ನಾಳೆ ನೂಲಹುಣ್ಣಿಮೆ (ಯಜುರುಪಾಕರ್ಮ)

ಹರೇರಾಮ ಎಲ್ಲೊರಿಂಗೂ

ನಾಳೆ (02-08-2012) ನೂಲಹುಣ್ಣಿಮೆ (ಯಜುರುಪಾಕರ್ಮ).
ಉಪನಯನ ಆದ ಎಲ್ಲಾ ಬ್ರಹ್ಮಚಾರಿ, ಗೃಹಸ್ಥರು ಇಂದು ಛಿದ್ರ-ಕಲ್ಮಶ ಸಂಯುತವಾದ ಹಳೆಯ ಜೆನಿವಾರದ ಬದಲಿಂಗೆ ಶುಭ್ರ-ಸ್ವಚ್ಛವಾದ ಹೊಸ ಜೆನಿವಾರ ಹಾಕುದು ಕ್ರಮ.
ಪೇಟೆಲಿಪ್ಪವು ಹೇಂಗೆ ಅಪ್ಪೋ ಹೇದು ಚಿಂತಿಸೆಕ್ಕು ಹೇಳಿ ಇಲ್ಲೆ. ಕೊಡೆಯಾಲ ಹಾಂಗು ಬೆಂಗಳೂರಿಲಿ ಕಾರ್ಯಕ್ರಮ ಅಪ್ಪ ವಿವರ ಇಲ್ಲಿದ್ದು.

ಕೊಡೆಯಾಲ (ಮಂಗಳೂರು)
ಶ್ರೀ ಶಂಕರಶ್ರೀ ಸಭಾಂಗಣ, ಶ್ರೀ ಭಾರತೀ ಕಾಲೇಜು, ವಿವೇಕಾನಂದ ರಸ್ತೆ, ನಂತೂರು ಪದವು, ಮಂಗಳೂರು.
ಸಮಯ: ಬೆಳಗ್ಗೆ 7ರಿಂದ 9
ಹೆಚ್ಚಿನ ವಿವರಕ್ಕೆ: ಬೊಳುಂಬು ಮಾವ – 9448895828

ಬೆಂಗಳೂರು:
ಶ್ರೀ ರಾಮಾಶ್ರಮ, #2ಎ, ಜೆ.ಪಿ. ರಸ್ತೆ, ಗಿರಿನಗರ ಬೆಂಗಳೂರು
ಸಮಯ: ಬೆಳಗ್ಗೆ 7:30ರಿಂದ
ಹೆಚ್ಚಿನ ವಿವರಕ್ಕೆ: ಗೋವಿಂದರಾಜಣ್ಣ  – 9449595215

ಸೂಚನೆ: ಉಡುಗೆ ಪಂಚೆ ಶಲ್ಯ ಆಗಿರಲಿ. ಕೌಳಿಗೆ ಸಕ್ಕಣ ಹಿಡ್ಕೊಂಡರೆ ಉತ್ತಮ. ಕಾರ್ಯಕ್ರಮ ಆದ ಮತ್ತೆ ಕಾಪಿ-ತಿಂಡಿ ವ್ಯೆವಸ್ತೆ ಇದ್ದು.
ಬೇರೆ ಊರುಗಳಲ್ಲೂ ಸಾಮೂಹಿಕ ನೂಲಹುಣ್ಣಿಮೆ ಕಾರ್ಯಕ್ರಮಂಗೊ ಇದ್ದರೆ ಒಪ್ಪ ಕೊಟ್ಟು ತಿಳುಶಲಕ್ಕು.

 

Admin | ಗುರಿಕ್ಕಾರ°

   

You may also like...

9 Responses

 1. ಚೆನ್ನೈ ಭಾವ says:

  ಹರೇ ರಾಮ

 2. ಶರ್ಮಪ್ಪಚ್ಹಿ says:

  ಸುರತ್ಕಲಿಲ್ಲಿ ಉದಿಯಪ್ಪಗ 5:45 ಕ್ಕೆ ಮೋಂತಿಮಾರು ಕೃಷ್ಣ ಭಟ್ ಇವರ ಮನೆಲಿ ಏರ್ಪಾಡು ಮಾಡಿ ಆಯಿದು.
  ಕೌಳಿಗೆ ಸಕ್ಕಣ, ಹರಿವಾಣ, ಗಂಟು ಹಾಕಿದ ಜನಿವಾರ ತೆಕ್ಕೊಳೆಕ್ಕು.
  ಜೆನಿವಾರಕ್ಕೆ ಬ್ರಹ್ಮ ಗಂಟು ಹಾಕಲೆ ಗೊಂತಿಲ್ಲದ್ದವು 5 ಗಂಟೆಗೆ ಹಾಜರಾದಲ್ಲಿ ಪ್ರಾತ್ಯಕ್ಶಿಕೆ ಇದ್ದು. ಊರ ಜನಿವಾರ ತರಿಸಿ ಆಯಿದು. ಅಗತ್ಯ ಇಪ್ಪವು ಪ್ರಸಾರ ವಿಭಾಗದ ಬಾಲಕೃಷ್ಣ ಭಟ್, ಇವರ ಸಂಪರ್ಕಿಸಲೆ ಅಕ್ಕು.

 3. jayashree.neeramoole says:

  ಹರೇ ರಾಮ

 4. Rajaram says:

  ಮಾಣಿ ಮಠಲ್ಲಿ ಉದಿಯಪ್ಪಗ ೯.೩೦ ರಿಂದ.
  ಮದ್ಯಾನ್ಹ ಊಟದ ವ್ಯವಸ್ತೆ ಇದ್ದು

 5. ಮೈಸೂರಿನ ಸಾಯಿ ಸರಸ್ವತಿ ವಿದ್ಯಾ ಕೇಂದ್ರಲ್ಲಿ 2/8/2012 ಉದಿಯಪ್ಪಗ 7.30ಕ್ಕೆ ಯಜುರುಪಾಕರ್ಮವ ಮೈಸೂರು ವಲಯಂದ ಏರ್ಪಡಿಸಿದ್ದವು. ಪೂಜಾ ಸಾಮಗ್ರಿ ತರೆಕ್ಕು. [ಜನಿವಾರ ಕೊಡ್ತವು.] ಹೋಮ ಇದ್ದು.
  ಹೆಚ್ಚಿನ ವಿವರಕ್ಕೆ: ಕೆ.ಎಸ್.ಸದಾಶಿವ – 9448277208 /0821-2542323

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಯಜುರುಪಾಕರ್ಮಕ್ಕೆ ಸುರತ್ಕಲಿನ ಕಾರ್ಯಕ್ರಮ ಲಾಯ್ಕ ಆಯಿದು.ಹೋಗಿ ಬಂದೆಯೊ.
  ಉಪಾಕರ್ಮ -ಈ ಶಬ್ದದ ಸಂಧಿ ವಿಂಗಡಣೆ ಮತ್ತೆ ವ್ಯುತ್ಪತ್ತಿಯ ಬಗ್ಗೆ ಮಹೇಶಣ್ಣನೋ ಉಳಿದ ಬಲ್ಲವರೋ ವಿವರಿಸೆಕ್ಕು ಹೇಳಿ ಕೇಳಿಕೊಳ್ತೆ. ಇದು ಉಪಕರ್ಮ ಹೇಳಿ ಅಲ್ಲ ಎಂತಗೆ ಹೇಳಿ ವಿವರಿಸಿದರೆ ಉಪಕಾರ.

 7. ರಘು ಮುಳಿಯ says:

  ಗೋಪಾಲಣ್ಣ,
  ಚೆನ್ನೈಭಾವ ಬೈಲಿಲಿ ಈ ವಿವರ ಕೊಟ್ಟಿದವು . ಇದಾ ಇಲ್ಲಿದ್ದು. http://oppanna.com/lekhana/samskara-lekhana/bhaga-10-vedadhyayana-mahanamnivrata-keshantha

 8. “ಸಂಸ್ಕಾರಪೂರ್ವಂ ಗ್ರಹಣಂ ಸ್ಯಾತ್ ಉಪಾಕರಣಂ ಶ್ರುತೇಃ ” ಹೇಳಿ `ಉಪಾಕರಣ’ ಶಬ್ದದ ಅರ್ಥ `ಅಮರಕೋಶ’ಲ್ಲಿ ಕಾಣ್ತು. ಅರ್ಥಾತ್ ವೇದಾಧ್ಯಯನವ ವಿಧಿವತ್ತಾಗಿ ಆರಂಭಿಸುವ ಕಾರ್ಯಕ್ರಮವ `ಉಪಾಕರಣ’ ಹೇಳಿ ಹೇಳ್ತವಡ. ಉಪಾಕರಣವೇ ಉಪಾಕರ್ಮ.

  ಉಪಾಕರ್ಮ = ಉಪ + ಆ + ಕರ್ಮ ।
  ಕರ್ಮ ಶಬ್ದಂದ ಮೊದಲು ಉಪ, ಆಙ್ ಹೇಳಿ ಎರಡು ಉಪಸರ್ಗ ಸೇರಿಯಪ್ಪಗ ಉಪಾಕರ್ಮ ಹೇಳಿ ಆವುತ್ತು.
  (ಉಪ=ಸಮೀಪ, ಆಙ್=ಎಲ್ಲ ಕಡೆಂದ / ಸಮಗ್ರವಾಗಿ)

  ಉಪಾಕರ್ಮದ ನಂತರ ಎಂತ ಮಾಡೆಕು ಹೇಳುವದರ ಈ ವಾಕ್ಯ ಹೇಳ್ತು —

  “ಉತ್ಸರ್ಜನೋಪಾಕರ್ಮಣೋರ್ಮಧ್ಯೇ ವೇದಾಂಗಾಧ್ಯಯನಂ ಕುರ್ಯಾತ್”
  `ಉಪಾಕರ್ಮ’ ಮತ್ತು `ಸಮಾವರ್ತನೆ ‘ (ಉತ್ಸರ್ಜನ) ಈ ಎರಡರ ಮಧ್ಯೆ ವೇದಾಂಗಂಗಳ ಅಧ್ಯಯನ ಮಾಡೆಕು ಹೇಳಿ ಮೇಲಾಣ ವಾಕ್ಯದ ಅರ್ಥ.

  ಮುಳಿಯ ಭಾವ ಹೇಳಿದಾಂಗೆ ಚೆನ್ನೈ ಭಾವನ ಲೇಖನಲ್ಲಿ ವಿಸ್ತೃತವಾದ ವಿವರಣೆ ಇದ್ದು.

 9. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಧನ್ಯವಾದ.ತುಂಬಾ ಜನ ಉಪಕರ್ಮ ಹೇಳಿ ತಪ್ಪಾಗಿ ಉಚ್ಚರಿಸುತ್ತವು.ವಿವರ ಕೊಟ್ಟದು ಸಕಾಲಿಕ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *