ಮಾಣಿ ಮಠಲ್ಲಿ ಗುರುಗೊ

November 18, 2011 ರ 8:24 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗೆ ನಮಸ್ಕಾರ. :)

.

ಕಾಣೆ ಆದವರ ಹೆಸರಿನೊಟ್ಟಿಂಗೆ ಎನ್ನ ಹೆಸರು ಹಾಕುವ ಮದಲೇ ಬಂದಿಕ್ಕುವೊ° ಹೇಳಿ ಆತು.
ನಿನ್ನ ಎಂತ ಕಾಣ್ತಿಲ್ಲೆ ಹೇಳಿ ಶರ್ಮಪ್ಪಚ್ಚಿಯೂ, ಡಾಮಹೇಶಣ್ಣಾನೂ ಕೇಳಿಗೊಂಡಿತ್ತಿದ್ದವು. ಪರೀಕ್ಷೆ ಎಡಕ್ಕಿಲ್ಲಿ ಬಪ್ಪಲಾಯಿದಿಲ್ಲೆ. ಕ್ಷಮೆಯಿರಲಿ,
ಈಗ ಬಂದ ವಿಷಯ ಎಂತ ಗೊಂತಿದ್ದಾ?
ನಮ್ಮ ಮಠದ ಮೇಳ ಇಂದಿಂದ ಶುರು ಇದಾ? ಹಾಂಗೆ ಇಂದು ಹೊತ್ತೋಪಗ ಹೆಜ್ಜೆ ಕಟ್ಟುದಡ.
ಇಂದು ಹೆರಟ ಮೇಳ ಮಂಗ್ಳೂರು ಮತ್ತೆ ಇನ್ನೊಂದು ಹತ್ತಿಪ್ಪತ್ತು ಊರು ತಿರುಗಿ ತಿರುಗಿ ಸುಮಾರು ದಿನ ಕಳುದು ಮತ್ತೆ ಗೆಜ್ಜೆ ಬಿಚ್ಚುದಡ. ಇರಳಿ.
.

ನಿನ್ನೆ ಹೊತ್ತೋಪಗಂಗೆ ಪರೀಕ್ಷೆಗೊ ಎಲ್ಲ ಮುಗುದತ್ತು. ನವೆಂಬರ್ ೧೫ರ ನಂತರ ಚಿಂತೆಗಳೆಲ್ಲ ದೂರವಾಗಲಿದೆ ಹೇಳಿ ವರ್ಷ ಭವಿಷ್ಯಲ್ಲಿ ಇತ್ತಿದ್ದು. ಅವಕ್ಕೆ ಹೇಂಗೆ ಗೊಂತಾತೋ ಏನೋ? ಪರೀಕ್ಷೆಗೊ ಮುಗಿತ್ತು ಹೇಳಿ..

.

ಹಾಂಗೆ ಪರೀಕ್ಷೆ ಎಲ್ಲ ಮುಗುದ ಖುಶಿಗೆ ಆನುದೇ ರಾಕೇಶ° ಹೇಳಿ ಒಬ್ಬ ದೋಸ್ತಿದೇ ಸೇರಿಂಡು ಮಾಣಿ ಮಠಕ್ಕೆ ಹೋಪದು ಹೇಳಿ ನಿರ್ಧಾರ ಮಾಡಿದೆಯ°. :)
ಹಾಂಗೆ, ಇಂದು ಉದಿಯಪ್ಪಗಳೇ ವಸ್ತ್ರ ಶಾಲು ತೆಕ್ಕೊಂಡು ಹೆರಟದೇ ಮಾಣಿ ಮಠಕ್ಕೆ.
ಆನು ಮಂಗ್ಳೂರಿಂದ – ಅವ° ಉಪ್ಪಿನಂಗಡಿಂದ,
ಮಾಣಿಲಿ ಇಳುದು ರಜಾ ನಡೆಕಾತು, ಮಠಕ್ಕೆ ತಿರುಗುವ ತಿರುಗಾಸಿಲ್ಲಿ ಅವ° ಸಿಕ್ಕುತ್ತೆ ಹೇಳಿತ್ತಿದ್ದ°
ಸುಮಾರು ೮.೩೦ರ ಹೊತ್ತಿಂಗೆ ಸೇರಿಯೋಂಡೆಯ°. ತಿರುಗಾಸಿಲ್ಲಿ ರಜ್ಜ ಒಳನೆಡದರೆ ಗೋಶಾಲೆ ಮತ್ತೆ ರಜಾ ಮುಂದೆ ಹೋದರೆ ನಮ್ಮ ಪೂರ್ವ ಗುರುಗಳ ಸ್ಮರಣಾರ್ಥ ಇಪ್ಪ ವೃತ್ತ, ಅದು ಕಳುದಕೂಡಲೇ ಮಠದ ಗೇಟು..

ಮಾಣಿ ಮಠದ ಗೋಶಾಲೆಲಿ
ರಜ್ಜಾ ಜೆನ ಸೇರಿತ್ತಿದ್ದವು,
ಅಲ್ಲಲ್ಲಿ ಅರಶಿನ ಶಾಲು ವಸ್ತ್ರ ಸುತ್ತಿದವು ಇತ್ತಿದ್ದವು. ಒಳಹೋಗಿ ದೇವರಿಂಗೆ ನಮಸ್ಕಾರ ಮಾಡಿ, ಅಂಗಿ ಬಿಚ್ಚಿ ಅಪ್ಪಷ್ಟರಲ್ಲಿ ಉದಿಯಪ್ಪಗಾಣ ಪೂಜೆಗೆ ಒಬ್ಬೊಬ್ಬರೇ ಕೂಪಲೆ ಸುರುಮಾಡಿಯೋಂಡಿತ್ತಿದ್ದವು. ಇನ್ನು ಮೇಲೆ ಕೆಳ ನೋಡಿಯೊಂಡಿದ್ದರೆ ಜಾಗೆ ಸಿಕ್ಕ ಹೇಳಿದ್ದು – ಹೋಗಿ ಕೂದ್ದೇ.
.
.
ಸರೀ ೯ ಗಂಟೆಗೆ ಪೂಜೆ ಸುರು.
ಅಂದು ಒಂದರಿ ಒಪ್ಪಣ್ಣ ಹೇಳಿದ್ದಿದ್ದ° ವಿರಾಟ್ ಪೂಜೆಯ ಸಮಯಲ್ಲಿ, ನೆಂಪಿದ್ದ?
ಇಂದೂ ಅದೇ ಗಾಂಭೀರ್ಯ, ಚೆಂದ.
ಪ್ರಶಾಂತ ಪರಿಸರಲ್ಲಿ, ಒಂದರಿಯಂಗೆ ಶಂಖ ಜಾಗಟೆಗಳ ಮಧುರ ಧ್ವನಿ, ಅದು ಮಾತ್ರ, ಕೇಳುತ್ತ ಇಪ್ಪವ್ವೆಲ್ಲ ಸುಶುಪ್ತಿಗೆ ಹೋಪ ಹಾಂಗೆ.
ಬಾಗಿಲು ತೆಗದವು, ಬರೇ ದೀಪದ ಬೆಣಚ್ಚಿಲಿ ಆರಾಧ್ಯ ದೇವತೆಗೊ ತುಂಬ ಚೆಂದ ಕಂಡೊಂಡಿತ್ತಿದ್ದವು.
ಭಾವಿಸಿದವಕ್ಕೆ ಒಂದರಿ ಎಲ್ಲ ೭ ಚಕ್ರಂಗೊ ತೆಗಕ್ಕೊಂಡು ಅದಮ್ಯ ಶಕ್ತಿಯ ಪ್ರವಾಹವೇ ಒಳಾ ನುಗ್ಗಿದ ಹಾಂಗೆ ಆದಿಕ್ಕು. ಬೆಶಿಯೂ – ತಂಪೂ ಒಟ್ಟಿಂಗೇ ಆದ ಹಾಂಗೆ.
ತುಂಬ ಶಾಂತಿ :):)
ಅದರ ಶಬ್ದಲ್ಲಿ ಹೇಳ್ಲೆ ಎಡಿಯ ಅಲ್ಲದೋ?
ಪೂಜೆ ಸುರು ಆತು, ಮಾಣಿಯೂ ಸ್ವರ ಸೇರ್ಸಿದ° – ಅಷ್ಟಕ್ಕೆ ತಕ್ಕ ಬತ್ತಿದಾ? 😉
ಪೂಜೆ ಇಡಿ, ಚೆಂದಕೆ ನೋಡ್ಲಾತು.
ಗುರುಗೊ ಮಾಡುವ ಅಲಂಕಾರದ ಬಗ್ಗೆ ಮಾತಿದ್ದೋ? ಭಾವ ಮಾತ್ರ . ರಾಮದೇವರು ಅಲ್ಲೇ ಇದ್ದ° ಹೇಳಿ ಆಯೆಕು, ಹಾಂಗೆ ಕಂಡೊಂಡಿತ್ತು..
.
.
ಸರೀ ೧೦ ಗಂಟೆಗೆ ಪೂಜೆ ಮುಗುತ್ತು. ಅಲ್ಲಿಂದಮತ್ತೆ ರಜ್ಜ ಮಾತಾಡಿಯೊಂಡು ಕೂದೆಯ°. ನಮ್ಮ ಮಠ, ಪೂರ್ವಾಚಾರ್ಯರು, ೨೦೧೨-೧೪-೧೮-೨೦, ಈಗಾಣ ಜೀವನ ಶೈಲಿ, ೭ ಆಮ್ ಅರಿವು ಸಿನೆಮಾ, ಇದೆಲ್ಲ ಬಂತು.. ಸರೀ ೧೨ ಗಂಟೆಗೆ ಗುರುಗೊ ಧರ್ಮಸಭೆಗೆ ಬಂದವು, ದೋಡಾ ಪೂಜೆ – ಷಷ್ಠ್ಯಬ್ದಿ ಎಲ್ಲ ಆಗಿಯೊಂಡಿತ್ತು. ಅದಕ್ಕೆಲ್ಲ ಆಶೀರ್ವಾದ ಮಾಡಿ, ಪೂರ್ಣಾಹುತಿ ಆಗಿ ಗುರುಗೊ ಪೀಠಲ್ಲಿ ಕೂದವು.
ರಾಮ ಕಥೆಯ DVD ಬಿಡುಗಡೆ ಆತು – ಶ್ರೀಮತಿ ಶಾರದಾ ಜಯಗೋವಿಂದ್ ಮಾತಾಡಿದವು, ಮತ್ತೆ ಗುರುಗಳ ಆಶೀರ್ವಚನ,
.****
” ಹರೇ ರಾಮ
ನಾಯಕತ್ವ ಮತ್ತು R.S. Hegdeಯವರ ಬಗೆಗೆ : ಮಾಣಿ ಮಠಕ್ಕೂ ಮಾತೆಯರಿಗೂ ಹನುಮಂತ ದೇವರಿಗೂ ನೇರ ಸಂಬಂಧವಿದೆ.
R.S. Hegde ಗೆ ೬೦ ತುಂಬಿತು, ೬೦ ಎಂಬುದು ಅರಳುವ – ಮರಳುವ ಸಮಯ. ಎಲ್ಲರಿಗಿಂತ ಗುರು ಹೆಚ್ಚು ಎಂಬ ಭಾವದವರು, ಹವ್ಯಕ ಮಂಡಲದ ಅಧ್ಯಕ್ಷರಾದ ಮೇಲೆ ಸಿದ್ದಾಪುರವಾದರೇನು? ಮಂಗಳೂರಾದರೇನು? ಎಂಬ ಭಾವ ಅವರದ್ದು. ಬಂಧುಗಳೆಲ್ಲಾ ಕಡೆಯೂ ಇದ್ದಾರೆ. ಇವರಿಂದಾಗಿ ಹಲವಾರು ಬದಲಾವಣೆ ಬಂದಿದೆ.

ಪೂರ್ಣಾಹುತಿ, ಶ್ರೀ ಶ್ರೀ ರಾಘವೇಶ್ವರ ಸ್ವಾಮಿಗಳವರಿಂದ
.
ಒಂದು ಕಥೆ: ” ಒಬ್ಬನಿಗೆ ಒಂದು ಹುಚ್ಚು ಬಂತಂತೆ. ಏನು ಹುಚ್ಚೆಂದರೆ, ತನ್ನ ಮಗುವಿನ ಹಣೆಯ ಬರಹ ತಾನು ಬರೆಯಬೇಕೆನ್ನುವುದು. ಹಣೆಬರಹ ಬರೆಯುವ ಆ ಹೊತ್ತಿನಲ್ಲಿ ನಾನು ಬ್ರಹ್ಮನಾಗಿರಬೇಕು ಎನ್ನುವುದು, ತಪಸ್ಸು ಮಾಡಿದ – ಬ್ರಹ್ಮ ಬಂದಾಗ ಕೇಳಿದ.
ಬ್ರಹ್ಮದೇವರು ಹೇಳಿದರು “ಬ್ಯಾಡ ನಿನಗಿದು ನೀನಂದುಕೊಂಡ ಉದ್ದೇಶ ಸಾಧನೆ ಆಗ್ಲಿಕ್ಕಿಲ್ಲ.”
“ಇಲ್ಲ ಅದೇ ಕೊಡು” ಅವನೆಂದ.
“ಸರಿ” ಬ್ರಹ್ಮದೇವರು ಕೊಟ್ಟ್ರು ವರವನ್ನು,
ಹೆಂಡತಿ ಗರ್ಭಿಣಿ, ಶಿಶು ಜನನ ಆಗಬೇಕು, ಆ ಸಮಯದಲ್ಲಿ ಬ್ರಹ್ಮ ಪಟ್ಟ ಸಿಕ್ತು. ಬ್ರಹ್ಮದೇವರು ಸಿಂಹಾಸನ ಬಿಟ್ಟು ಕೆಳಗಿಳಿದ್ರು, ಈತ ಹೋಗಿ ಕೂತು ಆ ಕಿರೀಟ ಹಾಕಿಕೊಂಡಾಗ,
ದೊಡ್ಡ ಕಷ್ಟ…!
ಏಕೆಂದರೆ ಒಂದೇ ಕ್ಷಣದಲ್ಲಿ ಸಾವಿರಾರು ಶಿಶುಗಳ ಹಣೆ ಹುಟ್ತವೆ, ಆ ಕ್ಷಣದಲ್ಲಿ ಎಷ್ಟು ಶಿಶುಗಳು ಹುಟ್ತವೋ ಅವೆಲ್ಲವೂ ಬರ್ತವೆ, ಶಿಶು ಅಂದರೆ ಬರೀ ಮಾನವರು ಮಾತ್ರ ಅಲ್ಲ, ಪ್ರಾಣಿ, ಪಕ್ಶಿ, ಕ್ರಿಮಿ, ಕೀಟಗಳೆಲ್ಲವೂ ಬರ್ತವೆ.
ಗಾಬರಿಯಾಯ್ತಂತೆ ಇವನಿಗೆ,
ಯಾರು ಯಾರೆಂದೆ ತಿಳಿಯಲಿಲ್ಲ, ಯಾರು ತನ್ನ ಮಗ ಯಾರು ಬೇರೆ ಎಂದೇ ಗೊತ್ತಾಗಲಿಲ್ಲ,
“ಇದು ಹ್ಯಾಗೆ?”
“ಇದು ಹಾಗೇ, ನಿನಗಷ್ಟ ಬಂದಂತೆ ಬರೆಯಲು ಸಾಧ್ಯ ಇಲ್ಲ, ಅವರವರ ಭಾಗ್ಯದಂತೆ ಹಣೆಬರಹ, ನಿನ್ನ ಸ್ವಂತ ಬುಧ್ಧಿ ಉಪಯೋಗಿಸಲು ಸಾಧ್ಯವಿಲ್ಲ”
ಕೊನೆಗೂ ಅವನಿಗೆ ತನ್ನ ಮಗನ ಹಣೆಯಲ್ಲಿ ಏನು ಬರೆದದ್ದೆಂದು ತಿಳಿದುಕೊಳ್ಳಾಲು ಆಗಲೇ ಇಲ್ಲ.
ಪೀಠವೆಲ್ಲವೂ ಹಾಗೇ, ಹಾಗಲ್ಲದಿದ್ದರೆ ಪೀಠಕ್ಕೆ ಶೋಭೆಯಲ್ಲ, ಮಹಾಮಂಡಲದ ಅಧ್ಯಕ್ಷ ಸ್ಥಾನವೂ ಹಾಗೆಯೇ..
ಹಾಗೇ ಆಗಲಿ,
ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಿ. ಉತ್ತಮ ಚಿಂತನೆಯ ಮೂಲಕ ಸಮಾಜದ ಸೇವಕನಾಗುವ ಮೂಲಕ ದೊಡ್ಡವರೆನಿಸಿಕೊಳ್ಳಿ; ಹಣ, ಅನುಭವ, ಅಧಿಕಾರ ಮತ್ತು ವಯಸ್ಸಿನಿಂದ ಇನ್ನೊಬ್ಬರಿರೆ ಸಂತೋಷ ಕೊಡ್ಳಿಕ್ಕೆ ಆದರೆ ಮಾತ್ರ ಅವರು ದೊಡ್ಡವರು. ಹೆಚ್ಚು ಆನಂದ ಕೊಡಲು ಆದರೆ ಅದು ದೊಡ್ಡತನ.
R.S. Hegde  ಈಗಾಗಲೇ ಆಕೆಲಸ ಮಾಡ್ತಾ ಇದ್ದಾರೆ, ಇನ್ನೂ ಮುಂದುವರೆಯಲಿ, ಅಜಾತಶತ್ರು ಈಗಾಗಲೇ ಆಗಿದ್ದರೆ ಇವರು, ಗುಂಪಿನ ನಾಯಕತ್ವ ವಹಿಸುವವರು ಹೀಗಿರಬೇಕು, ಎಲ್ಲರಿಗೂ ಸರ್ವ ಸಮ್ಮತ ವ್ಯಕ್ತಿತ್ವವಾಗಿ, ಕುಂದು ಕೊರತೆ ಇಲ್ಲದಂತೆ ಇರಬೇಕು.
.
ರಾಮ ಕಥೆಯ DVDಯ ಬಗ್ಗೆ : DVD ಯಲ್ಲಿ ತುಂಬ ಚೆನ್ನಾಗಿ ರಾಮ ಕಥೆ ಮೂಡಿ ಬಂದಿದೆ, ರಾಮಾಯಣ ಎಲ್ಲರ ಜೀವನದಲ್ಲಿ ಬರಬೇಕು. ಮೂಲ ರಾಮಾಯಣದ ಆವಿರ್ಭಾವ ಮತ್ತೆ ಮನೆ ಮನಗಳಲ್ಲಿ ಆಗಬೇಕು. ಇದು ಸಮಾಜಕ್ಕೆ ಸಿಗಬೇಕು. ಇದು ನಮ್ಮನ್ನು ಗೊತ್ತಿರದ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ, ಅಥವಾ, ಗೊತ್ತಿರುವ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ, ನಮ್ಮ ಜೀವನದ ಅತಿ ಮುಖ್ಯ ಘಟ್ಟ ಯಾವುದೆಂದು ಯಾರಾದ್ರೂ ಕೇಳಿದರೆ, ನಾವು ಹೇಳುವುದು ಕಳೆದ ಚಾತುರ್ಮಾಸ್ಯದ ರಾಮಕಥೆಯ ಕೊನೆಯ ದಿನವನ್ನು, ಅಂದು ಅಲ್ಲಿದ್ದವರು ಪುಣ್ಯಾತ್ಮರು ಅವರು ಅಂದು ಪಡೆದುಕೊಂಡದ್ದನ್ನು ಮತ್ತಾರೂ ಎಂದಿಗೂ ಪಡೆಯಲು ಸಾಧ್ಯವಿಲ್ಲ.
ರಾಮ ಕಥೆಯನ್ನು ಉಳಿಸಿ ಬೆಳೆಸಲು ಮತ್ತು ಇದನ್ನು ಅಂದು ಕೇಳಲಾಗದವರಿಗೆ ಇಂದು ತಲುಪಿಸಲು ಇದರಿಂದ ಸಾಧ್ಯವಾಗ್ತಾ ಇದೆ. ರತ್ನಾಕರನೆಂಬ ಬೇಡ ಎಲ್ಲರಿಗೂ ಬೇಕಾದದ್ದು ಹೇಗೆ ಎಂಬ ಕಥೆ ಇದು. ನಾವೇ ಈ ಕಥೆ-ಹಾಡು-ಸಾಹಿತ್ಯದಲ್ಲಿ ಮೈಮರೆತದ್ದುಂಟು.
ಈವತ್ತು ನಮ್ಮ ಯಕ್ಷಗಾನ ಕಲಾವಿದರು ಅಗಸ್ತ್ಯ ಮಹರ್ಶಿಗಳ ಜೀವನದ ಕೆಲವು ಘಟನೆಗಳನ್ನ ಆಡಿ ತೋರಿಸಲಿಕ್ಕಿದ್ದಾರೆ, ತುಂಬ ಅಭಿಮಾನ ದಿಂದ ಹೇಳ್ತೇವೆ, ತುಂಬ ಚಂದಕೆ ಮಾಡ್ತಾರೆ ನಮ್ಮ ಕಲಾವಿದರು.
ನಿಮ್ಮೆಲ್ಲರಿಗೂ ಶ್ರೀ ರಾಮನ ಕರುಣೆ ಇರಲಿ.”
.***
ಅದಾಗಿ ಯೇವತ್ತಿನ ಹಾಂಗೆ ಫಲಸಮರ್ಪಣೆ-ಮೌನ ಮಂತ್ರಾಕ್ಷತೆ. ಮಾಣಿಯ ಕಣ್ಣಿಲ್ಲೆ ಗುರ್ತ ಹಿಡುದು ತುಂಬು ಪ್ರೀತಿಯ ನೆಗೆ ಮಾಡಿದವು..
ಏಪುಲು ಸಿಕ್ಕಿದ್ದರ ಕೋಟಿ ಪಾಲು ಖುಶಿ ಆತು..!!
ಫಲಸಮರ್ಪಣೆ ಆಗಿ ಮಂತ್ರಾಕ್ಷತೆಗೆ ಅಪ್ಪಗ ಪಕಳಕುಂಜ ಅಪ್ಪಚ್ಚಿ ಸಿಕ್ಕಿದವು ಚೆಂದಕೆ ಮಾತಾಡುಸಿದವು, ಮರುವಳ ನಾರಾಯಣ ಮಾವ ಸಿಕ್ಕಿದವು, ದೂರಲ್ಲಿ ಪುತ್ತೂರ ಪುಟ್ಟಕ್ಕನ ನೋಡಿದಾಂಗೆ ಆತು, ಮಾಣಿ ಕೇಳ್ಲೆ ಹೋಯೊದಾ° ಇಲ್ಲೆ…
ಹಶುವಾಗಿಯೊಂಡಿತ್ತಿದಾ, ಗಂಟೆ ೨.೩೦…!
.
.
.
.
ಊಟ ಹೇಳಿರೆ ಊಟ..!
ಸೌತ್ತೆ ಉಪ್ಪಿನ ಕಾಯಿ – ಬೀಟ್ರೋಟು ತಾಳು – ಟೊಮೆಟೋ ಸಾರು – ಕೊದಿಲು – ಮೇಲಾರ.
ಯೇವದೋ ಪಾಯಸ, ರುಚೀ ಇದ್ದ ಕಾರಣ ಮರದು ಹೋತು ೨-೨  ಸೌಟು ಹಾಕಿಸಿಹೊಂಡು ತಿಂದೆ. ಹೋಳಿಗೆ – ಅದಕ್ಕೆ ತುಪ್ಪ ಕಾಯಿಹಾಲು.
ಮತ್ತೆ ಮಜ್ಜಿಗೆ.
ರುಚಿ ರುಚೀ ಇತ್ತು, A1:)
.
.
ಅಲ್ಲಿಂದ ಮತ್ತೆ, ನಿಧಾನಕ್ಕೆ ಹೆರಟತ್ತು,
ಹೊತ್ತೋಪಗ ಗೆಜ್ಜೆ ಕಟ್ಟುವ ಕಾರ್ಯಕ್ರಮ ಇತ್ತಡ, ತುಂಬ ಆಶೆ ಇದ್ದರೂ ನಿಂಬಲೆ ಆಯಿದಿಲ್ಲೆ.. :(
ಹೋಪದಾರಿಲಿ ಉಂಬೆಗಳ ರಜಾ ಪಟ ತೆಕ್ಕೊಂಡೆ, ನಮ್ಮ ಗೋಶಾಲೆದು.
ನಾಳೆ ಗೋಕರ್ಣಕ್ಕೆ ಹೋಪದು ಹೇಳಿ ಇದ್ದೆ. ಕೋಟಿ ರುದ್ರ ಇದ್ದಲ್ದ.. ಹಾಂಗೆ ಹೋಪಲಿದ್ದು..
ಕಾಂಬೊ° ಆಗದಾ..
.
.
ಗೋಕರ್ಣಂದ ಬಂದ ಮತ್ತೆ ಸಿಕ್ಕುತ್ತೆ. :)

***

***

ಮಾಣಿ ಮಠಲ್ಲಿ ಗುರುಗೊ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

  1. ಡೈಮಂಡು ಭಾವ
    ಸೂರ್ಯ

    ಮಂಗ್ಳೂರ ಮಾಣಿ…ಶುದ್ದಿ ಲಾಯ್ಕ ಆಯಿದು.. ನಿರೂಪಣೆಯೂ ಪಷ್ಟಾಯಿದು..
    ಗುರುಗಳ ಆಶೀರ್ವಚನವ ಯಥಾವತ್‌ ಬರದ್ದೆ… ಈ ಲೇಖನವ ಓದಿಯಪ್ಪಗ ಖುದ್ದು ಮಾಣಿ ಮಠಕ್ಕೆ ಹೋದಾಂಗೆ ಆತು…
    ಗುರುಗಳ ಫೋಟೊ ಬಾರಿ ಚೆಂದ (ಪೂರ್ಣಾಹುತಿ) ಬೈಂದು..

    [Reply]

    ಮಂಗ್ಳೂರ ಮಾಣಿ

    ಮಂಗ್ಳೂರ ಮಾಣಿ Reply:

    ಧನ್ಯವಾದ ಸೂರ್ಯಣ್ಣಾ..
    ಫಟ ಈ ಕನಸು.com ಇಂದ ಕದ್ದದು, ತುಂಬ ಚೆಂದ ಇದ್ದು ಫಟ :):) .. ಸಭೆಲಿ ಗುರುಗಳ ಫಟ ತೆಗವ ಧೈರ್ಯ ಬೈಂದಿಲ್ಲೆ 😉

    [Reply]

    VA:F [1.9.22_1171]
    Rating: 0 (from 0 votes)
  2. ಅಡಕೋಳಿ
    ಅಡಕೋಳಿ

    ಮಂಗ್ಳೂರ ಮಾಣಿ…ಲಾಯ್ಕ ಆಯಿದು.. ಕಥೆ ನಿರೂಪಣೆಯೂ ಲಾಯಕ್ಕಿದ್ದು..
    ಗುರುಗಳ ಆಶೀರ್ವಚನದಲ್ಲಿ ಕಥೆಯೆ ಜೀವಾಳ. ಪ್ರತಿ ಬಾರಿ ಹೊಸ ಕಥೆ, ನಿರೂಪಣೆಯಲ್ಲಿ ವೈವಿಧ್ಯತೆ ಅದೇ ಶ್ರೀಗಳ ವಿಷೇಶ
    ಧನ್ಯವಾದ

    [Reply]

    ಮಂಗ್ಳೂರ ಮಾಣಿ

    ಮಂಗ್ಳೂರ ಮಾಣಿ Reply:

    ಧನ್ಯವಾದ ಮಾವಾ,
    ಅಪ್ಪು.. ಸಣ್ಣ ಸಣ್ಣ ಕಥೆಲಿ ದೊಡ್ಡದೊಡ್ಡ ಅರ್ಥಂಗೊ :):)
    ಅದರ ಗುರುಗೊ ಹೇಳಿರಂತೂ ಅರ್ಥಂಗೊ ಅಗಾಧ.. ಎಷ್ಟು ಯೋಚುಸಿಯರೂ, ಮತ್ತೆ ಮತ್ತೆ ಹೊಸ ಹೊಸ ಅರ್ಥಂಗೊ..

    [Reply]

    VA:F [1.9.22_1171]
    Rating: 0 (from 0 votes)
  3. ಗಣೇಶ ಮಾವ°
    ಗಣೇಶ ಮಾವ°

    ಲಾಯಿಕ ಬರದ್ದೆ.ಇನ್ನೂ ಕಾರ್ಯಕ್ರಮಲ್ಲಿ ಭಾವಹಿಸಿದಷ್ಟು ಕೊಶಿ ಆತು.ಇನ್ನೂ ಹೀಂಗೇ ಬರೆತ್ತಾ ಇರು…..

    [Reply]

    ಮಂಗ್ಳೂರ ಮಾಣಿ

    ಮಂಗ್ಳೂರ ಮಾಣಿ Reply:

    ಧನ್ಯವಾದ ಗುರುಗಳೇ… :)

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣದೊಡ್ಡಮಾವ°ಮಾಲಕ್ಕ°ದೇವಸ್ಯ ಮಾಣಿಅಜ್ಜಕಾನ ಭಾವಅನು ಉಡುಪುಮೂಲೆಬೋಸ ಬಾವಬೊಳುಂಬು ಮಾವ°ನೆಗೆಗಾರ°ಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆಅಕ್ಷರದಣ್ಣಪುಟ್ಟಬಾವ°ಚೂರಿಬೈಲು ದೀಪಕ್ಕvreddhiಗೋಪಾಲಣ್ಣಚುಬ್ಬಣ್ಣನೀರ್ಕಜೆ ಮಹೇಶಕೊಳಚ್ಚಿಪ್ಪು ಬಾವಜಯಶ್ರೀ ನೀರಮೂಲೆಅಕ್ಷರ°ಮಂಗ್ಳೂರ ಮಾಣಿಹಳೆಮನೆ ಅಣ್ಣಎರುಂಬು ಅಪ್ಪಚ್ಚಿವೆಂಕಟ್ ಕೋಟೂರುಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ