Oppanna.com

ಮಾವನ ಮಗಳ ಮದುವೆ

ಬರದೋರು :   ಅರ್ತಿಕಜೆ ಮಾವ°    on   03/07/2014    10 ಒಪ್ಪಂಗೊ

ಮಾವನ ಮಗಳಿಂಗೆ ಈ ದಿನ ಮದುವೆ
ಎಂಗೊಗೆ ಸಂಭ್ರಮದ ದಿನವೂ ಇದುವೆ
ಅತ್ತಗೂ ಮಾವಂಗು ಸಂತೋಷ ಅದುವೆ
ಅತ್ತಿಗ್ಗೂ ಇದ್ದು ಮನಸೀಲಿ ಆನಂದವೆ ||ಮಾವನ||

ಸೇರಿದವು ಮನೆತುಂಬ ಹೆಮ್ಮಕ್ಕೊ ಬಂದೂ
ಅತ್ತಿಗೆಯ ಶೃಂಗಾರ ಮಾಡಿದವು ಇಂದೂ
ತಲೆತುಂಬಾ ಹೂ ಸೂಡ್ಸಿ ಜಲ್ಲೀಯ ಬಿಟ್ಟೂ
ಬೈತಲೆ ಮೇಲೊಂದು ಮುಂದಲೆ ಬೊಟ್ಟೂ ||ಮಾವನ||

ಮದುಮ್ಮಾಯನ ದಿಬ್ಬಾಣ ಗೌಜೀಲಿ ಬಂತು
ಕಾಲುತೊಳವಲೆ ನೀರು ಕೊಟ್ಟುದೆ ಆತು
ದಿಬ್ಬಾಣ ಎದುರ್ಗೊಂಡು ಒಳಬಂದು ಕೂದಾತು
ಉಪಚಾರ ಮಾಡಿದೆಯೊ ಆತು ಗಮ್ಮತ್ತು ||ಮಾವನ||

ಸಕ್ಕರೆ ಬೆಲ್ಲದೆ ಬೊಂಡದ ನೀರೂ
ಸೆಂಟಿನ ಪರಿಮಳ ಬಂತದ ಜೋರೂ
ಕೊಟ್ಟೆಯೊ° ಕುಂಕುಮ ಹಂಚಿದೆಯೊ° ಹೂಗಿನ
ಲಗುಬಗೆಲಿ ಮಾಡಿದೆಯೊ° ಪನ್ನೀರ ಸೇಚನ ||ಮಾವನ||

ಮಂಟಪದ ಒಳದಿಕ್ಕೆ ಮದುಮ್ಮಾಯ ಬಂದು
ತೆರೆಸೀರೆ ಆಚಿಕೆ ಮದಿಮ್ಮಾಳು ನಿಂದು
ಮಂತ್ರ ಹೇಳಿದವು ತೆರೆಸೀರೆ ಸರುದತ್ತು
ಅತ್ತಿತ್ತ ಕೊರಳಿಂಗೆ ಹೂವಿನ ಮಾಲೆ ಹಾಕ್ಯಾತು ||ಮಾವನ||

ಅಣ್ಣ ಅತ್ತಿಗೆಯ ಧಾರೆ ಕಳುದತ್ತು
ಹೋಳಿಗೆ ಹೊಡೆಕೀಗ ಏಳೆಂಟು ಹತ್ತು
ಸಾರು ಸಾಂಬಾರು ಮೇಲಾರ ಇತ್ತು
ಎರೆಡೆರಡು ಪಾಯಸ ಭಾರೀ ಗಮ್ಮತ್ತು
ಮದುವೆ ಭಾರೀ ಗಮ್ಮತ್ತು ||ಮಾವನ||
~~~

[ಮಾವನ ಮಗಳ ಮದುವೆ
ಸಂಗ್ರಹ: ಅರ್ತಿಕಜೆ ಮಾವ°]

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

10 thoughts on “ಮಾವನ ಮಗಳ ಮದುವೆ

  1. ಧನ್ಯವಾದ ಅರ್ತಿಕಜೆ ಮಾವ .ಹವ್ಯಕ ಮದುವೆಯ ವರ್ಣನೆ ಸೊಗಸಾಯಿದು.ಭಾರೀ ಲಾಯ್ಕದ ಹಾಡು. ಮದುವೆಯ ಜೆ೦ಬ್ರದ ದಿನದ ಗೌಜಿ ಕಣ್ಣ ಮು೦ದೆ ಬ೦ತು

  2. ನಿಂಗೊ ಎಲ್ಲೋರ ಒಪ್ಪಕ್ಕೆ, ಪ್ರೋತ್ಸಾಹಕ್ಕೆ ಧನ್ಯವಾದಂಗೊ.

  3. “ಮಾಮಮ” ಪದ್ಯ ತುಂಬಾ ಲಾಯಕಿತ್ತು. ಹವ್ಯಕ ಮದುವೆಯ ವರ್ಣನೆ ಸೊಗಸಾಯಿದು. ಮದುವೇ ಮದುವೇ ಮದುವೇ ಹೇಳುವ ಹಳೆ ಚಿತ್ರಗೀತೆಯ ನೆಂಪು ಮಾಡಿತ್ತು.

  4. ಮದುವೆ ಹೇದರೆ ಇದಿದಾ!ಕಣ್ಣಿ೦ಗೆ ಕಟ್ಟುವ ಹಾ೦ಗೆ ಬಯಿ೦ದು ವರ್ಣನೆ. ಅಣ್ಣ೦ಗೆ ಧನ್ಯವಾದ೦ಗೊ.

  5. ಎನ್ನ ಮಾವನ ಮಗಳ ಮದುವೇಲಿ ಹಿಂಗೆಲ್ಲ ಇತ್ತಿದ್ದೋ ಹೇಳ್ವದು ಈಗ ಮರದೇ ಹೋಯಿದು.

  6. ಆಹಾ .. ಭಾರೀ ಲಾಯ್ಕದ ಹಾಡು. ಮದುವೆಯ ಜೆ೦ಬ್ರದ ದಿನದ ಗೌಜಿ ಕಣ್ಣ ಮು೦ದೆ ಬ೦ತು. ಧನ್ಯವಾದ ಅರ್ತಿಕಜೆ ಮಾವ .

  7. ಎಂಗಳ ಮಾವಂಗೆ ಈ ದಿನ ಮದುವೆ ಎಂಗೊಗೆ ಸಂಭ್ರಮದ ದಿನವೆ ಹೇಳಿ ಎನ್ನ ಮದುವಗೆ ಸೊಸಗೊ 7 ವರ್ಷ ಮದಲು ಹಾಡಿದ್ದವು

  8. ಭಾರೀ ಗಮ್ಮತ್ತು ಆಯಿದು ಅರ್ತಿಕಜೆ ಅಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×