ಮಾವಿನಹಣ್ಣು ಸಾಸಮೆ

April 29, 2017 ರ 4:15 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗ ಮಾವಿನ ಹಣ್ಣಿನ ಕಾಲ. ಕಾಡಿನ ಮಾವಿನ ಹಣ್ಣಿನ ಗೊಜ್ಜಿ, ಸಾಸಮೆ ಇದ್ದರೆ ಊಟಕ್ಕೆ ಮತ್ತೆಂತ ಬೇಡ.
ಶ್ರೀಮತಿ ಪ್ರಸನ್ನಾ ವಿ  ಚೆಕ್ಕೆಮನೆ ಇವು ಮಾವಿನ ಹಣ್ಣಿನ ಸಾಸಮೆ ಬಗ್ಗೆ ಪದ್ಯ ರಚಿಸಿ ಹಾಡಿದ್ದವು.
ಹೇಂಗಾಯಿದು ಹೇಳಿ
ಮಾವಿನಹಣ್ಣು ಸಾಸಮೆಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಸಾಸಮೆಗಳಲ್ಲೇ ರುಚಿಯು
ಹೆಚ್ಚು 
ಮಾವಿನಣ್ಣು ಸಾಸಮೆಗೆ

ಚೀಪೆ ಮಾವಿನಣ್ಣು ಬೇಕೇ
ಬೇಕು
ರುಚಿಯ ಸಾಸಮೆಗೆ

ಮಾವಿನಣ್ಣು ತೊಳದು ತೊಟ್ಟು
ತೆಗದು
ಚೋಲಿಯ ಕೆತ್ತೇಕು

ಗೊರಟಿನ ಬೇರೆ ಮಡುಗಿಕ್ಕಿ
ಚೋಲಿಯ
ನೀರಾಕಿ ಪುರುಂಚೆಕು

ಬಂದ ಎಸರಿನ ಗೊರಟಿನೊಟ್ಟಿಂಗೆ
ಹಾಕಿ 
ಮಡುಗೇಕು

ಒಂದಿಷ್ಟು ಉಪ್ಪು
ರಜಾ ಬೆಲ್ಲ
ಬೆರ್ಸಿ ಮಡುಗೆಕು

ಕಾಯಿಯ ಕೆರದು
ಗಡಗಡ ಕಡವಗ 
ಸಾಸಿಮೆ ಹಾಕೇಕು

ಬೇಕಾರೊಂದು
ಒಣಕ್ಕು ಮೆಣಸು
ಒಟ್ಟಿಂಗೆ ಸೇರ್ಸೆಕು

ಕಡದ ಅರಪ್ಪಿನ
ಗೊರಟಿಪ್ಪ ಪಾತ್ರಕ್ಕೆ
ಹಾಕಿ ಬೆರ್ಸೇಕು

ಆಹಾ….ಸಾಸಮೆ 
ರೆಡಿಯಾತನ್ನೇ
ಮಾವಿನಹಣ್ಣಿಂದು

ರುಚಿಯಾ ಸಾಸಮೆ
ಇಪ್ಪಗ ಎನಗಿಂದು 
ಹೆಚ್ಚಿಗೆ ಉಣ್ಣೇಕು

ಮಾವಿನಹಣ್ಣು ಸಾಸಮೆ
~~~***~~~

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಪ್ರಸನ್ನಾ ವಿ ಚೆಕ್ಕೆಮನೆ

  ಆನು ಬರದು ಹಾಡಿದ ಕವನವ ಒಪ್ಪಣ್ಣ ಬೈಲಿಂಗೆ ಹಾಕಿ ಪ್ರೋತ್ಸಾಹ ಕೊಟ್ಟ ಶರ್ಮಣ್ಣಂಗೆ ತುಂಬು ಹೃದಯದ ಧನ್ಯವಾದ….

  [Reply]

  VA:F [1.9.22_1171]
  Rating: 0 (from 0 votes)
 2. ಕುನಾರ

  ಸಾಸಮೆ ಮಾಡುವ ಕ್ರಮವ ಸರಿಯಾಗಿ ಇದ್ದು. ಮಾಡ್ಲೆ ಗೊಂತಿಲ್ಲದ್ದವಂಗೆ ಪದ್ಯ ಓದಿ ಮಾಡ್ಲಕ್ಕು

  [Reply]

  VA:F [1.9.22_1171]
  Rating: 0 (from 0 votes)
 3. ಪ್ರಸನ್ನಾ ವಿ ಚೆಕ್ಕೆಮನೆ

  ಕವನ ಮೆಚ್ಚುಗೆಯಾದ್ದು ಕೊಶಿಯಾತು.

  [Reply]

  VA:F [1.9.22_1171]
  Rating: 0 (from 0 votes)
 4. ಅನ್ನಪೂರ್ಣ

  ಲಾಯಿಕಾಯಿದು ಪದ್ಯ.ಸಾಸಮೆ ಉಂಡಷ್ಟೇ ಕೊಶಿ ಆತು.

  [Reply]

  VA:F [1.9.22_1171]
  Rating: 0 (from 0 votes)
 5. ಪ್ರಸನ್ನಾ ವಿ ಚೆಕ್ಕೆಮನೆ

  ಕೊಶಿಯಾತು ನಿನ್ನ ಮೆಚ್ಚುಗೆ ನೋಡಿ.

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°

  ವ್ವಾಹ್ ವ್ವಾಹ್… ಆಚಕರೆ ಪುಟ್ಟನೂ ಇದರ ಕೇಟಿಕ್ಕಿ ನಾಕು ಮಾಯಿನಣ್ಣು ಹೆರ್ಕ್ಯೊಂಡು ಬಂದು ಸಾಸಮೆ ಮಾಡ್ಳೆ ಹೆರಟಿಕ್ಕುಗೋದು. ಸಾಸಮೆ ಮಾಡಿದಟ್ಟೇ ಪಟ್ಟಾಯ್ದು ಸಾಸಮೆ ರಚನೆ ಗಾಯನ

  [Reply]

  VN:F [1.9.22_1171]
  Rating: 0 (from 0 votes)
 7. ಪ್ರಸನ್ನಾ ವಿ ಚೆಕ್ಕೆಮನೆ

  ಕೊಶಿಯಾತು ಭಾವ.ನಿಂಗೊಗೂ ಸಾಸಮೆ ಮೆಚ್ಚಿತ್ತನ್ನೇ.

  [Reply]

  VA:F [1.9.22_1171]
  Rating: 0 (from 0 votes)
 8. ಬೊಳುಂಬು ಗೋಪಾಲ

  ಪ್ರಸನ್ನಕ್ಕ ಬರದು ಹಾಡಿದ ಮಾವಿನಹಣ್ಣು ಸಾಸಮೆ ಹಾಡು ತುಂಬಾ ರುಚಿಯಾಗಿತ್ತು. ನಿನ್ನೆಯೇ ವಾಟ್ಸ್ ಅಪ್ಪಿಲ್ಲಿ ಕೇಳಿದೆ. ಬೈಲಿಲ್ಲಿಯು ಕೇಳಿ ಕೊಶಿಯಾತು. ಹೀಂಗಿಪ್ಪದು ಬೈಲಿಂಗೆ ಬತ್ತಾ ಇರಳಿ.

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಪ್ರಯತ್ನ ಮಾಡ್ತೆ ಅಣ್ಣಾ..ಕೆಲವು ಸರ್ತಿ ಕೆಲಸದ ತೆರಕ್ಕು.ನಿಂಗಳ ಒಪ್ಪ ನೋಡಿ ಕೊಶಿಯಾತು.

  [Reply]

  VA:F [1.9.22_1171]
  Rating: 0 (from 0 votes)
 9. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಓ …..ಎಂತಾ ರುಚಿ ಮಾರಾರ್ರೆ…. ವಿಧ ವಿಧ ಅಡುಗೆಗಳ ಕವನ ರೂಪಲ್ಲೆ ಬರದು ಹೊಸ ಸಾಹಿತ್ಯ ಪ್ರಕಾರಕ್ಕೆ ಶ್ರೀಕಾರ ಹಾಕಲಕ್ಕು ಪ್ರಸನ್ನ.

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಪ್ರಯತ್ನ ಮಾಡ್ತೆ ಅತ್ತೇ….ಪ್ರೊತ್ಸಾಹ ಕ್ಕೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 10. ಗೋಪಾಲಣ್ಣ
  S.K.Gopalakrishna Bhat

  ಸಾಸಮೆಯ ಪದ್ಯ ಮೋಸ ಇಲ್ಲೇ..ಸಾಸಮೆ ಪದ್ಯಕ್ಕೂ ಆವುತ್ತು,ಊಟಕ್ಕೂ ಆವುತ್ತು..! ಹಾಡಲೂ ಆವುತ್ತು..ಪ್ರಸನ್ನಕ್ಕಂಗೆ ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಶ್ರೀಅಕ್ಕ°ಒಪ್ಪಕ್ಕಪವನಜಮಾವದೊಡ್ಡಭಾವಬಂಡಾಡಿ ಅಜ್ಜಿಸರ್ಪಮಲೆ ಮಾವ°ಕೊಳಚ್ಚಿಪ್ಪು ಬಾವಚೂರಿಬೈಲು ದೀಪಕ್ಕದೊಡ್ಡಮಾವ°ಶುದ್ದಿಕ್ಕಾರ°ಅಡ್ಕತ್ತಿಮಾರುಮಾವ°ಕಜೆವಸಂತ°ಬೊಳುಂಬು ಮಾವ°ಜಯಗೌರಿ ಅಕ್ಕ°ದೀಪಿಕಾಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕಅನು ಉಡುಪುಮೂಲೆಮಂಗ್ಳೂರ ಮಾಣಿಹಳೆಮನೆ ಅಣ್ಣಮುಳಿಯ ಭಾವಗಣೇಶ ಮಾವ°ಶಾ...ರೀಶೇಡಿಗುಮ್ಮೆ ಪುಳ್ಳಿಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ