ಎನ್ನ ಈ ಕೆಲಸಕ್ಕೆ ರಜೆಯೆ ಇಲ್ಲೆ

ಎನ್ನ ಈ ಕೆಲಸಕ್ಕೆ ರಜೆಯೆ  ಇಲ್ಲೆ

ಗಂಟೆ ಆತದ ಆರು
ತಡವಾತು ಏಳುವಾಗ
ಮನೆಗೆಲಸ ಒಂದುದೇ ಆಯಿದಿಲ್ಲೆ  /
ನೆಲ ಉಡುಗಿ ಉದ್ದೆಡದೋ
ಎರಡು ದಿನ ಆತನ್ನೆ
ಮೊನ್ನೆ ಬಂದಾ “ಅಕ್ಕು” ಮತ್ತೆ ಇಲ್ಲೆ/೧ /
ಕಾಪಿಗೆಂತರ ?ದೋಸೆ ,
ಹಿಟ್ಟು ನಿನ್ನೆಯೆ ಕಡದು
ಮಡುಗಿದ್ದೆ  ಹುಳಿಬಂತೋ ನೋಡೆಕಷ್ಟೇ/
“ಕರೆಂಟು “ಹೋದರೆ  ಇನ್ನು
ಕಾಯಿ ಕಡವದು  ಆರು ?
ಕಡವ  ಕಲ್ಲಿನ  ಕುಟ್ಟಿ ಸರಿ ಮಾಡೆಕಷ್ಟೇ/೨/
ಸೊಲುದ ತೆಂಗಿನ ಕಾಯಿ
ಮೂಲೇಲಿ  ಮಡುಗಿದ್ದೆ
ಎಡಿಗಾರೆ  ಒಂದಾರಿ ಕೆರದು ಕೊಡೆಕು/
ಹಾಲು ತಯಿಂದದ  “ಮರಿಯ”
ಇನ್ನು ಕಾಸೆಕು ಅದರ
“ಗೇಸೊಲೆ “ಲಿ ಮಡುಗಿದ್ದೆ ನೋಡಿಗೊಳೆಕು/೩/
ಹಸಿಮೆಣಸು ಬೇನ್ಸೋಪ್ಪು
ನೆಟ್ಟಿ  ಹಿತ್ತಿಲ್ಲಿಕ್ಕು
ಒಂದೆರಡು ತಂದುಕೊಡಿ  ಚಟ್ನಿ ಕಡೆಕು/
ಕಾಪಿ  ಹೊಡಿ ಮುಗುದತ್ತು
ಚೀಟಿಲ್ಲಿ  ಬರಕ್ಕೋಳಿ
ಮತ್ತೆ ಪೇಟೆಗೆ ಹೋಗಿ ತಂದು ಕೊಡೆಕು /೪/
ಶಾಲೆ ಮಕ್ಕಳ ಮೀಶಿ
ಕಾಪಿ ತಿಂಡಿಯ ಕೊಟ್ಟು
ಅವರನ್ನು “ಇವರನ್ನು “ಹೆರಡುಸೆಕ್ಕು /
ನೀರು  ವಾರಕ್ಕೆರಡು
-ದಿನ ಮಾಂತ್ರ  ಬಿಡು ದಾಡ
ಇಂದೆ  ಪಾತ್ರೆಗಳಲ್ಲಿ ತುಂಬುಸೆಕ್ಕು/೫/
ಅಬ್ಬಬ್ಬ  ! ಬೊಡುದತ್ತು
ಎಂತ ಕೆಲಸವೊ  ಏನೊ
ಎಷ್ಟು ಮಾಡಿರು ಕೂಡ  ಮುಗಿವಲಿಲ್ಲೆ/
ಕಾಂಬ ಕೆಲಸವೆ  ಅಲ್ಲ
ದಿನ ನಿತ್ಯದಾ “ತೆರಕ್ಕು “
ಎನ್ನ ಈ ಕೆಲಸಕ್ಕೆ ರಜೆಯೆ  ಇಲ್ಲೆ /೬/
~~~*~~~

ಬಾಲಣ್ಣ (ಬಾಲಮಧುರಕಾನನ)

   

You may also like...

12 Responses

  1. ಬಾಲಣ್ಣ (ಬಾಲಮಧುರಕಾನನ) says:

    ಮುಳಿಯದಣ್ಣ,ಒಪ್ಪಕ್ಕೆ ಧನ್ಯವಾದಂಗೊ.ಸೂರ್ಯದೇವರ ಸುತ್ತ …. ನಿಜಕ್ಕೂ ಹಾಂಗೆ ಅಲ್ಲದೊ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *