ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ – 6

ಇದು ಈ ವಾರದ ಕಂತು. ಎನ್ನ ಸಂಗ್ರಹಲ್ಲಿಪ್ಪ ಪದಗಳ ಅಕೇರಿಯಣ ಕಂತು.  ಆದರೆ ನಾವು ಹೊಸ ಜೆನ, ಹೊಸ ಜಾಗೆ ಹೇಳಿಕೊಂಡು ಹೊಸ ಹೊಸ ಅನುಭವ ಅಪ್ಪಗ ನಮ್ಮ ಸಂಗ್ರಹವವೂ ಹೆಚ್ಚಾವ್ತಲ್ಲದ ? ಎನ್ನ ಸಂಗ್ರಹಲ್ಲಿ ಪದಗ ಅಕ್ಷಯ ಆಗಿ ಬೈಲಿಲಿ ಹಾಕುವಷ್ಟಪ್ಪಗ ಪುನ ಇದರ ಮುಂದುವರುಸುವ ವಿಚಾರ ಇದ್ದು. ಇಷ್ಟು ದಿನ ಎಲ್ಲಾ ಕಂತುಗಳನ್ನೂ ತಾಳ್ಮೆಲಿ ಓದಿ, ತಿದ್ದಿ , ಅವರವರ ಅಭಿಪ್ರಾಯ ತಿಳುಸಿ ಪ್ರೋತ್ಸಾಹಿಸಿದ ಬೈಲಿನ ಎಲ್ಲವಕ್ಕೂ ಧನ್ಯವಾದಗ. ಈಗ ಹೀಂಗೆ ಓದಿ …

 • ಮಡಿಕ್ಕೆ – ಅಳಗೆ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಮೊದಲಣವ್ವು ಎಲ್ಲವೂ ಮಡಿಕ್ಕೆಯನ್ನೇ ಉಪಯೋಗುಸಿಕೊಂಡಿದ್ದದ್ದು.

 • ಮೆಟ್ಟು – ತೊಳಿ[ಕುಂಬ್ಳೆ]

ಪ್ರಯೋಗ : ಯಾರನ್ನಾದರೂ ಮೆಟ್ಟಿ ಹೋದರೆ ನಮಸ್ಕಾರ ಮಾಡೆಕ್ಕಡ.

 • ಮುಗ್ಗೆ – ಮುಗುಟು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಮುಗ್ಗೆ ಕೊಯ್ಲೆ ಕಸ್ತಲೆ ಅಪ್ಪ ಮೊದಲು ಹೋಯೆಕ್ಕು.

 • ಮಸರು – ಮೊಸರು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಇಂದು ಮಸರಿಗೆ ಹೆಪ್ಪಾಯ್ದಿಲ್ಲೆ.

 • ಮುಟ್ಟು – ಹೆರಗೆ[ಕುಂಬ್ಳೆ]

ಪ್ರಯೋಗ : ಮುಟ್ಟಾದವಕ್ಕೆ ದೇವಸ್ಥಾನಕ್ಕೆ ಪ್ರವೇಶ ನಿಷಿದ್ಧ.

 • ಮುಳ್ಸೌತೆ – ಚಕ್ಕರ್ಪೆ[ಕುಂಬ್ಳೆ]

ಪ್ರಯೋಗ : ಈ ಸರ್ತಿ ಎಂಗಳಲ್ಲಿ ಮೂಳ್ಸೌತೆ ಆಯ್ದು.

 • ಮೇಲೆ – ಮೇಗೆ [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಮೇಲಣ ಸಾಲಿಲಿ ತರಕಾರಿ, ಕೆಲಣ ಸಾಲಿಲಿ ಹೂಗಿನ ಗಿಡಗ ನೆಟ್ಟಿದ್ಯ.

 • ಮೈ ಉದ್ದು – ಮೈ ವರೆಸು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಮಳೆಲಿ ನೆನುಕೊಂಡು ಬಂದು ಮೈ ಉದ್ದದ್ದ್ರೆ ಶೀತ ಅಕ್ಕು.

 • ಮುಟ್ಟಿ ಕೊಂಬದು(ದೋಸೆಗೆ) – ಕೂಡುದು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಇಂದು ದೋಸೆಗೆ ಮುಟ್ಟಿಕೊಂಬಲೆ ಬಾಳೆಹಣ್ಣು ರಸಾಯನ.

 • ಮುಳುಗ್ಸು – ಮುಂಗುಸು/ಮುನುಗುಸು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :  ಚೀಟಿ ವ್ಯವಹಾರಕ್ಕೆ ಸರಿ ಗೊತ್ತಿಲ್ಲದೆ ಸೇರಿರೆ ಮುಳುಗ್ಸುಗು.

 • ಯಾರು – ಆರು [ಕುಂಬ್ಳೆ]

ಪ್ರಯೋಗ : ಯಾರು ಬಂದದ್ದು ಒಟ್ಟಿಗೆ?

 • ಯಾವುದು – ಯೇವದು[ಕುಂಬ್ಳೆ]

ಪ್ರಯೋಗ : ಯಾವುದಾದರೂ ಒಂದು ತೆಕ್ಕೊಂಡು ಬಾ.

 • ರಸ – ಎಸರು [ಕುಂಬ್ಳೆ]

ಪ್ರಯೋಗ : ಉಪ್ಪಿನಕಾಯಿ ಮಿಡಿಯೊಟ್ಟಿಗೆ ಚೂರು ರಸವನ್ನೂ ಬಳುಸಿ.

 • ವಸ್ತ್ರ ಹರುಗುದು – ವಸ್ತ್ರ ಆರ್ಸುದು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ವಸ್ತ್ರ ಹರುಗುಲಾದ್ರು ಎನಿಗೆ ಚೂರು ಸಹಾಯ ಮಾಡು.

 • ಸ್ವರ – ಅಜನೆ[ಕುಂಬ್ಳೆ]

ಪ್ರಯೋಗ : ಸ್ವರ ಕೇಳಿರೆ ನಮ್ಮ ತಿಮ್ಮಣ್ಣ ಮಾವ ಮಾತಾಡಿದಂಗೆ ಕೇಳ್ತು.

 • ಸೀದ – ಸೀತ[ಕುಂಬ್ಳೆ]

ಪ್ರಯೋಗ : ಸೀದ ಹೋಗಿ ಎಡಕ್ಕೆ ತಿರುಗಿ.

 • ಸಾರ್ಸು – ಬಳುಗು [ಕುಂಬ್ಳೆ]

ಪ್ರಯೋಗ : ಉಂಡಾದ ಮೇಲೆ ಸಗಣಿಲಿ ಸಾರ್ಸುತ್ತವು.

 • ಸಗಣಿ – ಸಗಣ [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :ಸಗಣಿಂದ ವಿಭೂತಿ ತಯಾರು ಮಾಡ್ಲಾವ್ತು.

 • ಸೂಳೆ ಹುಳು – ಹಿಸ್ಕು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಮಳೆಗಾಲ ಕಳುದ ಹಾಂಗೆ ಸೂಳೆಹುಳುಗಳ ಕಾಟ ಸುರುವಾವ್ತು.

 • ಸೌದಿ – ಹೊಳ್ಳಚ್ಚು[ಕುಂಬ್ಳೆ]

ಪ್ರಯೋಗ : ಈಗ ಸೌದಿಗೆ ಹೋಪವ್ವು ಯಾರೂ ಇಲ್ಲೆ.

 • ಸೀರೆ ಉಡು – ಸೀರೆ ಸುತ್ತು[ಕುಂಬ್ಳೆ]

ಪ್ರಯೋಗ : ಹೆಮ್ಮಕ್ಕೊಗೆ  ಜೆಂಬ್ರಲ್ಲಿ  ಸೀರೆ ಉಡುವ ಗೌಜಿಯೇ ಗೌಜಿ..

 • ಹೋಳು  – ಭಾಗ [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಎನಿಗೆ ಹೋಳು ಮಾತ್ರ ಸಾಕು, ರಸ ಬೇಡ.

 • ಹಟ್ಟಿ – ಕೆದೆ[ಕುಂಬ್ಳೆ]

ಪ್ರಯೋಗ : ಮಕ್ಕ ಎಲ್ಲ ಹಟ್ಟಿ ಹತ್ರ ಹೋಗಿ ಕರುವಿನ ನೋಡಿ.

 • ಹಾಯಿಕೊಂಬದು – ಅಂತುಗೊಂಬದು[ಕುಂಬ್ಳೆ]

ಪ್ರಯೋಗ : ಬಳುಸೆಕ್ಕುಳಿಯೆ ಇಲ್ಲಪ್ಪ, ಎಂಗ ಹಾಯಿಕೊಳ್ತ್ಯ.

 • ಹುಳಿದೋಸೆ – ಉದ್ದಿನ ದೋಸೆ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಹುಳಿದೋಸೆಯೂ ಮಾವಿನಣ್ಣು ರಸಯಾನವೂ ಒಳ್ಳೆ ರುಚಿ ಆವ್ತು.

 • ಹರುವಿ – ಮಂಡಗೆ [ಕುಂಬ್ಳೆ]

ಪ್ರಯೋಗ :ಮೀಲೆ ಹೋದವ್ವು ಹರುವಿ ತುಂಬ್ಸಿ ಬರೆಕ್ಕು.

 • ಹೀರೆಕಾಯಿ – ದಾರಳೆಕಾಯಿ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಹೀರೆಕಾಯಿ ಸಿಪ್ಪೆಯ ಚಟ್ನಿ ಭಾರೀ ಲಾಯ್ಕಾವ್ತು.

 • ಹೆಡಿಗೆ – ಹೆಡಗೆ, ಭಟ್ಟಿ[ಬೇರೆ ಎಲ್ಲ ಸೀಮೆಗಳಲ್ಲಿ  ಹೆಡಗೆ/ಕುಂಬ್ಳೆಲಿ ಭಟ್ಟಿ]

ಪ್ರಯೋಗ :ಅಡಿಕ್ಕೆ ಹಾಕುಲೆ ಒಂದು ಹೆಡಿಗೆ ತಾ.

ಹೆಡಿಗೆಗಳಲ್ಲಿಯೂ ನಾನಾ ವಿಧಗ ಇದ್ದು.ಮಣ್ಣಹೆಡಿಗೆ, ಗೊಬ್ಬರದಹೆಡಿಗೆ, ಅಡಿಕ್ಕೆಹೆಡಿಗೆ ,ಅನ್ನದ ಹೆಡಿಗೆ ಹೀಂಗೆ. ಹೆಡಿಗೆಯ ‘ಎಂಜೀರು’,’ಮಾದೇರಿ’ ಬಳ್ಳಿ ಅಥವಾ ಬೆತ್ತಂದ ಮಾಡ್ತವು. ಎಂಜಿರಿಂದ ಮಾಡಿದ ಹೆಡಿಗೆಗೆ  ‘ಎಂಜಿರೆಡಿಗೆ’ ಹೇಳ್ತವು. ಮಾದೇರಿ ಬಳ್ಳಿಂದ ಮಾಡಿದ ಹೆಡಿಗೆಲಿ ಅನ್ನ ಹಾಕಿರೆ ಅನ್ನ ಕೈಂಕುತ್ತು ಹೇಳ್ತವು. ಹಾಂಗಾಗಿ ಅನ್ನಕ್ಕೆ ಮಾತ್ರ ಯಾವಾಗಲೂ ಎಂಜಿರೆಡಿಗೆಯನ್ನೇ ಉಪಯೋಗುಸುದು.

ಜಯಗೌರಿ ಅಕ್ಕ°

   

You may also like...

22 Responses

 1. Umadevi says:

  Innondu shabda nempaathu – “boguni”, bere seemeli “thapale”. Enige ningla sangrahango 1 matthu 2 odule sikkiddille. Hangaagi eegle ningo idra bardiploo saaku. Baruddi heli aadre ee message ignore maadi. 🙂

  • ರಘುಮುಳಿಯ says:

   ಉಮಾದೇವಿ ಅಕ್ಕಾ,
   ಪ೦ಜ ಸೀಮೆಯ ಭಾಷೆಯ ವಿಷಯಲ್ಲಿ ನಿ೦ಗಳ ಆಸಕ್ತಿ ನೋಡಿ ಕೊಶಿ ಆತು.ಪುಟದ ಮೇಗೆ “ನಮ್ಮ ಭಾಷೆ ಅ೦ಕಣದ ಎಲ್ಲಾ ಶುದ್ದಿಗೊ” -ಇದರ ಒತ್ತಿರೆ ನಿ೦ಗೊಗೆ ಸ೦ಬ೦ಧಪಟ್ಟ ಎಲ್ಲಾ ಶುದ್ದಿಗೊ ಸಿಕ್ಕುಗು.
   ಹಾ೦ಗೆಯೇ ಕನ್ನಡ ಲಿಪಿಲಿ ಬರೆಯೆಕ್ಕಾರೆ ಪುಟದ ಬಲದ ಹೊಡೆಲಿ ಮೇಲೆ ವೆವಸ್ತೆ ಇದ್ದು.
   ಧನ್ಯವಾದ.

 2. ಪ೦ಜ ಸೀಮೆಲಿ ಜಿರಳೆಗೆ ಪಿನ್ನೆ ಹೇಳ್ತ ಪದ ಪ್ರಯೋಗ ಇದ್ದತ್ತಡ
  ಪಿನ್ನೆ = ಜಿರಳೆ

 3. ಈಗಲೂ ಹಳಬರು ಹೆಳೂದು ಪಿನ್ನೆಳಿ ಹೆಳ್ತವು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *