ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ)

September 9, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 2 ದಾರಳೆಕಾಯಿ
  • 1/2 ಕಟ್ಟು ಮೆಂತೆ ಸೊಪ್ಪು
  • 1/2 ನೀರುಳ್ಳಿ
  • 1/2 ಚಮ್ಚೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್
  • 2-3 ಹಸಿಮೆಣಸು
  • ಚಿಟಿಕೆ ಅರುಶಿನ ಹೊಡಿ
  • 1/2 – 3/4 ಚಮ್ಚೆ ಕೊತ್ತಂಬರಿ ಹೊಡಿ (ಹೊರುದು ಹೊಡಿ ಮಾಡಿದ್ದು)
  • ರುಚಿಗೆ ತಕ್ಕಸ್ಟು ಉಪ್ಪು
  • 5-6 ಬೇನ್ಸೊಪ್ಪು
  • 4-5 ಎಳೆ ಕೊತ್ತಂಬರಿ ಸೊಪ್ಪು
  • 1/2 ಚಮ್ಚೆ ಸಾಸಮೆ
  • 1/2 ಚಮ್ಚೆ ಉದ್ದಿನ ಬೇಳೆ
  • 1/2 ಚಮ್ಚೆ ಜೀರಿಗೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ ಗಾತ್ರಕೆ ಕೊರದು ಮಡುಗಿ. ಮೆಂತೆ ಸೊಪ್ಪಿನ ದಂಟಿಂದ ತೆಗದು ತೊಳದು ಮಡಿಕ್ಕೊಳ್ಳಿ. ನೀರುಳ್ಳಿಯನ್ನೂ, ಮೆಂತೆ ಸೊಪ್ಪನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡಿಕ್ಕೊಳ್ಳಿ. ಹಸಿಮೆಣಸಿನ ಸಿಗುದು ಮಡಿಕ್ಕೊಳ್ಳಿ.

ಒಂದು ಬಾಣಲೆಲಿ ಉದ್ದಿನ ಬೇಳೆ, ಸಾಸಮೆ, ಜೀರಿಗೆ ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಹಾಕಿ ರೆಜ್ಜ ಹೊತ್ತು(ಸಾಧಾರಣ ಒಂದು ನಿಮಿಷ) ಹೊರಿರಿ. ಇದಕ್ಕೆ ನೀರುಳ್ಳಿ, ಹಸಿಮೆಣಸು, ಬೇನ್ಸೊಪ್ಪು, ಅರುಶಿನ ಹೊಡಿ, ರೆಜ್ಜ ಉಪ್ಪು ಹಾಕಿ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಕೊರದ ಮಂತೆ ಸೊಪ್ಪು ಹಾಕಿ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಬಾಡ್ಸಿ. ಇದಕ್ಕೆ ಕೊರದ ದಾರಳೆಕಾಯಿ, ಕೊತ್ತಂಬರಿ ಹೊಡಿ, ಉಪ್ಪು ಹಾಕಿ ಹಾಕಿ ತೊಳಸಿ ಹದ ಕಿಚ್ಚಿಲ್ಲಿ ನೀರು ಹಾಕದ್ದೆ ಮುಚ್ಚಲು ಮುಚ್ಚಿ 15-20 ನಿಮಿಷ ಬೇಶಿ.

ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ. ಇದು ಚಪಾತಿ/ರೊಟ್ಟಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಅನಿತಾ ನರೇಶ್, ಮಂಚಿvreddhiಒಪ್ಪಕ್ಕಮಾಷ್ಟ್ರುಮಾವ°ರಾಜಣ್ಣಗಣೇಶ ಮಾವ°ಪೆರ್ಲದಣ್ಣಚೆನ್ನಬೆಟ್ಟಣ್ಣಚುಬ್ಬಣ್ಣಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣವಿಜಯತ್ತೆಡೈಮಂಡು ಭಾವಪ್ರಕಾಶಪ್ಪಚ್ಚಿಸರ್ಪಮಲೆ ಮಾವ°ಶ್ಯಾಮಣ್ಣಜಯಶ್ರೀ ನೀರಮೂಲೆಮಾಲಕ್ಕ°ಮುಳಿಯ ಭಾವಅಡ್ಕತ್ತಿಮಾರುಮಾವ°ಶರ್ಮಪ್ಪಚ್ಚಿಡಾಗುಟ್ರಕ್ಕ°ಬಂಡಾಡಿ ಅಜ್ಜಿವೆಂಕಟ್ ಕೋಟೂರುದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ