Oppanna.com

ಹೇ ಗುರುದೇವ…

ಬರದೋರು :   ಜಯಶ್ರೀ ನೀರಮೂಲೆ    on   15/03/2012    15 ಒಪ್ಪಂಗೊ

ಜಯಶ್ರೀ ನೀರಮೂಲೆ

ಗುರುಭಕ್ತೆ ಜಯಕ್ಕನ ಗುರುವಾರದ ಗುರುಸ್ಮರಣೆ..

ಕನಸಲ್ಲಿಯೂ ನೀನೆ…
ಮನಸಲ್ಲಿಯೂ ನೀನೆ…
ಸಕಲ ಚಿಂತನೆಗಳಲ್ಲಿಯೂ ನೀನೆ…
ನೆಮ್ಮದಿಗೆ ಸ್ಪೂರ್ತಿ ಎನಗೆ…

ಅಂತರಂಗಲ್ಲೂ ನೀನೆ…
ಬಹಿರಂಗಲ್ಲೂ ನೀನೆ…
ಸಕಲ ಚರಾಚರದೊಳ ನೀನೆ…
ನೆಮ್ಮದಿಗೆ ಸ್ಪೂರ್ತಿಎನಗೆ…

ನಿದ್ದೆಲ್ಲಿಯೂ ನೀನೆ…
ಎಚ್ಚರಿಕೆಲ್ಲಿಯೂ ನೀನೆ…
ಸಕಲ ಕರ್ಮಗಳಲ್ಲಿಯೂ ನೀನೆ…
ನೆಮ್ಮದಿಗೆ ಸ್ಪೂರ್ತಿ ಎನಗೆ…

ಕುಡಿವ ನೀರೂ ನೀನೆ…
ತಿಂಬ ಅನ್ನವೂ ನೀನೆ…
ಸಕಲ ಆಹಾರವೂ ನೀನೆ…
ನೆಮ್ಮದಿಗೆ ಸ್ಪೂರ್ತಿ ಎನಗೆ…

ಹರೇರಾಮಲ್ಲಿಯೂ ನೀನೆ…
ಒಪ್ಪಣ್ಣಲ್ಲಿಯೂ ನೀನೆ…
ಸಕಲ ಬೈಲಿಲಿಯೂ ನೀನೆ…
ನೆಮ್ಮದಿಗೆ ಸ್ಪೂರ್ತಿ ಎನಗೆ…

ಅದು ನೀನೆ…
ಇದು ನೀನೆ…
ಆನೇ ನೀನೆ…
ಅದ್ವೈತವಾಗಿ೦ದು ನೆಮ್ಮದಿಗೆ ಸ್ಪೂರ್ತಿ ಎನಗೆ

~*~*~

15 thoughts on “ಹೇ ಗುರುದೇವ…

  1. ಜಯಕ್ಕಾ, ಗುರುಸ್ಮರಣೆ ಲಾಯ್ಕಾಯ್ದು. ಇದನ್ನ ಓದಿ ಎನಗೆ ಮೀರಾ ಭಜನ್, ಅಕ್ಕಮಾದೇವಿ ವಚನ ನೆ೦ಪಾತು.
    ಒ೦ದ್ಕಡೆ ಚಿನ್ಮಯ ಮಿಷನ್ನಿನ ಸ್ವಾಮಿ ಬ್ರಹ್ಮಾನ೦ದಜಿ ದ.ರಾ.ಬೇ೦ದ್ರೆಯರ ಪ್ರಸಿದ್ಧ ಗುರುಭಕ್ತಿಯ ಪದ್ಯದ ಬಗ್ಗೆ ಹೇಳ್ತೊ “ಪೂರ್ವ ಜನ್ಮದ ಪುಣ್ಯ ಇಲ್ಲದೆ, ಗುರು ಪ್ರೇರಣೆ ಇಲ್ಲದೆ ಇ೦ಥಾ ಪ್ರಾರ್ಥನಾ ಪದ್ಯಗಳನ್ನು ಬರೆಯಲು ಸಾದ್ಯ ಆಗುವುದಿಲ್ಲ” ಅ೦ತ. ಆ ಗುರು ಪ್ರೇರಣೆ ನಿ೦ಗ್ಳಿಗೆ ಆಗಿ, ಇ೦ಥವೇ ಚೊಲೋ ಪದ್ಯ ನಿ೦ಗ್ಳಿ೦ದ ಬರ್ತಾ ಇರಲಿ.

  2. ಗುರು- ವಿವರ್ಸುದು ಕಷ್ಟ ಸಾಧ್ಯ..ಅಥವಾ ಅಸಾಧ್ಯ ಹೇಳಿಯೇ ಹೇಳುಲಕ್ಕು. ಗುರುಭಕ್ತಿಯ, ಗುರುವಿನ ಪ್ರೀತಿಯ ಅನುಭವಿಸಿಯೇ ಅರ್ಥೈಸಿಗೊಂಬಲೆ ಸಾಧ್ಯ 🙂
    ಕವನ ಬರದ್ದು ಲಾಯ್ಕಾಯ್ದು ….

  3. ಗುರುಸ್ಮರಣೆ ನಿತ್ಯವೂ ಇರೆಕು, ಅವರ ಅನುಗ್ರಹ ಮಾರ್ಗದರ್ಶನ ಸದಾ ಬೇಕು, ಅಶೀರ್ವಾದ ಸದಾ ನಮ್ಮ ಕಾಪಾಡೆಕ್ಕು.
    ಲಾಯಿಕ ಆಯಿದು.

    1. ಅಪ್ಪು… ಅದೊಂದೇ ಜೀವನಕ್ಕೆ ಸ್ಫೂರ್ತಿ… ಅಪ್ಪಚ್ಚಿಯ ಒಪ್ಪ ಒಪ್ಪಕ್ಕೆ ಧನ್ಯವಾದ…

  4. ಕವನದ ಮೂಲಕ ಗುರುಗಳ ನೆಂಪು ಮಾಡ್ಯೊಂಡದು ಲಾಯಕು ಆಯಿದು. ಒಪ್ಪಂಗಳಲ್ಲಿ ಕಂಡೊಂಡಿದ್ದಿದ್ದ ಜಯಶ್ರೀಯ ಕವನಂಗೊ ಶುದ್ದಿ ರೂಪಲ್ಲಿ ಬೈಲಿಂಗೆ ಬಂದದು ಕಂಡು ಕೊಶಿ ಆತು. ಎಲ್ಲ ವಿಷಯಂಗಳಲ್ಲಿಯು ಸ್ಪೂರ್ತಿ ನೀಡುವ ಗುರುಗಳ ದಯೆ ನಮ್ಮೆಲ್ಲರ ಮೇಲಿರಲಿ. ಜಯಶ್ರೀಯ ಕವನಂಗೊ, ಬೈಲಿಂಗೆ ಬತ್ತಾ ಇರಳಿ.

    1. ಪ್ರೀತಿಯ ಒಪ್ಪಕ್ಕೆ ಧನ್ಯವಾದ…

      ನಿಂಗ ಎಲ್ಲ ಪ್ರೋತ್ಸಾಹ ನೀಡಿ ಪುಟಾಣಿ ಕವಿಯ ಬೆಳೆಶುತ್ತಾ ಇದ್ದಿ…

  5. ಹರೇ ರಾಮ. ಎಲ್ಲೆಲ್ಲೂ ನೀನೆ ಎಲ್ಲದರಲ್ಲೂ ನೀನೆ ಭಾವದ ಗುರುಸ್ಮರಣೆ ಲಾಯಕ ಆಯ್ದು. ಅಭಿನಂದನೆಗೊ ಜಯಕ್ಕಂಗೆ. ಶುಭವಾಗಲಿ.

    1. ಪ್ರೀತಿಯ ಒಪ್ಪಕ್ಕೆ ಧನ್ಯವಾದ…

      ಭಾವದ ಭಾಷೆಲ್ಲಿ, ಹೃದಯದ ಭಾಷೆಲ್ಲಿ ಸಂವಹನ ಮಾಡಿ ಜಾಸ್ತಿ ಅಭ್ಯಾಸ ಇಪ್ಪ ಜಯಕ್ಕ ಇತ್ತೀಚಿಗೆ ಈ ಭಾಷೆಗೆ ಇಳಿಸುಲೆ ಪ್ರಯತ್ನ ಮಾಡುತ್ತಾ ಇದ್ದೆ… ಸಹಾಯ ಮಾಡುತ್ತಾ ಇಪ್ಪ ಒಪ್ಪಣ್ಣನ ಜೊತೆ ಈ ಅಭಿನಂದನೆಗಳ ಹಂಚಿಗೊಳ್ಳುತ್ತಾ ಇದ್ದೆ…

  6. ಗುರುಕೃಪೆ ನಿಂಗೊಗೆ ಇರಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×