Oppanna.com

ಸುಭಾಷಿತ – ೩೯

ಬರದೋರು :   ಪುಣಚ ಡಾಕ್ಟ್ರು    on   06/12/2017    2 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

 

ಏಕವಾಪೀಜಲಂ ಪಶ್ಯ ಇಕ್ಷೌ ಮಧುರತಾಂ ವ್ರಜೇತ್।
ನಿಂಬೇ ಕಟುಕತಾಂ ಯಾತಿ ಪಾತ್ರಾಪಾತ್ರಾಯ ಭೋಜನಮ್।।

ಅನ್ವಯ:

 

ಏಕವಾಪೀಜಲಂ ನಿಂಬೇ ಕಟುಕತಾಂ ಯಾತಿ। ಇಕ್ಷೌ ಮಧುರತಾಂ ವ್ರಜೇತ್।
(ತಸ್ಮಾತ್) ಪಶ್ಯ! ಭೋಜನಂ
ಪಾತ್ರಾಪಾತ್ರಾಯ (ವ್ಯತ್ಯಸ್ಯತೇ)

ಭಾವಾರ್ಥ:

ಒಂದೇ ಬಾವಿಯ ನೀರಿನ ಕಬ್ಬಿನ ಬುಡಕ್ಕೂ ಹಾಕಿ ಕಹಿಬೇವಿನ ಬುಡಕ್ಕೂ ಹಾಕಿ.
ಕಬ್ಬಿನ ರಸದ ರುಚಿ ನೋಡಿ, ಕಹಿಬೇವಿನ ರಸದ ರುಚಿ ನೋಡಿ.
ಒಂದೇ ಬಾವಿಯ ನೀರು ಒಂದೇ ಮಣ್ಣಿನ ಮೂಲಕ ಬೇರೆ ಬೇರೆ ಗೆಡುಗಳ ಬೇರುಗಳಲ್ಲಿ ಹೊಕ್ಕಿ ಹೆರಡುವಗ ರುಚಿ ಸಂಪೂರ್ಣವಾಗಿ ಬೇರೆ ಬೇರೇ ಆವುತ್ತು.
ಉಂಬ ಊಟ ಒಂದೇ ಆದರೂ ಅದೇ ಆಹಾರ ಆರಲ್ಲಿ ಯಾವ ಸ್ವಭಾವ ಇದ್ದೋ ಅದೇ ಸ್ವಭಾವವನ್ನೇ ವೃದ್ಧಿ ಮಾಡ್ತು.
ಒಂದು ಬಂದೂಕು ಸೈನಿಕನ ಕೈಗೆ ಸಿಕ್ಕಿದರೆ ಅವ ದೇಶರಕ್ಷಣೆ ಮಾಡುಗು. ಭಯೋತ್ಪಾದಕರ ಕೈಗೆ ಸಿಕ್ಕಿದರೆ ಅಮಾಯಕರ ಜೀವ ತೆಗಗು.

ಸತ್ಪಾತ್ರರಿಂಗೆ ಕೊಟ್ಟದು ಸದುಪಯೋಗ ಅಕ್ಕು!
ಅಪಾತ್ರರಿಂಗೆ ಕೊಟ್ಟದು ಅಪಾಯಕಾರಿಯೇ ಅಕ್ಕು!!

2 thoughts on “ಸುಭಾಷಿತ – ೩೯

  1. ಸಾತ್ವಿಕ ಆಹಾರದವರ ಸಾತ್ವಿಕ ಗುಣಕ್ಕೆ, ಈ ಸೂಕ್ತಿ ಆಧಾರ ಕೊಡ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×