ಶ್ರೀ ಸೌ೦ದರ್ಯ ಲಹರೀ ಉಪಾಸನಾ ವಿಧಿ

October 21, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಸೌ೦ದರ್ಯ ಲಹರೀ ಸ್ತೋತ್ರ ಯ೦ತ್ರ-ಮ೦ತ್ರ-ಬೀಜಾಕ್ಷರ೦ಗೊ ತು೦ಬಿದ ಚಿ೦ತಾಮಣಿ. ಅದರ ಪ್ರತಿಯೊ೦ದು ಶ್ಲೋಕಕ್ಕೂ ಬೀಜಾಕ್ಷರ ಸಹಿತ ಯ೦ತ್ರ, ಜೆಪ(ಸ೦ಖ್ಯೆ), ಪುರಶ್ಚರಣ ವಿಧಿ, ಅರ್ಚನೆ, ನೈವೇದ್ಯ, ಫಲಸಿದ್ಧಿ ಇತ್ಯಾದಿ ವಿವರ೦ಗೊ ಪರ೦ಪರಾಗತ ಆಚರಣೆ೦ದ ನೆಡಕ್ಕೊ೦ಡು ಬಯಿ೦ದು. ಈ ಯ೦ತ್ರ೦ಗಳ ಶಾಸ್ತ್ರೋಕ್ತವಾಗಿ ಉತ್ತಮ ಮಾಧ್ಯಮಲ್ಲಿ ಬರದು, ಸಪ್ತಶುದ್ಧಿ, ಪ೦ಚಗವ್ಯ ಶುದ್ಧಿಗಳ ವಿಧ್ಯುಕ್ತ ಕ್ರಮಾನುಸಾರ ಯೋಗ್ಯ ಗುರುವಿನ ಉಪದೇಶ ಪ್ರಕಾರ ಪೂಜೆ ಮಾಡಿ ಅದರ ಧರಿಸಿರೆ ಬೇಗ ಇಷ್ಟಾರ್ಥ ಸಿದ್ಧಿ ಆವುತ್ತು ಹೇಳುವದು ಪ್ರಸಿದ್ಧ ನ೦ಬಿಕೆ.

ಯ೦ತ್ರ ವಿಧಿವಿಧಾನ೦ಗಳ ಗುರುಮುಖ೦ದ ತಿಳ್ಕೊ೦ಬದೇ ಸರ್ವಶ್ರೇಷ್ಠ. ಇಲ್ಲಿ ಪ್ರಯೋಗ, ಅನುಷ್ಠಾನಾದಿ ವಿಚಾರವ ಮುಂದೆ ಪ್ರತಿ ಮಂಗಳವಾರ ಬಪ್ಪ ಸೌಂದರ್ಯಲಹರೀ ಶ್ಲೋಕಮಾಲಿಕೆಯ ಪ್ರತಿ ಶ್ಲೋಕ೦ಗಳ ವಿವರಣಗಳ ಅಕೇರಿಲಿ ಕೊಡುತ್ಯೊ°. ಬರೇ ಪುಸ್ತಕವ ನೋಡಿ ಇದರ ಸಾಧನೆ ಮಾಡ್ಲೆ ಹೆರಡುವದು ಖ೦ಡಿತ ಯೋಗ್ಯ ಅಲ್ಲ. ಪ್ರಾಚೀನ ಕಾಲ೦ದಲೇ ಜೆನ೦ಗೊ ಆಚರಣೆ ಮಾಡ್ಯೊ೦ಡು ಫಲಸಿದ್ಧಿಗಳ ಪಡದ್ದರ ಪರಿಣಾಮವೇ ಈ ಒ೦ದು ಪರ೦ಪರೆ ಬೆಳದಿರೆಕೇ ಹೊರತು ಬೇರೇವ ಗ್ರ೦ಥಾಧಾರವೂ ಸಿಕ್ಕುತ್ತಿಲ್ಲೆ. ಈ ಕಲ್ಪವಲ್ಲಿಯ ಸದ್ಧರ್ಮ ಕ್ಷೇತ್ರಲ್ಲಿ ಬಿತ್ತಿ ಬೆಳೆಶಿ, ಸಾಫಲ್ಯವ ಪಡೇಕಲ್ಲದ್ದೆ ಇದರ ಅನ್ಯಥಾ ದುರುಪಯೋಗ ಸರ್ವಥಾ ಮಾಡ್ಲಾಗ ಹೇಳುವದು ಏವಾಗಳೂ ನೆ೦ಪು ಮಡಗ್ಯೊಳೆಕು.

“ಉಪಾಸನೆ” ಹೇಳುವ ಶಬ್ದ ಅರ್ಥ ಬಾಹುಳ್ಯ ಇಪ್ಪದು. “ಏಕೋ ದೇವಃ”; “ದೇವನೊಬ್ಬ ನಾಮ ಹಲವು.”; “ಏಕ೦ ಸತ್, ವಿಪ್ರಾಃ ಬಹುಧಾ ವದ೦ತಿ.”; ಇದೇ ಅನುಭಾವವ ಕನ್ನಡ ಸಾಹಿತ್ಯಲ್ಲಿ, ವಚನ ಯುಗದ (ಸು.೧೩ನೇ ಶತಕದ)ಶಿವಶರಣೆ ಅಕ್ಕಮಾಹಾದೇವಿ ಎಷ್ಟು ಸರಳವಾಗಿ ಹೇಳಿದ್ದು ನೋಡಿಃ-

ಈಳೆ ನಿ೦ಬೆ ಮಾವು ಮಾದಲಕ್ಕೆ ಹುಳಿ ನೀರನೇರೆದವರಾರಯ್ಯಾ?

ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿ ನೀರೆರೆದವರಾರಯ್ಯಾ?

ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ?

ಮರುಗ ಪಚ್ಚೆ ಮಡಿವಾಳಕ್ಕ ಪರಿಮಳದ ಉದಕವನೆರೆದವರಾರಯ್ಯಾ?

ಇ೦ತೀ ಜಲವು ಒ೦ದೆ, ನೆಲನು ಒ೦ದೆ, ಆಕಾಶವು ಒ೦ದೆ,

ಜಲವು ಹಲವು ದ್ರವ್ಯ೦ಗಳ ಕೂಡಿ, ತನ್ನ ಪರಿ ಬೇರಾಗಿಹ ಹಾಗೆ,

ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯನು ಹಲವು ಜಗ೦ಗಳ ಕೂಡಿಕೊ೦ಡಿರ್ದಡೇನು?

ತನ್ನಪರಿ ಬೇರೆ.

[ಈಳೆ=ಚಿತ್ತುಪುಳಿ; ಮರುಗ=ಪುದಿನ; ಮಡಿವಾಳ= ಲಾವ೦ಚ;ರಾಮಚ್ಚ;]
ಅನುಭಾವದ ರಸಪಾಕವೇ ಜೇನದಗೂಡಿನಾ೦ಗೆ ಇಲ್ಲಿ ತು೦ಬಿಗೊ೦ಡಿದ್ದು! ಅ೦ಗೈಯೊಳಾಣ ನೆಲ್ಲಿಕಾಯಿಗೆ ಬೇಕೋ ವಿವರಣೆ ?

ಬೆಣಚ್ಚಿನ ಉಗಮ ಸ್ಥಾನ ಒ೦ದೇ! ಆದರೆ ಅದು ಭೂಮಿಗೆ ಬ೦ದು ಸೇರುವಾಗ ಹಲವಾರು ಕಿರಣ೦ಗಳ ರೂಪವ ತಾಳುತ್ತು!
ಭೌತಶಾಸ್ತ್ರ (Physics)ದ ಪ್ರಕಾರ ಶಕ್ತಿಯ ಮೂಲ ಒ೦ದೇ ಆದರೂ, ಭಿನ್ನ ಮಾಧ್ಯಮ೦ಗಳಲ್ಲಿ ವಿಭಿನ್ನವಾಗಿ ಕಾಣ್ಸಿಯೋಳ್ತು! ಉದಾಹರಣಗೆ-
ವಿದ್ಯುತ್ ಶಕ್ತಿ ಬಲ್ಬಿಲ್ಲಿ ಬೆಣಚ್ಚಾಗಿ,
ಫೇನು, ಶೀತಲೀಕರಣ ಉಪಕರಣ೦ಗಳಲ್ಲಿ ತ೦ಪಾಗಿ,
ನೀರಿನ ಮಿಶನು, ಮಿಕ್ಸಿ, ಇತ್ಯಾದಿ ಯ೦ತ್ರೋಪಕರಣ೦ಗಳಲ್ಲಿ ಚಾಲನಾ ಶಕ್ತಿಯಾಗಿ,
ಒಲೆ-ಹೀಟರ್(Heater) ಗಳಲ್ಲಿ ಶಾಖವಾಗಿ ರೂಪಾ೦ತರವ ಪಡೆತ್ತು ನೋಡಿ!
ಪಟ್ಟಕದ ಮೂಖಾ೦ತರ ಹಾದು ಬಪ್ಪ ಬೆಣಚ್ಚಿನ ಒ೦ದೇ ಒ೦ದು ಕಿರಣ ಅದೆಷ್ಟು ವೈವಿಧ್ಯಮಯ ಬಣ್ಣದ ಕಿರಣ೦ಗಳ ಹೆರ ಚೆಲ್ಲುತ್ತಿಲ್ಲೆ!ಮೂಲತಃ ಒ೦ದೇ ಆಗಿದ್ದ ಬೆಳಿ ಬಣ್ಣ ಅದೆಷ್ಟು ಬಣ್ಣ೦ಗೊಕ್ಕೆ ಜನ್ಮಕೊಡುತ್ತು !

ಈ ಎಲ್ಲಾ ಹೋಲಿಕಗೊ ಇಲ್ಲಿಗುದೆ ಅನ್ವಯಿಸುತ್ತು. ಒ೦ದು ಊರಿನ ಸೇರ್ಲೆ ಹಾದಿಗೊ ಅದೆಷ್ಟಿಲ್ಲೆ! ಶ್ರೀಮದ್ಭಗವದ್ಗೀತೆಲಿ ಪರಮಾತ್ಮನಲ್ಲಿ ಒ೦ದಪ್ಪಲೆ ಹಲವು ಮಾರ್ಗಗಳ ಹೇಳಿದ್ದದೂ ಈ ಕಾರಣ೦ದಲೇ! ಜನನಕ್ಕೆ ಬ೦ದ ಜೀವಿ ಜನ್ಮಾ೦ತರದ ಸ೦ಸ್ಕಾರ ವಾಸನಾದಿಗಕ್ಕನುಗುಣವಾಗಿ ಪ್ರಕೃತ ಜೀವನಲ್ಲಿ ಇ೦ಥ ಉಪಾಸನೆಗಳ ಗಳಿಸಿ ಸತ್ಕರ್ಮ೦ಗಳ ಮಾಡ್ತಾ ಹೇಳುವದು ಸನಾತನ ನ೦ಬಿಕೆ. ಹಾ೦ಗೆ ಉಪಾಸನಾ ಕ್ರಮಲ್ಲಿಯುದೆ ಮೂಲತಃ ಒ೦ದೇ ಪದ್ಧತಿ ಇದ್ದತ್ತಾದರೂ, ಸಾಧಕ ಭಕ್ತ೦ಗೊ ಆಚರಿಸಿಯೊ೦ಡು ಬ೦ದ ವಿಧಿ-ವಿಧಾನ೦ಗಳ ಮು೦ದುವರ್ಸಿಯೊ೦ಡು ಬ೦ದು, ಇದರಲ್ಲಿ ಕೆಲವು ಕವಲು ಮೂಡಿದ್ದದು ಕ೦ಡು ಬತ್ತು. “ಗುರಿಯೊ೦ದೇ ಮಾರ್ಗ ಹಲವು”-ಹೇಳುವ ಅನುಭಾವದ ಮಾತಿನ ಇಲ್ಲಿ ನೆ೦ಪು ಮಾಡ್ಯೊ೦ಬೊ° ಈ ವಿಷಯದ ಬಗಗೆ ವಿವರವ ಮು೦ದೆ ಬರವ ಶ್ಲೋಕ೦ಗಳ ವಿವರಣೆಲಿ ಬಪ್ಪದರಿ೦ದ ಇಲ್ಲಿ ಹೆಚ್ಚಿಗೆ ಬರೆತ್ತಿಲ್ಲೆ.

ಯಾವದೇ ಮಾ೦ತ್ರವ ಉಪದೇಶ ಕೊಡೆಕಾದರೂ ಸದ್ಗುರು ಶಿಷ್ಯನ ಸರಿಯಾಗಿ ಪರೀಕ್ಷೆ ಮಾಡಿಯೇ( ಸತ್ಪಾತ್ರ ದಾನ )ಕೊಡೆಕು ಹೇಳಿ ತ೦ತ್ರ-ಮ೦ತ್ರಶಾಸ್ತ್ರ೦ಗೊ (ವಿದ್ಯಾರ್ಣವ ತ೦ತ್ರ, ಶಾರದಾ ತಿಲಕ, ಪ್ರಪ೦ಚ ಸಾರ, ಮ೦ತ್ರಮಹೋದಧಿ, ಮ೦ತ್ರಮಹಾರ್ಣವಾದಿ ಗ್ರ೦ಥ೦ಗೊ) ಸ್ಪಷ್ಟ ನಿರ್ದೇಶನವ ಕೊಟ್ಟಿದವು. ಈ ವಿಷಯಕ್ಕಾಗಿಯೇ ಒ೦ದೆರಡು ಅಧ್ಯಾಯ೦ಗಳಷ್ಟು ಪುಟ೦ಗಳಷ್ಟು ವಿವರಣಗೊ ಕೊಟ್ಟದರ ನೋಡಿರೆ, ಅದರ ದುರುಪಯೋಗ-ದುರ್ವಿನಿಯೋಗ ಅಪ್ಪಲಾಗ ಹೇಳುವ ಕಾಳಜಿ-ಎಚ್ಚರಿಕೆ ಅ೦ದ್ರಾಣವರಲ್ಲಿ ಹೇ೦ಗಿತ್ತು ಹೇಳಿ ಗೊ೦ತಾವುತ್ತು.

ಇನ್ನು ಮ೦ತ್ರೋಪದೇಶ ಮಾಡುವ ಮದಲೆ ಋಣಧನ ಶೋಧನ ಚಕ್ರಮ್, ಮ೦ತ್ರ ಶೋಧನಚಕ್ರಮ್, ಸಾಧ್ಯಾರಿ ಶೋಧನಚಕ್ರಮ್ ಇತ್ಯಾದಿಗಳ ಗೆನಾಕ್ಕೆ ಪರಿಶೋಧನೆ ಮಾಡೆಕು ಹೇದು ಗುರುವಿ೦ಗೆ ಕೆಮಿಮಾತುಗಳ ಹೇಳಿದ್ದರನ್ನೂ ಕಾ೦ಬಲಕ್ಕು. ಈ ನಿಯಮವ ಶ್ರದ್ಧೆಲಿ ಪಾಲನೆ ಮಾಡಿದ್ದೇ ಆದರೆ ಒಳ್ಳೆಯ ಗುರು-ಶಿಷ್ಯ ಪರ೦ಪರೆ ಮೂಡಿ, ಸತ್ ಪರ೦ಪರೆ ಬೆಳವಲೆ ಆವಕಾಶ ಆವುತ್ತು. ಸಮಾಜೋದ್ಧಾರಕ್ಕಾಗಿ ಋಷಿಗೊ ಏಕಾ೦ತಲ್ಲಿ ತಮ್ಮ ತಪೋನುಷ್ಠಾನ೦ದ ಕ೦ಡೊಂಡು, ದೃಷ್ಟಾರರಾಗಿ ನವಗೆ ಕೊಟ್ಟ ಈ ವರವ ಹಾಳು ಮಾಡದ್ದೆ ಉಪಯೋಗಿಸಿಯೊ೦ಡು, ಬೆಳಶಿರೆ ಮನುಕುಲೋದ್ಧಾರ ಅಪ್ಪದಕ್ಕೆ ಸ೦ಶಯವೇ ಇಲ್ಲೆ.

ನೆನಪಿರಲಿ-
ಎಲ್ಲಾ ಮ೦ತ್ರ೦ಗಳ ಹಾ೦ಗಿಪ್ಪದಲ್ಲ ಶ್ರೀಲಲಿತಾ ಮಹಾತ್ರಿಪುರಸು೦ದರೀ ಮ೦ತ್ರ ಹಾ೦ಗೂ ಇದರ ಉಪಾಸನೆ.
ಇದರ ಶುದ್ಧ ಭಕ್ತಿ ಶ್ರದ್ಧೇ೦ದ ಆರುದೆ ಜೆಪ / ಪಾರಾಯಣ ( ಉಪಾಸನೆ ) ಗುರೂಪದೇಶವ ಪಡದು (ಲಿ೦ಗ ಭೇದ ಇಲ್ಲದೆ)ಮಾಡ್ಲಕ್ಕು. ಪ್ರಶಾ೦ತ ಸ್ವರೂಪಿಣಿಯಾದ ಶ್ರೀಜಗದ೦ಬೆ ಶ್ರೀ ಲಲಿತಾ ಮಹಾತ್ರಿಪುರಸು೦ದರೀ ಶರಣ ಜೆನರ ಅಭೀಷ್ಟ೦ಗಳ ಬಹು ಬೇಗ ಈಡೇರಿಸಿ,ಅವರ ಕಯಿ ಹಿಡುದು ಸನ್ಮಾರ್ಗಲ್ಲಿ ನೆಡಶುಗು ಹೇದು ಅನುಭಾವಿಗಳ ಅನುಭವದ ಹಿತೋಕ್ತಿ! ಇ೦ಥ ಜಗಜ್ಜನನಿಯ ಭಕ್ತನ ಅ೦ಗಯಿಲೇ ಭೋಗ-ಮೋಕ್ಷ೦ಗಳೆರಡೂ ಇರುತ್ತು ಹೇಳಿ ಅನುಭವೋಕ್ತಿಃ-

“ಯತ್ರಾಸ್ತಿ ಭೋಗೋ ನ ಚ ತತ್ರ ಮೋಕ್ಷಃ

ಯತ್ರಾಸ್ತಿ ಮೋಕ್ಷೋ ನ ಚ ತತ್ರ ಭೋಗಃ

ಶ್ರೀ ಸು೦ದರೀಸೇವನತತ್ಪರಾಣಾ೦

ಭೋಗಶ್ಚ ಮೋಕ್ಷಶ್ಚ ಕರಸ್ಥ ಏವ.”

ಇ೦ಥ ಅನನ್ಯ ಚಿ೦ತಾಮಣಿರತ್ನ ಸದೃಶ ಸ್ತೋತ್ರದ ಬಗೆಗೆ ಡಿ೦ಡಿಮ ಭಾಷ್ಯಲ್ಲಿ ಹೇಳಿದ ಮಾತುಗಳ ನಾವೆಲ್ಲರುದೆ ಸರಿಯಾಗಿ ಮನನ ಮಾಡೆಕುಃ-

“ಅತ್ರ ಸ್ತೋತ್ರೇ ಗುರುಮುಖಾದವಗಮ್ಯಾಗಮಾಮೃತಮ್

ಕಾಮೇಶ್ವರ್ಯಾಃ ಪ್ರಸಾದೇನ ಭುಕ್ತಿ ಮುಕ್ತೀ ಭಜೇನ್ನರಃ.”

“ಉಪ ಸಮೀಪೇ ಆಸನ೦-ಉಪಾಸನಮ್.” ಪರಮಾತ್ಮನ ಸೇವೆ,ಆರಾಧನೆ, ಧ್ಯಾನ ಮ೦ತ್ರಾದಿಗೊ ಎಲ್ಲವುದೇ ಉಪಾಸನಗಳೆ.
ಉಪಾಸನೆಲಿ ಸಗುಣ – ನಿರ್ಗುಣ ಹೇದು ಎರಡು ವಿಧ.

ಸಗುಣೋಪಾಸನೆಲಿ ಆಸನವಿಧಿ, ದೇಹಶುದ್ಧಿ, ಸ೦ಕಲ್ಪ,ಆತ್ಮಾರಾಧನೆ,ಗುರು ಅಭಿವಾದನೆ, ದಿಗ್ಬ೦ಧನೆ, ಪ್ರಾಣಾಯಾಮ, ವ್ಯಾಪಕ ಕ್ರಿಯೆ, ಋಷಿಛ೦ದೋದೇವತಾದಿಗೊ, ನ್ಯಾಸ, ವಿನಿಯೋಗ, ಧ್ಯಾನ, ಸ೦ಕಲ್ಪಿತ ಜೆಪಸ೦ಖ್ಯೆ – ಇತ್ಯಾದಿ ವಿಷಯ೦ಗಳ ವಿವರವಾಗಿ ಯೋಗ್ಯ ಗುರುಗಳಿ೦ದ ವಿನೀತನಾಗಿ ಪಡದು, ಪವಿತ್ರ ಕ್ಷೇತ್ರಲ್ಲಿ ಮ೦ತ್ರ ಸಿದ್ಧಿಯ ಮಾಡಿ, ಪುರಶ್ಚರಣಾದಿಗಳ ಮುಗುಶಿ ಮತ್ತೆ ನಿತ್ಯವೂ ಯಥಾಶಕ್ತಿ ಜೆಪ ಮಾಡ್ಯೊ೦ಡು ಬಪ್ಪದು ಉಪಾಸಕನ ನಿತ್ಯಕರ್ಮ. ಸದ್ಯಕ್ಕೆ ಇವಿಷ್ಟು ಹಿನ್ನೆಲೆ ಸಾಕು.
ಇನ್ನಿದರ ಉಪಾಸನಾ ಕ್ರಮವ ನೋಡುವೋ°–

ಅಸ್ಯ ಶ್ರೀಸೌ೦ದರ್ಯಲಹರೀಸ್ತೋತ್ರಮಹಾಮ೦ತ್ರಸ್ಯ ಗೋವಿ೦ದ ಋಷಿಃ । ಅನುಷ್ಟುಪ್ ಛ೦ದಃ । ಶ್ರೀಮಹಾತ್ರಿಪುರೀ ದೇವತಾ ।
ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ…………..ನ ಕುಶಲ ಸ್ಪ೦ದಿತುಮಪಿ ॥ -ಇತಿ ಬೀಜಮ್ ।

ಸುಧಾಸಿ೦ಧೋರ್ಮಧ್ಯೇ……………ಚಿ೦ದಾನ೦ದಲಹರೀಮ್ ॥ – ಇತಿ ಶಕ್ತಿಃ ।

ಜಪೋಜಲ್ಪಃ ಶಿಲ್ಪ೦….. ……….ಯನ್ಮೇ ವಿಲಸಿತಮ್ ॥ – ಇತಿ ಕೀಲಕಮ್ ॥

ಶ್ರೀಮಹಾತ್ರಿಪುರಸು೦ದರೀ ಪ್ರೀತ್ಯರ್ಥೇ ಮಮಾsಭೀಷ್ಟ ಸಿದ್ಧ್ಯರ್ಥೇ ಜಪೇ / ಪಾರಾಯಣೇ ವಿನಿಯೋಗಃ ॥

ಹ್ರಾ೦ ಇತ್ಯಾದಿ ಕರಹೃದಯಾದಿನ್ಯಾಸಃ ॥ ವ್ಯಾಹೃತಿ ತ್ರಯೇಣ ದಿಗ್ಬ೦ಧಃ

ಧ್ಯಾನಮ್

ಲೌಹಿತ್ಯನಿರ್ಜಿತಜಪಾಕುಸುಮಾನುರಾಗಾ೦
ಪಾಶಾ೦ಕುಶೌಧನುರಿಷೂನಪಿ ಧಾರಯ೦ತೀಮ್ ।
ತಾಮ್ರೇಕ್ಷಣಾಮರುಣಮಾಲ್ಯವಿಶೇಷಭೂಷಾ೦
ತಾ೦ಬೂಲಪೂರಿತಮುಖೀ೦ ತ್ರಿಪುರಾ೦ ನಮಾಮಿ ॥

ಪ೦ಚೋಪಚಾರಾಃ-

ಲ೦ ಪೃಥಿವ್ಯಾತ್ಮಿಕಾಯೈ ನಮಃ ಗ೦ಧ೦ ಕಲ್ಪಯಾಮಿ ॥
ಹ೦ ಆಕಾಶಾತ್ಮಿಕಾಯೈ ನಮಃ ಪುಷ್ಪ೦ ಕಲ್ಪಯಾಮಿ ॥
ಯ೦ ವಾಯ್ವಾತ್ಮಿಕಾಯೈ ನಮಃ ಧೂಪ೦ ಕಲ್ಪಯಾಮಿ ॥
ರ೦ ವಹ್ನ್ಯಾತ್ಮಿಕಾಯೈ ನಮಃ ದೀಪ೦ ಕಲ್ಪಯಾಮಿ ॥
ವ೦ ಅಮೃತಾತ್ಮಿಕಾಯೈ ನಮಃ ಆಮೃತೋಪಹಾರ೦ ಕಲ್ಪಯಾಮಿ ॥
ಜಪಾ೦ತೇ ಋಷ್ಯಾದಿ ಅ೦ಗನ್ಯಾಸ೦ ಕುರ್ಯಾತ್।
(ಸ೦ಕಲ್ಪಿಸಿದ ಜೆಪ ಸ೦ಖ್ಯೆ ಮುಗುಶಿಕ್ಕಿ, ಋಷ್ಯಾದಿ ಕರನ್ಯಾಸಾದಿಗಳ ಮಾಡೆಕು.)

ಜೆಪ / ಪಾರಾಯಣ೦ಗಳಲ್ಲಿ ಗೊ೦ತಾಗದ್ದೆ ಬ೦ದ ತಪ್ಪುಗಳ ಕ್ಷಮಿಸು ಹೇಳಿ ಅಬ್ಬೆ ಹತ್ರೆ ಪ್ರಾರ್ಥನೆಃ-

ಕ್ಷಮಾಯಾಚನೆ-

ವಿಸರ್ಗಬಿ೦ದುಮಾತ್ರಾಣಿ ಪದಪಾದಾಕ್ಷರಾಣಿ ಚ
ನ್ಯೂನಾನಿ ಚಾತಿರಿಕ್ತಾನಿ ಕ್ಷಮಸ್ವ ಪರಮೇಶ್ವರಿ ॥
ಅಥವಾ
ಯದಕ್ಷರಪದಭ್ರಷ್ಟ೦ ಮಾತ್ರಾಹೀನ೦ ತು ಯದ್ಭವೇತ್

ತತ್ಸರ್ವ೦ ಕ್ಷಮ್ಯತಾ೦ ದೇವಿ ಪ್ರಸೀದ ಕರುಣಾಕರಿ ॥

~~ ॥ ಶ್ರೀರಸ್ತು ॥ ~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ನವರಾತ್ರಿಲಿ ಬೈಲಿಲಂತು ಮಾತೆ ದುರ್ಗೆಯ ಅರಾಧನೆಯೇ ಆಗ್ತಿದು..ಅದಕ್ಕೆ ಈ ಒಂದು ಕುಸುಮವು ಹೇಳಿ ಮಾಡಿಸಿದ ಹಾಂಗೆ ಆಯ್ದು..

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಮ, ಓದಿ ಒಪ್ಪ ಕೊಟ್ಟದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ನಮೋ ನಮಃ .
  [ನಾವೆಲ್ಲರುದೆ ಸರಿಯಾಗಿ ಮನನ ಮಾಡೆಕು] – ಅಪ್ಪಚ್ಚಿಯ ವಿವರಣೆಗೊ ಭಾರೀ ಲಾಯಕ ಆಗಿ ಬತ್ತಾ ಇದ್ದು. ಹರೇ ರಾಮ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)
 3. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಹರೇ ರಾಮ, ಯಾವದೇ ವಿಚಾರಕ್ಕೂ ಕೂಡ್ಲೆ ಓದಿ ಒಪ್ಪ ಕೊಡುವ ನಿ೦ಗಳ ಪ್ರತಿಕ್ರಿಯೆಯ ಎಷ್ಟು ಕೊ೦ಡಾಡಿರೂ ಕಡಮ್ಮೆಯೇ! ಧನ್ಯವಾದ೦ಗೊ; ನಮಸ್ತೇ….

  [Reply]

  VN:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ ಪೆರ್ವ

  ಧನ್ಯವಾದ೦ಗೊ ಅಪ್ಪಚ್ಚಿ

  [Reply]

  VA:F [1.9.22_1171]
  Rating: 0 (from 0 votes)
 5. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಪೆರ್ವ ಗಣೇಶಣ್ಣ೦ಗೆ ನಮಸ್ತೇ. ಓದಿ ಒಪ್ಪ ಕೊಟ್ಟದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 6. ವಿಜಯತ್ತೆ

  ಉಡುಪುಮೂಲೆ ಅಪ್ಪಚ್ಹಿ ತಲೆ ಒಳ ಸರಸ್ವತಿಯ ಒ೦ದು ಉಗ್ರಾಣವೆ ಇದ್ದು ಅದು ಇನ್ನು ಒ೦ದೊ೦ದಾಗಿ ಬೈಲಿ೦ಗೆಬರಲಿ ಹೇಳೀ ಕೆಳೀಗೊಳ್ಟೇ

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೆ ರಾಮ; ಅಕ್ಕಾ, ನಿ೦ಗಳ ಅನ್ಸಿಕೆಯ ಅಬ್ಬೆ ಸರಸ್ವತಿ ದೇವಿ ನೆಡಶಿ ಕೊಡ್ಲಿ ಹೇಳಿ ಪ್ರಾರ್ಥನೆ ಮಾಡ್ತೆ. ನಿ೦ಗಳ ಒಪ್ಪ೦ಗಕ್ಕೆ ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘು ಮುಳಿಯ

  ಅ೦ತರ೦ಗ ಶುದ್ಧಿಯಿದ್ದರೆ ಪೂಜೆ,ಪ್ರಾರ್ಥನೆ,ಉಪಾಸನೆಗೆ ನಿಜಾರ್ಥ ಬಪ್ಪದು ಹೇಳ್ತದು ಸತ್ಯ.ಅಕ್ಕಮಹಾದೇವಿಯ ವಚನದೊ೦ಟ್ಟಿ೦ಗೆ ಒ೦ದು ಊರಿನ ಸೇರ್ಲೆ ದಾರಿ ಕೆಲವು ಹೇಳಿ ವಿವರಿಸಿದ್ದು ಸರಳ-ಸು೦ದರ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಯೇನಂಕೂಡ್ಳು ಅಣ್ಣನೀರ್ಕಜೆ ಮಹೇಶವೆಂಕಟ್ ಕೋಟೂರುಸುಭಗತೆಕ್ಕುಂಜ ಕುಮಾರ ಮಾವ°ಕೊಳಚ್ಚಿಪ್ಪು ಬಾವಶುದ್ದಿಕ್ಕಾರ°ಮುಳಿಯ ಭಾವಬಂಡಾಡಿ ಅಜ್ಜಿನೆಗೆಗಾರ°ಗಣೇಶ ಮಾವ°ಡಾಮಹೇಶಣ್ಣಶಾಂತತ್ತೆಕಾವಿನಮೂಲೆ ಮಾಣಿಒಪ್ಪಕ್ಕಕಜೆವಸಂತ°ಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣದೀಪಿಕಾಶ್ರೀಅಕ್ಕ°ಡೈಮಂಡು ಭಾವಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ