ಜಯ ಶಂಕರ ಜಯ ಜಯ ಶುಭಂಕರ

ಕುತ್ತಿಗೆದ್ದೆ ಜೋಯಿಶರ ಮಗಳು “ಶ್ರೀದೇವಿ ಅಕ್ಕನ” ಅರಡಿಗೋ?
ಹೆಸರು ಶ್ರೀದೇವಿ ಆದರೂ ಕಾವ್ಯನಾಮ “ಸಿರಿ”.
ಮುಜುಂಗಾವು ಸಂಸ್ಕೃತ ಕೋಲೇಜಿಲಿ ಪ್ರಾಕ್-ಶಾಸ್ತ್ರೀ ಆಗಿ, ಉಡುಪಿಲಿ ಮತ್ತಾಣದ್ದು ಕಲಿತ್ತಾ ಇದ್ದವು.
ಮಠದ ಸಕ್ರಿಯ ಕಾರ್ಯಕರ್ತೆ ಆಗಿಂಡು ಮಹತ್ತರ ಸೇವೆ ಮಾಡ್ತವು; ಸಂಸ್ಕೃತ ಭಾಷಣ, ಮಾತುಗಾರಿಕೆ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡಕ್ಕೊಂಡ ಪ್ರತಿಭಾನ್ವಿತೆ ಆದ ಈ “ಸಿರಿ ಅಕ್ಕ°” ನಮ್ಮ ಒಟ್ಟಿಂಗೆ ಬೈಲಿಂಗೆ ಬಂದು ಹಲವು ಶುದ್ದಿಗಳ ಹೇಳ್ತವು.
ಸುಸಂಸ್ಕೃತ ಬೈಲಿಂಗೆ ಸಂಸ್ಕೃತ ಪಂಡಿತರ ಆಗಮನ ತುಂಬಾ ಕೊಶಿ ಕೊಡ್ತಾ ಇದ್ದು!
ಇವರ ಶುದ್ದಿಗಳ ಕೇಳಿ, ಪ್ರೋತ್ಸಾಹಿಸುವೊ°, ಅಲ್ಲದೋ?
~
ಗುರಿಕ್ಕಾರ°

ಭಾನ್ಕುಳಿ ಮಠಲ್ಲಿ ನೆಡದ ಶಂಕರ ಜಯಂತಿಯ ಬಗ್ಗೆ ಶುದ್ದಿ:

| ಹರೇ ರಾಮ |

ಜಯ ಶಂಕರ ಜಯ ಜಯ ಶುಭಂಕರ:

ಸನಾತನ ಸಂಸ್ಕೃತಿ ಅವನತಿಯತ್ತ ಸಾಗುತ್ತ ಇಪ್ಪಗ ಸನಾತನ ಧರ್ಮದ ಉದ್ಧಾರಕ್ಕಾಗಿ ಕೇರಳದ ಕಾಲಟಿಯಲ್ಲಿ ಶಿವಗುರು-ಆರ್ಯಾಂಬಾ ದಂಪತಿಗಳ ಮಗನಾಗಿ ಜನಿಸಿದ ಶಂಕರರು ಎಳವೆಯಲ್ಲಿಯೇ ಸಂನ್ಯಾಸ ಸ್ವೀಕರಿಸಿ ಶಂಕರಾಚಾರ್ಯರಾದವು.
ಕಿರಿಯ ಪ್ರಾಯಲ್ಲಿಯೇ ಪ್ರಸ್ಥಾನತ್ರಯಂಗೊಕ್ಕೆ ಅದ್ವೈತಪರವಾಗಿ ಭಾಷ್ಯ ರಚಿಸಿ, ಪ್ರತಿವಾದಿಗಳ ಜಯಿಸಿ ಸರ್ವಜ್ಞಪೀಠಾರೋಹಣಗೈದವು.
ಅತ್ಯಲ್ಪ ಕಾಲಲ್ಲಿಯೇ ಭಾರತದಾದ್ಯಂತ ಸಂಚರಿಸಿ ಧರ್ಮಬೋಧನೆ ಮತ್ತು ಅದ್ವೈತತತ್ತ್ವದ ಪ್ರಚಾರ ಮಾಡಿದ್ದಲ್ಲದ್ದೆ ಅನವರತವೂ ಈ ಕಾರ್ಯಕ್ಕಾಗಿ ಧರ್ಮಪೀಠಂಗಳ ಸ್ಥಾಪಿಸಿ ಜಗದ್ಗುರುಗಳಾದವು.
ಇಂತಹ ನಮ್ಮ ಮಹಾಗುರುಗಳ ಬಗ್ಗೆ ಶಿಷ್ಯಪರಂಪರೆಯ ಇಂದಿನ ಎಷ್ಟೋ ಜನಕ್ಕೆ ಗೊಂತಿಲ್ಲೆ. ನಮ್ಮ ಮೂಲವ ನಾವು ಮರತರೆ ಸರ್ವವೂ ನಾಶವಾದ ಹಾಂಗೆ.
ಅದಕ್ಕಾಗಿ ಪ್ರತಿಯೊಬ್ಬ ಶಿಷ್ಯನೂ ಶಂಕರಾಚಾರ್ಯರ ಬಗ್ಗೆ, ಅವು ಬೋಧಿಸಿದ ತತ್ತ್ವಂಗಳ ಬಗ್ಗೆ, ಅವರ ಕೃತಿಗಳ ಬಗ್ಗೆ ತಿಳಿಯೆಕ್ಕು, ನಿತ್ಯವೂ ಅವರ ಸ್ಮರಣೆ ಮಾಡೆಕ್ಕು ಹೇಳುವ ಉದ್ದೇಶಂದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗ ಶ್ರೀರಾಮದೇವ ಭಾನ್ಕುಳಿಮಠಲ್ಲಿ ಎಪ್ರಿಲ್ ೨೫ ರಿಂದ ೨೮ ರವರೆಗೆ (ವೈಶಾಖ ಶುದ್ಧ ಚತುರ್ಥಿಂದ ಸಪ್ತಮಿವರೆಗೆ) “ಶಂಕರಪಂಚಮೀ” ಉತ್ಸವ ನಡೆಸಿದವು.

೨೫ ರಂದು ಹೊತ್ತೋಪಗ ಸಿದ್ಧಾಪುರ-ಶಿರಸಿ ಮುಖ್ಯರಸ್ತೆಂದ ಭಾನ್ಕುಳಿಗೆ ತಿರುಗುವಲ್ಲಿಂದ ಭವ್ಯವಾಗಿ ಅಲಂಕಾರಗೊಂಡ “ಶಂಕರ ರಥ”ಲ್ಲಿ ಶ್ರೀಶಂಕರರ ಮೂರ್ತಿ ಮತ್ತು ಶ್ರೀಗುರುಗಳ ಮೆರವಣಿಗೆಯ ಮೂಲಕ “ಸರ್ವಜ್ಞವೇದಿಕೆ”ಗೆ ಕರಕ್ಕೊಂಡು ಬಂದವು.
ವೇದಿಕೆಯ ಮೇಲೆ ಉನ್ನತ ಪೀಠಲ್ಲಿ ಶ್ರೀಶಂಕರರ ಮೂರ್ತಿಯ ಕೂರ್ಸುವ ಮೂಲಕ “ಶಂಕರ ಪಂಚಮೀ” ಉತ್ಸವದ ಆರಂಭ ಆತು.
ಶ್ರೀಗುರುಗ ಸಭೆಯ ಉದ್ದೇಶಿಸಿ “ಇಲ್ಲಿಗೆ ಕಿಂಕರರಾಗಿ ಬಂದೋರೆಲ್ಲ ಶಂಕರರಾಗಿ ಹೋಯೆಕ್ಕು. ಕಾರ್ಯಕ್ರಮಕ್ಕೆ ಬಪ್ಪ ಪ್ರತಿಯೊಬ್ಬನೂ ಪ್ರತಿ ಅಂಶಂದಲೂ ಶಂಕರರ ಸಂದೇಶ ಪಡವ ಹಾಂಗೆ ಆಯೆಕ್ಕು. ಎಲ್ಲ ಶಂಕರಕಿಂಕರರು ಈ ನಿಟ್ಟಿಲಿ ಕಾರ್ಯ ನಿರ್ವಹಿಸೆಕ್ಕು” ಹೇಳಿದವು.

ಮರುದಿನ(೨೬) ವೇದ ಮತ್ತು ಭಾಷ್ಯತ್ರಯಂಗಳ ಪಾರಾಯಣ ಆರಂಭ ಆತು.
ಮಧ್ಯಾಹ್ನದ ಧಾರ್ಮಿಕಸಭಾಕಾರ್ಯಕ್ರಮಲ್ಲಿ “ಶಂಕರಕಿಂಕರ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ಇತ್ತು.
ಪ್ರಶಸ್ತಿಭಾಜನರಾದ ವಿದ್ವಾನ್ ಎನ್.ರಂಗನಾಥ ಶರ್ಮಾರ ಬಗ್ಗೆ ವಿದ್ವಾನ್ ಜಗದೀಶ ಶರ್ಮಾರು ಪ್ರಾಸ್ತಾವಿಕ ಮಾತುಗಳನ್ನಾಡಿ ಅವರ ಆಯ್ಕೆಯ ಹಿಂದಿನ ಕಾರಣವ ತಿಳಿಸಿದವು.
ಅನಿವಾರ್ಯಕಾರಣಂದ ರಂಗನಾಥ ಶರ್ಮಾರಿಂಗೆ ಕಾರ್ಯಕ್ರಮಕ್ಕೆ ಬಪ್ಪಲೆ ಎಡಿಯದ್ದ ಕಾರಣ ಪ್ರಶಸ್ತಿಯ ಘೋಷಣೆ, ವಾಚನ ಮಾಡಿದವು. ಮೋಹನ ಹೆಗಡೆ ಇವು ಪ್ರಶಸ್ತಿಯ ಬಗ್ಗೆ ರಂಗನಾಥ ಶರ್ಮಾರಿಂಗೆ ಇದ್ದ ಭಾವವ ತಿಳಿಸಿದವು.

“ಶಿವರಾತ್ರಿ ಉತ್ಸವ”ಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವಕ್ಕೆ ಘೋಷಿಸಲ್ಪಟ್ಟ “ಸಾರ್ವಭೌಮ ಪ್ರಶಸ್ತಿ”ಯ ತಾಮ್ರಪತ್ರ ವಿತರಣೆಯೂ ನಡದತ್ತು.
ನಂತರ ಶ್ರೀಗುರುಗ ಬಿ.ಕೆ.ಎಸ್.ವರ್ಮಾರು ರಚಿಸಿದ ಶಂಕರಾಚಾರ್ಯರ ವರ್ಣಚಿತ್ರದ ಅನಾವರಣ ಮಾಡಿದವು.
ಅಲ್ಲದ್ದೆ “ಶ್ರೀಶಂಕರಪೂಜಾವಿಧಿಃ” ಮತ್ತು ಭುವನಗಿರಿ ಅನಂತ ಶರ್ಮಾರವರು ಬರದ “ಜಗದ್ಗುರು ಶಂಕರಾಚಾರ್ಯ” ಹೇಳುವ ಎರಡು ಪುಸ್ತಕಂಗ ಲೋಕಾರ್ಪಣಗೊಂಡತ್ತು.
ಅನಾವರಣಗೊಂಡ “ಶಂಕರಚಿತ್ರ”ವ ಎಲ್ಲ ಶಿಷ್ಯಗೃಹಕ್ಕೂ ಸಮುಚಿತವಾಗಿ ಅನುಗ್ರಹಿಸುವ ಸಲುವಾಗಿ ಸಾಂಕೇತಿಕವಾಗಿ ಇಬ್ರಿಂಗೆ ಅನುಗ್ರಹಿಸಿದವು.
ಸಭೆಯ ಉದ್ದೆಶಿಸಿ ಮಾತಡ್ತಾ “ಇನ್ನು ಪ್ರತಿ ಮನೆಲೂ ಶಂಕರರ ಈ ಭಾವಚಿತ್ರ ಇರ್ತು ಹೇಳುವ ಸಂಗತಿಯೇ ಮನಸ್ಸಿಂಗೆ ತುಂಬ ಖುಷಿ ಕೊಡ್ತಾ ಇದ್ದು. ಈ ಭಾವಚಿತ್ರ ಮನೆಲಿಪ್ಪ ಎಲ್ಲ ಅಮಂಗಲವ ಕಳೆಯಲಿ. ಭಾವಚಿತ್ರ ಎಲ್ಲರ ಮನೆಲಿರಲಿ; ಶಂಕರರ ಚಿತ್ರ ಎಲ್ಲೋರ ಭಾವಲ್ಲಿ ಇರಲಿ” ಹೇಳಿದವು.

೨೭ರಂದು “ಸ್ಪರ್ಧಾಶಂಕರ” – ದೇವ್ಯಪರಾಧಕ್ಷಮಾಪಣಾಸ್ತೋತ್ರ ಕಂಠಪಾಠ, ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗ ನಡದತ್ತು.
ಅನೇಕರು ಉತ್ಸಾಹಂದ ಪಾಲ್ಗೊಂಡವು. ಅಂದು ಮಧ್ಯಾಹ್ನ ಬಹಿರಂಗ ಪತ್ರಿಕಾಗೋಷ್ಠಿ ಇತ್ತು.

೨೮ರಂದು ಉದಿಯಪ್ಪಗ ೮.೩೦ರ ಹೊತ್ತಿಂಗೆ ಬೇರೆ ಬೇರೆ ಊರಿಂದ ಬಂದ ಸಮವಸ್ತ್ರ ಧರಿಸಿದ ಸುಮಾರು ೧೪೦೦ ವೈದಿಕರು, ಗೃಹಸ್ಥರು ಸಮ್ಮಿಲಿತರಾಗಿ ರುದ್ರಯಂತ್ರಾಕೃತಿಲಿ ನಿರ್ಮಾಣವಾಗಿದ್ದ, ೧೨೧ ಯಜ್ಞಕುಂಡಂಗಳ ಹೊಂದಿದ್ದ ಅಪೂರ್ವವಾದ ಯಜ್ಞಮಂಟಪವ ಪ್ರವೇಶಿಸಿ “ಅತಿರುದ್ರ ಮಹಾಯಾಗ”ವ ಪ್ರಾರಂಭಿಸಿದವು. ೧೨.೩೦ರ ಸುಮಾರಿಂಗೆ ಪೂರ್ಣಾಹುತಿ ಆತು. ಈ ಸಂದರ್ಭಲ್ಲಿ ಭುವನಗಿರಿ ಅನಂತ ಶರ್ಮಾರು ಪ್ರಾಸ್ತಾವಿಕವಾಗಿ ಮಾತಾಡಿದವು.
ಗುರುಗ ಮಾತಡ್ತಾ “ಇಷ್ಟು ಜನ ವೈದಿಕರು, ಗೃಹಸ್ಥರು ಸೇರಿ ಏಕಕಾಲಲ್ಲಿ ಮಾಡಿದ ಈ ಅತಿರುದ್ರ ಮಹಾಯಾಗ ಎಂಗಳ ಮನಸ್ಸಿಂಗೆ ಅತೀ ಸಂತೋಷ ಕೊಟ್ಟಿದು. ಈ ಸಂದರ್ಭಲ್ಲಿ ಎಂಗ ಕೊಡುವ ಸೂಚನೆ ಒಂದೇ- ನಾವೆಲ್ಲರೂ ಶಂಕರಾಚಾರ್ಯರ ಶಿಷ್ಯರು. ಆ ಪರಂಪರೆಲಿ ಇಪ್ಪೋರು. ಆದ ಕಾರಣ ಇನ್ನು ಮುಂದೆ ರಾಮನವಮೀ, ಕೃಷ್ಣಾಷ್ಟಮೀ ಮೊದಲಾದ ಹಬ್ಬಂಗಳ ಹಾಂಗೆಯೇ ಪ್ರತೀ ಮನೆ-ಮನೆಲೂ ಶಂಕರಪಂಚಮೀ ಆಚರಣೆ ನಡೆಯೆಕ್ಕು. ಇದು ಕೇವಲ ಉಪದೇಶ ಹೇಳಿ ತಿಳಿಯಡಿ, ಗುರುಪೀಠದ ಆದೇಶ ಹೇಳಿ ಭಾವಿಸಿ ಶಿಷ್ಯವರ್ಗ ಇದರ ಪಾಲನೆ ಮಾಡೆಕ್ಕು” ಹೇಳಿದವು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲಾದ ಗಣ್ಯರು ಆಗಮಿಸಿ, ಕಾರ್ಯಕ್ರಮ ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದವು.

ಅನುದಿನವೂ ಸೇವಾಕರ್ತರಿಂದ ಸಾಮೂಹಿಕ ಶ್ರೀಶಂಕರಗುರುಪೂಜೆ ಮತ್ತು ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ(೨೫ ಮತ್ತು ೨೮ಕ್ಕೆ), ಸೌಂದರ್ಯಲಹರೀ ಪಾರಯಣ(೨೭ಕ್ಕೆ) ನಡಕ್ಕೊಂಡಿತ್ತು.
“ಪುಸ್ತಕ ಶಂಕರ”- ಪುಸ್ತಕ ಪ್ರದರ್ಶಿನಿಲಿ ಶಂಕರರ ಕುರಿತಾದ ಹಾಗೂ ಶಂಕರರ ಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡದರೆ “ಶಂಕರ ದೃಗ್ ವಿಹಾರ”ಲ್ಲಿ ಆಚಾರ್ಯರ ಜೀವನವೃತ್ತಾಂತ ಸುಂದರ ಚಿತ್ರಂಗಳ ಮೂಲಕ ಕಣ್ಮನಸೆಳಕ್ಕೊಂಡಿತ್ತು.
ಶಂಕರಾಚಾರ್ಯರು ಬೋಧಿಸಿದ ಸಂದೇಶಂಗಳ ಸಭಾಂಗಣಲ್ಲಿ ಪ್ರದರ್ಶಿಸುವ ಮೂಲಕ ಅಲ್ಲಿಯ ವಾತವರಣ “ಶಂಕರಮಯಮ್” ಆಗಿತ್ತು.

೨೬ ರಿಂದ ೨೮ ರವರೆಗೆ ಹೊತ್ತೋಪಗ ಶ್ರೀಗುರುಗ “ಶಂಕರಗುರುಕಥಾ” ಪ್ರವಚನಮಾಲಿಕೆಯ ನಡೆಸಿಕೊಟ್ಟವು.
೨೬ಕ್ಕೆ ಹೊತ್ತೋಪಗ ಸಪರಿವಾರಸೀತಾರಾಮರ ಮೂರ್ತಿ, ಶಂಕರಭಾಷ್ಯಪುಸ್ತಕಂಗ ಮತ್ತು ಶ್ರೀಗುರುಗಳ ಹೊತ್ತ ಭವ್ಯ ರಥ ಮೆರವಣಿಗೆಲಿ ಸಭಾಂಗಣಕ್ಕೆ ಆಗಮಿಸಿತ್ತು.
ಯಥಾವಿಧಿ ಪೂಜಾದಿಗ ನಡದು “ಶಂಕರಗುರುಕಥಾ” ಆರಂಭಗೊಂಡತ್ತು.

ಜಗದ್ಗುರುವಿನ ಸಂಪೂರ್ಣ ಜೀವನಗಾಥೆಯ ಮನದಾಳಕ್ಕೆ ತಲುಪಿಸುವಂತಹ ಶ್ರೀಗುರುಗಳ ಸುಮಧುರ-ಸುಲಲಿತ ಮಾತು, ಕಥೆಯ ಆರಂಭಕ್ಕೆ ಮೊದಲು ಸತ್ಯನಾರಾಯಣ ಶರ್ಮರ ಪ್ರಸ್ತಾವನೆ, ಸಂದರ್ಭಕ್ಕೆ ತಕ್ಕಂತೆ ರಚಿಸಲ್ಪಟ್ಟ ಗಜಾನನ ಶರ್ಮರ ಸಾಹಿತ್ಯ, ಅದಕ್ಕೆ ರಸ-ಭಾವ ತುಂಬುಲೆ ಪ್ರೇಮಲತಾ ದಿವಾಕರ್, ವಸುಧಾ ಶರ್ಮ, ಶ್ರೀಪಾದ ಭಟ್- ಇವರ ಗಾಯನ, ಗೌರೀಶ ಯಾಜಿಯವರ ಹಾರ್ಮೋನಿಯಂ, ಗೋಪಾಲಕೃಷ್ಣ ಹೆಗಡೆಯವರ ತಬಲ, ಪ್ರಕಾಶ್ ಕಲ್ಲಾರಮನೆಯವರ ಕೊಳಲು, ನೀರ್ನಳ್ಳಿ ಗಣಪತಿ ಮತ್ತು ಬಿ.ಕೆ.ಎಸ್.ವರ್ಮಾರ ಸುಂದರ ಚಿತ್ರಂಗ, ರಾಘವೇಂದ್ರ ಹೆಗಡೆಯವರ ಮರುಳುಮಾಡುವ ಮರಳು-ಚಿತ್ರಕಲೆ, ವಿದ್ವಾನ್ ಜಗದೀಶ ಶರ್ಮಾರಿಂದ ನಿರ್ದೇಶಿಸಲ್ಪಟ್ಟ ಕಣ್ಮನಸೆಳೆಯುವ ವಿಶೇಷ ರೂಪಕಂಗ – ಇಷ್ಟೆಲ್ಲವನ್ನೊಳಗೊಂಡ ಗುರುಕಥೆಯ ಯಶಸ್ಸಿಂಗೆ ತುಂಬಿದ ಸಭಾಂಗಣಲ್ಲಿ ತನ್ಮಯರಾಗಿ ಕೇಳ್ತಾ ಇದ್ದ ಜನಸ್ತೋಮ ಸಾಕ್ಷಿಯಾಗಿತ್ತು.

೨೮ರಂದು ಗುರುಕಥೆ ಮುಗಿವಗ ಇರುಳು ೧೧.೩೦ ಕಳುದಿತ್ತು. ಅಂದು ಉತ್ಸವದ ಕೊನೆ ದಿನ. ಹಾಂಗಾಗಿ ಸುರುವಾಣ ದಿನ ವೇದಿಕೆಲಿ ಮಡುಗಿದ ಶಂಕರರ ಮೂರ್ತಿ, ಗುರುಕಥೆಯ ಅಂಗವಾಗಿ ಮಡುಗಿದ ಸಪರಿವಾರಸೀತಾರಾಮಮೂರ್ತಿ, ಶಂಕರಭಾಷ್ಯಪುಸ್ತಕಂಗ ಮತ್ತು ಗುರುಗಳ ಹೊತ್ತ “ಶಂಕರರಥ” ಹಿಂದಿನಂತೆಯೇ ಮೆರವಣಿಗೆಯ ಮೂಲಕ ಭಾನ್ಕುಳಿ ಮಠಕ್ಕೆ ಸಾಗಿತ್ತು.
ಆಮೇಲೆ ಪುನಃ ಸಭಾಂಗಣಲ್ಲಿ ಮಂತ್ರಾಕ್ಷತೆವಿತರಣಾ ಕಾರ್ಯಕ್ರಮ…

ಇದು ಮುಗಿವಗ ೨೯ರ ಉದಿಯಪ್ಪಗ ೩.೩೦!!…
ಇಲ್ಲಿಗೆ ಒಂದು ಅಭೂತಪೂರ್ವವೂ ಅಪೂರ್ವವೂ ಆದ ಭವ್ಯ ಕಾರ್ಯಕ್ರಮದ ಮುಕ್ತಾಯ ಆತು….

ಕಾರ್ಯಕ್ರಮವೇನೋ ಯಶಸ್ವಿಯಾಗಿ ಮುಕ್ತಾಯ ಆತು… ಆದರೆ ಅದು ನಿಜವಾಗಿಯೂ ಯಶಸ್ವಿ ಅಪ್ಪದು ಪ್ರತಿದಿನವೂ ನಾವು ಶಂಕರರ ಸ್ಮರಣೆ ಮಾಡಿಯಪ್ಪಗ….
ಅವು ತೋರಿದ ದಾರಿಲಿ ನಡದಪ್ಪಗ….
ಅವರ ಕೃತಿಗಳ, ಅವು ಸಾರಿದ ತತ್ತ್ವಂಗಳ ಅನುಸಂಧಾನ ಮಾಡಿಯಪ್ಪಗ….
ಅಥವಾ ನಮ್ಮ ಗುರುಗಳ ಮಾತಿಲಿಯೇ ಹೇಳುದಾದರೆ ನಾವೆಲ್ಲರೂ “ಶಂಕರ”ರೇ ಆದಪ್ಪಗ….
ಅಂಬಗ ನಮ್ಮೆಲ್ಲರ ಬುದ್ಧಿ, ಮನಸ್ಸು, ಹೃದಯ ಎಲ್ಲವೂ ಅತ್ತ ಸಾಗಲಿ…..ಅಲ್ಲದಾ?????!!!!!
(ಇದೆಲ್ಲ ಕಷ್ಟ ಅನ್ಸಿದರೂ?! ಕೊನೆಪಕ್ಷ ಗುರುಗ ಅನುಗ್ರಹಿಸಿದ ಭಾವಚಿತ್ರಕ್ಕೆ ಪ್ರತಿದಿನ ನಮನ, ಶಂಕರಪಂಚಮೀ ಆಚರಣೆ – ಇಷ್ಟಾದರೂ ಮಾಡುಲೆ ಮರೆಯಡಿ ಹೇಳುತ್ತಾ…)

~*~ಶಂಕರಾರ್ಪಣಮಸ್ತು~*~

ಶಂಕರ ಪಂಚಮಿಯ ಕೆಲವು ಪಟಂಗೊ:

ಕುತ್ತಿಗೆದ್ದೆ ಸಿರಿ

   

You may also like...

24 Responses

 1. ಶುದ್ದಿ ಲಾಯಕ ಆಯಿದು ಕೂಸೆ.

  ನೀನು ಮಾತು ಕೊಟ್ಟ ಹಾಂಗೆ ಮುಜುಂಗಾವಿಲಿ ನಡೆದ “ಭವಿಷ್ಯ” ಕಾರ್ಯಕ್ರಮದ ವರದಿಯೂ ಹೀಂಗೆ ಬೇಗನೆ ಬರ‍್ಲಿ.

  ಮುಂದಕ್ಕೂ ಹೀಂಗೆ ಬರೀತಾ ಇರು ಕೂಸೆ. ದೇವರು ನಿಂಗೆ ಒಳ್ಳೆದು ಮಾಡ್ಲಿ

 2. raghumuliya says:

  ಸ್ವಾಗತ.
  ಸಿರಿ ಅಕ್ಕನ ಶುದ್ದಿ,ಪಟ೦ಗೊ,ಗುರುಗಳ ಸ೦ದೇಶ ಎಲ್ಲವೂ ಮನಸ್ಸಿ೦ಗೆ ಮುಟ್ಟಿತ್ತು.

  • ಕುತ್ತಿಗೆದ್ದೆ ಸಿರಿ says:

   ಹರೇ ರಾಮ…. ಧನ್ಯವಾದಂಗೊ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *