Oppanna.com

ಒರಕ್ಕು-ನಮ್ಮ ಹಕ್ಕು

ಬರದೋರು :   ಗೋಪಾಲಣ್ಣ    on   25/02/2012    5 ಒಪ್ಪಂಗೊ

ಗೋಪಾಲಣ್ಣ

ಮೊನ್ನೆ ಬಾಬಾ ರಾಮ್ ದೇವ್ ಖಟ್ಲೆಲಿ ನಮ್ಮ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಘಂಟಾಘೋಷವಾಗಿ ಹೇಳಿತ್ತು-ಈ ರೀತಿ.
ಅಬ್ಬ,ಇನ್ನು ಮನುಷ್ಯರ ಒರಕ್ಕಿಂದ ಏಳಿಸಲೆಡಿಯ.ಏಕೆ ಹೇಳಿರೆ ಒರಕ್ಕು ಮೂಲಭೂತ ಹಕ್ಕು.
ಈಗಾಣ ಯುವಜನತೆ ಇರುಳು ಮನುಗುವಾಗ ತಡವು ಮಾಡುತ್ತವು-ಒರಗುವಾಗ ತಡವು-ಏಳುವಾಗಲೂ ತಡವು. ಹಿರಿಯರು ಇದರ ಕಂಡು ಸಹಿಸುತ್ತವು,ಸಾರ ಇಲ್ಲೆ ಹೇಳಿ ಮನೆಕೆಲಸಂಗಳ ಮಾಡಿಂಡು ಹೋವ್ತವು.ವಾರ ಇಡೀ ಕೆಲಸ ಮಾಡಿ ಬಚ್ಚಿದ ಜನಕ್ಕೆ ರಜೆ ಇದ್ದ ದಿನ ಏಳುವಾಗ ಹತ್ತು ಗಂಟೆಯೋ ಹನ್ನೊಂದು ಗಂಟೆಯೋ ಎಷ್ಟಾದರೂ ಸರಿಯೇ.ಬಾಕಿ ದಿನ ಕೆಲಸ ಮಾಡ್ತವಕ್ಕೆ ಅಷ್ಟಾದರೂ ಸ್ವಾತಂತ್ರ್ಯ ಬೇಡದೊ?ಎಲ್ಲಾ ಸರಿ. ಇನ್ನು ಅದರ ಬಗ್ಗೆ ಅಭಿಪ್ರಾಯ ಹೇಳಿಕ್ಕಲೆ ಗೊಂತಿಲ್ಲೆ.ಉತ್ತರ ಭಾರತದವು ನಮ್ಮ ಊರಿಂಗೆ ಬತ್ತವನ್ನೆ-ಅವು ಸಾಧಾರಣವಾಗಿ ಬೇಗ ಏಳುತ್ತವಿಲ್ಲೆ.ಒರಗುವಾಗ ತಡವು ಆವುತ್ತು.ಅದರ ಮಟ್ಟಿಂಗೆ ಮಲೆಯಾಳಿಗೊ ಉಷಾರು-ಬೇಗ ಎದ್ದು ಮಿಂದು ಪತ್ರಿಕೆ ಓದುತ್ತವು.ಹೀಂಗೆ ಭಾರತದ ಬೇರೆ ಬೇರೆ ಜನಂಗಳ ಕ್ರಮವೂ ಬೇರೆ ಬೇರೆ ಇಕ್ಕು.ಬೇಸಗೆಲಿ ಅರುಣಾಚಲಪ್ರದೇಶಲ್ಲಿ ಐದು ಘಂಟೆಗೇ ಉದಿ ಆವುತ್ತಡ.ಅವು ಬೇಗ ಏಳುಗು ಹೇಳಿ ತೋರುತ್ತು.
ನಮ್ಮ ಕೇಂದ್ರೀಯ ವಿದ್ಯಾಲಯಂಗೊ ಬೇಗ ಪಾಠ ಸುರು ಮಾಡುತ್ತವು.ಹಾಂಗಾಗಿ ಮಕ್ಕಳ ಒರಕ್ಕಿಂದ ಎಬ್ಬಿಸಲೆ ಅಪ್ಪ ಅಮ್ಮಂದಿರಿಂಗೆ ಈಗ ತೊಂದರೆ ಅಕ್ಕು.
ಕೆಲವು ಪ್ರಾರ್ಥನಾ ಮಂದಿರಂಗಳಲ್ಲಿ ಭಕ್ತಿಗೀತೆಯೊ ಬಾಂಕೋ ಉದಿಯಪ್ಪಗಳೇ ಹಾಕುತ್ತವು,ಯಕ್ಷಗಾನದವು ರಾತ್ರಿ ಧ್ವನಿವರ್ಧಕ ಉಪಯೋಗಿಸುತ್ತವು;ಅದರ ಕತೆ ಎಂತಾವುತ್ತೊ?
ಆಟಕ್ಕೊ,ಆಯನಕ್ಕೊ ಹೋಗಿ ಅರ್ಧರಾತ್ರಿಲಿ ಬಂದು ಮನೆಯವರ ಎಬ್ಬಿಸಿರೆ ಜಾಗ್ರತೆ-ಹೆರ ಜಗಲಿಲೊ,ಬೀದಿಲೊ ಕೂದು ಉದಿ ಮಾಡಿರೆ ಒಳ್ಳೆದು.
ಚುನಾವಣಾ ಪ್ರಚಾರ ಭಾಷಣ ಹತ್ತು ಗಂಟೆಂದ ಮೊದಲೇ ಮುಗಿಸೆಕ್ಕು ಹೇಳಿ ನೀತಿಸಂಹಿತೆಯೇ ಹೇಳುತ್ತು.
ವಿವೇಕಾನಂದರು ಉತ್ತಿಷ್ಟತ,ಜಾಗ್ರತ…ಹೇಳಿ ಹೇಳಿದವು,ಈಗ ಹಾಂಗೆ ಹೇಳುಲೆ ಅವಕ್ಕೂ ಎಡಿಯ…!ಅವರ ಪುಣ್ಯ.
ಒಟ್ಟಾರೆ ಮಾನವೀಯತೆಯ ಮರೆತ ಪೋಲೀಸ್ ಕಾರ್ಯಾಚರಣೆಂದಾಗಿ ಮನುಷ್ಯನ ನಿಜವಾದ ಹಕ್ಕು ಗೊಂತಾತು.ಕೆಲವು ಗಲಾಟೆಂದ ಆವುತ್ತ ಪರೋಕ್ಷ ಉಪಕಾರ ಇದು.
ನಿದ್ದೆ-ಮನುಷ್ಯಂಗೆ ಸಂಜೀವಿನಿ,ಆಯಾಸ ಪರಿಹಾರಕ್ಕೆ ಅಗತ್ಯ.ಸುಖಮಯ ಜೀವನಕ್ಕೆ,ಆರೋಗ್ಯಕ್ಕೆ ಒರಕ್ಕು ಬೇಕೇ ಬೇಕು.ಒರಕ್ಕಿನ ಹಾಳು ಮಾಡುದು ಮಾನವೀಯತೆ ಅಲ್ಲ.ಒರಕ್ಕೇ ಇಲ್ಲದ ಮನುಷ್ಯ ಮರುಳನೇ ಅಕ್ಕು.
ನಾವು ನಿತ್ಯ ಒರಗುದು ನಮ್ಮ ಹಕ್ಕು-ಈ ಹಕ್ಕು ನಮಗೆ ಸಿಕ್ಕಲೆ ಆರಾರು ಒರಕ್ಕು ಕೆಡೆಕಾವುತ್ತು ಹೇಳಿ ವಿಚಾರ ಮಾಡೆಕ್ಕು.ವಿದ್ಯುಚ್ಚಕ್ತಿ ಉತ್ಪಾದನೆಯವು,ಪೊಲೀಸರು,ಗಡಿ ಕಾಯುವ ಸೈನಿಕರು,ಬೇರೆ ಬೇರೆಕಾರ್ಖಾನೆಗಳ ಕಾರ್ಮಿಕರು ,ರೈಲ್ವೇ,ಬಸ್ಸು,ವಿಮಾನಗಳ ಸಿಬಂದಿ,ಹಡಗಿನವು -ಎಲ್ಲಾ ಒರಕ್ಕು ಮರೆತು ಇರುಳು ಕೆಲಸ ಮಾಡುತ್ತವು,ಹಾಂಗಾಗಿ ನಮಗೆ ಆರಾಮ ಒರಗಲೆ ಎಡಿತ್ತು.ಪತ್ರಿಕೆಯವು ದಿನಾ ಇರುಳು ನಮಗೆ ಪತ್ರಿಕೆ ಮುದ್ರಿಸಿ ಕಳಿಸುತ್ತವು,ಹಾಲಿನವು ಉದಯಕಾಲಕ್ಕೆ ನಮಗೆ ಹಾಲು ತಲಪಿಸುತ್ತವು.
ಈ ಎಲ್ಲಾ ಜೆನ ತಮ್ಮ ಮೂಲಭೂತ ಹಕ್ಕಿನ ಮರೆತು,ಬದಿಗೆ ಒತ್ತಿ ನಮಗೆ ಹಕ್ಕು ಸ್ಥಾಪನೆಗೆ ದಾರಿ ಮಾಡಿಕೊಟ್ಟಿದವು.
ಇಂತಾ ಎಲ್ಲರಿಂಗೂ ಒಂದು ಸಲಾಮ್ ಹೇಳೆಕ್ಕು ಹೇಳಿ ನಿನ್ನೆಯ ಸುದ್ದಿ ಹೇಳುವಾಗ ಅನಿಸಿತ್ತು,ನಿಂಗೊ ಎಂತ ಹೇಳುತ್ತಿ?

5 thoughts on “ಒರಕ್ಕು-ನಮ್ಮ ಹಕ್ಕು

  1. ಈ ಕಾನೂನು ಬೇಗ ಜಾರಿ ಆಯೇಕು. ಆಫೀಸಿಲಿಯೂ ಒರಗುವ ಹಕ್ಕು ಪ್ರತಿಯೊಬ್ಬ೦ಗೂ ಇರೇಕು ..
    ಆದರೆ, ಹಕ್ಕಿನ ಒಟ್ಟಿ೦ಗೆ ನಮ್ಮ ಕರ್ತವ್ಯ೦ಗಳ ಹೊಡೆ೦ಗೂ ನೋಡೆಕ್ಕಲ್ಲದೋ?

  2. ಗೋಪಾಲಣ್ಣಂಗೆ ಹಕ್ಕಿನ ಬಗ್ಗೆ ತಿಳುಶಿದ್ದಕ್ಕೆ ಧನ್ಯವಾದಂಗೊ.
    ನಾವು ಮೊದಲೇ ಒರಕ್ಕಿಲಿ ಬಲ ಇನ್ನು ಕೇಳೆಡಿ …

  3. ಮಾವಾ°,
    ಇದಾ ಇಂದ್ರಾಣ ಉದಯವಾಣಿಲಿ ಇದ್ದದು “ಮನುಷ್ಯನೊಬ್ಬನಿಗೆ ನಿದ್ದೆ ನಿರಾಕರಿಸುವುದು ಅಥವಾ ನಿದ್ದೆಯಿಂದ ಎಬ್ಬಿಸಿ ಥಳಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ” ಹೇಳಿ ಅಲ್ಲದೋ?

    ಅಂಬಗ,

    ನಿದ್ದೆಯಿಂದ ಎಬ್ಬಿಸುವುದು ತಪ್ಪಲ್ಲ – ಎಬ್ಬಿಸಿ ಥಳಿಸಿದರೆ ಮಾತ್ರ ತಪ್ಪು. ( ಮೋರೆಗೆ ನೀರು ಚೇಪಿರೆ ತಪ್ಪಲ್ಲ) 😉
    ಇನ್ನು ವೇದಪಾಥ ಶಾಲೆಲಿ ಸಣ್ಣ ಮಕ್ಕಳ ಪೆಟ್ಟು ಕೊಟ್ಟು ಏಳುಸುಲೆ ಗೊಂತಿಲ್ಲೆ 🙁 🙂
    ಏಬ್ಬಿಸಿ ಚೂರು ಹೊತ್ತು ಬಿಟ್ಟು ಥಳಿಸಿರೆ ಈ ಸೆಕ್ಷನು ಬಾರ ಆದಿಕ್ಕು 😉

    ನನ್ನ ನಿದ್ದೆಯನ್ನು ಬೇರೆಯವರು ನಿರಾಕರಿಸಿದರೆ ಮಾತ್ರ ತಪ್ಪು – ನಾನೇ ಎಚ್ಚರವಾಗಿದ್ದರೆ ತಪ್ಪಲ್ಲ.
    ಇದು ಉಪವಾಸ ಮಾಡಿದ ಹಾಂಗೆ ( ಹೇಂಗೆ ಆತ್ಮಹತ್ಯೆ ತಪ್ಪು, ಆಮರಣಾಂತ ಉಪವಾಸ ತಪ್ಪಲ್ಲದೋ )
    ಆನಾಗಿ ಸಿನೆಮಾ ನೋಡಿಯೊಂಡೋ, ಮೆಸೇಜು ಕುಟ್ಟಿಯೊಂಡೋ ಒರಗದ್ದೇ ಇದ್ದರೆ ತಪ್ಪಲ್ಲ, ಆದರೆ “ರಾತ್ರಿ ಇಡೀ ಇದನ್ನು ಓದಿ ಬಂದು ನಾಳೆ ಬೆಳಗ್ಗೆ ಒಪ್ಪಿಸಿ ಮಕ್ಕಳೇ” ಹೇಳಿ ಮಾಷ್ಟ್ರಕ್ಕೊಹೇಳಿದರೆ ತಪ್ಪು 😉

    ಹೀಂಗೆ ಆಗದೋ?
    ಉಮ್ಮಪ್ಪ..! ವಕೀಲನ ವೇಷ ಹಾಇದ ಅದ್ವೈತ ಕೀಟಭಾವನತ್ರೇ ಕೇಳೆಕಷ್ಟೆ.. 😉

  4. ಬೇಜಾರಿನ ವಿಷಯ ಹೇಳಿರೆ ನಮ್ಮ ಮೂಲಭೂತ ಹಕ್ಕಿನ ನಮಗೆ ಬೇಕಾದ ಹಾಂಗೆ ಅನುಭವಿಸೆಕ್ಕಾರೂ ಇನ್ನೊಬ್ಬನ ಅನುಮತಿ ಬೇಕು 🙁

    ಅಮ್ಮಂಗೆ ಸಹಜವಾಗಿ ಮಕ್ಕೋ ಬೇಗ ಒರಗಿ ಬೇಗ ಎದ್ದು ಆರೋಗ್ಯವಾಗಿರಲಿ ಹೇಳಿ ಆಸೆ ಇಕ್ಕು… ಇದು ಸರಿಯೋ ಅಲ್ಲದೋ ಹೇಳುಲೇ ಈ ಸರ್ವೋಚ್ಹ ನ್ಯಾಯಾಲಯಂದ ‘ಅಮ್ಮನ ಅಧಿಕಾರಗಳು’ ಹೇಳಿ ಪಟ್ಟಿ ಬಂದು ಆಯೆಕ್ಕಷ್ಟೆಯೋ ಏನೋ… ಈ ಸರಕಾರ,ಕಾನೂನು ಮೊದಲಾದವುಗಳಿಂದಾಗಿ ಮನುಷ್ಯನ ಭಾವನೆಗೆ ಯಾವ ಬೆಲೆಯೂ ಇಲ್ಲದ್ದೆ ಆಯಿದು. ಮನುಷ್ಯ ಹೇಳಿರೆ ಒಂದು ಯಂತ್ರದ ಹಾಂಗೆ ಆಯಿದು. ಈ ಸಮಸ್ಯೆ ಬಗೆ ಹರಿಯೆಕ್ಕಾರೆ ನಾವೆಲ್ಲಾ ಒಂದಾಗಿ ನಮ್ಮದೇ ಒಂದು ‘ಪ್ರೀತಿಯ ಸಾಮ್ರಾಜ್ಯ’ ಕಟ್ಟಿಗೊಲ್ಲೆಕ್ಕಷ್ಟೇ. ನಮ್ಮ ಸಾಮ್ರಾಜ್ಯಲ್ಲಿ ಯಾವುದೇ ಸಮಸ್ಯೆ ಇಲ್ಲೇ ಹೇಳಿ ಆದರೆ ನಾವು ಈ ಸರಕಾರ ಕಾನೂನಿನ ಬಗ್ಗೆ ಹೆಚ್ಚು ತಲೆಕೆಡಿಸಿಗೊಲ್ಲೆಕ್ಕು ಹೇಳಿ ಇಲ್ಲೇ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×