ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…(ಭಾಗ-7)

August 16, 2016 ರ 8:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ
ಭಾಗ 6 : ಸಂಕೊಲೆ

ಹಾಂಗೆ ನೋಡ್ಲೆ ಹೋದರೆ ಹರಿಣಿಗಾಗಲೀ ಮೋಹನಂಗಾಗಲೀ ಗುರುಗಳು ಅಪರಿಚಿತರೇ ಅಲ್ಲ. ಮೋಹನನ ಅಬ್ಬೆ ಅಪ್ಪ ಇಪ್ಪಾಗ ಅವಕ್ಕೆ ಶ್ರೀಮಠ ಹೇದರೆ ಭಾರೀ ಪ್ರೀತಿ. ಮೋಹನ ಕಲಿವಿಕೆ, ಕೆಲಸ ಹೇದು ದೂರ ದೂರ ಹೋದ ಕಾರಣ ಅಂವ ಮಠಕ್ಕೆ ಹೆಚ್ಚು ಹತ್ತರೆ ಹೇಳಿ ಆಯಿದಾಂಯಿಲ್ಲೆ. ಅಂದರೆ ಅಂವ ವರ್ಷಕ್ಕೊಂದಾರಿ ಸಂಸಾರ ಸಮೇತ ಗುರುಗಳ ಭೇಟಿಗೆ ಹೋವುತ್ತ ಕ್ರಮ ಇದ್ದು. ಹಿರಿಯರು ಹೇಳಿದ್ದವು, `ನಮ್ಮ ಮೂಲವ ಮರವಲಾಗ’ ಹೇದು. ಹಾಂಗಾಗಿ ಅಂವ ಅದರ ತಪ್ಪುಸುತ್ತಾಂಯಿಲ್ಲೆ. ಗೆಂಡ ಹೋವುತ್ತ ಹೇಳಿ ಹರಿಣಿಯೂ ಸುರಭಿಯ ಕರಕ್ಕೊಂಡು ಮಠಕ್ಕೆ ಹೋವುತ್ತ ಕ್ರಮ ಇದ್ದು. ಅದಕ್ಕಾದ್ರೂ ಅಷ್ಟೆ, ಹಿರಿಯವು ಹೇಳಿದ್ದದ್ರ ಅನುಸರುಸದ್ದೆ ಇಪ್ಪಲಾಗ ಹೇಳ್ತ ಗೌರವ ಭಾವನೆ. ಸುರಭಿ ಹುಟ್ಟಿಯಪ್ಪದ್ದೆ ಹಿರಿಯವು ಮಠಕ್ಕೆ ಹೋಗಿ ಸೇವೆ ಸಲ್ಲುಸೇಕು ಹೇಳಿತ್ತಿದ್ದವು. ಅವರ ಆದೇಶವ ಹರಿಣಿ, ಮೋಹನ ಚಾಚೂ ತಪ್ಪದ್ದೆ ಪಾಲ್ಸಿದ್ದವು. ಮುಂದೆಯೂ ಹಾಂಗೆ, ಸುರಭಿಯ ಅರಂಗೇಟ್ರಂ ಅಪ್ಪ ಮದಲೇ ಮೋಹನನ ಅಬ್ಬೆ `ಇದ ಮಗಾ…,ಮದಾಲು ಒಪ್ಪಕ್ಕನ ಕರಕ್ಕೊಂಡು ಮಠಕ್ಕೆ ಹೋಗಿ ಅಲ್ಲಿ ಒಂದು ಸೇವೆ ಕೊಡ್ಸೇಕು…ಮತ್ತೆಯೇ ಊರವರ ಎದುರು ಡೇನ್ಸು ಮಾಡ್ಸು…’ ಹೇಳಿತ್ತಿದ್ದು. ಆ ಸಮಯಲ್ಲಿ ಗುರುಗಳು ಸವಾರಿಲಿ ಇತ್ತಿದ್ದವು. ವಿದ್ಯಾಪೀಠಕ್ಕೆ ಗುರುಗಳು ಬತ್ತಾ ಇದ್ದವು ಹೇಳಿ ಗೊಂತಾಗಿ ಈಶ್ವರಿ ಅಕ್ಕನ ಹತ್ರೆ ಮಾತಾಡಿಯಪ್ಪಗ ಅಲ್ಲಿಯಾಣ ಕಾರ್ಯಕ್ರಮದ ಎಡೇಲಿ ಸುರಭಿಯ ನೃತ್ಯಕ್ಕೂ ಅವಕಾಶ ಸಿಕ್ಕಿತ್ತಿದ್ದು. ಬಾಲ ಪ್ರತಿಭೆಯ ಗುರುಗಳು ಎಷ್ಟು ಕೊಂಡಾಡಿದ್ದವು ಹೇಳಿ ಇಲ್ಲೆ. ನವರತ್ನದ ಮಣಿಹಾರವ ಕೂಸಿನ ಕೊರಳಿಂಗೆ ಹಾಕಿ ಹರಸಿ ಕೊಟ್ಟ ಮಂತ್ರಾಕ್ಷತೆಯ ನೆನಪು ಅವಕ್ಕೆ ಇಂದಿಂಗೂ ಇದ್ದು. ಹಾಂಗೆ ಹೇಳಿ ಹರಿಣಿಗಾಗಲೀ ಮೋಹನಂಗಾಗಲೀ ಮಠ, ಗುರುಗಳು ಹೇಳಿದ್ರೆ ಅವರ ಹಿರಿಯರಿಂಗಿತ್ತಿದ್ದ ಹಾಂಗೆ ಭಾವನಾತ್ಮಕ ನೆಚ್ಚಿಕೆ ಇಲ್ಲೆ ಹೇಳಿಯೇ ಹೇಳ್ಲಕ್ಕು. ದೇವಸ್ಥಾನ, ದೇವರು, ಪೂಜೆ….,ಈ ಎಲ್ಲ ವಿಷಯಂಗಳ ಹಾಂಗೆಯೇ ಮಠ, ಗುರುಗಳು ಹೇಳಿಯರೂ…,ಹೋಯೇಕು, ಅಡ್ಡಬೀಳೇಕು, ಬರೇಕು….ಎಂತಾರೂ ಕಷ್ಟದ ಸಮಯಲ್ಲಿ ನಂಬಿಯೋಂಡ್ರೆ ಒಳ್ಳೇದಾವುತ್ತು ಹೇಳಿ ಹಿರಿಯವು ಹೇಳಿದ್ದವು. ಹಾಂಗೆ ಇವು ನಂಬುತ್ತಾ ಇದ್ದವು. ಇದು ಇಷ್ಟ್ರವರೆಗಾಣ ಮೋಹನ, ಹರಿಣಿಯ ಮನಸ್ಥಿತಿ.

ಅಂದರೆ ಇಂದು…? ಎಷ್ಟೋ ವರ್ಷಂದ ಗುರುಗಳ ಪಟ ಆ ಗೋಡೇಲೇ ಇದ್ದು. ಇದುವರೆಂಗೂ ಹರಿಣಿ ಎಷ್ಟೋ ಸಾವಿರ ಸತರ್ಿ ಆ ಹೊಡೇಂಗೆ ನೋಡಿಕ್ಕು, ಪಟಂಗಳ ಮೇಗೆ ಧೂಳು ಕೂದಪ್ಪಗೆಲ್ಲ ಚೆಂಡಿ ವಸ್ತ್ರಲ್ಲಿ ಎಷ್ಟು ಸತರ್ಿ ಉದ್ದಿದ್ದೋ ಏನೋ…? ಒಂದೇ ಒಂದ್ಸತರ್ಿಯೂದೆ ಹೀಂಗಿರ್ತ ಒಂದು ಅನುಭವ ಅದಕ್ಕೆ ಆಯಿದೇ ಇಲ್ಲೆ. ಬೈಲಿನ ಪ್ರಿಯ ನೆಂಟ್ರೇ.., ಅತಿರಸ ಹೇಳ್ತ ಒಂದು ಸ್ವಾದಿಷ್ಟ ತಿಂಡಿ ಇದ್ದಲ್ದೋ? ಅದರ ಬಗ್ಗೆ ಹೇಳ್ತರೆ ನಿತ್ಯಕ್ಕೆ ನಮ್ಮೆಲ್ಲೋರ ಮೆನೆಲಿಯೂ ಬೆಣ್ತೆಕ್ಕಿ, ಬೆಲ್ಲ, ಕಾಯಿ, ಎಣ್ಣೆ ಎಲ್ಲವೂ ಇತರ್ು. ಅಂದರೆ ಅದು ಅತಿರಸ ಅಲ್ಲನ್ನೇ…? ಅತಿರಸ ಆಯೇಕಾದ್ರೆ ಪ್ರತಿ ವಸ್ತುವೂ ನಿಧರ್ಿಷ್ಟ ಪ್ರಮಾಣಲ್ಲಿ ಒಟ್ಟು ಸೇರೇಕು, ಅಕ್ಕಿಯ ಹದವಾಗಿ ಹೊಡಿ ಮಾಡೇಕು, ಬೆಲ್ಲದ ಪಾಕವೂ ಹಾಳಿತ ಇರೇಕು. ಅದು ಹೆಚ್ಚಾತೋ ಅತಿರಸ ಎಣ್ಣೆಗೆ ಹಾಕುವಾಗಳೇ ಪೊಡಿ ಪೊಡಿ…ಪಾಕ ಕಡಮ್ಮೆ ಆತೋ ಮುದ್ದೆ….ಎಣ್ಣೆಯೂ ಅಷ್ಟೆ, ಹೊಸಾ ಎಣ್ಣೆ ಆಯೇಕು, ಒಂದೆರಡು ಸತರ್ಿ ಉಪಯೋಗ್ಸಿದ್ದಾದರೆ ಅತಿರಸ ಕೆಸಂಟುಗು…,ಕಷ್ಟ ಬಂದು ಮಾಡಿದ ಅತಿರಸದ ರುಚಿ ಗೊಂತಿಪ್ಪವಕ್ಕೇ ಗೊಂತು. ಅದೇ ರೀತಿ ಹರಿಣಿಗೂ….ಮಠಕ್ಕೂ ಹೋಗಿಯೊಂಡೊತ್ತಿದ್ದು, ಗುರುಗಳ ಪಟವೂ ಎಷ್ಟೋ ವರ್ಷಂದ ಕಣ್ಣೆದುರೇ ಇತ್ತಿದ್ದು. ಅಂದರೆ ಇಂದು ಇಂತಾದ್ದೇ ಹೇಳಿ ಹೇಳ್ಲೆ ಎಡಿಯದ್ದಂತಾ ಬೇನೆ ಮನಸ್ಸಿಲ್ಲಿ ತುಂಬಿಯೊಂಡಿಪ್ಪಾಗ ಅದು ಗುರುಗಳ ನೋಡಿದ ದೃಷ್ಟಿ ಬೇರೆ ಆಗಿ ಹೋತು. ಅತಿರಸ ಮಾಡ್ಲೆ ಮನಸ್ಸು ಮಾಡಿತ್ತು. ಗುರುಗಳೇ ಹೇಳಿದ ಹಾಂಗೆ ಸಂಸಾರಲ್ಲಿ ಕಷ್ಟ ಬಂದಪ್ಪಗ ಸಂಸ್ಕಾರ ಬಂತು. ಗುರು ದೃಷ್ಟಿ ಹೇಳ್ತ ಅತಿರಸ ಹರಿಣಿಯ ಹೃದಯದ ಬಾಯಿಗೆ ಬಿದ್ದತ್ತು. ಹೇಂಗಿದ್ದ ಮನುಷ್ಯನೇ ಆದ್ರೂ ಅವನ ಮನಸ್ತಿತಿ, ಅಂವ ಜೀವನವ ನೋಡ್ತ ದೃಷ್ಟಿಕೋನ ಇದೆಲ್ಲ ಅವರವರ ಕೌಟುಂಬಿಕ ಹಿನ್ನೆಲೆ, ಜೀವನದ ಅನುಭವಂಗೊ, ಪರಿಸರ ಇತ್ಯಾದಿಗಳ ಹೊಂದಿಯೊಂಡು ಬದಲಾವುತ್ತಾ ಇರ್ತಲ್ಲದೋ? ಅಂದರೆ ಹಾಂಗಿದ್ದ ಬದಲಾವಣೆ ಇಂದಿಂದ ನಾಳಂಗಂಗೆ ಆಗ. ರಜ್ಜ ಸಮಯ ತೆಕ್ಕೋಂಗು. ಬದಲಾವಣೆಯ ಬಗೆಗಿಪ್ಪ ಚಿಂತನೆ…,ಗುರುಗಳೇ ಹೇಳಿದ ಹಾಂಗೆ,`ನಾನೇಕೆ ಹೀಗೆ?’ ಹೇಳ್ತ ಪ್ರಶ್ನೆ ಅಂತರಾಳಂದ ಮೂಡಿ ಬತ್ತಲ್ದೋ? ಅದುವೇ ಮುಂದಾಣ ಜೀವನಕ್ಕೆ ದಾರಿದೀಪವೂ ಅಪ್ಪು. ಹರಿಣಿಯ ವಿಷಯಲ್ಲಿಯೂ ಆದ್ದದು ಅದುವೇ. ಇಷ್ಟ್ರವರೆಂಗೆ ಅದು ಊರವರ ಕಣ್ಣಿಂಗೆ ಕುತ್ತುವ ಹಾಂಗೆ ಬದ್ಕೇಕು ಹೇಳ್ತ ಒಂದೇ ಯೋಚನೆಯ ಪೋಷಿಸಿಯೊಂಡು ಅದಕ್ಕೆ ತಕ್ಕ ಹಾಂಗೆ ಜೀವನವ ರೂಪಿಸಿದೋಳು. ಯೇವಾಗ ಮಗಳು ಅಬ್ಬೆಯ ಧಿಕ್ಕರಿಸಿ ಮಾತಾಡ್ಲೆ ಸುರುಮಾಡಿತ್ತೋ ಅಂಬಗಳೇ ಹರಿಣಿಯೊಳ ಎಂತೋ ಒಂದು ವಿಧದ ಪ್ರಶ್ನೆ, ಚಿಂತನೆ ಸುರುವಾಗಿತ್ತಿದ್ದು. ಅಂದರೆ ಇಂದಿಂಗೆವರೆಂಗೂ ಅದರ ಮೆನಸ್ತಿತಿ ಹೇಂಗಿತ್ತಿದ್ದು ಹೇದರೆ ಕುಂಞಿ ಬಾಬೆ ಅಬ್ಬೆಯ ಎಲ್ಲಿಯೂ ಕಾಣದ್ದಿಪ್ಪಾಗ ಕಸ್ತಲೆ ಕೋಣೆಲಿಯಾದ್ರೂ ಇಕ್ಕೇನೋ ಹೇಳಿ ಹುಡ್ಕುತ್ತ ಹಾಂಗೆ ಇದಮಿತ್ಥಂ ಹೇಳಿ ಅರಡಿಯದ್ದೆ ಪರಡಿಯೊಂಡೇ ಇದ್ದತ್ತು. ಯೇವಾಗ ಗುರುಗಳ ದೃಷ್ಟಿಯ ಅದು ಅರ್ಥಮಾಡಿಯೊಂಡತ್ತೋ ಬಾಬೆಗೆ ಅಬ್ಬೆ ಸಿಕ್ಕಿದ ಹಾಂಗಾತು.

ಮೋಹನನ ಫೋನು ಬಂತು. ಎಂತರ ಹೇದರೆ ಬ್ಯಾಂಕಿಂಗೆ ಮೋಸ ಮಾಡಿದ ಕಳ್ಳಂಗೊ ಸಿಕ್ಕಿ ಬಿದ್ದಿದವು, ಅವರಿಂದಾಗಿ ಬ್ಯಾಂಕು ವಹಿವಾಟಿಲ್ಲಿ ತಟಪಟ ಆದ್ದದ್ರ ಸರಿಮಾಡ್ಲೇಬೇಕಾಗಿಪ್ಪ ಮಾತುಕತೆಗೊ ನಡೆತ್ತಾ ಇದ್ದು, ಹಾಂಗಾಗಿ ಇನ್ನೂ ಒಂದೆರಡು ದಿನ ಬೆಂಗ್ಳೂರಿಲ್ಲೇ ನಿಲ್ಲೇಕಾಗಿ ಬಕ್ಕು. ಹಾಂಗಾದ ಕಾರಣ ಹರಿಣಿ ಬೆಂಗ್ಳೂರಿಂಗೆ ಬಂದರೆ ಅಲ್ಲಿಂದಲೇ ಇಬ್ರೂದೆ ಒಟ್ಟಿಂಗೆ ಮೈಸೂರಿಂಗೆ ಹೋಗಿ ಸುರಭಿಯ ಕಾರ್ಯಕ್ರಮ ನೋಡಿಕ್ಕಿಯೇ ಬಪ್ಪಲಕ್ಕು ಹೇಳ್ತದು ಅವನ ಮಾತಿನ ಸಾರಾಂಶ. ಹರಿಣಿ ಮರುದಿನವೇ ಬೆಂಗ್ಳೂರಿಂಗೆ ಹೋತು. ಮೈಸೂರಿಲ್ಲಿ ಕಾರ್ಯಕ್ರಮ ಎಲ್ಲ ಗಡದ್ದಾಗಿ ಕಳುದತ್ತು. ಟಿ.ವಿ ವಾಹಿನಿಗೊ `ಅರಳು ಪ್ರತಿಭೆ’ ಹೇದು ಸುರಭಿಯ ಕೊಂಡಾಡಿದವು, ಸಂದರ್ಶನ ನಡೆಸಿದವು, ಅಲ್ಲಿ ಹರಿಣಿ, ಮೋಹನಂಗೂ ಪ್ರಾಮುಖ್ಯತೆ ಬಂತು. ಬ್ಯಾಂಕಿನ ಕೆಲಸದ ಒತ್ತಡ, ಮತ್ತೀಗ ಈ ಜೆನಸಂದಣಿ, ಪುನಃ ಪುನಃ ಟಿ.ವಿ.ಯವು ಕೇಳ್ತ ಅದೇ ಪ್ರಶ್ನೆಗೋ, ಸುರಭಿಯ ಸುತ್ತು ಹಾಕುತ್ತ ಅಭಿಮಾನಿಗೊ, ಅವರಿಂದ ತಪ್ಪುಸಿಯೋಂಬಲೆ ಹೊಣೆತ್ತದು….ಇಷ್ಟೆಲ್ಲ ಆಗಿಯಪ್ಪಗ ಮೋಹನ ಸೋತು ಸುಣ್ಣ ಆಗಿ ಹೋದ. ಒಂದಾರಿ ಮನೆಗೆ ಎತ್ತಿ ಕಾಲು ನೀಡಿ ಕೂದರೆ ಸಾಕು ಹೇದು ಕಂಡತ್ತವಂಗೆ. ಕಾರ್ಯಕ್ರಮ ಮುಗುದಪ್ಪದ್ದೆ ಹೆರಡ್ಲೆ ಅಂಬ್ರೇಪ್ಪು ಮಾಡಿದ. ಸುರಭಿಗೆ ಹಾಂಗೆ ತಟಕ್ಕನೆ ಹೆರಡ್ಲೆಡಿಗೋ? ಮೇಡಮ್ಮಿನೊಟ್ಟಿಂಗೇ ಬತ್ತೆ ನಿಂಗೊ ಹೋಗಿ ಹೇದು ಸುರಭಿ ಗಂಗಮ್ಮತ್ತೆಯನ್ನೂ ಹರಿಣಿ, ಮೋಹನನೊಟ್ಟಿಂಗೆ ಕಳ್ಸಿಕೊಟ್ಟತ್ತು. ಮಗಳಿಂಗೆ ದೃಷ್ಟಿ ತೆಗೇಕಾತು ಹೇಳಿ ಹರಿಣಿಗೆ ಕಂಡ್ರೂ ಅಲ್ಲಿ ಅದಕ್ಕೆಲ್ಲ ಸೌಕರ್ಯ ಎಲ್ಲಿದ್ದು? ಹೆಚ್ಚೊತ್ತು ನಿಂಬಲೆ ಮೋಹನಂಗೆ ಮನಸ್ಸೂ ಇಲ್ಲೆ. ಹಾಂಗೆ ಹರಿಣಿಯೂ ಮೋಹನನೂ ಊರಿಂಗೆ ಹೆರಟವು.

ಈ ನಾಕು ದಿನಲ್ಲಿ ಮೋಹನ ಒಳ್ಳೇತ ಕಂಗಾಲು ಆದ ಹಾಂಗೆ ಕಂಡತ್ತು ಹರಿಣಿಗೆ. ಮೋಹನ ಸ್ವಭಾವತಃ ಬಹಳ ಸಾಧು ಜೆನ. ಹಗುರ ಮನಸ್ಸಿನವ. ನಿತ್ಯಾಣ ಜೀವನಕ್ಕೆ ಒಂದು ರಜ್ಜ ಹೆಚ್ಚು ಒತ್ತಡ ಬಿದ್ದತ್ತು ಹೇದರೆ ಮತ್ತೆ ಅಂವ ಕೈಕ್ಕಾಲು ಬಿಡ್ತದೆ. ಅವನ ವೃತ್ತಿಲಿ ಇದುವರೆಂಗೂ ಒಂದೇ ಒಂದು ಕಪ್ಪು ಚುಕ್ಕೆ ಬಾರದ್ದ ಹಾಂಗೆ ಅಂವ ಎಲ್ಲವನ್ನೂ ನೆಡಶಿಯೊಂಡು ಹೋಯಿದ. ನಿವೃತ್ತಿಗೆ ಹತ್ತರೆ ಇಪ್ಪಾಗ ಬ್ಯಾಂಕಿಲ್ಲಿ ಹೀಂಗೊಂದು ಹಗರಣ ಆದ್ದದು ಅವಂಗೊಂದು ದೊಡ್ಡ ಆಘಾತದ ಹಾಂಗೆ ಆಯಿದು ಹೇಳಿ ಹರಿಣಿಗೆ ಅಂದಾಜಾಯಿದು. ಅವನ ಮೃದು ಸ್ವಭಾವ ಹರಿಣಿಗೆ ಸರಿಯಾಗಿ ಗೊಂತಿಪ್ಪ ಕಾರಣವೇ ಈಗ ಕೆಲವು ಸಮಯಂದ ಸುರಭಿಯ ನಡತೆಲಿ ಆದ ಬದಲಾವಣೆಯ ಹರಿಣಿ ಗೆಂಡನ ಗಮನಕ್ಕೆ ತಾರದ್ದದು. ಮಗಳಿಂಗೆ ಒಂದ್ರಜ್ಜ ಜ್ವರ ಬಂತು ಹೇದರೇ ಅಂವ ಆಪೀಸಿಂದ ನಾಕು ಸತರ್ಿ ಫೋನು ಮಾಡಿ ಈಗ ಹೇಂಗಿದ್ದು ಹೇದು ಕೇಳುಗು. ಹಾಂಗಿದ್ದಲ್ಲಿ ಅದು ಆ ನಮೂನೆ ಎಲ್ಲ ಮಾತಾಡಿದ್ದು ಹೇದರೆ ಅವಂಗೆ ಸೈಸಲೆ ಎಡಿಗೋ? ಸಾಲದ್ದಕ್ಕೆ ಬಿ.ಪಿ. ಯೂ ಇದ್ದು. ಬ್ಯಾಂಕಿಲ್ಲಿ ಆದ ಹಗರಣಂದಾಗಿ ಅಂವ ಎಷ್ಟು ಜಗ್ಗಿ ಹೋಯಿದ ಹೇದರೆ ಈಗ ನೋಡಿರೆ ಅಂವನ ಪ್ರಾಯಕ್ಕೆ ಹತ್ತು ವರ್ಷ ಕೂಡಿದ ಹಾಂಗೆ ಕಾಣ್ತು. ಮದಲೇ ಹರಿಣಿ ಅವನ ಮನಸ್ಸಿಂಗೆ ಬೇಜಾರಾವುತ್ತಾಂಗಿದ್ದ ಮಾತುಗಳ ಹೇಳ. ಇನ್ನಂತೂ ಅಂವನ ಬಗ್ಗೆ ತುಂಬಾ ಕಾಳಜಿ ತೆಕ್ಕೋಳೇಕು ಹೇಳಿ ಜಾನ್ಸಿಯೋಂಡತ್ತು.

“ಹರಿಣೀ…,ಸುರಭಿ ಇಂದೂ ಎತ್ತಿದ್ದಿಲ್ಲ್ಯಾ…?” ಕೇಳಿಯೊಂಡೇ ಮೋಹನ ಕಸ್ತಲಪ್ಪಗ ಮನೆಯೊಳ ಪ್ರವೇಶಿಸಿದ. ನಿನ್ನೆಯೇ ಎತ್ತೇಕಾದ ಸುರಭಿ ಇಂದೂ ಎತ್ತಿದ್ದಿಲ್ಲೆ ಹೇಳಿ ಅವಂಗೆ ರಜ್ಜ ಮಂಡೆಬೆಶಿ ಆತು.

“ಇಲ್ಲೆ ಅದು ಆಗ ಫೋನು ಮಾಡಿತ್ತಿದ್ದು. ಕಾರ್ಯಕ್ರಮ ಭಾರೀ ಯಶಸ್ಸಾದ ಲೆಕ್ಕಲ್ಲಿ ಮೈಸೂರಿಲ್ಲಿ ಆರೋ ದೊಡ್ಡ ಮನುಷ್ಯರ ಸಂಸ್ಥೆಲಿ ಇವರ ಬಳಗಕ್ಕೆ ಸಮ್ಮಾನ ಎಲ್ಲ ಇದ್ದಾಡ. ಅದರ ಕಳಿಶಿಯೊಂಡೇ ಬತ್ತೆ ಹೇಳಿದ್ದು” ಹರಿಣಿ ಸಮಾಧಾನಲ್ಲೇ ಹೇಳಿತ್ತು. ಮುಂದೆ ಎರಡು ದಿನ ಆದ್ರೂ ಸುರಭಿಬತ್ತದು ಕಾಣದ್ದಿಪ್ಪಾಗ ಹರಿಣಿಗೂ ಬಲದ ಕಣ್ಣು ಅದುರಲೆ ಸುರುವಾತು. ಅಂದರೆ ದಿನಾಗ್ಳೂ ಅದು ಫೋನಿಲ್ಲಿ ಮಾತಾಡಿಯೊಂಡಿತ್ತಿದ್ದು, ಇಂದು ಅಲ್ಲಿ ಆ ಕಾರ್ಯಕ್ರಮ, ನಾಳೆ ಇನ್ನೊಂದು ಕಡೆಲಿ ಇದ್ದು ಹೇಳೆಯೆಲ್ಲ….

ಹರಿಣಿ ಹರೇ ರಾಮ ಜಾಲ ತಾಣಲ್ಲಿ ಗುರುಗಳ ಪ್ರವಚನ ಕೇಳಿಯೊಂಡಿತ್ತಿದ್ದು. ಈಗೀಗ ಹರಿಣಿಯ ಬಿಡುವಿನ ಸಮಯದ ಚಟುವಟಿಕೆ ಹೇಳಿದ್ರೆ ಗುರುಗಳ ಪ್ರವಚನಂಗಳ ಶ್ರದ್ಧೆಂದ ಕೇಳ್ತದು. ಮದಲೆಲ್ಲ ಫೇಸ್ ಬುಕ್ಕಿನ ಲೋಕಲ್ಲಿ ಮೈಮರಕ್ಕೊಂಡಿತ್ತಿದ್ದ ಹರಿಣಿಗೆ ಈಗ ಅದರಲ್ಲಿ ಯೇವ ಆಕರ್ಷಣೆಯೂ ಇಲ್ಲೆ. ಅದರ ಆದ್ಯತೆ ಹರೇರಾಮ ಜಾಲತಾಣಕ್ಕೆ ಬದಲಾದ ಹಾಂಗೇ ಅದರ ಮನಸ್ಸೂದೆ ಪಕ್ವತೆ ಕಡೆಂಗೆ ಮಾಲಲೆ ಸುರುವಾತು. `ಮನಸ್ಸಿನಲ್ಲಿ ಅರಿವಿನ, ಸುಜ್ಞಾನದ ಪೂರ್ಣತೆ ತುಂಬಬೇಕಾದ್ರೆ ಮೊದಲು ಆ ಮನಸ್ಸು ಖಾಲಿ ಆಗಬೇಕು, ರಾಗ, ದ್ವೇಷ, ಭಾವಗಳು ಇಂಗಿ ಹೋಗಬೇಕು. ಹೊಟ್ಟೆ ಖಾಲಿಯಾದರೆ ತಾನೇ ಹಸಿವಿನ ಅರಿವಾಗುವುದು? ಅದೇ ರೀತಿ ಮನಸ್ಸಿನಲ್ಲಿ ಶೂನ್ಯತೆ ತುಂಬಬೇಕು, ಹಾಗಾದರೆ ಮಾತ್ರವೇ ಜ್ಞಾನದ ಪೂರ್ಣತೆಯನ್ನು ತುಂಬಲು ಸಾಧ್ಯ….’ ಗುರುಗಳ ಮಾತುಗಳ ಮನಸ್ಸಿಲ್ಲೇ ಮತ್ತೆ ಮತ್ತೆ ಮನನ ಮಾಡಿಯೊಂಡು ಇದ್ದ ಹಾಂಗೇ ಫೋನಿನ ಘಂಟೆ ಮೊಳಗಿತ್ತು.

ಸುರಭಿಯ ಕರೆ.

“ಅಬ್ಬೇ, ಆನು ಫೋನು ಮಾಡಿದ್ದು ಎಂತಕೆ ಹೇಳಿದ್ರೆ ಆನು ಆದಿತ್ಯ ಹೇಳುವ ಹುಡುಗನ ನಿನ್ನೆ ಮದುವೆ ಆಯಿದೆ….,ಅಂವ ಇಲ್ಲೇ ಬೆಂಗ್ಳೂರಿಲ್ಲಿ ಒಳ್ಳೆ ಕಂಪೆನಿಯೊಂದ್ರಲ್ಲಿ ಇಂಜಿನಿಯರಾಗಿದ್ದ. ಕೋಲ್ಕೊತ್ತದಂವ…,ಫೇಸ್ ಬುಕ್ಕಿಲ್ಲಿ ಎನ್ನ ಅಭಿಮಾನಿಯಾಗಿತ್ತಿದ್ದ. ಎಲ್ಲಾ ವಿಧಲ್ಲಿಯೂ ಎನಗೆ ಅಂವನೇ ಸರಿ ಅಕ್ಕಷ್ಟೆ ಹೇಳಿ ಕಂಡತ್ತು. ಇನ್ನು ಮುಂದೆಯೂ ಅಂವ ಎನ್ನ ನೃತ್ಯ ಕಲೆಗೆ ನಿರಂತರ ಪ್ರೋತ್ಸಾಹ ಕೊಡುವೆ ಹೇಳಿದ್ದ…,ಇಲ್ಲೇ ಅಂವ ಮನೆಯೂ ಮಾಡಿದ್ದ…,ಅಪ್ಪನತ್ರೆ ನೀನೇ ಹೇಳಿಕ್ಕು ಅಬ್ಬೆ ಆತೋ…?”ಸೋಣೇ ತಿಂಗಳಿಲ್ಲಿ ಬತ್ತ ಮಳೆಯ ಹಾಂಗೆ ಒಂದೇ ಪೆಟ್ಟಿಂಗೆ ಬರ್ರೋ ಹೇಳಿ ಮಾತಾಡಿ ನಿಲ್ಸಿದ ಸುರಭಿ ಅಬ್ಬೆಯ ಉತ್ತರಕ್ಕೆ ಕಾದತ್ತು.

 

(ಇನ್ನೂ ಇದ್ದು)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಆದಾ, ಗ್ರೇಶಿದ ಹಾಂಗೇ ಆತದ.
  ಅಲ್ಲ, ಹರಿಣಿಗೆ ಕೆಟ್ಟ ಕನಸೆಂತಾದರು ಬಿದ್ದದಾಯ್ಕ ಹೇಂಗೆ ?

  [Reply]

  ಶೀಲಾಲಕ್ಷ್ಮೀ ಕಾಸರಗೋಡು

  ಶೀಲಾಲಕ್ಷ್ಮೀ ಕಾಸರಗೋಡು Reply:

  ನೋಡುವೊ ಗೋಪಾಲಣ್ಣ, ಅದು ಕನಸೋ ನನಸೋ ಹೇದು….ಮಂಗಳವಾರ.

  [Reply]

  VN:F [1.9.22_1171]
  Rating: 0 (from 0 votes)
 2. ಅಲ್ಲಿ ನೇರ್ಪಕೆ ಇದ್ದರೆ ತೊಂದರೆ ಇಲ್ಲೇ. ತೊಂದರೆ ಆಗಿ ವಾಪಸು ಅಪ್ಪನ ಮನಗೆ ಬಂದು ಅವು ಸೇರ್ಸದ್ರೆ ಟ್ರಾಜಿಡಿ ಅಕ್ಕು.

  [Reply]

  ಶೀಲಾಲಕ್ಷ್ಮೀ ಕಾಸರಗೋಡು

  ಶೀಲಾಲಕ್ಷ್ಮೀ ಕಾಸರಗೋಡು Reply:

  ನೋಡುವೊ ಶಿವರಾಮಣ್ಣ ಎಂತೆಲ್ಲ ಆವುತ್ತು ಹೇದು…

  [Reply]

  VN:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಶೀಲಾ, ಈ ಕತೆಯ ಇಷ್ಟರವರೆಗಿನ ಸಂಕೋಲೆಲಿ ಈ ಸರ್ತಿಯ ಶ್ಯೆಲಿ, ಕತೆಯ ಓಘ , ಬಹು ಚೊಕ್ಕ ಆಯಿದಾತೊ. ಆದರೆ…., ಇಷ್ಟು ಪಕ್ಕನೆ ಅದು ಮದುವೆಯೂ ಆದೆ ಹೇಳಿದ್ದು ರೆಜಾ ..ಅಂಬ್ರೇಪಾತೋ ಹೇಳಿ..(ಫ್ರೆಂಡಿನ ಗುರ್ತ, ಅವನತ್ರೆ ಪ್ರೀತಿಯ ಮುಚ್ಚಟೆ, ಹೀಂಗೆಲ್ಲಾ ಅದು ಅಪ್ಪನತ್ರೋ ಅಬ್ಬೆತ್ರೋ ತೋರ್ಸಿಕ್ಕಿ ಅವ್ರ ವಿರೋಧ ಇದ್ದರೆ; ತಾನೇ ಮತ್ತೆ ಮದುವೆ ಅಪ್ಪಲಾವುತಿತದಕ್ಕೆ !!.)

  [Reply]

  ಶೀಲಾಲಕ್ಷ್ಮೀ ಕಾಸರಗೋಡು

  ಶೀಲಾಲಕ್ಷ್ಮೀ ಕಾಸರಗೋಡು Reply:

  ಹರೇ ರಾಮ ವಿಜಯಕ್ಕ, ಮಠಕ್ಕೆ ಹೋಗಿತ್ತಿದ್ದೆ. ಹಾಂಗೆ ಬೈಲಿಂಗೆ ಎರಡು ದಿನಂದ ಬಪ್ಪಲಾಯಿದಿಲ್ಲೆ. ಈಗ ನೋಡಿದೆ ಇದ ನಿಂಗೊ ಬರದ್ದರ…. ಧನ್ಯವಾದಂಗೊ ನಿಂಗಳ ಪ್ರೋತ್ಸಾಹಕರ ನುಡಿಗೊಕ್ಕೆ. ಮತ್ತೇ ನಿಂಗಳ ಅದೇ ಸಂದೇಹವ ಬೇರೆ ಓದುಗರೂ ವ್ಯಕ್ತ ಪಡಿಸಿದ್ದವು. ಅದಕ್ಕೆ ಸ್ಪಷ್ಟನೆ ಮುಂದಾಣ ಕಂತುಗಳಲ್ಲಿ ಸಿಕ್ಕುಗು. ರಜ್ಜ ಕಾಯುವಿರಾಲ್ಡೋ…?

  [Reply]

  VN:F [1.9.22_1171]
  Rating: 0 (from 0 votes)
 4. Gajanan hegde

  ರಾಶಿ ಚಲೊಯಿದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಲಾಯಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  S.K.Gopalakrishna Bhat

  ಕತೆಯ ವಿಮರ್ಶಾತ್ಮಕ ದೃಷ್ಟಿಲಿ ನೋಡುತ್ತರೆ ಇದರಲ್ಲಿ ಭಕ್ತಿಯ ವಿಷಯ ಸೇರುಸದ್ದರೂ ಆವುತ್ತಿತ್ತು .

  [Reply]

  VA:F [1.9.22_1171]
  Rating: 0 (from 0 votes)
 7. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಸಲಹೆಗೆ ಧನ್ಯವಾದಂಗೊ ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 8. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಮುಂದೆ ಓದುತ್ತಾ ಓದುತ್ತಾ ನಿಂಗಳ ಅಭಿಪ್ರಾಯಲ್ಲಿ ಬದಲಾವಣೆ ಬಂದ್ರೆ ಒಂದು ಗೆರೆ ಬರದು ತಿಳುಸುವಿರಾಲ್ಡೋ ಗೋಪಾಲಣ್ಣ….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಬಟ್ಟಮಾವ°ಮಾಷ್ಟ್ರುಮಾವ°ಶೀಲಾಲಕ್ಷ್ಮೀ ಕಾಸರಗೋಡುಪುತ್ತೂರಿನ ಪುಟ್ಟಕ್ಕಬೋಸ ಬಾವದೊಡ್ಮನೆ ಭಾವವೇಣೂರಣ್ಣಮಾಲಕ್ಕ°ಅಕ್ಷರದಣ್ಣಕೇಜಿಮಾವ°ಮಂಗ್ಳೂರ ಮಾಣಿದೊಡ್ಡಭಾವವಿದ್ವಾನಣ್ಣಚುಬ್ಬಣ್ಣಡೈಮಂಡು ಭಾವಗೋಪಾಲಣ್ಣರಾಜಣ್ಣಶ್ರೀಅಕ್ಕ°ಅನಿತಾ ನರೇಶ್, ಮಂಚಿಅಜ್ಜಕಾನ ಭಾವಪೆಂಗಣ್ಣ°ವಸಂತರಾಜ್ ಹಳೆಮನೆಪುಣಚ ಡಾಕ್ಟ್ರುಕಳಾಯಿ ಗೀತತ್ತೆದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ