ವಿದ್ಯಾರ್ಥಿಗೊ ವಿಜ್ಞಾನಿಗಳೊಟ್ಟಿಂಗೆ ಮುಖಾಮುಖಿ

November 5, 2012 ರ 8:41 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಿ. ವಿ. ರಾಮನ್ ಅವರ ಹುಟ್ಟುಹಬ್ಬದ ದಿನ ನವಂಬರ್ 7 ತಾರೀಕು. ಆ ದಿನ ಕಾಸರಗೋಡು ಗವರ್ಮೆಂಟ್ ಕೋಲೇಜು, ವಿದ್ಯಾನಗರಲ್ಲಿ ಒಂದು ಪೂರ್ವಾಹ್ನದ ವಿದ್ಯಾರ್ಥಿ – ವಿಜ್ಞಾನಿ ಮುಖಾಮುಖಿ ಕಾರ್ಯಕ್ರಮ ನೆಡೆತ್ತು. ನೆಡೆಶಿ ಕೊಡುವದು ಗವರ್ಮೆಂಟು ಕೋಲೇಜುದೇ, ಸ್ವದೇಶೀ ವಿಜ್ಞಾನ ಪ್ರಸ್ಥಾನ (ಕೇರಳ) ವುದೇ ಸೇರಿಕೊಂಡು ಹೈಸ್ಕೂಲು, ಪ್ಲಸ್ ಟು ಮತ್ತೆ ಟಿ. ಟಿ. ಸಿ. ಮಕ್ಕೊಗೆ ಪ್ರಯೋಜನಕ್ಕೆ. ಕೇರಳ ಗವರ್ಮೆಂಟಿನ ವಿಜ್ಞಾನ ಮತ್ತೆ ತಂತ್ರಜ್ಞಾನದ ಸೆಕ್ರೆಟರಿ ಡಾ. ವಿ. ರಾಧಾಕೃಷ್ಣನ್ ಪಿಳ್ಳೆ, ಕೊಚ್ಚಿನ್ ಯುನಿವರ್ಸಿಟಿ ಫೋಟೋನಿಕ್ಸ್ ಪ್ರೊಫೆಸರ್ ಡಾ ವಿ.ಪಿ.ಎನ್ ನಂಬೂರಿ, ರಿಮೋಟ್ ಸೆನ್ಸಿಂಗಿನ ನಿವೃತ್ತ ವಿಜ್ಞಾನಿ ರವೀಂದ್ರನ್, ಕಾಸರಗೋಡಿನ ಡಾಕ್ಟ್ರು ಡಾ. ನರಹರಿ, ರಾಜೀವ್ ಗಾಂಧಿ ಸೆಂಟರ್ ಫೋರ್ ಬಯೋಟೆಕ್ನೋಲಜಿ ಪ್ರೊಫೆಸರ್ ಪ್ರದೀಪ್, ಹೀಂಗೆ ವಿದ್ವತ್ತು ಇಪ್ಪ ವಿಜ್ಞಾನಿಗೊ ಮಕ್ಕಳಿಂಗೆ ಭಾಷಣ ಮಾಡ್ತವು, ಅಷ್ಟೇ ಅಲ್ಲ ಮಕ್ಕಳ ಪ್ರಶ್ನಗೊಕ್ಕೆ ಉತ್ತರ ಕೊಡ್ತವು. ಈ ಕಾರ್ಯಕ್ರಮಲ್ಲಿ ಭಾಗವಹಿಸುಲೆ ಇಚ್ಛೆ ಇಪ್ಪ ಮಕ್ಕೊ ಅವರ ಹೆಸರು ಗವರ್ಮೆಂಟ್ ಕೋಲೇಜಿನ ಜುವಾಲಜಿ ಪ್ರೊಫೆಸರ್ ಘೋಷ್ ಅವರ ಹತ್ರೋ, ಸಿ.ಪಿ.ಸಿ.ಆರ್.ಐ. ಮಾಹಿತಿ ಅಧಿಕಾರಿ ಮುರಲಿಕೃಷ್ಣ ಹಳೆಮನೆ ಇವರ ಹತ್ರೋ ಹೆಸರು ಕೊಟ್ಟು ನೋಂದಾವಣೆ ಮಾಡೆಕು. ಪ್ರಶ್ನೆ ಕೇಳುಲೆ ಇದ್ದರೆ ಅದರ ಮೊದಲೇ ಇ-ಮೈಲು ಮಾಡೆಕು. ವಿಳಾಸ: hmkrishna@outlook.com
ಕಾರ್ಯಕ್ರಮ ಉದಿಯಪ್ಪಗ 9:30 ರಿಂದ ಮಧ್ಯಾಹ್ನ 12:30ರ ವರೆಗೆ ಮಾಂತ್ರ. ಪ್ರವೇಶ ಶುಲ್ಕ ಇಲ್ಲೆ. ಮಕ್ಕಳ ಕರಕ್ಕೊಂಡು ಬಪ್ಪ ಟೀಚರುಗೊಕ್ಕುದೇ ಅಧ್ಯಾಪಕರುಗೊಕ್ಕುದೇ ಪ್ರವೇಶ ಇದ್ದು. ನಿಗದಿತ ಸೀಟುಗೊ ಇಪ್ಪ ಕಾರಣ ಕೂಡ್ಲೇ ನೊಂದಾವಣೆ ಮಾಡಿ!!
ಯುನಿಫಾರ್ಮಿಲ್ಲಿ ಬರೆಕು ಹೇಳಿ ಇಲ್ಲೆ.
– ಮುರಲಿಕೃಷ್ಣ ಹಳೆಮನೆ, ಸಿ.ಪಿ.ಸಿ.ಆರ್.ಐ. ಮಾಹಿತಿ ಅಧಿಕಾರಿ, ಮೊಬೈಲು: +919633900281
– ಎಸ್. ಎಂ. ಘೋಷ್, ಗವರ್ಮೆಂಟ್ ಕೋಲೇಜ್ ಜುವಾಲಜಿ ಪ್ರೊಫೆಸರ್, ಮೊಬೈಲು: +919249506050

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಆನುದೆ  ಅದೇ ಕಾಲೇಜಿಂಗೆ ಹೋದ್ದು .   ಅಲ್ಯಾಣ  ಕಾರ್ಯಕ್ರಮದ  ಸುದ್ದಿ  ಓದಿ  ಭಾರೀ  ಖೊಶಿ  ಆವುತ್ತಾ  ಇದ್ದು .

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ
  vijayasubrahmana

  ಮುರಲಿಭಾವ ಮುಜು೦ಗಾವು ಶಾಲೆ೦ದಲೂ ಮಕ್ಕೊ ಹೋಯಿದವು ಬ೦ದಮತ್ತೆ ಕ೦ಡೀದಿಲ್ಲೆ ಸಮಯೊಚಿತ ಕಾರ್ಯಕ್ರಮ ಧನ್ಯವಾದ ಭಾವ೦ಗೆ

  [Reply]

  VA:F [1.9.22_1171]
  Rating: 0 (from 0 votes)
 3. ಹಳೆಮನೆ ಮುರಲಿ
  ಮುರಲಿಕೃಷ್ಣ ಹಳೆಮನೆ

  ಕಾರ್ಯಕ್ರಮ ಸಸೂತ್ರವಾಗಿ ನೆಡದ್ದು. ವಿವರಂಗಳೂ ಚಿತ್ರಂಗಳೂ ಬೇರೆಯೇ ಲೇಖನಲ್ಲಿ ಬರೆತ್ತೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಶುದ್ದಿಕ್ಕಾರ°ಸುಭಗಮಾಷ್ಟ್ರುಮಾವ°ಪುಟ್ಟಬಾವ°ಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿಅನು ಉಡುಪುಮೂಲೆಬಂಡಾಡಿ ಅಜ್ಜಿಡಾಗುಟ್ರಕ್ಕ°ಬಟ್ಟಮಾವ°ಅನಿತಾ ನರೇಶ್, ಮಂಚಿಯೇನಂಕೂಡ್ಳು ಅಣ್ಣದೊಡ್ಮನೆ ಭಾವಅಕ್ಷರ°ಪಟಿಕಲ್ಲಪ್ಪಚ್ಚಿಒಪ್ಪಕ್ಕಅಜ್ಜಕಾನ ಭಾವಪುಣಚ ಡಾಕ್ಟ್ರುಗಣೇಶ ಮಾವ°ಡೈಮಂಡು ಭಾವದೊಡ್ಡಭಾವತೆಕ್ಕುಂಜ ಕುಮಾರ ಮಾವ°ಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ