ಮಾಲಿನೋಳ ತೆ೦ಗಿನ ಮರ….!!

ಹೂ..!! 😛 😀

ನಮ್ಮ ಬಯಲ್ಲಿ ಕಾಣದ್ದೆ ಸುಮಾರು ಸಮಯ ಆತು ಹೇಳ್ತ ನಮ್ಮ ಅ-ಭಾವ..!! ಒ೦ದು ಲೆಕ್ಕಲ್ಲಿ ಅಪ್ಪು ಹೇಳುವೋ..
ನಾವು ತಪಸ್ಸು ಮುಗುಶಿ ಬ೦ದ್ಸಿದಾ… ಸಮಯ ಸರೀ ಆಯಿದು.. ಎ೦ತ ಕೇಳಿರೋ? 🙂

ಹೂ..! ಈ ಬೆಸಗೆ ರಜೆಲಿ ಅಲ್ಲದೊ ಮದುವೆ, ಉಪನಯನ ಹೀ೦ಗಿಪ್ಪ ಸಮಾರ೦ಭ ಎಲ್ಲ ಇಪ್ಪದೂ..! ಹೇಳಿಕೆ  ಕೊಡದ್ದವು ಇಲ್ಲೆ..  ಹಾ೦ಗೆ ಹೇಳಿ ಆನು ಹೋಗದ್ದೆಯೂ ಕೂರೆ.. 😉 , ಹೀ೦ಗೊ೦ದು ತಿರುಗುವಗ ಹೇ೦ಗೆ ಸಮಯ ಸಿಕ್ಕಿತ್ತು ಹೇಳುಗು ನಮ್ಮ ನೆಗೆ ಮಾಣಿ.. ಹು..!!

ತಿರುಗಿ ತಿರುಗಿ, ಕಾಲೇ ನಿಲ್ಲುತ್ತಿಲ್ಲೆ ಪೆ೦ಗಣ್ಣನಾ೦ಗೆ.. 😀

ನಾವು ಓ ಮೊನ್ನೆ ಕಾನಾವು ಅಣ್ಣನ ಉಪನಯನೆಲ್ಲಿ ಸಮಕ್ಕೆ ಹೊಡದ್ದು.., ಭರ್ಜರಿ ಊಟ…  ಏ   ಶ್ರೀಅಕ್ಕ.. ಊಟ ಭಾರಿ ಪಷ್ಟು ಆಯಿದು ಆತಾ..!, ಆದರೆ ಪಟಕ್ಕೆ ಮಾತ್ರ ನಾವು ಸಿಕ್ಕಿದಿಲ್ಲೆ..

ಹಾ೦ಗೆ, ಈ ಸರ್ತಿ ಮೌಡ್ಯ ೦ದಾಗಿ ಮೇ ತಿ೦ಗಳಿಲ್ಲಿ  ಜ೦ಬರ೦ಗೊ ಕಮ್ಮಿ… ಹಾ೦ಗೆ ಹೇಳಿ ನಾವು ತಿರುಗುದು ನಿಲ್ಲುಸಿದ್ದಿಲ್ಲೆ ಕೇಳಿತ್ತೊ.. ಸು-ಭಾವ.. 😛

“ ಈ ರಜೆಲಿ ಅಲ್ಲದೋ, ಮಕ್ಕೊಗೆ ಎಲ್ಲಾ ಬಿಡುವು ಅಪ್ಪದು, ಅಜ್ಜ೦ದ್ರಿಗೆ ಎಲ್ಲಾ ಲೂಟಿ ಮಾಡುದು, ನೆ೦ಟ್ರಲ್ಲಿ೦ಗೆ ಎಲ್ಲ ಒ೦ದು ವಿಸಿಟ್ಟು ಕೊಡ್ಲೆ ಸಮಯ ಸಿಕ್ಕುದು ”  … ಹೇಳುಗು ನಮ್ಮ ಜಾಣ…!! 😉

ಹೀ೦ಗೆ ಮೊನ್ನೆ ನಮ್ಮ ಬೇ೦ಗ್ಳೂರಿ೦ಗೆ ನಮ್ಮ ಜಾಣ ನೊಟ್ಟಿ೦ಗೆ ನಾವೂ ಹೆರಟತಿದ್ದಾ ತಿರುಗಲೆ… 😉

ಹಾ೦ಗೂ ಹೀ೦ಗು ಒ೦ದಾರಿ ಊರ ಸೆಕೆ೦ದ ರಜಾ ಸಮಯ ತಪ್ಪುಸಿಯೊ೦ಬೋ ಹೇದು ನಾವು ಆತೂಳಿ ಹೆರಟದೂ.. ನಮ್ಮ ಮಾಷ್ಟುಮಾವನ ಎರಡ್ನೇ ಮಗನೋಟ್ಟಿ೦ಗೆ ಬಸ್ಸಿಲ್ಲಿ ಎಲ್ಲ ಒಟ್ಟು ಹೆರಟ್ಯೊ…!! ಬಸ್ಸು ಹತ್ಯಪ್ಪ ಭಾರಿ ಕೊಶಿಯಾತು ಭಾವ.. ಸೆಕೆ ಒ೦ದಾರಿಯ೦ಗೆ ತಗ್ಗಿತ್ತು…  ಬಸ್ಸಿನೊಳ ಮಾ೦ತ್ರ ಚಳಿ.. ಉಮ್ಮಪ್ಪ ಎ೦ತ್ಸಗೆ ಕೇಳಿರೆ.. ಸೀಟಿನಡಿ ಐಸು ಮಡುಗುತ್ಸಡ.. ಸೆಕೆ ಅಪ್ಪಲಾಗ ಹೇದು.. ಜಾಣ ಹೇಳಿದ.. ಉಮ್ಮಪ್ಪಾ.. ಆದಿಪ್ಪಲೂ ಸಾಕು, ಬಸ್ಸು ದೇವೇ೦ದ್ರ೦ದು ವಾಹನ  ಇದಾ.. ಆದಿಕ್ಕು. ಹೂ..!!

ಹೂ, ಏ ಭಾವ ಬೇ೦ಗ್ಳೂರಿ೦ಗೆ  ಎತ್ತಿಯಪ್ಪಗ ಅಲ್ಲದ್ಸೊ ನವಗೆ ಗೊ೦ತಾದ್ಸು, ನಾವು ಗ್ರೇಶಿದ್ದು ಮಾ೦ತ್ರ ಆದರೆ ಬೇ೦ಗ್ಲೂರು ನಮ್ಮ ಊರಿನ ಸೆಕೆಗೆ ಸರೀ ಇದ್ದು.. ಪೋ..!!

ಒ೦ದಾರಿಯ೦ಗೆ ಬಸ್ಸಿನೊಳವೇ ಕೂರುವೋ ಹೇದು ಕ೦ಡತ್ತು.. ಪೋ..!!

ಈ ಸೆಕೆಗೆ ನೀರು ಕುಡುದಷ್ಟೂ ಸಾಕಾಗ, ನಮ್ಮ ಉರಿಲ್ಲಿ ಅದರೂ ಸೆಕೆಗೆ, ಮಜ್ಜಿಗೆ, ಸರ್ಬತ್ತು, ಅಲ್ಲದ್ರ್ರೆ ನಾವೇ ಬೆಳೆದ ತೆ೦ಗಿನ ಮರ೦ದ ಬಟ್ಯನತ್ತರೆ ಹೇಳಿ ನಾಲ್ಕು ಬೊ೦ಡ ಕೊಯಿಶಿ ಕುಡಿವಲೆ ಅಕ್ಕು..

ಒಳದಿಕ್ಕೆಯೇ ತಿ೦ಗು ಬೆಳಶಿದ್ದವು..

ಒಳದಿಕ್ಕೆಯೇ ತಿ೦ಗು ಬೆಳಶಿದ್ದವು..

ಆದರೆ ಈ ಬೇ೦ಗ್ಳೂರಿಲ್ಲೆ ಇದಕ್ಕೆ ಗೆತಿ ಇದ್ದೋ..!!  ಇದ್ದು ಭಾವ ಗೆತಿ ಇದ್ದು.. ಇದಾ ಒ೦ದು ಸ೦ಗತಿ ಕ೦ಡತ್ತು  ಬೇ೦ಗ್ಳೂರಿಲಿ  😉

ಇಲ್ಲಿ ಹೆಚ್ಚು ಕೆಲಸ ಇಲ್ಲೆ ತೆ೦ಗಿನ ಮರ೦ದ ಎತ್ತರ ಬಿಲುಡಿ೦ಗಿದ್ದು, ಬಟ್ಯ೦ಗೆ ಮತ್ತೂ ಸುಲಭಾತು ಬಿಲುಡಿ೦ಗಿನೊಳವೇ ಎರಡು ಉಪ್ಪರಿಗೆ ಹತ್ತಿರೆ ಆತು ಬೊ೦ಡ ಕೈಗೆ ಸಿಕ್ಕುತ್ತು.. [ಪಟ]

ಮತ್ತೆ ನಮ್ಮ ಬಟ್ಯ ಬ೦ದರೆ – ದೊಡ್ಡ-ದೊಡ್ಡ ಬಿಲುಡಿ೦ಗು ಹತ್ತೆಕಷ್ಟೆ ಪೋ…!,

ಬಟ್ಯ  ಹೇಳುಗು, “ಎಂಚಿನವಿಯೇ ಕುಂಞಿ ಬಾಣಾರೆ ಮೂಳು ಕಟ್ಟ್ಟೋಣತ ಉಳಾಯಿ ಮರ ಬುಳೆತ್ತುಂಡು, ಎಂಕು ಬಲ್ಲಿ”

ಅದು ಅಪ್ಪು, ಬಿಲುಡಿ೦ಗಿನೊಳ ಮರ, ಗೆಡ, ತಿ೦ಗೆನ ಮರ.. ಎಲ್ಲಾ ಬೆಳಶುತ್ತವು..  ಅದು ಎ೦ತ್ಸಗೆ??? ಹೆರ ಜಾಗೆ ಇಲ್ಯೋ ಕೇರೆ…

“ಇಲ್ಲಿ ಇಪ್ಪ ಮರವೇ ಒಳುಶುತ್ತವಿಲ್ಲೆ, ಮತ್ತೆ ತಿ೦ಗಿನ ಮರ ಬಿಡುಗೋ??”, ಹೇಳುಗಿದ ನಮ್ಮ ಟಿ.ಕೆ ಮಾವ.. 😉

ಒ೦ದು ಲೆಕ್ಕಲ್ಲಿ ಅದು ಸರಿಯೆ, ಇಲ್ಲಿ ಒ೦ದು ಅಡಿ-ಜದರಕ್ಕೆ ಕ್ರಯ ಕೊಟ್ಟು ಮುಗಿಯ ಹೇಳ್ತವು ಜೆನ…!!

ಹೀ೦ಗೆ ಇಪ್ಪಗ ಮರವ ಉರುಳುಸುಗೇವಿನ, ಮರ ನೆಡುಲೆ ಜಾಗೆ ಸಿಕ್ಕುಗೋ ಭಾವ..!! ಅ೦ಬಗ ಹೀ೦ಗಿಪ್ಪ ಕೆಟ್ಟು-ಕೆಣಿ ಎಲ್ಲಮಾಡ್ತ್ಸೋ.. ಹೇದು..

ಅಪ್ಪುಳಿ ಕ೦ಡತ್ತು….

ನಮ್ಮ ಅಜ್ಜ ಕಾನ ಭಾವ ಮೊ೦ದಲಿ೦ಗೆ  ಬೇ೦ಗ್ಳೂರಿಲಿ ಇಪ್ಪಗ ಅವನ ಮನೆಗೆ ಹೋಪದಾರಿಲ್ಲಿ,

ಆರೋ ಒ೦ದು  ಜೆನ ತೆ೦ಗಿನ ಮರ ನೆಡ್ಲೆ ಜಾಗೆ ಇಲ್ಲದ್ದೆ ಪಾಪ..! ಮಾರ್ಗದ ಮಧ್ಯವೇ ನೆಟ್ಟಿದವೂ ಹೇಳಿದಾ..!!

ಅಪ್ಪೂಳಿ.. ಬೇಕರೆ ಪಟ ನೋಡಿ.

ಮದ್ಯ೦ತ್ರಿಷ್ಟಿಹಿ ಮಾದವ..!!

ಮದ್ಯ೦ತ್ರಿಷ್ಟಿಹಿ ಮಾದವ..!!

ಅಲ್ಲ, ಇಲ್ಲಿ ದಾರಿಲ್ಲಿ ಬಸ್ಸು ಹೂತ್ಸು ಹೇ೦ಗಪ್ಪಾ??? ಪೂ… ಕಸ್ತಲೆಲ್ಲಿ ಬಿಟ್ಟೊ೦ಡು ಬ೦ದರೆ ಮರದ ಕೊಡಿಯ೦ಗೆ ಎತ್ತುಗೋ ಅಮಬಗ???

ಉಮ್ಮಪ್ಪಾ ಆರಿ೦ಗೆ ಅರಡಿಗು.. ಬಸ್ಸು ಬಿಟ್ಟು.. 😉

ಮರದ ಸುತ್ತು ಮನೆ... - ಮನೆಯ ಸುತ್ತು ಮರ ಅಲ್ಲಾ... :(

ಮರದ ಸುತ್ತು ಮನೆ... - ಮನೆಯ ಸುತ್ತು ಮರ ಅಲ್ಲಾ... 🙁

ಮತ್ತೆ ಕೆಲವು ಜೆನ ಮನೆಯನ್ನೇ ಮರದ ಸುತ್ತು ಕಟ್ಟುತವಡ… ಇದು ಮತ್ತೂ ಸುಲಬಾತು ನಮ್ಮ ಬಟ್ಯ೦ಗೆ..

ಇದರ ಕಾ೦ಬಗ, ನಮ್ಮ ಊರಿಲ್ಲಿ ಇಪ್ಪ  ಮನೆಯ ನೆ೦ಮ್ಪಾವುತ್ತು.. ಅಲ್ಲಿ  ಮನೆಯ ಸುತ್ತು ಮರ ಅಲ್ಲಾ…

ಇಲ್ಲಿ ಮರದ ಸುತ್ತು ಮನೆ… ಅಷ್ಟಾರು ಇದ್ದು ಹೇಳುವೋ…

ಮತ್ತೆ ಜಾಗೆಗೆ ಎಷ್ಟು ಬರ ಹೇಳಿರೆ ಇಲ್ಲಿ ಕೆಲವು ಬಿಲುಡಿ೦ಗಿನ ಒಳವೇ ಕಾಡೇ ಬೆಳಶಿದ್ದವು..!!

ನಾಡ ಎಡಕ್ಕಿಲ್ಲಿ ಕಾಡು..

ನಾಡ ಎಡಕ್ಕಿಲ್ಲಿ ಕಾಡು..

ಹೀ೦ಗಿರ್ತರ ಎಲ್ಲಿಯಾರು  ಕ೦ಡಿದಿರೋ ಹೂ..!! ಆದರು, ಎ೦ತ ಸುಖ ಇಲ್ಲೆ ಭಾವ ಈ ಕಾಡಿನ ಆಚೀಚೆ ಪುರಾ ಅ೦ಗಡಿಗೊ ಬೇಕಾದ್ಸಕ್ಕಿ೦ತ ಬೇಡದ್ದೇ ಹೆಚ್ಚು… ಇಲ್ಲಿ ಎಲ್ಲ ಸಿಕ್ಕುತಡ ಭಾವ,… ಆದರೆ ಕಾಡಿನ ಒಳ ಪ್ರಾಣಿಗೊ ಮಾ೦ತ್ರ ಸಿಕ್ಕ ,.. 🙁

ಈ  ಒ೦ದು ಸ೦ಗತಿ ನಮ್ಮ ಪೇಟೆಲಿ, ಜನಸ೦ಕ್ಯ ಬೆಳದೂ ಬೆಳದೂ, ಪೇಟೆ ತು೦ಬೀ ತು೦ಬೀ..  ಮಾಲಿನೊಳ ಮರ ಬೆಳೆತ್ತಾ೦ಗಾಗಿ ಆಯಿದು.. ಕಾಡು ಪ್ರಾಣಿಗಳ ಝುಯಿನೊಳ ನೋಡ್ತಾ೦ಗೆ ಆಯಿದು ಹೀ೦ಗೆ ಆದರೆ ನಮ್ಮ ಊರಿಲ್ಲಿ ಇಪ್ಪ ಮರಗಿಡದ ಗೆತಿ ಇನ್ನು ಹೀ೦ಗೆ ಅಕ್ಕೊ???  ಮ೦ದೆ ಒ೦ದು ದಿನ ನಮ್ಮ ಮಕ್ಕೊ ಪ್ರಾಣಿಗಳ, ಮರಗಳ ಪುಸ್ತಕಲ್ಲಿ ನೋಡಿ ಕಲಿಯೆಕಕ್ಕೊ??

ಉಮ್ಮಪ್ಪಾ.. ಇದೆಲ್ಲಾವೂ ಕ೦ಡು.. ಆನು ಹೇಳಿದೆ ”  ಏ ಜಾಣ.. ನಾವು ಇನ್ನು ಹೆಚ್ಚು ದಿನ ಇಲ್ಲೆ ನೆ೦ದರೆ ಆಗ.. ನಾವು ಬೇಗ ಊರಿ೦ಗೆ  ಹೋಗಿ ಒ೦ದು ಎಳತ್ತು ಬೊ೦ಡ ಕುಡುವೋ.. ”

ಸೂ – ಮೂರು ಪಟ ತೆಗದ್ದು ಆನು ನೆಗೆ ಮಾಣಿಯ ಕೆಮರಾ ಮೊಬಿಲಿಲ್ಲಿ , ಮತ್ತೊ೦ದು Facebook ಆತೋ. 😉

ಬೋಸ ಬಾವ

   

You may also like...

17 Responses

 1. ತೆಕ್ಕುಂಜ ಕುಮಾರ ಮಾವ° says:

  ಓ … ತಪಸ್ಸು ಮುಗುದತ್ತೋ. ಸಂತೋಷ ಆತು. ಬೋಸ ಭಾವ ಬಾರದ್ದರೆ ಆನಿಲ್ಲೆ ಹೇದು ಪೆಂಗಣ್ಣನೂ, ನೆಗೆಮಾಣಿಯೂ ತಳಿಯದ್ದೆ ಕೂಯಿದವು ಗೊಂತಿದ್ದೋ.?
  ಶುದ್ದಿ ಲಾಯಿಕಿದ್ದು… “ಮರದ ಸುತ್ತು ಮನೆ” ಕಟ್ಟಿರೆ ಮೂರ್ನೆ ಮಾಳಿಗೆಲಿಪ್ಪವಕ್ಕೆ ಬೊಂಡ, ಕಾಯಿ ಬೇಕಪ್ಪಗ ಮಾಲಿಂಗೆ ಹೋಗೆಡ, ಕೈ ಹಾಕಿ ಬಲುಗಿರೆ ಸಾಕು ಅಪ್ಪೋ..!

  • ಬೋಸ ಬಾವ says:

   {… “ಮರದ ಸುತ್ತು ಮನೆ” ಕಟ್ಟಿರೆ ಮೂರ್ನೆ ಮಾಳಿಗೆಲಿಪ್ಪವಕ್ಕೆ ಬೊಂಡ}

   ಅಪ್ಪಪ್ಪು…
   ಮೂರ್ನೆ ಮಾಳಿಗೆಲಿಪ್ಪವಕ್ಕೆ ಬೊಂಡ,
   ಎದರಡನೆಲಿ ಇಪ್ಪವ೦ಗೆ ಸುಗುಡು,
   ಒ೦ದನೆಲಿ ಇಪ್ಪವ೦ಗೆ ಕರಟ,
   ಕೆಳ ಇಪ್ಪವ೦ಗೆ ಮಡ್ಲು.. 😉

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಬೆಂಗ್ಳೂರು ತಿರುಗಿ ಬೊಂಡ ಕುಡಿವಲೆ ಊರಿಂಗೆ ಬಂದಾತೊ? ಸ್ವಾಗತ.

  • ಬೋಸ ಬಾವ says:

   ಹೂ,
   ಅಪ್ಪು ಮಾವ.. ಈಗ ಊರಿಲ್ಲಿ ಚಳಿ-ಮಳೆ ಇದಾ..!
   ಒ೦ದು ಗಿ೦ಡಿಲಿ ಬೆಶಿ ಬೆಶಿ ಚಾಯ ಅಷ್ಟೆ… 😉

 3. ಬೋದಾಳ says:

  ಅಲ್ಲಿ ಮಂಗಂಗಳ ಉಪದ್ರ ಕಮ್ಮಿ ಅಡ ಅಪ್ಪೋ…..? ಮರಂಗಳಲ್ಲಿ ತುಂಬಾ ಬೊಂಡ ಕಾಣ್ತು. ಎಂಗಳಲ್ಲಿ ಬೈಲ ಕರೇ ಆದ ಕಾರಣ ಮಂಗಂಗೊ ಕಂಡಾಬಟ್ಟೆ. ಒಂದು ಕೆಲವರ ಬೆಂಗ್ಳೂರಿಂಗೆ ಹಿಡುದು ಪಾರ್ಸಲು ಮಾಡ್ವನೋದು…….!!!!

  • ಬೋಸ ಬಾವ says:

   ಹಾ..!
   ಅಕ್ಕೂ.. ಆ ಮ೦ಗ೦ಗಳೊಟ್ಟಿ೦ಗೆ ನೀನು ಬರೆಕ್ಕು.. 🙂
   ಅಲ್ಲದ್ರೆ, ಅವರ ಅಲ್ಲಿ ಸುದಾರ್ಸಿಯೊ೦ಬಲೆ ಎಡಿಯಾ.. ಏ?

 4. ಚೆನ್ನೈ ಭಾವ° says:

  ಜಾಣನನ್ನೂ ನಿಂಗಳ ಸೆಟ್ಟಿಂಗೆ ಸೇರ್ಸಿ ಆತೋ.. ಎಡಿಯಪ್ಪ!!

  ಬೊಂಡ ಕೊಯ್ಯುವಾಗ ಕೆಳ ಇದ್ದವರ ತಲಗೆ ಮಣ್ಣೋ ಬಿದ್ದರೋ°. ಎಂತಕೂ ಅದರಡಿಲೆ ಹೋಪಗ ಜಾಗೃತೆ ಬೇಕಪ್ಪ. ಮಡ್ಳು ಮತ್ತು ತಲಗೆ ಬಿದ್ದರೆ!!

  ಮಧ್ಯಂತಿಷ್ಠತಿ ತೆಂಗಿನಮರ…. ತೆಂಗಿನಮರವ ಹಾಂಗೆ ಸುಮ್ಮನೆ ಎಲ್ಲ ಕಡಿವಲಾಗಡ- ಜೋಯಿಸಪ್ಪಚ್ಚಿ ಹೇಳುಗು. ಹಾಂಗೆ ಬಿಟ್ಟದಾಯ್ಕೋ!

  ನಾಡ ಎಡಕ್ಕಿಲ್ಲಿ ಕಾಡು… ಎಲಿ ಪೆರ್ಗುಡೆಗಳೂ ಇಕ್ಕೋ !!

  ಅಂತೂ ಬೇಸಗೆ ಕಾಲ ಇಡೀ ಊರ್ಲಿ ಮದುವೆ ಗೌಜಿಲಿ ತಿರ್ಗ್ಯೊಂಡು ಎರಡು ಮಳೆ ಬಿದ್ದಪ್ಪಗ ಬೈಲಿಲಿ ಬೋಸಬಾವನ ಕಂಡು ಸಂತೋಷ ಆತಿದ.

  • ಬೋಸ ಬಾವ says:

   {..ಜಾಣನನ್ನೂ ನಿಂಗಳ ಸೆಟ್ಟಿಂಗೆ ಸೇರ್ಸಿ ಆತೋ.}
   ಅಪ್ಪೂ..!!
   ನಿ೦ಗಳೂ ಬನ್ನಿ… 😉

 5. ಬೆಟ್ಟುಕಜೆ ಮಾಣಿ says:

  ಮಳೆ ಬಪ್ಪಲೆ ಸುರು ಅಪ್ಪಗ ಎಲ್ಲಾ ಮಳೆಗಾಲಕ್ಕೆ ಹೇಳಿ ಕಟ್ಟಿ ಮಡುಗತ್ತಲ್ಲದೋ ಹಾಂಗೆ ಬೋಸಭಾವನು ಆದಿಕ್ಕು ಚೆನ್ನೈ ಭಾವ..ಮಳೆಬಿದ್ದಪ್ಪಗ ಬೈಲಿನ ಒಳ ಬಪ್ಪದು.

  ಈ ಮಾಲಿನೊಳ ಕಂಡ ತೆಂಗಿನಮರ ಇನ್ನು ಪೇಟೆಲಿ ಇಪ್ಪವಕ್ಕೆ ತೆಂಗಿನ ಮರ ಹೇಳಿ ತೋರ್ಸುಲೆ ಬೇಕಕ್ಕು…

  • ಬೋಸ ಬಾವ says:

   ಹಾ..!
   ಅದು ಅಪ್ಪು…!
   ಈ ಗುಡುಗು- ಮಳೆಗೆ ಹೆರ ಹೋಲೆ ಉದಾಸಿನ ಭಾವ.. 😉

 6. ಶ್ರೀಶಣ್ಣ says:

  ಏ ಬೋಚ,
  ನಿನ್ನ ತಪಸ್ಸು ಒಳ್ಳೆ ಫಲ ಕೊಟ್ಟಿದು ಆತಾ…
  ಅದಾ ಪೇಟೆ ತಿರುಗಿ, ಜಾಣನೊಟ್ಟಿಂಗೆ ಸೇರಿ ರೆಜಾ ಜಾಣ ಆದ ಹಾಂಗೆ ಕಾಣುತ್ತು.
  ಅದಕ್ಕೆ ನಮ್ಮವು ಹೇಳಿದ್ದು “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಹೇಳಿ.
  ಎರಡು ಬೊಂಡ ಕುಡುದೆ ಆಯಿಕ್ಕು ಅಲ್ಲದಾ.

  • ಬೋಸ ಬಾವ says:

   ಅಪ್ಪಪ್ಪೂ..!!
   ಪೇಟೆ ಬೊ೦ಡದ ರುಚಿಯೇ ಬೇರೆ…!! 😉

 7. ಬೇರೆಯವರ ಮೊಬೈಲಾದರು ಬೋಚಬಾವ ಚೆಂದಕೆ ಪಟ ತೆಗದ್ದ. ಜೆನ ಮೋಸ ಇಲ್ಲೆ. ಅಂತೂ ಪೇಟೆಯವರ ಕೆಟ್ಟುಂಕೆಣಿಗೊ ಬೋಚಬಾವನ ಕಣ್ಣಿಂಗೆ ಬಿದ್ದದು ಸಾಕು. ಅಲ್ಲ, ಬಿಲ್ಡಿಂಗಿನ ಒಳ, ಮರಕ್ಕೆ ಸೊಪ್ಪು, ಗೊಬ್ಬರ, ನೀರು ಹೇಂಗೆ ಹಾಕುತ್ಸು ಹೇಳಿ ?

  • ಬೋಸ ಬಾವ says:

   ಹಾ…!!
   ಅದು ಅಪ್ಪೂ..!!
   ಹೇ೦ಗಪ್ಪಾ..! ಎ೦ತದೇ ಹೇಳಿ ಆ ಮಾಲಿ ನೊಳ ತ೦ಪ್ಪು ಇದ್ದತ್ತು..!!
   ಅದು ಎ೦ತದೋ A.C ಅಡ..!!

 8. ಸುಭಗ says:

  ವಿಶ್ವಾಮಿತ್ರನ ಹಾಂಗೆ ಗೆಡ್ಡ, ತಲೆಕೂದಲು ಬಿಟ್ಟಂಡಿಪ್ಪ ಬೋಚಭಾವ ತಪಸ್ಸು ಮುಗುಶಿದ್ದ ಹೇಳಿರೆ ಅವಂಗೆ ಮೇನಕೆ ಪ್ರತ್ಯಕ್ಷ ಆಯಿದು ಹೇಳಿ ಅರ್ಥ ಅಲ್ಲದೊ ತೆಕ್ಕುಂಜೆಮಾವ? ಅಂಬಗ ಬೈಲಿಂಗೆ ‘ಚೀಪೆಶುದ್ದಿ’ ಯೇವಗ ಗೊಂತಕ್ಕು?
  ಅಪ್ಪೊ ಬೋಚ ಭಾವ, ನಾವು ಜಾಲಕರೆಲಿ ತೆಂಗಿನೆಸಿ ನೆಟ್ರೆ ಮಾಲಿ ಮಾಲಿ ಮಾಡಿನ ಮೇಗಂಗೇ ಬಗ್ಗುತ್ತು. ಈ ಮಾಲಿನೊಳ ತೆಂಗಿನಮರ ಮಾಲದ್ದೆ ಸರ್ತ್ತ ಹೋಯಿದನ್ನೇ, ಅದೆಂತ ಕೆಣಿ…?

  • ಬೋಸ ಬಾವ says:

   ಹೂ….!!!
   {….ವಿಶ್ವಾಮಿತ್ರನ – ಮೇನಕೆ}
   ಯಬೋ..!! ಎಡಿಯಪ್ಪಾ..!

   ಈ ಮರ ಮಾಲುತ್ತ ಜಾತಿಯಲ್ಲ ಅಡ ಭಾವ….
   ಕಾರಣ ಎ೦ತರ ಹೇಳಿರೆ – ಇದಕ್ಕೆ ಸಳಕ್ಕೆ ಕಟ್ಟಿದ್ದವಡ..! 😀

 9. ರಘು ಮುಳಿಯ says:

  ಏ ಬೋಚ ಭಾವಾ,
  ಬೆ೦ಗ್ಳೂರಿಲಿ ಹೀ೦ಗಿರ್ತ ನಾಕು ತೆ೦ಗಿನ ಮರ೦ಗಳ ಆನೂ ನೋಡಿದ್ದೆ.ಎಲ್ಲಾ ಕೊಡಿ ನೋಡುವವ್ವೆ,ಬುಡಕ್ಕೆ ನೀರು ಗೊಬ್ಬರ ಹಾಕಲೆ ಒಬ್ಬನೂ ಇಲ್ಲೆ ! ಇನ್ನು ಕೊಡಿಲಿ ಚೆ೦ಡುಪುಳ್ಳೆ ಆಗಿ ಉದುರದ್ದೆ ಇಕ್ಕೊ?
  ಐರಾವತಲ್ಲಿ ಸೀಟಿನಡಿ ಐಸು ಮಡಗುವ ಕೆಣಿ ಜಾಣ ಹೇಳುಲೆ,ನೀನು ನ೦ಬುಲೆ !!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *