ವ್ಯಾಪಾರ

ಉದಿಯಪ್ಪಗ ಕಾಫಿ ಕುಡಿವಲೆ ಕೂದಪ್ಪಗ ಹೆರಂದ “ಭಟ್ರೆ” ಹೇಳಿ ದಿನುಗೋಳಿದ ಹಾಂಗೆ ಕೇಳಿತ್ತು.
ಶಂಭಟ್ರು ಎದ್ದವು.

ಅವರ ಮನೆ ಬಾಗಿಲಿಲಿ ಒಂದು ಬ್ಯಾರಿ; ಅವರ ಚಿರಪರಿಚಿತನೆ. ಅಬ್ಬಾಸ್ ಬ್ಯಾರಿ;ಎಲ್ಲೊರೂ ಅಂಬಚ್ಚು ಹೇಳುಗು.
ಅಡಕ್ಕೆ ಸೊಲಿದ ವಿಶಯ ಬ್ಯಾರಿಗೆ ಹೇಂಗೊ ಗೊಂತಾಗದ್ದೆ ಇರುತ್ತಿಲ್ಲೆ. ಅದಕ್ಕೆ ಶಂಭಟ್ರ ಹತ್ತರೆ ಬಂದು ಚೆರೆಪೆರೆ ಮಾಡಿ ರಜ ಅಡಕ್ಕೆಯೊ,ಇಲ್ಲದ್ದರೆ ಕೋಕವೊ ಎಂತಾದರೂ ಕೊಂಡೋಗದ್ದೆ ಇದ್ದರೆ ತಿಂದದು ಕರಗ.
ಮನಸ್ಸಿಲೆ ಬೈದೊಂಡು “ಎಂದೆ?” ಹೇಳಿ ಕೇಳಿದವು.
“ಅಡಕ್ಕ ಉಲಿಚ್ಚಿಟ್ಟಾಯೊ?ಕೋಕ ಇಂಡಾ?”[ಅಡಕ್ಕೆ ಸೊಲಿದಾತೊ?ಕೋಕ ಇದ್ದೊ?]
ಶಂಭಟ್ರು ಇದ್ದು ಹೇಳಿ ಒಳಂದ ಒಂದು ಸಣ್ಣ ಕುರುವೆಲಿ ಕೋಕ ಹೆರ ತಂದವು.ಅಡಕ್ಕೆಗೆ ಅದು ಸರೀ ಕ್ರಯ ಕೊಡ ಹೇಳಿ.

ಬ್ಯಾರಿ ಬಿಡೆಕ್ಕನ್ನೆ?
ಅಡಕ್ಕೆ ತನ್ನಿ,ನೋಡುವೊ ಹೇಳಿತ್ತು.
ಸೊಲಿದ ಅಡಕ್ಕೆ ಗೋಣಿ ಹೆರ ಬಂತು.
ಬ್ಯಾರಿ ಅಡಕ್ಕೆಗೆ ಕೈ ಹಾಕಿತ್ತು, ಎರಡೂಕೈಲಿ ಹಿಡಿದು ಕುಟ್ಟಿ ನೋಡಿತ್ತು.  ಆಡಕ್ಕೆ ಕತ್ತರಿಲಿ ತುಂಡು ಮಾಡಿತ್ತು.ಒಳ್ಳೆ ಅಡಕ್ಕೆ,ಯಾವ ಕಸರೂ ಇತ್ತಿಲ್ಲೆ.

ಬ್ಯಾರಿ ಎಪ್ಪತ್ತೈದು ರೂಪಾಯಿ ಕ್ರಯ ಹೇಳಿತ್ತು. ಎಪ್ಪತ್ತೇಳು ಆವಗ ಕ್ಯಾಂಪ್ಕೊಲ್ಲಿ ಸಿಕ್ಕಿಕೊಂಡಿತ್ತು. ಶಂಭಟ್ರು ಎಂಬತ್ತೈದಕ್ಕೆ ಕಮ್ಮಿಗೆ ಕೊಡೆ ಹೇಳಿದವು.
“ಎಂಬದ?ಎವ್ವತ್ತೇದಿನಿ ‍ಞಾನ್ ವೇಣಾಂಗಿಲ್ ತೆರಾಂ. ಎಡ್ ಕುನ್ನಾ?”[ಎಪ್ಪತ್ತೇಳು ರೂಪಾಯಿಗೆ ಆನು ಕೊಡುತ್ತೆ; ತೆಕ್ಕೊಂಬಿರೊ?]
ಬ್ಯಾರಿ ಸವಾಲು ಹಾಕಿತ್ತು ಶಂಭಟ್ರಿಂಗೆ!

ಶಂಭಟ್ರಿಂಗೆ ಅವರ ಬೆಳೆಗೆ ಒಳ್ಳೆ ಕ್ರಯ ಸಿಕ್ಕಿರೆ ಸಾಕು,ಬ್ಯಾರಿಯ ಕೈಂದ ಅಡಕ್ಕೆ ತೆಗವಲೆ ಅವಕ್ಕೆಂತ ಗ್ರಾಚಾರವೊ?
ಸುರು ಅತದ ಚರ್ಚೆ. ಈ ವರುಷ ಮೂಡಮನೆಂದ ಎಷ್ಟಕ್ಕೆ ತೆಗೆದೆ; ಮೂಲೆಮನೆಂದ ಎಷ್ಟಕ್ಕೆ ಕೊಟ್ಟವು-ಎಲ್ಲಾ ಹೇಳಿತ್ತು.
ಅವರ ಜಾಲು ಎತ್ತರಲ್ಲಿದ್ದು;ನಿಂಗಳದ್ದು ಹೊಂಡಲ್ಲಿಪ್ಪದು-ಬೇಗ ಒಣಗದ್ದ ಕಾರಣ ಬಣ್ಣ ಕಮ್ಮಿ-ಒಣಗಲೆ ಹಾಕುವ ಮೊದಲು ಅವು ಜಿಗ್ಗು ಎಲ್ಲ ತೆಗೆದು ಬೇರೆ ಮಾಡುತ್ತವು-ನಿಂಗೊ ಹಾಂಗೆ ಮಾಡಿದ್ದಿಲ್ಲೆಯಿ-ಹೇಳಿ ವಾದಿಸಿತ್ತು.

ಶಂಭಟ್ರು ಒಪ್ಪಿದ್ದವೇ ಇಲ್ಲೆ.
ಅದ,ಅದೇ ಸಮಯಕ್ಕೆ ಸಾಹುಕಾರ ಮಾವನ ಸವಾರಿ ಬಂತು.

ಸಾಹುಕಾರ ಮಾವ ಶಂಭಟ್ರಿಂಗೆ ದೂರಲ್ಲಿ ಮಾವ.ಅವು ದೊಡ್ಡ ಅಡಕ್ಕೆವ್ಯಾಪಾರಿ; ಹಾಂಗಾಗಿ ಅವಕ್ಕೆ ಸಾಹುಕಾರ ಹೇಳಿ ಹೆಸರು-ಪ್ರಾಯವೂ ಐವತ್ತು ದಾಂಟುಗು.
“ಎಂತ ಮಾವ,ಬನ್ನಿ,ಆಸರಿಂಗೆ ಬೇಕೊ?”ಹೇಳಿ ಸ್ವಾಗತಿಸಿದವು.
“ಆಸರಿಂಗೆ ಎಂತದೂ ಬೇಡ,ಓ,ಇದೆಂತ ಕಾಲಂಟೆಯೇ ವ್ಯಾಪಾರ?”

ಶಂಭಟ್ರೂ,ಅಂಬಚ್ಚುವೂ ಆವೇಶಲ್ಲಿ ಅವರವರ ಪಕ್ಷವ ವಿವರಿಸಿದವು.

“ಇರಲಿ,ಆನು ನೋಡ್ತೆ”

ಸಾಹುಕಾರರು ಅಡಕ್ಕೆಯ ಐದು ನಿಮಿಶ ನೋಡಿದವು-“ಶಂಭು,ಇದು ಫಷ್ಟು ಅಡಕ್ಕೆ.ಆನು ಎಂಬತ್ತೆರಡಕ್ಕೆ ತೆಕ್ಕೊಂಬೆ;ನಿನ್ನ ಕ್ರಯವೂ ಬೇಡ;ಅಂಬಚ್ಚುವ ಕ್ರಯವೂ ಬೇಡ-ಆಗದೊ?ಎಂತ ಹೇಳ್ತೆ ನೀನು?”
ಶಂಭಟ್ರಿಂಗೆ ಗೊಂದಲ ಆತು,ಅವು ಹೇಳಿದ ಕ್ರಯ ಸಿಕ್ಕದ್ದರೂ ಮಾವ ಬ್ಯಾರಿಂದ ಹೆಚ್ಚಿಗೆ ಹೇಳಿದ್ದಕ್ಕೆ ಸಮಾಧಾನ ಆತು,ಕೊಡಲೆ ಒಪ್ಪಿದವು.
“ಆಯಿ,ಪಟ್ರು ಎಡುಕ್ಕುನ್ನಾಂಗಿಲಿ ಎಡುಕ್ಕಟ್ಟ್, ಬೆರಿನ್ನ್ ಆವೇ”[ಆಗಲಿ,ಭಟ್ರು ತೆಗೆತ್ತರೆ ತೆಗೆಯಲಿ, ಬತ್ತೆ ಆತೊ?]-ಅಂಬಚ್ಚು ಇಷ್ಟು ಹೇಳಿ ಮನಸ್ಸಿಲೆ ಪರಂಚಿಯೊಂಡು ಹೋತು.

ಶಂಭಟ್ರು ಮಾವನ ಒಳ ಕರಕ್ಕೊಂಡು ಹೋದವು.
ತಿಂಡಿ,ಕಾಫಿ ಬಂತು.ಅದೂ,ಇದೂ ಮಾತಾಡಿಯೊಂಡು ಆಸರಿಂಗೆ ತೆಕ್ಕೊಂಡವು.

“ಮಾವ,ಆಳುಗೊ ಯಾವಾಗ ಬಕ್ಕು ಅಡಕ್ಕೆ ಕೊಂಡೋಪಲೆ?”:ಶಂಭಟ್ರು ಕೇಳಿದವು.
“ಹೊತ್ತೋಪಗ ಕಳುಸುತ್ತೆ…..ಹೇಳಿದ ಹಾಂಗೆ ಶಂಭು,ಒಂದು ವಿಶಯ ಹೇಳ್ತೆ,ಬೇಜಾರ ಮಾಡ್ಲಾಗ…..”

“ಎಂತರ ಮಾವ?”

“ನೋಡು ನಿನ್ನೆ ಕ್ಯಾಂಪ್ಕೊಲ್ಲಿ ಕ್ರಯ ಎಪ್ಪತ್ತೇಳೇ ಇದ್ದದು.ಹೆರ ಬ್ಯಾರಿಗೊ ಒಂದೆರಡು ರೂಪಾಯಿ ಹೆಚ್ಚಿಗೆ ಕೊಡುಗೊ ಎಂತ್ಸೊ?ಆದರೆ ಇಲ್ಲಿಂದ ಅಡಕ್ಕೆ ಪೇಟೆಗೆ ಎತ್ತುಸೆಕ್ಕನ್ನೆ?”
ಶಂಭಟ್ರಿಂಗೆ ಮಾವಂದೆಂತದೊ ಕೊಸರಂಕೊಳ್ಳಿ ಇದ್ದು ಹೇಳಿ ತಲಗೆ ಹೋತು-“ಹಾಂಗಾಗಿ…ಎಂತ ಮಾವ?”ಕೇಳಿದವು ಮಾವನ ಬಾಯಿಂದಲೆ ಬರಲಿ ಹೇಳಿ.

“ನೋಡು ಶಂಭು,ಈಗ ಅಡಕ್ಕೆಗೆ ಸಮಗಟ್ಟು ಕ್ರಯ ಬತ್ತಿಲ್ಲೆ. ದೊಡ್ಡ ಲಾಭ ಇಲ್ಲದ್ದರೂ ಎನ್ನ ರಥ ಹೋಯೆಕ್ಕನ್ನೆ ಹೇಳಿ ಆನು ವ್ಯಾಪಾರ ಮಾಡುತ್ತಾ ಇದ್ದೆ.ಕೆಲಸಕ್ಕೂ ಜೆನ ಇಲ್ಲೆ,ಟೆಂಪೊ,ಲಾರಿ ಬಾಡಿಗೆ ಎಲ್ಲ ಕೊಟ್ಟು ಪೂರೈಸುತ್ತಿಲ್ಲೆ…”

“ಅಪ್ಪು ಮಾವ,ಇಲ್ಲಿಂದ ಪೇಟೆಗೆ ಜೀಪಿಂಗೆ ನೂರು ಹೇಳ್ತವು”

“ಅಡಕ್ಕೆ ಬ್ಯಾರಿಗೆ ಹೋಪದು ಬೇಡ ಹೇಳಿ ಆನು ಎಂಬತ್ತೆರಡು ಹೇಳಿದೆ, ಪರಮಾರ್ಥಕ್ಕಾದರೂ ಈಗ ಅಷ್ಟು ಕ್ರಯ ಇಲ್ಲೆ, ಹಾಂಗೆ ಹೇಳಿ ನಿನಗೂ ನಷ್ಟ ಅಪ್ಪಲಾಗ.
ನಿನಗೆ ಪೇಟೆಗೆ ಕೊಂಡೋಪ ಕರ್ಚು ಉಳಿತ್ತನ್ನೆ,ಆನು ಕ್ಯಾಂಪ್ಕೊದವು ಕೊಡುದರಿಂದ ಒಂದು ರುಪಾಯಿ ಜಾಸ್ತಿ-ಎಪ್ಪತ್ತೆಂಟು ಕೊಡುತ್ತೆ ಆಗದೊ? ಬೇಜಾರ ಮಾಡೆಡ…..”
ಬೆಣ್ಣೆಲಿ ಕೂದಲು ತೆಗೆದ ಹಾಂಗೆ ಮೆಲ್ಲಂಗೆ ಹೇಳಿದವು ಸಾಹುಕಾರ ಮಾವ!

ಶಂಭಟ್ರು ಎಂತ ಹೇಳುದು? ಆತು ಮಾವ-ಹೇಳಿ ತಲೆ ಆಡಿಸಿದವು.

ಗೋಪಾಲಣ್ಣ

   

You may also like...

19 Responses

 1. ಸುಮಾರು management techniqueಗಳ ಅರದು ಕುಡುದ್ದ ಸಾಹುಕಾರ ಮಾವ..

 2. ಗೋಪಾಲ ಮಾವ,ಕಥೆ ಫಷ್ಟಾಯಿದು..ಈ ಕಥೆ ಎಂಗೋ ಸಣ್ಣ ಪ್ರಾಯಲ್ಲಿಪ್ಪಗ ಅಪ್ಪ ಮಾಡಿಯೊಂಡಿದ್ದ ವೆವಹಾರವ ನೆಂಪು ಮಾಡಿತ್ತು..ಇನ್ನಷ್ಟು ಹೀನ್ಗಿಪ್ಪ ಕತೆಗ ಬರಲಿ….ಧನ್ಯವಾದಂಗೋ!!!!!!!!!!

 3. ಸುಬ್ಬಯ್ಯ ಭಟ್ಟ ವರ್ಮುಡಿ says:

  =
  ಬ್ಯಾರಿಯ ಸಾಂತಾಣಿ(ಬೇಶಿದ ಹಲಸಿನ ಬೇಳೆ) ಕಚ್ಚೋಡ ನೆಂಪಾತು=
  ಭಟ್ರಮನೆ ಜಾಲಿಲಿ ಸಾಂತಾಣಿ ಒಣಗಲೆ ಹಾಕಿತ್ತಿದ್ದವಡ.
  ಬ್ಯಾರಿ ಬಂತಡ.
  “ಇದೆಂದೆ ಸಾಮಿ ಈಡ ಬೆಚ್ಚದ್?”(ಇದೆಂತ ಸ್ವಾಮಿ ಇಲ್ಲಿ ಮಡಗಿದ್ದು?) ಹೇಳಿ ಕೇಳಿಗೊಂಡು ಒಂದು ಸಾಂತಾಣಿ ಹೆರ್ಕಿ ಕಚ್ಚಿ ನೋಡಿತ್ತಡ. ನೋಡಿಕ್ಕಿ “ಇದ್ ನಲ್ಲೆದಿಲ್ಲ”(ಇದು ಒಳ್ಳೆದಿಲ್ಲೆ) ಹೇಳಿ ಹೇಳಿಕ್ಕಿ ಕಚ್ಚಿ ಎಂಜೆಲು ಮಾಡಿದ ಸಾಂತಾಣಿಯ ರಾಶಿಗೇ ಹಾಕಿ ಇಡೀ ರಾಶಿಯನ್ನೇ ಎಂಜೆಲು ಮಾಡಿತ್ತಡ.
  “ಸಾಮಿ, ನಲ್ಲೆದಿಲ್ಲಂಗ್ಲೂ ಎನೆಕ್ಕಾವು, ಕೊಡ್ಕುನ್ನೋ?”(ಸ್ವಾಮಿ, ಒಳ್ಳೆದಿಲ್ಲದ್ರೂ ಎನಗಕ್ಕು ಕೊಡ್ತಿರೋ) ಕೇಳಿತ್ತಡ.
  ಭಟ್ರ ಗೆತಿ ಗೋವಿಂದ- ಎಂಜೆಲು ಸಾಂತಾಣಿ ಆರಿಂಗೆ ಬೇಕು? ಬೇರೆಯವಕ್ಕೆ ಮಾರುಲೂ ಎಡಿಯ- ತಿಂಬಲೂ ಎಡಿಯ.
  ಬ್ಯಾರಿ ಲಾಯಕಿಲ್ಲೆ ಹೇಳಿ ಕಮ್ಮಿಗೇ ಕೇಳುತ್ತಷ್ಟೆ.
  ಭಟ್ರಿಂಗೆ ಬೇರೆ ಗೆತಿ ಇಲ್ಲೆ.
  ಬ್ಯಾರಿ ಕೇಳಿದ್ದಕ್ಕೆ ಕೊಟ್ಟು ಚೌಕ ಎಳದ ಬಿಗುದವಡ.

 4. Gopalakrishna BHAT S.K. says:

  ಸಂತೋಷ ಆತು ನಿಂಗೋ ಬರದ್ದಕ್ಕೆ.
  ಸಾಂತಾಣಿ ಕತೆ ಆನೂ ಕೇಳಿದ್ದೆ.ಅದರ ಬರದು ಒಪ್ಪಣ್ಣರಿಗೆ ಕಳಿಸಿದ್ದೆ.[ಬದಲಾವಣೆ ಮಾಡಿ]
  ನಮ್ಮ ಹಳೆ ಕಾಲದ ಕತೆಗೋ ತುಂಬಾ ಇದ್ದು.ಲಾಯ್ಕಿದ್ದು.
  ಅಂಗ್ರಿ ಅಣ್ಣ ಯ್ಯಜ್ಜ ಹೇಳಿ ಇದ್ದಿದ್ದವು,ಆಶು ಕವಿ.
  ಅವರ ಆಶು ಕವಿತ್ವದ ಕತೆಗೋ ತುಂಬಾ ಇದ್ದು.ಕನ್ಯಾನ ಹೊಡೆಯವು ಆರಾದರೂ ಬೈಲಿಲಿ ಇದ್ದರೆ ಸಂಗ್ರಹದ ಕೆಲಸ ಮಾಡಿದರೆ ನಮ್ಮ ಸಮಾಜಕ್ಕೆ ತುಂಬಾ ಉಪಕಾರ ಅಕ್ಕು.

  • ಸುಬ್ಬಯ್ಯ ಭಟ್ಟ ವರ್ಮುಡಿ says:

   ಆನುದೇ ಅಂಗ್ರಿ ಅಣ್ಣಯ್ಯಜ್ಜನ ಬಗ್ಗೆ ಎನ್ನ ದೊಡ್ಡಪ್ಪ° “ದಿ. ಪರ್ತಜೆ ರಾಮಕೃಷ್ಣ ಭಟ್ಟ ವರ್ಮುಡಿ” ಹೇಳಿಗೊಂಡಿತ್ತಿದ್ದದರ ಕೇಳಿದ್ದೆ.

 5. Indira K Bhat says:

  Thumba layika iddu, Kathe. Oduvaga modalu manege bandukondidda byarigala nenapavuthu.

  Really a good article by Gopala

  Keep it up!!! Gopala——=-Ninna Akka,
  Indire

 6. Gopalakrishna BHAT S.K. says:

  thanks.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *