ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ – 5

April 20, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಪದಗ ಇಲ್ಲಿದ್ದು. ನಮ್ಮ ಪಂಜ, ಪುತ್ತೂರು, ವಿಟ್ಲ, ಕೋಳ್ಯೂರು, ಕುಂಬ್ಳೆ ಮುಂತಾದ ಸೀಮೆಗಳ ಹೆಸರು ಮತ್ತು ಅಲ್ಯಾಣ ಕೆಲವು ಪದಗ ಮಾತ್ರವೇ ಎನಿಗೆ ಗೊತ್ತಿಪ್ಪದು. ಅದರ   ಪ್ರಕಾರ ಪದಗಳ ಆಯಾಯ ಸೀಮೆಗೊಕ್ಕೆ ಹೊಂದುಸುವ ಪ್ರಯತ್ನಲ್ಲಿ  ಕಂಸಲ್ಲಿ ಹಾಕಿದ್ದೆ. ಆದರೆ ಒಟ್ಟು ಎಂಟು ಸೀಮೆಗ ಇದ್ದು ಹೇಳುದು ಕೇಳಿದ್ದೆ.ಹಂಗಾಗಿ ಇನ್ನು ಒಳುದ ಸೀಮೆಗಳ ಹೆಸರು ಮತ್ತು ಅಲ್ಲಿ ಬೇರೆ ರೀತಿಯ ಪದ ಪ್ರಯೋಗ ಇದ್ರೆ ಗೊತ್ತಿಪ್ಪವ್ವು ದಯಮಾಡಿ ತಿಳುಸೆಕ್ಕು.

 • ದೋಸೆ ಹನ್ಸುದು – ದೋಸೆ ಎರವದು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ನಿಂಗ ಕೂರ್ತಿದ್ರೆ ದೋಸೆ ಹನ್ಸುಲಕ್ಕು.

 • ದೀಪ  ಕೂಡು [ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ದೇವರ ದೀಪ ಗರ್ಕುಲಾಗ,ಕೂಡೆಕ್ಕು.

ದೀಪ ಹೊತ್ತುಸುಲೆ ಬೆಂಕಿಯ ಒಲೆಂದ ತಂದದ್ದಾದರೆ ಪೂಜೆ ಆದ ಮೇಲೆ ಬತ್ತಿಯ ವಾಪಾಸು ಒಲೆಗೆ ಹಾಕುವ ಪದ್ಧತಿ ಇದ್ದು.ಇದಕ್ಕೆ ದೀಪ ಕೂಡುದು ಹೇಳ್ತವು.ಮತ್ತೊಂದು ಸಂದರ್ಭಲ್ಲಿ ನಾವು ಗುಂಟ ದೀಪದ ೫ ಪ್ರತಿ ನೆಣೆಯ ಪೂಜೆ ಮುಗುದ ಮೇಲೆ ಒಂದು ಮಾಡುದಕ್ಕೆ ದೀಪ ಕೂಡುದು ಹೇಳ್ತವು. ಆದರೆ ನಿತ್ಯಣ ದಿನಲ್ಲಿ ದೇವರಿಗೆ ಹೊತ್ತುಸಿದ ದೀಪ ಎಣ್ಣೆ ಇಲ್ಲದೆ ಅಲ್ಲಿಗೆ ನಂದುಲೆ ಬಿಡದ್ದೆ ಎಣ್ಣೆ ಮುಗಿವ ಮೊದಲೆ ದೀಪ ನಂದುಸುದಕ್ಕೆ ದೀಪಕೂಡುದು ಹೇಳಿ ಪಂಜ ಸೀಮೆಲಿ ಹೇಳ್ತವು.

 • ದೇವರ ಕೋಣೆ/ದೇವರೊಳ  – ತೆಂಕೊಳ [ಕುಂಬ್ಳೆ]

ಪ್ರಯೋಗ : ಪ್ರಸಾದ ತೆಕ್ಕೊಂಬ್ಲೆ ದೇವರೊಳ ಬನ್ನಿ.

ದೇವರ ಕೋಣೆಯು  ಹೆಚ್ಚಾಗಿ ವಾಸ್ತು ಪ್ರಕಾರ ತೆಂಕು ದಿಕ್ಕಿಲಿ ಇಪ್ಪ ಕಾರಣ ತೆಂಕೊಳ ಹೇಳುವ ಹೆಸರು.

 • ನಿಲ್ಲುದು – ನಿಂಬದು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಅವ ನಿಲ್ಲುದು ನೋಡಿರೆ ನಮ್ಮ ಪುಟ್ಟ ಭಾವನಾಂಗೆ ಕಾಣ್ತು.

 • ನೇಚು – ನೆಗ್ಗು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :ಇಷ್ಟು ದೊಡ್ಡ ಕಟ್ಟ ನೇಚುಲೆ ಎನ್ನಂದೆಡಿಯ.

 • ನಿದ್ದೆ – ವರಕ್ಕು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಮಕ್ಕ ಎಲ್ಲ ನಿದ್ದೆ ಬತ್ತಿದ್ರೆ ರಗಳೆ ಮಾಡದ್ದೆ ಮನುಗಿ.

 • ಪೂಂಬೆ – ಕುಂಡಿಗೆ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಪೂಂಬೆ ಚಟ್ನಿ ಗಂಜಿಯೊಟ್ಟಿಗೆ ಲಾಯ್ಕಾವ್ತು.

 • ಪಾತ್ರೆ ತೊಳಿಯುದು – ಪಾತ್ರೆ ತೊಳವದು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಪಾತ್ರೆ ತೊಳಿಲೆ ಒಂದು ರಾಶಿ ಇದ್ದು.

 • ಪಟ್ಲಕಾಯಿ – ಪಟಕಿಲ [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಯಾರಾರು ಹೋಗಿ ನಾಕು ಪಟ್ಲಕಾಯಿ ಕೊಯ್ಕೊಂಡು ಬನ್ನಿ.

 • ಪರಂಗಿ ಚೆಕ್ಕೆ – ಅನಾನಸು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಪರಂಗಿ ಚೆಕ್ಕೆ ಮೆಣಸುಕಾಯಿ ಮಾಡಿರೆ ಒಳ್ಳೆದಕ್ಕು..

 • ಪೂಜಿ/ಚೆಂದಕ್ಕೆ ಉಣ್ಣು – ಮನಾರಲ್ಲಿ ಉಣ್ಣು[ಕುಂಬ್ಳೆ]

ಪ್ರಯೋಗ: ಮಕ್ಕೊಗೆ ಸಣ್ಣಾಗಿಪ್ಪಗಳೇ ಪೂಜಿ ಉಂಬುದರ ಹೇಳಿಕೊಡೆಕ್ಕು.

 • ಬಂದಿದು – ಬೈಂದು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :ವಿಷು ಸ್ಪರ್ಧೆಯ ಫಲಿತಾಂಶ  ಕಳುದ ಭಾನುವಾರ ಬಂದಿದು. [ಬೇರೆ ಎಲ್ಲ ಸೀಮೆಗಳಲ್ಲಿ]

 • ಬಗ್ಗುಸುದು – ಎರವದು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ: ಎಣ್ಣೆ ಚೆಲ್ಲದ್ದಾಂಗೆ ಬಗ್ಗುಸೆಕ್ಕು.

 • ಬದಲ್ಸುದು  – ಮಾತುದು[ಕುಂಬ್ಳೆ]

ಪ್ರಯೋಗ :ದಿಬ್ಬಣಲ್ಲಿ ಹೋಗಿ ಮತ್ತೆ ಸೀರೆ ಬದಲ್ಸುದು.

 • ಬೆಳಗಪ್ಪದು – ಉದಿಯಪ್ಪದು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ: ಬೆಳಗಪ್ಪಗ ಬೇಗ ಏಳುದು ಒಳ್ಳೆ ಹವ್ಯಾಸ.

 • ಬೆಳಗಂಞಾವ – ಉದೆಗಾಲ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :ಬೆಳಗಂಞಾವಕ್ಕೆ ಬೆಂಗ್ಳೂರಿಂದ ಇಲ್ಲಿಗೆ ಎತ್ತಿದ್ದು ಅದು.

 • ಬಾಯಾರಿಕೆ – ಆಸರು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಬಾಯಾರಿಕೆಗೆ ಕುಡಿಲೆ ಪನರ್ಪುಳಿ ಸರ್ಬತ್ತು ಅಕ್ಕಾ?

 • ಬರಿರಿ – ಬರೆಯಿ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಎಲ್ಲವೂ ಪದ್ಯ ಬರಿರಿ.

 • ಬೆಳ್ಕು – ಬೆಣಚ್ಚು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಒಂದು ಚೂರೂ ಬೆಳ್ಕಿಲ್ಲದ್ದಿಪ್ಪಲ್ಲಿ ನಡಿಯುದಾದ್ರೂ ಹೇಂಗೆ?

 • ಬೀಸುದು – ಕಡವದು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :ನಾಳೆ ದೋಸೆಗೆ ಅಕ್ಕಿ ಬೀಸೆಕ್ಕಷ್ಟೆ.

 • ಬೆಂಕಿ – ಕಿಚ್ಚು [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ :ಅಬ್ಬಿಲಿ ಬೆಂಕಿನಂದಿತ್ತಾಳಿ ನೋಡೆಕಾತು ಒಂದ್ಸರ್ತಿ.

 • ಬಿಲ್ಯಾ – ಮಿನಿಯಾ[ಕುಂಬ್ಳೆ]

ಪ್ರಯೋಗ :ಲಾಯ್ಕು ಓದಿ ಉಶಾರಿ ಆಯೆಕ್ಕು ಬಿಲ್ಯಾ?

 • ಬೈಹುಲ್ಲು – ಬೆಳುಲು[ಕುಂಬ್ಳೆ]

ಪ್ರಯೋಗ :ಆ ಬೈಹುಲ್ಲಿನ ಎಡೇಲಿ ಮೊನ್ನೆ ಒಂದು ಹೆಬ್ಬಾವಿತ್ತು.

 • ಬೈಸಾರಿ – ಹೊತ್ತೋಪಗ [ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ಹೊತ್ತು ಕಳಿಲೆ ಬೈಸಾರಿ ಉದ್ದಾಕೆ ಒಂದೊಂದು ಸರ್ತಿ ಹೋಪದು.

 • ಬತ್ತಿ – ನೆಣೆ[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ದೀಪಕ್ಕೆ ಬತ್ತಿ ಮುಗುದ್ದು, ತರೆಕ್ಕಷ್ಟೆ.

 • ಬಣಲೆ – ಚಿಂಚಟ್ಟಿ,ಎಣ್ಣೆ ಬಾಳ[ಕುಂಬ್ಳೆ]

ಪ್ರಯೋಗ : ಹೊರುದೂ ಹೊರುದು ಆ ಬಣಲೆ ಕಪಾಯ್ದು.

 • ಬಾಯಿ ಕಳಿಯುದು  – ಬಾಯೊಡವದು[ಬೇರೆ ಎಲ್ಲ ಸೀಮೆಗಳಲ್ಲಿ]

ಪ್ರಯೋಗ : ನೋಡ, ಒಂದು ಸರ್ತಿ ಬಾಯಿ ಕಳಿ ಮದ್ದು ಕುಡಸುತ್ತೆ.

ಮತ್ತಷ್ಟು ಪದಗೊಕ್ಕೆ ಬಪ್ಪ ವಾರದವರೆಗೆ  ಕಾಯಿರಿ..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ರಾಮಚಂದ್ರ ಮಾವ°

  ಬಗ್ಗುಸುದು – ಎರವದು. ಸಂದರ್ಬಕ್ಕೆ ಸರಿಯಾಗಿ. ಅವನ/ಅದರ ಬಗ್ಗುಸುಲೆ ಎಡಿಯ, ಅರ್ಥ ಬೇರೆಯೇ ಅಲ್ಲದೊ?

  [Reply]

  VN:F [1.9.22_1171]
  Rating: 0 (from 0 votes)
 2. ಜಯಗೌರಿ ಅಕ್ಕ°

  ಪಂಜ ಸೀಮೆಲಿ ‘ಎರವದು’ ಹೇಳುವದರ ಪ್ರಯೋಗ ಇಲ್ಲೆ. ಎರವದಕ್ಕೂ ಬಗ್ಗುಸುದು, ಅವನ/ಅದರ ಬಗ್ಗುಸುದಕ್ಕೂ ‘ಬಗ್ಗುಸುದು’ ಹೇಳಿಯೇ ಹೇಳುದು.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ॥ ಆನೋ ಭದ್ರಾಃ ಕ್ರತವೋ ಯ೦ತು ವಿಶ್ವತಃ ॥

  ಪ೦ಜ ಸೀಮೆಯ ಹವಿಗನ್ನಡಕ್ಕೆ ಆ ಪರಿಸರದ ಅರೆಗನ್ನಡ ಭಾಷೆಯ ಪ್ರಭಾವವುದೆ ಆಯಿದು ಹೇದು ಅಭಿಪ್ರಾಯ ಇದ್ದು. ಸಾಧ್ಯವಿದ್ದರೆ ಅ೦ಥ ಪದ೦ಗಳನ್ನುದೆ ಗುರುತಿಸಿರೆ ಭಾಷೆಯ ಬೆಳವಣಿಗೆಯ ದೃಷ್ಟಿಲಿ ಹಾ೦ಗೂ ಭಾಷಾವಿಜ್ಞಾನ[Linguistic]ದ ಅಧ್ಯಯನಕ್ಕೂ ಬಾರೀ ಸಕಾಯ ಅಕ್ಕು.ಈ ವಿಚಾರಲ್ಲಿ ನಿ೦ಗೊಪ್ರಯತ್ನ ಮಾಡೆಕು ಹೇದು ಇತ್ಲಾ೦ಗಿ೦ದ ಕೋರಿಕೆ. ನಿ೦ಗ ಮಾಡ್ತಾ ಇಪ್ಪ ಈ ಘನ ಕಾರ್ಯಕ್ಕೆ ತು೦ಬು ಹೃದಯದ ಪ್ರೋತ್ಸಹದೊಟ್ಟಿ೦ಗೆ ಕಯಿಮುಗುದು ಧನ್ಯವಾದ೦ಗೊ.ನಮಸ್ತೇ ಅಕ್ಕ. ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 3. ಜಯಗೌರಿ ಅಕ್ಕ°

  ನಮಸ್ತೆ ಅಪ್ಪಚ್ಚಿ,

  ನಿಂಗಳಂತ ಹಿರಿಯವ್ವು ಕೈ ಮುಗುದ್ರೆ ತುಂಬಾ ಸಂಕೋಚ ಆವ್ತು ಅಪ್ಪಚ್ಚಿ..ನಿಂಗಳ ಪ್ರೋತ್ಸಾಹ,ಉತ್ಸಾಹ,ಜ್ಞಾನವ ಎಂಗೊಗೂ ಕೊಟ್ಟು ಆಶೀರ್ವದಿಸಿದ್ರೆ ಅಷ್ಟೆ ಸಾಕು ಅಪ್ಪಚ್ಚಿ.

  ಅರೆಗನ್ನಡದ ಜ್ಞಾನ ಎನಿಗೆ ಅಷ್ಟಿಲ್ಲೆ. ಆದರೂ ಯಾರನ್ನಾದರೂ ಕೇಳಿ ತಿಳುದು ಹವಿಗನ್ನಡ ಮತ್ತು ಅರೆಗನ್ನಡದ ಸಾಮಾನ್ಯ ಪದಗಳ ಸಂಗ್ರಹ ಮಾಡ್ಲೆ ಖಂಡಿತ ಪ್ರಯತ್ನ ಮಾಡ್ತೆ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಅಬ್ಬೋ ಜಯಗೌರಿ ನಿನ್ನ ಸ೦ಕೋಚ ಅರ್ಥ ಆತು. ನಮಃ ಅಥವಾ ನಮಸ್ಕಾರವ ಆರು ಆರಿ೦ಗುದೆ ಮಾಡ್ಲಕ್ಕು ಹೇದು ನಮ್ಮ ಪ್ರಾಚೀನ ಪರ೦ಪರೆ ಹೇಳಿಕೆ ಇದ್ದು. ಇಲ್ಲಿ ಕಯಿಮುಗಿವದು ಹೇದರೆ ಕಯಿ ಜೋಡಿಸಿ ಹೃದ್ಯಯಕ್ಕೆ ತಾಗುಸಿ ಹೇಳುವ ನಮಸ್ಕಾರ.ಇದು ಕಾಯೇನ ವಾಚಾ, ಮನಸಾ[ಕಾಯಿಕ, ವಾಚಿಕಾ, ಮಾನಸಿಕ]ಹೇಡು ತ್ರಿಕರಣ೦ದ ಮಾಡುವದು.ನಮ್ಮ ಅ೦ತರಾತ್ಮ ಅ೦ತದೇ ಇನ್ನೊ೦ದು ದೇಹದಲ್ಲಿಪ್ಪಆತ್ಮಕ್ಕೆ ಶ್ರದ್ಧಾ ಪೂರ್ವಕ ಸಲ್ಲುಸುವ ಗೌರವ.ನ=ಇಲ್ಲ;ಮ=ನನ್ನದು. ನಮಃ ಹೇದರೆ ಎನ್ನದು ಎತ್ಸು ಇಲ್ಲ. ಹೋಮಲ್ಲಿ ಆಹುತಿ ಕೊಡುವಾಗ ನ ಮಮ ಹೇಳುವ ಹಾ೦ಗೆ. ಜೀವರಾಶಿಲಿಪ್ಪ ಅಣುರೂಪೀ ಭಗವ೦ತನ ಅ೦ಶದ ಆತ್ಮಕ್ಕೆ ನಾವು ಸಮರ್ಪಣೆ ಮಾಡುವ ಭಕ್ತಿಯ ಕಾಣಿಕೆ ಅಷ್ಟೆ.ಗೀತಾಚಾರ್ಯ “ ಈಶ್ವರಃ ಸರ್ವಭೂತಾನಾ೦ ಹೃದ್ದೇಶೇsರ್ಜುನ ತಿಷ್ಠತಿ.” ಹಾ೦ಗೇ “ ಸರ್ವ ಭೂತಾನಾ೦ ಹೃದ್ದೇಶೇ ಈಶ್ವರ ತಿಷ್ಠತಿ.” ಇತ್ಯಾದಿ ಮಾತುಗೊ ಇದರನ್ನೇ ಪ್ರತಿಪಾದನೆ ಮಾಡುತ್ತು.ಹಾ೦ಗಾಗಿ ಸಣ್ಣವಕ್ಕೆ [ಪ್ರಾಯಲ್ಲಿ]ದೊಡ್ಡವುದೆ ಕಯಿಮುಗುದು ನಮಃ ಹೇದರೆ ಅದರಲ್ಲಿ ಸ೦ಕೋಚ ಮಾಡಿಗೊ೦ಬ ಅಗತ್ಯ ಇಲ್ಲೆ ಆತೋ.ರುದ್ರಚಮೆ ಇತ್ಯಾದಿ ವೇದ ಮ೦ತ್ರಗಳ ಗಮನಿಸಿರೆ ಗಿಡ, ಮರ,ಇತ್ಯಾದಿ ಜೀವ ಜ೦ತುಗಕ್ಕೆ ಸಾನು ನಮಃ ಹೇದ ಉದಾಹರಣಗೊ ಇದ್ದು! ಇದರೆಲ್ಲ ಉದ್ದೇಶ ಒ೦ದೇ. ಸಕಲ ಜೀವಾತ್ಮ೦ಗಳಲ್ಲಿಯುದೆ ಪರಮಾತ್ಮನ ಕ೦ಡುಗೊಳೆಕು.ಇದು ನಮ್ಮ ಭಾರತೀಯ ಸನಾತನ ಆರ್ಷೇಯ ಜೀವ ನಾಡಿಯ ಉಸಿರಿನ ಸತ್ವಾರ್ಥ. ನಾವು ನಿತ್ಯಕರ್ಮಲ್ಲಿ ಹೇಳ್ತಿಲ್ಲಿಯೋ “ ಆಕಾಶಾತ್ ಪತಿತ೦ ತೋಯ೦ ……… ಸರ್ವದೇವ ನಮಸ್ಕಾರ ಕೇಶವೋ ಪ್ರತಿಗಚ್ಛತಿ.”ಹಾ೦ಗೆ ತಿಳ್ಕೊಳೆಕಾವುತ್ತು. ಇರಲಿ ನಿನ್ನ ಆಸಕ್ತಿ ನೋಡಿ ಕೋಶಿಲಿ ಇದೆಲ್ಲ ಬರದೋತು ಮಿನಿಯ.ಧನ್ಯವಾದ. ನಮಸ್ತೇ. ಹರೇ ರಾಮ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಬೋಸ ಬಾವಪುತ್ತೂರುಬಾವಮಾಲಕ್ಕ°ವಾಣಿ ಚಿಕ್ಕಮ್ಮಬಟ್ಟಮಾವ°ಶುದ್ದಿಕ್ಕಾರ°ಅನುಶ್ರೀ ಬಂಡಾಡಿಪುಣಚ ಡಾಕ್ಟ್ರುಅಜ್ಜಕಾನ ಭಾವಜಯಗೌರಿ ಅಕ್ಕ°ಪೆಂಗಣ್ಣ°ಕೇಜಿಮಾವ°ಡೈಮಂಡು ಭಾವಶ್ರೀಅಕ್ಕ°ಪವನಜಮಾವದೊಡ್ಡಮಾವ°ಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕನೀರ್ಕಜೆ ಮಹೇಶತೆಕ್ಕುಂಜ ಕುಮಾರ ಮಾವ°ಸರ್ಪಮಲೆ ಮಾವ°ದೇವಸ್ಯ ಮಾಣಿಒಪ್ಪಕ್ಕಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ