“ಅಬ್ಬಿ” : ಹವ್ಯಕ ಭಾವಗೀತೆ (ಧ್ವನಿಸಹಿತ)

July 19, 2012 ರ 8:30 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಧುರಕಾನ ಬಾಲಮಾವ ಅಂದು “ಅಬ್ಬಿ” ಪದ್ಯ ಬರದು “ನೆರೆಕರೆ ಪ್ರತಿಷ್ಠಾನ”ದ ಸ್ಪರ್ಧೆಲಿ ಪ್ರಥಮಸ್ಥಾನ ಪಡದ್ದು ಗೊಂತಿದ್ದನ್ನೇ?
ಆ ಸಮಯಲ್ಲಿ ಪ್ರಕಟ ಮಾಡಿದ ಶುದ್ದಿ ಇಲ್ಲಿದ್ದು: (ಸಂಕೊಲೆ)
ಬಾಲಮಾವ ಬರದ ಪದ್ಯವ ನಮ್ಮ ಬೈಲಿನ “ಶ್ರೀಶಣ್ಣ” ಚೆಂದಕೆ ಹಾಡಿ ಬೈಲಿಂಗೆ ಕೇಳುಸೆಂಡಿದ್ದವು.
ಚೆಂದದ ಪದ್ಯ ಬರದ ಬಾಲಮಾವಂಗೂ, ಚೆಂದಕೆ ಹಾಡಿ ಬೈಲಿಂಗೆ ಕೇಳುಸಿದ ಶ್ರೀಶಣ್ಣಂಗೂ – ಅಭಿನಂದನೆಗೊ.
ಪದ್ಯ ಕೇಳಿಕ್ಕಿ, ಹೇಂಗಿದ್ದು ಹೇಳಿಕ್ಕಿ.

ಅಬ್ಬಿ (ಹವ್ಯಕ ಭಾವಗೀತೆ):

ರಚನೆ: ಬಾಲ ಮಧುರಕಾನನ
ಧ್ವನಿ: ಶ್ರೀಶಣ್ಣ, ಹೊಸಬೆಟ್ಟು

ಬಳ್ಳಿ ಪುದೆಲುಗಳೆಡೆ೦ದ
ಪಾರೆಕಲ್ಲಿನ ಕೊರದು
ಜೊಳಜೊಳನೆ ಹರಿವ ಈ ಅಬ್ಬಿ ನೋಡು|
ಹಾಲ ಹೊಳೆ ಹರುದಾ೦ಗೆ
ದಬದಬನೆ ಬೀಳುತ್ತು
ಎ೦ತ ಚೆ೦ದವೊ ನೋಡು, ಸುತ್ತ ಕಾಡು||1||

ಪಾರೆಗಳ ಮೈತೊಳದು
ನೀರು ಪಳಪಳ ಹೊಳದು
ಕೈಬೀಸಿ ದೆನಿಗೋಳ್ತು ಕೇಳ್ತಿಲ್ಲೆಯೋ?|
ಮುಳ್ಳುಬಲ್ಲೆಯೊ! ಕಾಡೊ!
ಚಿಗುರು,ಬಳ್ಳಿಯ ಕೊಡಿಯೊ!
ಪಿಸಿಪಿಸಿನೆ ಕೆಮಿಲೆ೦ತೊ ಹೇಳ್ತಿಲ್ಲೆಯೋ?||2||

ಪದ್ಯ ಕರ್ತೃ: ಶ್ರೀ "ಬಾಲ" ಮಧುರಕಾನನ

ಕೆಮಿಗೊ೦ಡೆ ಮಾಡಿದರೆ
ಸ೦ಗೀತ ಕೇಳುತ್ತು
ತಿಳಿನೀರ ಕನ್ನಟಿಲಿ ಮೋರೆ ಕಾಣುತ್ತು|
ಅಲ್ಲೆ ಸೀರಣಿ ಹಾರಿ
ಕೊಣಿವ ಚೆ೦ದವ ನೋಡಿ
ಇಲ್ಲೆ ಇಪ್ಪೊ° ಹೇಳಿ ಮನಸು ಹೇಳುತ್ತು||3||

ಉಗುರು ಬೆಚ್ಚ೦ಗಿಪ್ಪ
ಹರಿವ ನೀರಿ೦ಗಿಳುದು
ಮು೦ಗಿ ಮೀಸುವ ಕೊಶಿಯ ಹೇಳಲೆಡಿಗ?|
ಜಳು೦ಬುಳುನೆ ಕೈಕಾಲು
ಬಡುದು ನೀರಿಲಿ ಸೊಕ್ಕಿ
ಬೊಬ್ಬೆ ಹಾಕುವ ಸುಖವ ಮರವಲೆಡಿಗ?||4||

ಈ ಕಾಡು ಈ ನೀರು
ಈ ಗುಡ್ಡೆ ಆ ಬೈಲು
ಎ೦ದಿ೦ಗು ಚೆ೦ದಕ್ಕೆ ಒಪ್ಪಕಿರಲಿ|
ಕಲ್ಲು ಬ೦ಡೆಯ ತೋಚಿ
ಹಿಡುದು ನಿ೦ದಾ ಬೇರು
ಕೊಡುವ ಸ೦ದೇಶ ನಮ್ಮ ನೆ೦ಪಿಲಿರಲಿ||5||

~*~*~

ಧ್ವನಿ:
ಹೊಸಬೆಟ್ಟು ಶ್ರೀಶಣ್ಣ

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ರವಿ ಇ೦ದುಗುಳಿ

  ಎನ್ನ ಡ್ರಾಯಿ೦ಗ್ ಮಾಸ್ಟ್ರ ರಚನೆ ಸೂಪರ್. ಎ೦ಗಳ ಶ್ರೀಶಣ್ಣ ರಾಗ ಹಾಕಿ ಹಾಡಿದ್ದೊ ಕೂಡ ತು೦ಬಾ ಲಾಯಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 2. krishna bhat valakunja

  thumba samayanda havyaka hadu kelekku heli kaytha ittidde.poorayisida elloringu dhanyavadagalu. shubhashayagalu

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಡೈಮಂಡು ಭಾವಸರ್ಪಮಲೆ ಮಾವ°ಕೇಜಿಮಾವ°ಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿಅಜ್ಜಕಾನ ಭಾವಅಕ್ಷರದಣ್ಣಪುತ್ತೂರುಬಾವಚೆನ್ನೈ ಬಾವ°ಶ್ರೀಅಕ್ಕ°ದೊಡ್ಡಭಾವದೊಡ್ಡಮಾವ°ಡಾಮಹೇಶಣ್ಣಕೊಳಚ್ಚಿಪ್ಪು ಬಾವಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ವೇಣಿಯಕ್ಕ°ರಾಜಣ್ಣಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಡಾಗುಟ್ರಕ್ಕ°ಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ