ಪುರ್ಸೊತ್ತಿಲ್ಲೆ

ಪುರ್ಸೊತ್ತಿಲ್ಲೆಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಪುರ್ಸೊತ್ತಿಲ್ಲೆ ಪುಟ್ಟಂಗೆ ಪುರ್ಸೊತ್ತಿಲ್ಲೆ..
ಏವ ಕೆಲಸ ಮಾಡ್ಲೂ ಪುರ್ಸೊತ್ತಿಲ್ಲೆ..

ಹಿತ್ತಲ ಮಾವಿನಮರಲ್ಲಿ ಮೆಡಿ ತುಂಬಾ ಬಿಟ್ಟಿದಾಡ..
ಅದಕ್ಕೊಂದು ಕಲ್ಲಿಡ್ಕುಲೂ ಪುರ್ಸೊತ್ತಿಲ್ಲೆ..

ನೆಲ್ಲಿಕಾಯಿ ತಿಂದು ತಣ್ಣೀರು ಕುಡುದಿಕ್ಕಿ..
ನೀರು ಚೀಪೆಯಿದ್ದು ಹೇಳಲು ಪುರ್ಸೊತ್ತಿಲ್ಲೆ..

ಜಾಲಿಲ್ಲಿ ಹಾರುವ ಅಜ್ಜನ ಗಡ್ಡವ
ಹಿಡಿವಲೆ ಹೋಪಲೂ ಪುರ್ಸೊತ್ತಿಲ್ಲೆ..

ತೋಡ ನೀರಿಂಗೊಂದು ಕಾಗದದ ದೋಣಿಮಾಡಿ ಹಾಕಿ
ತೇಲಿ ಹೋಪದರ ನೋಡ್ಲೂ ಪುರ್ಸೊತ್ತಿಲ್ಲೆ..

ಅಜ್ಜಿ ಹತ್ರೆ ಕೂದೊಂಡು ಕಾಕೆ ಗುಬ್ಬಿ ಮೀವಲೋದ
ಕಥೆ ಕೇಳಿಂಡು ಕೂಬಲೂ ಪುರ್ಸೊತ್ತಿಲ್ಲೆ..

ಅಜ್ಜ ಕಟ್ಟಿದ ಉಯ್ಯಾಲೆ ಲಿ ಕೂದು ಜೋಜೋ ಮಾಡ್ಯೊಂಡು
ಅಜ್ಜ ಎಲೆ ಅಡಕ್ಕೆ ತಿನ್ಬದು ನೋಡ್ಲೂ ಪುರ್ಸೊತ್ತಿಲ್ಲೆ..

ಹಟ್ಟಿಲಿಪ್ಪ ಪುಟ್ಟುಂಬೆಯ ಕೊಂಡಾಟ ಮಾಡಿ
ಕುಞ್ಞುಂಬೆ ಹೇಳ್ಲೂ ಪುರ್ಸೊತ್ತಿಲ್ಲೆ..

ಆಕಾಶಲ್ಲಿ ಹೊಳವ ಚಂದ್ರಚಾಮಿಯ ನೋಡಿ
ನಕ್ಷತ್ರ ಎಣ್ಸಲೂ ಪುರ್ಸೊತ್ತಿಲ್ಲೆ..

ಹೊತ್ತೋಪಗ ಮಿಂದು ಬೆನಕ ಬೆನಕ ಹೇಳಿ
ಚಾಮಿ ಮಾಡ್ಲೆ ಸಾನು ಪುರ್ಸೊತ್ತಿಲ್ಲೆ..

ಬರವಲೂ ಪುರ್ಸೊತ್ತಿಲ್ಲೆ..
ಓದಲೂ ಪುರ್ಸೊತ್ತಿಲ್ಲೆ..

ಏವ ಕೆಲಸ ಮಾಡ್ಲೂ ಪುರ್ಸೊತ್ತಿಲ್ಲೆ ಪುಟ್ಟಂಗೆ ..

ಶಾಲೆ ಬಿಟ್ಟು ಬಂದು ಮೊಬೈಲ್ ಹಿಡುದು ಕೂದರೆ

ಉಂಬಲೂ ತಿಂಬಲೂ..ಪಾಪ ಪುರ್ಸೊತ್ತಿಲ್ಲೆ..

— ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

~~~***~~~

ಶರ್ಮಪ್ಪಚ್ಚಿ

   

You may also like...

7 Responses

 1. ಯಮ್.ಕೆ. says:

  ವರಗಲು ಪುರುಸೊತ್ತು ಇಲ್ಲೇ!

 2. ಎಲಾ ಪ್ರಸನ್ನ ಎಲ್ಲೋರುದೆ ಪುರುಸೊತ್ತಿಲ್ಲದ್ದ ಪುರುಷೋತ್ತಮಂಗಳೆ ಆಯಿದವನ್ನೆ. ನಿನ ಪುರುಸೊತ್ತಿಲ್ಲದ್ದಕ್ಕೆ ಶರ್ಮಭಾವ; ಪುರುಸೊತ್ತುಮಾಡಿ ಇದರ ಬಯಲಿಂಗೆ ಹಾಕಿದವನ್ನೆ!. ಬರದವಕ್ಕೂ ಹಾಕಿದವಕ್ಕೂ ಪುರುಸೊತ್ತಿಲ್ಲಿ ಧನ್ಯವಾದಂಗೊ!

 3. S.K.Gopalakrishna Bhat says:

  ಲಾಯ್ಕ ಆಯಿದು

 4. ಬೊಳುಂಬು ಗೋಪಾಲ says:

  ಪುರುಸೊತ್ತಿಲ್ಲದ್ದ ಪದ್ಯಲ್ಲಿ ಹಳೆಯ ನೆನಪುಗಳ ಎಲ್ಲ ಒಕ್ಕಿ ತೆಗದ್ದದು ಲಾಯಕಾಯಿದು. ಚೆಂದ ಆಯಿದು ಪದ್ಯ.

 5. Venugopal Kambaru says:

  ಲಾಯಕ ಆಯಿದು

 6. ಅಪ್ಪು ಹೇದು…. ಈ ಉದ್ದುತ್ತರ್ಲಿ ಮೋರೆಪುಟ , ಎಂತಬ್ಬೊ ಬಂದಮತ್ತೆ ಏವುದಕ್ಕೂ ಆರಿಂಗೂ ಪುರುಸೊತ್ತಿಲ್ಲದ್ದೆ ಆಗ್ಯೋತು. ಬೇಕಾದ್ಸೋ ಬೇಡದ್ದೋ ಉದ್ದಿ ನೋಡದ್ದೆ ಸಮಾಧಾನ ಅಪ್ಪಲೆ ಇಲ್ಲೆ, ಉದ್ದಿ ಮುಗಿವಲೂ ಇಲ್ಲೆ.

  ಪುರುಸೊತ್ತಿಲ್ಲಿ ಪುರುಸೊತ್ತಿಲ್ಲದ್ದರ ಬರದ್ಸು ಲಾಯಕ ಆಯ್ದು

 7. ಅನ್ನಪೂರ್ಣ says:

  “ಪುರುಸೊತ್ತಿಲ್ಲೆ ” ಕವನವ ನೋಡ್ಲೆ ಪುರುಸೊತ್ತಪ್ಪಗ ಇಷ್ಟು ದಿನ ಆತು ನೋಡು.ಪುರುಸೊತ್ತು ಮಾಡಿ ಓದಿಯಪ್ಪಗ ತುಂಬಾ ಖುಷಿ ಆತು.ಲಾಯಿಕ ಆಯಿದು ಪದ್ಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *