ಸಣ್ಣಸಂಕೊಲೆ(shortlink):
ಎಷ್ಟೋ ತಿಂಗಳು ಆದ ಮೇಲೆ ಮತ್ತೆ ಬರಿಯುಕೆ ಕೂತಿದ್ದೇನೆ….. ಪ್ರತಿ ಲೇಖನದ ಮಧ್ಯೆಯೂ ತುಂಬಾ ದಿನದ ಅಂತರ…. ಇಷ್ಟೊಂದು ದಿನಲ್ಲಿ ಅನುಭವಿಸಿದ ಕಷ್ಟ ಸುಖಂಗಳು, ಕಲ್ತ ಜೀವನದ ಪಾಠಗಳು ಎಲ್ಲವೂ ಕಣ್ಣ ಮುಂದೆ ಬಂದು ಕೊಣಿತ್ತಾ ಇದ್ರೆ ಮಾತ್ರ ಮನದ ಭಾವಗಳು ಅಕ್ಷರ ರೂಪಕ್ಕೆ ಇಳಿಯುಕೆ ಸಾಧ್ಯ
ಮನುಷ್ಯನ ದೇಹ, ಮನಸ್ಸು ಎಷ್ಟು ವಿಚಿತ್ರ ಹೇಳಿರೆ, ನಂಬುಕೆ ಸಾಧ್ಯ ಆಗುದಿಲ್ಲ….. ಮನುಷ್ಯನ ಮೆದುಳು ಯಾವ ಕಂಪ್ಯೂಟರ್ಗೂ ಕಮ್ಮಿ ಇಲ್ಲ…. ನಮ್ಮ ಜೀವಮಾನದ ಪೂರ್ತಿ ಘಟನಾವಳಿಗಳ ಕಂಪ್ಯೂಟರ್ಲಿ ದಾಖಲಿಸಿ ಇಟ್ಟುಕೊಳ್ಳುಕೆ ಎಷ್ಟು ಜಿಬಿ ಹಾರ್ಡ್ ಡಿಸ್ಕ್ ಇದ್ರೂ ಸಾಲ್ದು, ಆದ್ರೆ ನಮ್ಮ ಮೆದುಳಿಲಿ ಅದೆಲ್ಲವೂ ಡಿಟ್ಟೋ ದಾಖಲಾಗಿರ್ತೆ
ದಿನ ಕಳುದು ಹೋಗ್ತೆ, ಜನ ಅಳುದು ಹೋಗ್ತಾವೆ ಆದ್ರೆ ನೆನಪ್ಪು ಮಾತ್ರ ಶಾಶ್ವತ ಆಲ್ವಾ ???
ಬದುಕಿನ ಓಟ ಎಷ್ಟು ವೇಗವಾಗಿ ಆಗ್ತೆ ಹೇಳಿರೆ ಅದ್ರ ಎದುರು ಒಲಿಂಪಿಕ್ಸ್ ಲಿ ಚಿನ್ನ ಗೆದ್ದ ಓಟಗಾರನೂ ಸೋಲುವೇಕು
ಕಣ್ಣು ಮುಚ್ಚಿ ತೆಗಿಯುವಷ್ಟ್ರ ಒಳಗೆ ಎಲ್ಲಿಂದ ಎಲ್ಲಿಗೋ ಹೋಗಿರ್ತೆ
ಮೊನ್ನೆ ಇತ್ತ ಗಿರಿನಗರ ಮಠಲ್ಲಿ ಕೇಳಿದ ತಾಳಮದ್ದಲೆ ನೆನಪ್ಪಾಗ್ತೆ
ನಳ ದಮಯಂತಿ ಪ್ರಸಂಗ
ದಮಯಂತಿಯ ಪುನರ್ ಸ್ವಯಂವರಕ್ಕೆ ನಳ ಬಾಹುಕನ ವೇಷಲ್ಲಿ ಋತುಪರ್ಣನ ಒಟ್ಟಿಗೆ ರಥಲ್ಲಿ ಹೋಗ್ತಾ ಇರುವಾಗ, ಋತುಪರ್ಣ ಮಹಾರಾಜನ ಅಂಗವಸ್ತ್ರ ಹಾರಿ ಹೋಗ್ತಂತೆ. “ಬಾಹುಕ ಒಂದು ಕ್ಷಣ ರಥ ನಿಲ್ಸು, ಕೆಳಗಿಳಿದು ನನ್ನ ಅಂಗವಸ್ತ್ರ ತೆಕ್ಕೊತ್ತೇನೆ” ಹೇಳಿ ಋತುಪರ್ಣ ಹೇಳಿಯಾಗುವಾಗ ಬಾಹುಕ ಹೇಳ್ತಾನಂತೆ, “ನಾವು ಆ ಅಂಗವಸ್ತ್ರ ಬಿದ್ದ ಜಾಗೆಂದ ಎಷ್ಟೋ ಯೋಜನ ದಾಟಿ ಮುಂದೆ ಬಂದಾಗಿಯೇದೆ”. ನಮ್ಮ ಎಲ್ಲರ ಬದುಕು ಕೂಡಾ ಹಾಂಗೆ ಹೇಳಿ ಅನ್ಸುತ್ತೆ
“ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು” ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ
ಮತ್ತೆ ಅದ್ರ ಪಡ್ಕೊಳ್ಳುಕೆ ಸಾಧ್ಯವೇ ಇಲ್ಲದ್ದಷ್ಟು ದೂರ !!!!!
ನಳನ ವಿಷಯ ಬಂದಾಗ ನನಿಗೆ ಮತ್ತೆ ನನ್ನ ಅಜ್ಜನ ನೆನಪ್ಪಾಗ್ತೆ….. ನಾನು ಸಣ್ಣಾಗಿರುವಾಗ ಪ್ರತಿ ದಿನ ಅಜ್ಜ ನನಿಗೆ ಕಥೆ ಹೇಳ್ತಾ ಇತ್ತಿದ್ರು…. ರಾಮಾಯಣ, ಮಹಾಭಾರತದ ಕತೆಗಳೇ ಜಾಸ್ತಿ….. ನಳನ ಕತೆಯನ್ನೂ ಹೇಳಿತ್ತಿದ್ರು ಅಜ್ಜ….. ಅಜ್ಜನ ಕಥೆ ಹೇಳುವ ರೀತಿಯೇ ಚಂದ
ಮುಖ್ಯ ಕತೆಯೊಟ್ಟಿಗೆ ಬರುವ ಉಪಕತೆ, ಪಾತ್ರ ವರ್ಣನೆ, ಪ್ರತಿಯೊಂದು ಪಾತ್ರವೂ ಕಣ್ಣಿಗೆ ಕಟ್ಟುವ ಹಾಂಗೆ ಕತೆ ಹೇಳ್ತಿದ್ದದ್ದು ಹೆಂಗೆ ಮರಿಯುಕೆ ಸಾಧ್ಯ ? ರಾಮಾಯಣ ಅಥವಾ ಮಹಾಭಾರತ ಕತೆ ಶುರುವಾಯ್ತು ಹೇಳಿರೆ ಸಾಕು, ತಿಂಗಳಾನುಗಟ್ಟಲೆ ನನಿಗೆ ಅದೆ ಗುಂಗು
ಅಜ್ಜ ಹೋದಲ್ಲಿ ಬಂದಲ್ಲಿ ಎಲ್ಲಾ “ಕತೆ ಹೇಳಿ ಅಜ್ಜಾ” ಹೇಳಿ ಅಜ್ಜನ ಬೆನ್ನ ಹಿಂದೆಯೇ ಇರ್ತಿದ್ದೆ
ಅಜ್ಜ ಚಿಟ್ಟೆಲಿ ಕೂತು ಅಡಿಕ್ಕೆ ಸಜ್ಜಿ ಮಾಡುವಾಗ ನಾನೂ ಅಲ್ಲಿಯೇ ಕೂತುಕೊಂಡು ಕತೆ ಕೇಳುದು
ಅಡಿಕ್ಕೆ ರಾಶಿಗೆ ಕೈ, ಕಾಲು ಹಾಕಿ ಆಟ ಆಡುದು, “ನಾನೂ ಅಡಿಕ್ಕೆ ಸಜ್ಜಿ ಮಾಡ್ತೇನೆ” ಹೇಳಿ ಅಜ್ಜನ ಹತ್ರ ಹಠ ಮಾಡುದು, ಎಲ್ಲವೂ ನೆನಪಾಗ್ತಾ ಅದೆ
ಅದೆಲ್ಲವೂ ಈಗ ಮುಗುದು ಹೋದ ಮಾತು
ರಥಂದ ಹಾರಿ ಹೋದ ಋತುಪರ್ಣನ ಶಾಲಿನ ಹಾಂಗೆ…. ಮತ್ತೆಂದೂ ಸಿಕ್ಕದ್ದೇ ಇರುವಂಥದ್ದು
ಬಾಲ್ಯದ ಆ ಖುಷಿಯ ದಿನಗಳಂದ ಬಹು ಯೋಜನ ದೂರ ಬಂದು ಬಿಟ್ಟಿದ್ದೇನೆ
ಮನೆ ಬಿಟ್ಟು ಈ ಮಹಾನಗರಲ್ಲಿ ಬಂದು ಕೂತ ಮೇಲಂತೂ, ಎತ್ತ ಹೋಗ್ತಾ ಇದ್ದೇನೆ, ಯಾವ ವೇಗಲ್ಲಿ ಕಳೆದು ಹೋಗ್ತಾ ಇದ್ದೇನೆ ಹೇಳಿಯೇ ಗೊತ್ತಾಗ್ತಾ ಇಲ್ಲ
“ಪರಿವರ್ತನೆ ಜಗದ ನಿಯಮ” ಹೇಳುವ ಮಾತು ಹೇಳಿಕೊಂಡು ಸಮಾಧಾನ ಮಾಡಿಕೊಳ್ವೇಕು, ಅಷ್ಟೇ
ಮಳೆ ಇಲ್ಲ
ಯಾಕೋ ಈ ವರ್ಷ ಮಳೆ ಭಾರೀ ಕೈ ಕೊಟ್ಟದೆ…. ಬೆಂಗಳೂರಿಲಿ ಅಂತೂ ಮಳೆಯೇ ಇಲ್ಲ
(ನಮ್ಮಂಥವೆಲ್ಲಾ ಬೆಂಗಳೂರಿಲಿ ಬಂದು ಝಾಂಡಾ ಊರಿರುವಾಗ ಮಳೆ ಆದರೂ ಹೇಂಗೆ ಬಂದೀತು ???) ಮಳೆಯ ಹಿತ ಅನುಭವಿಸುವೇಕು ಹೇಳಿ ಯಾಕೋ ತೀರಾ ಅನ್ಸಿದಾಗ ನಾನು ಹೊರಟೇಬಿಟ್ಟೆ ಮೂಡಿಗೆರೆಗೆ
ನನ್ನ ಫ್ರೆಂಡ್ ಹರೀಶ “ನಾನೂ ಬರ್ತೀನೋ” ಹೇಳಿಯಾಗುವಾಗ ಇಲ್ಲ ಹೇಳಿ ಹೇಳುಕೆ ಆಗಲ್ಲ… ಇಬ್ರೂ ಹೊರನಾಡು ಬಸ್ ಹತ್ತಿ ಹೊರಟಾಯ್ತು
ರಾತ್ರೆ ಬಸ್ಸಿಲಿ ನಿದ್ದೆಯೇ ಬರಲ್ಲ
ಮೂಡಿಗೆರೆಗೆ ಹೋಗ್ತಾ ಇರುವ ಖುಷಿಗೋ ಅಥವಾ ಕಾಲೇಜ್ ನ ಗೇಟಿನ ಎದುರು ಇಳಿಯುಕೆ ಮೊದಲೇ ಬಾಗಿಲಿನ ಹತ್ರ ಹೋಗಿ ಡ್ರೈವರಿಗೆ ರಿಕ್ವೆಸ್ಟ್ ಮಾಡುವೇಕು ಹೇಳುವ subconscious ಮನುಗುಕೆ ಬಿಡಲ್ವೋ ಗೊತ್ತಿಲ್ಲ
ಅಂತೂ ಬೆಳಿಗ್ಗೆ 4 ಘಂಟೆಗೆ ತೋಟಗಾರಿಕಾ ಕಾಲೇಜ್ ನ ಹಾಸ್ಟೆಲ್ ತಲಪಿ ಆಯ್ತು
ನನ್ನ ಇನ್ನೊಬ್ಬ ಫ್ರೆಂಡ್ ಅಕ್ಷಯ್ ಅಲ್ಲಿ ನವುಗಿಬ್ರಿಗೂ ಮನುಗುಕೆ ವ್ಯವಸ್ತೆ ಮಾಡಿ ಆಗಿತ್ತು…. ಸಣ್ಣಕ್ಕೆ ಮಳೆ ಹನಿ ಬೀಳ್ತಾ ಇತ್ತು…. ರಗ್ಗು ಹೊದ್ದು ಮನಿಗಿರೂ ನಿದ್ದೆ ಬರ್ತಾ ಇರಲ್ಲ
ಮೂಡಿಗೆರೆ ಕಾಲೇಜ್ ಲಿ ಕಳುದ ಆ ನಾಲ್ಕು ವರ್ಷ ಕಣ್ಣ ಮುಂದೆ ಹಾಂಗೆ ಕಾಡ್ತಾ ಇತ್ತು…. ಮೂಡಿಗೆರೆಯ ಮಳೆ, ಚಳಿ, ಗಾಳಿ, ಜನ, ಸಂಸ್ಕೃತಿ ಎಲ್ಲವೂ ನೆನಪ್ಪಾಗ್ತಾ ಇತ್ತು
ಪಿಯುಸಿ ಮುಗುಸಿ CET ಬರ್ದು ಆದ ಮೇಲೆ “ಮುಂದೆಂತ ?” ಹೇಳುವ ಪ್ರಶ್ನೆ ಎದುರಾದಾಗ ನನ್ನ ಆಯ್ಕೆ Horticulture ಆಯ್ತು…. ವೆಟೆರಿನೆರಿ ಮಾಡ್ವೆಕು ಹೇಳಿ ಆಸೆ ಇದ್ರೂ ಸೀಟ್ ಸಿಕ್ಕುವಷ್ಟು ಮಾರ್ಕು ಇರಲ್ಲ
ಸರಿ, ಬಿ.ಎಸ್ಸಿ. ತೋಟಗಾರಿಕೆ ಕೋರ್ಸ್ ತೆಕ್ಕೊಂಡು ಮೂಡಿಗೆರೆ ಕಾಲೇಜ್ ಸೆಲೆಕ್ಟ್ ಮಾಡಿಯೂ ಆಯ್ತು…. ಪಿಯುಸಿಲಿ ಎರಡು ವರ್ಷ ಹಾಸ್ಟೆಲ್ ಲಿ ಇದ್ದು ಅಭ್ಯಾಸ ಆಗಿದ್ದ ಕಾರಣ ಮನೆ ಬಿಟ್ಟು ಒಬ್ಬನೇ ಇರುಕೆ ಹೆದ್ರಿಕೆ ಅಂತೂ ಇರಲ್ಲ…. ಆದ್ರೂ ಘಟ್ಟದ ಮೇಲೆ, ಹೆಂಗೋ ಏನೋ ? ಊಟ ತಿಂಡಿ ಸರಿ ಅಡ್ಜಸ್ಟ್ ಆಗದ್ರೆ ಹೇಂಗೆ ಹೇಳುವ ಸಣ್ಣ ಆತಂಕ ನನಿಗೂ, ಮನೆಯವಕ್ಕೂ ಇದ್ದೆ ಇತ್ತು…. ಆದ್ರೆ ಬಿ.ಎಸ್ಸಿ. ಮುಗುಸಿ ಹೊರಡುವಾಗ ಮೂಡಿಗೆರೆ ಬಿಟ್ಟು ಬರುಕೆ ಮನಸ್ಸೇ ಇರಲ್ಲ
ಕಣ್ಣೀರು ಹಾಕಿ ಹೊರಟವು ಎಷ್ಟು ಜನವೋ ? ನಾನಂತೂ ಕರ್ಚೀಪು ಚೆಂಡಿ ಮಾಡಿತ್ತಿದ್ದೆ
ಡಿಗ್ರಿ ಮುಗುಸಿ ನಾಲ್ಕು ಐದು ವರ್ಷ ಕಳುದು ಮತ್ತೆ ನಾವು ಕಲ್ತ ಕಾಲೇಜಿಗೆ, ಆ ಊರಿಗೆ ಹೋಗುವ ಖುಷಿ ಅದೆ ಅಲ್ಲಾ ? ಅದ್ರ ಅಕ್ಷರಕ್ಕೆ ಇಳುಶುದು ಕಷ್ಟ ಸಾಧ್ಯ…. ಅದ್ರ ಅನುಭವಿಸಿಯೇ ತಿಳ್ಕೊಳ್ವೆಕಷ್ಟೇ…. ಅದೇ excitement ಲಿ ಬೆಳಿಗ್ಗೆ ಎದ್ದು ಹಾಸ್ಟೆಲ್ ಇಂದ ಸೀದಾ ಕಾಲೇಜ್ ಇಗೆ ಹೋದೆ…. ತುಂಬಾ ಬದಲಾವಣೆ ಎಂತ ಆಗಿರಲ್ಲ
ಒಂದೊಂದು ಕ್ಲಾಸ್ ರೂಮಿಗೂ ಹೋಗಿ ಫೋಟೋ ತೆಕ್ಕೊಂಡೆ
ಕೈಲಿ ಇದ್ದ ಕ್ಯಾಮೆರಾ 14 ಮೆಗಾ ಪಿಕ್ಸೆಲ್, 4 ಜಿಬಿ ಮೆಮೊರಿ
ಆದ್ರೆ ನಾಕು ವರ್ಷ ನಾನು ಅಲ್ಲಿ ಓಡಾಡಿ ಅನುಭವಿಸಿದ ಕ್ಷಣಂಗಳ ಸೆರೆ ಹಿಡುದ್ದು ಸಾವಿರಾರು ಮೆಗಾ ಪಿಕ್ಸೆಲ್ ನ ನನ್ನ ಕಣ್ಣು ಮತ್ತೆ unlimited ಜಿಬಿ ಮೆಮೊರಿ ಇರುವ ಮೆದುಳು
ಪಿರಿಪಿರಿ ಮಳೆಯ ಮಧ್ಯೆಯೇ ಕೊಡೆ ಹಿಡ್ಕೊಂಡು ಕಾಲೇಜ್ ಸುತ್ತ ಒಂದು ಸುತ್ತು ಹಾಕಿದೆ….
ಹಳೇ ನೆನಪ್ಪುಗಳ ಮತ್ತೆ ಕೆದಕ್ಕಿಕೊಂಡು ಮೂರೂ ಜನ ಮನಸ್ಸು ಹಗುರ ಮಾಡಿಕೊಂಡೆವು
ಕಾಲೇಜ್ ಲಿ ಇರುವಾಗ ಸುಮಾರು ಸರ್ತಿ ಒಬ್ಬೊಬ್ಬನೇ ಟ್ರೆಕಿಂಗ್ ಬಂದಿತ್ತಿದ್ದೆ ಇಲ್ಲಿಗೆ…. ಬಿದಿರುತಳ ಹೇಳುವ ಒಂದು ಅಜ್ಞಾತ ಹಳ್ಳಿಗೂ ಹೋಗಿತ್ತಿದ್ದೆ
ಮಳೆ, ಗಾಳಿ, ಚಳಿ ಮನಸ್ಸಿನ ಹಗುರ ಮಾಡಿತ್ತು
ಮಲಯ ಮಾರುತ ಮುದ ಕೊಟ್ಟತ್ತು…..
ಕೊಟ್ಟಿಗೆಹಾರಂದ ಬಸ್ ಹತ್ತಿ ಹ್ಯಾಂಡ್ ಪೋಸ್ಟ್ ತಲುಪ್ಪಿ ನಡ್ಕೊಂಡು ಹಾಸ್ಟೆಲಿಗೆ ಬಂದು ಮತ್ತೊಂದು ಸರ್ತಿ ನೀರು ಕಾಸಿ ಮಿಂದೂ ಆಯ್ತು….. ಫ್ರೆಂಡ್ ಹರೀಶ ಬಾಡಿಗೆಗೆ ಇದ್ದ ಮನೆಗೆ ಹೋಗುವ ಹೇಳಿ ನಾವಿಬ್ರೂ ಹೊರಟ್ವು….. ಕ್ಯಾಂಟೀನ್ ರಾಜಣ್ಣನ ಹಳೆ ಮನೆಲಿ ಹರೀಶ ಬಾಡಿಗೆಗೆ ಇತ್ತಿದ್ದ ಮೊದಲು…. ರಾಜಣ್ಣನ ಅಮ್ಮ, ಹಣ್ಣು ಹಣ್ಣು ಮುದುಕಿ ಅಲ್ಲಿ ಇತ್ತು….. ಮೂರ್ಸಂಜೆಲಿ ನಮ್ಮ ಕಂಡು ಶುರುವಿಗೆ ಗುರ್ತ ಸಿಕ್ಕದ್ರೂ ಮತ್ತೆ ತುಂಬಾ ಖುಷಿಪಟ್ಟತ್ತು ಅಜ್ಜಿ…. ಒತ್ತಾಯ ಮಾಡಿ ರೊಟ್ಟಿ ಚಟ್ನಿ ತಿನ್ಸಿ ಚೆಂದಲ್ಲಿ ಮಾತಾಡಿತ್ತು….. ಆ ಪ್ರೀತಿ ನೋಡಿಯಾಗುವಾಗ ಮನಸ್ಸಿನ ಮೂಲೇಲಿ ನಾವು ಎಂತದೋ ಒಂದು ಕಳ್ಕೊಂಡಿದ್ದೇವೆ ಹೇಳುವ ಭಾವ
ರಾತ್ರಿ ಬಸ್ ಹತ್ತಿ ಮತ್ತೆ ಬೆಂದಕಾಳೂರಿಗೆ ವಾಪಸ್
ಮರುದಿನ ಮತ್ತೆ ಆಫೀಸ್ ಗೆ ಹೋಗ್ವೇಕಲ್ಲಾ ????
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಕಾವಿನಮೂಲೆ ಮಾಣಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಎಂತ ಮಾರಾಯ ಇದು…??? ಲೇಖನಲ್ಲಿ ಇಡೀ ಉಂಡ್ಳಕಾಳೇ ಕಾಣ್ತು….??? ಎನಗೆ ಓದುಲೇ ಭಾರೀ ಕಷ್ಟ ಆವ್ತು ಹೀಂಗಾದರೆ (ಆಶೆಲಿ). ಬಾಯಿಲಿ ನೀರು ಅರಿವಲೆ ಸುರು ಆಯಿದು.
[ಉತ್ತರುಸಿ]
ಪಯಣ 4- ಮಂಗಳೂರು ಸಿಟಿ ಬಸ್ ಪಯಣದ ಹಾಂಗೆ ಲಾಯಕ ಆಯ್ದು. ಹಲವು ಸ್ವಾರಸ್ಯಂಗೊ.
[...ಪ್ರತಿ ಲೇಖನದ ಮಧ್ಯೆಯೂ ತುಂಬಾ ದಿನದ ಅಂತರ…] … [ ನಾನು ಒಬ್ಬನೇ ಇಲ್ಲಿ ಇದ್ದೇನೆ
] ಅಂತರಕ್ಕೆ ಕಾರಣವೂ ಅರ್ಥ ಆತು. :V
[ಉತ್ತರುಸಿ]
ಹೊತ್ತುವೇಳೆ: 11 August,2012ರ 12:24 PM ಗೆ. (ಒಪ್ಪಸಂಕೊಲೆ)
ಓದಿ ಬೆನ್ನು ತಟ್ಟಿದ್ದಕ್ಕೆ ಧನ್ಯವಾದಂಗೋ ಚೆನ್ನೈ ಭಾವ
[ಉತ್ತರುಸಿ]
ಒಳ್ಳೆದಾಯಿದು… ನಿಂಗಳ ಅನುಭವ ಓದುಲೇ ಖುಷಿ ಆವುತ್ತು.
“ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು” ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ ಮತ್ತೆ ಅದ್ರ ಪಡ್ಕೊಳ್ಳುಕೆ ಸಾಧ್ಯವೇ ಇಲ್ಲದ್ದಷ್ಟು ದೂರ !!!!!
ಇದನ್ನೇ ಇನ್ನೊಂದು ರೀತಿಲ್ಲಿ ಹೇಳುದಾದರೆ:
“ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ಬೇಕು ಹೇಳಿ ಕನಸು ಕಂಡರೆ” ಅದು ಸಿಕ್ಕುವ ಹೊತ್ತಿಗೆ ಅದು ನಮಗೆ ಬೇಡವಾಗಿರುತ್ತು… ಅಥವಾ ಅನುಭವಿಸುವ ಸ್ಥಿತಿಲಿ ನಾವು ಇರುತ್ತಿಲ್ಲೇ.
ಅದ್ದರಿಂದ
“ಸಂಪೂರ್ಣ ವರ್ತಮಾನಲ್ಲಿ ಬದುಕುವುದೇ ಸುಖ ಜೀವನದ ವಿಧಾನ.”
[ಉತ್ತರುಸಿ]
ಹೊತ್ತುವೇಳೆ: 11 August,2012ರ 12:25 PM ಗೆ. (ಒಪ್ಪಸಂಕೊಲೆ)
ಓದಿ ಬೆನ್ನು ತಟ್ಟಿದ್ದಕ್ಕೆ ಧನ್ಯವಾದಂಗೋ ಜಯಶ್ರೀ ಅಕ್ಕಾ:)
[ಉತ್ತರುಸಿ]
ಆಚಕರೆ ಮಾಣಿ, ಉಂಡ್ಲೆಕಾಳು ನೆನಪ್ಪು ಮಾಡ್ಸಿ ಬಿಟ್ಟರೆ ಕಷ್ಟ ಕಷ್ಟ…… ಇನ್ನೊಂದು “ಪಯಣ” ತುಂಬಾ ಹಲಸಿನ ಹಣ್ಣಿನ “ಮಯಣ” ಅಕ್ಕು
[ಉತ್ತರುಸಿ]
ಋತುಪರ್ಣನ ಶಾಲಿನ ಹಾಂಗಿಪ್ಪ ಕಾಲ, ಒಳ್ಳೆ ಕಲ್ಪನೆ. ಮಾಣಿಯ ಪಯಣ, ಅವನ ಜೀವನದ ಹಲವು ಘಟ್ಟಂಗಳ ತೋರುಸಿಕೊಟ್ಟತ್ತು. ಹಿಂದಾಣ ಸುಂದರ ನೆಂಪುಗಳ ಅಂಬಗಂಬಗ ಅಗಿವಲೆ ನಿಜವಾಗಿಯೂ ಒಳ್ಳೆದಾವುತ್ತು. ಶುದ್ದಿಯ ಕಡೆಂಗೆ, ಇಡೀ ಪಯಣವ ಒಂದೇ ವಾಕ್ಯಲ್ಲಿ ಕೊಟ್ಟದು ಲಾಯಕಾತು.
[ಉತ್ತರುಸಿ]
ಹೊತ್ತುವೇಳೆ: 11 August,2012ರ 12:27 PM ಗೆ. (ಒಪ್ಪಸಂಕೊಲೆ)
ಹಾರಿ ಹೋದ ಋತುಪರ್ಣನ ಶಾಲು ಹೇಳುವ ವಾಕ್ಯ ತುಂಬಾ ಕಾಡುತ್ತು ಈಗಲೂ
ಓದಿ ಬೆನ್ನು ತಟ್ಟಿದ್ದಕ್ಕೆ ಧನ್ಯವಾದಂಗೋ ಗೋಪಾಲಣ್ಣ
[ಉತ್ತರುಸಿ]
ಹಂತ ಹಂತ ವಾದ ಪಯಣದ ಶುದ್ದಿ ತುಂಬಾ ಲಾಯಿಕಕೆ ಮೂಡಿ ಬಯಿಂದು.
ನೆನಪುಗಳ ಮೆಲುಕು ಹಾಕುವದು ಮಧುರ ಅನುನಭವ ಕೊಡ್ತು.
ತುಂಬಾ ಕೊಶಿ ಕೊಡ್ತು ಕೆಲವು ಸಾಲುಗೊಃ
[ಮನುಷ್ಯನ ಮೆದುಳು ಯಾವ ಕಂಪ್ಯೂಟರ್ಗೂ ಕಮ್ಮಿ ಇಲ್ಲ…] [ಬದುಕಿನ ಓಟ ಎಷ್ಟು ವೇಗವಾಗಿ ಆಗ್ತೆ ಹೇಳಿರೆ ಅದ್ರ ಎದುರು ಒಲಿಂಪಿಕ್ಸ್ ಲಿ ಚಿನ್ನ ಗೆದ್ದ ಓಟಗಾರನೂ ಸೋಲುವೇಕು] [“ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು” ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ]
[ಉತ್ತರುಸಿ]
ಹೊತ್ತುವೇಳೆ: 11 August,2012ರ 12:28 PM ಗೆ. (ಒಪ್ಪಸಂಕೊಲೆ)
ಓದಿ ಬೆನ್ನು ತಟ್ಟಿದ್ದಕ್ಕೆ ಧನ್ಯವಾದಂಗೋ ಶರ್ಮಪ್ಪಚ್ಚಿ
ಹಿರಿಯೋರ ಪ್ರೋತ್ಸಾಹ ಖುಷಿ ಕೊಡ್ತು
[ಉತ್ತರುಸಿ]
ಎನಿಗೆ ಒಂದು ಡೌಟು. ಬಾಹುಕ ಋತುಪರ್ಣನ ಡ್ರೈವರ್ ಆಗಿಪ್ಪಾಗ ಕಾರು ಓಡ್ಸುತ್ತಾ ಇಪ್ಪಾಗ ಶಾಲು ಹಾರಿತ್ತಾಡ, ಒಂದು ಕ್ಷಣಲ್ಲೇ ಅದು ೬೪ ಯೋಜನ ದೂರ ಎತ್ತಿತ್ತಾಡ. ಋತುಪರ್ಣ ಶಾಲು ಹೆರ್ಕಿಯೊಂಬಾ ಹೇಳುವಗ ಬಾಹುಕ ಯೇಕೆ ನಿಲ್ಸಿದ್ದಾಯಿಲ್ಲೆ ಗಾಡಿ? ಹೇಂಗೂ ಅಷ್ಟು ಸ್ಪೀಡು ಹೋವುತ್ತನ್ನೆ, ಅದೇ ಸ್ಪೀಡಿಲಿ ವೊಪಾಸು ಬಂದು ಹೆರ್ಕಿಯೊಂಬಲಾವ್ತಿತ್ತು. ಪಾಪ ಗೆನಾ ಶಾಲಡ…..
[ಉತ್ತರುಸಿ]
ಹೊತ್ತುವೇಳೆ: 11 August,2012ರ 12:59 PM ಗೆ. (ಒಪ್ಪಸಂಕೊಲೆ)
ಬೋದಾಳಣ್ಣಾ….. ನಿಂಗಳ ಸಂಶಯಕ್ಕೆ ಉತ್ತರಿಸುವಷ್ಟು ಮಂಡೆ ಇಲ್ಲೆ ಎನಗೆ ಎಂತ ಮಾಡುದು ???? ಆದರೂ ಎನ್ನ ಪ್ರಕಾರ ಹೀಂಗೆ ಆದಿಕ್ಕು ಹೇಳಿ ಕಾಣ್ತು…..
೧. “ನಿಲ್ಸು” ಹೇಳಿ ಹೇಳಿದ ಕೂಡ್ಲೇ ನಿಲ್ಸಿದರೆ ಅಷ್ಟು ಸ್ಪೀಡಿಲಿ ಹೋಗ್ಯೊಂಡು ಇದ್ದ ಗಾಡಿ ಮೊಗಚ್ಚದಾ ???? ನಿಧಾನಕ್ಕೆ ಬ್ರೇಕು ಹಾಕೆಡದಾ ????
ಹಾಂಗಾಗಿ ನಿಲ್ಸುವಾಗ ಅಷ್ಟು ದೂರ ಹೋಗಿ ಆಗಿತ್ತು 



೨. ಹೆಚ್ಚಿನಂಶ ಆ ಗಾಡಿಗೆ ‘ಡಿಸ್ಕೋ’ ಬ್ರೇಕು ಇತ್ತಿಲ್ಲೆ
೩. ಅಷ್ಟು ಪೀಡಿಲಿ ಹೊಪಗ ಗಾಳಿ ಶಬ್ದಂದಾಗಿ ಬಾಹುಕಂಗೆ ಋತುಪರ್ಣ “ನಿಲ್ಸು” ಹೇಳಿ ಹೇಳಿದ್ದು ಕೇಳಿರ
೪. ಹಿಂದೆ ಹೋಪಲೆ ಗಾಡಿಗೆ ಲಿವರ್ಸು ಗೇರು ಇದ್ದಿರ
೫. ಹಾಂಗಿಪ್ಪ “ಗೆಣ” ಶಾಲು ಋತುಪರ್ಣನ ಹತ್ತರೆ ತುಂಬಾ ಇತ್ತಡ….. “ಹೋದರೆ ಹೋಗಲಿ” ಹೇಳಿ ಮತ್ತೆ ಎಸ್ಸಿಲೆಟರು ಒತ್ತುಲೆ ಹೇಳಿದ ಅಡ ಋತುಪರ್ಣ
೬. ದಮಯಂತಿಯ ಮರು ಸ್ವಯಂವರಕ್ಕೆ ಮೊದಲೇ ಲೇಟ್ ಆಗಿತ್ತು, ಇನ್ನು ಶಾಲು ಹುಡ್ಕಿಕೊಂಡು ಟೈಮ್ ವೇಸ್ಟ್ ಮಾಡುದು ಬೇಡ ಹೇಳಿ ಹಾಂಗೆ ಮುಂದೆ ಹೋದ್ದಾಯಿಕ್ಕು……
೭. ಲಾಸ್ಟ್ ಪಾಯಿಂಟ್ ಎಂತ ಹೇಳಿರೆ, ಋತುಪರ್ಣ & ಬಾಹುಕ ಇಬ್ಬರಿಂಗೂ ಬೋದಾಳನಷ್ಟು “ಮಂಡೆ” ಇದ್ದಿರ !!!!!!!!!!
[ಉತ್ತರುಸಿ]