ ಬರೆತ್ತದಲ್ಲ, ಬದಲಾಗಿ ನಮ್ಮ ಹೆಮ್ಮೆಯ “ಹವ್ಯಕ” ಹೇಳಿಯೇ ಬರೆಶುವೊ.
ಅಂತೆಯೇ ಜಾತಿಯೂ – ಬರೇ “ಬ್ರಾಹ್ಮಣ” ಹೇಳಿ ಬರೆಶುತ್ತದರಿಂದ “ಹವ್ಯಕ ಬ್ರಾಹ್ಮಣ” ಹೇಳಿ ಬರೆಶಿಗೊಂಡು ನಮ್ಮ ವೈಶಿಷ್ಟ್ಯತೆಯ ರಾಷ್ಟ್ರಮಟ್ಟಲ್ಲಿ ಗುರುತುಸುವೊ.
ಎಂತ ಹೇಳ್ತಿ?

ಅಜಕ್ಕಳ ಮಾಷ್ಟ್ರಣ್ಣ, ಕಾಂತಣ್ಣ – ಈ ಬಗ್ಗೆ ವಿವರವಾಗಿ ಒಂದರಿ ಹೇಳಿದ್ದವು.

7 ನೇ ಗೆರೆಪೆಟ್ಟಿಗೆ(ಕಾಲಂ) ಧರ್ಮ: ಸನಾತನ / ವೈದಿಕ / ಹಿಂದೂ
8 ನೇ
ಗೆರೆಪೆಟ್ಟಿಗೆಲಿ: ಹವ್ಯಕ ಬ್ರಾಹ್ಮಣ
10 ನೇ ಗೆರೆಪೆಟ್ಟಿಗೆ
: ಮಾತೃಭಾಷೆ: ಹವ್ಯಕ

e- ಬೈಲಿಂಗೆ ಬಪ್ಪಲೆಡಿಗಾಗದ್ದೋರಿಂಗೆ, ನಿಂಗಳ ಆಚ ಮನೆಯೋರಿಂಗೆ, ಈಚ ಮನೆಯೋರಿಂಗೆ, ಎದುರಾಣ ಮನೆಯೋರಿಂಗೆ ಒಂದು ತಿಳುಶಿಬಿಡ್ತಿರೋ?
ಅಂತೇ ಗಂಟೆಗಟ್ಳೆ ಮಾತಾಡ್ಳೆ ಪೋನು ಮಾಡ್ತಡ, ಈ ಲೆಕ್ಕಲ್ಲಿ ಹತ್ತು ಪೋನು ಬಡುದರೆ ದೊಡ್ಡ ತಲೆಬೆಶಿ ಇದ್ದೋ?
ಅಲ್ಲದೋ?


ಒಪ್ಪಣ್ಣ

ಗಣತಿಗೆ ಬೈಲಿನ ಮಾಷ್ಟ್ರಣ್ಣಂಗೊ ಬತ್ತವಲ್ಲದೋ? – ಅಂಬಗ ನೆಂಪಿರಳಿ:
ನಮ್ಮ ಅಬ್ಬೆ ಭಾಶೆ “ಹವ್ಯಕ”
~
ಗುರಿಕ್ಕಾರ°

ಸೂ: ಜನಗಣತಿಯ ವಿಶಯವಾರು ವಿಭಾಗಂಗಳ ಮಾಹಿತಿ ಶರ್ಮಪ್ಪಚ್ಚಿ ಕೊಟ್ಟು ಕಳುಸಿದ್ದವು, ಸಂಕೊಲೆ ಇಲ್ಲಿದ್ದು: Janaganati-Form.pdf

ಗಣತಿಯ ದಿನ ಗಮನುಸಿ - ಅಬ್ಬೆ ಭಾಶೆ "ಹವ್ಯಕ", 2.4 out of 10 based on 5 ratings

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ.

  ತುಳುವಿನವು ತುಳು , ಕೊಂಕಣಿಯವು ಕೊಂಕಣಿ ಹೇಳಿ ಕೊಡುವಾಗ ನಾವು ಹವಿಕನ್ನಡ ಹೆಳುಲೆ ಎಂತಕೆ ಸಂಕೋಚ , ದಾಕ್ಷಿಣ್ಯ?! ಭಟ್ಟ , ಶರ್ಮ ಹೇಳಿ ನಮ್ಮ ಹೆಸರಿನೊಟ್ಟಿನ್ಗೆ ಎಂತಕೆ ಸೇರ್ಸದ್ದೆ ಕೂರೆಕು?!

  [Reply]

  VA:F [1.9.22_1171]
  Rating: 0 (from 0 votes)
 2. pakalakunja gopalakrishna

  ಈ ವಿಚಾರ ಧಾರೆ ನಮ್ಮ ಸಮಾಜಕ್ಕೆ ಸಿಕ್ಕೆಕ್ಕಪ್ಪ ಪ್ರಾತಿನಿಧ್ಯವ ಕೊಡುಸುವಲ್ಲಿ ಪ್ರಯೋಜನ ಅಕ್ಕು ಹೇಳಿ ಅನುಸುತ್ತು.
  ಇದು ಉಚಿತ ಸಲಹೆ , ತುಂಬಾ ಪ್ರಭಾವ ಯುತ ಪ್ರಯತ್ನ ಅಕ್ಕು ಹೇಳಿ ಎನ್ನ ಅಭಿಪ್ರಾಯ.
  ಇದು ಈಗ ಮೊಬೈಲಿ ಬಪ್ಪ ಮೆಸೇಜು … ಪ್ರಚಲಿತ. ವಿಚಾರ.: ” ನಾಳೆ ಆರಂಭ ಅಪ್ಪ ಜನ ಗಣತಿಲಿ ಮೀಸಲಾತಿ ಸೌಲಭ್ಯಕ್ಕಾಗಿ ನಮ್ಮ ಭಾಷೆ ” ಹವಿಗನ್ನಡ ” ಹಾಂಗೆ ನಮ್ಮ ಜಾತಿ ” ಹವ್ಯಕ ”
  ಹೇಳಿ ನಮೂದಿಸೆಕ್ಕಾಗಿ ವಿನಂತಿ.

  ಪಕಳಕುಂಜ ಗೋಪಾಲಕೃಷ್ಣ,
  ಗೋಕೃಪ ,
  ಮಂಗಳೂರು
  ೧೦-೦೨-೨೦೧೧
  ಹರೇ ರಾಮ .
  ಶ್ರೀ ಗುರುಭ್ಯೋನಮಃ

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ನಮ್ಮ ಭಾಷೆ ಕನ್ನಡದ ಒಂದು ಶಾಖೆ ಅಷ್ಟೆ.
  ನಿಂಗೊ ದಯಮಾಡಿ ಬಳ್ ಳಾರಿ ಮತ್ತೆ ಗುಲ್ಬರ್ಗದ ಭಾಷೆಯ ನೋಡಿ.[ಗೀತಾ ನಾಗಭೂಷಣ ಯಾ ಕುಂ.ವೀರಭದ್ರಪ್ಪನ ಕತೆ] ನಿಂಗೊ ಅದರ ಕನ್ನಡ ಹೇಳುತ್ತಿ ಹೇಳಿ ಆದರೆ,ನಮ್ಮ ಹವ್ಯಕ ಭಾಷೆಯ ಕನ್ನಡ ಹೇಳುಲೆ ನಮಗೆ ಯಾವ ಸಂಕೋಚವೂ ಇಲ್ಲೆ.ನಮ್ಮ ಹಿರಿಯರು ಕನ್ನಡ ಹೇಳಿಯೇ ಬರೆದ್ದವು .ನಮ್ಮಲ್ಲಿ ಮುಳಿಯ ತಿಮ್ಮಪ್ಪಯ್ಯ,ಮರಿಯಪ್ಪ ಭಟ್ಟರ ಹಾಂಗಿಪ್ಪ ದೊಡ್ಡ ವಿದ್ವಾಂಸರು ಇದ್ದಿದ್ದವು-ಅವು ನಮ್ಮ ಮಾತೃ ಭಾಷೆಯ ಕನ್ನಡ ಹೇಳಿ ಬರೆಯೆಡಿ ಹೇಳಿದ್ದವೊ?ನಾವು ಕನ್ನಡಿಗರೆ ಸರಿ-ಇದು ತ್ರಿಕಾಲಾಬಾಧಿತ ಸತ್ಯ. ಇದರ ಲೊಟ್ಟೆ ಹೇಳಿ ದಯಮಾಡಿ ಹೇಳೆಡಿ ಸುಭಗಣ್ಣಾ.
  ಇನ್ನು ಹವ್ಯಕ ಮಹಾಸಭೆಯವರ ಕಾರ್ಯ ಆನು ಗೌರವಿಸುತ್ತೆ.ಆದರೆ ಅವರ ಹವಿಗನ್ನಡ ಹೇಳುವ ಒಂದು ಉಪಕ್ರಮ ಎನಗೆ ಸರಿ ಕಾಣುತ್ತಿಲ್ಲೆ.ನಮ್ಮವು ಕೊಡಗಿಲಿ ಶುದ್ಧ ಕನ್ನಡ[ನಮ್ಮ ವ್ಯಾವಹಾರಿಕ ಕನ್ನಡ]ವನ್ನೇ ಮಾತಾಡುತ್ತವು.ಅವರ ಬಿಟ್ಟಿರೊ ಹಾಂಗಾರೆ?
  ನಮ್ಮ ಅಸ್ತಿತ್ವ ಉಳಿಯೆಕ್ಕಾದರೆ ನಾವು ಮನೆಲಿ ನಮ್ಮಭಾಷೆಯನ್ನೇ ಮಾತಾಡುವೊ.ನಮ್ಮ ಮಕ್ಕೊಗೆ -ಇಂಗ್ಲಿಷ್ ಮಾಧ್ಯಮಲ್ಲಿ ಕಲಿವವಕ್ಕೆ -ಸರಿಯಾಗಿ ಕನ್ನಡ,ಸಂಸ್ಕೃತ ಹೇಳಿಕೊಡುವೊ.
  ಅದರ ಬಿಟ್ಟು ನಾವು ಹವ್ಯಕ /ಹವಿಗನ್ನಡ ಹೇಳಿ ಬರಶಿರೆ ಎಂತ ಗುಣ?
  ನಮಗೆ ಭಾಷಾ ಅಲ್ಪಸಂಖ್ಯಾತರು ಹೇಳಿಸಿಕೊಂಡರೆ ಗುಣ ಇದ್ದೊ-ಏವ ಸರಕಾರ ಬಂದರೂ ಅದು ನಮಗೆ ಸಿಕ್ಕ.
  ಕನ್ನಡವ ಬಲಗುಂದಿಸಿದ್ದು ಮಾತ್ರ ನಮಗೆ ಸಿಕ್ಕುವ ಲಾಭ!
  ಎನಗೆ ನಮ್ಮ ಭಾಷೆಯ ಮೇಲೆ ಪ್ರೀತಿ ಇದ್ದು-ಕನ್ನಡದ ಮೇಲೆ ತುಂಬಾ ಅಭಿಮಾನವೂ ಇದ್ದು.ನಮ್ಮ ಹಿರಿಯ ವಿದ್ವಾಂಸರು ಕನ್ನಡವ ಉಳಿಶಿದ್ದು,ಬೆಳೆಶಿದ್ದು ಆರೂ ಮರೆಯೆಡಿ.ನಮ್ಮದು ತುಳುವಿನ ಹಾಂಗೊ,ಕೊಂಕಣಿಯ ಹಾಂಗೊ ಸ್ವತಂತ್ರ ಭಾಷೆ ಅಲ್ಲ. ನಮ್ಮ ಮಿತಿಯ ತಿಳುಕ್ಕೊಂಬೊ.
  ನಾವು ಕನ್ನಡಿಗರು ಹೇಳಿಕೊಂಬದರಲ್ಲೇ ನಮ್ಮ ಸಮುದಾಯಕ್ಕೆ,ಸಮಾಜಕ್ಕೆ ಹಿತ.
  ಮತ್ತೆ ಒಂದಾರಿ ಎಲ್ಲರಲ್ಲೂ ಕೈ ಮುಗಿದು ವಿನಂತಿ ಮಾಡುತ್ತೆ,ರಜಾ ಯೋಚಿಸಿ-ಜಾತಿಯ ಮೋಹ ನಮ್ಮ ಕಣ್ಣಿಂಗೆ ಕಾಣೆಕ್ಕಾದ ಸತ್ಯವ ಮರೆಮಾಚದ್ದೇ ಇರಲಿ.
  ನಾವು ಕನ್ನಡಿಗರು ಹೇಳಿ ನಿಸ್ಸಂಕೋಚವಾಗಿ ಹೇಳಿ.

  [Reply]

  VA:F [1.9.22_1171]
  Rating: +1 (from 1 vote)
 4. ಡಾಮಹೇಶಣ್ಣ
  ಮಹೇಶ

  {7 ನೇ ಗೆರೆಪೆಟ್ಟಿಗೆ(ಕಾಲಂ) ಧರ್ಮ: ಸನಾತನ / ವೈದಿಕ / ಹಿಂದೂ}
  ಇದರಲ್ಲಿ ಯಾವುದಾದರೂ ಒಂದು ಹೇಳಿ ಎಂತಕೆ? ಹಿಂದೂ ಹೇಳಿ ನಿರ್ದಿಷ್ಟವಾಗಿ ಹೇಳ್ಳಾವುತ್ತಿತ್ತನ್ನೆ?

  [Reply]

  VA:F [1.9.22_1171]
  Rating: 0 (from 0 votes)
 5. ದೊಡ್ಡಭಾವ

  ಡಾಮಹೇಶಣ್ಣ ಒಂದು ಉಪಕಾರ ಮಾಡಿದ°…
  ಪುಣ್ಯಕ್ಕೆ ಮಾತೃಭಾಷೆ ಸಂಸ್ಕೃತ ಹೇಳಿ ಬರೆಶುಲೆ ಹೇಳಿದ್ದಾ° ಇಲ್ಲೆ…
  {ಮೊ-ಬೈಲಿಲ್ಲಿ ಕೆಲವು ಸಮೋಸಂಗೊ ಹಾಂಗುದೇ ಬತ್ತಾ ಇದ್ದು}

  [Reply]

  VA:F [1.9.22_1171]
  Rating: 0 (from 0 votes)
 6. ಡಾಮಹೇಶಣ್ಣ
  ಮಹೇಶ

  ಗೊ೦ತಿಪ್ಪ ಭಾಷೆಗಳ ನಮೂದಿಸಲೆ ಕೋಲಮ್ ಒ೦ದಿದ್ದಡ, ಅಪ್ಪೊ ದೊಡ್ಡಭಾವ? ಎಲ್ಲೊರುದೆ ಅದರಲ್ಲಿ ಸ೦ಸ್ಕೃತ ಹೇಳಿ ಬರಶಲೆ ಮರೆಡಿ. ಅಲ್ಲಿ ಬೇರೆ ಭಾಷೆಗಳಿ೦ದ ಮೊದಲು ಸ೦ಸ್ಕೃತಕ್ಕೆ ಪ್ರಾಧಾನ್ಯ ಕೊಟ್ರೆ ಒಳ್ಳೆದು. ನಮ್ಮವಕ್ಕೆ ಎಲ್ಲೋರಿ೦ಗುದೆ ಸ೦ಸ್ಕೃತ ಗೊ೦ತಿದ್ದು. ರಜ್ಜ ಸಾಣೆಗೆ ಹಿಡುದರೆ ಸಾಕು!!

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಇದು ಸರಿಯಾದ ಮಾತು ಮಹೇಶಣ್ಣಾ, ಹಾಂಗೇ ಮಾಡುವೊ°

  [Reply]

  VA:F [1.9.22_1171]
  Rating: 0 (from 0 votes)
 7. ಅಜಕ್ಕಳ ಮಾಷ್ಟ್ರಣ್ಣ
  ajakkalagirisha

  ಜನಗಣತಿಲಿ ಜಾತಿಯ ಹೆಸರು ಬರವಲೆ ಜಾಗೆ ಇಲ್ಲೆ. ಜಾತಿ ಬರವಲೆ ಇಪ್ಪದು ಪ.ವರ್ಗ ಮತ್ತೆ ಪ.ಜಾತಿಗೊಕ್ಕೆ ಮಾಂತ್ರ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಅನುಶ್ರೀ ಬಂಡಾಡಿಚೂರಿಬೈಲು ದೀಪಕ್ಕವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿಪೆಂಗಣ್ಣ°ಅನಿತಾ ನರೇಶ್, ಮಂಚಿvreddhiನೀರ್ಕಜೆ ಮಹೇಶಹಳೆಮನೆ ಅಣ್ಣರಾಜಣ್ಣಸುವರ್ಣಿನೀ ಕೊಣಲೆಪವನಜಮಾವಕಳಾಯಿ ಗೀತತ್ತೆಬಟ್ಟಮಾವ°ಜಯಗೌರಿ ಅಕ್ಕ°ಶ್ಯಾಮಣ್ಣದೊಡ್ಡಮಾವ°ಜಯಶ್ರೀ ನೀರಮೂಲೆನೆಗೆಗಾರ°ಚೆನ್ನಬೆಟ್ಟಣ್ಣದೀಪಿಕಾಅಜ್ಜಕಾನ ಭಾವಅನು ಉಡುಪುಮೂಲೆಗಣೇಶ ಮಾವ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ