Oppanna.com

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…             (ಭಾಗ-13)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   27/09/2016    10 ಒಪ್ಪಂಗೊ

 

 

ಈಗ ಮೋಹನನ ಜೀವನ ವಿಧಾನಲ್ಲಿ ತುಂಬಾ ಬದಲಾವಣೆಯಾಯಿದು. ಯೋಗ, ಧ್ಯಾನ, ಸತ್ಸಂಗ ಇವೆಲ್ಲ ಅಂವನ ದಿನಚರಿಲಿ ಸೇರಿಹೋತು. ಹರಿಣಿಯ ಜೀವನಲ್ಲಿ  ಒಂದು ಹೊಸ ಅಧ್ಯಾಯ ಸುರುವಾಯಿದು. ಎಂತರ ಹೇಳಿದ್ರೆ ವಾರಲ್ಲಿ ಒಂದೆರಡು ಸತರ್ಿ ಬೆಂಗ್ಳೂರಿಂದ ಮಗಳು ಅಳಿಯನ ಫೋನು ಬತ್ತು. ಗಂಟೆಕಟ್ಲೆ ಮಾತಾಡ್ತವು. ಅಂದರೆ ಒಂದೇ ಒಂದು ಸತರ್ಿಯೂದೆ ಮೋಹನ ಆ ಸಂಭಾಷಣೆಗಳ ಪಾಲುದಾರ ಅಪ್ಪಲೆ ಆಸಕ್ತಿ ತೋಸರ್ಿದ್ದಾಂಯಿಲ್ಲೆ. ಹರಿಣಿಗೆ ಇದುವೇ ದೊಡ್ಡ ಚೋದ್ಯ ಹೇಳಿ ಕಂಡದು. ಅಷ್ಟು ಸೌಮ್ಯ ಸ್ವಭಾವದ ಮೋಹನ ಸುರಭಿಯ ವಿಷಯಲ್ಲಿ ಇಷ್ಟು ಕಠಿಣ ಆದ್ದದು ಹೇಂಗೆ…? ಪ್ರಾಯದ ದೋಷವೋ ಅಥವಾ ಅದು ಬೆಳದ ರೀತಿಯ ದೋಷವೋ ಅಂತೂ ಸುರಭಿ ತಪ್ಪು ಮಾಡಿದ್ದದು ಅಪ್ಪಪ್ಪಾ….ಅಳಿಯ ಯೇವ ಜಾತಿ ಹೇಳಿ ಈಗಳೂ ಹರಿಣಿ, ಮೋಹನಂಗೆ ಗೊಂತಿಲ್ಲೆ. ಆದಿತ್ಯ ಆಗಲೀ ಸುರಭಿಯಾಗಲೀ ಅದರ ಬಗ್ಗೆ ಎಂತದೂ ಹೇಳಿದ್ದವೇ ಇಲ್ಲೆ, ಇವು ಕೇಳಿದ್ದವೂ ಇಲ್ಲೆ. ಆದರೂ ಸುರಭಿಯ ಆಯ್ಕೆ ಬೂನರ್ಾಸು ಖಂಡಿತ ಅಲ್ಲ ಹೇಳ್ತದ್ರ ಹರಿಣಿ ಆಸ್ಪತ್ರೆಲಿ ಕಣ್ಣಾರೆ ಕಂಡಿತ್ತಿದ್ದು. ಮೋಹನನೂ ಅದರ ಗಮನಿಸಿತ್ತಿದ್ದಂ ಹೇಳ್ತದೂ ಸತ್ಯವೇ. ಅಂವ ಯೇವಾಗಳೂ ಆರನ್ನೂ ದ್ವೇಷಿಸುವ ಜಾಯಾಮಾನದಂವ ಅಲ್ಲಲೇ ಅಲ್ಲ. ಆದರೂ….ಸ್ವಂತ ಮಗಳು, ಅಳಿಯನ ವಿಷಯಲ್ಲಿ ಎಂತಕೆ ಈ ನಿಭರ್ಾವುಕತೆ…??

ಅಂದು ಆಸ್ಪತ್ರೆಂದ ಹೆರಡುವಾಗ ಆದಿತ್ಯ ಅತ್ತೆ ಮಾವನ ಲಗ್ಗೇಜುಗಳೆಲ್ಲ ನಚ್ಚಣ್ಣನ ಕಾರಿಲ್ಲಿ ತುಂಬ್ಸುವಾಗ `ಆದಿತ್ಯ, ಸುರಭಿಜೊತೆಯಲ್ಲಿ ಮನೆಗೆ ಯಾವಾಗ ಬತರ್ೀರಾ?’ ಹೇಳ್ತ ಪ್ರಶ್ನೆ ಹರಿಣಿಯ ನಾಲಗೆಯ ಕೊಡಿವರೆಂಗೆ ಬಂದಿತ್ತಿದ್ದು. ಅಂದರೆ ಮೋಹನನ ಮೋರೇಲಿತ್ತಿದ್ದ ಆ ನಿಲರ್ಿಪ್ತತೆ ಅದರ ಉತ್ಸಾಹವ ತೆಡೆ ಹಿಡಿದತ್ತು. ಮಗಳು, ಅಳಿಯನ ಸುರೂವಾಣ ಸತರ್ಿ ಮನೆಗೆ ಆಹ್ವಾನಿಸುವಾಗ ಆ ಆಹ್ವಾನ ಗೆಂಡನ ಬಾಯಿಂದಲೇ ಬಂದರೆ ಚೆಂದ ಹೇಳ್ತದು ಹರಿಣಿಯ ಅಭಿಪ್ರಾಯ. ಅಂವ ಅದರ ಶುದ್ದೀಲೇ ಇಲ್ಲೆ ಹೇಳಿಯಪ್ಪಗ ತಾನು ಮಾಂತ್ರ ಅದರ ಬಗ್ಗೆ ಅತ್ಯಾಸಕ್ತಿ ತೋಸರ್ೀರೆ ಅಧಿಕಪ್ರಸಂಗವೇ ಆಗಿ ಹೋಕೋ ಹೇಳ್ತ ಅಳುಕಾತು ಹರಿಣಿಗೆ. ಹಾಂಗಾಗಿ ಅದೂದೆ ಬಾಯ್ಮುಚ್ಚಿ ಕಾರು ಹತ್ತಿತ್ತು. ಅಂದರೆ ಹರೀಶ ಚೇಡ್ಸದ್ದೆ ಬಿಟ್ಟಿದಾಂಯಿಲ್ಲೆ,

“ಹರಿಣಿಯಕ್ಕಾ, ಮಗಳು ಅಳಿಯನ ದಿನುಗೋಳಿ ಹೋಳಿಗೆ ಊಟ ಹಾಕುವಾಗ ಈ ತಮ್ಮನ ಮರದಿಕ್ಕೇಡಿ ಮಿನಿಯಾಂ?” ಹೇಳಿ ನೆಗೆ ಮಾಡಿಯೇ ಅಂವ ಇವರ ಬೀಳ್ಕೊಟ್ಟದು.

ಇವು ಮನೆಗೆ ಎತ್ತಿಯಪ್ಪದ್ದೆ ಮದಾಲು ಫೋನು ಬಂದದೇ ಆದಿತ್ಯಂದು,

“ಅತ್ತೇ, ಕ್ಷೇಮವಾಗಿ ಮನೆಗೆ ತಲುಪಿದ್ರಿ ತಾನೇ..?”ಹೇಳಿ ಕೇಳಿದ್ದರಿಂದ ಸುರುವಾಗಿ ಇಡೀ ಮನೆಯ ಶುದ್ದಿವರೇಂಗೆ ಸುಮಾರು ಕಾಲು ಘಂಟೆ ಹೊತ್ತು ಮಾತಾಡಿತ್ತಿದ್ದಂ. ಅದರ ಲಾಗಾಯ್ತು ಹರಿಣಿ ಅವರ ಫೋನಿಂಗೆ ಕೊಡಿಕ್ಕಾಲಿಲ್ಲಿ ಕಾಯ್ತದೂ ಆದಿತ್ಯ, ಸುರಭಿಯ ಫೋನು ಬತ್ತದೂ ಮಾಮೂಲು ಹೇಳಿ ಆತು. ಮೋಹನ ಅದರ ವಿರೋಧಿಸಿದ್ದನೂ ಇಲ್ಲೆ, ಅನುಮೋದಿಸಿದ್ದನೂ ಇಲ್ಲೆ. ಆ ಬಗ್ಗೆ ಚಕಾರ ಶಬ್ದ ಎತ್ತಿದ್ದನೂ ಇಲ್ಲೆ. ಹರಿಣಿ ಗೆಂಡನತ್ರೆ ಮಕ್ಕಳ ವಿಷಯ ಹೇಳ್ಲೆ ಉತ್ಸಾಹ ತೋರ್ಸಿಯಪ್ಪಾಗೆಲ್ಲಾ ಅಂವ ವಿಷಯಾಂತರ ಮಾಡ್ತದ್ರ ಗಮನಿಸಿದ ಹರಿಣಿ ಮುಂದೆ ಆ ವಿಷಯವ ಎತ್ತುವದೇ ಬಿಟ್ಟತ್ತು. ಒಂದು ದಿನ ನಚ್ಚಣ್ಣ ತಂಗೆ ಮನೆಗೆ ಬಂದಿಪ್ಪಾಗ ಹರಿಣಿ ಅದರ ಮನಸ್ಸಿನ ಬೇಂಕೆಯ ಹೇಳಿಯೋಂಡತ್ತು,

 

“ನಚ್ಚಣ್ಣಾ…,ಭಾವಂ ಎಂತಾಕೆ ಹೀಂಗೆ ಮಾಡ್ತವೋ ಗೊಂತಿಲ್ಲೆ….ಒಪ್ಪಕ್ಕನ ಶುದ್ದಿ ಎತ್ತಿರೆ ಸಾಕು ಮೈಗೆ ಉರುಸಣಿಗೆ ನೊರಪ್ಪಿದ ಹಾಂಗೆ ಮಾಡ್ತವಪ್ಪ….ಎಂತ ಕತೆ ಹೇಳಿ ಎನಗೆ ಅರ್ಥವೇ ಆವುತ್ತಿಲ್ಲೆ ಮಾರಾಯಾ….ನೀನಾದ್ರೂ ಒಂದಾರಿ ಅವಕ್ಕೆ ಹೇಳೇಕು….”

 

“ಇದ ಪುಟ್ಟಕ್ಕೋ…,ಅಂದು ನಿಂಗೊ ಆಸ್ಪತ್ರೆಂದ ಸೀತಾ ಇಲ್ಲಿಗೆ ಬಪ್ಪಾಗಳೇ ಆನು ಹೇಳಿತ್ತಿದ್ದೆ, ಕಾಳನೂ ಬೋಳನೂ ಹೇಳ್ತಾಂಗೆ ನಿಂಗೊ ಇಬ್ರೇ ಮನೆಲಿ ಕೂದೊಂಡು ಎಂತ ಮಾಡ್ತಿರಿ…? ಅದೂ ಹೀಂಗಿಪ್ಪ ಸಮಯಲ್ಲಿ…, ನಮ್ಮಲ್ಲಿಗೆ ಬನ್ನಿ, ಒಂದು ತಿಂಗಳು ನಮ್ಮ ಮನೇಲಿದ್ದು ಎಲ್ಲೋರೊಟ್ಟಿಂಗೆ ಬೆರಕ್ಕೆ ಆಗಿ ಪಟ್ಟಾಂಗ ಹೊಡಕ್ಕೊಂಡು ತೋಟ, ಗೆದ್ದೆ, ಆಳುಕಾಳುಗೊ, ನೆರೆಕರೆ, ನೆಂಟ್ರು, ಇಷ್ಟ್ರು ಹೇಳಿಯೆಲ್ಲ ಹೊತ್ತು ಕಳದಪ್ಪಗ ಹಳತ್ತೆಲ್ಲ ಮರದು ಹೋವ್ತು ಹೇಳಿ. ನೀನು ಕೇಳಿದ್ದಿಲ್ಲೆ. ಈಗ ಅಸಬಡಿವ ಹಾಂಗತಿದ. ಆನೊಂದು ವಿಷಯವ ಹೇಳ್ತೆ…, ಯೇವದೇ ರೋಗಕ್ಕಾದ್ರೂ ಕಾಲ ಹೇಳ್ತದ್ರಿಂದ ದೊಡ್ಡ ಮದ್ದು ಬೇರೆ ಇಲ್ಲೆ. ಸಂಸಾರಿಗೊ ಸಂಸಾರಿಗಳ ಹಾಂಗಿದ್ರೇ ಚೆಂದ. ಮಗಳು ಲವ್ವ್ ಮೇರೇಜು ಆತು ಹೇದೊಂಡು ಲೌಕಿಕ ಜೀವನವೇ ಬೇಡ ಹೇದು ಕೂದರೆ ಹೇಂಗೆ? ಯೋಗ, ಧ್ಯಾನಂಗೊ ಜೀವನದ ಒಂದು ಭಾಗವಾಗಿರೇಕಷ್ಟೇ ಹೊರತಾಗಿ ಅದುವೇ ನಮ್ಮ ಜೀವನ ಹೇಳಿಯಾದ್ರೆ ಅದಕ್ಕೆ ಸಾಂಸಾರಿಕ ಜೀವನ ಹೇಳ್ತವೋ? ಅದರಲ್ಲೇ ಎಷ್ಟು ಹೊತ್ತು ಕಳವಲಕ್ಕು? ಹೆಚ್ಚಾದ್ರೆ ದಿನಲ್ಲಿ ಒಂದೆರಡು ಘಂಟೆ….ಒಳುದ ಸಮಯಲ್ಲಿ ನಿಂಗೊ ಇಬ್ರೂ ಮಾಡ್ತದು ಎಂತರ ಹೇಳಿರೆ ನಿನ್ನ ಯೇಚನೆಗೊ ಭಾವಂಗೆ ಗೊಂತಾದ್ರೆ ಅವಂಗೆಲ್ಲಿ ಬೇನೆ ಆಕ್ಕೋ ಹೇದು ನೀನೂ ನಿನಗೆ ಬೇಜಾರಾದ್ರೆ ಹೇದು ಅಂವನೂ….ಒಟ್ಟಿಲ್ಲಿ ಇಬ್ರೂದೆ ಮೂಕ ಮುನಿಗಳ ಹಾಂಗಿಪ್ಪದಲ್ದೋ? ಒಂದೋ ನಿಂಗೊ ಒಪ್ಪಕ್ಕನ ಸಂಪರ್ಕ ಪೂರಾ ಬಿಟ್ಟಿಕ್ಕೇಕು….ಅಲ್ಲದ್ರೆ ಅವರಿಬ್ರನ್ನೂ ಮನಪೂರ್ವಕವಾಗಿ ಸ್ವೀಕರಿಸೇಕು….ಇದೀಗ ಎಂತಾಯಿದು ಹೇಳಿರೆ `ಅಕ್ಕಿ ಮೇಲೆ ಆಶೆ, ನೆಂಟರ ಮೇಲೆ ಪ್ರೀತಿ’ ಹೇಳ್ತಾಂಗೆ ಆಗಿಹೋತನ್ನೇ…? ಮಗಳು ಅಳಿಯನತ್ರೆ ಮಾತಾಡ್ಲೂ ಬೇಕು, ಗೆಂಡಂಗೆ ಬೇಜಾರೂ ಅಪ್ಪಲಾಗ….ಅವು ಇಲ್ಲಿಗೆ ಬಪ್ಪಲೂ ಬೇಕು….ಗೆಂಡನೇ ದಿನುಗೋಂಬಲೂ ಬೇಕು ಹೇಳಿ ಅಲ್ದೋ ನಿನ್ನ ಲೆಕ್ಕಾಚಾರ?

ಪುಟ್ಟಕ್ಕೋ…ಒಂದು ವಿಷಯ ನೀನು ನೆಂಪು ಮಡಿಕ್ಕೋಳೇಕು….,ಆರಿಂಗೆ ಆರನ್ನೂ ಬದಲ್ಸಲೆ ಎಡಿಯ ಮಿನಿಯಾಂ…`ಆನು ಹೇಳಿದ್ದರಿಂದಾಗಿ ಅಂವ ಬದಲಾದ…’ ಹೇಳ್ತದೆಲ್ಲ ಬರೀ ಬಾಯಿ ಪಟಾಕಿ ಗೊಂತಾತೋ…? ಬದಲಾವಣೆಗೆ ಮುಖ್ಯ ಬೇಕಾದ್ದದು ಮಾನಸಿಕ ತಯಾರಿ. ಅದಕ್ಕೆ ಸರಿಯಪ್ಪ ಹಾಂಗೆ ನಮ್ಮ ವರ್ತನೆ ಇರೇಕು. ಮತ್ತೆ ಈ ಎರಡಕ್ಕೂ ಪೂರಕವಾಗಿ ಸಂದರ್ಭಂಗೊ ಸೃಷ್ಟಿಯಾಯೇಕು. ನವಗೆ ಆರಿಂದ ಎಂತ ಆಯೇಕು ಹೇದು ನಾವು ಇಚ್ಛೆ ಪಡ್ತೋ ಅದರ ಪ್ರಾಮಾಣಿಕವಾಗಿ ಬಯಸಲೆ ಕಲಿಯೇಕು. ಅದು ಆಗಿಯೇ ಆವುತ್ತು ಹೇಳ್ತ ನಂಬಿಕೆಯೂ ಅಷ್ಟೇ ಮುಖ್ಯ. ಜೀವನ ಇಪ್ಪದೇ ನಂಬಿಕೆಯ ಮೇಗೆ ಅಲ್ದೋ ಹೇಳಿ? ಹಾಂಗಾದ ಕಾರಣ  ಬಾಕಿಪ್ಪದರ ಕಾಲಕ್ಕೆ ಬಿಟ್ಟಿಕ್ಕು. ತನ್ನಷ್ಟಕೇ ಬೇಕಾದ ಹಾಂಗೆ ಆಗಿಯೋಂಡು ಹೋವ್ತು….ನೋಡು ಬೇಕಾರೆ….ಯೋಗ, ಧ್ಯಾನ ಎಲ್ಲ ಮಾಡೀರೆ ಸಾಲ…ಅದರ ತತ್ವಂಗಳ ಜೀವನಲ್ಲಿ ಅಳವಡ್ಸಿಯೋಂಬಲೆ ಗೊಂತಿರೇಕು ಮಿನಿಯಾಂ? ನೀನು ನಮ್ಮ ಗುರುಗಳ ಸಾಧನಾ ಪಂಚಕವ ಒಂದೂ ಬಿಡದ್ದೆ ಕೇಳ್ತೆ ಹೇಳಿತ್ತಿದ್ದೆ? ಅದರ ಸಾರವ ಹೀರಿಯೋಳದ್ದೆ ಅಂತೇ ಕೇಳಿ ಯೆಂತ ಪ್ರಯೋಜನ….`ಗೋರ್ಕಲ್ಲ ಮೇಲೆ ನೀರೆರೆದಂತೆ’ ಹೇಳ್ತಾಂಗೆ….ಎಂಗಳ ಹಾಂಗಿಪ್ಪ ಕೃಷಿಕರಿಂಗೆ ಕಾಯಕವೇ ಕೈಲಾಸ….ನಿಂಗಳ ಹಾಂಗೆ ಸತ್ಸಂಗ ಕ್ಲಾಸಿಂಗೋ ಯೋಗ ಕ್ಲಾಸಿಂಗೋ ಹೋಪಲೆ ಪುರುಸೊತ್ತೂ ಇಲ್ಲೆ, ತಾಳ್ಮೆಯೂ ಇಲ್ಲೆ. ಅಂದರೆ ಮನಃಶಾಂತಿ ಮಾತ್ರ ನಿಂಗಳಿಂದ ಹೆಚ್ಚು ಸಿಕ್ಕುತ್ತು. ಎಂತಕೆ ಹೇಳಿದ್ರೆ ಎಂಗೋಗೆ ಮನುಷ್ಯರೊಟ್ಟಿಂಗೆ, ಪ್ರಕೃತಿಯೊಟ್ಟಿಂಗೆ ಹೆಚ್ಚು ಒಡನಾಟ ಇದ್ದು. ಯೋಗ ಧ್ಯಾನ ಎಲ್ಲವೂ ಅದುವೇ….ಥಿಯರಿ ಕಲ್ತರೆ ಸಾಲಬ್ಬೋ…, ಪ್ರ್ಯಾಕ್ಟಿಕಲ್ ಆಗಿ ಜೀವಿಸಲೂ ಒಳ್ಳೇತ ಅಭ್ಯಾಸ ಬೇಕು. ಅದುವೇ ಜೀವನ ಗೊಂತಾತೋ?

ಪುಟ್ಟಕ್ಕೋ, ಇದಾ ಇಂದು ಆನು ಕಾರು ತಯಿಂದಿಲ್ಲೆ. ಭಾವನತ್ರೆ ಮಾತಾಡಿಕ್ಕಿ ಹೋವುತ್ತೆ, ನಾಳೆ ಕಾರು ತೆಕ್ಕೊಂಡು ಬತ್ತೆ. ಹೆರಟು ಕೂದುಗೋಳಿ. ಒಂದು ತಿಂಗಳಿನ ಮಟ್ಟಿಂಗೆ ಇಲ್ಲಿಯಾಣ ಸಕಲ ವಿಚಾರಂಗಳ ಮರದಿಕ್ಕಿ. ಎಲ್ಲವೂ ಸರಿ ಅಕ್ಕು ಮಿನಿಯಾಂ….ಸುರಭಿ ಹುಟ್ಟಿದ ಲಾಗಾಯ್ತು ಅಪ್ಪನ ಮನೇಲಿ ಕೂರದ್ದ ಪಾಲು ಪೂರಾ ಈಗ ಕೂದರಾತದ.” ನಚ್ಚಣ್ಣನ ಮಾತುಗಳ ಕೇಳಿ ಹರಿಣಿಗೆ ರಜ್ಜ ಸಮಾಧಾನ ಆತು. ಅಂವನ ಮಾತುಗೊ ಹೇಳಿದ್ರೆ ಯೇವಾಗಳೂ ಹಾಂಗೆ, ಬೈಗಳು, ಕೊಂಡಾಟ, ಬುದ್ಧಿವಾದ, ಸಲಹೆಗೊ ಇದೆಲ್ಲವೂ ಇಕ್ಕು. ಕಯಿಕ್ಕೆ ಮಾತ್ರೆಯ ಸೀವು ಗುಣದ ಹಾಂಗೆ.

 

ಅಪ್ಪನ ಮನೇಲಿ ಒಂದು ತಿಂಗಳು ಹೇಂಗೆ ಕಳುದತ್ತು ಹೇದೇ ಹರಿಣಿಗೆ ಗೊಂತಾಗದ್ದ ಹಾಂಗೆ ದಿನಂಗೊ ಕಳುದು ಹೋತು. ಮೋಹನನೂ ಗೆಲುವಾದ. ಊರವಕ್ಕೆ ಬಾಯಿ ಆಡ್ಸಲೆ ಹೊಸ ಹೊಸ ವಿಷಯಂಗೊ ಸಿಕ್ಕಿದ ಹಾಂಗೆ ಸುರಭಿಯ ವಿಷಯ ಹಳತ್ತಾತು ಹೇಳಿ ಕಂಡತ್ತೇನೋ? ಹಾಂಗಾದ ಕಾರಣ ಹರಿಣಿಯೂ ಛಳಿ ಬಿಟ್ಟು ನೆರೆಕರೆ, ನೆಂಟ್ರುಗಳಲ್ಲಿಗೆ ಹೋಪಲೆ ಸುರು ಮಾಡಿತ್ತು. ಮೋಹನ ಮೊದಲಿಂದಲೂ ಜೆಂಬಾರಂಗೊಕ್ಕೆ ಹೋಪದು ರಜ್ಜ ಕಡಮ್ಮೆಯೇ. ಅಂದರೆ ನಚ್ಚಣ್ಣ, ಪುಟ್ಟಣ್ಣಂದ್ರ ಮನೆಗಳಲ್ಲಿಪ್ಪ ಆ ಸೌಹಾರ್ದ ವಾತಾವರಣವ ತುಂಬಾ ಇಷ್ಟಪಟ್ಟ. ಅವಕ್ಕೆ ಎಷ್ಟೇ ಕೆಲಸಂಗೊ ಇದ್ರೂ ಮೋಹನ ಭಾವಯ್ಯನೊಟ್ಟಿಂಗೆ ಕೂದು ಕೃಷಿ ಶುದ್ದಿ, ಆಳುಗಳ ಶುದ್ದಿ, ರಾಜಕೀಯ, ಇತ್ಯಾದಿಗಳ ಪೂರಾ ಕೆದಕ್ಕಿ ಮಾತಾಡಿಕ್ಕಿಯೇ ತೋಟಕ್ಕೆ ಹೋಪದೋ, ಪೇಟಗೆ ಹೋಪದೋ ಮಾಡಿಯೊಂಡಿತ್ತಿದ್ದವು. ಅವರ ಹೆಂಡತ್ತಿ ಮಕ್ಕೊ ಅಂತೂ ದಿನ ನಿತ್ಯ ಹಬ್ಬದಾಚರಣೆ ಹೇಳುವಷ್ಟು ಖುಷಿಲಿ ಹರಿಣಿ ಮೋಹನನೊಟ್ಟಿಂಗೆ ಸಮಯ ಕಳುದವು. ಹಪ್ಪಳ, ಸೆಂಡಗೆ, ಸುಟ್ಟು ಹಾಕಿದ ಬೀಜದ ಬೊಂಡು, ಭಾವಂಗೆ ಆರೋಗ್ಯಕ್ಕೆ ಒಳ್ಳೇದು ಹೇದು ಗೆಂದಾಳಿ ಬೊಂಡಂಗೊ, ಪುನಾಪರ್ುಳಿ ಓಡು, ಹರಿಣಿಗೆ ಇಷ್ಟ ಹೇದು ಮಾಂಬಳ, ಉಪ್ಪಿನಕಾಯಿ, ಈ ವರ್ಷ ವಿಶೇಷವಾಗಿ ಇಡಿಕ್ಕಾಯಿ ಹಾಕಿದ್ದು ಹೇದು ಅದರದ್ದೂ ಒಂದು ಕುಪ್ಪಿ, ನೆಲ್ಲಿ ಹಿಂಡಿ, ಕಂಚುಸಟ್ಟು…..ಹೀಂಗೆ ಒಂದು ಕಾರು ತುಂಬಾ ಸಾಮಾನುಗಳ ತುಂಬ್ಸಿ ಅದರೆಡಕ್ಕಿಲ್ಲಿ ತಂಗೆಯನ್ನೂ ಭಾವನನ್ನೂ ಕೂಸರ್ಿಯೊಂಡು ಪುಟ್ಟಣ್ಣ ಕಾಸರಗೋಡುವರೆಂಗೂ ಬಂದು ಒಂದು ತಿಂಗಳು ಕಾಲಿ ಇತ್ತಿದ್ದ ಹರಿಣಿಯ ಮನೆಯ ಪುನಃ ಒಕ್ಕಲು ಮಾಡಿ ಕೊಟ್ಟಿಕ್ಕಿ ಹೋದಂ.

 

ಒಂದು ದಿನ ಉದೀಯಪ್ಪಾಗ ಮೋಹನ ವಾಕಿಂಗು ಹೋಗಿತ್ತಿದ್ದಂ. ಹರಿಣಿ ಕಾಪಿ ತಿಂಡಿಯ ತಯಾರಿಲಿತ್ತಿದ್ದು. ಗೇಟು ತೆಗೆದ ಶಬ್ದ ಕೇಳಿತ್ತು. ಇಷ್ಟು ಬೇಗ ಮೋಹನ ವಾಪಾಸು ಬಂದನೋ ಹೇಳಿ ಹರಿಣಿ ಜಾನ್ಸಿಯೊಂಡತ್ತು. ಗರ್ರನೆ ತಿರುಗಿಯೊಂಡಿತ್ತಿದ್ದ ಮಿಕ್ಸಿಯ ನಿಲ್ಸಿ ಚಾವಡಿಗೆ ಬಂದು ಎರಶಿಯೊಂಡಿತ್ತಿದ್ದ ಬಾಗಿಲಿನ ತೆಗದು ನೋಡಿತ್ತು. ಸುರಭಿ! ಕೈಲಿ ಭಾರದ ಬ್ಯಾಗು, ಮೋರೆ ಅದರಿಂದಲೂ ಭಾರವಾಗಿತ್ತಿದ್ದು, ಎಣ್ಣೆ ಕಾಣದ್ದ ತಲೆಕಸವು, ಹೊಡಿಹೊಡಿಯಾದ ವಸ್ತ್ರ, ತಲೆಯ ಮೇಗೆ ಒಂದು ಕ್ವಿಂಟಾಲು ಭಾರ ಹೊತ್ತಿದೋ ಹೇಳ್ತಾಂಗಿದ್ದ ಭಾರದ ಹೆಜ್ಜೆ ಮಡುಗಿಯೊಂಡು ಜಾಲಿಲ್ಲಿ ನೆಡಕ್ಕೊಂಡು ಬತ್ತಾ ಇದ್ದು…..ಹರಿಣಿಗೆ ಒಂದು ಕ್ಷಣ ಅದರ ಕಣ್ಣನ್ನೇ ನಂಬಲೆ ಎಡಿಗಾಯಿದಿಲ್ಲೆ. ಮೊನ್ನೆ ಮೊನ್ನೆ ಆದಿತ್ಯ, ಸುರಭಿ ಇಬ್ರೂ ಫೋನಿಲ್ಲಿ ಮಾತಾಡಿತ್ತಿದ್ದವು. ಅಂಬಾಗ ಸುರಭಿ ಇತ್ಲಾಗಿ ಬಪ್ಪ ಸುದ್ದಿಯೇ ಇತ್ತಿದ್ದಿಲ್ಲೆನ್ನೇ…?

(ಇನ್ನೂ ಇದ್ದು)

 

 

10 thoughts on “ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…             (ಭಾಗ-13)

  1. ಶಾಮಣ್ಣ , ಇದಾ… ನಿಂಗೊ ಇನ್ನೊಂದು ಹೊಸ ಕತೆ ತೆಕ್ಕೊಂಡು ಹೆರಡೆಡಿ ಮಿನಿಯಾಂ….ಎನಗೆ ವಾಟ್ಸಾಪಿಲ್ಲಿ ಬಪ್ಪ ಓದುಗರ ಫ್ರಶ್ನೆಗೊಕ್ಕೆ ಉತ್ತರಿಸಿಯೇ ಬೊಡುದ್ದು. ಇನ್ನು ಹಿಂಗೂ ಇಕ್ಕೋ ಹೇಳಿ ಸುರು ಮಾಡಿರೆ ಕತೆ ಮುಗಿತ್ತದು ಬೇಡದೋ…? ಚುಯಿಂಗಮ್ಮಿನ ಹಾಂಗೆ ಎಳಕ್ಕೊಂಡು ಹೋದರೆ ಅದ್ಕಕೆಂತ ಚೆಂದ ಇದ್ದು ಅಲ್ಲದೋ…?

  2. ಮೋಹನನ ಸರಿ ಮಾಡ್ಲೆ ಸುರಭಿಯ ಒಟ್ಟಿಂಗೆ ನಚ್ಚಣ್ಣ ಹರೀಶ ಡಾಕ್ಟ್ರು ಸೇರಿ ಮಾಡುವ ನಾಟಕ ಅದು ಸುರು ಆದ್ದು…. ಅಲ್ಲದ….

  3. ಅಯ್ಯೋ ಗೋಪಾಲಣ್ಣ, ಎಂಗಳ ಕಾಸ್ರೋಡಿನ ಸುಟ್ಟವು ಗುಳಿ ಹಾಂಗಿದ್ದ ಮಾರ್ಗಲ್ಲಿ ಮಂಗಳೂರಿಂಗೆ ಹೋಗಿ ಎತ್ತುವಾಗ ಬೆಂಗಳೂರಿಂದ ಬಂದು ಪಂಪ್ ವೆಲಿಲ್ಲಿ ಇಳಿದವು ಅವರವರ ಮನೆಗೆ ಎತ್ತಿ ಮಿಂದು ಒಪ್ಪೊಪ್ಪ ಅಂಗಿ ವಸ್ತ್ರನ್ಗಳ ಹಾಕಿ ಹೋಯೇಕದಲ್ಲಿಗೆ ಹೋಗಿ ಅಕ್ಕನ್ನೇ ..? ಅದಿರಳಿ…ವಿಷಯ ಎಂತರ ಹೇಳಿರೆ ಬೆಂಗಳೂರು ಬಸ್ಸಿಂದ ಇಳಿದಪ್ಪಗ ನಿಂಗೊ ಎಂತ ಮಾಡ್ತೀರಿ? ಕಿಸೆಂದ ಒಂದು ಸಣ್ಣ ಬಾಚಣಿಗೆ ತೆಗೆದು ತಲೆ ಬಾಚಿಗೊಳ್ತೀರಿ, ಹೆಮ್ಮಕ್ಕೊ ಆದರೆ ವೇನಿಟಿ ಬ್ಯಾಗಿಂದ ಬಾಚಣಿಗೆ ತೆಗದು ಒಂದಾರಿ ತಲೆಕಸವಿನ ಒಪ್ಪ ಗೋಳ್ಸುತ್ತವಾಲ್ಡೊ? ಇದೆಲ್ಲ ಯೇವಗ? ಜೀವನಲ್ಲಿ ಉತ್ಸಾಹ ಇಪ್ಪಾಗ. ಜೀವನ ನೀರಸ ಹೇಳಿ ಕಾಂಬವಕ್ಕೆ ಹೆರಾಣ ಪ್ರಪಂಚದ ಗೊಡವೆಯೇ ಇಲ್ಲದ್ದಿಪ್ಪಗ ಅದರ ಸಾಂಕೇತಿಕವಾಗಿ ಬರವಣಿಗೆಲಿ ತಿಳಿಸುತ್ತ ಕೆಣಿ ಹೇಂಗೆ? ಹಿಂಗೇ ….ಸುರಭಿಯ ಬಗ್ಗೆ ಬರೆದ ಹಾಂಗೆ… ತಪ್ಪಲ್ಲನ್ನೇ ?

    1. ಸುಮ್ಮನೆ ತಮಾಷೆಗೆ ಹೇಳಿದೆ. ಧಾರಾವಾಹಿಯ ತಿರುಗಾಸುಗೊ ಹೇಂಗಿರ್ತು ಹೇಳಿ ನವಗೆ ಗೊಂತಿಲ್ಲದ್ದೆಯೊ ? ಸುಮ್ಮನೆ ಬಾಯಿಗೆ ಕೋಲು ಹಾಕಲೆ ಹೇಳಿದೆ ಅಷ್ಟೆ.

  4. ಕಾಲವೇ ಎಲ್ಲವನ್ನೂ ಮರೆಸುತ್ತು. ಸರಿಯಾದ ಮಾತು ಶೀಲಕ್ಕ.
    ಸುರಭಿ ಕೈಲಿ ಭಾರದ ಬೇಗು, ಎಣ್ಣೆ ಕಾಣದ್ದ ತಲೆ ಕಸವು, ನೆರಿಗಟ್ಟಿದ ವಸ್ತ್ರ. ಹಾಂಗೆಂತೂ ಇಲ್ಲೆಪ್ಪ. ಬೆಂಗಳೂರಿಂದ ಬಸ್ಸು ಇಳುದಿಕ್ಕಿ ಮನಗೆ ಎತ್ತುವಗ ಹಾಂಗಪ್ಪದು ಸಹಜ. ಎಂತ ಹೇಳ್ತಿ ? ಪಂಪ್ ವೆಲ್ ಲ್ಲಿ ಉದಿಯಪ್ಪಗ ಬೆಂಗಳೂರು ಬಸ್ಸಿಂದ ಇಳುದಿಕ್ಕಿ ಬಪ್ಪವರ ನೋಡಿ ಬೇಕಾರೆ !!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×