“ಅಮೆರಿಕ ರಿಟರ್ನ್ಡ್ ! “

December 24, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಂಬಾರರಿಂಗೆ ಜ್ಞಾನಪೀಠ ಸಿಕ್ಕಿಯಪ್ಪದ್ದೆ ಪುಸ್ತಕ ಭಂಡಾರಂಗಳಲ್ಲಿ ಅವರ ಕೃತಿಗಳ ಮರುಪ್ರಕಟ ಮಾಡಿ ಮಾರಾಟಕ್ಕೆ ಮಡಗಿತ್ತಿದ್ದವು. ಆ ಸಮಯಲ್ಲಿ ತೆಕ್ಕೊಂಡ ಅವರ ಪುಸ್ತಕ ” ಶಿಖರ ಸೂರ್ಯ” ವ ಹಿಡ್ಕೊಂಡು ಓದಿಗೊಂಡಿತ್ತಿದ್ದೆ.

“ಕೈಲಿ ಒಂದು ಪುಸ್ತಕ ಹಿಡ್ಕೊಂಡು ಕೂದರೆ ನಿಂಗೊಗೆ ಇತ್ಲ್ಯಾಗಿಯಾಣ ಯೇಚನೆಯೇ ಇಪ್ಪಲಿಲ್ಲೆ” – ಪಾರು ಯೇವಾಗಳೂ ದೂರುತ್ತ ಹಾಂಗೆ, ಬಾಯಿ ತೆಗದತ್ತು.

“ನೀನು ಓದುಲೆ ಕೂರೆಕ್ಕಾರೆ ಎಂತಕೆ ಒಲೆಲಿಪ್ಪದರ ಎಲ್ಲ ಇಳುಗಿ ಮಡಗುತ್ತದು..?” ಈ ನಮುನೆ ಪಾಟೀ ಸವಾಲು ಹಾಕಿರೆ ಮಾಂತ್ರವೇ ಸುಮ್ಮನೆ ಕೂರುಗು.

ಮರದಿನ ಉದಿಯಪ್ಪಗಾಣ “ಚಪಾತಿ”ಗೆ ಕೂಟಿಂಗಿಪ್ಪ ತಯಾರಿ ಮಾಡಿಗೊಂಡಿತ್ತು ಪಾರು, ಆಚಿಕೆ “ಉಂಬ ಮೇಜಿ”ಲಿ.

ಕೂದೊಂಡು  ಕೈಲಿ ಕೆಲಸ ಮಾಡುವಾಗ ಬಾಯಿಗೂ ಕೆಲಸ ಇರಳಿ ಹೇಳ್ತ ಯೇಚನೆಲಿ ಎನ್ನ ಮಾತಾಡ್ಸುಲೆ ಮಾಡಿದ ಪ್ರಯತ್ನಕ್ಕೆ ವಿಘ್ನ ಬಂದ ಮೇಲೆ ಮಗನ ಮಾತಾಡ್ಸುಲೆ ಶುರು ಮಾಡಿತ್ತು.

ಅವರ ಎಲ್ಲ ಸಂವಾದ ಎನ್ನ ಕೆಮಿಗೆ ಬಿದ್ದರೂ ಗಮನ ಕೊಟ್ಟಿದಿಲೆ, ಆದರೆ ಇದೊಂದು ಮಾತು ಕೇಳಿಯಪ್ಪದ್ದೆ ಎನ್ನ ಓದಾಣ ನಿಂದತ್ತು.

“ನಾಳಂಗೆ ಉದಿಯಪ್ಪಗ ತಿಂಡಿಗೆ ಮುಳ್ಳುಸೌತೆ ದೋಸೆ ಮಾಡಿರೆ ಎಂತಕ್ಕು ?”

“ಅದು ಬೇಡಮ್ಮ, ದೊಂಡೆಲಿ ಕಂತುಗು”

ಮಗನ ತಮಾಶೆ ಕೇಳಿ ಪಾರುಗೆ ನೆಗೆ ತಡವಲೆಡಿಯ, ಎನಗೆ ಮತ್ತೆ ಓದುಲೆ ಎಡಿಯ. ಪುಸ್ತಕ ಮುಚ್ಚಿ ಇವರ ಪಂಚಾತಿಗೆಲಿ ಸೇರಿಗೊಂಡೆ.

ಅಷ್ಟಪ್ಪದ್ದೆ, ಪಾರುಗೆ ಸಮದಾನ ಆಗಿರೆಕ್ಕು.

“ಅದಾ, ಈಗ ಸರಿ ಆತಿದ. ಅಲ್ಲದ್ದರೆ ಕೂದೊಂಡು ಮಾತಾಡುವ ಹೇಳಿರೆ ನಿಂಗೊ ಪುಸ್ತಕ ಬಿಡುಸಿ ಕೂರುತ್ತಿ. ಆನು ಮಾತಾಡಿರೆ ಗೋಡೆಯೇ ಹೂಂಕುಟ್ಟುದು.”

“ಹೂಂ.”

“ಇಂದು ಶಾಲೆಂದ  ಬಂದಿಕ್ಕಿ ಸಣ್ಣವ°ಕೊಟ್ಟ  ವರದಿ ಕೇಳಿದ್ದಿರೋ ?”

“ಹೂಂ.”

“ಅಲ್ಲಾ, ನಿಂಗೊ ಪುಸ್ತಕ ಮುಚ್ಚಿ ಮಡಗಿರೆ ಸಾಲ, ಅದರಂದ ಹೆರ ಬನ್ನಿ ನೋಡೊ° ”

“ಅಲ್ಲಲ್ಲ, ಹೇಳು.  ನೀನು ಹೇಳಿದ್ದರ ಕೇಳಿಗೊಂಡಿದೆ” ಇನ್ನುಈ ಪುಸ್ತಕದ ಗುಂಗಿಂದ ಹೆರ ಬಾರದ್ರೆ ಕಷ್ಟ ಹೇಳಿ ಕಂಡತ್ತು ಎನಗೆ.

“ಎಂತ ಪುಟ್ಟಾ, ನೀನು ಎಂತ್ಸರ ಹೇಳಿದ್ದು ಅಮ್ಮನತ್ತರೆ ?”

ಯೇವ ಶುದ್ದಿಯ ಆನು ಕೇಳ್ತ ಇಪ್ಪದು ಹೇಳಿ ಮಾಣಿಗೆ ಅಷ್ಟು ಸುಲಭಲ್ಲಿ  ಗೊಂತಾಯಕ್ಕನ್ನೆ. ಅಮ್ಮ ನೆಂಪು ಮಾಡಿಯಪ್ಪದ್ದೆ ವರದಿ ಒಪ್ಪುಸಿದ°.

“ಅದಿದ್ದಲ್ದಾ, ನವಗೆ ಮದರ್ ಟಂಗ್ ಕನ್ನಡ ಅಲ್ಲದ ಅಪ್ಪ°.”

“ಅಪ್ಪನ್ನೆ, ಸರಿ. ”  ಮಕ್ಕೊ ಇಂಗ್ಲೀಶ್ ಮೀಡಿಯಮ್ ಶಾಲೆಲಿ ಕಲಿವಗ ಕನ್ನಡ ಕಲಿತ್ತ ಕ್ರಮ ಹೀಂಗೆ ಇಕ್ಕಷ್ಟೆ.

“ಎನ್ನ ಫ್ರೆಂಡು ಸೋಹನಿಂಗೆ ಮದರ್ ಟಂಗ್ ಮಳಯಾಳ. “

“ಆತು, ಅದಕ್ಕೆಂತ ”

“ಮತ್ತೆ  ಅವನ ಫಾದರ್ ಟಂಗ್ ತಮಿಳು”

“ಹಾಂಗೆಲ್ಲ, ಫಾದರ್ ಟಂಗ್ ಹೇಳಿ ಇರ್ತಿಲೆ. ಅದೂ…”

“ಮತ್ತೆಂತ, ಎನ್ನ ಫ್ರೆಂಡ್ ಹೇಳಿದ್ದ°, ಅವನ ಅಮ್ಮ ಮಳಯಾಳ ಮಾತಾಡುದು, ಅಪ್ಪ ತಮಿಳು ”  ಇವ° ಸುಲಭಲ್ಲಿ ಬಿಟ್ಟುಕೊಡ್ತ ಆಲೋಚನೆಲಿ ಇಲ್ಲೆ ಹೇಳಿಗೊಂಡು ಆನು ಹತ್ತರೆ ಕೂರ್ಸಿಗೊಂಡು ವಿವರುಸುಲೆ ಶುರು ಮಾಡಿದೆ. ಒಳ ಅಟ್ಟುಂಬಳಂದ ಪಾರುವ ಸ್ವರ ಕೇಳಿತ್ತು.

“ಊಟಕ್ಕೆ ಹಪ್ಪಳ ಹೊರಿಯೆಕ್ಕೋ..?”

” ಹ್ಹಾಂ..ಬೇಕು ” ಹೇಳಿಗೊಂಡು ಮಾಣಿ ಅತ್ತ ಓಡಿದ°.

ಪ್ರತೀ ಸರ್ತಿ ಪಾರು ಹಪ್ಪಳ ಹೊರಿವಾಗ ಎನಗೆ  ಒಂದು ಹಳೆ ಸಂಗತಿ ನೆಂಪಾವುತ್ತು. ಇದು ಆಗಿ ವರ್ಷ ಒಂದಾದರೂ ಇನ್ನೂ ಮರದ್ದಿಲೆ.!

“ಆಹ್ಹಾ.. .ಈ ಹಪ್ಪಳದ ಭಾಗ್ಯವೇ.!”

ಅದೊಂದರಿ ಹಪ್ಪಳ ಹೊರ್ಕೊಂಡು  ಪಾರು ಈ ಮಾತಿನ ಹೇಳಿತ್ತಿದ್ದು.

“ಕೊದಿ ಕೊದಿ ಎಣ್ಣೆಲಿ ಬಿಟ್ಟ ಮತ್ತೆಯೂ ಭಾಗ್ಯ ಹೇಳ್ತೆನ್ನೆ  ಇದರ ನೀನು ?”

“ಅಲ್ಲದ ಮತ್ತೆ, ಇದು ಅಮೆರಿಕ ರಿಟರ್ನ್ಡ್ ಹಪ್ಪಳ. ಆರಿಂಗಿದ್ದು, ಆರಿಂಗಿಲ್ಲೆ ಈ ಭಾಗ್ಯ. ಸತ್ಯಕ್ಕಾರೆ ಇದರ ಎಣ್ಣೆಲಿ ಹಾಕಿ ಹೊರಿವಲೆ ಮನಸ್ಸೇ ಬತ್ತಿಲೆ, ಆತೋ !”

“ಪಾರು, ಆನು ಹೋಗಿ ಬಂದದು ಕಂಪೆನಿಯವು ಕಳಿಸಿದ ಕಾರಣ. ನಿನ್ನನ್ನೂ ಕರಕ್ಕೊಂಡು ಹೋಪಲೆ ಎನಗೆ ಸಾಮರ್ಥಿಗೆ ಸಾಲ. ಅದಕ್ಕೀಗ ನೀನು…”

“ಓಯಿ, ಹಾಂಗೆಲ್ಲ ನಿಂಗೊ ಅರ್ಥ ಮಾಡೆಕ್ಕಾದ್ದಿಲ್ಲೆ, ಆನು ಕುಶಾಲಿಂಗೆ ಹೇಳಿದ್ದು.”

ಈ ಮಾತು ಹೇಳಿಯಪ್ಪಗ ಎನಗೆ ಒಂದರಿಯಂಗೆ ಹಾಂಗೆ ಕಂಡದಷ್ಟೆ. ಪಾರು ಹಾಂಗೆಲ್ಲಾ ತಿಳ್ಕೊಂಬ ಜೆನ ಅಲ್ಲ. ಹಾಸಿಗೆ ಇಪ್ಪಷ್ಟೇ ಕಾಲು ನೀಡುವ ಅಭ್ಯಾಸ ಅದಕ್ಕೆ, ಮದಲಿಂದಲೂ.

ಮರೆಯದ್ದಾಂಗೆ ಇನ್ನೊಂದು ಮಾತೂ ಸೇರ್ಸುತ್ತು ಈಗೀಗ ಪಾರು.

“ನಿಂಗೊಗೆ ಅಲ್ಲಿ ಹೋಗಿ ಎರಡು ತಿಂಗಳಿಲಿ ಚಪಾತಿ ಮಾಡ್ಲೆ ಅಭ್ಯಾಸ ಅಕ್ಕು ಹೇಳಿ ಅನು ಗ್ರೇಶಿಗೊಂಡಿದ್ದದು.ಉದಿಯಪ್ಪಗ ನಾಕು ಲಟ್ಟಿಸಿ ಕೊಟ್ಟರೆ ಎನಗೆ ಆಷ್ಟು ಸಕಾಯ ಆದ ಹಾಂಗೆ ಆವುತಿತ್ತಿದಾ.”

ಪಾರುವ ಲೆಕ್ಕಾಚಾರ ಹಾಂಗೆ, ಬೇಲೆನ್ಸು ತಪ್ಪುಲಿಲ್ಲೆ ! ಆದರೆ ಎನಗೆ ಚಪಾತಿ ಲಟ್ಟುಸುವ ಬೇಲೆನ್ಸೇ ಸರಿ ಆಯಿದಿಲ್ಲೆ !!

ಕಳುದ ವರ್ಷ, ಕೆಲಸದ ತುರಿತ್ತಂದ ಕಂಪೆನಿ ಲೆಕ್ಕಲ್ಲಿ ಅಮೆರಿಕಕ್ಕೆ ಹೋಪಲಿತ್ತಿದ್ದು. ಎರಡು ತಿಂಗಳಿಪ್ಪ ಕಾರಣ ಅಲ್ಲಿ ಉಳ್ಕೊಂಬಲೆ ಅಡಿಗೆ ವೆವಸ್ತೆಯೂ ಇಪ್ಪ ಒಂದು ರೂಮು, ದಿನಾಗಿಳೂ ಹೋಗಿ ಬಪ್ಪಲೆ ಹತ್ತರೆಯೂ ಅಪ್ಪ ಹಾಂಗೆ ಇಪ್ಪ ಹೋಟೆಲಿಲಿ ಇಲ್ಲಿಂದಲೇ ನಿಘಂಟು ಮಾಡಿಕ್ಕಿ ಹೆರಟದು. ಅಕ್ಕಿ, ತೊಗರಿ ಬೇಳೆಂದ ಹಿಡುದು ಎಣ್ಣೆ,ತುಪ್ಪ, ಸಾಂಬಾರು ಹೊಡಿ ಹೇಳಿಗೊಂಡು ನಿತ್ಯ ಅಡಿಗಕಿಪ್ಪ ಎಲ್ಲ ಸಾಮಾನುಗಳ ಕಟ್ಟಿಗೊಂಡು ಹೋಪ ಆಲೋಚನೆ ಮಾಡಿತ್ತಿದ್ದೆ. ಸಾಮಾನಿನ  ಪಟ್ಟಿಲಿ ಒಂದರಿ ಕಣ್ಣಾಡಿಸಿ  ಒಗ್ಗರಣೆ ಸಾಮಾನುಗಳನ್ನೂ,MTR ನ ಲೆಮನ್ ರೈಸು, ಪುಳಿಯೋಗರೆ ಮಿಕ್ಸುಗಳನ್ನೂ ಸೇರ್ಸಿತ್ತು, ಪಾರು.

“ಅದಾ, MTR ನ ಹುಳಿಯ ಪೆಕೇಟೂ ಇದ್ದಿದಾ, ತೆಕ್ಕೊಂಡು ಹೋಪಲೆ ಅನುಕೂಲ ”

ಅಕೇರಿಗೆ ಗೋದಿ ಹೊಡಿಯೂ ಇರಳಿ ಹೇಳಿತ್ತು.

“ಗೋದಿ ಹೊಡಿ ಎಂತಕೆ, ಅಂತೆ ಕಟ್ಟಿಗೊಂಡು ಹೋಪದು ? ಎನಗೆ ಚಪಾತಿ ಮಾಡಿ ಅಭ್ಯಾಸ ಇಲ್ಲೆ” ಅದು ಸುಲಭ ಅಲ್ಲ ಹೇಳ್ತ ನಂಬಿಕೆ ಎನ್ನದು.

“ಇದಾ, ಒಂದು ಕಿಲೊ ತೆಕ್ಕೊಂಡು ಹೋಗಿ. ಅಲ್ಲಿ ಹೋಗಿ ಚಪಾತಿ ತಿನ್ನೆಕ್ಕು ಹೇಳಿ ಅಪ್ಪಗ ಮಾಡ್ಲಕನ್ನೆ. ಎಂತ ಕಷ್ಟ ಇಲ್ಲೆ. ನಿಂಗೊ ಒಂದರಿ ಉದಿಯಪ್ಪಗ, ಅನು ಹಿಟ್ಟು ಕಲಸುವಲ್ಲಿಂದ, ಲಟ್ಟಿಸಿ ಬೇಶುವನ್ನಾರ ಹೇಂಗೆ ಹೇಳಿ ನೋಡಿ. ಗೊಂತಕ್ಕು.”

” ಲಟ್ಟಣಿಗೆಯನ್ನೂ ಕಟ್ಟಿಗೊಳ್ಳೆಕ್ಕಂಬಗ ಆನು”

“ಒಂದು ತೆಕ್ಕೊಂಡ್ರೆ ಆತನ್ನೆ. ಮಾಂತ್ರ ಬಪ್ಪಗ ನೆಂಪಿಲಿ ವಾಪಾಸು ತರೆಕ್ಕು ನಿಂಗೊ ”  ಹೋಯೆಕ್ಕಾರೆ ಮದಲೇ ನೆಂಪು ಹೇಳಿತ್ತು ಪಾರು.

“ಚಪಾತಿ ಮಾಂತ್ರ ಮಾಡಿರೆ ಸಾಕೋ, ಕೂಟಿಂಗೆ ಭಾಜಿಯನ್ನೂ ಮಾಡೆಕ್ಕು, ಹುಂ..”  ಉದಿಯಪ್ಪಗ ಎದ್ದು ಸುಲಾಭಲ್ಲಿ ಅಪ್ಪ ಕೆಲಸ ಇದಲ್ಲ ಹೇಳಿ ಎನಗೆ ಕಂಡದು.

“ಎರಡು ದಿನ ಮಾಡಿಯಪ್ಪಗ ಅಭ್ಯಾಸ ಆವುತ್ತು. – ಮನಸ್ಸಿದ್ದರೆ ಮಿನಿಟಿಲಿ ಅಪ್ಪ ಕೆಲಸ ಅದು.”

“ಶುರುವಿಂಗೆ, ಒಂದು ಅಂದಾಜಿಗಪ್ಪಷ್ಟು ನೀರಿಂಗೆ ಉಪ್ಪು, ರಜ್ಜ ಸಕ್ಕರೆ ಹಾಕಿ ಕರಡಿಸಿ, ಮತ್ತೆ ಗೋದಿ ಹೋಡಿ ಹಾಕಿ ಮಿಕ್ಸ್ ಮಾಡಿರೆ, ಚಪಾತಿ ರುಚಿ ಇರ್ತು. ಮಕ್ಕೋ ಕೆಲವು ದಿನ ಭಾಜಿ ಹಾಂಗೆ ಒಳುಸಿ, ಬರೇ ಚಪಾತಿ ತಿಂತವು”

ಪಾರುಗೆ ಎನ್ನ ಕೈಲಿ ಚಪಾತಿ ಮಾಡ್ಸುಲೆ ಎನ್ನಂದ ಹೆಚ್ಚಿಗೆ ಉಮೇದು ಎಂತಕೆ ಹೇಳಿ ಎನ್ನ ತಲೆಗೆ ಹೋಯ್ದೇ ಇಲ್ಲೆ.. !  ಉದಿಯಪ್ಪಗ ಜಟ್ ಪಟ್ ಲಿ ಚಪಾತಿ ಮಾಡಿ ಮುಗುಶುವ ಕ್ರಮ ನೋಡಿಯಪ್ಪಗ ಎನಗೂ ಮಾಡಿ ನೋಡ್ಲಕ್ಕು ಹೇಳಿ ಉಮೇದು ಬಂದದು ಸುಳ್ಳಲ್ಲ. ಕೊಂಡು ಹೋಪ ಸಾಮಾನಿನೊಟ್ಟಿಂಗೆ ಹಲ್ದಿರಾಮ್ ನ ಕೆಲವು ತಿಂಡಿಗಳನ್ನೂ ತೆಕ್ಕೊಂಡಪ್ಪಗ, ಒಂದು ಕಟ್ಟು ಹಪ್ಪಳವನ್ನೂ ಮಡಗಿತ್ತು,

ಅಮೇರಿಕಲ್ಲಿ ಎರಡು ತಿಂಗಳಿಲಿ ಅಶನ – ಸಾಂಬಾರು, ಲೆಮನ್ ರೈಸು, ಪುಲಿಯೊಗರೆ ಮಾಡುದು ಸುಲಭ ಹೇಳಿ ಕಂಡ ಮೇಲೆ ಚಪಾತಿ ಮಾಡುವ ಉಮೇದು ಇಳುದತ್ತು. ಎರಡು ಸರ್ತಿ ಮಾಡ್ಲೆ ಹೆರಟು ಮತ್ತೆ ಆ ‘ಸಾಹಸ’ಕ್ಕೆ ಕೈ ಹಾಕಿದ್ದಿಲೆ. ಚಪಾತಿ ಹೊಡಿ ಹಾಂಗೆ ಒಳುದತ್ತು. ಅದರ ಅಲ್ಲಿ ಇತ್ತಿದ್ದ ಸಹೋದ್ಯೋಗಿಯೊಬ್ಬಂಗೆ ಕೊಟ್ಟು ನಿವೃತ್ತಿ ಮಾಡಿದೆ. ಕೊಂಡು ಹೋದ ಹಪ್ಪಳದ ಕಟ್ಟ ಪೆಟ್ಟಿಗೆಯೊಳವೇ ಬಾಕಿ. ವಾಪಾಸು ಬಂದು ಮನೆಲಿ ಖಾಲಿ ಮಾಡುವಗಳೇ ಎನಗೆ ನೆಂಪಾದ್ದು.

ಇದೇ ಹಪ್ಪಳವ ಹೊರಿತ್ತ ಸಮಯಲ್ಲಿ  ಪಾರುವ ಉದ್ಗಾರ. – ” ಆಹ್ಹಾ.. .ಈ ಹಪ್ಪಳದ ಭಾಗ್ಯವೇ.!”

~*~*~

"ಅಮೆರಿಕ ರಿಟರ್ನ್ಡ್ ! ", 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಪ್ರಸಾದ

  ಮಾವಾ,
  ಆಹ್ಹಾ.. ಆ ಹಪ್ಪಳದ ಭಾಗ್ಯವೇ.!
  “ನಾನಾಗುವ ಆಸೆ” ಪದ್ಯವ ಎಲ್ಲಿಯಾರೂ ಈಗ ಬರದ್ದಾಗಿತ್ತಿದ್ದರೆ ಅದರಲ್ಲಿ “ತೆಕ್ಕುಂಜೆಮಾವನ ಪೆಟ್ಟಿಗೆಲಿದ್ದ ಹಪ್ಪಳ ನಾನಾಗುವ ಆಸೆ” ಹೇಳ್ತ ಸಾಲು ಒಂದು ಸೇರ್ತಿತೋ ಹೇಂಗೆ…?

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಹಲವು ದಿನ೦ಗಳ ನ೦ತರ ಬ೦ದ ಶುದ್ದಿ ಲಾಯಿಕ್ಕಾಯಿದು, ಒಪ್ಪ೦ಗೊ.
  ಎರಡೇ ತಿ೦ಗಳಾದ ಕಾರಣ ಅಲ್ಲದೊ ಆ ಹಪ್ಪಳಕ್ಕೆ ರಿಟರ್ನ್ ಅಪ್ಪಲಿಪ್ಪ ಭಾಗ್ಯ ಸಿಕ್ಕಿದ್ದದು!! ಅಲ್ಲದ್ರೆ ತಿ೦ದದೇ ತಿ೦ದು ಬೊಡಿವಗ, ನಿ೦ಗಳುದೆ ಹಪ್ಪಳದ ಕಟ್ಟ ಬಿಡಿಸುತ್ತಿತಿ..
  ಹೇಳಿದಾ೦ಗೆ ಎಷ್ಟೋ……… ಸಮಯ೦ದ ಮತ್ತೆ ನಿನ್ನೆ ಮಧ್ಯಾಹ್ನ ಎನಗೆ ಇಲ್ಲಿಯುದೆ ಹಲಸಿನ ಹಪ್ಪಳವುದೆ, ಮೆಡಿ ಉಪ್ಪಿನಕಾಯಿಯುದೆ (ಅ೦ಗಡಿ೦ದ ತ೦ದದು ಅಲ್ಲ, ಊರಿನದ್ದೇ!!) ಸಿಕ್ಕಿತ್ತು. ಲಲ್ಲಲ್ಲಾಲಾ……

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಹಪ್ಪಳ ಕಟ್ಟದ ವಿಷಯ ಒಂದು ಬದಿಗಿರಲಿ. ಈ ಶುದ್ದಿ ಬರದ ಶೈಲಿ….. ಹೋ..ಹು! ಭಾರೀ ಲಾಯಕ ಆಯ್ದು ಮಾವ. ಪ್ರತಿಯೊಂದು ಸ್ಟೆಪ್ಪಿಲ್ಲಿಯೂ ಎಷ್ಟು ಬೇಕೋ ಅಷ್ಟು ಮಾತ್ರ ಮೆರುಗುಗೊಳಿಸಿ ನಿಜವಾಗಿ ಒಳ್ಳೆ ನಾಜೂಕಾಗಿ ವಾಕ್ಯ ಜೋಡಣೆ …ಎಂತರ ಅದೂ….. ಮ್ಮ್ಮ್ಮ್ ..ಪ್ರೊಫೇಶನಾಲಿಸಮ್ ಅದೇರೀತಿ ಮನೆವಾತಾವರಣ ಚಿತ್ರಣ, ಕೌಟುಂಬಿಕ ಪ್ರೀತಿ…

  ಕುಮಾರಮಾವ., ಭಾರೀ ಲಾಯಕ ಆಯ್ದು ಹೇಳಿತ್ತು -‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಕುಮಾರ ಮಾವನ ಒಟ್ಟಿಂಗೆ ಹಪ್ಪಳಕ್ಕೆ ಅಮೇರಿಕಕ್ಕೆ ಹೋಗಿ ಬತ್ತ ಚಾನ್ಸು ಸಿಕ್ಕಿದ ಸುದ್ದಿ ಕೇಳಿ ಕೊಶಿ ಆತದ. ಅದಕ್ಕೆ ಅಲ್ಲೆಲ್ಲ ಸುತ್ತಲೆ ಎಡಿಗಾಗದ್ರೂ ವಿಮಾನಲ್ಲಿ ಕೂದೊಂಡು ಪ್ರಯಾಣ ಮಾಡ್ತ ಸೌಭಾಗ್ಯ ಎಲ್ಲೋರಿಂಗೂ ಸಿಕ್ಕುಗೊ ?!!
  ಮಾವನ ಸಂಸಾರದ ಸರಿಗಮ ಯಾವತ್ರಾಣ ಹಾಂಗೆ ಚೆಂದಕೆ ಬಯಿಂದು, ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಹಪ್ಪಳ ಅಮೇರಿಕಾಕ್ಕೆ ಹೋಗಿ ವಾಪಾಸು ಬಂದದು,
  ಮದರ್ ಟಂಗ್, ಫ಼ಾದರ್ ಟಂಗ್,
  ಮುಳ್ಳು ಸೌತೆ ದೋಸೆ ಮಾಡಿರೆ ಮುಳ್ಳು ದೊಂಡೆಲಿ ಕಂತುಗು…
  ಲಾಯಿಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 6. ಜಯಶ್ರೀ ನೀರಮೂಲೆ
  jayashree.neeramoole

  “ನಾಳಂಗೆ ಉದಿಯಪ್ಪಗ ತಿಂಡಿಗೆ ಮುಳ್ಳುಸೌತೆ ದೋಸೆ ಮಾಡಿರೆ ಎಂತಕ್ಕು ?”

  “ಅದು ಬೇಡಮ್ಮ, ದೊಂಡೆಲಿ ಕಂತುಗು”

  ಮಗನ ತಮಾಷೆ ಲಾಯಕ ಇದ್ದು

  [Reply]

  VA:F [1.9.22_1171]
  Rating: 0 (from 0 votes)
 7. ಡೈಮಂಡು ಭಾವ
  ಸೂರ್ಯ

  ಏ ಮಾವ°…ಹೆಡ್ಡಿಂಗು ನೋಡಿ ಒಳ ಹೋಗಿ ಎರಡು ವಾಕ್ಯವ ಓದಿಪ್ಪಗ ಎನ್ನ ಮನಸ್ಸಿಲ್ಲಿ ತೋಚಿದ್ದು… ಎತ್ತಣದಿಂದೆತ್ತ ಸಂಬಂಧವಯ್ಯಾ… ಹೇಳಿ. ಆದರೂ ಟಿ.ಕೆ ಮಾವ° ಎಂತಾರೂ ಟ್ವಿಸ್ಟ್‌ ಕೊಡುಗು ಹೇಳಿ ಮತ್ತೆ ಮುಂದುವರೆಸಿದೆ…
  ನಿರೂಪಣೆ ಓದಿಸಿಯೊಂಡು ಹೋತು…. ಅಕೆರಿಗಲ್ಲದೋ ನವಗೆ ಗೊಂತಾದ್ದು, ಹಪ್ಪಳ ರಿಟರ್ನ್ಡ್‌ ಹೇಳಿ..
  ಲಾಯ್ಕಾದಾತೋ….

  [Reply]

  VA:F [1.9.22_1171]
  Rating: 0 (from 0 votes)
 8. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಸೂಪರ್ ಆಯಿದು ಮಾವ.

  [Reply]

  VN:F [1.9.22_1171]
  Rating: 0 (from 0 votes)
 9. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎಲ್ಲೋರಿಂಗೂ ಧನ್ಯವಾದಂಗೊ.
  ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಳಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಮುಳಿಯ ಭಾವವಿಜಯತ್ತೆಸಂಪಾದಕ°ಎರುಂಬು ಅಪ್ಪಚ್ಚಿಸುವರ್ಣಿನೀ ಕೊಣಲೆದೀಪಿಕಾಅನು ಉಡುಪುಮೂಲೆಪುತ್ತೂರುಬಾವಒಪ್ಪಕ್ಕಶುದ್ದಿಕ್ಕಾರ°ಪೆರ್ಲದಣ್ಣವಸಂತರಾಜ್ ಹಳೆಮನೆಬೋಸ ಬಾವಪ್ರಕಾಶಪ್ಪಚ್ಚಿಡೈಮಂಡು ಭಾವಜಯಶ್ರೀ ನೀರಮೂಲೆಕಳಾಯಿ ಗೀತತ್ತೆಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ಉಡುಪುಮೂಲೆ ಅಪ್ಪಚ್ಚಿಶ್ಯಾಮಣ್ಣಬಂಡಾಡಿ ಅಜ್ಜಿದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ