ಎಲ್ಲಿದ್ದೆ ಬಾ ಎನ್ನ ಕಿಟ್ಟ ಚಾಮಿ

ಶ್ರೀಕೃಷ್ಣ ಪರಮಾತ್ಮನ ಬಾಲರೂಪ ಕಿಟ್ಟಚಾಮಿಯ ಬಗ್ಗೆ ಮಧುರಕಾನ ಬಾಲಮಾವ ಬರದ ಚೆಂದದ ಪದ್ಯ ಇಲ್ಲಿದ್ದು.
ನಮ್ಮ ಬೈಲಿನ  ಶ್ರೀಶಣ್ಣ ಈ ಪದ್ಯಕ್ಕೆ ಚೆಂದದ ರಾಗ ಹಾಕಿ ಹಾಡಿದ್ದವು.
ಸರಳ – ಸುಂದರ ಪದ್ಯ ಬರದ ಬಾಲಮಾವಂಗೂ, ಚೆಂದದ ರಾಗಲ್ಲಿ ಹಾಡಿದ ಶ್ರೀಶಣ್ಣಂಗೂ ಅನಂತ ಅಭಿನಂದನೆಗೊ.

ಎಲ್ಲಿದ್ದೆ ಬಾ ಎನ್ನ ಕಿಟ್ಟ ಚಾಮಿ :

ರಚನೆ: ಬಾಲ ಮಧುರಕಾನನ
ಧ್ವನಿ: ಶ್ರೀಶಣ್ಣ


Ellidde-Baa-Kitta-Chami

ಎಲ್ಲಿದ್ದೆ ಬಾ ಎನ್ನ ಕಿಟ್ಟಚಾಮಿ
ಒಂದಾರಿ ಬಾ ಎನ್ನೆದುರು ನಿಲ್ಲು ||

ಸಿಕ್ಕದ್ದ ಹಾಂಗೆಯೇ ಸಿಕ್ಕಲ್ಲಿ ಮಡುಗಿದ
ಬೆಣ್ಣೆ ಮಸರು ನೀ ಕದ್ದು ತಿಂದೆ
ಹಾವಿನ ತಲೆ ಮೆಟ್ಟಿ ಕೊಣುದೆ ಚೆಂದಕೆ ನೀನು
ಗುಡ್ಡೆಯ ಬೆರಳಿಲೆ ನೆಗ್ಗಿ ಹಿಡುದೆ ||೧||ಎಲ್ಲಿದ್ದೆ

ಕೆಚ್ಚಲಿಂದಲೇ ಕುಡುದೆ ಉಂಬೆ ಜಾಯಿಯ ನೀನು
ಆರಿಂಗು ಕಾಣದ್ದೆ ಮಣ್ಣು ತಿಂದೆ
ನಿನ್ನಬ್ಬೆಬಾಯೊಡಶಿ ನೋಡಿದರೆ ಅಬ್ಬಬ್ಬ
ಮೂರ್ಲೋಕ ತೋರುಸಿದೆ ಅಂದು ನೀನು ||೨||ಎಲ್ಲಿದ್ದೆ

ಊರ ಮಕ್ಕಳ ಕೂಡಿ ಆಟ ಆಡಿದೆ ಮತ್ತೆ
ಕುಂಞುಂಬೆಯ ಬೀಲ ಹಿಡುದು ಓಡುಸಿದೆ
ಅಬ್ಬೆಯಾ ಜಿಡೆ ಹಿಡುದು ಉಂಬೆ ಬೀಲಕ್ಕೆಕಟ್ಟಿ
ಬಿದ್ದಪ್ಪಗ ಕೈತಟ್ಟಿ ಹಾರಿ ಕೊಣುದೆ ||೩||ಎಲ್ಲಿದ್ದೆ

ದುಷ್ಟ ಪೂತನಿ ಕೊಂದೆ ಮಾವ ಕಂಸನ ಕೊಂದೆ
ಅಬ್ಬೆ ಅಪ್ಪನ ಸೆರೆಯ ನೀ ಬಿಡುಸಿದೆ
ಒಪ್ಪೊಪ್ಪ ಕೆಲಸೊಂಗ ಮಾಡಿದೆ ಒಪ್ಪಣ್ಣ
ಊರಿಂಗೆ ನೀ ಚಾಮಿ ಆಗಿ ಹೋದೆ ||೪||ಎಲ್ಲಿದ್ದೆ

ಒಪ್ಪಕುಂಞಿಯೊ ,ಅಲ್ಲ ಪೋಕಿರಿ ಕಿಟ್ಟನೋ
ಎಂತೆಂತೋ ಎಲ್ಲೋರು ಹೇಳುತ್ತವು
ಎಷ್ಟು ಹೇಳಿರು ಕೂಡ ಚಾಮಿ ದೇವರೇ ನಿನ್ನ
ಹೆಸರ ಜೆಪ ನಿತ್ಯವೂ ಮಾಡುತ್ತವು ||೫||ಎಲ್ಲಿದ್ದೆ

~*~*~

ಧ್ವನಿ: ಶ್ರೀಶಣ್ಣ

Ellidde-Baa-Kitta-Chami

ಬಾಲಣ್ಣ (ಬಾಲಮಧುರಕಾನನ)

   

You may also like...

16 Responses

 1. ಇಂದುಗುಳಿ ಅಣ್ಣ says:

  ರಚಿಸಿದವಕ್ಕೂ,ಹಾಡಿದವಕ್ಕೂ ಎನ್ನ ಒಂದುಒಪ್ಪ.ಲಾಯಕ ಆಯಿದು.

 2. ಇಂದುಗುಳಿ ಅಣ್ಣ says:

  ಜಯಶ್ರೀ ಅಕ್ಕ ರಚನೆ ಲಾಯಕ ಆಯಿದು.ಮುಂದುವರಿಯಲಿ

 3. ಪ್ರಭಾಕರ ಭಟ್ ಕೆ. says:

  ಕವನ೦ ಮಧುರ೦, ಗಾಯನ೦ ಮಧುರ೦ ಮಧುರಾಧಿಪತೇ !
  ಮಧುರ ಕಾನನರಿ೦ಗೆ ಶ್ರೀಶಣ್ಣ೦ಗೆ ಅಭಿನ೦ದನೆಗೊ.

 4. ಪ್ರಭಾಕರ ಭಟ್ ಕೆ. says:

  ಕವನ೦ ಮಧುರ೦, ಗಾಯನ೦ ಮಧುರ೦ ಮಧುರಕಾನನಾಧಿಪತೇ !
  ಮಧುರ ಕಾನನರಿ೦ಗೆ ಶ್ರೀಶಣ್ಣ೦ಗೆ ಅಭಿನ೦ದನೆಗೊ.

 5. ಬಾಲಣ್ಣ (ಬಾಲಮಧುರಕಾನನ) says:

  ಅಣ್ನೋ ಧನ್ಯವಾದಂಗೊ,

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *