ಕೇಚಣ್ಣನ ಶುದ್ದಿಗೊ

May 25, 2013 ರ 9:30 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೇಚಣ್ಣನ  ಶುದ್ದಿಗೊ  

 ಮತ್ತೆಂತ ಭಾವಯ್ಯ
ಎಲ್ಲಿದ್ದೆ ನೀನೀಗ
ಮನೆಲೆಲ್ಲ  ಸೌಖ್ಯವೇ ಹೇಳಿ ಕಾಣುತ್ತು  |
ಬರೆಕ್ಕು ನಿಂಗಳ ಮನಗೆ
ಹೇಳಿ ಗ್ರೇಶಿಂಡಿದ್ದೆ
ಮಾಣೀಗೆ ಮದುವೇಡ ಶುದ್ದಿ ಕೇಟತ್ತು | ೧ |

 ಆಚಕರೆ ಕೇಚಣ್ಣ
ಹೀಂಗೆ ಹೇಳಿಂಡಿಕ್ಕು
ಎದುರು ಸಿಕ್ಕಿರೆ ಮಾತು ಕೇಳಿ ಬೊಡಿಗು |
ಎಲ್ಲ ಊರಿನ ಶುದ್ದಿ
ಅವನ ಬಾಯಿಲಿ ಇಕ್ಕು
ಅಲ್ಲಿಂದ ಇಲ್ಲಿಂದ ಹೆರ್ಕಿ ಕೊಡುಗು |೨|

 ಮೀಸೆ ಮಾವನ ಮಗಳ
ಮದುವೆ ಕಳುದತ್ತನ್ನೆ
ಮೋಸ ಇಲ್ಲೆ ಮಿನಿಯ , ಗಟ್ಟಿ ಕುಳವಾರು |
ಜಾಲು ತುಂಬಾ ಅಡಕ್ಕೆ,
ಕರಿಮೆಣಸು ಇದ್ಡಾಡ
ಹೇಳಿ ಮುಗಿಯದ್ದಷ್ಟು ಕಾರುಬಾರು |೩|

 ಮೂಲೆಮನೆ ಅಪ್ಪಚ್ಚಿ
ಮನ್ನೆ ಕಾಂಬಲೆ ಸಿಕ್ಕಿ
ಶುದ್ದಿ  ಹೇಳಿದ್ದವದ ! ಗುಟ್ಟಿಲಿರಲಿ |
ಅವರ ನೆರೆಕರೆ ಕೂಸು
ಏವದರ ಒಟ್ಟಿಂಗೊ
ಹೋತಾಡ  ವಿಷಯ ನಮ್ಮೊಳವೆ  ಇರಲಿ | ೪|

 ಕುಞ್ಞಣ್ಣ ಶೆಟ್ಟಿಯಾ
ಮಗಳು ವಾಸಂತಿಯಾ
ಈಚಣ್ಣನಾ ಮಗಂಗೆ ತಪ್ಪದಾಡ |
ನಮ್ಮ ಜಾತಿಗೆ ದತ್ತು
ತೆಕ್ಕೊಂಡು ಬಪ್ಪದದ
ಧಾರೆ ಎರವದು ಕೂಡ ನಮ್ಮೋರಾಡ |೫|

 ಬಟ್ಟ  ಮಾವನ ಮಗಂಗೆ
ಮದುವೆ ಆಯಿದೆ ಇಲ್ಲೆ
ವರುಷ ಮೂವತ್ತೈದು ದಾಂಟಿತ್ತಡ |
ಕೂಸಿಪ್ಪ ಮನೆಯೋರು
ಬಟ್ಟಕ್ಕಳಾ ಮನಗೆ
ಕೂಸು ಕೊಡ್ತಿಲ್ಲೇಳಿ ಹೇಳ್ತವಾಡ |೬|

 ಮಾಳ್ಯಮನೆ ಶಂಭಜ್ಜ
ಅವರಮಗ  ಕಿಟ್ಟಂಗೆ
ಕೂಸು ನೋಡಿದವಾಡ  ಹಾಸನಂದ |
ಮಧು ಮಾಂಸ ತಿನ್ನದ್ದ
ಜಾತಿ ಆದರೆ ಸಾಕು
ಕಿಟ್ಟಣ್ಣ  ಹೋಗಿ ನೋಡಿಕ್ಕಿ ಬೈಂದ |೭|

 ಜೋಯಿಸರ ಮಗಳದಾ
ಒಪ್ಪಕ್ಕ  ಗೊಂತಿದ್ದ
ಬೀಯಿ  ಯ ಕಲ್ತಾತು ಕೆಲಸಲ್ಲಿದ್ದು |
ಕಾಲೇಜು ಕಲಿವಾಗ
‘ಬ್ಯಾರಿ ಚೆಕ್ಕ’ನ ಗುರ್ತ
ಮದುವೆ ಆಯಿದು ಹೇಳಿ ಶುದ್ದಿ ಇದ್ದು |೮|

 ಮೂಡಮನೆ ಮಾಪಣ್ಣ
ಅವನ ಹೆಂಡತಿ ಮೊನ್ನೆ
ಓಡಿ ಹೋಯಿದು ,ಬಸ್ಸು   ಡ್ರೈವರಾಡ |
ಎರಡು ಮಕ್ಕಳ  ಅಬ್ಬೆ
ಸೊಕ್ಕು ತಲಗಡರಿತ್ತೋ  ?
ಊರಿಲೆಲ್ಲೋರು ಮಾತಾಡ್ತವಾಡ |೯|

 ಅದ! ಲವ್ವು ಮೇರೇಜು
ವರುಷ ಕಳುದತ್ತೈದು
ಎರಡು ಮಕ್ಕೊ!ಇಬ್ರು ಕೆಲಸಲ್ಲಿದ್ದು |
ಈಗ   ಡೈವೋರ್ಸಾಡ !
ಕಾಲ ಎಲ್ಲಿಗೆ ಬಂತು
ಮುಂದಕ್ಕೆ ಎಂತೆಂತೊ ಕಾಂಬಲಿದ್ದು |೧೦|

 ಅಮ್ಮಕ್ಕತ್ತಿಗೆ ಮಗಳು
ಬೊಂಬೈಲಿಪ್ಪದಾಡ
ರಜೆ ಮಾಡಿ ಮೊನ್ನೆ ಊರಿಂಗೆ ಬೈಂದು  |
ಅತ್ತಗೂ ಸೊಸೆಗುದೇ
ಎಣ್ಣೆ ಸೀಗೆ  ಕಾಯಿ
ಇನ್ನು ಹೋವ್ತಿಲ್ಲೇಡ ಲಗ್ಗೇಜು ತೈಂದು |೧೧|

 ನಮ್ಮೋರು ಮಾಂತ್ರವೇ
ಅಲ್ಲಡೋ ಒಪ್ಪಣ್ಣ
ಪೇಪರಿಲಿ ಎಷ್ಟುದೆ  ಶುದ್ದಿ ಬೈಂದು |
ಟೀವಿ ಧಾರಾವಾಹಿ
ಈಗಾಣ ಸಿನೆಮಂದ
ತಲೆ ಕೆಡ್ತೊ  ಹೇಳಿ ಅನುಮಾನ ಇದ್ದು |೧೨|

 ಈಗಾಣ ಮಕ್ಕೋಗೆ
ಧರ್ಮ ದೇವರ ನೆಂಪೋ
ಮರದತ್ತೋ ಹೆರಿಯೋರ ಒಳ್ಳೆ ಮಾತು |
ಅಂದ್ರಾಣ ಕಾಲಲ್ಲು
ಹಿಂಗೆಲ್ಲ ಇದ್ದತ್ತೊ
ಕಾಲವೇ ಏನೆಲ್ಲಾ ನೋಡೆಕಾವ್ತೋ! |೧೩|

~~~**~~~

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹ ಹ ಹಾ…. ಬಾಲಣ್ಣ.., ಒಳ್ಳೆ ರೈಸಿದ್ದು. ಕೊಶಿ ಆತಿದಾ.

  [Reply]

  VA:F [1.9.22_1171]
  Rating: +1 (from 1 vote)
 2. ಲಕ್ಷ್ಮಿ ಜಿ.ಪ್ರಸಾದ

  ಪದ್ಯಂಗ ಲಾಯಿಕ ಇದ್ದು ತಮಾಷೆ ಆಗಿ ಕಾಣುತ್ತರುದೆ ಅದರ ಹಿಂದಣ ವಾಸ್ತವ ಮನಸ್ಸು ತಟ್ಟುತ್ತು

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ಬಾಲಣ್ಣ, ‘ ಕೇಚಣ್ಣನ ಶುದ್ದಿಗೊ’ ಭಾರೀ ಲಾಯ್ಕಾಯಿದು. ನಮ್ಮೆದುರು ಇಪ್ಪ ಸಮಾಜವ ಪ್ರತಿನಿಧಿಸುತ್ತಾ ಇಪ್ಪ ಕೇಚಣ್ಣ ಹೇಳುವ ಶುದ್ದಿಗೊ ಈಗ ಊರಿಲಿ ನಡೆತ್ತಾ ಇಪ್ಪದೇ. ಕಟು ವಾಸ್ತವವ ನವಿರಾದ ಹಾಸ್ಯಲ್ಲಿ ಹೇಳಿದ್ದು ಕವಿತ್ವದ ಗಟ್ಟಿತನವ ತೋರುಸುತ್ತು. ಯಾವ ಆಡಂಬರವೂ ಇಲ್ಲದ್ದೆ ಸರಳವಾಗಿ ಹೇಳೆಕ್ಕಾದ್ದರ ಹೇಳ್ತೀರನ್ನೆ- ಅದಕ್ಕೆ- ನಿಂಗೊಗೆ ಇಲ್ಲಿಂದಲೇ ಅಡ್ಡಬೀಳ್ತೆ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಹಾಸ್ಯ ಧಾಟಿಲಿ ಸತ್ಯದ ಕುಟುಕು! ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  “ಶ್ಯಾನುಭೋಗರ ಮಗಳು” ನೆನಪ್ಪಾತು ಬಾಲಣ್ಣ.ಕೇಚಣ್ಣ ಅಲ್ಲಿ೦ದ ಇಲ್ಲಿ೦ದ ಹೆರ್ಕಿ ಕೊಡುವ ಊರಿನ ಶುದ್ದಿಗಳಲ್ಲಿ ಎಷ್ಟೊ೦ದು ಕಟು ಸತ್ಯ೦ಗೊ ತು೦ಬಿದ್ದು ಹೇಳಿ ಕ೦ಡತ್ತು.
  ಈ ಸಾಲುಗಳ ಓದಿಯಪ್ಪಗ ನಮ್ಮ ಸಮಾಜ ಎಲ್ಲಿಯೋ ಒ೦ದು ತಪ್ಪು ಮಾಡ್ತಾ ಇದ್ದೋ ಹೇಳ್ತ ಭಾವನೆ ಬ೦ತು.
  “ನಮ್ಮ ಜಾತಿಗೆ ದತ್ತು
  ತೆಕ್ಕೊಂಡು ಬಪ್ಪದದ
  ಧಾರೆ ಎರವದು ಕೂಡ ನಮ್ಮೋರಾಡ”

  ಅಪ್ಪು , ಧಾರೆ ಎರವದರ ನಾವು ನೋಡುತ್ತು,ಆದರೆ ಸಭೆಲಿ ಕೂದು ಧಾರೆ ಎರವರದರ ನೋಡುವ ಆ ಕೂಸಿನ ಅಬ್ಬೆ ಅಪ್ಪನ ಮನಸ್ಸಿಲಿ ಎಷ್ಟು ಬೇನೆ ಒಳಿಗೋ?
  ಕಡೆಯಾಣ ಎರಡು ಚರಣ೦ಗಳಲ್ಲಿ ಮೂಡಿದ ಸ೦ಶಯ೦ಗೊ ನಿಜವೇ..

  [Reply]

  VA:F [1.9.22_1171]
  Rating: 0 (from 0 votes)
 6. ಕೆ.ನರಸಿಂಹ ಭಟ್ ಏತಡ್ಕ

  ವರ್ತಮಾನದ ವರ್ತಮಾನಂಗಳ ಕೇಚಣ್ಣನ ಬಾಯಿಂದ ಕೇಳಿ ಕೊಶಿಯಾತು ಬಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಕೇಚಣ್ಣನ ಶುದ್ದಿಗಳೂ ರೈಸಿದ್ದು, ಬಾಲಣ್ಣನ ಪದ್ಯಂಗಳೂ ರೈಸಿದ್ದು. ಕೇಚಣ್ಣನ ಶುದ್ದಿಗೊ ಇನ್ನೂ ಮುಂದುವರಿಯಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿದೀಪಿಕಾಹಳೆಮನೆ ಅಣ್ಣಪೆರ್ಲದಣ್ಣಸುವರ್ಣಿನೀ ಕೊಣಲೆವಾಣಿ ಚಿಕ್ಕಮ್ಮತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ಗೋಪಾಲಣ್ಣಪವನಜಮಾವಸುಭಗಡಾಗುಟ್ರಕ್ಕ°ಚೆನ್ನಬೆಟ್ಟಣ್ಣವಿಜಯತ್ತೆಮಂಗ್ಳೂರ ಮಾಣಿಅಜ್ಜಕಾನ ಭಾವಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣದೊಡ್ಡಮಾವ°ಉಡುಪುಮೂಲೆ ಅಪ್ಪಚ್ಚಿvreddhiಅನುಶ್ರೀ ಬಂಡಾಡಿದೊಡ್ಮನೆ ಭಾವಅನಿತಾ ನರೇಶ್, ಮಂಚಿಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ