ಮತ್ತೆ ಉದಿ ಆತು

February 8, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆ ದಿನ ಏವತ್ರಾಣ ಹಾಂಗೆ ಉದಿ ಆತು.
ಆದರೆ ಆ ವಟಾರ ಏವತ್ರಾಣ ಹಾಂಗೆ ಇತ್ತಿಲ್ಲೆ.

ಏವಾಗಳೂ ಬೆಣಚ್ಚಿ ಬಿಡೆಕಾರೆ ಎದ್ದು ನಡುಗುತ್ತ ಕೈ ಬೆರಳಿಂದ ತುಂಗಮ್ಮಜ್ಜಿ ಹೊಸ್ತಿಲಿಂಗೆ ಸೇಡಿಬರೆ ಎಳಗು.ಇಂದು ಅಜ್ಜಿ ಎದ್ದಿದವೇ ಇಲ್ಲೆ.
ಅವರ ಮನೆ ಬಾಗಿಲು ಹಾಕಿಕೊಂಡೇ ಇದ್ದು;ಇಡೀ ಬೈಲಿಂಗೆ ಬೆಣಚ್ಚಾದರೂ ಅಜ್ಜಿಯ ಮನೆ ಒಳ ಕಸ್ತಲೆ!

ತುಂಗಮ್ಮಜ್ಜಿ ಹಳೆ ಕಾಲದವು.
ಸಣ್ಣ ಪ್ರಾಯಲ್ಲೆ ಗೆಂಡನ ಕಳಕ್ಕೊಂಡರೂ ದೇವರ ಮೇಲೆ ನಂಬಿಕೆ ಮಡಗಿ,ಇಬ್ಬರು ಮಕ್ಕಳ ಬೆಳಶಿ,ದೊಡ್ಡ ಮಾಡಿದವು. ಇಪ್ಪಲೆ ಅವರ ಹತ್ರೆ ಎಂತ ಇದ್ದತ್ತು? ಒಂದು ಅರ್ಧ ಎಕ್ರೆ ತೋಟ,ಅಷ್ಟೆ.
ಹತ್ತರಾಣವಕ್ಕೆ ಅಡಿಗೆಲಿ ಸಕಾಯ ಮಾಡಿ,ರಜ ರಜ ಸಿಕ್ಕಿದ್ದರ ತಿಂದು ಸುಧಾರಿಸಿದವು.ಆದರೆ ….

ಅವರ ಮಕ್ಕಳೇ ಈಗ ಅವಕ್ಕೆ ದೂರ.
ಇಬ್ಬರೂ ದೂರ ಪೇಟೆಲಿ ಕೆಲಸಲ್ಲಿದ್ದವು..
ಒಬ್ಬರಾದರೂ ಅಬ್ಬೆಯ ಬಾ ಹೇಳಿ ದಿನುಗೋಳುವ ತಪ್ಪು ಮಾಡಿದ್ದವಿಲ್ಲೆ!ಅಜ್ಜಿ ಆನು ಬತ್ತೆ ಹೇಳಿದ್ದವೂ ಇಲ್ಲೆ!

ಒಂದೊಂದರಿ ಬಕ್ಕು, ಎರಡು ದಿನ ಇದ್ದು ಹೋಕು ಆ ಮಕ್ಕೊ.-ಅವಕ್ಕೆ ತೋರಿದರೆ ತುಂಗಮ್ಮಜ್ಜಿಗೆ ಕೆಲವು ಸರ್ತಿ ರಜ ಪೈಸೆ ಕೊಡುಗು.
ಅಜ್ಜಿ ಬೇಡ ಹೇಳವು- ಅದರ ಮೂಲಕ ಆರಿಂಗಾದರೂ ಸಕಾಯ ಮಾಡುಗು.
ಅಜ್ಜಿಗೆ ಮತ್ತಿದ್ದವಂಗೆ ಸಕಾಯ ಮಾಡೆಕ್ಕು ಹೇಳುವ ಮನಸ್ಸು ಇದ್ದದು ಹೀಂಗೆ ಈಡೇರಿಕೊಂಡಿತ್ತು.ಆದರೆ ಅಜ್ಜಿ ಮಕ್ಕಳ ಹತ್ರೆ ಪೈಸೆಯ ಎಂದೂ ಕೇಳವು.

ಹತ್ತರಾಣ ಮಾಣಿ ಮಹೇಶ ,”ಅಜ್ಜೀ,ಅಜ್ಜೀ”ಹೇಳಿ ಬಾಗಿಲು ಬಡಿದ. ಅವನ ಅಮ್ಮ, “ಎಂತದೊ ನಿನಗೆ? ಈ ಚಳಿಗೆ ಅಜ್ಜಿ ಪಾಪ ಎದ್ದು ಎಂತ ಮಾಡುದು? ಇನ್ನೂ ರಜಾ ಮನುಗಲಿ ಬಿಡು” ಹೇಳಿದವು.
ಮಾಣಿ ಆಚೆ ನೆಡದ.
ಇನ್ನೂ ಹೊತ್ತೇರಿತ್ತು. ಸರೀ ಬೆಣಚ್ಚಾತು,ಅಜ್ಜಿ ಎದ್ದಿದವಿಲ್ಲೆ.

ಅಂಬಗ ಮಹೇಶನ ಅಮ್ಮಂಗೂ ಹೆದರಿಕೆ ಆತು.
“ಇದಾ,ಇಲ್ಲಿ ಬನ್ನಿ,ತುಂಗಮ್ಮತ್ತೆ ಇನ್ನೂ ಎದ್ದಿದವಿಲ್ಲೆ .ನೋಡಿ ರಜಾ….”ಹೇಳಿದವು-ಮಹೇಶನ ಅಪ್ಪನತ್ರೆ.
“ಜೋರು ಚಳಿ ಅಲ್ಲದೊ?ಅತ್ತೆ ಮನಿಗಿಕ್ಕು,ಹಾಂಗೆ ಎಂತ ಕೆಲಸ ಇದ್ದು?”
“ಹಾಂಗಲ್ಲ ಹೇಳಿ.ಅತ್ತೆ ಇಷ್ಟು ಹೊತ್ತಾದರೂ ಮನುಗುತ್ತವೊ? ಎದ್ದು ಹೊಸ್ತಿಲಿಂಗೆ ಬರೆತ್ತವಿಲ್ಲೆಯೊ?”

ಅಜ್ಜಿ ಏವಗಳೂ ಹೊಸ್ತಿಲಿಂಗೆ ಬರವದರ ಒಂದು ವ್ರತದ ಹಾಂಗೆ ನಡೆಶಿಕೊಂಡು ಬೈಂದವು – ಅವರ ಮನೆಲಿ ಬರವ ಕೂಸುಗೊ ಆರೂ ಇಲ್ಲದ್ದರೂದೆ.
ಇದು ಎಲ್ಲೋರಿಂಗೂ ಗೊಂತಿಪ್ಪ ವಿಷಯವೇ.

ರಾಮ ಭಟ್ರು ಹೆಗಲಿಂಗೆ ಒಂದು ಶಾಲು ಏರಿಸಿ ತುಂಗಮ್ಮಜ್ಜಿಯ ಮನೆ ಜಗಲಿ ಹತ್ತಿದವು.
ಕಿಟಿಕಿ ಬಾಗಿಲು ರಜಾ ಓರೆ ಇತ್ತು-ಏವದಾರೂ ಪುಚ್ಚೆ ಒಳವೊ ಹೆರವೊ ಹೋಗಿಕ್ಕು.ಕಿಟಿಕಿಲಿ ನೋಡುವಾಗ ಅಜ್ಜಿ ದಿನಾಲೂ ಮನುಗುವಲ್ಲೆ ಮನುಗಿದ್ದು ಕಂಡತ್ತು.ಚಾವಡಿಯ ಮೂಲೆಲಿ ಮನುಗಿಕೊಂಡಿದ್ದವು.

ತುಂಗಮ್ಮತ್ತೇ….ತುಂಗಮ್ಮತ್ತೇ…-ರಾಮಭಟ್ರು ದೊಡ್ಡಾಕೆ ದಿನುಗೋಳಿದವು.

ಅಜ್ಜಿಯ ಸುದ್ದಿ ಇಲ್ಲೆ.
“ಅತ್ತೆಗೆ ಎಂತದೊ ಆಯಿದು…”ಸಣ್ಣಕೆ ಹೇಳಿದವು ಹೆಂಡತಿಯ ಹತ್ರೆ.

ಮಹೇಶ ಅಯ್ಯೊ-ಹೇಳಿ ಬೊಬ್ಬೆ ಹೊಡೆದು ಓಡಿದ.
ಅಜ್ಜಿಯ ಮನೆಯ ಹಿಂದೆ ಬರೆ ಹತ್ತಿದ-ಬರೆಂದ ಮಾಡಿಂಗೆ ಒಂದು ಲಾಗ ಹೊಡೆದ! ಓಡಿನ ನೆಗ್ಗಿ ಒಳಂಗೆ ಇಳಿದ!ಅದು ಅಟ್ಟುಂಬೊಳದ ಮೇಲಾಣ ಹೊಗೆ ಅಟ್ಟ-ಇಟ್ಟೇಣಿ ಮೆಟ್ಳು ಇಳಿದಪ್ಪಗ,ಅಲ್ಲಿಂದ ಚಾವಡಿಗೆ ಹೋಪ ಬಾಗಿಲು ತೆರಕ್ಕೊಂಡೇ ಇದ್ದತ್ತು-ಹಾಂಗಾಗಿ ಸುಲಭಲ್ಲಿ ಹೆರಾಣ ಬಾಗಿಲು ತೆರೆದ.

ರಾಮಭಟ್ರೂ,ಶಂಕರಿಯೂ ಒಳ ಬಂದವು.

ಒಂದು ಹುಲ್ಲಹಸೆಲಿ, ಹಳೆ ಕೈಮಗ್ಗದ ಸೀರೆ ಹಾಸ್ಯೊಂಡು ಅಜ್ಜಿ ಮನುಗಿದ್ದವು. ಒಂದು ಹಳೇ ಹೊದಕ್ಕೆ ಹೊದಕ್ಕೊಂಡಿದ್ದಿದ್ದವು.”ತುಂಗಮ್ಮತ್ತೆ,ಏಳಿ,ಏಳಿ…..”ಹೇಳಿ ಶಂಕರಿ ಅಜ್ಜಿಯ ಮೈಯ ಆಡಿಸಿದವು-ಅಜ್ಜಿಯ ಮೈ ಬೆಶಿ ಆರಿದ್ದು!

ಓಕೊಂಡಿದವಿಲ್ಲೆ,”ಅತ್ತೇ…ಹೋದಿರಾ….”ಹೇಳಿ ಶಂಕರಿ ಕೂಗಲೆ ಸುರು ಮಾಡಿದವು.

ರಾಮಭಟ್ರು ಅಜ್ಜಿಯ ಮೈ ಮುಟ್ಟಿ ನೋಡಿದವು; ಮೂಗಿಲಿ ಉಸುರು ಇದ್ದೊ ಹೇಳಿ ನೋಡಿದವು-ಎಂತದೂ ಇಲ್ಲೆ.

ಮಹೇಶ ಬೊಬ್ಬೆ ಹೊಡೆದು ಕೂಗಲೆ ಸುರು ಮಾಡಿದ.

ಅವಕ್ಕೆ ಅಜ್ಜಿ ನೆಂಟ್ರಲ್ಲ.ಆದರೆ ನೆಂಟ್ರಿಂದಲೂ ಹೆಚ್ಚಿನವು.

“ಅಜ್ಜಿ ಪುಣ್ಯಾದಿಗಿತ್ತಿ,ಆರಿಂಗೂ ಉಪದ್ರ ಕೊಡದ್ದೆ ಎದ್ದು ಹೋದ ಹಾಂಗೆ ಹೋದವು…ಕೂಗೆಡ ಮಗಾ….ಹೋಗು ಮಾಬಲ ಮಾವಂಗೂ,ಕಿಟ್ಟಪ್ಪ ಮಾವಂಗೂ ಹೇಳಿ ಬಾ…”
ಮಗಂಗೆ ಕೆಲಸ ಹೇಳಿ ಅವನ ಅಲ್ಲಿಂದ ಕಳಿಸಿದವು ರಾಮಭಟ್ರು.

ಮಾಪಣ್ಣ ಭಟ್ರು, ಕೃಷ್ಣ ಭಟ್ರು ಅವರ ಮನೆಯವು ಎಲ್ಲರೂ ಓಡಿ ಬಂದವು.

ಆರೋ ರಜಾ ದರ್ಭೆ ತಂದವು,ಕರಟಲ್ಲಿ ಸೇಡಿಹುಡಿ ಅಜ್ಜಿ ಮಡಗಿದ್ದದು ಅಲ್ಲಿಯೇ ಇದ್ದತ್ತು.
ನೆಲಕ್ಕಲ್ಲಿ ಬರೆ ಎಳದವು;ದರ್ಭೆ ಹಾಸಿದವು.ತುಂಗಮ್ಮಜ್ಜಿಯ ಶವವ ಎತ್ತಿ ಅದರ ಮೇಲೆ ಮನುಗಿಸಿದವು.
ತಲೆ ತೆಂಕಹೊಡೆಂಗೆ ಬಪ್ಪ ಹಾಂಗೇ ಮನುಗಿಸಿದವು.ತೆಂಕಂತಾಗಿ ಅಲ್ಲದೊ ಯಮಲೋಕ ಇಪ್ಪದು?

ರಾಮಭಟ್ರು ಒಂದು ತೆಂಗಿನಕಾಯಿ ತಂದು,ಮನೆಯ ಹೊಸ್ತಿಲಿಲಿ ನಿಂದು ಒಡದವು.ಶಂಕರಿ ದೇವರೊಳಂದ ಅನುಶುದ್ಧಿ ತಂದು ಕಾಯಿ ಕಡಿಗೆ ತುಂಬಿಸಿ ಶವದ ತಲೆ ಮೇಲ್ಕಟೆ ದೀಪ ಹೊತ್ತಿಸಿ ಮಡುಗಿದವು.
ಎಲ್ಲರೂ ಅಜ್ಜಿಯ ಬಾಯಿಗೆ ತುಳಸಿ ನೀರು ಬಿಟ್ಟವು.ಅದೊಂದು ಕ್ರಮ -ಸಾಯೆಕಾರೆ ಮೊದಲು ಮಾಡೆಕ್ಕಾದ್ದರ ಜೀವ ಹೋದ ಮೇಲೆ ಆದರೂ ಮಾಡಿ ಸಮಾಧಾನ ಪಡುದು ಮನುಷ್ಯನ ಗುಣ.

ರಾಮ ಭಟ್ರು ಮಗಂಗೆ ಎಂತದೊ ಸೂಚನೆ ಕೊಟ್ಟವು-ಮಹೇಶ ಪೇಂಟು ಏರಿಸಿಕೊಂಡು-“ಅಮ್ಮಾ,ಆನು ಇಂದು ಕಾಲೇಜಿಂಗೆ ಹೋವ್ತಿಲ್ಲೆ.ಅಜ್ಜಿಯ ಮಗಂಗೆ ಟೆಲಿಗ್ರಾಮು ಕಳಿಸೆಕ್ಕಡ”ಹೇಳಿ ಹೋದ.
ಅವ ನಾಲ್ಕು ಮೈಲು ದೂರ ಕುಂಬ್ಳೆಗೆ ಹೋಗಿ ಕಂಬಿ ಕಳಿಸೆಕ್ಕು-ಆವಗ ಅಲ್ಲಿಗೆ ಫೋನು ಬಯಿಂದಿಲ್ಲೆ.

ಹತ್ತರಾಣ ಕೂಸುಗೊ ಮಲ್ಲಿಗೆ ಮಾಲೆ ಕಟ್ಟಿ ಅಜ್ಜಿಯ ಮೇಲೆ ಹಾಕಿದವು-ಅವು ಎಲ್ಲಿಯೊ ನೋಡಿದ್ದವು ಶವಕ್ಕೆ ಹೂಗಿನ ಗೊಂಡೆ ಮಡಗುತ್ತರ.

ಜನ ಬಂದು ಸೇರುಲೆ ಸುರು ಆತು. ಆಳು ಬಟ್ಯ ಹೊಸ ಮಡಕ್ಕೆ ತಂದು ಮಡಗಿತ್ತು.ಮಡಲು,ಸಲಕ್ಕೆ ಎಲ್ಲಾ ತಯಾರು ಮಾಡಲೆ ಸುರು ಮಾಡಿದವು ,ಚಟ್ಟವ ಕಟ್ಟುಲೆ ಬೇಕಾಗಿ!-ಆರಿಂಗೂ ಹೇಂಗೆ ಮಾಡೆಕ್ಕು ಹೇಳಿ ಹೇಳೆಕ್ಕು ಹೇಳಿಯೇ ಇಲ್ಲೆ-ಎಲ್ಲರಿಂಗೂ ಗೊಂತಿದ್ದು ಬ್ರಾಹ್ಮಣರ ಕ್ರಮ!

“ಸೌದೆಗೆ ಹೇಂಗೂ ಅತ್ತೆದೇ ಮಾವಿನಮರ ಇದ್ದು-ಆಳುಗೊ ಕಡಿಯಲಿ;ಹೊಸ ವಸ್ತ್ರ ನಮ್ಮ ಶೀನಿ ಹೋಗಿ ತಕ್ಕು-ಮತ್ತೆ?”ಮಾಪಣ್ಣಭಟ್ರು ಕೇಳಿದವು.

“ಭಟ್ರಿಂಗೆ ಹೇಳೆಕ್ಕನ್ನೆ?”-ರಾಮಭಟ್ರು ಹೇಳಿದವು.

“ಅತ್ತೆಯ ಮಕ್ಕೊ ಬರೆಡದೊ?ಅವು ಬಾರದ್ದೆ ಭಟ್ರು ಬಂದು ಎಂತ ಮಾಡುದು? ಈಗಲೆ ಬೇಡದೊ ತೋರುತ್ತು….”

“ಅದು ಸರಿ ಮಾಪಣ್ಣ…ಭಟ್ರಿಂಗೆ ಎನ್ನ ಅಣ್ಣನ ಮಗ ಪುಟ್ಟ ಹೇಳುಗು-ಅವನ ಕಳುಗುತ್ತೆ. ಮಧ್ಯಾನ್ನ ಮೂರು ಗಂಟೆಗೆ ಅವು ಬಂದರೆ ಸಾಕು…”

“ಸರಿ, ಹಾಂಗೆ ಮಾಡು ರಾಮಣ್ಣ.ಈಗ ನಾವು ಹತ್ತರಾಣೋರು ಮಾಡದ್ದರೆ ಮತ್ತೆ ನಾವಿಪ್ಪದೆಂತಗೆ?”

ಹೋಮಕ್ಕೆ ಇಪ್ಪ ಸನ್ನಾಯ ಎಲ್ಲಾ ಮಾಡಿದವು-ಆರೂ ಬಾಯಿಗೆ ನೀರು ಹಾಕಿದ್ದವಿಲ್ಲೆ.

“ತುಂಗಮ್ಮತ್ತೆದು ಒಳ್ಳೆ ಮನಸ್ಸು,ಗಟ್ಟಿ ಜೀವ,ಅವರ ಮೋರೆ ನೋಡು-ಎಷ್ಟು ಕಳೆ ಇದ್ದು? ಏವ ಗೆಂಡು ಮಕ್ಕೊ ಇಲ್ಲದ್ದರೂ,ತೋಟದ ಕೃಷಿ,ಪೇಟೆಗೆ ಹೋಪದು ಎಲ್ಲಾ ಸುಧರಿಕೆ ಮಾಡಿದವು…ತುಂಬಾ ಗಟ್ಟಿಗಿತ್ತಿ….”ಕೃಷ್ಣಭಟ್ರು ಸತ್ತು ಹೋದ ಅಜ್ಜಿಯ ಗುಣಗಾನ ಸುರು ಮಾಡಿದವು.ಅವರ ಹೆಂಡತ್ತಿ ಶಾರದಮ್ಮ ಸೆರಗಿಂದ ಮೂಗು ಬಾಯಿ ಒರೆಸಿಕೊಂಡು-“ಈ ಅತ್ತೆ ಇದ್ದ ಕಾರಣ ಎಂಗಳ ಸುಬ್ಬಣ್ಣ ಹುಟ್ಟಿಯಪ್ಪಾಗ ಆನು ಬದುಕಿದ್ದು. ಮಾಣಿಯ ಮೀಶುದು,ಎನ್ನ ಮೀಶುದರಿಂದ ತೊಡಗಿ ಎಂಜಲು ತೆಗೆದು,ಪಾತ್ರೆ ತೊಳೆವಲ್ಲಿವರೆಗೆ ಎಲ್ಲಾ ಕೆಲಸ ಅತ್ತೆಯೇ ಮಾಡಿದ್ದು-ಏವ ಅಬ್ಬೆಯೂ,ಸ್ವಂತ ಮಗಳ ಬಾಳಂತನವನ್ನೂ ಕೂಡಾ ಇಷ್ಟು ಪ್ರೀತಿಲಿ ಮಾಡವು-ಎಂತ ಮಾಡುದು?ಅವು ಸಾವಾಗ ಒಂದು ಹುಂಡು ನೀರು ಬಿಡುವ ಭಾಗ್ಯ ಎನಗೆ ದೇವರು ಕೊಟ್ಟಿದ ಇಲ್ಲೆ….”ಹೇಳಿದವು.

*******

ಈ ಗೌಜಿಯ ಎಡಕ್ಕಿಲಿ ಒಬ್ಬ ಮಾಣಿ ಬಂದ.

ಅವ ಮಾಪಣ್ಣಭಟ್ರ ತಂಗೆಯ ಮಗ-ನವೀನ.ಎಮ್.ಬಿ.ಬಿ.ಎಸ್.ಮುಗಿಶಿ ರಜೆಲಿ ಅಜ್ಜನ ಮನೆಗೆ ಬಂದವ,ತುಂಗಮ್ಮಜ್ಜಿಯ ಕಾಂಬಲೆ ಬಂದ.

ಅಜ್ಜಿಯ ಮೋರೆ ನೋಡಿದ,ಮುಟ್ಟಿದ,ಕೊರಳು ಮತ್ತೆ ಎದೆಯ ಭಾಗ ಮುಟ್ಟಿ ನೋಡಿದ.

ಅವನ ಕಿಟ್ ಬ್ಯಾಗು ತಂದ,”ಅತ್ತೆ,ರಜಾ ನೀರು ತನ್ನಿ” ಹೇಳಿದ.

ಮಾಪಣ್ಣ ಭಟ್ರು-“ನವೀನ,ಎಂತ ಮಾಡುದೊ?”ಹೇಳಿ ಕೇಳಿದವು

“ನೋಡಿ ಮಾವ,ಈಗ ತಮಾಷೆ…..”ನೆಗೆ ಮಾಡಿದ ಅಳಿಯ ಕಿಟಿಕಿ ಪೂರಾ ತೆಗೆದ,ಅಜ್ಜಿಯ ಮೋರೆಗೆ ನೀರು ಹಾಕಿದ.ಏವದೊ ಒಂದು ಇಂಜೆಕ್ಶನು ತೆಗೆದು,ಅಜ್ಜಿಗೆ ಕುತ್ತಿದ!ಮೆಲ್ಲಂಗೆ ಅಜ್ಜಿಯ ಕೈಕಾಲು ಮಾಲಿಶು ಮಾಡಿದ.ಅವರ ಎದೆಯ ಮೆಲ್ಲಂಗೆ ಒತ್ತಿದ.

ರಜಾ ಹೊತ್ತು ಕಳಾತು.ಅಜ್ಜಿಯ ಉಸುರು ಆಡಲೆ ಸುರು ಆತು!

ಅಜ್ಜಿಯ ಬಾಯಿಂದ “ರಾಮಾ..ರಾಮ…ನಾರಾಯಣ…”ಹೇಳಿ ಶಬ್ದ ಹೊರಟತ್ತು!

ಕೈಕಾಲು ಹಂದಲೆ ಸುರು ಆತು….ಎಲ್ಲರೂ ದೇವರೆ….ದೇವರೇ…ಹೇಳಿ ಆಶ್ಚರ್ಯಂದ ಹೇಳಿದವು.

“ಎಂತದೋ ಇದು….ಮಂತ್ರವಾದ ಮಾಡಿದೆನ್ನೆ?”ಅಳಿಯನ ಮೆಚ್ಚಿಕೊಂಡು ಹೇಳಿದವು ಮಾಪಣ್ಣ ಭಟ್ರು.

“ಮಾವಾ,ಇದರಲ್ಲಿ ಮಾಟ,ಮಂತ್ರ,ಯಕ್ಷಿಣಿ ಎಂತದೂ ಇಲ್ಲೆ-ಇಲ್ಲಿ ನೋಡಿ-ಜಿರಳೆಯ ಕೊಲ್ಲುವ ಮದ್ದು-ಅಜ್ಜಿ ನುಸಿಗೆ ಇದು ಅಕ್ಕು ಹೇಳಿ ಪೇಟೆಂದ ತಂದು ಮಡಿಗಿದ್ದವು ಹೇಳಿ ಕಾಣ್ತು.ಮನುಗುವಂದ ಮೊದಲು ಎಲ್ಲಾ ಕಡೆಂಗೂ ಬಿಟ್ಟು ಬಾಗಿಲು ಹಾಕಿ ಮನುಗಿದ್ದವು.
ಮದ್ದು ಗಾಳಿಲಿ ಆವಿಯಾಗಿ ಬಂದು ಅಜ್ಜಿಯ ಶ್ವಾಸಕೋಶಲ್ಲಿ ತುಂಬಿ, ಅವು ಸತ್ತ ಹಾಂಗೆ ಕಾಣ್ತಾ ಇತ್ತು. ಅವು ಸತ್ತಿದವಿಲ್ಲೆ ಹೇಳಿ ಎನಗೆ ಅವರ ಮೋರೆ ನೋಡಿಅಪ್ಪಗ ಸಂಶಯ ಬಂತು,ಎದೆ ಚೂರು ಬೆಶಿ ಇತ್ತು ಹೇಳಿ ನೋಡಿ,ಅದು ಸ್ಪಷ್ಟ ಆತು.ವಿಷ ಇಳಿವಲೆ ಮದ್ದು ಕೊಟ್ಟೆ-ಅಷ್ಟೆ,….”ಹೇಳಿದ ಡಾ||ನವೀನ.

ಅಷ್ಟು ಹೊತ್ತಿಂಗೆ ತುಂಗಮ್ಮಜ್ಜಿ ಕಣ್ಣು ಬಿಟ್ಟವು.

ಎಲ್ಲೊರಿಂಗೂ ಮತ್ತೊಂದಾರಿ ಉದಿ ಆದ ಹಾಂಗೆ ತೋರಿತ್ತು-ಆ ದಿನ!

ಮತ್ತೆ ಉದಿ ಆತು, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಸುಬ್ಬಯ್ಯ ಭಟ್ಟ ವರ್ಮುಡಿ

  ನುಸಿಂದ ನುಸಿಮದ್ದಿಂಗೆ ಹೆಚ್ಚು ಹೆದರೆಕ್ಕು.
  ಎಲ್ಲವೂ ವಿಷಮಯ.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  { ನುಸಿಂದ ನುಸಿಮದ್ದಿಂಗೆ ಹೆಚ್ಚು ಹೆದರೆಕ್ಕು. }
  – ಇದು ಪಷ್ಟಾಯಿದು ಜೋಯಿಶರೇ!! :-)

  ಕತೆ ತುಂಬ ಚೆಂದ ಬರದ್ದಿ ಗೋಪಾಲಣ್ಣ, ಅಬ್ಬೆಕ್ಕಳ ನೋಡಿಗೊಂಬ ರೀತಿ ನಿಜವಾಗಿ ಒಂದರಿ ತಟ್ಟಿತ್ತು!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣದೀಪಿಕಾಅಕ್ಷರ°ಚೆನ್ನೈ ಬಾವ°ಅಜ್ಜಕಾನ ಭಾವಡಾಮಹೇಶಣ್ಣನೀರ್ಕಜೆ ಮಹೇಶಸುವರ್ಣಿನೀ ಕೊಣಲೆvreddhiಪೆಂಗಣ್ಣ°ಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿಮಾಷ್ಟ್ರುಮಾವ°ಪುಣಚ ಡಾಕ್ಟ್ರುವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಪುತ್ತೂರುಬಾವವೇಣಿಯಕ್ಕ°ದೊಡ್ಮನೆ ಭಾವನೆಗೆಗಾರ°ಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಚುಬ್ಬಣ್ಣರಾಜಣ್ಣಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ