ಯೇಚನೆ

ಅಪ್ಪ ಬಂದದು ನೋಡಿ ಮಗಳಿಂಗೆ ಭಾರೀ ಸಂತೊಷ ಆತದಾ.ಮದುವೆ ಆದ ಮೇಲೆ ಸುರೂ ಬಂದದು.ಆ ಕಾಲಲ್ಲಿ ನೆಡದೇ ಬರೆಕದಾ.ಕೈಕ್ಕಾಲು ತೊಳದು ಆಸರಿಂಗೆ ಕೊಟ್ಟು ಕೂರ್ಸಿತ್ತು.ಸಣ್ಣ ಪ್ರಾಯಲ್ಲಿ ಮದುವೆ ಮಾಡಿ ಕೊಟ್ಟದು.ಮಗಳಿಂಗೆ ಅನುಕೂಲಸ್ತ ಮಾಣಿ ಸಿಕ್ಕಿದ್ದ°.ಒಂದಾರಿ ನೋಡಿ ಹೋಪಲೆ ಹೇಳಿ ಅಪ್ಪ° ಬಂದದು.ಅವ° ಒಬ್ಬ ಬಡ ಬ್ರಾಹ್ಮಣ,ಎಲ್ಲಾ ಕಥೆಗಳಲ್ಲಿ ಬಂದ ಹಾಂಗೆ(ಶ್ರೀಮಂತ ಬ್ರಾಹ್ಮಣ ಕಥೆಗಳಲ್ಲಿಯೂ ಬಪ್ಪದು ಕಂಡಿದಿಲ್ಲೆ).ಒಳಂದ ಒಂದು ಆಸೆಯೂ ಇತ್ತು ಅವಂಗೆ,ಹೊಟ್ಟೆ ತುಂಬ ಉಂಡಿಕ್ಕಲಕ್ಕು ಹೇದು.ಸರಿ,ಅಳಿಯನೂ ಬಂದ°,ಅಪ್ಪಂಗೆ ಇಷ್ಟದ ಅಡಿಗೆ ಮಾಡಲೆ ಮಗಳು ಒಳ ಹೋತು,ಮಾವನೂ ಅಳಿಯನೂ ಮಾತಾಡಿಯೊಂಡು ಕೂದವು.
ಮಧ್ಯಹ್ನಪ್ಪಾಗ ಉಂಬಲೆ ದಿನಿಗೊಳಿತ್ತು ಮಗಳು.ಅಡಿಗೆಯ ಪರಿಮ್ಮಳ ಏನೂ ಬತ್ತಿಲ್ಲೆ.ಅಪ್ಪ° ಅಳಿಯನೊಟ್ಟಿಂಗೆ ಒಳ ಹೋದ.ಇಬ್ಬ್ರೂ ಬಾಳೆ ಬುಡಲ್ಲಿ ಕೂದವು.ಅಳಿಯ ಕೇಳಿದ,ಊಟಕ್ಕೆ ಅಪ್ಪಂಗೆ ಪ್ರೀತಿದು ಎಂತ ಮಾಡಿದ್ದೆ ,ಹೇಳಿ.ನೋಡಿ ಈಗ ಹೇಳಿಕ್ಕಿ ಮಗಳು ತಂದು ಬಳುಸಿದ್ದು ರಾಗಿ ಅಂಬಲಿ.ಎನ್ನ ಅಪ್ಪಂಗೆ ರಾಗಿ ಅಂಬಲಿ ಹೇಳಿರೆ ಭಾರೀ ಪ್ರೀತಿ,ಅಪ್ಪನ ಮನೆಲಿ ಯೇವಾಗಾಳೂ ಊಟಕ್ಕೆ ಅದೇ ಆಯೆಕ್ಕು ಅವಂಗೆ ಹೇಳಿ ಹೇಳಿತ್ತು.ಅಪ್ಪನ ಕಣ್ಣಿಲಿ ನೀರು ಬಂದದರ ಕಷ್ಟಲ್ಲಿ ತಡಕ್ಕೊಂಡು ಅಂಬಲಿ ಕುಡುದಿಕ್ಕಿ ಎದ್ದ°.
ಎಂತ ಆದ್ದದು ಕೇಳಿರೆ ಎಲ್ಲೊರೂ ಮಾಡುವ ಹಾಂಗೆ ಆ ಕಾಲ ಕ್ರಮಲ್ಲಿ ಸಣ್ಣ ಪ್ರಾಯಲ್ಲಿ ಮದುವೆ ಮಾಡಿದ್ದ°.ಮಗಳಿಂಗೆ ಬುದ್ಧಿ ಬರೆಕಾರೆ ಮದಲೇ.ಅಪ್ಪ° ಹೇಂಗೂ ಬಡವ°.ಮನೆಲಿ ಊಟಕ್ಕೆ ತತ್ವಾರ.ಹಾಂಗಾಗಿ ಯೇವಾಗಳೂ ರಾಗಿ ಅಂಬಲಿ ಉಂಡೇ ಹೊಟ್ಟೆ ತುಂಬುಸುದು.ಮಗಳಿಂಗೆಂತ ಗೊಂತು ಅಪ್ಪ° ಪೋಕಿಲ್ಲದ್ದೆ ತಿಂದೊಡ್ಡಿದ್ದದು ವಿನಹ ಪ್ರೀತಿಲಿ ಅಲ್ಲ ಹೇಳಿ.
ಎನ್ನ ತಲೆಲಿ ಬರದ್ದದಿಷ್ಟೇ ಹೇಳಿಯೊಂಡು ಅಪ್ಪ° ಮನಗೆ ಬಂದ°.
ಈಗಾಣ ಸೀನು ನೋಡಿ-ಎಂಗಳ ರಾಮಣ್ಣಂಗೆ ಎರಡು ಜೆನ ಮಕ್ಕೊ.ದೊಡ್ಡವ°.ಗೋಪ°.ಸಣ್ಣವ° ಪುಟ್ಟ°.ಇಡೀ ಹೆಸರು ನವಗೆ ಗೊಂತಿಲ್ಲೆ.ರಾಮಣ್ಣನ ಮಕ್ಕೊ ಹೇಳಿ ಮಾಂತ್ರ ಗೊಂತು.ಅವಕ್ಕೆ ಸಣ್ಣಾಗಿಪ್ಪಗಳೇ ನಮ್ಮ ಹತ್ತರೇ ಮದ್ದು.ಒಳ್ಳೆ ಡಾಕ್ಟ್ರು ಹೇಳಿಯಲ್ಲ,ಕಮ್ಮಿಲಿ ಆವುತ್ತು,ಪೈಸ ಕೊಡದ್ರೂ ಮಾತಾಡದ್ದವಾ° ಹೇಳಿ ಮಾಂತ್ರ.ಮೊನ್ನೆ ಗೋಪ ಬಂದಿತ್ತಿದ್ದ°.ಅವ° ಬೆಂಗ್ಳೂರಿಲ್ಲಿ ಏವದೋ ಕೋಲೇಜಿಲ್ಲಿ ಮೂರ್ನೇ ವರ್ಷದ ಬೀ ಇ ಮಾಡ್ತಾ ಇದ್ದ°.ಅವನ ಮಟ್ಟಿಂಗೆ ಪಿಯುಸಿಲಿ ಒಳ್ಳೆ ಮಾರ್ಕು ತೆಗದ್ದ ಹೇಳಿ ಬೇಂಕಿಲ್ಲಿ ಸಾಲ ಮಾಡಿ ರಾಮಣ್ಣ ಕಲಿಶುದು.ಆನುದೇ ಆರೂ ಇಲ್ಲದ್ದ ಕಾರಣ ಸುಮ್ಮನೇ ಕೂದೊಂಡಿತ್ತಿದ್ದ ಕಾರಣ ಮಾತಾಡಲೆ ಸುರು ಮಾಡಿದೆಯೋ°.ನವಗೂ ಮಕ್ಕಳ ಹತ್ರೆ ಪಟ್ಟಾಂಗ ಹೊಡವಲೆ ಕೊಶಿಯೇ.
ಅಷ್ಟಪ್ಪಾಗ ಅವನ ಕಿಸೆಂದ ಶಬ್ದ ಆತಾದಾ.ತಿರುಗಾಟದ ಫೋನು!ಆನುದೇ ಮಾತಾಡದ್ದೆ ನೋಡಿದೆ.ನಾವು ವಸ್ತ್ರ ಒಗವಲೆ ರಿನ್ನೋ ಮತ್ತೊಂದೋ ಸಾಬೂನು ನೋಡ್ತಲ್ಲದೊ,ಅಷ್ಟು ದೊಡ್ಡ ಫೋನು.ಅದರಲ್ಲಿ ನೆಟ್ಟೋ ಬೆಳ್ಟೊ ಮತ್ತೊಂದೋ ಎಲ್ಲ ಇದ್ದಾಡ.ಎನಗೂ ತೋರ್ಸಿದ°.
ಅವನ ತಮ್ಮ ಪಿಯುಸಿಲಿ ೫೮% ಮಾರ್ಕು ತೆಗದ್ದ°.ಇಂಜಿನಿಯರಲ್ಲದ್ದೆ ಆನು ಬೇರೆಂತದಕ್ಕೂ ಹೋಗೆ ಹೇಳಿ ಕೂಯಿದ°,ಅವಂಗೆ ನಿಂಗೊ ಹೇಳಿ ಮಾವ°.ಪಿಯುಸಿಲಿ ಅಷ್ಟು ಕಮ್ಮಿ ಮಾರ್ಕು ತೆಗದು ಸೀಟು ಸಿಕ್ಕುದು ಬಂಙ,ಪ್ರೈವಟ್ ಕೋಲೆಜಿಲ್ಲಿ ಪೈಸ ಕೊಡ್ಳೆ ಅಪ್ಪಂಗೆ ಎಡಿಯ.ರಜಾ ಬುದ್ಧಿ ಹೇಳಿ ಹೇಳಿದ°.
ಗೋಪ° ಫೋನಿಂಗೆ ಕರ್ಚಿ ಮಾಡುವ ಪೈಸ ನೋಡೀರೆ ಅವಂಗೇ ಬುದ್ಧಿ ಇಲ್ಲೆ ಇನ್ನು ಪುಟ್ಟಂಗೆ ಬುದ್ಧಿ ಹೇಳ್ಲೆ ಆನು ಬೇಕು.ಎನಗೆ ದಾಕ್ಶಿಣ್ಯ ರಜಾ ಕಮ್ಮಿ.ಆನು ಕೇಳಿದೆ,ಅಪ್ಪೊ ಮಾಣಿ ನೀನು ಕರ್ಚು ಮಾಡುದು ನೋಡುವಾಗ ಅಪ್ಪಂಗೆ ಕಷ್ಟ ಅಕ್ಕಾ ಹೇಳಿ ಯೋಚನೆ ಮಾಡಿದ ಹಾಂಗೆ ಕಂಡತ್ತಿಲ್ಲೆ,ಈಗ ತಮ್ಮಂಗೆ ಆನೆಂತಕೆ ಹೇಳಿ ಕೆಟ್ಟವ° ಅಪ್ಪದು,ನೀನು ಫೋನು ನೆಟ್ಟು ಎಲ್ಲಾ ತೆಕ್ಕೊಂಬಾಗ ಅಪ್ಪಂಗೆ ಕಶ್ಟ ಅಕ್ಕು ಹೇಳಿ ಕಂಡಿದಿಲ್ಲೆಯೋ,ನಿನ್ನ ಪೇಂಟು,ಬೂಟ್ಸು ತೆಗದು ಕೊಡ್ಳೆ ಅಪ್ಪಂಗೆ ಎಡಿಗೋ ಹೇಳಿ.
ಎನಗೆ ಗೊಂತೇ ಇತ್ತಿಲ್ಲೆ ಮಾವ°,ಮಕ್ಕೊಗೆ ಬಂಙ ಅಪ್ಪಲಾಗ ಹೇಳಿ ಅಪ್ಪ° ಸಾಲ ಮಾಡಿ ಎಲ್ಲಾ ಮಾಡಿದ್ದು,ಈಗ ತಮ್ಮಂಗೆ ಅದೆಂತದೂ ಅರ್ಥ ಆವುತ್ತಾ ಇಲ್ಲೆ ಎಂತ ಮಾಡುದು ಹೇಳಿ ಗೊಂತಾವುತ್ತಿಲ್ಲೆ,ಅಪ್ಪ° ಏನಾರೂ ಮಾಡುವೋ° ಹೇಳ್ತ°,ಏನಾರೂ ಎಂತ ಮಾಡುದು ಕೇಳಿದ°.
ನಮ್ಮಲ್ಲಿ ಇದೇ ಸಮಸ್ಯೆ ಇಂದ್ರಾಣ ಕಾಲಲ್ಲಿ.ಆಚ ಮನೆ ಮಾಣಿ ಅಲ್ಲಿದ್ದ° ಈಚಕರೆ ಮಾಣಿ ಇಲ್ಲಿದ್ದ ಎನ್ನ ಮಗನೂ ಹಾಂಗೇ ಆಯೆಕ್ಕು ಹೇಳ್ತ ಸ್ಫರ್ದೆಯೇ ಸುರುವಾಯಿದು ಸಮಾಜಲ್ಲಿ.
ಇದಕ್ಕೆ ಕಾರಣ ನಾವೇ ಅಲ್ಲದೊ.ಮಕ್ಕೊ ಸಣ್ಣಾಗಿಪ್ಪಾಗ ನಮ್ಮ ಸ್ತಿತಿಗತಿ ಎಂತ,ಅವು ಎಂತಕೆ ಕಲ್ತು ಹುಶಾರಿ ಆಯೆಕ್ಕು.ನಮ್ಮ ಶಕ್ತಿಗೆ ಸರಿಯಾಗಿ ಕರ್ಚಿ ಮಾಡುದರ ಕಲಿಯೆಕ್ಕು ಸಮಾಜ ನಮ್ಮ ಹೇಂಗೆ ನೆಡೆಶಿಯೊಂಗು,ಕಷ್ಟಲ್ಲಿಪ್ಪಾಗ ಆರು ಹೇಂಗೆ ಎಂತಾಕೆ ಸಹಾಯ ಮಾಡುಗು ಹೇಳುದರ ಕಲಿಶುದು ಬಿಟ್ಟು ಎಡಿಯದ್ದಾರ ಮಾಡಲೆ ಸುರು ಮಾಡಿದ್ದು ನಾವು.
ಒಂದು ಲೆಕ್ಕಲ್ಲಿ ತಪ್ಪಲ್ಲ.ಆನು ಸಣ್ಣಾಗಿಪ್ಪಗ ಎನಗೆ ಬೇಕಾದ್ದೆಂತದೂ ಸಿಕ್ಕಿದ್ದಿಲ್ಲೆ ಎನ್ನ ಮಕ್ಕೊಗೆ ಹಾಂಗಪ್ಪಲಾಗ ಹೇಲಿ ಒಬ್ಬ ಅಪ್ಪ° ಗ್ರೇಶಿರೆ ಸರಿಯೇ.ಅಲ್ಲದೋ?
ಆದರೆ ಅದರ ಕೋಡಿ ಎತ್ತುಸಲೆ ಎಡಿಗೋ,ಒಂದಲ್ಲ ಒಂದು ದಿನ ಅದು ಸಮಸ್ಯೆ ಆಗದೋ ಹೇಳ್ತ ವಿವೇಚನೆ ಬೇಕಲ್ಲದೋ?
ಆದರೆ ಮದುವೆ ಆಗಿ ಒಬ್ಬನೋ ಇಬ್ರೋ ಮಕ್ಕೊ ಹುಟ್ಟುವಾಗ ಮಕ್ಕೊ ದೊಡ್ಡ ಅಪ್ಪಗ ಹೇಂಗಕ್ಕು ಹೇಳುವ ಪ್ರೌಢ ಸ್ತಿತಿಲಿ ನಾವು ಇರ್ತು ಹೇಲುದು ಬಂಙವೇ.ಇಂದ್ರಾಣ ಮಕ್ಕೊ ಎನ್ನ ಕಾಲದವರಿಂದ ಹುಶಾರಿದ್ದವು.ಅವು ದೊಡ್ಡ ಆಗಿ ಅವಕ್ಕೆ ಮಕ್ಕೊ ಅಪ್ಪಾಗ ನಮ್ಮ ಜಾತಿಲಿ ಬಡವರಿಕ್ಕು ಹೇಳಿ ಕಾಣದ್ರೂ ನಮ್ಮ ಚೈತನ್ಯ,ಆರ್ಥಿಕವಾಗಿ ಅಥವಾ ಬೇರೆ ಯಾವದೇ ವಿಷಯಲ್ಲಿ ಹೇಂಗೆ ಹೇಳ್ತದು ಮಕ್ಕಗೆ ಗೊಂತು ಮಾಡೆಕ್ಕಾದ್ದು ನಮ್ಮ ಜವಾಬ್ದಾರಿ,ಇಂದ್ರಾಣವಕ್ಕೆ ಫೋನು ಬೇಕಕ್ಕು,ಮುಂದಾಣ ಜನರೇಶನಿಂಗೆ ಕಾರು ಬೇಕಕ್ಕು,ಹಾಂಗಾಗಿ ನಮ್ಮ ಜವಾಬ್ದಾರಿ ಹೀಂಗೇ ಒಳಿತ್ತು.ಎನಗಲ್ಲದ್ರೆ ನಾಳೆ ಎನ್ನ ಮಗಂಗಾದರೂ ಕಾರು ಬೇಕಪ್ಪ° ಹೇಳಿ ಕೇಳ್ತ ಮಗ° ಅಪ್ಪಲೆ ಸಾಧ್ಯ ಇಲ್ಲೆಯೋ…………..

ಕೇಜಿಮಾವ°

   

You may also like...

5 Responses

 1. ಶರ್ಮಪ್ಪಚ್ಚಿ says:

  ಆಲೋಚನೆ ಮಾಡೆಕ್ಕಾದ ವಿಶಯ. time management ಮತ್ತೆ money management ಇಂದ್ರಾಣ ಮಕ್ಕೊಗೆ ಅತೀ ಅಗತ್ಯ ಕಲುಶೆಕ್ಕಾದ ವಿಶಯ. ಈ ಎರಡರಲ್ಲಿಯೂ ಈಗಾಣ ಮಕ್ಕೊ ರೆಜಾ ಹಿಂದೆ ಹೇಳಿಯೇ ಹೇಳ್ಲಕ್ಕು. ಸಮಯ ಸಿಕ್ಕಿ ಅಪ್ಪಗ ಯಾವುದಾದರೂ ರೀತಿಲಿ ಅದರ ದುರುಪಯೋಗ. ಕಳುದ ಹೋದ ಸಮಯ ಮತ್ತೆ ಸಿಕ್ಕ ಹೇಳ್ತ ಜ್ಞಾನ ಎಲ್ಲರಿಂಗೂ ಇರೆಕ್ಕು. ಮನೆಯ ಆರ್ಥಿಕ ಪರಿಸ್ಥಿತಿ ಅವಕ್ಕೂ ಅರ್ಥ ಆಯೆಕ್ಕು. ಇಲ್ಲದ್ದರೆ “ಎನಗೆ ಹೀಂಗೆ ಆಯೆಕ್ಕು, ನಿಂಗೊ ಎಂತ ಬೇಕಾರೂ ಮಾಡಿ” ಹೇಳ್ತ ಧೋರಣೆ ಅವರಲ್ಲಿ ಬಪ್ಪದು.

 2. ರಘುಮುಳಿಯ says:

  ಮಾವ,ಧನ್ಯವಾದ.ಎರಡು ಘಟನೆಗಳೂ ಅರ್ಥಪೂರ್ಣ.
  ತನ್ನ ಮಕ್ಕಳ ಜೀವನ ಸುಗಮ ಆಗಿರಲಿ ಹೇಳಿ ಪ್ರಯತ್ನ ಮಾಡುವ ಅಬ್ಬೆ ಅಪ್ಪಂದಿರ ಕಷ್ಟ ಮಕ್ಕೊ ಅರ್ತುಗೊಂಡು ಸ್ಪಂದಿಸೆಕ್ಕು. ” ಹಾಸಿಗೆ ಇದ್ದಷ್ಟು ಕಾಲು ಚಾಚು” ಹೇಳ್ತ ಮಾತು ನೆನಪ್ಪಾತು,ಲೇಖನ ಓದಿ.

 3. ನೀರ್ಕಜೆ ಅಪ್ಪಚ್ಚಿ says:

  ಸೂಪರಾಯಿದಿದ ಬರಹ! ಓದುಲೆಯೂ ಲಾಯಿಕ ಆವುತ್ತು, ಗಾಂಭೀರ್ಯತೆಯೂ ಮನಸಿಂಗೆ ತಟ್ಟುತ್ತು.

 4. ಮಂಗ್ಳೂರ ಮಾಣಿ... says:

  🙂

 5. ಗೋಪಾಲ ಮಾವ says:

  ಮಕ್ಕೊಗೆ ಸಣ್ಣ ಇಪ್ಪಗಳೆ ಪೈಸೆ ಬೆಶಿ ಗೊಂತಿರೆಕು. ಮಕ್ಕೊಗೆ “ಅರ್ಥ”ದ ಅರ್ಥ ಸರೀ ಗೊಂತಿಲ್ಲದ್ರೆ ಅನರ್ಥ ಆಗಿ ಹೋಕು. ಗಂಜಿ ತೆಳಿ ಕುಡುದೇ ಬೆಳೆದ ಅಪ್ಪನ ಗ್ರೇಶಿ ಬೇಜಾರ ಆತು. ಡಾಕ್ಟ್ರು ಮಾವ ಹೇಳಿದ ಹಾಂಗೆ, ಎಲ್ಲ ಕಥೆಗಳಲ್ಲು ಬಡ ಬ್ರಾಹ್ಮಣ ಇರ್ತ ಅಷ್ಟೇ ವಿನ: ಶ್ರೀಮಂತ ಇರ್ತ ಕ್ರಮ ಇಲ್ಲೆ. ಅಪ್ಪದು. ಒಳ್ಳೆ ವಿಚಾರದ ಬಗ್ಗೆ ಲೇಖನ. ಲಾಯಕಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *