Oppanna.com

ಬಂದೆಯಾ ನಂದನ?

ಬರದೋರು :   ಗೋಪಾಲಣ್ಣ    on   23/03/2012    10 ಒಪ್ಪಂಗೊ

ಗೋಪಾಲಣ್ಣ

ಬಂದೆಯಾ ನಂದನ?
ನಿನಗೆ ಅಭಿನಂದನ..

ಕತ್ತೆ ಹೋದ ಜಾಗೆಲಿ
ಮತ್ತೆ ಮೇವು ಇಲ್ಲೆಡ
ಈ ಮಾತು ಸರಿಯೊ ಹೇಳು
ಹೊಸತು ಹುಲ್ಲು ಬಾರಡ!
ಹಾಂಗೇನೂ ಇಲ್ಲೆ ಅಲ್ಲ?

ವರ್ಷವೂ ಹೊಸತೆ ನಮಗೆ
ಹೋದ ಹುಲ್ಲು ಹುಟ್ಟುಗು
ಹೊಸತು ಸೆಸಿಯು ಚಿಗುರುಗು
ಚಳಿಯ ಕಾಲ ಕಳೆದ ಮೇಲೆ
ಬಂದೆ ಬಕ್ಕು ಹೊಸವಸಂತ,

ಆಂಗ್ಲ ಕವಿಯ ಎಣಿಕೆ ನಮಗೆ
ಆಗಲಿಂದು ದಾರಿದೀಪ!
ನಿಲ್ಲಲೆಲ್ಲ ಗುಲ್ಲು ಗುಟುರು
ಜನರ ನಡುವೆ ಜಟಾಪಟಿ

ಒಳ್ಳೆ ಬುದ್ಧಿ ಬರಲಿ ಎಲ್ಲ
ಸಾಕು ಮಾಡಿ ಕಿತಾಪತಿ!
ಶಾಂತಿ ತಾರೊ ನಂದನ
ನಿನಗೆ ಅಭಿನಂದನ!

~*~*~

10 thoughts on “ಬಂದೆಯಾ ನಂದನ?

  1. ಲಾಯಿಕ್ಕಾಯಿದು, ಅಭಿನ೦ದನೆಗೊ ಗೋಪಾಲಣ್ಣಾ,.

  2. “ಕತ್ತೆ”ಯ ಓಡುಸಿ ನಂ “ದನ” ಬಯಿಂದು. ಈ ಸಂವತ್ಸರ ಎಲ್ಲೋರಿಂಗೂ ನೆಮ್ಮದಿ ಉಂಟು ಮಾಡಲಿ. ಗೋಪಾಲಣ್ಣನ ಕವನದ ಆಶಯ ಒಳ್ಳೆದಾಯಿದು.

    1. ದನ ಇದ್ದಲ್ಲಿ ನಂದನವನವೇ… ಬೊಳುಂಬು ಮಾವನ ಒಪ್ಪ ಇಷ್ಟ ಆತು…

  3. ಬಂದೆಯಾ ನಂದನ
    ಗೋಪಾಲಣ್ಣನ ಕವನ
    ಬೈಲಿನ ಅಭಿನಂದನ
    ಸೆಳೆತ್ತ ಇದ್ದು ಕಣ್ಮನ

    ಗೋಪಾಲಣ್ಣಂಗೆ ಅಭಿನಂದನೆ ಹಾಂಗೂ ಶುಭಾಶಯಂಗ

  4. Gopalannana kavana tumba chenda aayidu Olleya manassu Olleya kanasu Olleya haaraike Abhinandane Oppann.com gude

  5. ಗೋಪಾಲಣ್ಣ,
    ಶಾಂತಿ ತಾರೊ ನಂದನ — ಒಳ್ಳೆ ಕೋರಿಕೆ.ಈಗ ನಡೆತ್ತಾ ಇಪ್ಪ ಗುಲ್ಲು ಗುಟುರು ನಿ೦ದರೆ ರಜಾ ನೆಮ್ಮದಿ ಅಕ್ಕು !
    {ಆಂಗ್ಲ ಕವಿಯ ಎಣಿಕೆ ನಮಗೆ
    ಆಗಲಿಂದು ದಾರಿದೀಪ!}
    ಇದೊ೦ದು ಬಗೆ ಅರ್ಥ ಆತಿಲ್ಲೆನ್ನೇ.
    ಶುಭಾಶಯ೦ಗೊ.

    1. ಆಂಗ್ಲ ಕವಿ ಪಿ.ಬಿ.ಶೆಲ್ಲಿ ಅವ ಬರೆದ ಓಡ್ ಟು ದ ವೆಸ್ಟ್ ವಿಂಡ್ ಕವಿತೆಲಿ-If winter comes , Can spring be far behind? ಹೇಳಿ ಹೇಳಿದ್ದ.[ಚಳಿಗಾಲ ಬಂತು ಹೇಳಿ ಆದರೆ ವಸಂತಕಾಲ ಇನ್ನೂದೂರ ಇರ ಅಲ್ಲದೊ?]
      ಅದರ ಆನು ಇಲ್ಲಿ ಸೂಚಿಸಿದ್ದು. ಶೆಲ್ಲಿಯ ಈ ಸಾಲುಗೊ ಆಶಾವಾದದ ಪ್ರತೀಕ.

      1. ಹೋ.ತು೦ಬಾ ಇಷ್ಟ ಆತು ಗೋಪಾಲಣ್ಣ.
        ಈ ಆಶಾವಾದವೇ ನಮ್ಮ ಜೀವನಕ್ಕೆ ಹೊಸ ಉತ್ಸಾಹ ಮೂಡುಸೊದು.

    2. ಖರ ಹೇಳಿರೆ ಕತ್ತೆ ಹೇಳುದರ ಕಳೆದ ವರ್ಷದ ಕವನಲ್ಲಿ ಬರೆದಿತ್ತಿದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×