ಗುರುಭಕ್ತಿ ಸ್ತೋತ್ರಮ್

April 25, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಲ್ಕುದಿನದ ಶಂಕರ ಜಯಂತಿ ಆಚರಣೆಯ ಪ್ರಯುಕ್ತ ಇಂದಿಂದ ನಮ್ಮ ಬೈಲಿಲಿ “ಗುರು ವಂದನಾ” ಶ್ಲೋಕಂಗಳ ಸಂಗ್ರಹ, ಶ್ರೀಅಕ್ಕನಿಂದ.
ಎಲ್ಲೋರುದೇ ಇದರ ಸದುಪಯೋಗ ಪಡೇಕು ಹೇಳ್ತದು ನಮ್ಮ ಆಶಯ.

ಗುರು ಅಷ್ಟಕಂ ಶ್ರೀ ಆದಿ ಶಂಕರಾಚಾರ್ಯರ ಒಂದು ಒಳ್ಳೆಯ ಕೃತಿ. ಸರಳ ಶಬ್ಧಂಗಳ ಪ್ರಯೋಗಿಸಿ ಒಬ್ಬ ಗುರುವಿನ ಮಹತ್ವ ಎಂತರ ಹೇಳಿ ವಿವರವಾಗಿ ಹೇಳಿದ್ದವು. ಮನುಷ್ಯ ಆಗಿ ಹುಟ್ಟಿ ನಾವು ಜೀವನಲ್ಲಿ ಯಾವುದೇ ಸಾಧನೆ ಮಾಡಿ ಮಹಾ ಮೇರುವಿನಷ್ಟು ಸಂಪತ್ತು ಗಳಿಸಿ, ಮನೆತನ, ಪತ್ನಿ, ಮಕ್ಕೋ ಪುಳ್ಯಕ್ಕಳ ಪಡದರೂ, ವೇದ ಶಾಸ್ತ್ರಂಗಳ ಓದಿ ಕವಿತ್ವವ ಗಳಿಸಿ ಹಲವಾರು ಕೃತಿ ರಚನೆ ಮಾಡಿದರೂ, ವಿದೇಶಲ್ಲಿ ಮಾನ್ಯತೆ ಸ್ವದೇಶಲ್ಲಿ ಸಂಪತ್ತು ಗಳಿಸಿದ್ದರೂ, ರಾಜ ಮಹಾರಾಜರು ಕಾಲಿಂಗೆ ಬೀಳುವ ವಿದ್ವತ್ತಿದ್ದರೂ, ಯಶಸ್ಸು ದಿಕ್ಕುಗಳಲ್ಲಿ ವ್ಯಾಪಿಸಿದ್ದರೂ ಯಾವುದೇ ವಿಚಾರಲ್ಲಿ ಅಗ್ರಗಣ್ಯ ಆಗಿದ್ದರೂ ಕೂಡ ಒಬ್ಬ ಗುರುವಿನ ಪಾದ ಪದ್ಮಕ್ಕೆ ಶರಣು ಬಾರದ್ದರೆ ಈ ಸೌಭಾಗ್ಯಂಗ ಎಂತಕ್ಕೆ ಇಪ್ಪದು ಹೇಳಿ ಆಚಾರ್ಯರು ಕೇಳ್ತವು. ಗುರುವಿನ ಆಳ, ವಿಸ್ತಾರವ ನಮ್ಮೆದುರು ಬಿಡುಸಿ ಮಡಿಗಿದ ಈ ಸ್ತೋತ್ರವ ಶಂಕರ ಜಯಂತಿಯ ಈ ಪರ್ವ ಕಾಲಲ್ಲಿ ಪಠಣ ಮಾಡಿ ಎಲ್ಲೋರಿಂಗೂ ಶ್ರೀ ಆದಿ ಗುರುವಿನ ಅನುಗ್ರಹ ಸಿಕ್ಕಲಿ ಹೇಳಿ ಹಾರಯಿಕೆ.

ಗುರುಭಕ್ತಿ ಸ್ತೋತ್ರಮ್:
(ಗುರು ಅಷ್ಟಕಂ)

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||1||

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾಲಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||2||

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||3||

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||4||

ಕ್ಷಮಾಮಂಡಲೇ ಭೂಪ-ಭೂಪಾಲವೃಂದೈಃ
ಸದಾ ಸೇವಿತಂ ಯಸ್ಯ ಪಾದಾರವಿಂದಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||5||

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾ-
ಜ್ಜಗದ್ವಸ್ತು ಸರ್ವಂ ಕರೇ ಯತ್ ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||6||

ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||7||

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||8||

ಅನರ್ಘ್ಯಾಣಿ ರತ್ನಾನಿ ಭುಕ್ತಾನಿ ಸಮ್ಯಕ್
ಸಮಾಲಿಂಗಿತಾ ಕಾಮಿನೀ ಯಾಮಿನೀಷು |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||9||

ಫಲಶ್ರುತಿ:
ಗುರೋರ್ ಅಷ್ಟಕಂ ಯಾ ಪಠೇತ್ ಪುಣ್ಯ ದೇಹಿ
ಯತಿರ್ ಭೂಪತಿರ್ ಬ್ರಹ್ಮಚಾರೀ ಚ ಗೇಹೀ
ಲಭೇತ್ ವಾಂಚಿತಾರ್ಥಂ ಪದಂ ಬ್ರಹ್ಮಸಂಜ್ಂ |
ಗುರೋರ್ ಉಕ್ತ ವಾಕ್ಯೇ ಮನೋ ಯಸ್ಯ ಲಗ್ನಂ ||

ಗುರುಭಕ್ತಿ ಸ್ತೋತ್ರಮ್, ಕೇಳುಲೆ:

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶಂಕರ ಜಯಂತಿಯ ಈ ಶುಭ ಸಂದರ್ಭಲ್ಲಿ, ಗುರುಭಕ್ತಿ ಸ್ತೋತ್ರವ ಭಾವಾರ್ಥ ಮತ್ತೆ ಧ್ವನಿ ಸಹಿತ ಒದಗಿಸಿದ ಶ್ರೀ.. ಗೆ ಧನ್ಯವಾದಂಗೊ.
  ಧ್ವನಿ ಕೇಳಲೆ ತುಂಬಾ ಹಿತವಾಗಿ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  [ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ] – ಅದ್ಭುತ ಕಲ್ಪನೆಯೂ ಸೊಗಸಾದ ಚಿತ್ರಣವೂ ಕೂಡ. ಅಮೂಲ್ಯ ರಚೆನೆಗಳ ಬೈಲಿಂಗೆ ಪರಿಚಯಿಸುತ್ತಿಪ್ಪ ಶ್ರೀ ಅಕ್ಕಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ಶ್ರೀ ಅಕ್ಕಂಗೆ ನಮೋ ನಮ:

  “ಮನುಷ್ಯ ಆಗಿ ಹುಟ್ಟಿ ನಾವು ಜೀವನಲ್ಲಿ ಯಾವುದೇ ಸಾಧನೆ ಮಾಡಿ ಮಹಾ ಮೇರುವಿನಷ್ಟು ಸಂಪತ್ತು ಗಳಿಸಿ, ಮನೆತನ, ಪತ್ನಿ, ಮಕ್ಕೋ ಪುಳ್ಯಕ್ಕಳ ಪಡದರೂ, ವೇದ ಶಾಸ್ತ್ರಂಗಳ ಓದಿ ಕವಿತ್ವವ ಗಳಿಸಿ ಹಲವಾರು ಕೃತಿ ರಚನೆ ಮಾಡಿದರೂ, ವಿದೇಶಲ್ಲಿ ಮಾನ್ಯತೆ ಸ್ವದೇಶಲ್ಲಿ ಸಂಪತ್ತು ಗಳಿಸಿದ್ದರೂ, ರಾಜ ಮಹಾರಾಜರು ಕಾಲಿಂಗೆ ಬೀಳುವ ವಿದ್ವತ್ತಿದ್ದರೂ, ಯಶಸ್ಸು ದಿಕ್ಕುಗಳಲ್ಲಿ ವ್ಯಾಪಿಸಿದ್ದರೂ ಯಾವುದೇ ವಿಚಾರಲ್ಲಿ ಅಗ್ರಗಣ್ಯ ಆಗಿದ್ದರೂ ಕೂಡ ಒಬ್ಬ ಗುರುವಿನ ಪಾದ ಪದ್ಮಕ್ಕೆ ಶರಣು ಬಾರದ್ದರೆ ಈ ಸೌಭಾಗ್ಯಂಗ ಎಂತಕ್ಕೆ ಇಪ್ಪದು ಹೇಳಿ ಆಚಾರ್ಯರು ಕೇಳ್ತವು.”

  ಇದಕ್ಕೆ ಸಾಕ್ಷಿಯಾಗಿ ಮೊನ್ನೆ ಒಂದು ಘಟನೆ ಸಂಭವಿಸಿತ್ತು… ಅದರ ಬೈಲಿನವರ ಜೊತೆ ಹಂಚಿಗೊಳ್ಳುತ್ತೆ…

  ಮೊನ್ನೆ ಮಾವನ ಮನೆಗೆ ಹೊಗಿತ್ತಿದ್ದೆಯ.ಮಾವನ ಹೆಸರು ಮಾಲಿಂಗ ಹೇಳಿ. ಆ ಮಾವ ಕಲ್ತದು ಏಳನೇ ಕ್ಲಾಸ್ ವರೆಗೆ ಮಾಂತ್ರ. ಆದರೆ ದೇಶದ ನಾನಾ ಭಾಗಗಳಲ್ಲಿ ಹಲವು ಸಮಯ ವಾಸ ಮಾಡಿದ ಕಾರಣ ಅನುಭವ ಜ್ಹ್ನಾನ ತುಂಬಾ ಇದ್ದು. ಒಳ್ಳೆಯ ಕೃಷಿಕ. ಅಂತಹ ಸಿರಿವಂತರಲ್ಲದ್ದರೂ ಇದ್ದದರಲ್ಲಿ ನೆಮ್ಮದಿಯ ಜೀವನ ನಡೆಸುವ ಕುಟುಂಬ.

  ಇನ್ನೊಬ್ಬ ಮಾವ ಬೆಂಗಳೂರಿಲ್ಲಿ ಇಂಜಿನಿಯರಿಂಗ್ ಕಾಲೇಜ್ ಲಿ ಪ್ರೊಫೆಸರ್. ಅವರ ಹೆಸರು ಗಣೇಶ್ ಹೇಳಿ. ಅವು ಅವರ ಫೀಲ್ಡ್ ಲಿ ಉತ್ತಮ ಸ್ಥಾನವ ಗಳಿಸಿದ್ದವು.ಅವರ ಸಾಧನೆಯ ಬಗ್ಗೆ ಅವರ ಹೆಂಡತಿ ಮಕ್ಕೊಗೆ ತೃಪ್ತಿ ಇತ್ತು. ಬೇಕಾದಷ್ಟು ಆಸ್ತಿ ಎಲ್ಲ ಇದ್ದರೂ ಕೌಟುಂಬಿಕವಾಗಿ ಅದೆಂತದೋ ಸಮಸ್ಯೆ ಮತ್ತು ನೆಮ್ಮದಿ ಇಲ್ಲೇ.

  ಎನಗೆ ಎರಡೂ ಜೆನ ಸಂಬಂಧಲ್ಲಿ ಮಾವಂದ್ರು. ಅವು ಪರಸ್ಪರ ದೂರಲ್ಲಿ ಸಂಬಂಧ ಅದರೂ ಒಂದೇ ಊರಿನವು ಮತ್ತು ಒಳ್ಳೆ ಪರಿಚಯ ಇಪ್ಪವು.

  ಮಾಲಿಂಗ ಮಾವ ಗಣೇಶ್ ಮಾವನ ಬಗ್ಗೆ ಎನ್ನ ಹತ್ತರೆ ಹೀಂಗೆ ಹೇಳಿದವು – “ಅವ ಪಿ ಹೆಚ್ ಡಿ ಮುಗಿಸ್ಕೊಂಡು ಬಂದು ನನ್ನತ್ರ ಹೇಳಿದ ‘ಅಬ್ಬ! ಕಷ್ಟಪಟ್ಟು ಪಿ ಹೆಚ್ ಡಿ ಮುಗಿಸಿದೆ’. ನಾನು ಕೇಳಿದೆ ‘ಯಾಕೆ ಅಷ್ಟು ಕಷ್ಟ ಪಟ್ಟೆ? ೬೦-೭೦ ಸಾವಿರ ಕೊಟ್ಟ್ರೆ ಪಿ ಹೆಚ್ ಡಿ ಸರ್ಟಿಫಿಕೇಟ್ ಕೊಡ್ತಾರಲ್ಲ? ಆಮೇಲೆ ಅವಂದು ಶುದ್ದಿ ಇಲ್ಲೇ.”

  ಇಲ್ಲಿ ಎರಡು ಜೆನರ ಅಭಿಪ್ರಾಯ ತಪ್ಪು ಹೇಳಿ ಹೇಳುಲೇ ಆವುತ್ತಿಲ್ಲೇ. ಮಾಲಿಂಗ ಮಾವ ದೇಶ ಸುತ್ತಿ ಅನುಭವ ಇದ್ದ ಕಾರಣ ‘ಕುಟುಂಬದ ನೆಮ್ಮದಿಯ ಹಾಳು ಮಾಡಿಗೊಂಡು ನೀನು ಪಿ ಹೆಚ್ ಡಿ ಮಾಡಿ ಎಂತ ಲಾಭ ಆತು ನಿನಗೆ?’ ಹೇಳಿ ಕೇಳುದರಲ್ಲಿ ತಪ್ಪು ಇಲ್ಲೇ. ಗಣೇಶ್ ಮಾವ ಡಾಕ್ಟ್ರರೇಟ್,ಪ್ರಶಸ್ತಿ,ಮನ್ನಣೆ ಹೇಳಿ ಅದೇ ಗುಂಗಿಲ್ಲಿ ಇಪ್ಪ ಕಾರಣ ಕುಟುಂಬದ ಬಗ್ಗೆ ಅವಕ್ಕೆ ಹೆಚ್ಚು ಗಮನ ಇಲ್ಲೇ. ಊರಿಲ್ಲಿ ಎಲ್ಲೋರಿಂಗೂ ಮಾಲಿಂಗ ಮಾವನ ಬಗ್ಗೆ ಹೆಮ್ಮೆ ಆದರೆ ಬೆಂಗಳೂರಿಲ್ಲಿ ಗಣೇಶ್ ಮಾವನ ಸರ್ಕಲ್ ಲ್ಲಿ ಗಣೇಶ್ ಮಾವಂಗೆ ಹೆಮ್ಮೆ.

  ನಮ್ಮೆಲ್ಲರ ಜೀವನಲ್ಲಿ ಹೀಂಗೆ… ನಾವು ಕೂಪ ಮಂಡೂಕದ ಹಾಂಗೆ ನಮ್ಮ ನಮ್ಮ ಸರ್ಕಲ್ ಲ್ಲಿ ಯಾವುದೋ ಒಂದು ಗುಂಗಿಲ್ಲಿ ನಾವು ಜೀವನ ನಡೆಸುತ್ತಾ ಇರುತ್ತು. ಇದನ್ನೇ ‘ಮಾಯೆ’ ಹೇಳಿ ಹೇಳುದು.ಜೀವನ ಹೇಳಿರೆ ಎಂತರ ಹೇಳಿ ಅರ್ಥ ಅಪ್ಪ ಹೊತ್ತಿಂಗೆ ಕಾಲ ಮಿಂಚಿರುತ್ತು.ಮೇಲೆ ವಿವರುಸಿದ ಹಾಂಗೆ ಆಚಾರ್ಯರು ಹೇಳಿದ “ಏನಿದ್ದರೇನು? ಗುರುವಿನ ಪಾದ ಪದ್ಮಕ್ಕೆ ಶರಣು ಬಾರದ್ದರೆ ಈ ಸೌಭಾಗ್ಯಂಗ ಎಂತಕ್ಕೆ ಇಪ್ಪದು?” ಹೇಳುದು ಎನಗೆ ನೆನಪಾತು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಮಾಲಕ್ಕ°ಹಳೆಮನೆ ಅಣ್ಣಮಂಗ್ಳೂರ ಮಾಣಿನೀರ್ಕಜೆ ಮಹೇಶದೀಪಿಕಾಅಜ್ಜಕಾನ ಭಾವವಿದ್ವಾನಣ್ಣಸಂಪಾದಕ°ಅಡ್ಕತ್ತಿಮಾರುಮಾವ°ಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಜಯಶ್ರೀ ನೀರಮೂಲೆಒಪ್ಪಕ್ಕಶಾಂತತ್ತೆಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಸುಭಗಬೊಳುಂಬು ಮಾವ°ರಾಜಣ್ಣಶರ್ಮಪ್ಪಚ್ಚಿಶ್ರೀಅಕ್ಕ°ಪಟಿಕಲ್ಲಪ್ಪಚ್ಚಿvreddhiಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ