Oppanna.com

ನೆಗೆಬುಗ್ಗೆಗೊ

ಬರದೋರು :   ಅರ್ತಿಕಜೆ ಮಾವ°    on   26/06/2014    8 ಒಪ್ಪಂಗೊ

1. ಒಂದು ದಿನ ಉದಿಯಪ್ಪಗ ಏಳುವಾಗ ಬಟ್ಟಮಾವನ ಮನೆಮುಂದೆ ಒಂದು ಕತ್ತೆ ಸತ್ತು ಬಿದ್ದಿತ್ತು. ಬಟ್ಟಮಾವ ಫೋನಿಲ್ಲಿ ಅದರ ಪುರಸಭಾಧಿಕಾರಿಗೆ ತಿಳಿಶಿದವು. ಹಾಸ್ಯಪ್ರಿಯ ಆಗಿತ್ತಿದ್ದ ಆ ಪುರುಸಭಾಧಿಕಾರಿ ಉತ್ತರವಾಗಿ ‘ನಿಂಗೊ ಪುರೋಹಿತರಲ್ಲದೊ?, ನಿಂಗಳೇ ಉತ್ತರಕ್ರಿಯೆಯನ್ನೂ ನೆರವೇರಿಸಿ ಬಿಡಿ’ ಹೇಳಿದ°.
ಹೀಂಗೆಲ್ಲ ಹೇಳಿರೆ ಬಟ್ಟಮಾವ° ಸುಮ್ಮನಿಕ್ಕೊ! ಬಟ್ಟಮಾವ° – “ನಿಂಗೊ ಹೇಳಿದ್ದೇನೋ ಸರಿ., ಆದರೆ ಮೃತರ ಸಂಬಂಧಿಕರಿಂಗೆ ಬಂಧುಬಾಂಧವರಿಂಗೆ ಸುದ್ದಿಮುಟ್ಟುಸೆಕ್ಕಲ್ಲದೊ? ಅದಕ್ಕೇ ನಿಂಗೊಗೆ ಕೂಡ್ಳೆ ಫೋನ್ ಮಾಡಿದೆ” – ಹೇಳಿದವು !! 😀
~~negebuggego
2. ಇಬ್ರು ಹೆಮ್ಮಕ್ಕೊ ಅವರ ಗೆಂಡಂದಿರ ಬುದ್ಧಿವಂತಿಕೆ ಎಷ್ಟು ಹೇಳುವದರ ಬಗ್ಗೆ ಮಾತ್ನಾಡಿಗೊಂಡಿತ್ತಿದ್ದವು.
ಒಂದು ಅಕ್ಕ° ಹೇಳಿತ್ತು – “ಎನ್ನ ಗೆಂಡ° ಎಷ್ಟು ಉಷಾರು ಹೇಳಿರೆ ಹೇಳ್ಳೇ ಎಡಿಯ. ಎನ್ನ ಗೆಂಡ ಏವದೇ ವಿಷಯದ ಮೇಲೆ ಬೇಕಾರು ಒಂದು ಗಂಟೆ ಎಡೆಬಿಡದ್ದೆ ಮಾತನಾಡುಗು”
ಅದಕ್ಕೆ ಇನ್ನೊಂದು ಅಕ್ಕ° ಹೇಳಿತ್ತು – “ಎನ್ನ ಗೆಂಡ° ಅದಕ್ಕಿಂತಲೂ ಉಷಾರು ಗೊಂತಿದ್ದ?!, ಏವುದೇ ವಿಷಯ ಇಲ್ಲದ್ದಯೇ ಎನ್ನ ಗೆಂಡ° ಎರಡು ಗಂಟೆ ಎಡೆಬಿಡದ್ದೆ ಮಾತನಡುಗು” 😀
~~
3. ಇದ್ದಕ್ಕಿದ್ದಾಂಗೆ ಒಂದಿನ ಶಾಲಗೆ ಇನ್ಸುಪೆಕ್ಟ್ರ ಬಂದ°. ಹೆಡ್ಮಾಸ್ಟ್ರ° ಅವನ ಕರಕ್ಕೊಂಡು ಕ್ಲಾಸುಗಳ ತೋರ್ಸಲೆ ಹೇಳಿ ಹೋದ°. ಒಂದು ಕ್ಲಾಸಿಲ್ಲಿ ಪಾಠಪುಸ್ತಕಲ್ಲಿಪ್ಪ ಸೀತಾ ಸ್ವಯಂವರ’ ಪಾಠವ ನೋಡಿ, ಶಿವಧನುಸ್ಸಿನ ಮುರುದ್ದದು ಆರು? ಹೇಳಿ ಪ್ರಶ್ನೆ ಕೇಳಿದ°. ಮಕ್ಕೊಗೆ ಆ ಪಾಠ ಇನ್ನೂ ಆಗಿತ್ತಿಲ್ಲೆ, ವಿಷಯ ಎಂತ ಹೇಳಿಯೇ ಗೊಂತಿತ್ತಿಲ್ಲೆ. ಹೆದರಿಹೋದ ಮಕ್ಕೊ ಅನಲ್ಲ ಆನಲ್ಲ ಹೇಳಿ ತತ್ತರಿಸಿದವು. ಮಕ್ಕೊಗೆ ಪಾಠ ಆಯ್ದಿಲ್ಲೆ ಹೇದು ಅರಡಿಯದ್ದ ಇನ್ಸುಪೆಕ್ಟ್ರ ಅಲ್ಲಿಗೆ ಬಿಟ್ಟಿದನಿಲ್ಲೆ. ಅವರ ಕ್ಲಾಸುಮಾಷ್ಟ್ರನತ್ರೆ ‘ಶಿವಧನುಸ್ಸಿನ ಮುರುದ್ದದು ಆರು ಮಾಷ್ಟ್ರೇ?’ ಹೇದು ಕೇಳಿದ°
ಕ್ಲಾಸುಮಾಷ್ಟ್ರಂಗೂ ಆ ಪಾಠಪುಸ್ತಕ ಹೊಸತ್ತು. ಇನ್ನೂ ಪೂರ್ತಿ ಓದಿ ಆಗಿತ್ತಿದ್ದಿಲ್ಲೆ. ಆನಲ್ಲ ಸಾರ್, ಬೇರೆ ಆರು ಹೇಳಿ ಎನಗೊಂತಿಲ್ಲೆ ಹೇಳಿದ°.
ಇನ್ಸುಪೆಕ್ಟ್ರಂಗೆ ಪಿಸುರು ಎಳಗಿತ್ತು ಕ್ಲಾಸುಮಾಷ್ಟ್ರನೂ ಹೀಂಗೆ ಹೇಳಿಯಪ್ಪಗ. ಹೆಡ್ಡುಮಾಷ್ಟ್ರನತ್ತಂಗೆ ಇನ್ಸುಪೆಕ್ಟ್ರ ತಿರಿಗಿ ನೋಡಿಯಪ್ಪಗ ಹೆಡ್ಡುಮಾಷ್ಟ್ರ° ಹೇಳಿದ° – ಆನು ಈ ಶಾಲಗೆ ಬಂದು ಹತ್ತೊರುಶ ಆತು. ಆನು ಬಂದ ಲಾಗಾಯ್ತು ಅಂಥದ್ದೊಂದು ಬಿಲ್ಲು ಈ ಶಾಲೆಲಿ ಆನು ಕಂಡಿದಿಲ್ಲೆ. ಆನು ಬಪ್ಪಂದ ಮದಲೆ ಇತ್ತಿದ್ದದು ಆಗಿರ್ತಿದ್ರೆ ಅಂಬಗಳೇ ಆರಾರು ಅದರ ಮುರುದು ಹಾಕಿಕ್ಕು. ನಿಂಗೊ ಅದೀಗ ಈ ಶಾಲೆಲಿ ಅಗತ್ಯ ಬೇಕು ಹೇಳಿ ಹೇಳುತ್ತರೆ ಅದಕ್ಕೆ ತಕ್ಕ ವ್ಯವಸ್ಥೆ ಮಾಡುಸುವೊ.
ಆ ಶಾಲೆ ಬಗ್ಗೆ ಆ ಇನ್ಸುಪೆಕ್ಟ್ರ ಮತ್ತೆ ಎಂತ ರಿಪೋರ್ಟ್ ಬರದ್ದ° ಹೇಳಿ ಗೊಂತಾಯ್ದಿಲ್ಲೆ.
~~
4. ರೋಗಿಯ ಗಂಭೀರ ಪರಿಸ್ಥಿತಿಯ ಗಮನುಸಿದ ಡಾಕುಟ್ರ° – “ನಿನ್ನ ಅಕೇರಿಯಾಣ ಆಸೆ ಏನಾರು ಇದ್ದರೆ ಹೇಳಿ” – ಹೇಳಿ ಕೇಳಿದಾ.
ಅದಕ್ಕೆ ಆ ರೋಗಿ ಹೇಳಿದ – ಅಕೇರಿಯಾಣ ಆಸೆ ಬೇರೆಂತದೂ ಇಲ್ಲೆ. ಈಗಾದರೂ ಎಲ್ಲ್ಯಾರು ಒಳ್ಳೆ ಡಾಕುಟ್ರನಲ್ಲಿಗೆ ಎನ್ನ ಒಂದಾರಿ ಕರಕ್ಕೊಂಡು ಹೋಗಿ, ಅಷ್ಟೇ ಸಾಕು” 😀
~~
5 ಮದುವೆ ಆಯೇಕ್ಕಾಗಿದ್ದ ರಾಜೇಶ° ಬೆಂಗಳೂರಿಲ್ಲಿ ಎಷ್ಟು ಹುಡ್ಕಿರೂ ನೇರ್ಪ ಬಾಡಿಗ್ಗೆ ಮನೆ ಸಿಕ್ಕಿದ್ದಿಲ್ಲೆ ಹೇದು ಮದುವಗೆ ಒಪ್ಪಿದ್ದನಿಲ್ಲೆ.
ಅದಕ್ಕೆ ಅವನ ಚೆಂಙಾಯಿ ಗಣೇಶ° ಒಂದು ಉಪಾಯ ಹೇಳಿದ° – ನೇರ್ಪ ಬಾಡಿಗೆ ಮನೆ ಸಿಕ್ಕುವನ್ನಾರ ನಿನಗೆ ಮಾವನ ಮನೆಲಿ ಇಪ್ಪಲಕ್ಕನ್ನೆ?!
ಅದಕ್ಕೆ ರಾಜೇಶ ಹೇಳಿದಾ – ಅದು ಸಾಧ್ಯವೇ ಇಲ್ಲೆ. ಏಕೆ ಹೇಳಿರೆ ಎನ್ನ ಮಾವನೂ ಅವಕ್ಕೆ ನೇರ್ಪ ಮನೆ ಸಿಕ್ಕದ್ದೆ ಇನ್ನೂ ಅವರ ಮಾವುಗಳ ಮನೆಲಿಯೇ ಇದ್ದವು ! 😀
~~
6. ಕೂಸುಗಳ ಹಿಂದೆ ಸುತ್ತುವ ಒಬ್ಬ ಶಿಷ್ಯಂಗೆ ಪ್ರೊಫೆಸರ ಹೇಳಿದ° – ಬಸ್ಸಿನ ಹಿಂದೆಯೂ ಕೂಸಿನ ಹಿಂದೆಯೂ ಓಡ್ಳಾಗ. ಒಂದು ತಪ್ಪಿರೆ ಮತ್ತೊಂದು ಬಕ್ಕು. ಅದರ್ಲಿ ಸಂಶಯವೇ ಇಲ್ಲೆ. 😀
~~
7. ಒಂದು ಕೊಡೆಯ ಅಡಿಲಿ ಅರುವತ್ತು ಜೆನ ನಿಂದಿತ್ತಿದ್ದವು. ಆರೊಬ್ಬನೂ ಚೆಂಡಿ ಆಯಿದವೇ ಇಲ್ಲೆ.
ಏಕೆ??!
ಏಕೆ ಹೇಳಿರೆ ಅಂಬಗ ಮಳೆ ಬಂದುಗೊಂಡಿತ್ತಿದ್ದಿಲ್ಲೆ. 😀
~~
8. ಒಬ್ಬ ಅಜ್ಜನ ಹತ್ತರೆ ಮದುವೆ ಅಪ್ಪಲಿಪ್ಪ ಒಬ್ಬ ಜೆವ್ವನಿಗ ಕೇಳಿದ°– “ಮದುವೆಯ ಬಗ್ಗೆ ಅನುಭವಸ್ಥರು ಎಂತ ಹೇಳುತ್ತವು?
ಅದಕ್ಕೆ ಆ ಅಜ್ಜ ಹೇಳಿದ° – “ಪ್ರತಿಯೊಬ್ಬನೂ ಮದುವೆ ಅಪ್ಪಲೇ ಬೇಕು. ಏಕೆ ಹೇಳಿರೆ ಸಂತೋಷ ಒಂದೇ ಜೀವನದ ಸರ್ವಸ್ವ ಅಲ್ಲ”!! 😀
~~
9. ನವ್ಯ ಚಿತ್ರಕಲಾಪ್ರದರ್ಶನಲ್ಲಿ ತನ್ನ ಚಿತ್ರವನ್ನೇ ತುಂಬ ಹೊತ್ತಿಂದ ನೋಡಿಗೊಂಡು ಇತ್ತಿದ್ದ ಕಲಾರಸಿಕಂಗೆ ಆ ಚಿತ್ರದ ಕಲಾವಿದ° – “ಎನ್ನ ಚಿತ್ರವ ಅರ್ಥ ಮಾಡಿಗೊಂಡವು ನಿಂಗೊ ಮಾಂತ್ರ” – ಹೇಳಿದ°.
ಹಾಂಗಾದರೆ ಬೇರೆ ಆರಿಂಗೂ ಅದು ಅರ್ಥ ಆಯಿದಿಲ್ಲೆಯೋ?! ಹೇಳಿ ಕೇಳಿದ° ಆ ಕಲಾರಸಿಕ°.
ಅದಕ್ಕೆ ಆ ಚಿತ್ರ ಬರದ ಕಲಾವಿದ° ಹೇಳಿದಾ° – ಅಪ್ಪು, ಎನಗೂ ಕೂಡ ಅರ್ಥ ಆಯಿದಿಲ್ಲೆ! 😀
~~
10. ಶಾಂತಕ್ಕ° – ಆರಿಂಗೆ ಹೆಚ್ಚು ತೃಪ್ತಿ? ಒಂದು ಮಿಲಿಯ ಡಾಲರ್ ಪೈಸೆ ಇಪ್ಪವಂಗೊ?! ಅಲ್ಲ, ಆರು ಜೆನ ಮಕ್ಕೊ ಇಪ್ಪವಂಗೊ??!
ಕಿಟ್ಟಣ್ಣ° – ಆರು ಮಕ್ಕೊ ಇಪ್ಪ ಮನುಷ್ಯಂಗೇ
ಶಾಂತಕ್ಕ° – ಅದು ಹೇಂಗೆ ಹೇಳ್ತಿ?!
ಕಿಟ್ಟಣ್ಣ° – ಪೈಸೆ ಇಪ್ಪವಂಗೆ ಎಷ್ಟಿದ್ದರೂ ಸಾಲ ಹೇಳಿ ಕಾಣ್ತು. ಆದರೆ ಮಕ್ಕೊ ಹೆಚ್ಚು ಹೆಚ್ಚು ಬೇಕು ಹೇಳಿ ಆರಿಂಗೂ ತೋರುತ್ತಿಲ್ಲೆ. 😀
~~
11. ಒಬ್ಬ° ಆಟಗಾರಂಗೆ ಮೈತುಂಬ ಬೆಶಿಯಾಗಿ (ಹೈ ಟೆಂಪರೇಚರ್ ಆಗಿ) ಬೆಡ್ಡಿಲ್ಲಿ ಮನಿಕ್ಕೊಂಡಿತ್ತಿದ್ದ°. ಡಾಕ್ಟ್ರ° ಬಂದು ಅವನ ಟೆಂಪರೇಚರು ಎಷ್ಟಿದ್ದು ಹೇಳಿ ನೋಡುವಾಗ ಆ ರೋಗಿ ಆಟಗಾರ° “ಎಷ್ಟಿದೆ ಡಾಕ್ಟರ್?!” ಹೇಳಿ ಕೇಳಿದ°.
ಡಾಕುಟ್ರ° ‘ನೂರಎರಡು’ ಹೇಳಿ ಹೇಳಿದ
ರೋಗಿ ಆಟಗಾರ° ಕೂಡ್ಳೆ..  “ಹಾಂಗಾರೆ ವಿಶ್ವದಾಖಲೆ ಎಷ್ಟು?!” ಹೇಳಿ ಕೇಳಿಬಿಡೆಕ್ಕೋ?! 😀
~~
12. ಪ್ರೊಫೆಸರ° – ಕಾಲೇಜು ವಿದ್ಯಾರ್ಥಿಗೊ ಹೆಚ್ಚಾಗಿ ಉಪಯೋಗುಸುವ ಎರಡು ಶಬ್ದಂಗೊ ಏವದು?
ವಿದ್ಯಾರ್ಥಿ – ಎನಗೆ ಗೊಂತಿಲ್ಲೆ
ಪ್ರೊಫೆಸರ° – ತುಂಬ ಸರಿಯಾದ ಉತ್ತರ! 😀
~~
13. ಹೆಂಡತ್ತಿ ಎಂತದೋ ತಪ್ಪು ಮಾಡಿಯಪ್ಪಗ ಗೆಂಡಂಗೆ ವಿಪರೀತ ಕೋಪ ಬಂತು.
ಗೆಂಡ° ಕೋಪಲ್ಲಿ “ನೀನು ಮಾಡಿದ ದೊಡ್ಡ ತಪ್ಪು ಎಂತದು ಹೇಳಿ ನಿನಗೆ ಗೊಂತಿದ್ದೋ?!” ಹೇಳಿ ಕೇಳಿದ°
ಅದಕ್ಕೆ ಹೆಂಡತ್ತಿ – ಅದು ಗೊಂತಿಲ್ಲದ್ದೆಂತ” ಹೇಳಿತ್ತು
ಗೆಂಡ°– ಎಂತರ ಹೇಳಂಬಗ
ಹೆಂಡತ್ತಿ – ನಿಂಗಳ ಹಾಂಗಿದ್ದವರ ಮದುವೆ ಆದ್ದೇ ಆನು ಮಾಡಿದ ದೊಡ್ಡ ತಪ್ಪು
ಗೆಂಡಂಗೆ ತಲಗೆ ಮರಂದ ಬನ್ನಂಗಾಯಿ ಬಿದ್ದಾಂಗೆ ಆತು 😀
~~
14. ಅಧಿಕಾರಿ – ಎಂತ ಇಷ್ಟೊಂದು ಲೇಟು ಆಫೀಸಿಂಗೆ?!
ನೌಕರ – ಮನುಗಿಬಿಟ್ಟೆ ಸಾರ್
ಅಧಿಕಾರಿ – ಎಂತ ಮನೆಲಿಯೂ ಒರಗುತ್ತೆಯೋ ನೀನು?! 😀
~~
15. ಚಿತ್ರಕಲಾವಿದ° – ಎನ್ನ ಮುಂದಾಣ ಅತ್ಯುತ್ತಮ ಚಿತ್ರವ ಏವದಾರು ಶಾಲಗೆ ದಾನ ಮಾಡೆಕ್ಕು ಹೇಳಿ ಇದ್ದೆ.
ದೋಸ್ತಿ – ಹಾಂಗೊ?! ಹಾಂಗಾರೆ ಅದರ ನಮ್ಮೂರಿನ ಕುರುಡರ ಶಾಲಗೇ ಕೊಟ್ಟುಬಿಟ್ಟಿಕ್ಕು.!! 😀
~~
16. ಮದುವೆ ಆದ ಹೊಸತ್ತು
ಗೆಂಡಂಗೆ ವರ್ಗ ಆಗಿ ಬೇರೆ ಊರಿಂಗೆ ಹೋದ°. ಅಲ್ಲಿ ಮನೆ ಸಿಕ್ಕದ್ದ ಕಾರಣ ಹೆಂಡತ್ತಿ ಕೆಲವು ತಿಂಗಳು ಅದೇ ಊರಿಲ್ಲಿ ಇರೆಕ್ಕಾಗಿ ಬಂತು. ಗೆಂಡ° ಪ್ರತಿತಿಂಗಳೂ ಹೆಂಡತ್ತಿಗೆ ಖರ್ಚಿಗೆ ಪೈಸೆ ಕಳುಸಿಗೊಂಡಿತ್ತಿದ್ದ°. ಒಂದು ತಿಂಗಳು ಸಂಬಳ ಬಂತಿಲ್ಲೆ. ಅವ° ಹೆಂಡತ್ತಿಗೆ ತಮಾಷಗೆ ಬರದ° – ಚಿನ್ನಾ, ಈ ತಿಂಗಳು ಸಂಬಳ ಬಯಿಂದಿಲ್ಲೆ. ಹಾಂಗಾಗಿ ಪೈಸೆ ಬದಲು ಸಾವಿರ ಮುತ್ತುಗಳ ಕಳುಸುತ್ತೆ.
ಹೆಂಡತ್ತಿ ಉತ್ತರ ಬರದತ್ತು. – ಹಾಲಿನವಂಗೆ, ದರ್ಜಿಗೆ, ಮನೆಯ ಮಾಲೀಕರಿಂಗೆ, ಅಂಗಡಿವಕ್ಕೆ, ಕೆಲಸದವಕ್ಕೆ ಎಲ್ಲ ಅದನ್ನೇ ಕೊಡ್ಳಿಯೊ?!!
~~
17. ಹೆಂಡತ್ತಿ – ಗೆಂಡುಮಕ್ಕೊಗೆ ಏನಾರು ಹೇಳಿರೆ ಅದು ಒಂದು ಕೆಮಿಲಿ ಹೊಕ್ಕು ಇನ್ನೊಂದು ಕೆಮಿಲಿ ಹೆರಡುತ್ತು
ಗೆಂಡ° – ಅದಪ್ಪು. ಹೆಮ್ಮಕ್ಕೊಗೆ ಏನಾರು ಹೇಳಿರೆ ಎರಡು ಕೆಮಿಲೆ ಒಳಹೊಕ್ಕು ಬಾಯಿಂದ ಹೆರಬೀಳುತ್ತು
~~
18 ಗೆಂಡ° – ನಾಲ್ಕೈದು ಕಡೆಲಿ ಭಾಷಣ ಮಾಡಿ ಬಚ್ಚಿ ಕಂಗಾಲಾಯ್ದು. ರಜಾ ಕಾಲು ಒತ್ತುವೆಯೊ?
ಹೆಂಡತ್ತಿ – ಅಲ್ಲ, ಭಾಷಣ ಮಾಡಿರೆ ಗೆಂಟ್ಳು ಬೇನೆ ಅಕ್ಕು. ಕಾಲಿಂಗೂ ಭಾಷಣಕ್ಕೂ ಎಂತ ಸಂಬಂಧ?!
ಗೆಂಡ° – ನಿನ್ನ ಬುದ್ಧಿಯ ತುಂಬ ಓಡುಸೆಡ. ಗೆಂಟ್ಳು ಬೇನೆ ಹೇಳಿ ಇನ್ನು ಅದರ ಒತ್ತಿಕ್ಕೆಡ ಮಾರಾಯ್ತಿ.! 😀
~~
19. ಒಂದು ಸಮಾರಂಭಲ್ಲಿ ಹತ್ತರೆ ಹತ್ತರೆ ಕೂದ ಇಬ್ರು ಸಂಭಾಷಣೆ ಹೀಂಗಿದ್ದತ್ತು
ಒಬ್ಬ° – ಅಷ್ಟು ಕೊಳಕ್ಕಾಗಿ ಹಾಡುತ್ತನ್ನೇ!! ಆ ಹೆಮ್ಮಕ್ಕ ಆರು?
ಇನ್ನೊಬ್ಬ° – ಅದು ಎನ್ನ ಹೆಂಡತ್ತಿ.
ಒಬ್ಬ° – ಅಪ್ಪೋ.., ಕ್ಷಮಿಸಿ., ಪಾಪ ಆ ಹಾಡು ಹಾಂಗಿದ್ದು., ಅದಕ್ಕೆಂತ ಮಾಡುವದು?!
ಹೇಳಿದಾಂಗೆ ಆ ಹಾಡಿನ ಬರದ್ದು ಆರು?
ಇನ್ನೊಬ್ಬ° – ಅದು ಆನೇ!
ಒಬ್ಬ° – ?!!!!!!! 😀
~~
20. ಇಬ್ರು ಪ್ರೇಮಿಗೊ (ಮಾಣಿ-ಕೂಸು) ರೈಲಿಲಿ ಎದುರೆದುರು ಕೂದುಗೊಂಡು ಪ್ರಣಯಸಂಭಾಷಣೆ ಮಾಡುತ್ತ ಇತ್ತಿದ್ದವು. ರೈಲು ಸುರಂಗ ಮಾರ್ಗದೊಳ ಹೋಪಗ ಇಡೀ ಕಸ್ತಲಾತು. ಮತ್ತೆ ರಜಹೊತ್ತಿಲ್ಲಿ ಸುರಂಗ ಮಾರ್ಗಂದ ಹೆರಬಂತು. ಅಂಬಗ ಮಾಣಿ ಹೇಳಿದ – ಇಷ್ಟು ಹೊತ್ತು ಕಸ್ತಲಾವ್ತು ಹೇಳಿ ಗೊಂತಿದ್ದರೆ ಆನು ನಿನಗೊಂದು ಒಪ್ಪ ಕೊಡುತ್ತಿತ್ತೆ.
ಗಾಬರಿಯಾದ ಕೂಸು ಹೇಳಿತ್ತು – ಅಂಬಗ ಈಗ ಕೊಟ್ಟದು ಆರು?!!
ಮಾಣಿ – ?!!! 😀
~~
[ ನೆಗೆಬುಗ್ಗೆಗೊ
ಸಂಗ್ರಹ – ಅರ್ತಿಕಜೆ ಮಾವ ]

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

8 thoughts on “ನೆಗೆಬುಗ್ಗೆಗೊ

  1. ನೆಗೆಬುಗ್ಗೆಗಳ ಅಸ್ವಾದಿಸಿ ಮೆಚ್ಚಿ ಒಪ್ಪ ಕೊಟ್ಟ ಎಲ್ಲೊರಿಂಗೂ ಧನ್ಯವಾದಂಗೊ.

  2. ಸೂಪರ್ super. ಒಳ್ಳೆ ಲಾಯಿಕಾಯಿದು. keep it up. all the best.

  3. ಬಾರಿ ಒಪ್ಪ, ಕೆಲವು ಗೊತ್ತಿದ್ದ ನಗೆ ಬುಗ್ಗೆಗೋ ಆದರೂ, ಹವ್ಯಕ ಬಾಷೆಲಿ ಓದುವಗ ಇನ್ನೂ ಮುದ ಕೊಡುತ್ತು ………..

  4. 3. ಶಿವ ಧನುಸ್ಸಿನ ಮುರುದ್ದದು ಕನ್ನಡ ಪಂಡಿತರು ಹೇಳಿ ಶುದ್ದಿ ಕೇಳಿದ್ದೆ ಅರ್ತಿಕಜೆ ಮಾವ …..
    ಲಾಯಕಾಯಿದು ಮಾವ

  5. ರೈಸಿದ್ದು ಮಾವ.

  6. ನೆಗೆಬುಗ್ಗೆಗೊ ರೈಸಿದ್ದು ಅರ್ತಿಕಜೆ ಅಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×