ಕಾದಿಹೆನು

ರಚನೆ: ಬಾಲ ಮಧುರಕಾನನ (ಠಾಗೋರರ ಗೀತಾಂಜಲಿ ಕವನ ಸಂಗ್ರಹದ ಅನುವಾದಿತ ಕವನ)
ಸ್ವರ : ಶ್ರೀಶ ಹೊಸಬೆಟ್ಟು

ನಾ ಹಾಡಲಾಶಿಸಿದೆ ಅದನು ಹಾಡಲೆ ಇಲ್ಲ
ಗೀತವದು ಬಾಕಿಯಿಹುದಿಂದುವರೆಗೆ
ನನ್ನ ವಾದ್ಯದ ತಂತಿ ಬಿಗಿಗೊಳಿಸುತಲಿ ಮತ್ತೆ
ಸಡಿಲುಗೊಳಿಸುತ ದಿನಗಳನ್ನು ಕಳೆದೆ

ನಿಜಕು ಆ ಕಾಲವದು ಇದುವರೆಗೆ ಬಂದಿಲ್ಲ
ಪದಗಳನು ಅಂದದಿಂ ಹೆಣೆಯಲಿಲ್ಲ
ಹಾಡುವಾಸೆಯ ತೀವ್ರ ಯಾತನೆಯು ಮಾತ್ರವಿದೆ
ಹೃದಯದಲಿ ಬೇರೇನು ಈಗ ಉಳಿದಿಲ್ಲ

ಅರಳಿಲ್ಲ ಹೂ ಮೊಗ್ಗು ನಿಡುಸುಯ್ಯುತಿದೆ ಗಾಳಿ
ಅದು ಮಾತ್ರ ಕೇಳುತಿದೆ ಕಿವಿಗಳಲ್ಲಿ
ನೋಡಿಲ್ಲ ಅವನ ಮೊಗ ಕೇಳಿಲ್ಲ ಅವನ ದನಿ
ಆದರೊಂದನು ಮಾತ್ರ ಕೇಳಿಬಲ್ಲೆ
ಮೃದುವಾದ ಸಪ್ಪುಳದ ಪಾದಗಳನಿಡುತಿರುವ
ನನ್ನ ಮನೆ ಮುಂದಿರುವ ಬೀದಿಯಲ್ಲಿ

ಉತ್ಸಾಹದೀ ದಿನವು ಕಳೆದು ಹೋದುದು ತನ್ನ
ಕುರುಹನ್ನು ಹರಡುತ್ತ ನೆಲದ ಮೇಲೆ
ಹಚ್ಚಿಲ್ಲ ಇದುತನಕ ದೀಪವನು ಮನೆಯೊಳಗೆ
ಅಂತಿರಲು ಮನೆಗವನ ನಾ ಕರೆಯಲೆಂತು?
ಅವನ ಕಾಣುವ ಆಸೆಯಿಂದ ಬದುಕಿಹೆ ನಾನು
ಆದರದು ಎಂದಿಗೋ ತಿಳಿಯದಲ್ಲ

~~~***~~~~

ಶ್ರೀಶಣ್ಣನ ಧ್ವನಿ ಇಲ್ಲಿದ್ದು:

ಬಾಲಣ್ಣ (ಬಾಲಮಧುರಕಾನನ)

   

You may also like...

10 Responses

 1. ಒಳ್ಳೆ ಪ್ರೌಢ ಕವನ. ತುಂಬಾ ಲಾಯಕ ಆಯ್ದು ಬಾಲಣ್ಣ.
  ಶ್ರೀಶಣ್ಣನ ಧ್ವನಿ ಒಳ್ಳೆ ಗಂಭೀರವಾಗಿ ತೂಕವಾಗಿ ಹೊರಹೊಮ್ಮಿದ್ದು. ಇಬ್ರಿಂಗೂ ವಿಶೇಷ ಅಭಿನಂದನೆಗೊ.

 2. ಬಾಲಣ್ಣ (ಬಾಲಮಧುರಕಾನನ) says:

  ಶ್ರೀಶಣ್ನ ,ಧ್ವನಿ ಕೊಟ್ಟದು ಲಾಯಕ ಆಯಿದು ಧನ್ಯವಾದಂಗೊ .

 3. ರಘು ಮುಳಿಯ says:

  ಕನ್ನಡ ಸಾಹಿತ್ಯ ಪ್ರೇಮಿಗೊಕ್ಕೆ ಠಾಗೋರರ ಸತ್ವಯುತ ಬರಹ೦ಗಳ ಪರಿಚಯ ಮಾಡಿದ ಬಾಲಣ್ಣ೦ಗೆ ನಮನ೦ಗೊ.ಆನು ಎಲ್ಲಾ ಕವನ೦ಗಳ ಓದಿ ಕೊಶಿ ಪಟ್ಟಿದೆ.ಕನ್ನಡದ ಹಾಡುಗಾರರಿ೦ಗೆ ಸಿಕ್ಕದ್ರೆ ಬೇಡ,ನಮ್ಮ ಶ್ರೀಶಣ್ಣನ ಸ್ವರ ಮಧುರತೆಯ ಹೆಚ್ಚು ಮಾಡಿತ್ತು.
  ಅಭಿನ೦ದನೆ ,ಇಬ್ರಿ೦ಗೂ.

  • ಬಾಲಣ್ಣ (ಬಾಲಮಧುರಕಾನನ) says:

   ಮುಳಿಯದಣ್ಣ ,ನಿಂಗಳ ಒಪ್ಪ ಓದಿ ತುಂಬಾ ಕೊಶಿ ಆತು, ಸಹೃದಯರ ಒಪ್ಪ ತುಂಬಾ ಮಹತ್ವದ್ದಲ್ಲದೋ?
   ಧನ್ಯವಾದಂಗೊ.

  • ಬಾಲಣ್ಣ (ಬಾಲಮಧುರಕಾನನ) says:

   ಮುಳೀಯದಣ್ನ , ನಿಂಗಳ ಒಪ್ಪ ಓದಿ ತುಂಬಾ ಕೊಶಿ ಆತು ,ಸಹೃದಯರ ಅಭಿಪ್ರಾಯ ತುಂಬಾ ಮೌಲ್ಯ ಇಪ್ಪದು ಹೇಳಿ ಎನ್ನ ಅಭಿಪ್ರಾಯ .ಧನ್ಯವಾದಂಗೊ.

 4. ಬೊಳುಂಬು ಕೃಷ್ಣಭಾವ° says:

  ಶ್ರೀಶಣ್ಣ ಹಾಡಿದ್ದು ಭಾವಪೂರ್ಣವಾಗಿದ್ದು.

 5. ಬೊಳುಂಬು ಕೃಷ್ಣಭಾವ° says:
 6. ಬೊಳುಂಬು ಕೃಷ್ಣಭಾವ° says:

  ಧನ್ಯವಾದಂಗೊ ಬಾಲ ಮಾವ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *