ಕಾಣೆಯಾದವರು

July 13, 2011 ರ 11:56 pmಗೆ ನಮ್ಮ ಬರದ್ದು, ಇದುವರೆಗೆ 68 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಣೆಯಾಗಿದ್ದಾರೆ”

ಸುವರ್ಣಿನೀ ಕೊಣಲೆ ಎಂಬ ಹೆಸರಿನ ನಮ್ಮ ಒಪ್ಪಣ್ಣನ ಬೈಲಿನ ಡಾಗುಟ್ರಕ್ಕ, ಜಂಬ್ರಂಗಳಲ್ಲಿ ಊಟ ಹೊಡದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬೋಸ ಭಾವನಿಗಾಗಿ ಮದ್ದಿನ ಗಿಡ ಪೊರ್ಪುವುದಕ್ಕಾಗಿ ಹೋದವರು ಬೈಲಿಗೆ ಹಿಂದಿರುಗಲಿಲ್ಲ. ಯಾರಾದರೂ ಕಮ್ಯುನಿಸ್ಟ್ ಸೊಪ್ಪು ಉರುಂಬುವವರನ್ನು ಕಂಡಲ್ಲಿ ಗುರಿಕ್ಕಾರರಿಗೆ ಕೂಡ್ಲೇ ತಿಳಿಸಬೇಕಾಗಿ ಬೈಲಿನವರು ಮಾಡಿಕೊಳ್ಳುವ ವಿನಂತಿಗಳು.

ಹೀಂಗಿದ್ದ ಒಂದು ಪ್ರಕಟಣೆ ಪೇಪರಿಲ್ಲಿಯೋ ಟೀವಿಲಿಯೋ ಬಪ್ಪನ್ನ ಮೊದಲು ಬೈಲಿಂಗೆ ಬಂದು ಎತ್ತಿಕ್ಕುದು ಸೂಕ್ತ ಹೇಳಿ ಕಂಡತ್ತು ! ಬೈಲಿಂಗೆ ಬಂದರೆ ಸಾಕ? ಎಂತಾರು ಶುದ್ದಿ ಹೇಳದ್ದರೆ ಹೇಂಗಪ್ಪದು? ಹಾಂಗಾರೆ ಎಂತ ಶುದ್ದಿ ಅಕ್ಕಪ್ಪಾ ಹೇಳಿ ಆಲೋಚನೆ ಮಾಡುವಗ ’ಕಾಣೆ ಆದವರ’ ಬಗ್ಗೆಯೇ ಬರದರೆ  ಸರಿ ಹೇಳಿ ತೋರಿತ್ತು !!

ಸುಮಾರು ವರ್ಷ ಹಿಂದೆ ದೂರದರ್ಶನಲ್ಲಿ ’ಕಾಣೆಯಾದವರ ಬಗ್ಗೆ ಪ್ರಕಟಣೆಗಳು’ಹೇಳಿ ಬಂದುಗೊಂಡಿತ್ತು, ಈಗಳೂ ಇದ್ದೋ ಎಂತೋ..ಉಮ್ಮ ಗೊಂತಿಲ್ಲೆ. ಹಾಂಗೆ ಪ್ರಕಟಣೆ ಮಾಡಿರೆ ಜನಂಗೊಕ್ಕೆ ಗೊಂತಾವ್ತದ ಆರಾರು ಎಲ್ಲೆಲ್ಲಿಂದ ಕಾಣೆ ಆಯ್ದವು ಹೇಳಿ. ಎನಗೂ ಕೆಲವೆಲ್ಲ ಕಾಣೆ ಆದ ಹಾಂಗೆ ಕಂಡತ್ತು. ನಮ್ಮ ಬೈಲಿಲ್ಲಿಯೇ ಒಂದು ಪ್ರಕಟಣೆ ಮಾಡಿರೆ ಹೇಂಗೆ ಹೇಳಿ ಕಂಡತ್ತು. ಪ್ರಪಂಚಕ್ಕೆ ಬಿಬಿಸಿಯೇ ದೊಡ್ಡದಾಗಿಕ್ಕು, ನಮ್ಮ ಶುದ್ದಿಗೊಕ್ಕೆ ಬೈಲೇ ಚೆಂದ. ಇಲ್ಲಿ ಕಾಣೆ ಆದವರಪಟ್ಟಿಲಿ ನಿಂಗೊ ಆರನ್ನಾರೂ ಕಂಡರೆ ತಿಳುಶಿಕ್ಕಿ ಆತೋ….?

  • ಉಡುಪಿ ಮಂಗಳೂರು ದಾರಿಯುದ್ದಕ್ಕೂ ಇತ್ತಿದ್ದ ಭತ್ತದ ಗೆದ್ದೆಗೊ ಕಾಣೆ ಆಯ್ದು, ಆರಾರು ಹೊತ್ತುಗೊಂಡೇ ಹೋದವೋ ಅಲ್ಲ ನುಂಗಿಹಾಕಿದವೋ ಹೇಳಿ ತನಿಖೆ ಆಯಕಷ್ಟೆ.
  • ನಮ್ಮ ಬೆಂಗಳೂರಿಂದ ನಮ್ಮ ಕನ್ನಡವೇ ಕಾಣೆ! ಬಳ್ಳಾರಿಯ ಗಣಿಯೊಳ ಬಿದ್ದತ್ತೋ ಅಲ್ಲ ಕೊಳ್ಳೇಗಾಲದ ಕಾಡಿಲ್ಲಿ ಕಣ್ತಪ್ಪಿತ್ತೋ ಹೇಳಿ ತಿಳಿವಲೆ ಬೋಸ ಭಾವ ಹೆರಟಿದ ಹೇಳಿ ಶುದ್ದಿ.
  • ಹಿಂದೊಂದು ಕಾಲಲ್ಲಿ ಪದ್ಯಹೇಳಿಯೊಂಡು[?] ಹೆಮ್ಮಕ್ಕಳ,ಕೂಸುಗಳ ಕೈಗೆ ಬಳೆ ಮಡುಗಿಯೊಂಡು ಊರೂರು ಸುತ್ತಿಗೊಂಡಿದ್ದ ಬಳೆಗಾರ ಅಂತೂ ಕಾಣೆಯಾದವರ ಪಟ್ಟಿಗೆ ಸೇರಿ ಸುಮಾರು ವರ್ಷವೇ ಕಳುತ್ತದ :(  ಕೈಂದ ಬಳೆಯೂ ಕಾಣೆ ಆಯ್ದು ಹೇಳ್ತದು ಇನ್ನೊಂದು ಶುದ್ದಿ.
  • ಕೂಸುಗಳ ಮೋರೆಂದ ಕುಂಕುಮವೇ ಕಾಣೆ ಆಯ್ದು, ನಾಯಿ ನಕ್ಕಿದ್ದೋ ಅಲ್ಲ ಪೇಶನ್ನೋ [fashion] ಹೇಳಿ ಗೊಂತಾಯ್ದಿಲ್ಲೆ.
  • ನಮ್ಮ ಊರಿನ ಮನೆಯ ಬಾಗಿಲ ಮುಂದಂದ ಆರೋ ರಂಗೋಲಿಯನ್ನೇ ಕಾಣೆ ಮಾಡಿದ್ದವಡ ! ರಂಗೋಲಿ ಅಡೀಂದ ಹೋಪ ಜಾಣಂಗೊಕ್ಕೆ ರಜ್ಜ ಬಂಙ ಆವ್ತಡ :(
  • ಇರುಳಿನ ಉಡುಗೆ [ನೈಟಿ] ಹಗಲುದೇ ಶೋಭಿಸುಲೆ ಶುರು ಆದಪ್ಪಗಂದ ನಿತ್ಯಕ್ಕೆ ಸೀರೆ ಕಾಂಬದು ಇಲ್ಲೆ ಹೇಳಿ ಆಯ್ದೀಗ ! ಶಿಶುನಾಳ ಶರೀಫರ ಮಾತಿಲ್ಲಿ ಹೇಳ್ತರೆ ಸೀರೆಯಾ ನೈಟಿ ನುಂಗಿತ್ತಾ !! [ಶರೀಫರ ಕ್ಷಮೆ ಕೋರುತ್ತೆ]
  • ರಜ್ಜ ಸೌಖ್ಯ ಇಲ್ಲದ್ದೆ ಅಪ್ಪಗಳೇ ಸಾಂಬಾರ ಮರಿಗೆಂದಲೂ ದೊಡ್ಡ ಮಾತ್ರೆ ಮರಿಗೆ ಹುಡುಕ್ಕುತ್ತ ಜನಂಗಳ ಕಾರ್ಬಾರಿಲ್ಲಿ ಕಷಾಯಂಗೊ ಇತ್ಯಾದಿ ಮನೆ ಮದ್ದುಗಳೇ ಕಾಣೆ ಆಯ್ದು ಹೇಳಿ ಬಂಡಾಡಿ ಅಜ್ಜಿಗೆ ಬೇಜಾರಾಯ್ದು, ಓ ಮೊನ್ನೆ ಡಾಗುಟ್ರಕ್ಕನ ಹತ್ತರೆ ಹೇಳಿಯೊಂಡಿತ್ತವು.
  • ಮಲ್ಲಿಗೆ ಕೊಯ್ದು ಮಾಲೆ ಕಟ್ಟಿ ಮಗಳಿಂಗೆ ಸೂಡುಸುಲೇ ಹೇಳಿ ಬಪ್ಪಗ ಕೂಸಿನ ಜಡೆಯೇ ಕಾಣೆ ಅಡ ! ಉದ್ದಕ್ಕೆ ಅಲ್ಲದ್ದರೂ ಸಣ್ಣ ಮಾಲೆ ಸೂಡೂವಷ್ಟಾರೂ ಇದ್ದಿದ್ದರೆ ಆವ್ತಿತು, ಹಿಂದಂದ ನೋಡುವಗ ಮಾಣಿಯೋ ಕೂಸೋ ಹೇಳುವ ಸಂಶಯ ಬಾರದ್ದ ಹಾಂಗೆ ಹೇಳಿ ನೆಗೆಮಾಣಿ ಹೇಳಿದ.

[ಕಾಣೆ ಆದವರ ಪಟ್ಟಿ ಇನ್ನೂ ಉದ್ದ ಇದ್ದು, ಆದರೆ ಎಲ್ಲವನ್ನೂ ಒಟ್ಟಿಂಗೇ ಕೊಟ್ಟರೆ ಹುಡುಕ್ಕುವವಕ್ಕೆ ಬಂಙ ! ]

ಕಾಣೆ ಆದವರ ಬಗ್ಗೆ ಮಾಹಿತಿ ಕೊಟ್ಟವಕ್ಕೆ ಮಳೆಗಾಲಲ್ಲಿ ಕೂದೊಂಡು ತಿಂಬಲೆ ನಾಲ್ಕು ಪುಳಿಂಕಟೆಯನ್ನೂ ನಾಲ್ಕು ಸಾಂತಾಣಿಯನ್ನೂ ಕೊಡ್ಸುಲೆ ಗುರಿಕ್ಕಾರ್ರ ಹತ್ತರೆ ಶಿಫಾರಸು ಮಾಡ್ಲಕ್ಕು :)

ಈ ಪಟ್ಟಿಲಿ ಇಪ್ಪ ಎಲ್ಲವೂ ಪೂರ ಹೇಳಿ ಕಾಣೆ ಆಗದ್ದರೂ ಹೆಚ್ಚಿಂದು ಭಾಗಶಃ ಕಾಣೆ ಆಯ್ದು . ಕಾಲಕ್ಕೆ ತಕ್ಕ ಕೋಲ ಹೇಳಿದ ಹಾಂಗೆ ನಡೆತ್ತಾ ಇದ್ದು. ಆದರೆ ಎಲ್ಲದಕ್ಕೂ ಅದೇ ಮಾತು ಅನ್ವಯ ಆವ್ತಿಲ್ಲೆ. ಕೆಲವು ಸರ್ತಿ ಕೆಲವೆಲ್ಲ ಕಾಣೆಯಾದವರ ಪಟ್ಟಿಗೆ ಸೇರದ್ದ ಹಾಂಗೆ ನಾವು ನೋಡೆಕಾವ್ತು….ಅಲ್ಲದ್ದರೆ ನಾಳೆ ನಮ್ಮ ಅಸ್ತಿತ್ವವೇ ಕಾಣೆ ಅಪ್ಪ ಪರಿಸ್ಥಿತಿಗೆ ನಾವೇ ಕಾರಣ ಆವ್ತು !! ಎಲ್ಲರೂ ಕೈ ಜೋಡುಸುವ…ಆರೂ ಕಾಣೆ ಆಗದ್ದ ಹಾಂಗೆ ನೋಡಿಗೊಂಬ :)

-ನಿಂಗಳ

ಸುವರ್ಣಿನೀ ಕೊಣಲೆ.

ಕಾಣೆಯಾದವರು, 4.5 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 68 ಒಪ್ಪಂಗೊ

  1. ಗಣೇಶ ಮಾವ°
    ಗಣೇಶ ಮಾವ°

    ಓಹ್,,ಕಾಣೆ ಶುದ್ದಿ ಫಷ್ಟು ಆಯಿದು.

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಧನ್ಯವಾದ….. :)

    [Reply]

    VA:F [1.9.22_1171]
    Rating: 0 (from 0 votes)
  2. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ

    [ಸುವರ್ಣಿನಿ ಎಲ್ಲಿ ಕಾಣೆ ಅಯಿದು ಹೇಳಿ ಒಂದು ಸಂಶಯ ಬಂದದು ಅಪ್ಪು.
    ಬೈಲಿಲ್ಲಿ ಹಾಂಗೆ ಇನ್ನೂ ಕೆಲವು ಜೆನಂಗೊ ಅಂಬಗಂಬಗ ಕಾಣೆ ಆವ್ತಾ ಇದ್ದವು.]

    ಶುದ್ದಿ ಲಾಯಿಕ ಆಯಿದು.
    ಪ್ರಾಣಿ ಪಕ್ಷಿಗಳೂ ಕಾಣೆ ಆದ ಲಿಸ್ಟಿಲ್ಲಿ ಇದ್ದವು. ಮೊಬೈಲ್ ಬಂದ ನಂತ್ರ ಗುಬ್ಬಚ್ಚಿಗೊ ಕಾಣೆ ಆಯಿದವು.

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಧನ್ಯವಾದ….. :)
    ಅಪ್ಪು, ಸುಮಾರು ವಸ್ತುಗಳೂ ಜೀವಿಗಳೂ ಕಾಣೆ ಆವ್ತಾ ಇಪ್ಪದಪ್ಪು.. ಅದರೊಟಿಂಗೆ ಮಾನವತೆಯೂ ಕೆಲವು ಕಡೆ ಕಾಣೆ ಆವ್ತಾ ಇದ್ದು ಹೇಳಿ ದುಃಖವೂ ಆವ್ತು..

    [Reply]

    VA:F [1.9.22_1171]
    Rating: 0 (from 0 votes)
  3. ನೆಗೆಗಾರ°

    ಅದಾ, ಸುವರ್ಣಿನಿಅಕ್ಕ ಬಂದವು. ಇನ್ನು ಹೆದರಿಕೆ ಇಲ್ಲೆ – ಮಳಗೆ ಜ್ವರ ಬಂದರುದೇ.

    ಕಾಣೆಯಾದ ಪಟ್ಟಿಲಿ ಎನ್ನ ಸ್ಲೇಟು ಸೇರುಸುವನಾ? :-)
    ಹೋದರೆ ಹೋಗಲಿ, ಹುಡ್ಕುದು ಬೇಡ. ಅಲ್ಲದಾ?

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ನಿನ್ನ ಸ್ಲೇಟು ಕಾಣೆ ಆದರೆ ಹುಡ್ಕುದು ಖಂಡಿತಾ ಬೇಡ ಮಾಣಿ….. ಹೊಸತ್ತು ತಂದರಾತು :)

    [Reply]

    VA:F [1.9.22_1171]
    Rating: 0 (from 0 votes)
  4. ಚೆನ್ನೈ ಬಾವ°
    ಚೆನ್ನೈ ಭಾವ

    ಹದಿನೈದು ದಿನಕ್ಕೆ ಮಗಳ ಮನಗೆ ಹೋಗಿ ಬಪ್ಪಗ ಶರ್ಮಪ್ಪಚ್ಚಿಯ ಉಪ್ಪಿನಕಾಯಿ ಬರಣಿ ಕಾಣೆಡ. ಅಡ್ಕತ್ತಿಮಾರು ಮಾವನ ಚಿಮಿಣಿ ದೀಪ, ಲಾಟಾನ್ ಎಲ್ಲಿ ಹೋತು ಹೇಳಿಯೇ ಗೊಂತಿಲ್ಲೇಡ. ಮಳೆಗಾಲಲ್ಲಿ ಬಟ್ಯನ ಕಿಡಿಂಜಲು ಕಾಣೆಯಾಗಿ ಕೆಲಸ ಬಿಟ್ಟಿಕ್ಕಿ ಹೋಪಗ ಮುಂಡಿ ಸೊಪ್ಪು ಸಾನ ಕಾಣುತ್ತಿಲ್ಲೆಡ. ಬಟ್ಟಮಾವನ ಚರ್ಮದ ಮೆಟ್ಟು ಕಂಬಳಿಬೆಟ್ಟು ಸಟ್ಟುಮುಡಿಗೆ ಹೋದಲ್ಲಿ ಕಾಣೆಯಾದ್ದು ಇನ್ನೂ ಮರದ್ದವಿಲ್ಲೆ. ಮಗ್ಗದ ಸೀರೆ ಅಗ್ಗ ಆದರೂ ಶ್ರೀ ಅಕ್ಕಂಗೆ ಮಾತ್ರ ಮರವಲೇ ಎಡಿತ್ತಿಲ್ಲೆಡ. ಫ್ರಿಡ್ಜ್ ಬಂದ ಮತ್ತೆ ಹೂಜಿ ಕಾಣುತ್ತಿಲ್ಲೆ ಹೇಳಿ ಈಗಳೂ ಹೇಳುತ್ತವು ಕೆದೂರ ಡಾಕುಟ್ರು. ಗಂಟಗೊಂದರಿ ನ್ಡೈ ನ್ಡೈ ಬಡುಕ್ಕೊಂಡಿದ್ದ ವಾಲ್ ಕ್ಲೋಕ್ ಈಗ ಬತ್ತಿಲ್ಯೊ ಕೇಳ್ತವು ಬಂಡಾಡಿ ಅಜ್ಜಿ. ಹೊಸ್ತಿಲ್ಲಿದ್ದರಲ್ಲದೋ ಉದಿಯಪ್ಪಗ ಎದ್ದು ಹೊಸ್ತಿಲಿಂಗೆ ಹೊಡಾಡುವದು, ರಂಗೋಲಿ ಹಾಕುವದು ಹೇಳ್ತವು ಜಯಶ್ರೀ ಅಕ್ಕ. ಇತ್ತೀಚಗೆ ದೀಪಾವಳಿಗೆ ಬಲೀಂದ್ರ ಎಲ್ಲೋರ ಮನಗೆ ಬಂದೊಂಬಲೆ ಎಡಿತ್ತಿಲ್ಲೆಡ. ಬುಗುರಿ ಇಲ್ಲದ್ದ ಮತ್ತೆ ಬುಗುರಿ ಆಡುತ್ತೇಂಗೆ, ಕುದುರೆಮುಖ ಬಿಟ್ಟಮತ್ತೆ ಕಲ್ಲುಜಿಬ್ಲಿ ಆಡಿದ್ದೇ ಇಲ್ಲೆ ಹೇಳಿ ದೀಪಿಕಾ ಕಂಪ್ಲೈಂಟು. ಅಜ್ಜಿಯ ಪೈಸೆ ಸಂಚಿ, ಮಾಸ್ಟ್ರು ಮಾವನ ಎಲೆ ಸಂಚಿ ಹುಡಿಕ್ಯೋಂಡು ಹೋದ ಪುಚ್ಚೆಪ್ಪಾಡಿ ಮಹೇಶಣ್ಣನ ಆರಾರು ಕಂಡಿದ್ದೀರೋ?. ಅದೆಲ್ಲಾ ಬಿಡಿ.., ಇಲ್ಲೇ ಅಡ್ಡಾಡಿಗೊಂಡಿದ್ದ ಬಾಲಿಶ್ ಬಾಲಣ್ಣ , ಸಂಸ್ಕೃತ ಸಂಶೋಧನಗೆ ಇಳುದ ಡಾ॥ ಮಹೇಶಣ್ಣನೂ ಕಾಣೆ. ಪಲ್ಲೆಕ್ಕಾಯಿ ಆರಿಂಗಾರು ಸಿಕ್ಕಿರೆ ಬಂಡಾಡಿ ಅನುಅಕ್ಕಂಗೆ ಬೇಕಡ – ನೆಲಕ್ಕಲ್ಲಿ ಉದ್ದಿ ಬೆಶಿಮಾಡಿ ಪೋಕನೇಟು ಮಕ್ಕಳ ಕಾಲಿಂಗೆ ತಾಗುಸಲೋ, ಬಣ್ಣ ಹಚ್ಚಿ ಕಿಟಿಕಿಲಿ ಮಡುಗಲೋ. ಧ್ವನಿ ರೆಕಾರ್ಡ್ಗಗೊ , ರೆಕಾರ್ಡ್ ಪ್ಲೇಯರ್ ಇದ್ದರೆ ಮುಳಿಯ ಭಾವಂಗೆ ಇರಲಿ ಹೇಳಿದ್ದವು. ಹಾಳೆಲಿ ಕೂರ್ಸಿ ಎಳೆತ್ತ ಆಟ ಇದ್ದರೆ ಚೈತು ಬತ್ತಡ.

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಕಾಣೆ ಆದ ಕೆಲವೊಂದರ ಬಗ್ಗೆ ಮಾತಾಡೂವಗ ಹಳೇ ನೆನಪುಗೊ ಮೆಲ್ಲಂಗೆ ಮನಸ್ಸಿಲ್ಲಿ ಹಾದು ಹೋವ್ತು …. ಬೇಸಗೆ ರಜೆಲಿ ಊರಿಂಗೆ ಹೋಗಿಯೊಂಡಿದ್ದಿಪ್ಪಗ ಆಡಿಗೊಂಡಿದ್ದ ಆಟಂಗೊ.. ಗಾಳಿಗೆ ಬೀಳುವ ಕಾಟು ಮಾವಿನ ಹಣ್ಣು ಹೆರ್ಕುಲೆ ಕಾದು ಕೂಬದು !! ಹಪ್ಪಳ ಒಣಗ್ಸುಲೆ ಮಕ್ಕಳ ಕೂರ್ಸಿರೆ ಅಲ್ಲಿಂದ ಹಪ್ಪಳವೂ ಕಾಣೆ ಮಕ್ಕಳೂ ಕಾಣೆ !!! ಇದೆಲ್ಲವೂ ಈಗ ಕಾಂಬಲೆ ಸಿಕ್ಕುತ್ತೇ ಇಲ್ಲೆಯಾ ಏನ ಊರಿಲ್ಲಿ ಅಲ್ಲದಾ?

    [Reply]

    VA:F [1.9.22_1171]
    Rating: 0 (from 0 votes)
  5. ಕೋಳ್ಯೂರು ಕಿರಣ

    ಆರು ಕಾಣೆ ಆದ್ದು?

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಕಾಣೆ ಆದವರ ಪಟ್ಟಿ ಸುಮಾರು ಉದ್ದ ಇದ್ದು ಅಣ್ಣಾ…..

    [Reply]

    VA:F [1.9.22_1171]
    Rating: 0 (from 0 votes)
  6. AnandaSubba

    ಬಿತ್ತಿಂಗೆ ಮಡುಗಿದ ಸೊರೆ ಬುರುಡೆ ಕಾಣೆ… ಕೆಲವು ಹಣ್ಣುಗಳಲ್ಲಿ ಬಿತ್ತೂ ಕಾಣೆ

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಸತ್ಯ….

    [Reply]

    VA:F [1.9.22_1171]
    Rating: 0 (from 0 votes)
  7. ಸುಭಗ

    ‘ಕಿರುಮಾಣೀ.. ಹೊನ್ನ ಮೇಲೊಪ್ಪ ಕಿರುಗೆಜ್ಜೇ..
    ಸರ್ಪ ತೀಙಾಣಿ ಸರ್ಪನ್ನಾಭರಣ..
    ತೊಟ್ಲಿಂಗೇ ಬಂದಾವು ಹನ್ನೆರಡಾರೊಳಗೇ..
    ಘಮ್ಮೂ ಘೈಲೆಂಬಾ ಕೀಲನ್ನೇ ಕೊಟ್ಟೂ..’
    ಎನ್ನ ಬಾಲ್ಯಲ್ಲಿ ಎಂಗಳ ಮನೆಲಿ ಇದ್ದಿದ್ದ ಹೊನ್ನಕ್ಕಜ್ಜಿ (ಎನ್ನ ಅಪ್ಪನ ಸೋದರತ್ತೆ) ಹೇಳಿಂಡಿದ್ದಿದ್ದ ತೊಟ್ಳಹಾಡಿಲ್ಲಿ ಎನಗೆ ಈಗ ನೆಂಪಿಪ್ಪ ಕೆಲವು ಸಾಲುಗೊ ಇದು.
    ಹೀಂಗಿದ್ದ ಹಾಡುಗೊ, ಹಾಡುವ ಅಜ್ಜಿಯಕ್ಕೊ, ಹಾಡಿಸಿಗೊಂಬ ಮಕ್ಕೊ, ಉದ್ದಾಕೆ ಉಚ್ಚಾಲು ಬಿಡುವಗ ‘ಕ್ರಿಯೋಂ ಕ್ರಿಯೋಂ’ ಲಯಬದ್ಧ ಶಬ್ದಮಾಡಿಂಡು ಇದ್ದಿದ್ದ ತೊಟ್ಲುಗೊ ಎಲ್ಲವೂ ಈಗ ಕಾಣೆ.. ಕಾಣೆ..
    ‘ಭಾವ,ಈಗಾಣ ಮಕ್ಕೊಗೆ ಹೀಂಗಿಪ್ಪ ಆಭರಣಂಗೊ ಬಿಡಿ; ನೇರ್ಪಕೆ ಒಂದು ನೇವಳ ಇಕ್ಕೊ?’ ಕೇಳಿ ಕಿಸಕ್ಕನೆ ನೆಗೆ ಮಾಡಿದವು ಮನ್ನೆ ಚೆನ್ನೈ ಭಾವ. ಅದೂ ಅಪ್ಪಾದ ವಿಷಯವೇ!
    (ಹೇಳಿದಾಂಗೆ, ಈ ತೀಙಾಣಿ/ಸರ್ಪನ್ನಾಭರಣ ಹೇಳಿರೆ ಏವ ನಮೂನೆ ಆಭರಣ; ಏವ ಅಂಗಕ್ಕೆ ಹಾಕಲೆ ಇಪ್ಪದು ಹೇಳಿ ಎನಗೂ ಗೊಂತಿಲ್ಲೆ. ಆರಾರು ಗೊಂತಿಪ್ಪವು ಬೈಲಿಂಗೆ ತಿಳುಸಿರೆ ಒಳ್ಳೆದು)
    ಅಪರೂಪಕ್ಕೆ ಬಂದರೂ ಒಳ್ಳೆಯ ಶುದ್ದಿಯನ್ನೇ ಕೊಟ್ಟಿದಿ ಸುವರ್ಣಿನಿಯಕ್ಕಾ.. ಅಭಿನಂದನೆಗೊ.

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಓ ಮೊನ್ನೆ ಕೇರಳಕ್ಕೆ ಹೋಗಿಪ್ಪಗ, ಭತ್ತದ ಗೆದ್ದೆಲಿ ನೇಜಿ ನೆಡ್ತ ಒಂದು ಅಜ್ಜಿ [ಸಣ್ಣ ಪ್ರಾಯದವ್ವು ಈ ಕೆಲಸಕ್ಕೆ ಹೋಪದೇ ಕಾಣ್ತಿಲ್ಲೆ !!] ಮಲಯಾಳಲ್ಲಿ ನೇಜಿ ನೆಡುವ ಪದ್ಯ ಹೇಳುದು ಕೇಳಿತ್ತು, ನಮ್ಮ ಊರಿಲ್ಲಿ ಕೇಳ್ತೇ ಇಲ್ಲೆ ಅಲ್ಲದಾ?

    [Reply]

    VA:F [1.9.22_1171]
    Rating: 0 (from 0 votes)
  8. ಶ್ರೀಅಕ್ಕ°

    ಸುವರ್ಣಿನಿ ಅಕ್ಕೋ,

    ನಿಂಗೋ ಒಂದು ಊರಿಂದ ಇನ್ನೊಂದು ಊರಿಂಗೆ ಎತ್ತಿ ಒತ್ತರೆ ಆಗಿ ಬೈಲಿಂಗೆ ಎತ್ತಿದಿ ಅನ್ನೆ!! ಸಮಾಧಾನ ಆತು!! ಈ ಡಾಗುಟ್ರಕ್ಕೋ ಇಲ್ಲದ್ದೆ ಬೈಲು ರಜ್ಜ ಕಂಗಾಲು ಆವುತ್ತು. ಒಂದು ಡಾಗುಟ್ರಕ್ಕ° ಬಂತು. ಇನ್ನೊಂದು ಕಾಣೆ ಆದೋರ ಪಟ್ಟಿಗೆಯೋ!!! 😉

    ಕಾಣೆ ಆದ್ದದರಲ್ಲಿ ಬೈಲಿನ ಪಟದ ಪುಟ ಮೊದಾಲು ಸೇರ್ಸಿಕ್ಕಿ ಆತೋ!!! ಅದು ಎಲ್ಲಿ ಕಾಣೆ ಆಯಿದು ಹೇಳಿ ಸುಮಾರು ಹುಡುಕ್ಕಿ ಸಿಕ್ಕಿದ್ದಿಲ್ಲೆ ಎನಗೆ!! ವರ್ಷ ಒಂದಾತು ಹೊಸ ಪಟಂಗ ಬಾರದ್ದೆ!! ಬಪ್ಪ ತಿಂಗಳಿಂಗೆ ವಾರ್ಷಿಕೋತ್ಸವ ಮಾಡ್ಲೆ ಇದ್ದು ಹೇಳಿದ್ದ° ಶ್ರೀಶಣ್ಣ !! 😉

    ನೆಗೆ ಮಾಣಿ ಪಟ ಎಲ್ಲ ಕಾಣೆ ಮಾಡಿದ್ದ° ಹೇಳಿದ° ಒಪ್ಪಣ್ಣ!! ಪತ್ತಾಯಲ್ಲಿ ಮಡಗಿದ್ದದಡ. ಪತ್ತಾಯಕ್ಕೆ ಒರಳೆ ಬಂತೋ!! ಈಗ ಇಲ್ಲೆಡ್ಡ. ಅದು ಮಾಂತ್ರ ಅಲ್ಲ ಪತ್ತಾಯಲ್ಲಿ ಮಡಗಿದ್ದದು ಸುಮಾರು ಒಳ್ಳೆ ಒಳ್ಳೆ ಮಾಹಿತಿಗೋ ಕಾಣೆ ಆಯಿದು ಹೇಳಿ ಗುರಿಕ್ಕಾರ್ರು ರಜ್ಜ ಸಮಯ ಮದಲು ಹೇಳಿಗೊಂಡಿತ್ತಿದ್ದವಡ್ಡ…. :-( :-(
    ಬೈಲಿಲಿ ಶಾಂತತ್ತೆ ಆಟಿಲಿ ಆದರೂ ಪುರುಸೋತ್ತು ಮಾಡಿ ಬತ್ತವೋ ನೋಡೆಕ್ಕಷ್ಟೇ!!

    ನಮ್ಮ ಮನೆಗಳಲ್ಲಿ ಹಿರಿಯರಿಂದ ಬಂದದು ಸುಮಾರು ಕಾಣೆ ಆಯಿದು. ನಾವೆಲ್ಲ ಒಂದರಿ ಸರಿಯಾಗಿ ನೋಡಿ ಮಡಿಕ್ಕೊಂಡರೆ ಇನ್ನು ಕಾಣೆ ಅಪ್ಪದು ತಪ್ಪುಗು. ಸುವರ್ಣಿನಿ ಅಕ್ಕೋ, ಎಲ್ಲೋರೂ ಒಂದರಿ ಆಲೋಚನೆ ಮಾಡ್ಲೆ ಅಪ್ಪ ಹಾಂಗೆ ವಿಷಯ ಕೊಟ್ಟಿ ಧನ್ಯವಾದಂಗ.

    [Reply]

    ಸುವರ್ಣಿನೀ ಕೊಣಲೆ

    Suvarnini Konale Reply:

    ಶ್ರೀ ಅಕ್ಕ, ಎನಗೂ ನಿಂಗಳೆಲ್ಲರಿಂದ ದೂರ ಹೋಗಿ , ಕಾಣೆ ಆಗಿ ಬೇಜಾರಾಯ್ದು :( ಬೈಲಿಂದ ಕಾಣೆ ಅಪ್ಪದು ತಾತ್ಕಾಲಿಕ ಅಷ್ಟೇ !! ಎಲ್ಲಿ ಹೋದರೂ , ನವಗೆ ನಮ್ಮ ಬೈಲೇ ಲಾಯ್ಕ ಅಲ್ಲದಾ? ಊರಿಡೀ ತಿರುಗಿ ಬಂದು ನಮ್ಮ ಮನೆಗೆ ಬಂದು ಎತ್ತಿದ ಹಾಂಗೆ..

    [Reply]

    ganesh Reply:

    ಅಕ್ಕ ಪರಿಕಲ್ಪನೆ ತುಂಬಾ ಚೆನ್ನಾಗಿದ್ದು.. ನಂಗೆ ಇಸ್ತವಾಗದ್ದು ಹುಡುಗಿಯರ ಮುಖದಮೆಲಿನ ಕುಂಕುಮ ಕಾಣೆಯಾಗದ್ದು.. ಆದ್ರೆ ಇನ್ನೂ ಒಂದಿದ್ದು.. ಜಡೆನೂ ಅದರ ಜೊತೆಗೆ ನಾಪತ್ತೆ ಆಜು….

    ಹಂಗೆ ನೋಡ್ತಾ ಹೋದ್ರೆ ನಮ್ಮ ಅಚ್ಚು ಮೆಚ್ಚಿನ ಹಕ್ಕಿ, ಗುಬ್ಬಕ್ಕ ಪಾಪ ಎಲ್ಲಿಗೆ ಹೋತೆನ?

    ಹೀಂಗೆ ಬರೆತೆ ಹೋದ್ರೆ ತುಂಬಾ ಇದ್ದು..

    ಗಣೇಶ್ ಉಪಾಧ್ಯ

    [Reply]

    VA:F [1.9.22_1171]
    Rating: 0 (from 0 votes)
  9. ಪುತ್ತೂರು ವೆಂಕಟಣ್ಣ
    ವೆಂಕಟಕೃಷ್ಣ.ಕೆ.ಕೆ.

    ಜೀವನ ಕ್ರಮದ ಸಹಜ ಬದಲಾವಣೆಯೇ ಕಾರಣ ಆಗಿ..
    ಅಗತ್ಯ ಇಲ್ಲದ್ದ ,ಅಥವಾ ಇಲ್ಲೇ ಹೇಳಿ ಕೆಲವು ಜನ ಗ್ರೇಶಿದ ಸಂಗತಿಗಳ ಕಾಣದ್ದೆ ಅಪ್ಪದು ಒಂದು ಸಾಮಾನ್ಯ ಸಂಗತಿ..
    ಮನುಷ್ಯನೇ ಕಾಣೆ ಅಪ್ಪ ಈ ಲೋಕಲ್ಲಿ ಮನುಷ್ಯರು ಕಂಡುಕೊಂಡ ಕ್ರಮಂಗೊ ಇಲ್ಲದ್ದೆ ಅಪ್ಪದು ಚೋದ್ಯವೇ ಅಲ್ಲ ಬಿಡಿ.
    ಯಾವುದೇ ವಸ್ತು ಅಥವಾ ಕ್ರಮಂಗೊ ಉಪಯೋಗ ಇಲ್ಲದ್ದ್ರೆ ಕಾಣೆಯಾಗಿಯೋ…ಇಡುಕ್ಕಿ ಹೋಪದೋ
    ಆದರೆ ಅದರಲ್ಲೆಂತ ಆಶ್ಚರ್ಯ..??
    ಆದರೆ ಅದರ ಲೇಖನ ಮಾಡಿದ್ದು ಒಳ್ಳೇದಾಯಿದು..
    ಚೆಂದದ ಕಲ್ಪನೆ / ಬರಹ..

    [Reply]

    VA:F [1.9.22_1171]
    Rating: 0 (from 0 votes)
  10. ಅಕ್ಕನ ಆರು ದಿನುಗೇಳಿದ್ದು ಈಗ? ಅರ್ಧಲ್ಲೇ ಬಿಟ್ಟಿಕ್ಕಿ ಹೋಯಿದವು. ತೋಟಕ್ಕೆ ನೀರು ಚೇಪುವ ಚಿಲ್ಲಿ ಇಲ್ಲೆ. ಚೊಟ್ಟೆ, ಚೊಟ್ಟೆ ಮರಿಗೆ ಇಲ್ಲೆ. ನೀರು ಚೇಪುವ ದಂಬೆ ಇಲ್ಲೆ. ಮೀವಲೆ ಹೋದರೆ ಸೀಗೆ ಹೊಡಿ, ಭಾಗೆ ಹೊಡಿ ಇಲ್ಲೆ. ವಸ್ತ್ರ ತೊಳವಲೆ ನರುವಳ ಹೊಡಿ ಇಲ್ಲೆ.ಎಲೆ ತಿಂಬಲೆ ಎಲೆ ತಟ್ಟೆಯ ಮಡುಗಿದ್ದವಿಲ್ಲೆ. ಬೆಲ್ಲನೀರು ಆಸರಿಂಗೆಯಂತೂ ಕೊಟ್ಟಿದವೇಇಲ್ಲೆ. ಕೊಟ್ಟಗೆಗೆ ಹೋಪಾಗ ಒನಕೆ ಇಲ್ಲೆ. ಬೀಸುವ ಕಲ್ಲೂ ಇಲ್ಲೆ. ಅಜ್ಜಿಯ ಕೆಂಪು ಮಡಿ ಎಲ್ಲಿ ಮಡುಗಿದ್ದು ಈ ಕೂಸು ಗೊಂತಿಲ್ಲೆ.ಾಜ್ಜಿಗೆ ಮಡಿ ಸುತ್ತದ್ದೆ ಉದಯರಾಗ. ಜೋಗುಳ ಪದ,ಆರತಿ ಎತ್ತುವ ಹಾಡು ಹೇಳುವ ಕ್ರಮ ಇಲ್ಲೆ.
    ಇದರ ಎಲ್ಲಾ ಹುಡುಕಿ ಕೊಡೊದು ಬಿಟ್ಟು ಈ ಅಕ್ಕ ಎಲ್ಲಿ ಪುನಹ ಕಾಣೆ ಆತು ಗೊಂತಾವಿತ್ತಿಲ್ಲೆ. ಒಂದರಿ ಆರಾದರೂ
    ಹುಡುಕಿ.

    [Reply]

    VA:F [1.9.22_1171]
    Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಬಟ್ಟಮಾವ°ಬೋಸ ಬಾವಜಯಶ್ರೀ ನೀರಮೂಲೆವೇಣೂರಣ್ಣಚುಬ್ಬಣ್ಣಪುತ್ತೂರುಬಾವಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಶಾ...ರೀಗಣೇಶ ಮಾವ°ಶರ್ಮಪ್ಪಚ್ಚಿಮಾಲಕ್ಕ°ಪಟಿಕಲ್ಲಪ್ಪಚ್ಚಿಒಪ್ಪಕ್ಕವೆಂಕಟ್ ಕೋಟೂರುಪೆರ್ಲದಣ್ಣಸುವರ್ಣಿನೀ ಕೊಣಲೆನೆಗೆಗಾರ°ವಾಣಿ ಚಿಕ್ಕಮ್ಮಡಾಗುಟ್ರಕ್ಕ°ದೊಡ್ಡಭಾವಪುಟ್ಟಬಾವ°ದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ