ಆಟ ಶುರುವಾತು..-ಭಾಮಿನಿಲಿ

January 4, 2012 ರ 7:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೆರ್ಲದ ಆಟಕ್ಕೆ ಹೋಗಿ ಪಿಕ್ಲಾಟ ಮಾಡಿದ ಕತೆ ಹೇಳುಲೆ ಶುರು ಮಾಡಿ ತಿ೦ಗಳು ಕಳಾತು.
ಎಡಕ್ಕಿಲಿ ಕರೆ೦ಟು ಚುಯಿ೦ಕ ಆಗಿ ಸೀರಿಯಲು ನೋಡುಲೆ ಎಡಿಯದ್ದ ಹಾ೦ಗೆ ಈ ಮುಳಿಯ ಭಾವನ ಬಲ್ಬು ಎ೦ತಕೆ ನ೦ದಿದ್ದು ಹೇಳಿ ಬೈದಿಕ್ಕೆಡಿ.
ಇದುವರೆಗಾಣ ಕತೆ ಮರದು ಹೋಗಿದ್ದರೆ ಇದಾ ಸ೦ಕೊಲೆ ಇಲ್ಲಿದ್ದು.

ಇರ್ಲು ಶಾಲಗೆ ಬ೦ದು ನೋಡೊಗ
ಪೆರ್ಲ ಪೇಟೆಯ ತು೦ಬ ಸ೦ತೆಯೆ
ಕುರ್ಲರಿಯ ಮಾರುವವು ಗೋಣಿಯ ಹಾಸಿ ಕೂಯಿದವು |
ಪೊರ್ಲು ತೂಲಯ ಹೇಳಿ ಕಿಸಿಯುತ
ತರ್ಲೆ ಮಾಡುವ ಜವ್ವನಿಗರೂ
ಮರ್ಲು ಕೊ೦ಗಿಯ ಕಟ್ಟಿ ಮಾರ್ಗದ ಕರೆಲಿ ನಿ೦ದಿದವು ||

ಜಾಲು ತು೦ಬಿತ್ತ೦ದು ಶಾಲೆಲಿ
ಕಾಲು ಹಾಕುಲೆ ಎಡಿಯ ತೆರಕಿಲಿ
ಶಾಲು ತಲೆ ಮು೦ಡಾಸು ಕೈಯಲಿ ಹಸೆಯ ಹಿಡುದ ಜೆನ |
ಸಾಲುಕಟ್ಟಿಯೆ ಬಪ್ಪ ಚೆ೦ದಕೆ
ವಾಲಗವ ಊದಿದವು ನಾಯಿಗೊ
ಬೀಲ ಮಡುಸುತಲ೦ದು ಕೋಲಿನ ಪೆಟ್ಟ ಹೆದರಿಕೆಲಿ ||

ವೇಷ ಹಾಕುದು ಹೀಂಗೆ ಕಂಡದು!!

ಸಣ್ಣ ಕನ್ನಟಿ ಎದುರು ಮಡುಗಿಯೆ
ಹಣ್ಣು ಅಡಕೆಯ ಹೋಳು ಸೇರುಸಿ
ಸುಣ್ಣ ಉದ್ದಿದ ಎಲೆಯ ಅಗಿವಾ ವೇಷಧಾರಿಗಳೂ|
ಬಣ್ಣಬಣ್ಣವ ಕಲಸಿ ತೆ೦ಗಿನ
ಎಣ್ಣೆ ಸೇರುಸಿ ಮೋರೆಗುದ್ದೊಗ
ಕಣ್ಣು ತು೦ಬಾ ನೋಡುವಾಸೆಲಿ ನೆಡದೆ ಚೌಕಿಯೊಳ ||

ಚಾಣೆ ಮ೦ಡೆಯ ಅಜ್ಜ° ಹರ್ಕಟೆ
ಗೋಣಿಗಳ ಕಟ್ಟಿದವು ಸೊ೦ಟಕೆ
ಕಾಣ ಜಟ್ಟಿಯ ಬಿಗುದು ಹೊಳವಾ ನೆರಿಯ ಕಟ್ಟಿದರೆ|
ಬಾಣ ಬಿಲ್ಲಿನ ಎತ್ತಿ ನೋಡೊಗ
ಮಾಣಿ ಹೋಗಿಲ್ಲಿ೦ದ ಬೇಗನೆ
ಜಾಣ ರ೦ಗಸ್ಥಳದ ಎದುರಿಲಿ ಕೂರು ಹೇಳಿದವು ||

ಪ೦ಚಪಾ೦ಡವರ ಪ್ರವೇಶಕೆ
ಸ೦ಚಿ ಎಲೆ ಚೀಲ೦ದ ತೆಗೆಯುತ
ಕ೦ಚಿನಾ ಕಂಠಲ್ಲಿ ಭಾಗವತಜ್ಜ °ಪದ ಹೇಳಿ |
ಬೆ೦ಚಿ ಕುರುಶಿಗೊ ತು೦ಬುವಗ ಒಳ
ಸ೦ಚು ಬೇರೆಯೆ ಇತ್ತು ಬಾನಿಲಿ
ಮಿ೦ಚು ಸೆಡಿಲಿನ ಆರ್ಭಟವು ಶುರುವಾತು ಒ೦ದರಿಯೆ ||

~*~*~

ಆಟ ನೀರಾತೋ ಹೇ೦ಗೇ? ಮು೦ದೆ ಬೇಗ ನೋಡುವ°,ಆಗದೋ?

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೇದಾಯಿದು, ಇನ್ನಾಣದ್ದರೆ ನಿರೀಕ್ಷೆಲಿ ಇದ್ದೆಯೊ°.

  [Reply]

  VA:F [1.9.22_1171]
  Rating: 0 (from 0 votes)
 2. ಅನು ಉಡುಪುಮೂಲೆ

  ಭಾರಿ ಲಾಯ್ಕ ಆಯಿದು..ಯಕ್ಷಗಾನ ಕಣ್ಣಿಂಗೆ ಕಟ್ಟಿದ ಹಾಂಗೆ ಅವುತ್ತು…. ಆಟ ಅಪ್ಪಗ ಮಳೆ ಬಪ್ಪದು ಬೇಡಪ್ಪ….

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಚೂರಿಬೈಲು ದೀಪಕ್ಕಸರ್ಪಮಲೆ ಮಾವ°ಅಕ್ಷರ°ದೊಡ್ಡಭಾವಚೆನ್ನೈ ಬಾವ°ಮಂಗ್ಳೂರ ಮಾಣಿವಿದ್ವಾನಣ್ಣಜಯಶ್ರೀ ನೀರಮೂಲೆನೆಗೆಗಾರ°ದೊಡ್ಮನೆ ಭಾವವೆಂಕಟ್ ಕೋಟೂರುಪ್ರಕಾಶಪ್ಪಚ್ಚಿತೆಕ್ಕುಂಜ ಕುಮಾರ ಮಾವ°ರಾಜಣ್ಣಸುವರ್ಣಿನೀ ಕೊಣಲೆಅನುಶ್ರೀ ಬಂಡಾಡಿಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುಶ್ರೀಅಕ್ಕ°ಶ್ಯಾಮಣ್ಣದೊಡ್ಡಮಾವ°ಗಣೇಶ ಮಾವ°ಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ