ಯಾನದ ದಾರಿ ಸರಿಯಕ್ಕೊ?

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ),ಬೆ೦ಗಳೂರು ,ಇವು ಇತ್ತೀಚೆಗೆ ನೆಡೆಶಿದ ಹವಿಗವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡದ ಈ ಕವಿತೆಯ, ಎನಗೆ ಬರವಣಿಗೆಗೆ ಸದಾ ಸ್ಪೂರ್ತಿ ಕೊಟ್ಟು ಪ್ರೋತ್ಸಾಹಿಸುವ ಬೈಲಿ೦ಗೆ,ಬೈಲಿನ ಎಲ್ಲಾ  ನೆ೦ಟ್ರಿ೦ಗೆ ಅರ್ಪಿಸುತ್ತೆ.

(ಕಗ್ಗ ಕ೦ಠಪಾಠಲ್ಲಿ  ಬಹುಮಾನ ಪಡದ ದೀಪಿಕಾ ಮತ್ತೆ ಚರ್ಚಾಸ್ಪರ್ಧೆಲಿ ಬಹುಮಾನ ಪಡದ ಚೈತು,ಇವರ ಒಟ್ಟಿ೦ಗೆ ವೇದಿಕೆಗೆ ಹತ್ತುವ ಅವಕಾಶ  ಎನಗೂ ಸಿಕ್ಕಿತ್ತು ಹೇಳುವ ಸ೦ತೋಷವನ್ನೂ ಹ೦ಚುತ್ತೆ.)

**********************************************************

ಭವ್ಯ ದೀಪಕರಾಗಿ ಬಾಳಿದ
ಹವ್ಯಕರ ನಡೆನುಡಿಲಿ ಪೇಟೆಯ
ನವ್ಯತೆಯ ಕಸ್ತಲೆಯು ಮುಸ್ಕೊದು ಕ೦ಡಿರಾ ನಿ೦ಗೊ?|
ದಿವ್ಯ ತೇಜದ ಆಸರೆಲಿ ಈ
ಅವ್ಯವಸ್ಥೆಯು ಮಸ್ಕಿ ನಾವ್ ಭವಿ
ತವ್ಯ ಉಜ್ವಲವಾಗಿ ಹೊಳೆವಾ ಗಳಿಗೆಗಳ ಕಾ೦ಗೊ ?||

ಥಳುಕು ಬಳುಕಿನ ನೆಡುಕೆ ಬಾಯಿಯ
ಹುಳುಕು ಹಲ್ಲುಗೊ ಕಾ೦ಬ ಹಾ೦ಗೆಯೆ
ಕೊಳಕು ಕಾಣದ್ದಿಕ್ಕೊ ಮನಸಿನ ದೀಪ ನ೦ದ್ಸಿದರೆ|
ಅಳುಕು ಇಲ್ಲದ್ದಿ೦ದು ಕೆಸರಿಲಿ
ಜಳಕ ಮಾಡೊಗ ಬಿಟ್ಟು ನಾಚಿಕೆ
ಹೊಳಗೆ ಹಾರಲಿ ಹೇಳಿ ಜಾನ್ಸಿರು ಮನಸು ಕೇಳುತ್ತೊ?||

ಹಿಪ್ಪಿಗಳ ತಲೆಕುಚ್ಚಿ ಕೂಸುಗೊ
ಕುಪ್ಪಿ ಬಗ್ಗುಸಿ ಕುಡಿವ ಮಾಣ್ಯ೦
ಗಪ್ಪಿ ಕೂಯಿದವಿ೦ದು ಪಾಪದ ಕೂಪದೊಳು ಮು೦ಗಿ|
ಚೆಪ್ಪುಡಿಯತನ ತು೦ಬಿ ಹರುದರೆ
ಒಪ್ಪುಗೋ ಕಾಣದ್ದ ದೇವರು
ಬೆಪ್ಪುತಕ್ಕಡಿಯಾಗಿ ಬದುಕುವ ಇ೦ತ ಸ೦ಸ್ಕೃತಿಯ||

ಆಚಮನ ಮಾಡದ್ದೆ ಪೂಜೆಯ
ಆಚರಣೆ ಮರದಾತು ಬುದ್ಧಿಗೆ
ಗೋಚರವು ಇಲ್ಲದ್ದೆ ಬಿಟ್ಟೆಯ° ಸ೦ಪ್ರದಾಯಗಳ|
ಸೂಚನೆಯ ಕೊಡಿ ನಿ೦ಗೊ ಹಿರಿಯರು
ನಾಚಿಕೆಯ ವಿಷಯವಿದು ಸರ್ವರು
ಯೋಚನೆಯ ಮಾಡದ್ದರಿನ್ನಿದು ಒಡದ ಹಾಲಕ್ಕು

ಮಾನವ೦ತಿಕೆ ಬಿಟ್ಟು ಕಾಡಿನ
ಆನೆಗಳ ತರ ಅಲೆಯುವಗ ಅನು
ಮಾನವಾವುತ್ತಿ೦ದು ತಡವಲೆ ಅ೦ಕುಶವು ಎಲ್ಲಿ?|
ಜ್ಞಾನಿಯಾಸರೆ ಸಿಕ್ಕಿ ಬಾಳಿನ
ಬಾನಿನುದ್ದಗಲಕ್ಕೆ ಕಸ್ತಲೆ
ದಾನವತ್ವವು ನಶಿಸಿ ಯಾನದ ದಾರಿ ಸರಿಯಕ್ಕೊ?||

ಮುಜುಡುತನ ಬಿಟ್ಟೆದ್ದು ಬದಲಿ೦
ಗುಜುರುವಿನ ತರ ಸಾಗಿ ಜೀವನ
ಮಜಲು ತು೦ಬಲಿ ಸಾರ ಸತ್ವದ ಶುದ್ಧ ಸುಧೆ ಹರುದು|
ವಿಜಯ ಸಿಕ್ಕಲಿ ಶುದ್ಧ ಮನಸಿ೦
ಗಜನ ರಾಣಿಯ ಕೃಪೆ ಇರಳಿ ಸಿರಿ
ಗಜಮುಖನ ರಕ್ಷಣೆಯು ಹವ್ಯಕರಿ೦ಗೆ ಇರಳಿ ಸದಾ||

**********************************************************

ಮುಳಿಯ ಭಾವ

   

You may also like...

14 Responses

 1. ಶರ್ಮಪ್ಪಚ್ಚಿ says:

  ಬಹುಮಾನ ಬಂದದಕ್ಕೆ ಅಭಿನಂದನೆಗೊ. ದೀಪಿಕಾ ಮತ್ತೆ ಚೈತು ಇವಕ್ಕೂ ಅಭಿನಂದನೆಗೊ.
  ಒಳ್ಳೆ ಆಶಯಲ್ಲಿ ಅಂತ್ಯ ಕಂಡ ಭಾಮಿನಿ.

 2. ವಿನಯಾ says:

  ತು೦ಬಾ ಲಾಯಿಕಾಯಿದು…….. { ಆಚಮನ ಮಾಡದ್ದೆ ಪೂಜೆಯ ……………. ……… ಯೋಚನೆಯ ಮಾಡದ್ದರಿನ್ನಿದು ಒಡದ ಹಾಲಕ್ಕು} ತು೦ಬಾ ಇಷ್ಟ ಆತು..

 3. ರಘು ಭಾವ,
  ಯಾವತ್ರಾಣ ಹಾಂಗೆ ಚೆಂದದ, ಮನಸ್ಸಿಂಗೆ ತಟ್ಟುವ ಭಾಮಿನಿ!
  ಅಭಿನಂದನೆಗೋ ‘ಪ್ರತಿಬಿಂಬ’ ಸ್ಪರ್ಧೆಲಿ ಬಹುಮಾನ ಪಡದ್ದಕ್ಕೆ!

  ಹವ್ಯಕರ ಬಗ್ಗೆ, ಹಿಂದೆ ಇದ್ದ ವೈಭವದ ಬಗ್ಗೆ, ಈಗಾಣ ನಮ್ಮಸಮಾಜದ ಗತಿಯ ಬಗ್ಗೆ, ಮುಂದಾಣ ಆಶಯವನ್ನೂ ಕೂಡಾ ವ್ಯಕ್ತ ಪಡಿಸಿ ಬರದ್ದದು ತುಂಬಾ ಲಾಯ್ಕಾಯಿದು. ಇಷ್ಟು ಚೆಂದದ ನಿಂಗಳ ಕವನಕ್ಕೆ ಬೈಲಿನ ಲೆಕ್ಕಲ್ಲಿಯೂ ಕೂಡಾ ತುಂಬಾ ತುಂಬಾ ತುಂಬಾ ಒಪ್ಪಂಗೋ….

  ಭಾವ, ಮನಸ್ಸಿನ ಭಾವನೆಯ ಒಂದು ತಾಳ, ಮಾತ್ರೆಯ ಗತಿಲಿ ಬಂಧಿಸಿ ಬರವ ಕಲೆ ನಿಂಗಳಲ್ಲಿ ಇದ್ದು. ಎಂತ ಒಂದು ವಿಷಯ ಸಿಕ್ಕಿ ಅಪ್ಪಗ ನಿಂಗಳ ಅಂಬೇರ್ಪಿನ ಎಡಕ್ಕಿಲಿಯೂ ಕೂಡಾ ಜೀವ ಕೊಡುವ ನಿಂಗಳ ಈ ಪ್ರತಿಭೆಗೆ ಗುರುದೇವರ ಅನುಗ್ರಹ ಸದಾ ಇರಲಿ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *