ಸರಸ್ವತಿ ಶಂಕರ್ ಗೆ ಕಾಕೋಳು ಸರೋಜಮ್ಮ ಪ್ರಶಸ್ತಿ

ಕಾಕೋಳು ಸರೋಜಮ್ಮ ದತ್ತಿನಿಧಿ ಪ್ರಶಸ್ತಿಪ್ರದಾನಬೆಂಗಳೂರಿನ ಜಯನಗರಲ್ಲಿ ಇಪ್ಪ ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ ” ಹಸಿರು ನೆಲದೆಡೆಗೆ”- ಈ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದ ಕಾಕೋಳು ಸರೋಜಮ್ಮ ದತ್ತಿನಿಧಿ ಪ್ರಶಸ್ತಿ ಬೈಂದು.ಕುಂಬಳೆಯ ದಿ|| ಶೇಡಿಗುಮ್ಮೆ ಕೃಷ್ಣ ಭಟ್ಟರ ಹಿರಿಯ ಮಗಳಾದ ಇವು , ಡಾ|| ಶಂಕರ ಭಟ್ ಸುಳ್ಯ[ ವಿಶ್ರಾಂತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ ;ಈಗ ಜೈನ್ ವಿಶ್ವವಿದ್ಯಾಲಯಲ್ಲಿ ಗೌರವ ಪ್ರಾಧ್ಯಾಪಕರು , ಸೂಕ್ಷ್ಮಜೀವಿಶಾಸ್ತ್ರ] ಇವರ ಕೈ ಹಿಡಿದು , ಎನ್.ಎಮ್.ಕೆ.ಆರ್.ವಿ. ಪದವಿಪೂರ್ವ ಕಾಲೇಜಿಲಿ ಗಣಿತ ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿ, ನಿವೃತ್ತೆ ಆಯಿದವು. ಈಗ ಸಾಹಿತ್ಯ ಸೇವೆಯ ಮುಂದುವರಿಸುತ್ತಾ ಇದ್ದವು.ಈ ವರೆಗೆ ೧೧ ಪುಸ್ತಕಗಳ ಬರೆದ್ದವು.ಕತೆ, ಕಾದಂಬರಿ,ಮಕ್ಕಳ ಸಾಹಿತ್ಯ, ಲೇಖನ, ಪ್ರವಾಸ ಕಥನ -ಹೀಂಗೆ ಎಲ್ಲಾ ರೀತಿಯ ಪುಸ್ತಕಂಗಳ ರಚನೆ ಇವರಿಂದ ಆಯಿದು.
ಮಾರ್ಚ್ ೨ ನೇ ತಾರೀಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಲ್ಲಿ ನಡೆದ ಕಾರ್ಯಕ್ರಮಲ್ಲಿ ಈ ಪ್ರಶಸ್ತಿಯ ಪ್ರದಾನ ಆತು. ಈ ಕಾರ್ಯಕ್ರಮಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ,ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀ ಶ್ರೀಕಂಠ ಕೂಡಿಗೆ ಮತ್ತೆ ಖ್ಯಾತ ಲೇಖಕಿ, ವೈದ್ಯೆ ಡಾ|| ವಸುಂಧರಾ ಭೂಪತಿ ಭಾಗವಹಿಸಿದ್ದವು.
ಈ ಕಾದಂಬರಿಲಿ ಸರಸ್ವತಿ ಶಂಕರ್ ಕಾಸರಗೋಡಿನ ಕನ್ನಡ ಏಕೀಕರಣ ಹೋರಾಟ ಮತ್ತೆ ಹವ್ಯಕ ಜನಜೀವನದ ಬಗ್ಗೆ ಬರೆದ್ದವು. ಬೆಂಗಳೂರಿನ ರವಿ ಪ್ರಕಾಶನ ಈ ಪುಸ್ತಕವ ಪ್ರಕಟಿಸಿದ್ದವು.೧೩-೧೨-೨೦೧೫ಕ್ಕೆ ಕುಂಬಳೆ ನಾಯಿಕಾಪಿಲಿ ಈ ಪುಸ್ತಕದ ಬಿಡುಗಡೆ ಆತು.
ಸರಸ್ವತಿ ಅಕ್ಕಂಗೆ ಅಭಿನಂದನೆಗೊ.

ಗೋಪಾಲಣ್ಣ

   

You may also like...

5 Responses

 1. ಶರ್ಮಪ್ಪಚ್ಚಿ says:

  ಅಭಿನಂದನೆಗೊ.
  ಅಕ್ಕಂಗೆ ಇನ್ನೂ ಹಲವಾರು ಪ್ರಶಸ್ತಿಗೊ ಸಿಕ್ಕಲಿ.,
  ಸರಸ್ವತಿ ಸೇವೆ ನಿರಂತರವಾಗಿ ನಡೆಯಲಿ.,
  ಹವ್ಯಕ ಸಾಹಿತ್ಯಕ್ಷೇತ್ರಕ್ಕೂ ಇವರ ಕೊಡುಗೆ ಹರಿದು ಬರಲಿ.

 2. K.Narasimha Bhat Yethadka says:

  ಅಭಿನಂದನೆ.

 3. ಸರಸ್ವತಿ ಶಂಕರ್ ಗೆ ಅಭಿನಂದನೆ.
  ಇವಕ್ಕೆ ಕೊಡಗಿನ ಗೌರಮ್ಮ ಪ್ರಶಸ್ತಿಯೂ ಬಯಿಂದು.ಇನ್ನುದೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಹೇಳಿ ಶುಭಹಾರೈಕೆ.

 4. ರಘು ಮುಳಿಯ says:

  ಈ ಪ್ರಶಸ್ತಿ ವಿಜೇತ “ಹಸಿರು ನೆಲದೆಡೆಗೆ” ಕಾದಂಬರಿಯ ಈಗ ಓದುತ್ತಾ ಇದ್ದೆ . ಇದು ಸುಮಾರು ಐವತ್ತು ವರುಷ ಹಿ೦ದಾಣ ಕು೦ಬಳೆ , ಕಾಸರಗೋಡು ಪರಿಸರದ ಜೀವನದ ದಾಖಲೀಕರಣವೂ ಅಪ್ಪು . ಕಾಸರಗೋಡು ಕೇರಳಕ್ಕೆ ಸೇರುವ ಕಾಲದ ಚಳುವಳಿಗಳ ತನ್ನ ವಿದ್ಯಾರ್ಥಿ ಜೀವನಲ್ಲಿ ಕಣ್ಣಾರೆ ಕಂಡ ಕತೆಗಾರ್ತಿ ಸರಸ್ವತಿ ಅತ್ತೆ ಬರದ ಒಂದು ಅತ್ಯುತ್ತಮ ಪುಸ್ತಕ ಇದು .ಕನ್ನಡ /ಹವಿಗನ್ನಡ ಸಾಹಿತ್ಯಕ್ಕೆ ಸರಸ್ವತಿ ಅತ್ತೆಯ ಸೇವೆ ಇನ್ನೂ ಹೆಚ್ಚಿಗೆ ಸಲ್ಲಲಿ ಹೇಳಿ ಪ್ರಾರ್ಥನೆಗೋ .
  ಅತ್ತೆಗೆ ಅಭಿನಂದನೆ .

 5. ಚೆನ್ನೈ ಭಾವ° says:

  ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *