Oppanna.com

" ಜೀವಸೆಲೆ "

ಬರದೋರು :   ಬಾಲಣ್ಣ    on   10/06/2014    9 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)
ಜೀವಸೆಲೆ
ಪಡುಹೊಡೆಲಿ  ನೋಡಿದರೆ  ರೆಂಕೆಯಾ
ಬಿಡುಸಿ ಹಾರುವ ಕರಿಯ ಗಿಡುಗನೊ
ಒಡದ ಮೊಸಳೆಯ ಬಾಯಿಯೋ ತುಂಬೆಕೈ ಮದದಾನೆಯೋ/
ಅಡರಿತ್ತು ಕರಿಮುಗಿಲು ನೋಡದ
ದಡಬಡನೆ ಕೇಳಿತ್ತು ಕೆಮಿಗದ
ಇಡಿಮನೆಯೆ ನೆಡುಗಿತ್ತು  ಗಡಗಡ ‘ಸೋನೆ ‘ ಹಿಡುದತ್ತೋ / ೧/       (ಮೋಹನ )
ಬಾನದಜ್ಜಿಯೆ ಕಡವ  ಶಬುದವೋ
ಆನೆ ಮುಗಿಲೆಡೆ  ನೆಡವ ಗೌಜಿಯೋ
ಸೋನೆ ಮಳೆ ಸುರುದತ್ತು  ರಟ ರಟಾಯಿಸಿ ಸೆಡ್ಲು ಬಡುದತ್ತು
ಬಾನವೇ ಬಿರುದತ್ತೊ ಎನಗನು –
ಮಾನ,ದೇವರ ಕರುಣೆಯಾ  ವರ-
ದಾನವೋ! ಹೊಯಿದತ್ತು   ರಪ ರಪ ಬಂತು  ಮಳೆಗಾಲ  /೨/       ( ಭೋಪಾಳ)
ಬಿರುಗಾಳಿ ಬಿರಬಿರನೆ ಬೀಸಿರೆ
ತಿರುತಿರುಗಿ  ಬಜವೆಲ್ಲ ಹಾರಿರೆ
ಮರಗಿಡವೊ  ಅಡಿಮೇಲಾತು   ಮಾಡಿನ ಹಂಚು  ಹಾರಿತ್ತು  /
ಕೆರೆ ತೋಡು  ತುಂಬಿತ್ತು,  ಪಳ್ಳದ
ಕರೆ ಜೆರುದು  ಕೂದತ್ತು , ಕಟ್ಟದ
ಬರೆ ಒಡದು ತೋಟದ ತುಂಬ ಬೆಳ್ಳದ  ನೀರು ಮೊಗಚಿತ್ತು  /೩/   ( ಕಾನಡ  )
 ಹಿಡುದ ಕೊಡೆ ಹಾರಿತ್ತು , ಜಾಲಿಲಿ
ನೆಡವಗಳೆ ಜಾರಿತ್ತು,  ತೆಂಗಿನ
ಮಡಲುಗಳೆ ಗಾಳಿಗೆ  ತೂಗಿ  ತಟ  ಪಟ ಕಾಯಿ  ಉದುರಿತ್ತು /
ಪಡುಗಡಲು ಮೊರದತ್ತು  ಭೋರನೆ
ಕಡಲಲೆಗೊ ಅಬ್ಬರಿಸಿ  ಬೊಬ್ಬೆಲಿ
ಬಡುದತ್ತು ಬಂಡಗೆ  ಹಾರಿ ಸೀರಣಿ  ತೆಂಗಿನೆತ್ತರಕೆ /೪/       (ಕಲ್ಯಾಣಿ )
ಮರ ಮರದ ಕೊಡಿ ಚಿಗುರಿ  ಗೆಲ್ಲಿನ
ಸಿರಿ ಮುಡಿಯ ಸಿಂಗಾರ ನೋಡಿರೆ
ಸಿರಿಯೆ  ವನಸಿರಿ  ಸ್ವರ್ಗದೈಸಿರಿ  ಪ್ರಕೃತಿ ವನದೇವಿ  /
ಇರಲಿರಲಿ  ಊರಿಂಗೆ  ದೇವರ
ವರ ಇದುವೆ ನೀರಿನ  ‘ಸೊಯಿಬ’ ಕಡ –
ವರ , ಜೀವಜಲ ,ಇದು ಭಾಗ್ಯನಿಧಿ, ಜೀವ, ಜೀವಸೆಲೆ /೫/     ( ಮಧ್ಯಮಾವತಿ )
   ~~~***~~~

9 thoughts on “" ಜೀವಸೆಲೆ "

  1. ಅಲ೦ಕಾರ೦ಗೊ ತು೦ಬಿದ ಸಮೃದ್ಧ ಪದ್ಯ.ಕೊಶಿಯಾತು ಮಾವ.
    ಷಟ್ಪದಿಯಾದರೂ ಭಾಮಿನಿ ಅಲ್ಲ,ಕೆಲವು ಜಾಗೆಲಿ ,ಅಷ್ಟೆ.ಹಾಡಿರೆ ಹೇ೦ಗಕ್ಕು ಹೇಳ್ತ ಕುತೂಹಲ ಎನಗೆ.ಆರಾದರೂ ಹಾಡಿ ಕಳುಸುವಿರೋ?

  2. ಜೀವ ಸೆಲೆ ಪದ್ಯಂಗ ತುಂಬಾ ಲಾಯ್ಕ್ಕ ಇದ್ದು

  3. ಮಳೆಗಾಲದ ಸುಂದರ ವರ್ಣನೆ ಲಾಯಕಾಯಿದು ಬಾಲಣ್ಣಾ. ಹವ್ಯಕ ಶಬ್ದಂಗಳ ಸುರಿಮಳೆಯುದೆ ಇದ್ದು.

  4. ಬಾಲಣ್ಣ, ಹೆರ ಮಳೆ ಬತ್ತಾ ಇಪ್ಪಗ ಈ ಕವನ ಓದುವಾಗ ಭಾರೀ ಕೊಶೀ ಆವುತ್ತು.
    ತುಂಬಾ ಲಾಯ್ಕಾಯಿದು.
    ಹಾಡಿನ ರೂಪಲ್ಲಿ ಬಂದರೆ ಚೆಂದವೇ ಅಕ್ಕು. ಬರಲಿ..

  5. ಇದರ ಹಾಡಿಸಿ ಬೈಲಿಲಿ ಹಾಕುವಿರೋ?

    1. ದೀಪಿ ಅಕ್ಕನೋ ,ಶ್ರೀಶಣ್ಣನೊ ಹಾಡಿದರೆ ಬೈಲಿನ ಎಲ್ಲೋರು ಕೆಮಿ ಕೊಡುಗು ಅಲ್ಲದೋ ಗೋಪಾಲಣ್ಣಾ ?

        1. ಸಭೆಲಿ ಹಾಡುತ್ತರೆ ಕಡೇಂಗೆ ಹಾಡಲಕ್ಕು ಶಾಮಣ್ಣ …..

  6. ಹರೇ ರಾಮ ಬಾಲಣ್ಣ . ಜೀವಸೆಲೆ ಮುಂಗಾರ ಆರಂಭ ಲಾಯಕ ಆಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×