Oppanna.com

ಕಾಯಿ -ಬೆಲ್ಲ -ಅಕ್ಕಿ

ಬರದೋರು :   ಗೋಪಾಲಣ್ಣ    on   13/07/2014    8 ಒಪ್ಪಂಗೊ

ಗೋಪಾಲಣ್ಣ

ಭಾರೀ ಗಾಳಿ -ಮಳೆ !
ಚುಬ್ಬಣ್ಣನ ತೋಟಲ್ಲಿ ತೆಂಗಿನಮರ-ರಜಾ ಹಳೆ ಮರವೇ -ಮುರಿದು ಬಿದ್ದತ್ತು .
ಮಕ್ಕೊ ತೋಟಕ್ಕೆ ಓಡಿದವು.
ಕರ್ಕು-ಬೊಂಡ-ಬನ್ನಂಗಾಯಿ -ಬೆಳೆದ ಕಾಯಿ ಎಲ್ಲಾ ತಂದು ಮನೆ ಜಗಲಿಲಿ ರಾಶಿ ಹಾಕಿದವು.
ಮರ ಮುರಿದು ಹೋದದ್ದು ನಷ್ಟ ; ಮರದ ಕೊಬೇಲಿ ಇಪ್ಪದರ ಬಿಟ್ಟರೆ ಅದೂ ನಷ್ಟವೇ.ಹಾಂಗಾಗಿ ಚುಬ್ಬಣ್ಣ ಎಂತದೂ ಬೈವ ಮನಸ್ಸು ಮಾಡಿದ್ದ ಇಲ್ಲೆ. ಮಕ್ಕೊಗೆ ಬೊಂಡ ಕೆತ್ತಿ ಕೊಟ್ಟ. ನೀರು ಕುಡುದ ಮೇಲೆ ಅದಕ್ಕೆ ಪಾವೆಗೆ ಅವಲಕ್ಕಿ -ಸಕ್ಕರೆ ಹಾಕಿ ಬೆರಸಿ ತಿಂದೂ ಆತು. ಬನ್ನಂ ಗಾಯಿ ಮರದಿನ ದೋಸೆ ಮಾಡಲೆ ಬೇಕು ಹೇಳಿ ಸೊಲುದು ಮಡಗಿ ಆತು.
ಮತ್ತೆ ಅವನದ್ದು ಮಕ್ಕಳ ಹತ್ತರೆ ಚೋದ್ಯ-
“ಇದಾ, ಈಗ ಎಲ್ಲರಿಂಗೂ ಬೊಂಡ ತಿಂದಾತು .ಈಗ ಹೇಳಿ, ನಮ್ಮಲ್ಲಿ ಅಕ್ಕಿ ಕಾಯಿ ಬೆಲ್ಲ/ಸಕ್ಕರೆ -ಇದರ ಬೇರೆ ಬೇರೆ ರೂಪವ ಮಾತ್ರ ಸೇರಿಸಿ ಎಷ್ಟು ಬಗೆ ಪಾಕ ಮಾಡ್ಲೆ ಆವುತ್ತು? ಆದರೆ ಒಂದು ಶರ್ತ -ಅದಕ್ಕೆ ಉದ್ದು,ಹಸರು ,ಕಡ್ಲೆ ಮುಂತಾದ ಏವ ಧಾನ್ಯ ಸೇರಿಸಲಾಗ. ಪರಿಮಳಕ್ಕೆ ಏಲಕ್ಕಿ ,ರಜಾ ತುಪ್ಪ ಬೇಕಾದರೆ ಸೇರಿಸಲಕ್ಕು .”
ಮಗ-ಅವಲಕ್ಕಿ ,ಹೊದಳು,ಕಡಿ ಅಕ್ಕಿ,ಅಕ್ಕಿ ಹೊಡಿ -ಎಂತಾದರೂ ಅಕ್ಕನ್ನೇ ? ಕಾಯಿ,ಕೊಬ್ಬರಿ,ಬೊಂಡ,ತೆಂಗಿನೆಣ್ಣೆ ಯಾವುದೂ ಅಕ್ಕನ್ನೇ ?
ಮಗಳು -ಹಿಂಡಿಯೂ ಅಕ್ಕು ,ಅಲ್ಲದೋ ಅಪ್ಪ?[ಕಿಲಕಿಲನೆ ನೆಗೆ ಮಾಡುತ್ತು ]
ಚುಬ್ಬಣ್ಣ- ಅಕ್ಕು.
ಮಗಳು-ಹಾಂಗಾರೆ ಎನಗೆ ಗೊಂತಾತು ! ಅಕ್ಕಿ ಪಾಯಸ,ಸುಟ್ಟವು,ಪಚ್ಚಪ್ಪ ,ಈಗ ನಾವು ತಿಂದ ಬೊಂಡ ಅವಲಕ್ಕಿ ಸಕ್ಕರೆ ,ಸೇಮಗೆ-ಕಾಯಿ ಹಾಲು ,ತೆಳ್ಳವು -ಕಾಯಿಸುಳಿ-ಬೆಲ್ಲ !
ಚುಬ್ಬಣ್ಣ-ಇನ್ನೂ ಇದ್ದು.
ಮಗ-ಅದೆಲ್ಲಾ ಎನಗೆ ಗೊಂತಿದ್ದು .
ಮಗಳು-ಹಾಂಗಾರೆ ಹೇಳು ಅಂಬಗ ! ಸುಮ್ಮನೆ ಬಡಾಯಿ ಕೊಚ್ಚುತ್ತ ಇವ!
ಮಗ-ಆನು ನಾಳೆ ಎಲ್ಲಾ ಬರದು ತೋರಿಸುತ್ತೆ .
[ಹವ್ಯಕರು ಈ ಮೂರು ಬಗೆಗಳ ವಿವಿಧ ರೂಪಂಗಳ ಹೊಂದಿಸಿ ಬೇರೆ ಬೇರೆ ರೀತಿ ಕಡೆದು,ಬೇಯಿಸಿ,ಕಾಸಿ,ಹೊರಿದು-ತಿಂಡಿ ಮಾಡಲೆ ಉಷಾರಿ. ನಿಂಗಳೂ ರಜಾ ರಜ್ಜ ಆಲೋಚನೆ ಮಾಡಿ ಮಾಣಿ ಬರೆವ ಪಟ್ಟಿಗೆ ಸೇರಿಸಿ ಸಹಾಯ ಮಾಡಿ ].

8 thoughts on “ಕಾಯಿ -ಬೆಲ್ಲ -ಅಕ್ಕಿ

  1. ಹಸಿಕಾಯಿ , ಏಲಕ್ಕಿ, ಬೆಲ್ಲ ಹಾಕಿ ಹೆಚ್ಚು ನೀರು ಹಾಕದ್ದೆ ಕಡದರೆ ಸೀವು ಚಟ್ನಿ ದೋಸೆ, ತೆಳ್ಳವಿಂಗೆ ಲಾಯಿಕಾವುತ್ತು. ಮತ್ತೆ ಹಾಲುಬಾಯಿ ನಮ್ಮ ಮದಲಣವರ ಅಡಿಗೆಯೇ ಅಲ್ಲದೋ?

  2. ಹರೇರಾಮ, ವಾಹ್ ಒಳ್ಳೆ ಶುದ್ದಿ ಗೋಪಾಲ . ಇದರ ಓದುವಾಗ ಕೊದಿ-ಕೊದಿ ಅವುತ್ತನ್ನೇ! ಬನ್ನಂಗಾಯಿ, ಅಕ್ಕಿ ಹಾಕಿ ಓಟುಪ್ಪಾಳೆ ಮಾಡ್ಳಾವುತ್ತು. ಎಳೆ ಬೊಂಡದ ಪಾವೆಯ ಸಕ್ಕರೆ ಹಾಕಿ,ಮಿಕ್ಸಿಲಿ ತಿರುಗಿಸಿ ಜೂಸು ಮಾಡ್ಳವುತ್ತು. . ಫ್ರಿಜ್ಜಿಲ್ಲಿ ಮಡಗೀರೆ ಬೇಸಗೆಲಿ ಕುಡಿವಲೆ ಒಳ್ಳೆದಾವುತ್ತು .ಇನ್ನೂ ಕೆಲಾವಿದ್ದು ಮತ್ತೆ ಹೇಳ್ತೆ ಆಗದೋ?

  3. ಕಾಯಿ ಬರ್ಫಿ, ಬೆಲ್ಲಸುಳಿಯ ಹೊದಳವಲಕ್ಕಿ, ಬೊಂಡದ ಓಡುಪ್ಪಾಳೆ, ಕಡಿ ಅಕ್ಕಿ ಉಂಡೆ -ರವೆ ಎಲ್ಲ ಮಾಡ್ಲಕ್ಕು

  4. ಬನ್ನಂಗಾಯಿ ದೋಸೆ, ರವೆ.

  5. ಹೋ.. ವೇಣಿಯಕ್ಕನೇ ಆಯೆಕ್ಕಷ್ಟೆಯೋ ಹೇಳಿ ಕಾಣ್ತು…

    1. ಅಡಿಗೆ ಸತ್ಯಣ್ಣ…?

      1. ಅಪ್ಪಪ್ಪು… ಅಡಿಗೆ ಸತ್ಯಣ್ಣಂದೇ ಅಕ್ಕು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×