ಕಾಣದ್ದ ಕೈ-ಬಾಲಂಗೋಸಿ-ಅಥವಾ ಪಶ್ಚಾತ್ತಾಪ

July 5, 2017 ರ 10:20 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಣದ್ದ ಕೈ-ಬಾಲಂಗೋಸಿ-ಅಥವಾ  ಪಶ್ಚಾತ್ತಾಪಬಡೆಕ್ಕಿಲ ಸರಸ್ವತಿ

ಬಡೆಕ್ಕಿಲ ಸರಸ್ವತಿ ಅತ್ತೆ ಬರದ ಕಾಣದ್ದ ಕೈ ಕಥೆಯ ನಿಂಗೊ ಈ ಮೊದಲು ಓದಿದ್ದಿ. ಅದರ ಮುಂದುವರಿದ ಭಾಗ ಇಲ್ಲಿದ್ದು. ಓದಿ ನಿಂಗಳ ಒಪ್ಪಂಗಳ ಕೊಟ್ಟು ಪ್ರೋತ್ಸಾಹ ಕೊಡಿ.

***

ಈ ಭಯಂಕರ ದುರಂತಲ್ಲಿ ಬದುಕಿದ ಸುಂದರೇಶ, ಸದಾನಂದರ ಮನಃಸ್ಥಿತಿಯ ಊಹೆ ಮಾಡ್ಳೂ ಸಾಧ್ಯ ಆಗ. ಇವು ಇಂಜಿನಿಯರಿಂಗಿಲಿ ಚಿನ್ನದ ಪದಕವನ್ನೇ ಪಡದೊರಾದರೂ ಪ್ರಕೃತಿ, ಜೀವನ ಕಲೆ, ಇವುಗಳಲ್ಲಿ ಕಿಂಡರ್‍ಗಾರ್ಡನ್ ದರ್ಜೆಯೋರು ಹೇಳಿ ಸ್ಪಷ್ಟ ಗೊಂತಾವುತ್ತು. ಕಲ್ಕತ್ತಾ ಖರಗ್ ಪುರಂಗಳಲ್ಲಿ, ನೆರೆ ತೆರೆ ಇಲ್ಲದ್ದ ಸರೋವರದ ಹಾಂಗಿಪ್ಪ ಗಂಗಾನದಿಯ ಹಿನ್ನೀರಿಲಿ ದೋಣಿವಿಹಾರ ಮಾಡಿದ ಹಾಂಗೆ ಹೇಳಿ ಗ್ರೇಶಿದ್ದವು. ಕುದ್ರೋಳಿಯ ಗುರುಪುರ ನೇತ್ರಾವತಿಗೊ ಸಂಗಮ ಆವ್ತಾ ಇಪ್ಪ ಹೊಳೆಗೂ ಗಂಗಾವಿಹಾರಕ್ಕೂ ಅಜಗಜಾಂತರ ಎಂಬ ವಿಷಯದ ಪರಿಜ್ಞಾನ ಅವಕ್ಕೆ ಇರ್ತಿದ್ದರೆ ಇಂಥ ದುಸ್ಸಾಹಸಕ್ಕೆ ಹೋವುತ್ತಿದ್ದವೋ? –ಇನ್ನೊಂದು ಹೊಡೆಲಿ ಅವರವರ ಕ್ಷೇತ್ರಲ್ಲಿ ಬುಧ್ಧಿವಂತರಾಗಿದ್ದ ಸೋದರ ಮಾವಂದ್ರು ಪ್ರಸಿಧ್ಧಿ ಪಡಕ್ಕೊಂಡ ಸರಕಾರೀ ವಕೀಲ ರಾಮರಾಯ ಇವುದೇ ಭೂ, ವಾಯು, ಜಲ ಇವುಗಳ ಪ್ರಕೃತಿ ಸ್ವಭಾವದ ವಿಷಯಲ್ಲಿ ಅನನುಭವಿಗಳೇ ಎಂಬುದು ನಮ್ಮ ಮನಸ್ಸಿಂಗೆ ಕಾಣ್ತು. ಇನ್ನೊಂದು, ಕಾಲಪುರುಷನ ಮಾಯೆಯ ಬಲೆಲಿ ಎಲ್ಲೋರೂ ಮೀನುಗಳೇ ಆಗಿ ಹೋಪದಿದ್ದು. ಇದು ಇನ್ನೂ ಕೆಲವು ಪ್ರಸಂಗಂಗಳಲ್ಲಿ ಅನುಭವಕ್ಕೆ ಬತ್ತು. ಅದಕ್ಕೊಂದು ಉದಾಹರಣೆಯ ಕೊಡ್ತೆ. (ಒಂದು ನಿಮಿಷ-ಎನ್ನ ಪುಳ್ಳಿ “ಎಂತ ಹೀಂಗೆ ದುಃಖದ ಕಥೆ ಹೇಳ್ತೆ” ಹೇಳಿ ಕೇಳ್ತು. ಎಂತ ಮಾಡುದು? ದುಃಖದ ವಿಚಾರಂಗೊ ಮನಸ್ಸಿನ ಮೇಲೆ ಬರೆ ಎಳದ ಹಾಂಗೆ ಶಾಶ್ವತ ಒಳುದು ಹೋವ್ತು, ಮರದೇ ಹೋವ್ತಿಲ್ಲೆ)

ಅಪ್ಪಯ್ಯ ನಾಲ್ಕು ಕೂಸುಗಳಅಪ್ಪ°. ಉಡುಪಿ ಬಸ್‍ಸ್ಟಾಂಡಿಲಿ ಉಪ್ಪಿನಂಗಡಿಗೆ ಹೋಪ ಬಸ್ಸಿಲಿ ಹತ್ತಿ ಕೂಯಿದ°. ಇನ್ನೇನು ಬಸ್ಸು ಹೆರಡಲಾಯಿದು. ಅಷ್ಟಪ್ಪಗ ಅವನ ನೆರೆಕರೆಯ  ಒಬ್ಬ ಕಾರ್ ಡ್ರೈವರ್ ಇವನ ಬಸ್ಸಿಲಿ ನೋಡಿ “ ಬಲೆ ಅಣ್ಣೆರೆ, ಎನ್ನ ಕಾರ್‍ಡ್ ಜಾಗೆ ಉಂಡು, ಬೇಕ ಎತ್ತುಂಡು” ಹೇಳಿ ಅಪ್ಪಯ್ಯನ ಮೇಲಾಣ ಗೌರವ, ಪ್ರೀತಿಂದ ದಿನಿಗೇಳಿತ್ತು. ಇವ° ಒಂದಾರಿ ಬೇಡ ಹೇಳಿದರೂ, ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಬಸ್ಸಿಂದ ಇಳುದು ಕಾರಿಲಿ ಕೂದ°. ಮಾಣಿ ವರೇಗೆ ಕುಶೀಲಿ ಹೋದ°. ರಜ ಮುಂದೆ ಹೋಗಿ ಅಪ್ಪಗಒಂದು ಲಾರಿ ರಭಸಲ್ಲಿ ಬಂದು ಕಾರಿನ ಒಂದು ಹೊಡೆಂಗೆ ಗುದ್ದಿತ್ತು. ಅಪ್ಪಯ್ಯ° ಅಲ್ಲೇ ’ಖಲಾಸ್’! ಎಲ್ಲಾ ಜನ ಸೇರಿದವು ರಜ ಹೊತ್ತಿಲಿ ಅವ° ಹತ್ತಿಕ್ಕಿ ಇಳುದ ಬಸ್ಸೂ ಬಂತು. ಎಂತ ಅನಾಹುತ ನೋಡ್ಳೆ  ಬಸ್ಸಿಂದ ಇಳುದವು. ನೋಡಿದರೆ ಬಸ್ಸಿಂಗೆ ಹತ್ತಿ ಕೂದು ಮತ್ತೆ ಇಳುದು ಕಾರಿಂಗೆ ಹತ್ತಿದೋನೆ!. ಎಲ್ಲೋರ ಕಣ್ಣಿಲಿ ನೀರು. ಆಶ್ಚರ್ಯದ ಸಂಗತಿ ಎಂತ ಹೇಳಿದರೆ, ಕಾರಿಲಿದ್ದ ಒಳುದ ಜೆನಂಗೊಕ್ಕೆ ಒಂದು ಸಣ್ಣ ಗಾಯವೂ ಆಯಿದಿಲ್ಲೆ. ಇದಕ್ಕೆ ಎಂಥ ವ್ಯಾಖ್ಯಾನ ಬರವಲಕ್ಕು? ಯಮರಾಯ ಯಾವ್ಯಾವ ರೂಪಲಿ ಪ್ರತ್ಯಕ್ಷ ಆವುತ್ತಾ ಹೇಳಿ ಆರಿಂಗೂ ಹೇಳುಲೆಡಿಯ. ಇದರಲ್ಲಿ ತಪ್ಪು ಆರಿಂದು? ಪರಮಾತ್ಮನೇ ಹೇಳೆಕ್ಕಷ್ಟೆ

***~~***

ಕಾಣದ್ದ ಕೈ ಇದರ ಮೊದಲಾಣ ಭಾಗ ಇಲ್ಲಿದ್ದು 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಎಂಗಳ ಶಿವರಾಮ ಕಾದುಕೂದೊಂಡು ಇತ್ತಿದ್ದ ಅತ್ತೆ ನಿಂಗಳ ಕತೆಯ ಓದುಲೆ. ಈಗ ಅವಂಗೆ ಕೊಶಿ ಅಕ್ಕು ‌ .ಘಟನಗೆ ಬೇಜಾರ ಅಕ್ಕು.

  [Reply]

  VA:F [1.9.22_1171]
  Rating: 0 (from 0 votes)
 2. ನಿಜ ಘಟನೆ ಓದಿ ಬೇಜಾರಾತು. ನಮ್ಮ ಹಿರಿಯರು ಈಗ ನಾವಿಪ್ಪಷ್ಟು ಅನುಕೂಲಲ್ಲಿ/ಕುಶಿಲಿ ಇತ್ತಿದ್ದವಿಲ್ಲೆ. ಎಕ್ಕಸಕ್ಕ ಬಡತನವುದೇ ದೊಡ್ಡ ಕೂಡು ಕುಟುಂಬವುದೇ.

  [Reply]

  ಪಟ್ಟಾಜೆ ಶಂಕರ ಭಟ್ Reply:

  ಶಿವರಾಮ, ಎಂತ ಕೂಡುಕುಟುಂಬ, ಅನುಕೂಲ ಎಲ್ಲ ಎಲ್ಲಿ ಬಂತು ಇಲ್ಲಿ ?

  [Reply]

  VA:F [1.9.22_1171]
  Rating: 0 (from 0 votes)
 3. ಸಂತೋಷದ ಘಟನೆಗಳನ್ನುದೇ ಬರೆಯಿ ಅತ್ತೆ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅತ್ತೆಯ ಕತೆಗೊ ಇನ್ನು ಬಪ್ಪದರಲ್ಲಿ ಬೇಜಾರು ಸಂಗತಿ ಇಲ್ಲದ್ದ ಹಾಂಗೇ ಇಪ್ಪದು ಇದ್ದು. ರಜಾ ಸಮಯ ಕಾದು ನೋಡಿ

  [Reply]

  VN:F [1.9.22_1171]
  Rating: 0 (from 0 votes)
 4. ನಿಂಗೊ ಅಪ್ಪಯ್ಯ ಹೇಳಿದ್ದು ನಿಂಗಳ ಅಪ್ಪನನ್ನೊ ಹೇಳಿ ಕೆಲವು ಜೆನಕ್ಕೆ ಸಂಶಯ ಬಯಿಂದು ಅತ್ತೆ. ಅಪ್ಪಂಗೆ ಅಪ್ಪಯ್ಯ ಹೇಳುವ ಕ್ರಮ ಇದ್ದು. ಎನಗೆ ಆದರೆ ಗೊಂತಿದ್ದು. ಎಲ್ಲೋರಿಂಗೆ ಗೊಂತಿಲ್ಲೆ. ನಿಂಗೊ ಸಂಶಯ ನಿವಾರಣೆ ಮಾಡುಲಕ್ಕು ಅತ್ತೆ. ಸುರುವಿಂಗೆ ಎನಗೂ ಸಂಶಯ ಬಂತು.

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯಕ್ಕ ನ ಅಭಿಪ್ರಾಯ ಅಥವಾ ಕಥೆ ಬತ್ತಿಲ್ಲೆ. ಎಂತ ವಿಜಯಕ್ಕ ?ಅಭಿಪ್ರಾಯ ದ ಪುಟಲ್ಲಿ ವಿಜಯತ್ತೆ ಹೇಳಿ ಕಾಂಬ ವಿಜಯಕ್ಕ ನ ಅಭಿಪ್ರಾಯ ಏಕೆ ಬತ್ತಿಲ್ಲೆ?

  [Reply]

  ವಿಜಯತ್ತೆ

  ವಿಜಯತ್ತೆ Reply:

  ಇಂಟರ್ನೆಟ್ ಓಪನ್ ಆವುತ್ತಿಲ್ಲೆ ಶಂಕರಣ್ಣಾ, ಎರಡು ದಿನಂದ . ಇಷ್ಟು ಸಿಕ್ಕೆಕ್ಕಾರೆ ಆನು ಎವಾ ಹೊತ್ಹಿಂದ ಕಾದುಕೂಯಿದೆ ಗೊಂತಿದ್ದೋ ಈ ಲೇಕನ ಓದದ್ದೇ ನಿಂಗಳತ್ರೆ ಪಟ್ಟಂಗಾ.

  [Reply]

  VN:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಬಾವ

  ಕಾಣದ್ದ ಕೈ ಒಳ್ಳೆ ತಲೆಬರಹ . ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಗೋಪಾಲ

  ಚೆ. ತುಂಬಾ ಬೇಜಾರಾತು. ಹಣೆ ಬರಹ ಹೇಳಿದರೆ ಇದುವೆ.

  [Reply]

  VA:F [1.9.22_1171]
  Rating: 0 (from 0 votes)
 8. ಪ್ರಸನ್ನಾ ವಿ ಚೆಕ್ಕೆಮನೆ

  ಅತ್ತೆಯ ಕತೆ ಓದಿ ಕಣ್ಣು ತುಂಬಿ ಬಂತು.ಅವರ ಅನುಭವದ ಭಂಡಾರಲ್ಲಿ ಇನ್ನೂದೆ ಎಷ್ಟು ಕತೆಗೊ ಹುಗ್ಗಿ ಕೂದೊಂಡಿದ್ದೋ..ಕಾಯ್ತಾ ಇದ್ದೆ..

  [Reply]

  VA:F [1.9.22_1171]
  Rating: 0 (from 0 votes)
 9. ಶೇಕ್ಸ್ಪಿಯರ್ ನ ದುರಂತ ನಾಟಕದ ಹಾಂಗೆ ಎನ್ನ ಅತ್ತೆ ಬರದ ಘಟನೆಗೊ ದುಃಖದಾಯಕವಾಗಿದ್ದು. ಶೇಕ್ಸ್ಪಿಯರ್ ಂಗೆ ಆದರೆ ಚಾಯ್ಸ್ ಇದ್ದತ್ತು. ಎನ್ನ ಅತ್ತಗೆ ಅದಿಲ್ಲೆ. ಏಕೆ ಹೇದರೆ ಅವು ನೈಜ ಘಟನೆಗೊ.

  [Reply]

  VA:F [1.9.22_1171]
  Rating: 0 (from 0 votes)
 10. ವಿಜಯತ್ತೆ

  ನೈಜ ಘಟನಾವಳಿಗಳ ಎಳೆಗೊ ಬಡೆಕ್ಕಿಲ ಅತ್ತೆಯ ಪತ್ತಾಯಂದ ಬತ್ತ ಉದುರುತ್ತಾಂಗೆ, ಉದುರಲಿ. ನಾವೆಲ್ಲಾ ಎಡಿಗಾಷ್ಟು ಬಾಚಿಗೊಂಬೊಂ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಚೆನ್ನಬೆಟ್ಟಣ್ಣಶ್ರೀಅಕ್ಕ°ಶ್ಯಾಮಣ್ಣಗೋಪಾಲಣ್ಣಪುತ್ತೂರುಬಾವಸಂಪಾದಕ°ಕೆದೂರು ಡಾಕ್ಟ್ರುಬಾವ°ದೊಡ್ಮನೆ ಭಾವಪವನಜಮಾವಡಾಗುಟ್ರಕ್ಕ°ಬಟ್ಟಮಾವ°ಚುಬ್ಬಣ್ಣಮಾಷ್ಟ್ರುಮಾವ°ಮಂಗ್ಳೂರ ಮಾಣಿನೆಗೆಗಾರ°ಬೊಳುಂಬು ಮಾವ°ವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿಜಯಶ್ರೀ ನೀರಮೂಲೆದೊಡ್ಡಭಾವವಾಣಿ ಚಿಕ್ಕಮ್ಮದೇವಸ್ಯ ಮಾಣಿಅನಿತಾ ನರೇಶ್, ಮಂಚಿಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ