Oppanna.com

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                     (ಭಾಗ-16)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   18/10/2016    4 ಒಪ್ಪಂಗೊ

 

ಹರಿಣಿ ಮೆಲ್ಲಂಗೆ ಮಗಳ ತಲೆ ಹಿಡಿದೆತ್ತಿ ಕೂದಲ್ಲಿಂದ ಎದ್ದತ್ತು. ಹಾಂಗೇ ಕೆಳ ನೆಲಕ್ಕಲ್ಲಿ ಕೂದು ಹತ್ತೊಂಭತ್ತು ವರ್ಷಂಗಳ ಹಿಂದೆ ಕುಂಞಿ ಒಪ್ಪಕ್ಕನ ಬಳಸಿ ಹಿಡಿದು ಹೇಂಗೆ ಎದೆಗೆ ಒತ್ತಿಯೊಂಡಿದ್ದತ್ತೋ ಅದೇ ರೀತಿ ಈಗಳೂ ಸುರಭಿಯ ಬಾಚಿ ಅಪ್ಪಿ ಹಿಡ್ಕೊಂಡು ತನ್ನ ಮಡಿಲಿನೊಳಾಂಗೆ ಎಳಕ್ಕೊಂಡತ್ತು.

 

“ಒಪ್ಪೀ…,ಯೇವದೇ ಒಂದು ವಸ್ತು ಕಾಣದ್ದೆ ಅಪ್ಪಲೆ ಎಂತ ಕಾರಣ ಹೇಳು…? ಒಂದೋ ನಮ್ಮ ದೃಷ್ಟಿಲಿ ಎಂತೋ ದೋಷ ಇರೇಕು, ಅಲ್ಲದ್ರೆ ಆ ವಸ್ತುವಿಂಗೆ ಅಡ್ಡವಾಗಿ ಬೇರೆಂತೋ ಒಂದು ವಸ್ತು ಇರೇಕು. ಹಾಂಗಿಪ್ಪಾಗ ಒಂದೋ ನಮ್ಮ ದೃಷ್ಟಿಯ ಸರಿ ಮಾಡಿಯೋಂಬ ಬುದ್ಧಿವಂತಿಕೆ ಇರೇಕು ಅಥವಾ ಆ ವಸ್ತುವಿಂಗೆ ಪರದೆಯಾಗಿ ನಿಂದ ವಸ್ತುವಿನ ಕರೇಂಗೆ ಮಾಡಿ ನೋಡ್ತ ಜಾಣ್ಮೆ ಇರೇಕು…ಇದೆರಡೂ ಸರಿಯಾತಿಲ್ಲೆ ಹೇಳಿಯಾದರೆ ಯೇವದು ಅಡ್ಡ ಇದ್ದೋ ಅದು ತನ್ನಿಂದ ತಾನಾಗಿಯೇ ಸರಿದು ಹೋಪನ್ನಾರ ಕಾಯ್ತ ತಾಳ್ಮೆ ಇರೇಕು…ಇದೇವದನ್ನೂ ಮಾಡದ್ದೆ `ಆನು ಪಾಪಿ…ತಪ್ಪಿತಸ್ತೆ…’ ಹೇಳಿ ತಲೆ ಬಡ್ಕೋಂಬದ್ರಲ್ಲಿ ಎಂತ ಅರ್ಥ ಇದ್ದು ಮಗಳೋ….ಮದಾಲು ವಾಸ್ತವವ ಅರ್ಥ ಮಾಡಿಗೋ…”

 

“ಅಬ್ಬೇ…,ಪ್ರತಿ ವಿಷಯಕ್ಕೂ ಲಾಜಿಕ್ಕು ಸರಿಯಾಗ…,ಅದ್ರಿಂದಲೂ ಮೇಗೆ ಒಂದು ಅದೃಶ್ಯ ಶಗ್ತಿ ಇದ್ದು…,ಅದುವೇ ನಮ್ಮ ಆಳ್ತದು ಹೇಳಿ ಅಂದು ನೀನೇ ಹೇಳಿಯೊಂಡಿತ್ತಿದ್ದೆ ಅಲ್ದೋ? ಎನ್ನ ಮಟ್ಟಿಂಗಂತೂ ಅದುವೇ ನೂರಕ್ಕೆ ನೂರು ಸರಿ. ಎಂತಕೆ ಹೇಳಿದ್ರೆ ಮದುವೆಂದ ಮದಲು ಅಷ್ಟು ಒಳ್ಳೆಯಂವ ಆಗಿತ್ತಿದ್ದ ಆದಿತ್ಯ ಮದುವೆಯ ನಂತರ ಬರೀ ತೆಗದು ಹಾಕಿದಂವ ಹೇಳಿ ಎನಗೆ ತೋರಿದ್ದು ಹೇಂಗೆ? ಆನಂತೂ ಒಂದು ರಜ್ಜವೂ ಬದಲಾಯಿದಿಲ್ಲೆ, ಬದಲಾದ್ದು ಪೂರಾ ಅಂವನೇ….ಓಂತಿ ಜಾತಿಯಂವ. ಎನಗೆ ಇನ್ನು ಅಂವನೊಟ್ಟಿಂಗೆ ಒಂದು ದಿನವೂ ಬದ್ಕಲೆ ಎಡಿಯ….,ನಿಂಗಳೆಲ್ಲರ ಗಣ್ಯ ಮಾಡದ್ದೆ ಅಂವನ ಮದುವೆಯಾದ್ದದೇ ಆನು ಮಾಡಿದ ದೊಡ್ಡ ತಪ್ಪು. ದೇವರ ಆಶೀವರ್ಾದ ಇತ್ತಿದ್ದಿಲ್ಲೆ…ಹಿರಿಯರ ಒಪ್ಪಿಗೆ ಇತ್ತಿದ್ದಿಲ್ಲೆ…,ಹಾಂಗಾಗಿಯೇ ಎಂಗಳೊಳ ಸರಿ ಹೋಗದ್ದದು….” ಇಷ್ಟು ಹೇಳಿಕ್ಕಿ ಸುರಭಿ ಅವರೊಳ ನೆಡಕ್ಕೊಂಡಿತ್ತಿದ್ದ ಜಟಾಪಟಿಗಳ ಕಣ್ಣೀರಿನೊಟ್ಟಿಂಗೆ ಮಿಶ್ರ ಮಾಡಿ ಒಂದೊಂದಾಗಿ ಹೇಳಿತ್ತದ. ಅದರೊಟ್ಟಿಂಗೆ

“ಎಂಗೊ ಈಗ ಎರಡು ಮೂರು ತಿಂಗಳಿಂದ ಅತ್ತಿತ್ತೆ ಮಾತಾಡ್ತರನ್ನೇ ಬಿಟ್ಟಿದೆಯೋಂ…” ಹೇಳಿಯೂ ಹೇಳಿತ್ತು. ತನ್ನ ಕರುಣಾಜನಕ ಕತೆ ಕೇಳಿಯೂ ಅಬ್ಬೆಯ ಮೋರೇಲಿ ಯೇವದೇ ದುಃಖ ಭಾವ ಕಾಣದ್ದೆ ಅದಕ್ಕೆ ರಜ್ಜ ಅಸಮಾಧಾನವೂ ಆತು. ಹರಿಣಿ ಹಗುರವಾಗಿಯೇ ಕೇಳಿತ್ತು,

 

“ಹೇಂ…? ಮದುವೆಯಾಗಿ ಆದ್ದದೇ ಅಷ್ಟೇ ಸಮಯ…ಅದ್ರಲ್ಲಿಯೂ ಎರಡ್ಮೂರು ತಿಂಗಳು ವೇಸ್ಟ್ ಮಾಡಿ ಬಿಟ್ಟಿರೋ…?” ಹರಿಣಿಯ ಮಾತು ಕೇಳಿ ಸುರಭಿಯ ಹುಬ್ಬು ಗೆಂಟಾತದ…ತಾನು ಇಷ್ಟು ಗಂಭೀರ ವಿಷಯ ಮತಾಡ್ತಾ ಇದ್ದರೆ ಅಬ್ಬೆಗೆ ಕುಶಾಲು…,ಅಬ್ಬೆಯೆದುರು ಆದಿತ್ಯನ ಬಣ್ಣ ಪೂರಾ ಬಯಲು ಮಾಡದ್ದೆ ಬಿಡೆ ಹೇದು ಜಾನ್ಸಿಯೊಂಡು ಕಿಸೆಂದ ಫೋನು ಹೆರ ತೆಗದತ್ತು. ಅದರ ಪರದೆಯ ಮೇಲೆ ಬೆರಳು ಆಡ್ಸಿ ಮೋರೆಪುಟ (ಫೇಸ್ ಬುಕ್) ವ ತೆಗದತ್ತು. ತನ್ನ ಜಾಲಿಂಗೆ ಹೋಗಿ ಇನ್ನಷ್ಟು ಬೆರಳಾಡಿಸಿತ್ತು, ಮೊರೆ ಗೆಂಟು ಹಾಕಿಯೊಂಡೇ ಅಬ್ಬೆಯ ಕಣ್ಣೆದುರು ಅದರ ಹಿಡಿದತ್ತು. ಹರಿಣಿಯ ಮೋರೆಲಿ ಒಂದು ಹುಸಿನೆಗೆ ಸುಳಿದು ಮಾಯ ಆತು…,

`ಹೂಂ…ಅಂದು ಇದೇ ಫೇಸ್ ಬುಕ್ಕಿಲ್ಲಿ ಆದಿತ್ಯ ಸುರಭಿಯ ಉದ್ದೇಶಿಸಿ ಬರೆದ್ದರ ನೋಡಿ ಆನು ಆ ಬಗ್ಗೆ ಪ್ರಶ್ನಿಸಿದ್ದದಕ್ಕೇ ಅಲ್ದೋ ಅದು ಎನ್ನ ಆ ಜಾಲಿಂದ ಹೆರ ಅಟ್ಟಿದ್ದದು…? ಇಂದು….? ಅದುವೇ ಕುದ್ದಾಗಿ ಎನ್ನ ದಿನುಗೋಳಿ ಅದೇ ಪುಟವ ತೋಸರ್ುತ್ತಾ ಇದ್ದು…!’ ಹರಿಣಿಯ ಮನಸ್ಸಿಲ್ಲಿ ಹೀಂಗಿದ್ದ ಆಲೋಚನೆ ಮೂಡೀರೂ ಒಂದು ರಜ್ಜವೂ ಅದರ ಮೋರೆಲಿ ಪ್ರಕಟ ಪಡ್ಸದ್ದೆ ಗಂಭೀರವಾಗಿ ಸುರಭಿ ತೋಸರ್ಿದ್ದರ ನೋಡ್ಲೆ ಸುರು ಮಾಡಿತ್ತು.

 

ಅದು ಕೆಲವು ಸಮಯದ ಹಿಂದಾಣ ಹಳೆ ಪೋಸ್ಟುಗೋ…., ಸುರಭಿಯ ಅತಿ ಚೆಂದದ ನಾಟ್ಯ ಭಂಗಿಯ ಒಂದೊಂದು ಪಟದ ಕೆಳಾಚಿಯೂ ಸಾವಿರಾರು ಲೈಕುಗೋ, ನೂರಾರು ಮೆಚ್ಚುಗೆಯ ನುಡಿಗೋ…,ಅಲ್ಲಿ ಆದಿತ್ಯ ಬರೆದಿತ್ತಿದ್ದ ಕಮೆಂಟುಗಳ ಸುರಭಿ ತೋಸರ್ಿತ್ತು,

 

`ನಿಂಗಳ ಅಬ್ಬೆ, ಅಪ್ಪ ಬಹುಷಃ ದೇವಲೋಕದವು ಆದಿಕ್ಕೋ ಹೇಳಿ…? ಅನುಮಾನ ಎಂತಕೆ ಬಂತು ಹೇದರೆ ನಿಂಗಳ ಅಂಗ ಸೌಷ್ಟವ ಇಲ್ಲಿಯಾಣದ್ದಲ್ಲ…ನಿಂಗೊ ಮಾನವ ರೂಪೀ ಅಪ್ಸರೆಯೇ ಸರಿ…’ (ಓದುಗ ಬಂಧುಗಳೇ, ಆದಿತ್ಯ ಇಂಗ್ಲಿಷಿಲ್ಲಿ ಬರೆದ್ದರ ಕತೆಯ ಅನುಕೂಲಕ್ಕೆ ಬೇಕಾಗಿ ನಮ್ಮ ಭಾಷೆಲಿ ಬರೆದ್ದೆ ಮಿನಿಯಾಂ?)

 

`ಸುರಭೀ…,ನಿಂಗಳ ಕಣ್ಣುಗೋ ಬರೇ ಕಣ್ಣಲ್ಲ…ಮದೋನ್ಮತ್ತ ತುಂಬಿಗೋ…,ಆ ತುಂಬಿಗೊಕ್ಕೆ ದೇವಲೋಕದ ಮಧುವೇ ಬೇಕೇನೋ…?’

 

`ಆಡಿಸಿದಳೋ…ಯಶೋದೆ…..ಜಗದೋದ್ಧಾರನಾ….ಹೇಳಿಯೊಂಡು ನೀನು ನತರ್ಿಸುವಾಗ ನಿನ್ನ ಕೈಯೊಳ ಇಪ್ಪ ಕೃಷ್ಣ ಆನಾಯೇಕಾತು ಹೇಳಿ ಜಾನ್ಸಿಯೋಂಡೆ….’

 

`ಸುರೀ…, ಆನು ಹೀಂಗೊಂದು ಕತೆ ಕೇಳಿದ್ದೆ…,ಈ ಸೃಷ್ಟಿಯ ಸುರೂವಾಣ ಸ್ತ್ರೀ ಈವ್ ಹೇಳ್ತದ್ರ ಸೊಂಟಂದ ತೆಗದ ಎಲುಬಿಂದ ಸುರುವಾಣ ಗೆಂಡು ಆಡಮ್ ಹೆಳ್ತದ್ರ ದೇವರು ಸೃಷ್ಟಿಸಿದ್ದನಾಡ….ನಿನ್ನ ಸೊಂಟದ ಬಳುಕಿನ ಕಂಡಪ್ಪಗ ಅದು ನಿಜವೇ ಆದಿಕ್ಕೋ ಹೇಳಿ ಆತೆನಗೆ….’

 

ಕಾವ್ಯಾತ್ಮಕ ಶೈಲಿಲಿ ಬರೆದ ಹೀಂಗಿದ್ದ ಸುಮಾರು ಕಮೆಂಟುಗಳ ಸುರಭಿ ಅಬ್ಬೆಗೆ ತೋಸರ್ಿತ್ತು. ಸುರಭಿಯೂ ಆದಿತ್ಯನ ಮೆಚ್ಚುಗೆಯ ಮಾತುಗೊಕ್ಕೆ ಪೂರಕವಾಗಿಯೇ ಉತ್ತರಿಸಿದ್ದರನ್ನೂ ಹರಿಣಿ ಓದಿತ್ತು. ಮದಾಲು ಬಹುವಚನಲ್ಲಿ ಇತ್ತಿದ್ದ ಅವರಿಬ್ರೊಳಾಣ ಸಂಬೋದನೆ ಬತ್ತಾ ಬತ್ತಾ ಏಕವಚನಕ್ಕೆ ಇಳುದ್ದದ್ರನ್ನೂ ಒಬ್ಬಂಗೊಬ್ಬ ಬಹಳ ಸಲಿಗೆಲಿ ಬರೆದ ಮಾತುಗಳನ್ನೂ ಹರಿಣಿ ಗಮನಿಸಿಯರೂ ಒಂದೇ ಒಂದು ಅಡ್ಡ ಮಾತೂ ಹೇಳದ್ದೆ ಎಲ್ಲವನ್ನೂ ಓದಿಕ್ಕಿ ನಸುನೆಗೆ ಮಾಡಿಯೊಂಡೇ ಹೇಳಿತ್ತು,

 

“ಒಪ್ಪಕ್ಕೋ…,ಬಾರೀ ಚೆಂದದ ಪ್ರೇಮ ಕಾವ್ಯವ ಓದಿದ ಹಾಂಗಾತು ಎನಗೆ…ಆದಿತ್ಯಂಗೆ ಸಾಹಿತ್ಯಲ್ಲಿ ಒಳ್ಳೆ ಅಭಿರುಚಿ ಇದ್ದ ಹಾಂಗೆ ಕಾಣ್ತನ್ನೇ…?”

ಆದಿತ್ಯನ ಹೊಗಳಿ ಮಾತಾಡಿದ್ದು ಸುರಭಿಗೆ ಎಳ್ಳಷ್ಟೂದೆ ಕೊಶಿ ಆಯಿದಿಲ್ಲೆ ಹೇದು ಅದರ ಮೋರೆಯ ಭಾವನೆಲೇ ಹರಿಣಿಗೆ ಗೊಂತಾತು. ಅಬ್ಬೆಯ ಮಾತಿಂಗೆ ಎಂತದೂ ಹೇಳದ್ದೆ ಪುನಃ ಫೋನಿನ ಪರದೆಲಿ ಬೆರಳಾಡ್ಸಲೆ ಸುರು ಮಾಡಿಕ್ಕಿ ಒಂದು ಪುಟವ ಅಬ್ಬೆಗೆ ತೋಸರ್ಿತ್ತು.

 

ಮೋರೆ ಪುಟಲ್ಲಿ ಹಾಕಿದ ಹೊಸ ಪೋಸ್ಟುಗೋ…ಅಲ್ಲಿಯೂ ಸುರಭಿಯ ವೈವಿಧ್ಯಮಯವಾದ ನೃತ್ಯಭಂಗಿಗಳ ಪಟಂಗೊ…ಯಥಾಪ್ರಕಾರ ಅಸಂಖ್ಯಾತ ಲೈಕುಗೊ, ನೂರಾರು ಜೆನರ ಪ್ರಶಂಸೆಗೊ…ಹಾಂಗಿಪ್ಪದ್ರಲ್ಲಿ ಆದಿತ್ಯನ ಮಾತುಗಳ ಮಾಂತ್ರ ಅಬ್ಬೆಯ ಕಣ್ಣೆದುರು ಹಿಡಿದತ್ತು,

 

`ನಾಟ್ಯರಾಣಿ ಆದ್ರೆ ಸಾಕೋ…? ಜೀವನದ ಭಾವ, ರಾಗ, ತಾಳಂಗಳನ್ನೂ ಕಲಿಯೇಕು….’

 

`ಸುಂದರಿ ಆದ್ರೆ ಸಾಕೋ….? ಮನಸ್ಸೂ ಸುಂದರವಿರೇಕೋ ಬೇಡದೋ…?’ ಹೀಂಗಿದ್ದ ಕಮೆಂಟುಗಳನ್ನೋ ಅಪಹಾಸ್ಯ ಮಾಡ್ತ ಹಾಂಗಿದ್ದ ಮೋರೆಗಳ ಚಿತ್ರಂಗಳನ್ನೋ ಹಾಕಿ ಆದಿತ್ಯ ತನ್ನ ಮನಸ್ಸಿನ ಅಸಂತುಷ್ಟಿಯ ಸಾವಿರಾರು ಜೆನಂಗೊ ನೋಡ್ತ ಜಾಗೆಲಿ ಪ್ರಕಟಪಡ್ಸಿತ್ತಿದ್ದಂ. ಸುರಭಿಯೂ ತಾನೇನೂ ಕಡಮ್ಮೆ ಅಲ್ಲ ಹೇಳಿ ಅದೆಲ್ಲದಕ್ಕೂ ಪೆರಟ್ಟು ಉತ್ತರವನ್ನೂ ಬರೆದಿತ್ತಿದ್ದು.

 

“ಅಬ್ಬೇ.., ಕಂಡತ್ತಲ್ದೋ? ನಿನ್ನ ಅಳಿಂಯ ಹೇಂಗಿದ್ದಂವ ಹೇದು ಈಗಾದ್ರೂ ಗೊಂತಾತೋ….?ಆಯಿದಿಲ್ಲೆ ಇನ್ನೂ ಇದ್ದು ತೋಸರ್ುತ್ತೆ…” ಹೇಳಿಕ್ಕಿ ಅದರ ವಾಟ್ಸ್ಯಾಪ್ ಖಾತೆಯ ತೆಗದತ್ತು. ಆದಿತ್ಯನ ಪುಟಕ್ಕೆ ಹೋತು,

 

“ಇದಾ…ಇಲ್ಲಿ ನೋಡಬ್ಬೆ, ಎಂಗಳೊಳ ಒಳ್ಳೇದಿಪ್ಪಾಗ ಅಂವನ ಪ್ರೊಫೈಲ್ ಚಿತ್ರವ ಎಂತ ಹಾಕಿಯೋಂಡಿತ್ತಿದ್ದಂ ಗೊಂತಿದ್ದೋ? ಎನ್ನೊಟ್ಟಿಂಗಿಪ್ಪ ಒಂದು ಚೆಂದದ ಪಟ. ಎಂಗೊ ಮಾತುಕತೆ ಬಿಟ್ಟ ಮೇಗೆ ಅಂವ ಆ ಜಾಗೆಲಿ ಈ ಪಟವ ಹಾಕಿದ್ದಂ…ನೋಡಿಲ್ಲಿ” ಹೇಳಿ ಆದಿತ್ಯ ಹಾಕಿಯೋಂಡ ಅಂವನ ಫ್ರೊಫೈಲ್ ಚಿತ್ರವ ತೋಸರ್ಿತ್ತು. ಅಲ್ಲಿ ಆದಿತ್ಯ ಅಂವನ ಅಬ್ಬೆ ಅಪ್ಪನ ಭುಜ ಬಳಸಿ ಹಿಡಿದು ನೆಗೆ ಮಾಡಿಯೊಂಡು ನಿಂದೊಂಡಿತ್ತಿದ್ದ. ಅದರ ಕೆಳಾಚಿ ಹೀಂಗೆ ಬರಕ್ಕೊಂಡಿತ್ತಿದ್ದು,

 

`ಇಡೀ ಜಗತ್ತಿಲ್ಲಿ ಆನು ಪ್ರೀತಿಸುವ ಎರಡೇ ಎರಡು ವ್ಯಕ್ತಿಗೋ…ಎನ್ನ ಅಬ್ಬೆ ಮತ್ತೆ ಅಪ್ಪಂ…’

 

“ಒಪ್ಪಕ್ಕೋ…,ಆದಿತ್ಯನ ಹಾಂಗಿದ್ದ ಮಗನ ಪಡಕ್ಕೋಂಬಲೆ ಆ ಅಬ್ಬೆ ಅಪ್ಪಂ ಪುಣ್ಯ ಮಾಡಿದ್ದವು ಮಿನಿಯಾಂ….ಯೇವದೋ ಊರಿನ ಯೇವದೋ ಜಾತಿಯ ಕೂಸಿನ ಮದುವೆಯಾದ್ರೂ ಮಗಂ ಎಂಗಳ ಮರದ್ದಾಂಯಿಲ್ಲೆ ಹೇಳಿ ಅವೂದೆ ಒಳ್ಳೆ ಕೊಶಿಲಿ ಇಪ್ಪ ಹಾಂಗೆ ಕಾಣ್ತಪ್ಪಾ….” ಹರಿಣಿಯ ಮಾತುಗಳ ಕೇಳಿ ಸುರಭಿಯ ಪಿತ್ತ ನೆತ್ತಿಗೇರಿತ್ತದ,

 

“ಅಬ್ಬೇ…ನಿಂಗಳೆಲ್ಲೋರ ದೃಷ್ಟಿಲಿಯೂ ಆನೇ ತಪ್ಪಿತಸ್ತೆ ಅಲ್ದೋ….? ಸುರು ಸುರೂವಿಂಗೆ `ನೀನೇ ಎನ್ನ ರಾಣಿ…ಎನ್ನ ದೇವತೆ…’ ಹೇಳಿಯೊಂಡಿತ್ತಿದ್ದವಂಗೆ ಮತ್ತೆ ಮತ್ತೆ ಆನು ಹೇದರೆ ಎಷ್ಟು ಸಸಾರ ಆಗಿ ಹೋತು ಹೇಳಿ ನೀನೇ ನೋಡಿದೆ ಅಲ್ದೋ? ಇಡೀ ಲೋಕಲ್ಲಿ ಎನಗೆ ಅಬ್ಬೆ ಅಪ್ಪಂನೇ ಇಷ್ಟ ಹೇಳಿ ಅಂವ ಹೇಳಿದ ಮಾತಿನ ಅರ್ಥ ಎಂತರ ಹೇಳಿಯಾದ್ರೂ ನೀನು ಆಲೋಚನೆ ಮಾಡಿದ್ಯೋ…?ಹೆಂಡತ್ತಿಯ ಎನಗೆ ಒಂದು ರಜ್ಜವೂ ಇಷ್ಟ ಇಲ್ಲೇ ಹೇಳ್ತದ್ರ ಅಂವ ಆ ರೀತೀಲಿ ಓರೆಗೆ ಹೆಳಿದ್ದದು…  ಆನೂದೆ ಎಂತ ಬಾಕಿ ಮಡಿಗಿದ್ದಿಲ್ಲೆ…, ಎನ್ನ ವಾಟ್ಸ್ಯಾಪಿಲ್ಲಿ ಎಂಗಳಿಬ್ರ ಪಟ ಇತ್ತಿದ್ರ ತೆಗದು ಒಂದು ನಾಯಿಯ ಪಟ ಹಾಕಿ ಬರೆದ್ದೆ…`ಮನುಷ್ಯರಿಂದ ಇದು ಹೆಚ್ಚು ನಂಬಿಗಸ್ತಂ…’ ಹೇಳಿ. ಎನಗಂತೂ ಅಂವನೊಟ್ಟಿಂಗೆ ಸಾಕಾಗಿ ಹೋಯಿದು…., ಈ ಮನೇಲಿಯಾದ್ರೂ ಒಂದು ರಜಾ ಸಮಾಧಾನ ಸಿಕ್ಕುಗು ಹೇಳಿ ಜಾನ್ಸಿಯೊಂಡು ಬಂದ್ರೆ ನೀನೂದೆ ಅಂವನ ಕಡೆಯೇ…ಅಯ್ಯೋ…ಎನ್ನ ವಿಧಿಯೇ…ಆನೀಗಳೇ ಆತ್ಮಹತ್ಯೆ ಮಾಡಿಯೋಳ್ತೆ….ಎನಗೆ ಆರೂ ಬೇಡ….ಸಾಕಾಗಿ ಹೋತು….ಈ ಜೀವನ…” ಸುರಭಿಯ ಕಣ್ಣಿಂದ ಪುನಃ ಹರಿವಲೆ ಸುರುವಾತದ ಧಾರೆ ಧಾರೆ ಕಣ್ಣೀರು….ಒಟ್ಟಿಂಗೆ ಎಕ್ಕಿ ಎಕ್ಕಿ ಬಪ್ಪ ಆದಿತ್ಯನ ದೂಷಣೆಯೂ…

 

ಮಗಳ ಕೂಗಾಟ ನೋಡಿ ಹರಿಣಿ ಬಾಯಿಲಿ ಎಂತ ಹೇಳದ್ರೂ ಕೈಲಿ ಮಗಳ ಬೆನ್ನು ನೇವರಿಸಿಯೊಂಡು ಸೆರಗಿಲ್ಲಿ ಅದರ ಕಣ್ಣೀರು ಉದ್ದಿಯೊಂಡು ಕೂದತ್ತು. ಮಗಳ ವಿಚಾರಧಾರೆಗೊಕ್ಕೂ ಅದರ ಅಭಿಪ್ರಾಯಂಗೊಕ್ಕೂ ಅಜಗಜಾಂತರ ವ್ಯತ್ಯಾಸ ಇತ್ತಿದ್ದ ಕಾರಣವೇ ಅದು ಒಂದೇ ಒಂದು ಮಾತಾಡದ್ದೆ ಸುರಭಿ ಹೇಳಿದ್ದರ ಕೇಳಿಯೊಂಡು ಕೂದ್ದದು. ಆದಿತ್ಯನ ಪರಿಚಯ ಆದ ಲಾಗಾಯ್ತಿಂದ ಹರಿಣಿ ಬೇರೆ ಬೇರೆ ಕೋನಲ್ಲಿ ಅಂವನ ನೋಡಿ ಪರೀಕ್ಷಿಸಿ ಅಂವ ಜೆನ ಹೇಂಗೆ ಹೇಳ್ತದ್ರ ಅಳದಿತ್ತಿದ್ದು. ಸುರಭಿ ಹೇಳಿದ ಹಾಂಗೆ ಅಂವ `ಓಂತಿ ಜಾತಿಯಂವ’ ಅಂತೂ ಖಂಡಿತಾ ಅಲ್ಲ ಹೇಳ್ತದು ಅದರ ಅಭಿಪ್ರಾಯ. ಸುರಭಿಯ ಬಗ್ಗೆ ಅಂವಂಗೆ ರಜಾ ಸ್ವಾಮಿತ್ವ ಭಾವನೆ (ಪೊಸೆಸಿವ್ನೆಸ್) ಇದ್ದು ಹೇಳ್ತದ್ರನ್ನೂ ಅದು ಗಮನಿಸಿತ್ತಿದ್ದು. ಮದುವೆಯಾದ ಸುರುವಿಲ್ಲಿ ಅದೆಲ್ಲ ಸಹಜ…ಸಂಬಂಧ ಗಾಢವಾದ ಹಾಂಗೇ, ಪರಸ್ಪರ ಅನ್ಯೋನ್ಯತೆ ಹೆಚ್ಚಾದ ಹಾಂಗೇ ದೈಹಿಕ ಆಕರ್ಷಣೆಂದಲೂ ಮನಸ್ಸಿನ ಸೌಂದರ್ಯವೇ ಮುಖ್ಯ ಹೇಳ್ತದು ಅರಿವಿಂಗೆ ಬಂದಪ್ಪಗ ಅದೆಲ್ಲ ಸರಿಯಕ್ಕು ಹೇಳಿ ಹರಿಣಿ ಜಾನ್ಸಿಯೋಂಡಿತ್ತಿದ್ದು. ಈಗ ನೋಡೀರೆ ಮಗಳು ದಾಂಪತ್ಯ ಜೀವನ ಸರಿ ಹೋಗ ಹೇಳಿಯೊಂಡು ಅಪ್ಪನ ಮನೆಗೆ ಬಂದದು ಮಾಂತ್ರ ಅಲ್ಲ…,ಸಾಯ್ತೆ ಹೇದೋ ಆದಿತ್ಯನೊಟ್ಟಿಂಗೆ ಜೀವನ ಮುಗಿದತ್ತು ಹೇದೋ ಋಣಾತ್ಮಕ ಮಾತುಗಳ ಮತ್ತೆ ಮತ್ತೆ ಹೇಳುವಾಗ ಹರಿಣಿಗೆ ನಿಜಕ್ಕಾದ್ರೂ ಕೂಗೇಕೋ ನೆಗೆ ಮಾಡೇಕೋ ಹೇದು ಗೊಂತಾಗದ್ದೆ ಹೋತು. ಮಗಳು ತನ್ನ ಜೀವನವ ಎಷ್ಟು ಬಾಲಿಶವಾಗಿ ನೋಡ್ತಾ ಇದ್ದು…ದಾಂಪತ್ಯ ಹೇಳಿರೇ ಹಾಂಗೆ…,ಎಂತೆಂತದೋ ಸಣ್ಣ ಪುಟ್ಟ ಮಾತುಗೊ ಬತ್ತು ಹೋವುತ್ತು….ಅದ್ರನ್ನೇ ದೊಡ್ಡ ಕುಂಬ್ಳಕಾಯಿ ಮಾಡಿಯೊಂಡು `ಎನಗೆ ಗೆಂಡನೇ ಬೇಡ…ಆತ್ಮಹತ್ಯೆ ಮಾಡಿಯೋಳ್ತೆ…’ ಹೇಳಿಯೆಲ್ಲ ಪರಂಚುತ್ತದ್ರಲ್ಲಿ ಎಂತ ಅರ್ಥ ಇದ್ದು…? ಅಥವಾ ನಿಜವಾಗಿಯೂ ಆತ್ಮಹತ್ಯೆ ಮಾಡ್ತ ಉದ್ದೇಶ ಇಪ್ಪವು ಗಳಿಗ್ಗೊಂದಾರಿ `ಆನು ಈಗಳೇ ಸಾಯ್ತೆ…’ ಹೇಳಿ ಉಳಿದವರೆದುರು ಹೇಳ್ತವೋ…? ಲೋಕಲ್ಲಿ ಪರಿಪೂರ್ಣ ಮನುಷ್ಯರು ಹೇಳಿ ಆರಾರು ಇದ್ದವೋ…? ಸಹಜೀವಿಯ ಓರೆಕೋರೆಗಳ ಸರಿ ಹೊಂದ್ಸಿಯೊಂಡು ಹೋಪದೇ ಜೀವನ ಹೇದು ಈ ಕೂಸಿಂಗೆ ಗೊಂತಾಗದ್ದೆ ಹೋತಾನೇ….? ಆದಿತ್ಯ ದುರಭ್ಯಾಸಂಗಳ ದಾಸ ಹೇದೋ ಸುಸಂಸ್ಕೃತ ಮನುಷ್ಯ ಅಲ್ಲ ಹೇದೋ ಆವುತಿದ್ರೆ ಸುರಭಿ ಹೇಳಿದ್ದದಕ್ಕೆ ಹರಿಣಿ ಖಂಡಿತಕ್ಕೂ ಸೈ..ಸೈ ಹೇಳ್ತಿತು.

ಅಥವಾ ಮಗಳು ಅಬ್ಬೆ ಅಪ್ಪಂನ ಗಣ್ಯ ಮಾಡದ್ದೆ ಮದುವೆಯಾದ ಕಾರಣಕ್ಕೆ `ಅದಕ್ಕೆ ಹಾಂಗೇ ಆಯೇಕು’ ಹೇಳ್ತ ಮನಸ್ತಿತಿಯ ಜೆನವೂ ಅಲ್ಲ ನಮ್ಮ ಹರಿಣಿ. ಸುರಭಿ ತನ್ನ ಮದುವೆ ವಿಚಾರಲ್ಲಿ ಹಿರಿಯರ ಗಣನೆಗೆ ತೆಕ್ಕೋಳದ್ದು ದೊಡ್ಡ ತಪ್ಪೇ ಆಗಿದ್ರೂ ಕೂಡ ಒಳ್ಳೆ ಹುಡುಗನೇ ಅದರ ಕೈ ಹಿಡ್ದಂ…ಎಲ್ಲಿಯಾದ್ರೂ ಸೈ…,ಇಬ್ರೂ ಚೆಂದಕೆ ಬಾಳಿ ಬದ್ಕಲಿಯಪ್ಪಾ….ಹೇಳಿಯೇ ಹರಿಣಿಯ ಮನಸ್ಸಿನ ಇಂಗಿತವೂ ಆಗಿತ್ತಿದ್ದು. ಮಗಳು ಗೆಂಡನ ಹೀಯಾಳ್ಸಿ ಮಾತಾಡ್ತು ಹೇಳಿಯೊಂಡು ಹರಿಣಿಯೂ ಅದಕ್ಕೆ ಸ್ವರ ಕೂಡ್ಸಿ ಆದಿತ್ಯನೆದುರು ಮಗಳ ಎತ್ತಿ ಕಟ್ಟಿ ಅವರ ಸಂಬಂಧವ ಇನ್ನಷ್ಟು ಹಾಳು ಮಾಡಿ, `ಮಗಳೋ…,ಅವಂಗೆ ಡೈವೋಸರ್ು ಕೊಡು…ಇಂವಂದ ನೂರು ಪಾಲು ಒಳ್ಳೇಯಂವ ನಮ್ಮ ಜಾತಿಯ ಮಾಣಿಯನ್ನೇ ನಿನಗೆ ಮದುವೆ ಮಾಡ್ಸುತ್ತೆಯೋಂ…’ ಹೇಳಿ ಹರಿಣಿಗೂ ಹೇಳ್ಲಾವುತ್ತಿತು. ಆದರೆ ಅದು ಹಾಂಗಿಪ್ಪ ಯೋಚನೆ ಕೂಡಾ ಮಾಡಿದ್ದಿಲ್ಲೆ. ಅದಕ್ಕೆ ಇನ್ನೊಂದು ಕಾರಣವೂ ಇದ್ದು, ಮಗಳು ಕೊಟ್ಟ ಆಘಾತಂದಾಗಿ ಮೋಹನ ಈಗಾಗಳೇ ಅರೆಜೀವ ಆಗಿ ಹೋದಾನ್ನೇ…? ಇನ್ನೂ ಇನ್ನೂ ಹಾಂಗಿದ್ದ ಪೆಟ್ಟಿನ ಅಂವಂಗೆ ಖಂಡಿತಕ್ಕೂ ತಾಳಿಯೋಂಬಲೆ ಎಡಿಯ. ಅಷ್ಟು ಮಾಂತ್ರ ಅಲ್ಲದ್ದೆ ಹರಿಣಿ ಆದಿತ್ಯನತ್ರೂ ಅವರೊಳಾಣ ಭಿನ್ನಾಭಿಪ್ರಾಯದ ಬಗ್ಗೆ ಆಳವಾಗಿಯೇ ವಿಶ್ಲೇಶಣೆ ಮಾಡಿತ್ತಿದ್ದನ್ನೇ?

 ತೋರು ಬೆರಳು ಎದುರಿಪ್ಪವರ ತೋರುಸುವಾಗ ಹೆಬ್ಬೆಟ್ಟು ಬೆರಳು ನಮ್ಮ ಹೊಡೇಂಗೇ ಬಗ್ಗಿಯೊಂಡಿತರ್ು ಹೇಳ್ತದ್ರನ್ನೂ ಗಮನಿಸಿಯೋಂಡ್ರೆ ಜೀವನ ಕಗ್ಗಂಟಾಗ ಹೇಳ್ತದ್ರ ಹರಿಣಿ ಅನುಭವಂದ ಕಲ್ತ ಪಾಠ. ಹಾಂಗಾಗಿ ಯೇವದೇ ಕಾರಣಕ್ಕೂ ಮಗಳ ಮಾತಿಂಗೆ ಕರಗದ್ದೆ ಅದಕ್ಕೆ ಜೀವನದ ಮೌಲ್ಯವ ಹೇಳಿಕೊಡೇಕಾದ್ದದು ತನ್ನ ಕರ್ತವ್ಯ ಹೇಳಿ ಹರಿಣಿ ನಿಶ್ಚಯ ಮಾಡಿಯೋಂಡತ್ತು. `ಹಾವೂ ಸಾಯೇಕು, ಕೋಲೂ ಮುರಿವಲಾಗ’ ಹೇಳ್ತದ್ರ ಪ್ರತ್ಯಕ್ಷ ಮಾಡಿ ತೋರುಸೇಕಾದ ಸವಾಲು ಅದರ ಮುಂದೆ ಬಂದು ನಿಂದತ್ತದ.                                                                                  (ಇನ್ನೂ ಇದ್ದು)

 

 

 

 

 

4 thoughts on “ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                     (ಭಾಗ-16)

  1. ಈಗ ಹರಿಣಿ ಗಟ್ಟಿಯಾಗಿ ತನ್ನ ಅಭಿಪ್ರಾಯವ ಹೇಳದ್ದರೆ ಇನ್ನು ಯಾವಾಗ?

  2. ಈಗಾಣ ಮಕ್ಕಳ ಮನಸ್ಥಿತಿಯ ಸರಿಯಾಗಿಯೇ ಹೇಳಿದ್ದವು ಶೀಲಕ್ಕ. ಹೀಂಗಿಪ್ಪ ಸಣ್ಣ ಸಣ್ಣ ಕಾರಣಕ್ಕೇ ಡೈವೋರ್ಸು ಕೊಡ್ತದು ಮಾಮೂಲಾಯಿದು ಈಗ. ಒಟ್ಟಾರೆ ವಸ್ತುಸ್ಥಿತಿಯ ಅರ್ಥಮಾಡ್ಯೋಳದ್ದೆ ಹೊಂದಾಣಿಕೆ ಇಲ್ಲದ್ದೆ ಹೀಂಗೆ ನೆಡದರೆ ಜೀವನ ಹಾಳಾಗಿ ಹೋಕು ಹೇಳುತ್ತಕ್ಕೆ ಒಳ್ಳೆ ಉದಾಹರಣೆ . ಸುರಭಿ ಈಗಾಣ ಕೆಲವು ಕೂಸುಗಳ ಮನಸ್ಥಿತಿಯ ಸರಿಯಾಗಿ ಪ್ರತಿಬಿಂಬಿಸಿದ್ದು. ಅಯ್ಯೋ ಮಕ್ಕಳೇ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×