ಚೆಂದದ ಆಕಾಶ

May 28, 2017 ರ 9:38 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರಸನ್ನಾ ವಿ ಚೆಕ್ಕೆಮನೆ ಇವು ಕಳ್ಸಿದ ಒಂದು ಕವನ ಇಲ್ಲಿದ್ದು. ಇದರ ಓದಿ ನಿಂಗಳ ಅನಿಸಿಕೆಗಳ ತಿಳುಶಿ

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ
ಚೆಂದದ ಆಕಾಶ

ಬೆಳಿ ಮುಗಿಲಿನ ಮುಟ್ಲೆ
ಆನು ಆಕಾಶಕ್ಕೆ ಹಾರೆಕೋ
ನೀಲಿ ರಂಗಿನನ್ನೂ ಒಂದರಿ
ಮೆಲ್ಲಂಗೆ ಮುಟ್ಟೇಕೋ

ಆಶೆಯೇಕೆ ಮನಸಿಲ್ಲಿ
ಕುಞ್ಞಿ ಮಕ್ಕಳ ಹಾಂಗೆ
ಸಣ್ಣ ಹಾತೆಯಾಗಿ ಆನು
ಮೇಲಂಗೋಪದು ಹೇಂಗೇ

ವಿಮಾನವ ನೋಡೆಕು
ಚಂದಮಾಮನತ್ರೆ ಕೂರೇಕು
ಕಣ್ಣು ಪಿಳಿ ಪಿಳಿ ಮಾಡಿ 
ಚೆಂದಕೆ ನೆಗೆ ಮಾಡುವ ಪುಟ್ಟು
ನಕ್ಷತ್ರವ ಮೆಲ್ಲಂಗೆ ಎಣ್ಸೆಕು

ಸೂರ್ಯಚಾಮಿ ಬಂದರೆ
ದೂರ ಹೋಗು ಹೇಳುವೆ
ನಿನ್ನ ಬೆಶಿಯ ತಡವಲೆಡಿಯ
ಹಾಂಗೆ ಹೇಳಿ ಹುಗ್ಗುವೆ

ಕರಿಮುಗಿಲಿನ ಒಟ್ಟು ಸೇರ್ಸಿ
ಗಾಳಿಯೊಟ್ಟಿಂಗೆ ಕಳ್ಸುವೆ
ಭೂಮಿಲಿ ಮಳೆಯಾಗಿ 
ಸೊರ್ಗು ಬೇಗ ಹೇಳುವೆ

ಆಕಾಶಕ್ಕೆ ಹಾರ್ಲೆಡಿಗೋ
ಚುಕ್ಕಿಗಳ ಎಣ್ಸಲೆಡಿಗೋ
ಇದೆಲ್ಲ ಎನ್ನ ಬರೀ ಕನಸುಗೊ
ಮಾತ್ರಲ್ಲದಾ….

~~~***~~~

-ಪ್ರಸನ್ನಾ ವಿ ಚೆಕ್ಕೆಮನೆಚೆಂದದ ಆಕಾಶ

 

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಪ್ರಸನ್ನಾ ವಿ ಚೆಕ್ಕೆಮನೆ

  ಚೆಂದದ ಆಕಾಶವ ಒಪ್ಪಣ್ಣ ಬೈಲಿಂಗೆ ಹಾಕಿದ ಶರ್ಮಣ್ಣಂಗೆ ಧನ್ಯವಾದ….. ಬೈಲಿನ ಎಲ್ಲಾ ಬಂಧುಗಳ ಪ್ರೋತ್ಸಾಹವೇ ಎನ್ನ ಬರವಣಿಗೆಗೆ ಸ್ಪೂರ್ತಿ..

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಗೋಪಾಲ

  ಚೆಂದದ ಆಗಸದ ಬಗ್ಗೆ ಚೆಂದದ ಕವನ. ವಿಮಾನಲ್ಲಿ ಹೋಪಗ ಕೈ ಹೆರ ಹಾಕಲೆಡಿತ್ತಿಲ್ಲೆ ಆಡ, ಇಲ್ಲದ್ರೆ ಬೆಳಿಮುಗಿಲ ಮುಟ್ಳಾವ್ತಿತು.

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಆದರೂ ಒಂದಾರಿಯಾದರೂ ಮುಟ್ಟುವ ಕೊದಿ..ಮನಸಿಲ್ಲಿ….ಕವನ ಮೆಚ್ಚಿದ್ದಕ್ಕೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ಒಪ್ಪ ಪದ್ಯ

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಪದ್ಯ ಒಪ್ಪಾಯಿದು ಹೇಳಿದ್ಸಕ್ಕೊಂದೊಪ್ಪ..

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಕವನ ಚೆಂದ ಆಯಿದು.

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆಪುತ್ತೂರುಬಾವಮಾಷ್ಟ್ರುಮಾವ°ಸಂಪಾದಕ°ಅನುಶ್ರೀ ಬಂಡಾಡಿಕೇಜಿಮಾವ°ಜಯಗೌರಿ ಅಕ್ಕ°ಹಳೆಮನೆ ಅಣ್ಣಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿದೊಡ್ಡಭಾವಕಳಾಯಿ ಗೀತತ್ತೆವೇಣಿಯಕ್ಕ°ಶರ್ಮಪ್ಪಚ್ಚಿಡೈಮಂಡು ಭಾವಶಾಂತತ್ತೆಉಡುಪುಮೂಲೆ ಅಪ್ಪಚ್ಚಿಗಣೇಶ ಮಾವ°ಪುತ್ತೂರಿನ ಪುಟ್ಟಕ್ಕಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿಕಜೆವಸಂತ°ವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ