ಬಾ ನೆಳವೆ – ಪ೦ಜೆ ಮ೦ಗೇಶರಾಯರ ಕವಿತೆಯ ಅನುವಾದ

September 28, 2013 ರ 8:25 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾ ನೆಳವೆ ಬಾ ನೆಳವೆ
ಬಾ ನೆಳವೆ ಬಾ ನೆಳವೆ

ಸಮಸ್ಯಾಪೂರಣಲ್ಲಿ ಸಾಲಿಗನ ಬಲೆಯ ಕ೦ಡಪ್ಪಗ ಪ೦ಜೆ ಮ೦ಗೇಶರಾಯರು ಬರದ ಪದ್ಯದ ನೆ೦ಪಾತು.ಈ ಪದ್ಯವ ಎನಗೆ ಎಡಿಗಾದ ಹಾ೦ಗೆ ಅನುವಾದ ಮಾಡಿದ್ದೆ. ಹೇ೦ಗಿದ್ದು ಹೇಳಿ..

 

    ಜೇಡನೂ ನೆಳವೂ

ಬಾ ನೆಳವೆ ಬಾ ನೆಳವೆ ಬಾ ಎನ್ನ ಮನೆಗೆ
ಬಾನೆಲ್ಲ ಸುತ್ತಿಕ್ಕಿ ಬಚ್ಚಿಕ್ಕು ನಿನಗೆ
ನೀನೀಗ ಬಂದೆನ್ನ ಹೊಸಮನೆಗೆ ಹಾರು
ಈ ನೂಲಿನಾ ಹಸೆಯೊಳವೆ ಬಂದು ಕೂರು ||

ಆ ಮಾತಿಂಗಾ ನೆಳವು ಏ ದುಷ್ಟ ಜೇಡ
ನೀ ಮಾಡ್ವ ಉಪಚಾರ ಎನಗಂತು ಬೇಡ
ನೀ ಮಾಡಿದಾ ಹಸೆಯು ಎನಗಕ್ಕು ದೂಪೆ
ಆ ಮರದ ಒಟ್ಟೆಯೊಳ ಆನ್ ಹುಗ್ಗಿ ಕೂಪೆ ||

ಎಲೆ ನೆಳವೆ, ನಿನ್ನ ಈ ತಿರುಗಾಟ ನೋಡಿ
ತಲೆಯು ತಿರುಗುತ್ತೆನಗೆ, ಬಾರೊ ದಯಮಾಡಿ
ಎಲೆಯ ಹಾಕಿದ್ದೆ, ನೀನುಂಡು ಸುಖಿಯಾಗು
ಎಳೆ ಎಳೆಯ ಹಾಸಿಗೆಲಿ ಮನುಗೆದ್ದು ಹೋಗು ||

ನಿನ್ನ ಮನೆಲುಂಡವನು ಮತ್ತೆ ಬದುಕುವನೊ
ನಿನ್ನ ಮನೆಲೊರಗಿದವ ಮತ್ತೆ ಏಳುವನೊ
ನಿನ್ನ ಕಥೆಯೆಲ್ಲಂದೆ ಕೇಳಿದ್ದೆ ಆನು
ನಿನ್ನ ಮನೆಬೇಡೆನಗೆ ಕೂರ೦ತೆ ನೀನು||

ನೆಳವೆ ನಿನಗೊ೦ತಿಲ್ಯ, ನಾವಿಬ್ರು ನಂಟ್ರು
ಹೆಳೆಬೇಡ, ಬಾ ಇಲ್ಲಿ, ಹಾಕುವಾ ಗೆಂಟು
ಫಳಫಳನೆ ಹೊಳೆಯುತ್ತದಾ  ಮನೆಯ ಅರುವೆ
ಕೆಳಬೇಡ, ಬಾ ಮೇಲೆ ಉಡುಗೊರೆಯ ಕೊಡುವೆ ||

ಹಸೆಹಾಕಿ ಕೂರುಸುವೆ ಹೊಸಕೆಣಿಲಿ ನಿತ್ಯ
ಹೊಸ ಹಸೆಯು ಬೇಡೆನಗೆ, ಸಾವಲ್ಲಿ ಸತ್ಯ
ವಿಷವಪ್ಪ ನಿನ್ನ ಮನೆಯೊಳದಿಕ್ಕೆ ಬಾರೆ
ಕೊಶಿಯಿದ್ದು ಎನಗಿಲ್ಲಿ ಬಾನೆಲ್ಲ ಹಾರೆ ||

ಮತ್ತೆ ಸಾಲಿಗನಲ್ಲೆ ತಿರುಗಿತ್ತು ತಿರುಗಾ
ಅತ್ತಿತ್ತೆ ಹಾರಿತ್ತು, ಹೊಡದತ್ತು ಲಾಗ
ಸುತ್ತಲೂ ಬಿಟ್ಟತ್ತು ಮೇಣದಾ ಮಗ್ಗ
ಹೊತ್ತುಕಳೆಯದ್ದೆ ಹೊಗಳಿತು ನೆಳವಿನಾ ಬೇಗ ||

ಅರರೆ ನೊಳಮರಿ! ಬೊಂಬೆ! ಮೈ ಪಮ್ಮ ನಿಂಬೆ!
ಹರಿನೀಲ ಕಣ್ಣೊಂಬಿ ನೀನೆ ಹೊಸ ಬೊಂಬೆ!
ಗರಿಯೊ ಪಚ್ಚೆಯು ತುಂಬಿ, ಹಾಹಾ! ಹೊಸತುಂಬೆ!
ಸ್ವರವು ಝೇನ್-ಝೇನಬ್ಬ, ಮಧುರತೆಲಿ ಕಾಂಬೆ! ||

ಗಾಳಿಯೂಪಿದ ಚೆಂಡು ಬಹು ಹಿಗ್ಗುವಾಂಗೆ
ಸಾಲಿಗನ ಮಾತು ಕೇಳುಬ್ಬಿತ್ತು ಹಾಂಗೆ
ಭೋಳೆಬುದ್ಧಿಯ ಜೆನ ಕೆರೆಗೆ ಹಾರುವ ಹಾಂಗೆ
ಬೋಳ ನೆಳವ್ಹಾರಿತ್ತು ಯಮಬಲೆಯೊಳಂಗೆ ||

ಕಳ್ಳಜೇಡನು ಬಲೆಲಿ ಓಡಿಬಂತದ ಹಾರಿ
ಪಿಳ್ಳೆನೆಳವಿನ ಮೈಲಿ ಮುಳ್ಳುಗಳ ಊರಿ
ಚಿಳ್ಳನೇ ವಿಷಕಾರಿ, ನೆತ್ತರಿನ ಹೀರಿ
ಕೊಳ್ಳೆಹೊಡವಗ ನೆಳವು ಸತ್ತತ್ತು ಚೀರಿ ||

ಬಲೆಗೆ ಬೀಳದ ನೆಳವಿನಾ ಹೊಗಳಿ ಕೊಂದಾ
ಬಲು ಮೋಸದಾ ಜೇಡ ಕಥೆಯು ಇದರಿಂದ
ಕೊಲೆಗಾರ ಹೇಳುವಾ ಮುಖಸ್ತುತಿಗಳಿಂದಾ
ಬಲಿಯಪ್ಪಲಾಗ ಹೇಳೊದ ಕಲಿಯೊ ಕಂದಾ ||

 

ಚಿತ್ರಕೃಪೆಃ ಪವನಜ ಮಾವ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಲಾಯಿಕಿದ್ದು ಅತ್ತೆ.

  [Reply]

  VN:F [1.9.22_1171]
  Rating: 0 (from 0 votes)
 2. ಲಕ್ಷ್ಮಿ ಜಿ.ಪ್ರಸಾದ

  “ಬಾನೆಲ್ಲ ಸುತ್ತಿಕ್ಕಿ ಬಚ್ಚಿಕ್ಕು ನಿನಗೆ”
  “ನೀ ಮಾಡಿದಾ ಹಸೆಯು ಎನಗಕ್ಕು ದೂಪೆ
  ಆ ಮರದ ಒಟ್ಟೆಯೊಳ ಆನ್ ಹುಗ್ಗಿ ಕೂಪೆ “|
  ಇಲ್ಲೆಲ್ಲ ಮೂಲವ ಮೀರಿ ರೈಸಿದ್ದು ಹವ್ಯಕ ಅನುವಾದ, ಭಾರಿ ಸೋಗಸಾಯಿದು ಇಂದಿರತ್ತೆ ,ಅಭಿನಂದನೆಗ

  [Reply]

  VA:F [1.9.22_1171]
  Rating: 0 (from 0 votes)
 3. ಪ್ರಸನ್ನತ್ತೆ
  ಪ್ರಸನ್ನತ್ತೆ

  ಸಣ್ಣಾಗಿಪ್ಪಗ ಶಾಲೆಲಿ ಬಾಯಿಪಾಠ ಮಾಡಿದ್ದು ರಜ್ಜ ರಜ್ಜ ನೆಂಪಾವುತ್ತು.
  “ಬಾ ನೊಣವೆ ಬಾ ನೊಣವೆ ಬಾ ನನ್ನ ಮನೆಗೆ
  ಬಾನಲ್ಲಿ ಹಾರಿ ಬಲು ದಣಿವಾಯ್ತು ನಿನಗೆ
  ನೀನೊಮ್ಮೆ ಬಾ ನನ್ನ ಹೊಸಮನೆಯ ನೋಡು
  ಆ ನೂಲಿನಾ ಚಾಪೆಯಲಿ ಬಂದು ಕೂಡು”

  ನಿಂಗಳ ಅನುವಾದವೂ ಸರೀ ಬಯಿಂದು.ಶಾಲೆಯ ದಿನಂಗೊ ನೆಂಪಾತು.ಧನ್ಯವಾದ ,ಇಂದಿರತ್ತೆ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹವಿಗನ್ನಡ ಅನುವಾದ ಬಾರಿ ರೈಸಿದ್ದು.ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಕೆ.ನರಸಿಂಹ ಭಟ್ ಏತಡ್ಕ

  ಲಾಯಕಾಯಿದು ಇಂದಿರಕ್ಕ.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 6. ಶೈಲಜಾ ಕೇಕಣಾಜೆ

  ಅತ್ತೆ…ಎನಗೆ ಅರ್ಧಂಬರ್ಧ ಗೊಂತಿದ್ದ ಪದ್ಯವ ಇಡಿ ಅನುವಾದಿಸಿದ್ದು ಕಂಡು ಖುಷಿಯಾತು… ಧನ್ಯವಾದಂಗೋ..

  [Reply]

  VA:F [1.9.22_1171]
  Rating: 0 (from 0 votes)
 7. ಪಾರ್ವತಿ ಮರಕಿಣಿ

  ಲಾಯಿಕಾಯಿದು ಇಂದಿರೆ…

  [Reply]

  VA:F [1.9.22_1171]
  Rating: 0 (from 0 votes)
 8. ಸುಬ್ರಹ್ಮಣ್ಯ ಭಟ್ ಬೆಜಪ್ಪೆ

  ಈ ಪದ್ಯ ಲಾಯಿಕ್ಕಾಯಿದು ನೋಡು
  ಇದರೊಂದಾರಿ ಹಾಡಿ ನೋಡು
  ಹೀಂಗಿಪ್ಪ ಪದ್ಯ ಇನ್ನಷ್ಟು ಬರಲಿ
  ಪದ್ಯಂಗ ಮಾಂತ್ರ ಹವ್ಯಕಲ್ಲೇ ಇರಲಿ

  [Reply]

  VA:F [1.9.22_1171]
  Rating: +1 (from 1 vote)
 9. Bharathi Mahalingesh.

  ಬೋಳೆ ಬುದ್ಧಿಯ ಜನ ಮುಖಸ್ತುತಿಯ ಕೇಳಿ ಕೆರೆಗೆ ಹಾರುವ ಪರಿಸ್ಥಿತಿ ಬಪ್ಪಲಾಗ ಹೇಳುವ ಕಿವಿಮಾತು ತುಂಬಾ ಇಷ್ಟ ಆತು .
  ಅನುವಾದಕಿಗೆ ಧನ್ಯವಾದ .. ಇನ್ನಷ್ಟು ಹವಿಗನ್ನಡ ಬರಹಂಗಳ ನಿರೀಕ್ಷೆಲಿ ….

  [Reply]

  VA:F [1.9.22_1171]
  Rating: +2 (from 2 votes)
 10. ಮುಳಿಯ ಭಾವ
  ರಘುಮುಳಿಯ

  ಅತ್ತೆ ,
  ತು೦ಬಾ ಲಾಯ್ಕ ಆಯಿದು ಅನುವಾದ.
  ಸವಿಗನ್ನಡ ಭಾಷೆಯ ಇನ್ನಷ್ಟು ಕವಿತೆಗೊ ಹವಿಗನ್ನಡಕ್ಕೆ ಬರಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಹಳೆಮನೆ ಅಣ್ಣಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿದೊಡ್ಮನೆ ಭಾವಬಂಡಾಡಿ ಅಜ್ಜಿvreddhiಡಾಗುಟ್ರಕ್ಕ°ಶೀಲಾಲಕ್ಷ್ಮೀ ಕಾಸರಗೋಡುವಿಜಯತ್ತೆವಸಂತರಾಜ್ ಹಳೆಮನೆಒಪ್ಪಕ್ಕಚೆನ್ನಬೆಟ್ಟಣ್ಣಶಾಂತತ್ತೆಬೋಸ ಬಾವಪಟಿಕಲ್ಲಪ್ಪಚ್ಚಿಕಜೆವಸಂತ°ಕಳಾಯಿ ಗೀತತ್ತೆಸಂಪಾದಕ°ಶ್ರೀಅಕ್ಕ°ಶಾ...ರೀಕೇಜಿಮಾವ°ಪುಟ್ಟಬಾವ°ಪವನಜಮಾವಅಕ್ಷರ°ವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ